Sunday, 27 July 2025

"ಪಲುಕೇ ಬಂಗಾರಮಾಯಿನಾ ಕೋದಂಡ ಪಾಣಿ" ಕೀರ್ತನೆಯನ್ನು ಬಾಲ್ಯದಿಂದಲೂ ಕೇಳುತ್ತಾ ಬಂದವಳು. ಆಗ ಇದನ್ನು ಹೆಚ್ಚಾಗಿ ಬಾಲಮುರಳಿಯವರ ಕಂಠದಲ್ಲೇ ಕೇಳಿದ್ದು. ಮಾತೇ ಬಂಗಾವಾದ ಈ ಕೃತಿಯನ್ನು ಈಗ ರಾಹುಲ್ ವೆಲ್ಲಾಳ ಮತ್ತು ಸೂರ್ಯಗಾಯತ್ರಿಯಂತಹ ಉದಯೋನ್ಮುಖರೂ ಅದ್ಭುತವಾಗಿ ಹಾಡುತ್ತಾರೆ. ಈ ಕೃತಿ ನನಗೆ ಕಣ್ಣೆದುರು ಬಂದದ್ದು, ನಾನು ಅವಾಕ್ಕಾದದ್ದು ಹೈದ್ರಾಬಾದಿನಿಂದ ಭದ್ರಾಚಲಕ್ಕೆ ಹೋಗುವ ದಾರಿಯಲ್ಲಿ. ರಾಮದಾಸರ ಕೀರ್ತನೆಗಳನ್ನು ಹಾಕಿ ಎಂದು ನಾನು ಚಾಲಕನಿಗೆ ಹೇಳಿದೆ. ಆಗ ಮೊದಲಿಗೆ ಶುರುವಾದ್ದೇ "ಪಲುಕೇ ಬಂಗಾರಮಾಯಿನಾ"! ಅರೆ! ಎಷ್ಟು ಪರಿಚಿತವಾದ ಈ ಕೀರ್ತನೆ ಭದ್ರಾಚಲ ರಾಮದಾಸರದ್ದೆಂದು ಗೊತ್ತೇ ಇರಲಿಲ್ಲವಲ್ಲ? ಅದರ ಹಿಂದೆಯೇ "ಈ ತೀರಗುನನಿ ದಯಚೂಚದವೋ ಇನವಂಶೋತ್ತಮ ರಾಮಾ" , "ಎಂತರುಚೀರ ನೀನಾಮಮು ಏಮಿ ರುಚಿರಾ""ಶುದ್ಧ ಬ್ರಹ್ಮ ಪರಾತ್ಪರ ರಾಮ" ಮುಂತಾದ ಕೀರ್ತನೆಗಳು ಒಂದಾದಮೇಲೆ ಒಂದರಂತೆ ಹಿಂಬಾಲಿಸಿದವು. ಎಲ್ಲಾ ಹಾಡುಗಳೂ ನನ್ನ ಬಾಲ್ಯಕ್ಕೆ ಲಗ್ಗೆ ಹಾಕಿದವು. ಹೈದರಾಬಾದಿನ ಸುಸಜ್ಜಿತ ರಸ್ತೆಯ ಮೇಲೆ, ಸೊಸೆ ರೇಖಾ ( ರಘುವಿನ ಅಕ್ಕನ ಮಗಳು) ನಮ್ಮ ಪ್ರಯಾಣಕ್ಕೆ ಅಣಿಮಾಡಿಕೊಟ್ಟ ಸುಖಾಸೀನ ಕಾರು ವೇಗವಾಗಿ ಓಡುತ್ತಿತ್ತು ಹಿನ್ನೆಲೆಗೆ ರಾಮದಾಸರ ಹಾಡು. ಓಹ್ ಬಹುಶಃ ಸ್ವರ್ಗ ಸಮಾನ ಅನುಭವವೆಂದರೆ ಇದೇ ಇರಬೇಕು! ಈ ಹಾಡುಗಳು ಫಿಲ್ಮೀ ಶೈಲಿಗೆ ಅಳವಡಿಸಿದ ಎಸ್.ಪಿ.ಬಿ ಯವರದ್ದಾಗಿತ್ತು. ಅಪ್ಪಟ ಶಾಸ್ತ್ರೀಯ ಶೈಲಿಯಲ್ಲಿದ್ದಿದರೆ ಅದರ ಸುಖವೇ ಬೇರೆಯದಾಗುತ್ತಿತ್ತು. ಆಗ ಸ್ವರ್ಗ ಸಮಾನವಲ್ಲದೇ ಸ್ವರ್ಗವೇ ದಕ್ಕಿದ ಭಾವ ಉಂಟಾಗುತ್ತಿತ್ತು ಎನಿಸುತ್ತದೆ. ಆದರೆ ಚಾಲಕನ ರುಚಿಯನ್ನೂ ಗಮನಿಸಬೇಕಲ್ಲ? ಮುಂದಿನ‌ ಸೀಟಿನಲ್ಲಿ ಕುಳಿತಿದ್ದ ನನ್ನ ಅತ್ತಿಗೆಯವರೂ ಹಾಡುಗಳನ್ನು ( ರಘುನಾಥ್ ಅವರ ಅಕ್ಕ) ಆನಂದಿಸುತ್ತಿದ್ದರು. ಹೈದ್ರಾಬಾದಿನಿಂದ ಸು. ಆರುಗಂಟೆಗಳ ಕಾಲ ಪ್ರಯಾಣ ಮಾಡಿದನಂತರ ಭದ್ರಾಚಲ ತಲಪಿದೆವು. ಭದ್ರಾಚಲ ರಾಮದಾಸು ತೆಲಗು ಸಂಗೀತ ಕ್ಷೇತ್ರದಲ್ಲಿ ಬಹಳ ದೊಡ್ಡ ಹೆಸರು. ಪ್ರಸಿದ್ಧ ವಾಗ್ಗೇಯಕಾರರಾದ ಇವರ ಕಾಲ ೧೬೨೦-೧೬೮೮. ಇವರ ಮೂಲ ಹೆಸರು ಕಂಚರ್ಲ ಗೋಪಣ್ಣ. ರಾಮನ ಪರಮ ಭಕ್ತರಾದ ಇವರು ಹುಟ್ಟಿದ್ದು ಖಮ್ಮಮ್‌ ಜಿಲ್ಲೆಯ ನೆಲಕೊಂಡನಪಲ್ಲಿಯಲ್ಲಿ ಎಂದು ವಿಕಿಪೀಡಿಯಾ ಹೇಳುತ್ತದೆ. ತ್ಯಾಗರಾಜರ ಪರಂಪರೆಯನ್ನೇ ಅನುಸರಿಸಿದ ರಾಮದಾಸರು ಅವರ ವಾರಸುದಾರರಂತೇ ಕಾಣುತ್ತಾರೆ. ಇಬ್ಬರೂ ರಾಮಭಕ್ತರು. ಇಬ್ಬರೂ ಸಂಗೀತ ಕ್ಷೇತ್ರದ ಮಹಾನ್‌ ಸಾಧಕರು. ʼಗೋದಾವರಿʼಯನ್ನು ನಾನು ನಾಸಿಕ್‌ ನಲ್ಲಿ ಮಾತ್ರ ಕಂಡವಳು. ಅವಳು ಭದ್ರಾಚಲಕ್ಕೆ ಹರಿದುಬಂದಿದ್ದಾಳೆ. ತ್ರಯಂಬಕೇಶ್ಡರದಲ್ಲಿ ಹುಟ್ಟುವ ಗೋದಾವರಿ, ರಾಜಮಂಡ್ರಿಯ ಬಳಿ ಬಂಗಾಳಕೊಲ್ಲಿಯಲ್ಲಿ ಐಕ್ಯವಾಗುತ್ತಾಳೆ. ಪಶ್ಚಿಮದಿಂದ ಪೂರ್ವಾಭಿಮುಖ ಹರಿವು- ನಮ್ಮ ದೇಶದ ಹೆಚ್ಚನ ನದಿಗಳ ಹಾಗೆ. ಅವಳ ಹರಿವು ಸು ೧೪೬೫ ಕಿ,ಮೀ. ಅಂತೆ. ಅವಳನ್ನು ದಕ್ಷಿಣದ ಗಂಗೆಯಂತಲೂ ಕರೆಯುತ್ತಾರೆ. ಅಪಾರವಾದ ಅದರ ಪಾತ್ರ, ಎಲ್ಲಿಯೋ ಹುಟ್ಟಿ ಎಲ್ಲಿಗೋ ಸೇರುವ ಅದರ ಹರಿವು ಎಷ್ಟು ವಿಸ್ಮಯಕಾರಿ! ಈ ತೀರದ ಮೇಲೆ ರಾಮದಾಸು ಅವರು ಕಟ್ಟಿಸಿದ ಸೀತಾರಾಮಚಂದ್ರ ದೇವಾಲಯವಿದೆ. ರಾಮದಾಸು ಅವರ ಜೀವನದಲ್ಲಿ ನಡೆದ ಪವಾಡಗಳ ಬಗ್ಗೆ ಅವರ ಭಕ್ತಿಯ ತೀವ್ರತೆಯ ಬಗ್ಗೆ ನಮ್ಮ ಅಪ್ಪ ಬಹಳ ಕತೆಗಳನ್ನು ಹೇಳುತ್ತಿದ್ದರು. ಹೈದ್ರಾಬಾದಿನ ಗೋಲ್ಕಂಡದ ಕುತುಬ್‌ ಶಾಹೀ ಸುಲ್ತಾನನ ಬಳಿ ತೆರಿಗೆ ಅಧಿಕಾರಿಯಾಗಿದ್ದ ಅವರ ಸೋದರ ಮಾವನ ಬಳಿಗೆ ಕೆಲಸ ವನ್ನು ಅರಸಿಕೊಂಡು ಗೋಪಣ್ಣ ಬಂದಾಗ ಭದ್ರಾಚಲದ ತೆರಿಗೆ ಸಂಗ್ರಹ ಕಾರ್ಯವನ್ನು ಅವರಿಗೆ ಕೊಡಲಾಗುತ್ತದೆ. ಅಲ್ಲಿದ್ದ ರಾಮಚಂದ್ರ ದೇವಾಲಯದ ದುಃಸ್ಥಿತಿಯನ್ನು ಕಂಡು ರಾಮಭಕ್ತರಾದ ಗೋಪಣ್ಣನಿಗೆ ಬಹಳ ದುಃಖವಾಗುತ್ತದೆ. ಆಗ ತೆರಿಗೆಯಿಂದ ಸಂಗ್ರಹವಾದ ಹಣವನ್ನು ಉಪಯೋಗಿಸಿಕೊಂಡು ರಾಮಚಂದ್ರದೇವಾಲಯವನ್ನು ಪುನರ್ನಿರ್ಮಾಣ ಮಾಡುತ್ತಾರೆ. ತರತರದ ಆಭರಣಗಳನ್ನು ಮಾಡಿಸುತ್ತಾರೆ. ಈ ಆಭರಣಗಳ ವಿವರ ಅವರ “ಇಕ್ಷಾಕುಕುಲ ಕೀರ್ತನೆಯಲ್ಲಿ ಬಹಳ ಸುಂದರವಾಗಿ ಮೂಡಿಬಂದಿದೆ. ತೆರಿಗೆಯ ಹಣ ದುರುಪಯೋಗಮಾಡಿಕೊಂಡಿದ್ದರಿಂದ ಸುಲ್ತಾನ ಅವರನ್ನು ಹದಿನಾಲ್ಕು ವರ್ಷಗಳ ಕಾಲ ಜೈಲಿನನಲ್ಲಿ ಇಡುತ್ತಾನೆ. ಈ ಸಂದರ್ಭದಲ್ಲಿ ಸ್ವತಃ ರಾಮಲಕ್ಷಮಣರೇ ಬಂದು ಜೈಲಿನಿಂದ ಬಿಡಿಸಿಕೊಂಡು ಹೋದರು ಎಂಬ ಸ್ವಾರಸ್ಯಕರವಾದ ಕಥೆ ಇದೆ. ರಾಮ ತನ್ನ ರಾಜಮುದ್ರೆಯನ್ನೇ ರಾಮದಾಸರ ತಂಬುಲದಲ್ಲಿ ಒತ್ತಿಸಿಕೊಂಡುರಾಜನ ಬಳಿಗೆ ಒಯ್ದನಂತೆ. ಆವೇಳೆಗಾಗಲೇ ಸುಲ್ತಾನನು ರಾಮ ಮುದ್ರೆ ಇರುವ ಅನೇಕ ಚಿನ್ನದ ನಾಣ್ಯಗಳು ಕನಸಿನಲ್ಲಿ ಕಂಡಿದ್ದನಂತೆ. ಹೀಗೆ ಅನೇಕ ಕತೆಗಳು ಹರಡಿವೆ. ರಾಮದಾಸರು ಜೈಲಿನಲ್ಲಿದ್ದಾಗ ರಚಿಸಿದ ಕೀರ್ತನೆಗಳು ʼದಾಶರಥಿ ಶತಕಂ ಮತ್ತ ರಾಮದಾಸ ಕೀರ್ತನೆಗಳುʼ ಎನ್ನುವ ಸಂಗ್ರಹದಲ್ಲಿ ಅಡಗಿವೆ ಎಂದು ಹೇಳಲಾಗುತ್ತದೆ. ಭದ್ರಾಚಲಕ್ಕೆ ೩೫ ಕಿ.ಮೀ ದೂರದಲ್ಲಿ ಪರ್ಣಶಾಲಾ ಎನ್ನುವ ಪ್ರದೇಶವಿದೆ. ಅಲ್ಲಿಯೂ ಒಂದು ರಾಮನ ದೇವಾಲಯ. ಸೀತಾರಾಮರು ವನವಾಸದ ಕೆಲದಿನಗಳನ್ನು ಇಲ್ಲಿ ಕಳೆದಿದ್ದರಂತೆ. ಚಿನ್ನದ ಜಿಂಕೆ, ಪರ್ಣಕುಟಿ, ಸೀತಾ ರಾಮರ ಬೊಂಬೆಗಳು, ಸನ್ಯಾಸಿ ರಾವಣ ಹೀಗೆ ಒಂದು ಕೃತಕ ವಲಯವನ್ನು ಸೃಷ್ಟಿಸಿ ಶೋಧಕರ ಭಾವಕೋಶವನ್ನು ಹಾಳುಮಾಡಿದ್ದಾರೆ. ದೇವಾಲಯದ ಮುಂದೆ ಅಪರಂಪಾರ ಗೋದಾವರಿ ಹರಿಯುತ್ತಿದ್ದಾಳೆ. ನಾವು ಹೋದದ್ದು ಮಳೆಗಾಲವಾದ್ದರಿಂದ ತುಂಬಿ ಹರಿಯುತ್ತಿದ್ದ ನದಿಯೊಳಗೆ ಇಳಿಯಲು ಸಾಧ್ಯವಾಗಲಿಲ್ಲ. ಯದುಕುಲಕಾಂಭೋಜಿ ರಾಗದ ʼಇಕ್ಷಾಕು ಕುಲ ತಿಲಕ ಕೀರ್ತನೆಯ ಸಾರಾಂಶ ಹೀಗಿದೆ "ಇಕ್ಷಾಕು ಕುಲವನ್ನು ಸಿಂಗರಿಸಲು ನಾನು ಏನಲ್ಲ ಮಾಡಿದೆ? ಈಗಲೂ ಮಾತನಾಡದೇ ಏಕೆ ಕುಳಿತಿರುವೆ ಶ್ರೀರಾಮಚಂದ್ರಾ ನನಗಿನ್ನಾರು ಗತಿ ನೀನಲ್ಲದೆ? ಭರತನಿಗೆ ಪಚ್ಚೆಯ ಪದಕ ಮಾಡಿಸಿದೆ ಅದಕ್ಕೆ ಹತ್ತು ಸಾವಿರ ವರಹಗಳನ್ನು ವೆಚ್ಚ ಮಾಡಿದೆ ಶತೃಘ್ನನಿಗೆ ಸೊಂಟದ ಪಟ್ಟಿ ಮಾಡಿಸಿದೆ (ಮೊಲತ್ರಾಡು) ಅದಕ್ಕೆ ತಗುಲಿದ ವೆಚ್ಚ ಹತ್ತುಸಾವಿರ ವರಹಗಳು ಲಕ್ಷ್ಮಣನಿಗೆ ಮುತ್ತಿನಹಾರ ತಗುಲಿದವು ಹತ್ತುಸಾವಿರ ವರಹ ಸೀತೆಗೆ ಮಾಡಿಸಿದೆ ಹುಣಿಸೆ ಚಿಗುರಿನ ಪದಕ ( ಚಿಂತಾಕು ಪದಕಮು) ಹಾರ ವೆಚ್ಚವಾಯಿತು ವರಹ ಹತ್ತು ಸಾವಿರ ಬಲು ಎಚ್ಚರಿಕೆಯಿಂದ ಮಾಡಿಸಿದ ನಿನಗೆ ಅಪೂರ್ವ ರತ್ನದ ಹಾರ ಧರಿಸಿಕೊಂಡು ನಲಿದಾಡುತ್ತಿದ್ದೀಯಲ್ಲ ಯಾರಪ್ಪನ ಗಂಟು ಎಂದುಕೊಂಡಿರುವೆ? ನಿಮ್ಮಪ್ಪ ದಶರಥ ಕೊಟ್ಟನೇ ನಿಮ್ಮಾವ ಜನಕ ಕಳಿಸಿದನ ನಾನು ಹೀಗೆ ಬೈಯುತ್ತಿರುವೆನೆಂದು ಬೇಸರಪಡಬೇಡ ಈ ಹೊಡೆತದ ನೋವು ತಾಳಲಾರದೇ ನಿನ್ನ ಹಳಿಯುತ್ತಿರುವೆ. ಭಕ್ತ ರಕ್ಷ ನೆಂದೇ ಹೆಸರಾದವನು ಈ ಭಕ್ತನನೂ ಸಲಹಲಾರೆಯಾ ಕೃಪಾಳು ಒಬ್ಬ ತೆರಿಗೆ ಅಧಿಕಾರಿಯ ರೀತಿಯಲ್ಲಿ ಶ್ರೀರಾಮನಿಗೆ ಲೆಕ್ಕ ಪತ್ರ ಒಪ್ಪಿಸುತ್ತಿದ್ದಾನೆ. ಈ ಅಹವಾಲಿನಲ್ಲಿ ಅಡ್ಡದಾರಿ ಹಿಡಿದೆ ನಿಜ ಆದರೆ ಅದು ನಿನಗಾಗಿಯೇ, ನಿನ್ನ ಕುಲದ ಮಹಿಮೆಯನ್ನು ಸಾರುವುದಕ್ಕಾಗಿಯೇ ಎಂಬ ಭಾವವಿದೆ. ಮಾಡಿದ ಅಪರಾಧಕ್ಕೆ ಅನುಭವಿಸುವ ದಂಡನೆ ಮತ್ತು ಭಕ್ತಿಯ ಔನ್ನತ್ಯ ಎರಡೂ ಇಲ್ಲಿ ಮಿಳಿತವಾಗಿದೆ. ನಿನ್ನ ಭಕ್ತನಾದುದಕ್ಕೆ ನನಗೆ ಸಿಕ್ಕ ಪ್ರತಿಫಲ ಇದುವೇ ತಾನೇ? ಎನ್ನುವ ನಿಂದಾಸ್ತುತಿಯೂ ಭಕ್ತಿಸಾಹಿತ್ಯದ ಒಂದು ಲಕ್ಷಣವೇ. ಸೀತಾರಾಮಚಂದ್ರ ದೇವಾಲಯದಲ್ಲಿ ರಾಮದಾಸರು ಮಾಡಿಸಿಟ್ಟರೆನ್ನಲಾದ ಒಡವೆಗಳನ್ಮು ಒಂದು ಸಣ್ಣ ಕೋಣೆಯಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಅದನ್ನು ಅವರು ಮ್ಯೂಸಿಯಮ್ ಎನ್ನುತ್ತಾರೆ. ಅವರು ರಚಿಸಿದ ಗ್ರಂಥಗಳಾಗಲೀ ಅವರ ಜೀವನದ ಘಟ್ಟಗಳನ್ನು ಹೇಳುವ ಯಾವ ಚಿತ್ರಗಳಾಗಲೀ ಅಲ್ಲಿ ಕಾಣಲು ಸಿಗುವುದಿಲ್ಲ. ಎಲ್ಲ ಕಡೆ ಹಣ ಮಾತನಾಡುವಂತೆ ಇಲ್ಲಿಯೂ ಮಾತನಾಡುತ್ತದೆ. ಆದರೆ ಅಷ್ಟು ದುಬಾರಿಯೇನಲ್ಲ. ಯಾಕೆಂದರೆ ಇದು ಅಂತಹ ದೊಡ್ಡ ದೇವಸ್ಥಾನವಲ್ಲ. ಭದ್ರಾಚಲ ಊರಾಗಲೀ ದೇವಾಲಯವಾಗಲೀ ಅಷ್ಟು ಸ್ವಚ್ಛವಾಗಿಲ್ಲ. ಪುರಾತನ ವಸ್ತುಗಳ ಸಂಗ್ರಹಮಾಡುವ ಶಿಸ್ತನ್ನು ನಾವು ಪಾಶ್ಚಾತ್ಯರಿಂದ ಕಲಿಯಬೇಕಾಗಿದೆ ಜೊರಾಮಿ ಇಂಗ್ಲಿಷ್ ಮೂಲ: ಮಾಲ್ಸಾವ್ಮಿ ಜೇಕಬ್ ಕನ್ನಡಕ್ಕೆ : ಭೂಮಿಕಾ.ಆರ್ ಒಂದು ವಿಮೋಚನೆಯ ಹಾಡಿನ ಪಲ್ಲವಿ. (ಈ ಬರಹ ದೀರ್ಘವಾಗಿದೆ. ನಿಮಗೆ ಇಷ್ಟ ಬಂದಷ್ಟು ಓದಿಕೊಳ್ಳಿ ಸ್ನೇಹಿತರೇ). ಈಶಾನ್ಯರಾಜ್ಯಗಳ ಸಂಸ್ಕೃತಿಯೆಂದರೆ, ಕಾಲೇಜು ವಾರ್ಷಿಕೋತ್ಸವಗಳಲ್ಲೋ, ಸಾಂಸ್ಕೃತಿಕ ಉತ್ಸವಗಳಲ್ಲೋ ಕಾಣಿಸಿಕೊಳ್ಳುತ್ತಿದ್ದ ನಾಗಾ ನೃತ್ಯಗಳು, ಬೊಂಬಿನ ನೃತ್ಯಗಳು, (ಮಿಜೋರಾಮ್) , ಮಣಿಪುರಿ ನೃತ್ಯಗಳು . ಇವುಗಳನ್ನೇ ನಾವು ಈಶಾನ್ಯದೇಶಗಳ ಸಂಸ್ಕೃತಿ ಎಂದು ತಿಳಿದುಕೊಂಡಿದ್ದೆವು. ಭೂಗೋಳ ಪಾಠಗಳಲ್ಲಿ 'ಸಪ್ತಕನ್ಯೆಯರ ನಾಡು', 'ಕೋಳಿ ಕುತ್ತಿಗೆ'ಯ ಪ್ರದೇಶ ಇಂತಹ ಹೆಸರುಗಳ ಹೊರತು, ಈಶಾನ್ಯದೇಶಗಳು ಭಾರತಕ್ಕೆ ಸಂಬಂಧವೇ ಇಲ್ಲದಂತೆ ನಮ್ಮ ಭಾವಕೋಶದಾಚೆಗೇ ಉಳಿದುಬಿಟ್ಟಿದ್ದವು. ಆದರೆ, ಅದು ಅಷ್ಟೇ ಅಲ್ಲ ಎಂದು ಅದರ ಅನೇಕ ಆಯಾಮಗಳನ್ನು ಅನಾವರಣ ಮಾಡಿರುವುದು ಭೂಮಿಕಾ ಅವರ 'ಜೊರಾಮಿ' ಕಾದಂಬರಿ. ಮಾಲ್ಸಾವ್ಮಿ ಜೇಕಬ್ ಅವರ ಮಿಜೋರಾಮಿನ 'ವಿಮೋಚನೆಯ ಹಾಡ'ನ್ನು ಕನ್ನಡಕ್ಕೆ ತಂದಿದ್ದಾರೆ. ಭೂಮಿಕಾ ಅವರ 'ಜೊರಾಮಿ' ಓದುತ್ತಿದ್ದ ಹಾಗೆ , ಅನೇಕ ನೆನಪುಗಳು ಸುಳಿದು ಹೋದವು. ಮೈಸೂರಿನ 'ಅಕ್ಕ' ಉತ್ಸವದಲ್ಲಿ ಮಣಿಪುರದ ಕನ್ಹಯ್ಯ ಲಾಲ್ ಥಿಯೇಟರಿನ ಪ್ರಸಿದ್ಧ ನಟಿ ಸಾಬಿತ್ರಿ ಹೀಸ್ನಾಮ್ ಮೈಸೂರಿನ ರಂಗಾಯಣದ ರಂಗದ ಮೇಲೆ ಬೆತ್ತಲಾದಾಗಿದ್ದಳು. ಸಭಾಗೃಹ ಅಕ್ಷರಶಃ ಸ್ತಬ್ಧವಾಗಿತ್ತು . ಮಾರನೆಯ ದಿನ ಈಶಾನ್ಯದೇಶಗಳ ಸಂಸ್ಕೃತಿಯ ಚರ್ಚೆ ನಡೆದಿತ್ತು ಎಂಬ ನೆನಪು. "ಇವರೆಲ್ಲ ಯಾವ ಭಾಷೆ ಆಡುತ್ತಾರೆ" ಎಂದು ನಾನು ಪಕ್ಕದ ಗೆಳತಿಯನ್ನು ಕೇಳಿದ್ದೆ. ಆಗ ಹಿಂದೆಯೇ ಕುಳಿತಿದ್ದ ಅರುಂಧತಿ ನಾಗ್ "ನೋಡಿ ನಮಗೆ ಈಶಾನ್ಯದೇಶಗಳ ಬಗ್ಗೆ ಎಷ್ಟು ಅಜ್ಞಾನವಿದೆ ಎಂದರೆ - ಅವರು ನಮ್ಮದೇ ದೇಶವಾಸಿಗಳು ಎಂಬುದನ್ನು ಮರೆಸುವಷ್ಟು" ಎಂದಿದ್ದರು. "Indian Army Rape us " ಎನ್ನುವ ಬ್ಯಾನರ್ ಹಿಡಿದು ಮಣಿಪುರದ ಹೆಂಗಸರು ಬತ್ತಲು ಮೆರವಣಿಗೆ ಹೊರಟ ಚಿತ್ರ. ಮಣಿಪುರದ ಉಕ್ಕಿನ ಮಹಿಳೆಯೆಂದೇ ಖ್ಯಾತಳಾದ ಇರೋಮ್ ಶರ್ಮಿಳಾ Armed Forces (Special Powers) Act, ವಿರುದ್ಧ ಹದಿನಾರು ವರ್ಷಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ ಚಿತ್ರ ಕಣ್ಣ ಮುಂದೆ ಬಂದಿತು. 'ಜೊರಾಮಿ' ಓದಿದಾಕ್ಷಣ ಈ ನೆನಪುಗಳೆಲ್ಲಾ ಮುನ್ನೆಲೆಗೆ ಬಂದದ್ದು ಕಾಕತಾಳೀಯವೇನಲ್ಲ. ಬತ್ತಲು ಮೆರವಣಿಗೆ ಒಂದು ಸಶಕ್ತ ಪ್ರತಿಭಟನೆಯೂ ಆಗಬಲ್ಲುದು. Scribbles on akka ಸಾಕ್ಷ್ಯ ಚಿತ್ರದಲ್ಲೂ ಬೆತ್ತಲಾದವಳು ಮಣಿಪುರದ ಸಾಬಿತ್ರಿಯೇ! ಅಕ್ಕನ ಬತ್ತಲು ಆತ್ಯಂತಿಕ ಬಿಡುಗಡೆಯ ಸಂಕೇತವೇ ಆದರೂ ಅದು ಒಂದು ಪ್ರತಿಭಟನೆಯ ಸ್ವರೂಪವೂ ಹೌದು! ಹೆಣ್ಣನ್ನು ಬತ್ತಲು ಮಾಡುವುದರ ಮೂಲಕವೇ ಹೀನಾಯವಾಗಿ ಒಂದು ಸಂಸ್ಕೃತಿಯನ್ನು/ ಜಾತಿಯನ್ನು ಹಣಿಯವುದಾದರೆ, ಬತ್ತಲ ಮೂಲಕವೇ ಉತ್ತರ ಕೊಡಬೇಕು. ಬಟ್ಟೆಯನ್ನು ಕಿತ್ತು ನಿರ್ವಾಣಗೊಳಿಸಬಹುದಾದರೆ, ನಿರ್ವಾಣದಿಂದ ಏನು ತಾನೇ ಕಿತ್ತುಕೊಳ್ಳಲು ಸಾಧ್ಯ? ( ಕೈಸಿರಿಯ ದಂಡವ ಕೊಳಬಹುದಲ್ಲದೆ) ಬತ್ತಲಾಗುವ ಪ್ರತಿಭಟನೆಯ ಮುಂದೆ ಬೇರೆ ಯಾವ ಸ್ವರೂಪದ ಪ್ರತಿಭಟನೆಯೂ ಎದುರಿಗಿರುವ ವ್ಯಕ್ತಿಯನ್ನು ಅಧೀರಗೊಳಿಸಲಾರದು. ಮೇಲಿನ ಹೆಣ್ಣುಮಕ್ಕಳ ಬತ್ತಲ ಪ್ರತಿಭಟನೆ ಪಿತೃಪ್ರಧಾನತೆಗೆ, ಸರ್ವಾಧಿಕಾರೀ ಪ್ರಭುತ್ವದ ಆಳ್ವಿಕೆಗೆ ಯಾವ ಕಾಲಕ್ಕೂ ಒಂದು ಸಶಕ್ತ ಸಂದೇಶವನ್ನು ರವಾನಿಸುತ್ತದೆ. ಭಾರತ ಶಾಂತಿಪ್ರಿಯ ದೇಶ. ಅದರದು ಅಲಿಪ್ತ ನೀತಿ ಎಂಬೆಲ್ಲಾ ಪಾಠವನ್ನು ನಾವು ಪಠ್ಯಗಳ ಮುಖೇನ ಕಲಿತಿದ್ದೆವು. ಆದರೆ ಅದು ಬುಡಮೇಲಾಗಿದ್ದು 'ಜೊರಾಮಿ'ಯಯನ್ನು ಓದಿದ ಮೇಲೆ. ಕೇವಲ ಸುದ್ದಿಯಾಗಿ ಉಳಿದಿದ್ದ ಮೇಲೆ ಹೇಳಿದ ಘಟನೆಗಳಿಗೆ ಜೀವ ಬಂದದ್ದು 'ಜೊರಾಮಿ'ಯನ್ನು ಓದಿದನಂತರವೇ. ಸಪ್ತಕನ್ಯೆಯರ ನಾಡಿನ ಸಂಸ್ಕೃತಿಯ ಮೇಲೆ ನಡೆದ ಬರ್ಬರ ಹತ್ಯೆ, ದಬ್ಬಾಳಿಕೆಯ ಪ್ರತೀಕವಾಗಿ 'ಜೊರಾಮಿ' ನಿಲ್ಲುತ್ತದೆ. 'ಜೊರಾಮಿ' ಯನ್ನು ಹಿಂದುಮುಂದು ಮಾಡಿದರೆ 'ಮಿಜೋರಾಮಿ'ಯೂ ಆಗುತ್ತಾಳೆ ಎಂದು ಶೈಲಜಾ ವೇಣುಗೋಪಾಲ್ ಹೇಳುತ್ತಾರೆ. 'ಜೊರಾಮಿ' ಕೇವಲ 'ಮಿಜೋರಾಮಿ' ಮಾತ್ರವಲ್ಲ. ಅವಳು ಇಡೀ ಈಶಾನ್ಯ ರಾಜ್ಯಗಳಮೇಲೆ ಕೇಂದ್ರ ಸರ್ಕಾರದ ಸೇನಾಪಡೆ ನಡೆಸಿದ ಹಲ್ಲೆಗೆ , ಅಮಾನುಷ ಕೃತ್ಯಕ್ಕೆ ಎದುರಾಗಿ ನಿಂತ ದಿಟ್ಟ ಪ್ರತಿಮೆಯಾಗಿ ಕಾಣುತ್ತಾಳೆ. ಜೀವ ವೈವಿಧ್ಯತೆಯಿಂದ ಕೂಡಿದ, ಬೆಟ್ಟಗುಡ್ಡ, ಜಲಪಾತಗಳಿಂದ , ವಿಶಿಷ್ಟ ಸಾಂಸ್ಕೃತಿಕ ಆಚರಣೆಗಳಿಂದ ಕೂಡಿದ ಸುಂದರ ದೇಶ ಎಂದು ಮಿಜೋರಾಮ್ ನ್ನು ಗೂಗಲ್ ವರ್ಣಿಸುತ್ತದೆ. ಅದೇ ಸುಂದರ ಮಿಜೋರಾಮನ್ನು ಪ್ರಭುತ್ವದ ಅಹಂಕಾರವೆಂಬುದು ಕೊಲೆ, ಸುಲಿಗೆ, ರಕ್ತಪಾತ, ಅತ್ಯಾಚಾರಗಳಿಂದ ಹೇಗೆ ಕುರೂಪಗೊಳಿಸಿತ್ತು. ಅದನ್ನು ನೆಲಸಮ ಮಾಡಲಾಗಿತ್ತು ಎಂಬುದನ್ನು ಬಹಳ ಮಾರ್ಮಿಕವಾಗಿ ಕಟ್ಟಿಕೊಡುವ 'ಜೊರಾಮಿ' ಮಿಜೊರಾಮ್ ಭೂಪ್ರದೇಶದ ಅನನ್ಯ ಸೌಂದರ್ಯದ ವ್ಯಂಗ್ಯವೂ ಆಗಿದೆ. ಟಿಬೆಟಿಯನ್ ಮತ್ತು ಬರ್ಮನ್ ಭಾಷಾ ಪ್ರಬೇಧಕ್ಕೆ ಸೇರಿರುವ ಮಿಜೋರಾಮ್ ಭಾಷೆ ಎಲ್ಲ ರೀತಿಯಿಂದಲೂ ಅಖಂಡ ಭಾರತ ( pan indian) ಎಂದು ನಾವೇನು ಕರೆಯುತ್ತೇವೆಯೋ ಅದಕ್ಕೆ ಸರಿಹೊಂದುವುದೇ ಇಲ್ಲ. ಅಲ್ಲಿನ ಊಟ ಉಪಚಾರಗಳು, ಮನುಷ್ಯರ ಹೆಸರುಗಳು, ಉಡುಗೆತೊಡುಗೆಗಳು, ಭಾಷೆ - ಹೀಗೆ ಎಲ್ಲ ಸಾಂಸ್ಕೃತಿಕ ಸ್ವರೂಪ ನಮಗಿಂತ ಭಿನ್ನ. ಸಾಂಸ್ಕೃತಿಕವಾಗಿ ಮೇಲು ನೋಟಕ್ಕೆ ಚೀನಾ ದೇಶದ ವಾಸನೆಯನ್ನು ಹೊಂದಿರುವಂತೆ ಕಾಣುತ್ತದೆ. ಮಿಜೋ ಜನರನ್ನು ದಕ್ಷಿಣ ಚೀನಾದ ಮಂಗೋಲಿಯಾ ಪ್ರಸ್ಥಭೂಮಿಯಿಂದ ವಲಸೆ ಬಂದ ಜನಾಂಗವೆಂದು ಹೇಳಲಾಗುತ್ತದೆ. ಆದರೂ ಅದು ತನ್ನ ವಲಸೆ ಬಂದ ನಾಡಿಗಿಂತ ಬೇರೆಯದೇ ಆದ ಬಹಳ ವಿಶಿಷ್ಟವಾದ ಸಂಸ್ಕೃತಿಯನ್ನು ಹೊಂದಿದೆ ಎಂದೂ ತಿಳಿದು‌ಬರುತ್ತದೆ. ೧೯೬೬-೮೬ ರ ನಡುವಿನ ಕಾಲವನ್ನು ಮಿಜೋರಾಮಿನ ಕತ್ತಲಕಾಂಡ 'ರಾಮ್ ಬುವಾಯಿ' ( Troubled Land) ಎಂದು ಕರೆಯಲಾಗುತ್ತದೆ. ಈ ಕಾಲದ ಜನರ ಅನುಭವ ಕಥನ ಮಿಜೋ ಸಾಹಿತ್ಯದ ಪ್ರಮುಖ ಮೈಲಿಗಲ್ಲಾಗಿದೆ. ಭಾರತ ಕೇಂದ್ರ ಸರ್ಕಾರದ ಹಿಡಿತದ ಜೊತೆಗೆ, ಅಸ್ಸಾಮಿನ ಹಿಡಿತದಿಂದಲೂ ತಾವು ಸ್ವತಂತ್ರರಾಗಬೇಕೆಂದು ಮಿಜೋ ಜನಾಂಗ ತನ್ನ ಸ್ವಾಯತ್ತತೆಗಾಗಿ ಹೋರಾಡಿದ ಕಾಲ ಇದು. ಮಿಜೋ ಜನಗಳ ಈ ಹೋರಾಟವನ್ನು ಹತ್ತಿಕ್ಕಲು ಭಾರತದ / ಅಸ್ಸಾಮಿನ ಸೇನೆ ನಡೆಸಿದ ಜನಾಂಗ ಹತ್ಯೆಯ, ಅದರ ವಿರುದ್ಧ ಹೋರಾಡಿದ ಎಮ್ ಎನ್ ಎಫ್ ( ಮಿಜೋರಾಮ್ ನ್ಯಾಷನಲ್ ಫ್ರಂಟ್) ನಡುವಿನ ಸಂಘರ್ಷದ ಕಥೆಯೇ 'ಜೊರಾಮಿ' ಕಾದಂಬರಿಯ ಕೇಂದ್ರ. ಅದಕ್ಕೆ ಬಲಿಯಾದವರು ಮಾತ್ರ ಅಮಾಯಕರು ಎನ್ನುವುದನ್ನೂ ಇದು ಹೇಳುತ್ತದೆ. ಇಂತಹ ವಿಭಿನ್ನವಾದ ಸಂಸ್ಕೃತಿಯ ಜೊತೆಗೆ ನಾವು ಯಾವರೀತಿಯಲ್ಲಿಯೂ ಕನೆಕ್ಟ್ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಆದರೆ ಹೀಗೆ ನಮ್ಮನ್ನು ಕನೆಕ್ಟ್ ಮಾಡುವುದು ಮನುಷ್ಯರ ನೋವು, ಸಾವು, ಸಂಕಟ, ಪ್ರೀತಿ,ಸ್ನೇಹ, ದೇಶಪ್ರೇಮ, ಅಂತಃಕರಣಗಳು. ವಿದ್ಯಾವಂತಳಾದ 'ಜೊರಾಮಿ' ಮೂಲಕ ಈ ಸಂಘರ್ಷದ ಚರಿತ್ರೆಯನ್ನು ಕಟ್ಟಿಕೊಡಲಾಗಿದೆ. ಅವಳು ಇಂಗ್ಲಿಷ್ ಎಂ.ಎ. ಪದವೀಧರೆ, ಕಾಲೇಜು ಶಿಕ್ಷಕಿ. ಬಾಲ್ಯದಲ್ಲಿ ಸೈನಿಕರಿಂದ ಅತ್ಯಾಚಾರಕ್ಕೆ ಒಳಗಾಗಿರುತ್ತಾಳೆ. ಆ ಆಘಾತದ ಕರಿ ನೆರಳು ಅವಳನ್ನು ಕಾದಂಬರಿಯುದ್ದಕ್ಕೂ ಆವರಿಸಿಕೊಳ್ಳುತ್ತದೆ. ಹಿಂದೂ ಸಂಸ್ಕೃತಿಯಿಂದ ಭಿನ್ನವಾದ ಮಿಜೋರಾಮ್ ಸಂಸ್ಕೃತಿಯ ಮೇಲೂ 'ಪಾತಿವ್ರತ್ಯ'ದ ಗರ ಬಡಿದದ್ದು, ಅದರ ಕರಾಳ ಪ್ರಭಾವವನ್ನು ತೋರಿಸುತ್ತದೆ. ಪ್ರಭುತ್ವಕ್ಕಾಗಿ ನಡೆಯುವ ಹೋರಾಟದಲ್ಲಿ ಬಲಿಯಾಗುವವರೆಂದರೆ ಆಯಾ ಜನಾಂಗದ ಸಂಸ್ಕೃತಿಗೆ ಸೇರಿದ ಹೆಣ್ಣುಮಕ್ಕಳೇ. ಅವರ ಮೇಲೆ ಅತ್ಯಾಚಾರವೆಸಗಿ ಅವರ ಗಂಡ ಮಕ್ಕಳನ್ನು ಕೊಲ್ಲುವುದರ ಮೂಲಕ ಯುದ್ಧ ತನ್ನ ತೆವಲನ್ನು ತೀರಿಸಿಕೊಳ್ಳುತ್ತದೆ. ಇದು ಲಾಗಾಯ್ತಿನಿಂದ ನಡೆದು ಬರುತ್ತಿದೆ. ಅದರ ಪ್ರತೀಕವಾಗಿ ಜೊರಾಮಿ ಇದ್ದಾಳೆ. ಆದರೆ ಹಿಂಸೆ, ದಬ್ಬಾಳಿಕೆಗೂ ಒಂದು ಅಂತ್ಯವಿದ್ದೇ ಇದೆ. ಎಲ್ಲಾ ನಾಶಮಾಡಿದ ಮೇಲೆ ಉಳಿಯುವುದಾದರೂ ಏನು? ಭೌತಿಕ ಸಂಗತಿಗಳನ್ನಾದರೂ ನಾಶಗೊಳಿಸಬಹುದು, ನಾಶಗೊಳಿಸಿದ ಆನಂತರ ಉಳಿಯುವ ಬಯಲನ್ನು ಹೇಗೆ ನಾಶಗೊಳಿಸಲು ಸಾಧ್ಯ? ಕೇಂದ್ರಸರ್ಕಾರದೊಂದಿಗೆ ಶಾಂತಿ ಒಪ್ಪಂದವಾಗಿ ಮಿಜೋರಾಮಿಗೆ ಸ್ವತಂತ್ರ ರಾಜ್ಯದ ಪಟ್ಟಸಿಗುತ್ತದೆ. ಕಾದಂಬರಿ ಶಾಂತಿಯಿಂದ ಮುಕ್ತಾಯವಾಗುತ್ತದೆ. ಜೊರಾಮಿಗೆ ತನ್ನ ಗಂಡ ಸಂಗನ ಬಗೆಗಿನ ತಪ್ಪು ಕಲ್ಪನೆ ನಿವಾರಣೆಯಾಗುತ್ತದೆ. ಯುದ್ಧದ ವಿವರಗಳು, ಅದರ ಉಪಾಯಗಳು, ಗುಳೆ ಹೊರಡುವುದು, ಇಡೀ ಹಳ್ಳಿಗೆ ಹಳ್ಳಿಯೇ ಸುಟ್ಟು ಬೂದಿಯಾದಾಗ ಜನರ ಅತಂತ್ರ ಸ್ಥಿತಿ ಎಲ್ಲವೂ ಕಣ್ಣಿಗೆ ಕಟ್ಟುವಂತೆ ಒಂದು ಭೀಭತ್ಸ ಲೋಕವನ್ನು ಸೃಷ್ಟಿಸುತ್ತವೆ. ಆದರೆ ಇದರ ಎಡೆಯಲ್ಲೇ ಜೊರಾಮಿ ಮತ್ತು ಕಿಮಿಯ ಸ್ನೇಹ, ಕಷ್ಟಕಾಲದಲ್ಲಿ ನೆರವಾಗುವ ಗ್ರಾಮಸ್ಥರು, ತನ್ನ ಜೀವವನ್ನೇ ಪಣಕ್ಕಿಟ್ಟು, ಶಾಂತಿದೂತನಾಗಿ ಹೊರಡುವ ಪಾದ್ರಿ, ಮತ್ತೆ ಪ್ರೇಮದ ಟ್ರ್ಯಾಕಿಗೆ ಬರುವ ಜೊರಾಮಿ ಮತ್ತು ಅವಳ ಗಂಡನ ಅನುಬಂಧ- ಇವು ಕಾದಂಬರಿ, ಹಿಂಸೆಯ ಮೇಲೆ ಸಾಧಿಸಿದ ಜಯವಾಗಿದೆ. ಕೇಡಿಗೂ ಕೂಡ ಕೇಡುಗಾಲವಿದ್ದೇ ಇದೆ. ಕಾಲನ ದೈತ್ಯ ದಾಪುನಡಿಗೆಯ ಕೆಳಗೆ ಎಲ್ಲಾ ನಾಶವಾಗಲೇ ಬೇಕು. ಹಾಗೆ ನಾಶಹೊಂದಿದ ಬೂದಿಯಿಂದಲೇ ಹೊಸಹುಟ್ಟು ಅರಳಬೇಕು. ಕೇಡಿನ ಅಮಂಗಲಸ್ಥಿತಿಯಿಂದ, ಶಾಂತಿಯ ಮಂಗಲ ಸ್ಥಿತಿಗೆ ತಲಪುವ ಸೇತುವೆಯಾಗಿ ಯೇಟ್ಸ್, ಥಾಮಸ್ ಹಾರ್ಡಿ,ಕಾಫ್ಕಾ, ಜೇನ್ ಏಯರ್ ಬಂದಿದ್ದಾರೆ. ಜೊತೆಗೆ ಮಿಜೋ ಹಾಡುಗಳೂ ಕೂಡಿಕೊಂಡಿವೆ. ಎಲ್ಲವೂ ಸೇರಿ ಒಂದು ಅಪರೂಪದ ಘಮಲನ್ನು ಈ ಕೃತಿ ಹೊರಸೂಸುತ್ತದೆ. ಪ್ರಭುತ್ವ ಹಿಂಸೆಯ ಕಡೆಗಿದ್ದರೆ, 'ಮನುಷ್ಯಕುಲ' ವನ್ನು ಒಂದುಮಾಡುವ ಸಾಹಿತ್ಯ ಎಂದೂ ಶಾಂತಿ, ಪ್ರೀತಿಯ ಕಡೆಗೇ ತಾನೇ? ಈ ಕೃತಿಯಲ್ಲಿ ಮಿಜೋರಾಮಿನ ಭಾಷೆ ಕೆಲವು ಸಲ ಅನುವಾದಗೊಳ್ಳದೇ ಉಳಿದಾಗಲೂ ಹೃದ್ಗತವಾಗುತ್ತವೆ. (ಕೊನೆಯ ಪುಟದಲ್ಲಿ ಅನುವಾದ ಒದಗಿಸಿರುವುದು ಬಹಳ ಸಂಗತವಾಗಿದೆ) ಕಾರಣ ಅವು ಸೃಷ್ಟಿಸುವ ಪರಿಣಾಮಕಾರೀ ಸನ್ನಿವೇಶ, ಸಂದರ್ಭಗಳು. ಭೂಮಿಕಾ , ಹೀಗೆ ವಿಭಿನ್ನ ಸಂಸ್ಕೃತಿಯ ಕಥೆಯನ್ನು ಕನ್ನಡದ್ದೇ ಎನಿಸುವಂತೆ ಅನುವಾದ ಮಾಡಿದ್ದಾರೆ. ಅಪರಿಚಿತವಾದ ಸಂಸ್ಕೃತಿಯನ್ನು ನಮ್ಮ ಹತ್ತಿರಕ್ಕೆ ತಂದಿದ್ದಾರೆ. ಅವರಿಗೆ ಅಭಿನಂದನೆಗಳು. ನವಕರ್ನಾಟಕ ಪ್ರಕಾಶನ: ೨೦೨೫  ಅಕ್ಕನ ಅನುಭಾವ ಹೈದರಾಬಾದಿನಿಂದ ಶ್ರೀಶೈಲಕ್ಕೆ ರಸ್ತೆಯ‌ಮೇಲೆ ಪ್ರಯಾಣ ಮಾಡಬೇಕೆಂದರೆ ಸಂಜೆ ಐದುಗಂಟೆಯ ಒಳಗೆ ತಲಪುವ ಹಾಗೆ ಹೋಗಬೇಕು. ಆನಂತರ ಪಥಿಕರಿಗೆ ಆ ರಸ್ತೆ ಬಂದ್. ಅದು ಪೂರ್ವಘಟ್ಟಗಳ ಶ್ರೇಣಿಯಲ್ಲಿ ಬರುವ 'ನಲ್ಲಮಲ್ಲ' ಅರಣ್ಯ ಕ್ಷೇತ್ರ. ಹುಲಿಚಿರತೆಗಳಂತಹ ಕಾಡು ಪ್ರಾಣಿಗಳು ಓಡಾಡುತ್ತವೆ. ಅವುಗಳಿಗೆ ತೊಂದರೆಯಾಗಬಹುದೆಂದೋ ಅಥವಾ ಮನುಷ್ಯರಿಗೆ ಅವುಗಳಿಂದ ಅಪಾಯವಿದೆಯೆಂದೋ ಈ ನಿಯಮವನ್ನು ಆಂಧ್ರಪ್ರದೇಶದ ಸರ್ಕಾರವೇ ಮಾಡಿದೆ. ಇಪ್ಪತ್ತೊಂದನೇ ಶತಮಾನದ ಈ ವಿದ್ಯುನ್ಮಾನದ ಕಾಲದಲ್ಲಿಯೂ, ಜನರು ಈ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕಾಗಿದೆ. ಒಟ್ಟಿನಲ್ಲಿ ಸಂಜೆ ಐದರ ಒಳಗೆ ಕಾಡಿನ ಪ್ರದೇಶವನ್ನು ದಾಟಿಬಿಡಬೇಕು. ಇದು ಸರ್ಕಾರದ ಕಟ್ಟಾಜ್ಞೆ! ಸು. ಎಂಟುನೂರು ಒಂಭೈನೂರು ವರುಷಗಳ ಹಿಂದೆ ಅಕ್ಕ, ಪಶ್ಚಿಮ ಘಟ್ಟಗಳ ತಪ್ಪಲಿನಿಂದ ಹೊರಟು ಬಸವಕಲ್ಯಾಣ ಹಾದು, ಪೂರ್ವಘಟ್ಟಗಳ ಕಾಡಿನ ಮಧ್ಯದೊಳಗಿರುವ ಶ್ರೀಶೈಲದ ಚೆನ್ನಮಲ್ಲಿಕಾರ್ಜುನನ್ನು ನೋಡಿಕೊಂಡು, ಆನಂತರ ಕೃಷ್ಣಾನದಿಯ ತೀರದಲ್ಲಿರುವ ಕದಳಿ ವನದಲ್ಲಿ ಐಕ್ಯಳಾದಳು ಎನ್ನಲಾಗುತ್ತದೆ. ಒಬ್ಬಳೇ ಹೇಗೆ ಬಂದಳು? ಯಾವ ದಾರಿಯ ಮೂಲಕ ಬಂದಳು? ಇಂದಿಗೂ ಹುಲಿಚಿರತೆಗಳಿಂದ ನಿಬಿಡವಾದ ದುರ್ಗಮ ಕಾಡಿನೊಳಗೆ ಹೇಗೆ ಸಾಗಿದಳು? ಗದಗುಟ್ಟುವ ಚಳಿ, ಸುರಿಯುವ ಮಳೆ, ರಣ ಬಿಸಿಲು, ಉಟ್ಟುಕೊಂಡಿದ್ದು ಚೆನ್ನಮಲ್ಲಿಕಾರ್ಜುನನ ಬೆಳಕನ್ನೊಂದೇ! ಎಲ್ಲಾ ಹೇಗೆ ನಿಭಾಯಿಸಿದಳು? ಒಬ್ಬಳೇ ಬಂದಿರುವ ಸಾಧ್ಯತೆ ಇಲ್ಲವೆನಿಸುತ್ತದೆ. ಬಹುಶಃ ಜೊತೆಗೆ ಯಾರಾದರೂ ಇದ್ದಿರಬೇಕು. ಇಲ್ಲದಿದ್ದರೆ ಉಡುತಡಿಯಿಂದ ಕದಳಿಯವರೆಗೆ ಸು. ಇನ್ನೂರು ಮೈಲು ಪಯಣಿಸುವ ಕಾಲದಲ್ಲಿ ಅಕ್ಕ ರಚಿಸಿದಳೆನ್ನಲಾದ ವಚನಗಳನ್ನು ಯಾರಾದರೂ ಕೇಳಿಸಿಕೊಂಡು ಇರಬೇಕಲ್ಲ? - ಅವು ಸಂಗ್ರಹಕಾರರಿಂದ ನಮ್ಮವರೆಗೆ ತಲಪಲು? ಸುಸಜ್ಜಿತವಾದ ವಾಹನದಲ್ಲಿ ಚಲಿಸಿದರೂ ಸಂಜೆ ಐದರನಂತರ ಕಾಡಿನ ಬಗಲಿನುದ್ದಕ್ಕೂ ಇರುವ ಡಾಂಬರು ರಸ್ತೆಯಮೇಲೆಯೂ ಹಾದು ಹೋಗುವ ಹಾಗಿಲ್ಲ. ಅಕ್ಕ ಕಾಡಿನೊಳಗೇ ಇದ್ದಳಲ್ಲ? ಕೆರಹಳ್ಳಗಳಲ್ಲಿ ನೀರಡಿಕೆಯನ್ನು ತೀರಿಸಿಕೊಳ್ಳುತ್ತಾ, ಚಿಲಿಮಿಲಿಎಂದೋದುವ ಗಿಳಿಗಳನ್ನು, ಹಂಸಗಳನ್ನೂ, ಚೆನ್ನ ಮಲ್ಲಿಕಾರ್ಜುನನ ಪತ್ತೆ ಕೇಳುತ್ತಾ? "ಭಿಕ್ಷಾನ್ನಗಳು" ಕಾಡಿನಲ್ಲಿ ಎಲ್ಲಿ ದೊರೆಯಬೇಕು? ಹಣ್ಣು ಹಂಪಲುಗಳೇ ಪ್ರಕೃತಿ ನೀಡಿದ ಭಿಕ್ಷೆ ಇರಬೇಕು. ಅವುಗಳನ್ನು ತಿನ್ನುತ್ತಾ ಪಾಳುದೇಗುಲಗಳಲ್ಲಿ ಚೆನ್ನನೊಡನೆ ಮಲಗಿದಳು. ಅದು ಆತ್ಮಸಂಗಾತ. ಆದುದರಿಂದಲೇ ಹುಲಿ ಚಿರತೆ ಮುಂತಾದ ಕ್ರೂರಮೃಗಗಳು ಭಾದಿಸದೇ ಇದ್ದಿರಹುದು. "ಖಗಮೃಗವೆಲ್ಲ ನೀವೇ" ಎನ್ನುತ್ತಾಳಲ್ಲ? ಆ ರೂಪಗಳಲ್ಲಿ ಬಂದ ಚೆನ್ನ ಅವಳ ಚೆನ್ನೆಯನ್ನು ಹೇಗೆ ಭಾದಿಸಿಯಾನು? ನಿಶ್ಚಲವಾಗಿ ಕುಳಿತವರ ಬಳಿ ಪ್ರಾಣಿಗಳು ಸುಳಿಯುವುದಿಲ್ಲವಂತೆ. ಭಯದಿಂದ ಓಡುವವರನ್ನು ಮಾತ್ರ ಅಟ್ಟಿಸಿಕೊಂಡು ಹೋಗಿ ಹಿಡಿಯುತ್ತವಂತೆ. ಧ್ಯಾನದಲ್ಲಿ ಕುಳಿತವರ ದೇಹದ ಬೆವರಿನಿಂದ ಒಸರುವ ವಾಸನೆಗೆ ಹಾವುಗಳೂ ಕೂಡ ಆಕರ್ಷಿತವಾಗಿ ಬರುತ್ತವಂತೆ. ( ನೋಡಿ: 'ವಿಶ್ವಪ್ರಜ್ಞೆಯ ಉದಯ' - ದಾದಾ ಗಾವಂಡ್ : ಅನುವಾದ :ಸುಮಾದ್ವಾರಕಾನಾಥ್) ಶಂಕರ ಶಬರನಾಗಿ ಅರ್ಜುನನ ಜೊತೆ ಸೆಣೆಸಿ ಅವನಿಗೆ ಪಾಶುಪತವನ್ನು ಕರುಣಿಸಿದ ಪ್ರದೇಶವೇ ಶ್ರೀಶೈಲವೆಂದೂ ಆದುದರಿಂದಲೇ ಅವನು ಮಲ್ಲಿಕಾರ್ಜುನನಾದನೆಂದೂ ಐತಿಹ್ಯವಿದೆ. ಕಾಡಿನೊಳಗೆ ಮಲ್ಲಿಗೆಯ ಬಳ್ಳಿಗಳಿಂದ ಸುತ್ತುವರೆದ ಶಿವಲಿಂಗವೊಂದನ್ನು ಒಬ್ಬ ರಾಜ ಗುರುತಿಸಿದ್ದರಿಂದ ಅದಕ್ಕೆ ಈ ಹೆಸರು ಬಂದಿತೆಂದೂ ಇನ್ನೊಂದು ಐತಿಹ್ಯವಿದೆ, ಎಂದು ಗೂಗಲ್ ಹೇಳುತ್ತದೆ. 'ಅರ್ಜುನ' ಎನ್ನುವ ಪದಕ್ಕೆ 'ಬಿಳಿ' ಎನ್ನುವ ಅರ್ಥವೂ ಇದೆ. ಅವನು 'ಮಲ್ಲಿಗೆಯಂತೆ ಬಿಳಿ'. ಎ.ಕೆ ಆರ್ ಇದನ್ನೇ "as white as jasmine" ( speaking of Shiva) ಎಂದು ಅನುವಾದ ಮಾಡಿದ್ದಾರೆ. ನನಗೇನೋ ಅವನನ್ನು 'ಚೆನ್ನಮಲ್ಲಿಕಾರ್ಜುನ'ನೆಂದೇ ಉಳಿಸಿಕೊಂಡು ಅದಕ್ಕೊಂದು ಟಿಪ್ಪಣಿ ಕೊಡಬಹುದಿತ್ತು ಎಂದೇ ಎನಿಸುತ್ತದೆ. ಇರಲಿ, ಈ ಲಿಂಗ ಎರಡನೆಯ ಶತಮಾನದಲ್ಲಿ ಉದ್ಭವವಾಗಿರಬಹುದು, ಅದಕ್ಕೆ ಹದಿನಾಲ್ಕನೇ ಶತಮಾನದಲ್ಲಿ ದೇವಾಲಯವನ್ನು ಕಟ್ಟಲಾಗಿದೆ ( ವಿಜಯನಗರ ಸಾಮ್ರಾಜ್ಯ ಒಂದನೇ ಹರಿಹರ)ಎಂದು‌ ಮಂದಿರದ ಫಲಕಗಳು ಹೇಳುತ್ತವೆ. ಏನಾದರಾಗಲೀ ಅಕ್ಕ ಬರುವ ಕಾಲಕ್ಕಂತೂ ದೇವಾಲಯ ನಿರ್ಮಾಣವಾಗಿರುವುದು ಸಾಧ್ಯವಿಲ್ಲ. ಅನುಭವ ಮಂಟಪದಲ್ಲೇ, ಅಕ್ಕನಿಗೆ ಕದಳಿಗೆ ಹೋಗಲು ನಿರ್ದೇಶನವಾಗಿರುತ್ತದೆ. ( ಶೂನ್ಯಸಂಪಾದನೆ) ಅಕ್ಕ ಕದಳೀವನಕ್ಕೆ ಹೋಗುವ ದಾರಿಯಲ್ಲಿ ಶ್ರೀಶೈಲದಲ್ಲಿದ್ದ ಉದ್ಭವ ಲಿಂಗವನ್ನು ಕಂಡಮೇಲೆಯೇ ಅದಕ್ಕೆ ಚೆನ್ನಮಲ್ಲಿಕಾರ್ಜುನನೆಂಬ ಹೆಸರು ಬಂದಿರಬೇಕು. ಅಥವಾ ಅವಳೇ ಆ ಹೆಸರನ್ನು ಅವನಿಗೆ ಕೊಟ್ಟಳೋ ಇದು ಸಂಶೋಧನೆಗೆ ಸಂಬಂಧಿಸಿದ ವಿಷಯ. ಶ್ರೀಶೈಲ ಹಾಗೂ ಕದಳಿವನದ ನಡುವೆ ಅಪಾರ ಪಾತ್ರದ ಕೃಷ್ಣೆ ಹರಿಯುತ್ತಾಳೆ. ಶ್ರೀಶೈಲದಿಂದ ಕೃಷ್ಣಾನದಿ ದಂಡೆ ತಲಪಲು ಕಡಿದಾದ ಬೆಟ್ಟ ಏರಿ ಅಷ್ಟೇ ಕಡಿದಾದ ಜಾರಿನಲ್ಲಿ ಇಳಿಯಬೇಕು. ಈಗಂತೂ ರೋಪ್ ವೇ ಇದೆ. "ಅಕ್ಕ, ಕದಳೀವನಕ್ಕೆ ರೋಪ್ ವೇನಲ್ಲಿ ಹೋಗಿದ್ದಳಾ?" ರೋಪ್ ವೇ ತೊಟ್ಟಿಲೊಳಗೆ ಪಕ್ಕದಲ್ಲಿ ಕುಳಿತ ಇವನು ಜೋಕ್ ಹೊಡೆದ. ಹೌದು, ಅಕ್ಕ ಈ ಅಗಾಧ ಕೃಷ್ಣೆಯನ್ನು ಹೇಗೆ ದಾಟಿರಬಹುದು? ತೆಪ್ಪದ ಮೇಲೆಯೇ? ಈಜಿ ದಾಟಿರಬಹುದೇ? ಅಕ್ಕನಿಗೆ ಈಜು ಬರುತ್ತಿರಬಹುದೇ? ಈಗಂತೂ ಕದಳೀ ವನಕ್ಕೆ ಹೋಗುವುದು ಕಷ್ಟ. ತೆಲಂಗಾಣ ಸರ್ಕಾರದ ಪರವಾನಗಿ ಬೇಕು. ಅದು ಸಿಕ್ಕಮೇಲೆ , ದೋಣಿಯ ಚಾಲಕರು ಅಲ್ಲಿಗೆ ಕರೆದುಕೊಂಡು ಹೋಗಿ ಬಿಡುತ್ತಾರೆ. ಹಾಗೆ ಹೋದವರನ್ನು ವಾಪಸ್ಸು ಕರೆದುಕೊಂಡು ಹೋಗಲು ದೋಣಿ ಬರುವುದು ಮತ್ತೆ ಎರಡು ದಿನಗಳ ಆನಂತರವೇ, ಎಂದು ಅಕ್ಕನ ಗುಹೆಗೆ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದ ದೋಣಿಯವ ಹೇಳಿದ. ಅಕ್ಕಮಹಾದೇವಿಯ ಗುಹೆಗೆ ಶ್ರೀಶೈಲದ ತೀರದಿಂದ ಒಂದೂವರೆ ತಾಸಿನ ಅದ್ಭುತ ರಮ್ಯ ದೋಣಿಯ ಪಯಣ ಕೃಷ್ಣೆಯಮೇಲೆ. ಸುತ್ತಲೂ ದುರ್ಗಮವಾದ ನಲ್ಲಮಲ್ಲ ಹಸಿರು ಕಾಡು, ಬೆಟ್ಟಗಳು. ಕೆಳಗೆ ಅಪಾರವಾದ ನದಿ. ದೇಹ ಮನಸ್ಸು ಒಳಗೆ ವಿಶಿಷ್ಟವಾಗಿ ಅರಳಿದ ಭಾವ. ವ್ಯಕ್ತಿತ್ವ ವಿಕಸನವೆಂದರೆ ಇದೇ ಇರಬೇಕು. ದೋಣಿ ನಿಲುಗಡೆಗೆ ಬಂದಿತು. ದೋಣಿಯಿಂದ ದೋಣಿಗೆ ನೆಗೆದು ನೆಲದ ಮೇಲೆ ಕಾಲೂರಿದ ತಕ್ಷಣವೇ ನಮ್ಮನ್ನು ಗುಹೆ ಸ್ವಾಗತಿಸುವುದಿಲ್ಲ. ಅದಕ್ಕೂ ಒಂದರ್ಧ ಕಿ.ಮೀ ಏರು ನಡಿಗೆಯ ಪಯಣ- ಒರಟಾದ ಕಲ್ಲು ಹಾಸಿನ ಮೇಲೆ. ಕಾಡಿನ ಒಳಗೆ. ಕೃಷ್ಣೆಯಂತೂ ಉದ್ದಕ್ಕೂ ಜೊತೆಯಲ್ಲಿ ಇದ್ದೇ ಇದ್ದಳು. ಅಗಲವಾದ ಕೋಟೆ ಬಾಗಿಲಿನಂತೆ ಕೊರೆದು ನಿರ್ಮಾಣವಾದ ಗುಹೆ ಹೊಕ್ಕೆವು. ಅಲ್ಲೊಂದು ಅಕ್ಕನ ಮೂರ್ತಿಯನ್ನು ಇಡಲಾಗಿದೆ. ಇತ್ತೀಚೆಗೆ ಯಾರೋ ಇಟ್ಟಂತೆ ಕಾಣುತ್ತದೆ. ಧ್ಯಾನದ ಭಂಗಿ. ಎಲ್ಲವನ್ನೂ ಮೂರ್ತಗೊಳಿಸಿ, ವಾಚ್ಯಗೊಳಿಸಿ ನಮ್ಮ ಕಲ್ಪನೆಯ ರೆಕ್ಕೆಪುಕ್ಕಗಳನ್ನೆಲ್ಲಾ ಕತ್ತರಿಸಿ ಬಿಡುವ ಆಧುನಿಕ ಮನೋಸ್ಥಿತಿಯ ಬಗ್ಗೆ ಕೋಪ ಬರುತ್ತದೆ. ಸುಣ್ಣದ ಕಲ್ಲಿನ ಬಂಡೆಗಳನ್ನು, ನೀರು ಕೊರೆದು ಅದ್ಭುತ ಕಲಾಕೃತಿಯನ್ನಾಗಿ ಮಾಡಿದೆ. ವಿಶಾಲವಾದ ಗುಹೆಯ ಒಳಹೊಕ್ಕಾಗ ಮೂಲೆಯೊಂದರಲ್ಲಿ ಮುರಿದು ಬಿದ್ದ ಒಂದು ವಿಗ್ರಹವೊಂದು ಕಾಣಿಸಿತು. "ಬಹುಶಃ ಇದೇ ಮೂಲ ವಿಗ್ರಹ ಇರಬೇಕು" ಎಂದು ಇವ ಹೇಳಿದ. ಮುರಿದ ವಿಗ್ರಹದ ಬಳಿ ಯಾರೂ ಸುಳಿಯಲಿಲ್ಲ. ಎಲ್ಲರೂ ಹೊಸ ವಿಗ್ರಹದ ಮುಂದೆ ಭಕ್ತಿಭಾವದಿಂದ ಕೈಮುಗಿದು ನಿಂತಿದ್ದರು. ಗೈಡ್ ಆಗಿ ಬಂದಿದ್ದ ದೋಣಿಯವನೇ, ಅಕ್ಕನ ಬಗ್ಗೆ ತೆಲಗಿನಲ್ಲಿ, ಹಿಂದಿಯಲ್ಲಿ ಏನೇನೋ 'ಪುಂಗುತ್ತಿದ್ದ'. ಅವನ ಮಾತಿಗೆ ನಾವು 'ಕಿವುಡುಗೇಳ್ದು' ಒಳ ಹೊಕ್ಕೆವು. ಅಕ್ಕನ ಮುರಿದ ವಿಗ್ರಹದ ಮುಂದೆ ನನ್ನನ್ನು ನಿಲ್ಲಿಸಿ ಫೋಟೋ ತೆಗೆದು ಅದಕ್ಕೆ 'ತಂಗಿ'ಯೆಂದು ಇವನು ಕ್ಯಾಪ್ಷನ್ ಕೊಟ್ಟ. ನಲ್ಲಮಲ್ಲಕಾಡು, ಬೆಟ್ಟಗುಡ್ಡಗಳು ಗಹಗಹಿಸಿ ನಕ್ಕಿರಬೇಕು! ಗುಹೆಯ ಒಳಗೆ ಸುರಂಗದಂತಹ ಏರು. ಒರಟಾದ ಕಲ್ಲು ಹಾಸುಗಳು. ಒಬ್ಬರೇ ಹೋಗುವಷ್ಟು ಕಿರಿದಾದ ದಾರಿ. ಅಕಸ್ಮಾತ್ ತಲೆ ಎತ್ತಿದರೆ ಸುಣ್ಣದ ಕಲ್ಲಿನ ಹರಿತವಾದ ಕೆತ್ತನೆಗಳು , ನಮ್ಮ ಮುಖ ಮೂತಿ ಕೆತ್ತುವುದು ಖಚಿತ. ಉದ್ದವಾಗಿರುವವರಂತೂ ನೆಲಕ್ಕೆ ಮಲಗಿದಂತೆ ಬಗ್ಗಿ ಸಾಗಬೇಕು. ಕಗ್ಗತ್ತಲು, ಬಾವುಲಿಗಳ ವಾಸನೆ ಬೇರೆ. ನಮ್ಮ ಮೊಬೈಲ್ ಬೆಳಕಿನಲ್ಲಿ ದಾರಿತೋರಿಸುವವ "ದಮ್ಮುಕಟ್ಟಬಹುದು ಭಯಪಡಬೇಡಿ" ಎಂಬ ಸಂತೈಕೆ ಬೇರೆ. ಹತ್ತು ನಿಮಿಷ ಹೀಗೆ ನಡೆದರೆ ಕೊನೆಗೆ ಬಂಡೆಯ ಎರಡು ಕೊರಕಲಿನ ಮಧ್ಯೆ ಒಂದು ಶಿವಲಿಂಗ. ಅದಕ್ಕೆ ಮೇಲಿನ ಬಂಡೆಯಿಂದ ಒಸರುವ ನೀರು ಹನಿ ಹನಿಯಾಗಿ ಅಭ್ಯಂಗ ಎರೆಯುತ್ತದೆ. ಅದು ಉದ್ಭವ ಲಿಂಗವಂತೆ. ಇದು ಅದಕ್ಕೆ ಸಹಜ ಅಭಿಷೇಕವಂತೆ. ಮಾರ್ಗದರ್ಶಿ ಹೇಳುತ್ತಿದ್ದ. ಶಿವಲಿಂಗಕ್ಕೆ ಹಣೆಹಚ್ಚಲು ಅಡ್ಡಡ್ಡವಾಗಿ ಕೊರಕಲಿನೊಳಗೆ ಬಗ್ಗಿ ತೂರಿಕೊಳ್ಳಬೇಕು. ಲಿಂಗಕ್ಕೆ ಹಣೆಹಚ್ಚಿ ಅದೇರೀತಿ ಹೊರಬರಬೇಕು. ಗುಹೆಯೊಳಗೆ ಏರುವಾಗ ಇವನು ಧಡ್ಡನೆ ಬಿದ್ದ. ಸದ್ಯ ಏನೂ ಆಗಲಿಲ್ಲ. "ಅದೇನೋ ವಿಶೇಷವಾದ vibes ಇದ್ದವರು, ಗುಹೆಯೊಳಗೆ ಬೀಳುತ್ತಾರಂತೆ ಚಿಕ್ಕಪ್ಪಾ, ಅವನು ಹೇಳುತ್ತಿದ್ದ" ಎಂದು ಇವನ ಅಣ್ಣನ ಮಗಳು ಹೊರಬಂದಾಗ ಹೇಳಿದಳು. ಅದನ್ನೇನಾದರೂ ಇವನು ಕೇಳಿಸಿಕೊಂಡಿದ್ದಿದ್ದರೆ "ನಾನ್ಸೆನ್ಸ್ ಎಲ್ಲಾ ಮಾತಾಡಬೇಡ ಈಗ ನಡಿ. ಮುಂದೆ ನೋಡ್ಕೊಂಡು ಹೋಗು" ಎಂದು ಅವಳನ್ನು ಇವನು ಗದರಿಸಿರೋನು. ಸದ್ಯ ಕೇಳಿಸಿಕೊಳ್ಳಲಿಲ್ಲ ನಾನು ಬಚಾವಾದೆ. ಕದಳೀವನಕ್ಕೆ ಹೊಗುವ ಮುನ್ನ ಅಕ್ಕ ಇಲ್ಲಿ ಕುಳಿತು ತಪಸ್ಸು ಮಾಡಿರಬಹುದು. ಈ ಬಾವುಲಿಗಳ ವಾಸನೆ, ಉಸಿರು ಕಟ್ಟುವ ಇಕ್ಕಟ್ಟು, ಕಗ್ಗತ್ತಲು, ಕಾಡು, ಹೇಗಿದ್ದಿರಬಹುದು, ಒಂಬೈನೂರು ವರುಷಗಳ ಹಿಂದೆ!? ಅಕ್ಕ ಇವುಗಳನ್ನು ಹೇಗೆ ಎದುರಿಸಿರಬಹುದು? ಹಗಲಲ್ಲಿ ರುದ್ರಮನೋಹರವಾಗಿರುವ ಈ ಪರಿಸರ ಇರುಳಲ್ಲಿ ಎಷ್ಟು ಭಯಾನಕವಾಗಿರಬಹುದು? ನೀರಿಗೆ ಇಳಿಯಲೂ ಅರ್ಧಮೈಲು ಗುಡ್ಡ ಇಳಿಯಬೇಕು! ಅವಳ ನೀರಡಿಕೆ ಹೇಗೆ ತೀರಿರಬೇಕು? ಚೆನ್ನನೊಡನೆ ಅವಳ ಆತ್ಮಸಂಗಾತ ಅದೆಷ್ಟು ಗಾಢವಾಗಿರಬೇಕು! ಅಪ್ಪಿಕೊಂಡಳೇ ಅಸ್ಥಿಗಳು ನುಗ್ಗಾಗುವಂತೆ? ತನ್ನ ಕುಂಭಕುಚದ ಮೇಲೆ ಎತ್ತಿಕೊಂಡಳೇ? ಹಗಲಿನ ಕೂಟಕ್ಕೆ ಹೋರಿ ಬೆಂಡಾದಳೇ? ಇರುಳಿನ ಕೂಟಕ್ಕೆ ಇಂಬರಿದು ಹತ್ತಿದ ಅವಳ ದಾಹ ತಣಿಯಿತೇ? ಸಾವಿಲ್ಲದ, ರೂಹಿಲ್ಲದವನೊಡನೆ ಕುಲ ಸೀಮೆಯಳಿದು ಕೂಡಿದಳೇ? ವನವೆಲ್ಲ ನೀವೇ ಎಂದು ಹಲುಬಿ ಹಪಹಪಿಸಿ ವನದೊಳಗೇ ಸೇರಿಹೋದಳೇ ? ಯಾರಿಗೆ ಗೊತ್ತು? ಆದರೆ "ನೀ ಕೇಳಿದರೆ ಕೇಳು ಕೇಳದಿದ್ದರೆ ಮಾಣು. ನಾ ನಿನ್ನ ಹಾಡಿದಲ್ಲದೆ ಸೈರಿಸಲಾಪೆನಯ್ಯಾ" ಎಂದು ೩೭೫ ಕ್ಕೂ ಮಿಕ್ಕ ವಚನಗಳಲ್ಲಿ ಹರಿದ ವಿಪ್ರಲಂಬನ ಕೊನೆಗೂ ನಿಂತೇ ಹೋಯಿತಲ್ಲಾ? ಲಿಂಗೈಕ್ಯದಲ್ಲಿ ಮೌನವೇ ತಾನೇ ರಾಜ್ಯವಾಳುವುದು!  ಪ್ರಕೃತಿ ಮತ್ತು ಚಲನೆ: ಈ ಲಹರಿಯ ಬರಹಕ್ಕೆ ಕಾರಣ, ಸ್ನೇಹಿತರಾದ ಕೆ. ಸತ್ಯನಾರಾಯಣ ಅವರು, ತಮ್ಮ ಮಗಳು ಪ್ರಿಯಾ ಆರ್ಕಿಟಿಕ್ ಪ್ರದೇಶದಲ್ಲಿ ಕೈಗೊಂಡ ಮ್ಯಾರೆಥಾನ್ ಅನುಭವವನ್ನು ಹಂಚಿಕೊಂಡಿದ್ದರು. ಅದನ್ನು ಬರಹದ ಕೊನೆಗೆ ಇಲ್ಲಿ ಲಗತ್ತಿಸಿದ್ದೇನೆ. "ಮ್ಯಾರಥಾನ್ ರೇಸ್' ಒಂದು ಓಟ. ಮೈಲುಗಟ್ಟಲೆ ಓಡುವುದು. ಇದಕ್ಕೆ ಒಂದು ನಿರ್ಧಿಷ್ಟ ದಾರಿಯನ್ನು ಗುರುತು ಮಾಡಿರುತ್ತಾರೆ ( Trail). ಈ ದಾರಿಗೆ ನಮಗೆ ಅನುಕೂಲವಾದ ನಿರ್ಧಿಷ್ಟ ಜಾಗಗಳಿಂದಲೇ, ಓಟದೊಳಕ್ಕೆ ಸೇರಿಕೊಳ್ಳಬಹುದು. ಅದರಲ್ಲಿ ಸ್ಪರ್ಧೆಯ ಗೆರೆಗಳಿಲ್ಲ. ನಾವು ಕೈಗೊಂಡಷ್ಟೇ ವೇಗ. ತಲಪಿದಷ್ಟೇ ಗುರಿ. ಕಾಲಿದ್ದವರು ಮಾತ್ರ ಓಡುವುದಲ್ಲ. ಗಾಲಿಕುರ್ಚಿಯಲ್ಲಿ ಕುಳಿತವರೂ ಇಲ್ಲಿ ಓಡಲು ಸಾಧ್ಯವಿದೆ. ಹೀಗಾಗಿ 'ಕಿಂದರ ಜೋಗಿಯ ಕುಂಟರು' ನಿರಾಶರಾಗುವ ಕಾರಣವೇ ಇಲ್ಲ. ಇನ್ನೊಬ್ಬರೊಂದಿಗೆ ಸ್ಪರ್ಧೆ ಇಲ್ಲ. ನಮ್ಮ ನಮ್ಮ ಶಕ್ತ್ಯಾನುಸಾರ ಓಡುವುದು ಅಷ್ಟೇ. ಸ್ಪರ್ಧೆ ಇರುವುದಾದರೂ ಅದು ನಮ್ಮ ಸ್ವಶಕ್ತಿಯೊಡನೆ ಮಾತ್ರ. 'ಸ್ವ' ದ ಕ್ಷಮತೆಯೊಡನೆ ಮಾತ್ರ. ಹಿಂದೆ ಉಳಿದವರ ಬಗ್ಗೆ ಇಲ್ಲಿ ತಿರಸ್ಕಾರವಿಲ್ಲ, ಮುಂದೆ ಹೋದವರ ಬಗ್ಗೆ ಅಸೂಯೆ ಇಲ್ಲ. ಗೆದ್ದ ದೊಡ್ಡಸ್ತಿಕೆಯಾಗಲೀ, ಸೋತು ಸುಣ್ಣವಾಗುವುದಾಗಲಿ ಇಲ್ಲವೇ ಇಲ್ಲ. ಹಾಗಾಗಿ ಒಬ್ಬರನ್ನೊಬ್ಬರು ಓವರ್ ಟೇಕ್ ಮಾಡುವ ಪ್ರಮೇಯವೇ ಇಲ್ಲ. ತಮ್ಮ ಪಾಡಿಗೆ ತಾವು ತಮ್ಮ ವೇಗದ ಮೇಲಷ್ಟೇ ನಿಗಾ ಇಟ್ಟುಕೊಂಡು ಓಡುವುದು ! ಎಷ್ಟು ಆರೋಗ್ಯಕರ ನಿಲುವು! ಓಡುವ ಸಾಮರ್ಥ್ಯ ಎನ್ನುವುದೂ ಸಾಪೇಕ್ಷವಾದುದು. ಓಡಿ ಓಡಿ ಸುಸ್ತಾಗಿ ಇನ್ನು ಸಾಧ್ಯವೇ ಇಲ್ಲವೆಂದು ಬಿದ್ದಾಗ 'ಹುಲಿ 'ಬಂತು ಎಂದು ಯಾರೋ ಕೂಗಿದರು ಎಂದಿಟ್ಟುಕೊಳ್ಳಿ ಆಗ ಓಡಲು ದೇಹಕ್ಕೆ ಎಲ್ಲಿಲ್ಲದ ಶಕ್ತಿಬಂದು ಬಿಡುತ್ತದೆ. ಜೀವದ ಮೇಲಿನ ಆಸೆ ನಮಗೆ ಓಡಲು ಕಲಿಸುತ್ತದೆ. ಸ್ಪರ್ಧೆಗೆ ಇಷ್ಟು ಶಕ್ತಿಯಿಲ್ಲ. ಇದ್ದರೂ ಅದು ದ್ವೇಷ, ಸ್ವಾರ್ಥ, ಅಸೂಯೆಗಳ ಹೊಯ್ಲಿನಲ್ಲಿ ಕುಗ್ಗಿ ಹೋಗುತ್ತದೆ. ಹಾಗೆಂದು ಬೆಳವಣಿಗೆಗೆ ಕಾರಣವಾಗುವ ಆರೋಗ್ಯಕರ ಸ್ಪರ್ಧೆ ಬೇಡವೆಂದಲ್ಲ. ನಿರಂತರ ಚಲಿಸುವುದು ಜೀವಧಾರಣೆಯ ಸಂಕೇತ. ಚಲನೆ ಸೃಷ್ಟಿಯ ಬೀಜ. ಬದುಕಿನ ನಡೆ. ಬದುಕೆಂದರೆ ಮ್ಯಾರಥಾನ್ ಓಟವೇ,ಅದು ನಿಸರ್ಗದ ನಡೆ. ನಿಸರ್ಗ, ಸ್ಪರ್ಧೆಯಲ್ಲಿ ಜೂಜಾಡುವುದಿಲ್ಲ. ತನ್ನದೇ ನಿರ್ಧಿಷ್ಟ ಗತಿ, ಕ್ರಮದೊಳಗೆ ಚಲಿಸುತ್ತದೆ. ಗತಿ, ಕ್ರಮ ತಪ್ಪುವುದಿಲ್ಲ. ಅಕಸ್ಮಾತ್ ಗತಿ ತಪ್ಪಿದರೆ ಸುನಾಮಿ, ಭೂಕಂಪ, ಅಗ್ನಿ ಸ್ಫೋಟ. ಅದಕ್ಕೆ ನಾವೇ ಕಾರಣ. ನಿಸರ್ಗದ ಭಾಗವೇ ಆದ ನಾವು ನಮ್ಮ ಗತಿ ತಪ್ಪಬಾರದು. ತಪ್ಪಿದರೆ ದೇವರೇ ಗತಿ! ಸತ್ಯನಾರಾಯಣ ಅವರ ಮಗಳು ಸರಿಯಾಗಿಯೇ ಹೇಳಿದ್ದಾಳೆ. ನರಳಿಕೊಂಡು ಬಿದ್ದಲ್ಲೇ ಬಿದ್ದಿರುವುದೋ ಇಲ್ಲ ಒದರಿಕೊಂಡು ಓಡುವ ಕಾಲದ ಜೊತೆಗೆ ಸೇರಿಕೊಳ್ಳುವುದೋ ಎರಡರ ನಡುವಿನ ಆಯ್ಕೆ ನಮ್ಮದೇ ಆಗಿರುತ್ತದೆ.   ಕೊಟ್ಟು ಹೋಗುವುದೂ....ಬಿಟ್ಟು ನಡೆಯುವುದು.... ಬೆಂಗಳೂರಿನ ಬಾಡಿಗೆ ಮನೆಯ ಹೊಸ ವಾಸ್ತವ್ಯಕ್ಕೆಂದು ಸಟ್ಟುಗ, ತಟ್ಟೆ, ಬಾಣಲೆಗಳನ್ನು ಖರೀದಿಸುವಾಗ ಮೈ ಏರಿ ಬಂದದ್ದು ಉತ್ಸಾಹ ಸಂಭ್ರಮಗಳಲ್ಲ. ಬದಲಾಗಿ ಅಮರಿಕೊಂಡದ್ದು ಗಾಢ ವಿಷಾದ. ಎಲ್ಲವನ್ನೂ‌ ವಿಲೇವಾರಿ ಮಾಡಿ ಕೈ ಒದರಿಕೊಂಡು ಹೋಗುವ ಹೊತ್ತಿನಲ್ಲಿ ಹೊಸದಾಗಿ ಗುಡ್ಡೆ ಹಾಕಿಕೊಳ್ಳುತ್ತಿರುವುದಕ್ಕೆ ನಗೆ ಬರುತ್ತಿದೆ, ಜೊತೆಗೆ ಹೇವರಿಕೆಯೂ.... ಮೂವತ್ತೆಂಟು ವರುಷಗಳ ಹಿಂದೆ‌ ಮದುವೆಯಾದ ಹೊಸತರಲ್ಲಿ ಎಣ್ಣೆ ಬತ್ತಿ ಸ್ಟೌವ್ ನಲ್ಲಿ ಕೂಡ ಹೋಳಿಗೆ, ಸಜ್ಜಪ್ಪ ಮಾಡುತ್ತಿದ್ದ ಆ ಉಮೇದು ಈಗೆಲ್ಲಿ ಹೋಯಿತೋ?! ಈಗ , ಇದು ಯಾಕೆ? ಅದು ಯಾಕೆ? ಇರುವುದೇ ಸಾಕು ಇಲ್ಲದ್ದು ಯಾಕೆ ಬೇಕು ಎನ್ನುವ ನಿರುತ್ಸಾಹ. ನಮ್ಮ ನಡುವಿನ ಸಂವೇದನಾ ಶೀಲ ಲೇಖಕ, ರಂಗ ನಿರ್ದೇಶಕ, ಖಡಕ್ ಮನುಷ್ಯನೆಂದೇ ಹೆಸರಾದ ಎಸ್.ಎನ್.ಸೇತುರಾಮ್ ಅವರು ತಮ್ಮ ಸೀರಿಯಲ್ ಒಂದರಲ್ಲಿ "ಎಲ್ಲವನ್ನೂ ಕೊಟ್ಟು ಹೋಗುವುದಲ್ಲ ಬಿಟ್ಟು ಹೋಗುವುದು" ಎಂಬ ಮಾತನ್ನು ಪಾತ್ರಗಳ ಮುಖೇನ ಆಡಿಸುತ್ತಾರೆ. ಹೌದು, ಅದು ಬಿಟ್ಟು ಹೋಗುವುದೇ ಆದರೂ ಅದು ಕೊಟ್ಟು ಹೋಗುವುದು! ಕೊಟ್ಟು ಹೋಗುವುದಕ್ಕೂ ಬಿಟ್ಟು ಹೋಗುವುದಕ್ಕೂ ಬಹಳ ಅಂತರವಿದೆ. ಇನ್ನೆಷ್ಟು ದಿನ ಬಾಕಿ ಇದೆಯೋ ಎನ್ನುವ ವಿಷಾದದಲ್ಲಿ ಮುಂಬಯಿಂದ ಹೊರಡುವ ಸಂದರ್ಭದಲ್ಲಿ ನಾನು ಒಂದು ದಿನ ಅನಾಮತ್ತಾಗಿ ಕಪಾಟಿಗೆ ಕೈಹಾಕಿ ಒಂದು ಹತ್ತು ಹನ್ನೆಡರೆಡು ಸೀರೆಗಳನ್ನು ತಂದು ಸೋಫಾದಮೇಲೆ ಬಿಸಾಕಿ "ರಿಹಾ, ನಿನಗೆ ಇದರಲ್ಲಿ ಇಷ್ಟವಾದುದನ್ನು ಇಟ್ಟುಕೊಂಡು ಬೇರೆ ಯಾರಿಗಾದರೂ ಕೊಟ್ಟು ಬಿಡು " ಎಂದು ರಿಹಾನಾಳಿಗೆ ಹೇಳಿದೆ. ರಿಹಾನ ನನ್ನ 'ಕೊಳ್ಳಿಗೆ' ಬಿದ್ದು (ಕೊರಳಿಗೆ) ಗಳ ಗಳ ಅತ್ತು, "ಸಂಭಾಲಕೆ ಜಾನಾ... ಫೋನ್ ಕರ್ತೇ ರೆಹನಾ" ಎಂದು ದುಪ್ಪಟ್ಟಾದಲ್ಲಿ ಕಣ್ಣೊರೆಸಿಕೊಳ್ಳುತ್ತಾ ಚೀಲ ಹಿಡಿದು ಭಾರವಾಗಿ ಹೊರನಡೆದಿದ್ದಳು. ಹೀಗೆ ಸೋಫಾದಮೇಲೆ ಒಟ್ಡಿದ್ದ ಸೀರೆಗಳೆಲ್ಲಾ ಬೆಂಗಳೂರಿಗೆ ಹೊರಡುವ ಪೂರ್ವ ತಯಾರಿ ಇರಬಹುದು ಎಂದುಕೊಂಡಿದ್ದ ಗಂಡ ನನ್ನನ್ನು ಕಕಮಕವಾಗಿ ನೋಡಿದ್ದ. ಸೀರೆಗಳನ್ನು ಕೊಟ್ಟಿದ್ದೆ ನಿಜ. ಹಾಗೆ ಕೊಡುವಾಗ ಕೆಲವು ಹೊಸ ಸೀರೆಗಳನ್ನು ಕೊಟ್ಟಿದ್ದರೂ ಅವುಗಳಲ್ಲಿ ಬೆಲೆ ಬಾಳುವ ನನ್ನ ರೇಷ್ಮೆ ಸೀರೆಗಳು ಇರಲಿಲ್ಲ. ಕೊಟ್ಟು ಹೋಗುವುದೆಂದರೆ ಇದೇ ಏನೋ! ಕೊಡುವುದಾದರೆ ಯಾರಿಗೆ ಏನನ್ನು ಕೊಡಬೇಕು, ಬಿಡಬೇಕು ಎಂಬ ಆತ್ಯಂತಿಕವಾದ ತಾರತಮ್ಯವಿರುತ್ತದೆ. ಸೀರೆ ಪಾತ್ರೆಗಳನ್ನಾದರೆ ಯಾರಿಗಾದರೂ ಕೊಟ್ಟುಬಿಡಬಹುದು. ಆದರೆ ಚಿರಾಸ್ತಿಗಳನ್ನು ಚಿನ್ನದ ಆಭರಣಗಳನ್ನು ಕೊಡುವುದು ಮಾತ್ರ ನಮ್ಮ ವಾರಸುದಾರರಿಗೆ ಮಾತ್ರ. ಹೀಗೆ ಕೊಟ್ಟು ಹೋಗುವುದರಲ್ಲಿ ಆಯ್ಕೆ ಇರುತ್ತದೆ. ಆದರೆ ಬಿಟ್ಟು ಹೋಗುವುದೆಂದರೆ ಹಾಗಲ್ಲ. ದೇಹವನ್ನು ಬಿಡುವ ಹಾಗೆಯೇ! ನನಗೆ ಬೇಡವೆಂದಮೇಲೆ ಯಾರು ಒಯ್ದರೆ ತಾನೇ ಏನು ವ್ಯತ್ಯಾಸವಾಗುತ್ತದೆ ಎನ್ನುವ ಒಂದು ರೀತಿಯ ಅನಾಸಕ್ತಿ. ಅದಕ್ಕೆ‌ ಅಪಾರವಾದ ಅಧ್ಯಾತ್ಮಿಕ ತಯಾರಿ ಬೇಕು. ಬುದ್ಧ ಎಲ್ಲವನ್ನೂ ಬಿಟ್ಟು ನಡೆದ. ಕೊಡುವುದು ಹಕ್ಕಿನ ಮಾತು, ಬಿಡುವುದು ಪರಿತ್ಯಾಗದ ನಿರ್ಧಾರ. ಬಿಡುವುದರಲ್ಲಿ ಅಪರಿಗ್ರಹದ ಉದಾತ್ತತೆ ಇದೆ. ಕೊಡುವುದರಲ್ಲಿ ನಮ್ಮ ಲಾಲಸೆಯ ಸಾತತ್ಯವಿದೆ. ಮಾನಸ ಸರೋವರದಲ್ಲಿ ಮಹಿಳೆಯೊಬ್ಬರು ತಮ್ಮ ಒಡವೆಗಳನ್ನೆಲ್ಲಾ ಬಾಗಿನದ ರೂಪದಲ್ಲಿ ಅರ್ಪಿಸಿಬಿಟ್ಟರಂತೆ -ಕ್ಯಾಪ್ಟನ್ ಗೋಪಿನಾಥ್ ಹೇಳುತ್ತಿದ್ದರು. ತಟ್ಟೆ ಲೋಟ ಸಟ್ಟುಗಗಳನ್ನೇ ಕೊಟ್ಟು ನಡೆಯುವುದು ನಮಗೆ ಸಾಧ್ಯವಿಲ್ಲದಿರುವಾಗ ಇನ್ನು ಎಲ್ಲವನ್ನೂ ಬಿಟ್ಟು ನಡೆಯಲು ಸಾಧ್ಯವೇ?   ಸುದ್ದಿಸಂಗಾತಿಯ ಸಾಹಸಗಾಥೆ ಈಚೀಚೆಗೆ ನನಗೇಕೋ ಸ್ತ್ರೀವಾದವೆಂದರೆ ಮಹಿಳೆಯರು ತಮ್ಮ ಶಕ್ತಿಯ ಸಂಪೂರ್ಣ ಸಾಮರ್ಥ್ಯಕ್ಕೆ ಪೂರ್ತಿಯಾಗಿ ಅರಳುವುದೇ ಎನಿಸುತ್ತಿದೆ. ಹೀಗೆ ಎನಿಸುವುದಕ್ಕೆ ಕಾರಣ ಇತ್ತೀಚೆಗೆ ಬಿಡುಗಡೆಯಾದ ನಾಗಮಣಿ ಎಸ್. ರಾವ್ ಅವರ 'ಸುದ್ದಿ ಸಂಗಾತಿಯ ಸ್ವಗತ'. ನಾಗಮಣಿಯವರು ೧೯೫೭ ರಲ್ಲೇ ಪಿ.ಆರ್. ರಾಮಯ್ಯನವರು ಸ್ಥಾಪಿಸಿದ 'ತಾಯಿನಾಡು' ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಸೇರಿಕೊಳ್ಳುತ್ತಾರೆ. ಅದಕ್ಕೂ ಒಂದು ವರ್ಷ ಮುಂಚೆ 'ಜನಮಿತ್ರ' (೧೯೫೬) ಪತ್ರಿಕೆಯಲ್ಲಿ ಕೇವಲ ಇಪ್ಪತ್ತು ವರುಷಗಳ ಯುವತಿ -ಸಹ ಸಂಪಾದಕರಾಗುತ್ತಾರೆ. ಅಂದರೆ ನಾನು ಹುಟ್ಟುವುದಕ್ಕೂ ಎರಡು ವರ್ಷಗಳ ಮುನ್ನವೇ- ೬೮ ವರುಷಗಳ ಹಿಂದೆ!! ಅವರು ಆ ಕಾಲಕ್ಕೆ ಹುಡುಗರ ಜೊತೆ ಕುಳಿತು ಅಭ್ಯಾಸ ಮಾಡಿ ಬಿ.ಎ. ಪದವೀಧರೆಯಾಗಿ ಪತ್ರಿಕಾರಂಗಕ್ಕೆ ಬಂದಿರುತ್ತಾರೆ. ನಮ್ಮ ದೇಶದಲ್ಲಿ ಒಂದೇ ಕಾಲದಲ್ಲಿ ಎಲ್ಲಾ ಶತಮಾನಗಳೂ ಬದುಕಿರುತ್ತವೆ ಎಂದು URA ಹೇಳುತ್ತಿದ್ದರು, ಅದು ನಿಜ. ಇವರಿಗಿಂತ ಹತ್ತು ವರ್ಷಗಳಷ್ಟೇ ದೊಡ್ಡವರು ನನ್ನಮ್ಮ. ಏಳನೇ ತರಗತಿ ಮುಗಿದ ನಂತರ ಶಾಲೆ ಬಿಡಿಸಿ ಅಜ್ಜ ಮನೆಯಲ್ಲಿ ಕೂರಿಸಿದರು. ಅಜ್ಜನ ಮೇಲೆ ಆಕ್ಷೇಪವಿಲ್ಲ. ತಮ್ಮ ಕಾಲವನ್ನು ಮೀರುವ ಧೈರ್ಯ ಹೆಚ್ಚಿನವರಿಗೆ ಇರುವುದಿಲ್ಲ. ಕಾಲದ ಸವಾಲಿಗೆ ಬಾಗಿ ಹದಿನಾಲ್ಕು ವರ್ಷಕ್ಕೇ ಮದುವೆ ಮಾಡಿಬಿಟ್ಟರು. ಅಮ್ಮ ಕೂಡ ತುಂಬಾ ಬುದ್ಧಿವಂತೆಯಾಗಿದ್ದಳು. ಆದರೆ ಅವಳಿಗೆ ಅವಳೊಳಗಿನ ಶಕ್ತಿಯ ಸಾಮರ್ಥ್ಯಕ್ಕೆ ಪೂರ್ಣವಾಗಿ ಅರಳಲು ಸಾಧ್ಯವಾಗದೇ ಹೋಯಿತು. ಇಂತಹ ಕಾಲದಲ್ಲೇ ನಾಗಮಣಿಯವರು ಬಿ.ಎ. ಮಾಡಿ, ಬಿ.ಎಲ್ ಮಾಡಿ, ಪತ್ರಕರ್ತೆಯಾಗಿ, ಆಕಾಶವಾಣಿಯ ಸುದ್ದಿವಾಚಕಿಯಾಗಿ, ಲೇಖಕಿಯರ ಸಂಘವನ್ನು ಕಟ್ಟಿ ಬೆಳೆಸಿ ಅದರ ಅಧ್ಯಕ್ಷೆಯೂ ಆಗಿ ಅನೇಕ ಸಾಹಿತ್ಯಕ ಕಾರ್ಯಕ್ರಮಗಳನ್ನು ರೂಪಿಸಿ ತನ್ನ ಕಾಲದ ಅನೇಕ ಮಹಿಳೆಯರಿಗೆ ಅವರವರ ಶಕ್ತಿಯ ಸ್ವರೂಪವನ್ನು ಕಂಡುಕೊಳ್ಳಲು ಮಾರ್ಗ ಹಾಕಿಕೊಟ್ಟರು. ನಾಟಕವನ್ನು ರಚಿಸಿದರು. ಪಾತ್ರವನ್ನೂ ಮಾಡಿದರು! ಹೀಗೆ ನನ್ನಮ್ಮನನ್ನಾಗಲೀ, ನನ್ನ ದೊಡ್ಡು, ಚಿಕ್ಕಿಯರನ್ನಾಗಲೀ ನಾನು ಕಲ್ಪಸಿಕೊಳ್ಳಲಾದೀತೇ? ಅಬ್ಬಾ! ಎನಿಸುತ್ತದೆ. ಅವರ ಈ ಸಾಧನೆಗೆ ಅವರ ತಂದೆ ಮತ್ತು ಅವರ ಗಂಡ ಸತ್ಯಾಜಿ ರಾವ್ ಅವರು ನೀಡಿದ ಒತ್ತಾಸೆಯೂ ಕಾರಣವಿರಬಹುದು. ಒತ್ತಾಸೆ ನೀಡದಿದ್ದರೂ ಅದನ್ನು ಮೀರಿ ಬೆಳೆಯುವ ಶಕ್ತಿ ನಾಗಮಣಿಯವರಿಗೆ ಇತ್ತೇನೋ. ಯಾವುದೇ ಕೌಟುಂಬಿಕ ಸಂಘರ್ಷವಿಲ್ಲದೇ ಸುಲಲಿತವಾಗಿ ಗೆದ್ದು ಬಂದರು. ಮಹಿಳೆಯರ ಮಾದರಿಯಾದರು. ಅವರ ಕೌಟುಂಬಿಕ ಪರಿಸರ ತನ್ನ ಕಾಲಕ್ಕಿಂತ ಒಂದೈವತ್ತು ವರ್ಷಗಳಾದರೂ ಮುಂದಿದ್ದಿತು. ಪ್ರತಿಯೊಬ್ಬ ಮಹಿಳೆಯೂ ಹೀಗೆ ಕಾಲಕ್ಕೆ ಸೆಡ್ಡು ಹೊಡೆದು, ಅದನ್ನು ಮೀರಿ ನಿಲ್ಲುವುದಾದರೆ, ಮುಂದೆ ಓಡಲು ಸಾಧ್ಯವಾದರೆ ಪಿತೃಪ್ರಧಾನತೆಯ ಯಾಜಮಾನ್ಯದ ಎದುರು ಮೇಜು ಗುದ್ದಬೇಕಾಗಿಲ್ಲ, ಮಹಿಳೆಯ ದಯನೀಯ ಸ್ಥಿತಿಯನ್ನು ಸ್ಥಾಪಿಸಬೇಕಾಗಿಲ್ಲ, ಚಳವಳಿ ಹೂಡಬೇಕಾಗಿಲ್ಲ ಎಂದೇ ಎನಿಸುತ್ತದೆ. ಹಾಗೆಂದಾಕ್ಷಣ ಇಲ್ಲಿ ನಾನು ಚಳವಳಿಗಳ ಮಹತ್ವವನ್ನು ಅಲ್ಲಗಳೆಯುತ್ತಿಲ್ಲ. ನಮ್ಮ ಹೆಚ್ಚಿನ ಮಹಿಳೆಯರಿಗೆ ಗಂಡ ಮಕ್ಕಳು ಮನೆಯನ್ನು‌ ನಿರ್ವಹಿಸುವುದೇ ದೊಡ್ಡ ಸಂಗತಿ.ಅದಕಾಗಿ ಹೊರಬರಲು ನೂರೆಂಟು ಕುಂಟು ನೆಪಗಳು. ಗಂಡಂದಿರ ಹೆಗಲ ಮೇಲೆ ಬಂದೂಕನಿಟ್ಟು ಕೆಲಸ ಸಾಧಿಸುತ್ತೇವೆ. ಅಂತಹ ಮಹಿಳೆಯರಿಗೆ ನಾಗಮಣಿ ಗುರಿ ಇಟ್ಟು ಹೊಡೆದ ಒಂದು ಉತ್ತರದಂತಿದ್ದಾರೆ. ಗಂಡುಮಕ್ಕಳ ನಡುವೆ ಕಲಿಯುವಾಗ, ನೌಕರಿ ಮಾಡುವಾಗ, ಪತ್ರಿಕಾ ವರದಿಗೆ ಹೋಗುವಾಗ ಅವರು ಎದುರಿಸಿದ ಸಮಸ್ಯೆಗಳು ನಿಭಾಯಿಸಿದ ರೀತಿ, ಆಕಾಶವಾಣಿಯಲ್ಲಿ ಪ್ರಾಮಾಣಿಕವಾಗಿ ದುಡಿದು ಗೆದ್ದ ದೊಡ್ಡಸ್ತಿಕೆ, ಸಾಮಾಜಿಕ ಕಾರ್ಯಗಳಿಗಾಗಿ ದೊರೆತ ಕಿರೀಟಗಳು ಈ ಎಲ್ಲವುಗಳ ಮೂಲಕವೇ ಅರಳಿದ ರೀತಿ ಎಲ್ಲವನ್ನೂ ಬಹಳ ಅಚ್ಚುಟ್ಟಾಗಿ, ಆರ್ದ್ರವಾಗಿ ಅನನ್ಯವಾಗಿ ಮಾಲತಿ ಭಟ್ ಸಂಯೋಜಿಸಿಕೊಟ್ಟಿದ್ದಾರೆ. ಮಾಲತಿ ಈ ಸಾಹಸವನ್ನು ಕೈಗೊಳ್ಳದಿದ್ದರೆ ನಾಗಮಣಿಯವರ ಮೇರು ವ್ಯಕ್ತಿತ್ವ ಕೇವಲ ಅವರ ಪರಿಚಿತ ವಲಯಗಳಲ್ಲೇ ಪಸರಿಸಿ ಮರೆಯಾಗಿಬಿಡುತ್ತಿತ್ತು. ಅಂತಹ ಘನವನ್ನು ಹಿಡಿಯಲು ಯತ್ನಿಸಿರುವ ಮಾಲತಿ, ಅದನ್ನು ಪ್ರಕಾಶಕ್ಕೆತಂದ ಪೂರ್ಣಿಮಾ ರಾಜಾರಾವ್ ಅವರನ್ನು ಎಷ್ಟು ಪ್ರಶಂಸಿಸಿದರೂ ಸಾಲದು. 'ಸುದ್ದಿಸಂಗಾತಿಯ ಸ್ವಗತ'ವನ್ನು ಮಹತ್ವಾಕಾಂಕ್ಷಿಗಳಾದ ಎಲ್ಲಾ ಮಹಿಳೆಯರೂ ಓದಲೇ ಬೇಕು. ನನಗಂತೂ ನಾಗಮಣಿಯವರ ಮೇಲೆ ತುಂಬಾ ಲವ್ ಆಗಿಬಿಟ್ಟಿದೆ. ಅದೇ ಗುಂಗಿನಲ್ಲಿದ್ದೇನೆ. ಇದಕ್ಕೆ ಕಾರಣರಾದ ಮಾಲತಿ ಭಟ್ ಮತ್ತು ವಿಕಾಸ ಪ್ರಕಾಶನದ ಪೂರ್ಣಿಮಾ ಮೇಡಂ ಅವರಿಗೆ ಅಭಿನಂದನೆಗಳು. ಶುಭಾಶಯಗಳು.ಧನ್ಯವಾದಗಳು.   ಚಂಪಾವತಿಯವರ ಕಾದಂಬರಿ "ತಲ್ಲಣ" ಮತ್ತು ಸ್ತ್ರೀವಾದದ ಇತರ ತುಣುಕು ವಿಚಾರಗಳು: 1989 ರಲ್ಲಿ ನಾನು ಸ್ತ್ರೀವಾದೀ ಅಧ್ಯಯನ ಕೈಗೊಂಡಾಗ ಕನ್ನಡದಲ್ಲಿ ಒಂದು ಪುಸ್ತಕವೂ ಇರಲಿಲ್ಲ. ಜರ್ಮನ್ ಗ್ರೀರ್,ಷುವಾಲ್ಟರ್, ಕೇಟ್ ಮಿಲೆಟ್, ಸಿಮೊನ್ ದ ಬೊವಾ ಹೀಗೆ ಇಂಗ್ಲಿಷಿನಲ್ಲಿ ಓದಿಕೊಂಡು ಕನ್ನಡಿಸಿ ವೈಚಾರಿಕ, ಅಸ್ತಿತ್ವವಾದೀ, ಮಾರ್ಕ್ಸ್ವಾದಿ ಸ್ತ್ರೀವಾದ ಎಂದೆಲ್ಲಾ ವಿಭಾಗಿಸಿಕೊಂಡು ವಿಜಯಾ ದಬ್ಬೆಯವರ ಮುಂದೆ ಇಟ್ಟಿದ್ದೆ. ಅವರು ಸರಿ ಎಂದು ಬೆನ್ನು ತಟ್ಟಿದ್ದರು. ಈಗ ೩೫ ವರುಷಗಳ ನಂತರ ಕಾದಂಬರಿಗಳೇ ಬರುತ್ತಿವೆ. ಈ ಬೆಳವಣಿಗೆ ಖುಷಿ ತಂದಿದೆ. ಚಂಪಾವತಿಯವರಿಗೆ ಅಭಿನಂದನೆಗಳು. ಈ ಕಾದಂಬರಿಯನ್ನು ಓದಿದಾಕ್ಷಣ ಯೇಟ್ಸ್ ನ ಸೆಕೆಂಡ್ ಕಮಿಂಗ್ ಸಾಲುಗಳು "Things fall apart centre cannot hold" ನೆನಪಾದವು. ಎಲ್ಲ ಚಳವಳಿಯ ಸ್ವರೂಪವೂ ಇಲ್ಲಿ ಚಲ್ಲಪಿಲ್ಲಿಯಾಗಿವೆ. ಒಂದು stabilty ಮತ್ತು order ಇಲ್ಲವಾಗಿದೆ. ಈ ಕಾದಂಬರಿ ಪ್ರಾರಂಭವಾಗುವುದೇ ಒಂದು Shattered, scattered ಆದ ಸ್ಥಿತಿಯಿಂದ, ಬದುಕಿಗೆ ಒಂದು ಚೌಕಟ್ಟು ಇಲ್ಲ ಎನ್ನುವ ಅರಿವಿನ‌ ಆಸ್ಫೋಟದ ಭ್ರಮ ನಿರಸನ ಸ್ಥಿತಿಯಿಂದ, ಈ ತಲ್ಲಣಗಳು ಗೊಂದಲಗಳು ಹೊಸಕಾಲದ ಮುನ್ಸೂಚನೆಯೂ ಇತಬಹುದು. ಚೌಕಟ್ಟು ಹರಿದುಕೊಂಡರೆ ಬಯಲೇ ತಾನೇ? ಫ್ಲೇವಿಯಾ ಈ ಹೋರಾಟವನ್ನು ಒಂದು ರೀತಿ ಹೋಲಿಸ್ಟಿಕ್ ಆಗಿ ನೋಡಬೇಕು ಎನ್ನುತ್ತಾರೆ . ಇದು The conflict between powerful and the powerless. ಎನ್ನುತ್ತಾರೆ. ಯಾಕೆಂದರೆ ಗಂಡಾಳಿಕೆ ಎಂದಾಕ್ಷಣ ಅದು ಪುರುಷನೇ ಆಗಬೇಕಾಗಿಲ್ಲ. ಇಲ್ಲಿ ಬರುವ ಪಲ್ಲವಿ ಅವಳು ಪಿತೃಪ್ರಧಾನತೆಯ ಸಂಕೇತವೇ ಆಗಿದ್ದಾಳೆ. ಹೀಗಾಗಿ ಹೋರಾಟ ಚಳವಳಿ ಎನ್ನುವುದು ಇದು ಲಿಂಗ ಜಾತಿ ವರ್ಣ ವರ್ಗವನ್ನು ಮೀರಿದ್ದು. ಲೇಖಕಿ ಚೌಕಟ್ಟು ಇಲ್ಲ ಎನ್ನುವುದು ಆ ಚೌಕಟ್ಟನ್ನು ಹರಿದು ಕೊಳ್ಳುವ ಪ್ರಕ್ರಿಯೆಯೇ ಆಗಿದೆ. ಎಲ್ಲ ಹೋರಾಟಗಳ ಮೂಲ ಒಂದೇ. ಎಂದು ಅಖಂಡವಾಗಿ ನೋಡುವುದೇ. ಚಲ್ಲಾಪಿಲ್ಲಿಯಾಗಿ ಚದುರಿಹೋಗಿರುವ ವಿವಿಧ ಸಂಘಟನೆಗಳನ್ನು ಒಗ್ಗೂಡಿಸುವುದಾಗಿದೆ. ಆಮೂಲಕವೇ ಒಂದು ಅರ್ಥಪೂರ್ಣ ಹೋರಾಟ ಸಾಧ್ಯ ಎಂದು ಗ್ರಹಿಸಬಹುದಾಗಿದೆ. ಈ ಕಾದಂಬರಿ ಓದಿದಾಕ್ಷಣ ನನಗೆ ಇದರಲ್ಲಿ ಸ್ತ್ರೀಪರವಾದ ಚಳವಳಗಳ ಜೋಷ್ ಕಾಣಿಸಿತು. ಅದರ ಜೊತೆಗೆ ವಿಷಾದವೂ ಸೇರಿಕೊಂಡಿದೆ. ಚಳವಳಿಯ ಸ್ವರೂಪ, ಮುಂಗಾಣ್ಕೆ, ಅದರ ಬಿಕ್ಕಟ್ಟುಗಳು, ಅದರ ದುರುಪಯೋಗ, ಪ್ರಾಯೋಗಿಕ ಸಮಸ್ಯೆಗಳು, ಪರ್ಯಾಯಗಳು ಎಲ್ಲವೂ ಲಲಿತಾ ಮತ್ತು ಸುನೀತಾ ಎಂಬ ಎರಡು ಪಾತ್ರಗಳ ಮೂಲಕ ಇಲ್ಲಿ ಚರ್ಚಿತವಾಗಿವೆ. ಶಿವಗಂಗಾದಲ್ಲಿಯೇ ಇದು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ವ್ಯಕ್ತವಾಗಿದೆ ಎನಿಸಿತು. ಇಲ್ಲಿ ಇದು loud ಆಗಿದೆ. ೯೦ ರ ದಶಕದಿಂದಾಚೆಗೆ ಸ್ತ್ರೀವಾದದಲ್ಲಿ ಒಂದು paradigm shift ನ್ನು ಕಾಣುತ್ತೇವೆ. ಅದೇನೆಂದರೆ victim mode ನಿಂದ survivor mode ಗೆ ತಿರುವನ್ನು ಪಡೆದುಕೊಂಡಿದ್ದು. ೩೫ ವರುಷಗಳ ನಂತರ ಈಗ ಸ್ತ್ರೀವಾದ ಇನ್ನೊಂದು ತಿರುವನ್ನು ಪಡೆದುಕೊಳ್ಳುವುದಕ್ಕೆ ಕಾಲ ಹದವಾಗಿದೆ ಎನಿಸುತ್ತದೆ. ಈ ಸ್ತ್ರೀಪರ ಹೋರಾಟಕ್ಕೆ ಈಗ ಅನೇಕ ಧಾರೆಗಳು LGBTQ, ಲೈಂಗಿಕ ಕಾರ್ಯಕರ್ತರು (ಮಹಿಳಾ‌ ಮತ್ತು ಪುರುಷ)ಮುಸ್ಲಿಂ ಮುಂತಾದ ಅಲ್ಪಸಂಖ್ಯಾತರು ಸೇರಿಕೊಂಡು ಚಳವಳ ಹುರಿಗೊಂಡಿದೆ. ಈ ಕಾದಂಬರಿ ಕ್ವಚಿತ್ ಆಗಿ, ಲೈಂಗಿಕ ಕಾರ್ಯಕರ್ತೆಯರು ಮತ್ತು ತೃತೀಯ ಲಿಂಗಿಗಳ ಬಗೆಗೆ ಪಾಸಿಂಗ್ ಆದ ರೆಫೆರೆನ್ಸ್ ನ್ನು ಹೊಂದಿದೆ. ಆದರೂ ಎಲ್ಲಿಯೂ ಅದು ಇಡಿಯಾಗಿ ಒಂದು ಅನುಭವವಾಗಿ ದಕ್ಕುವುದಿಲ್ಲ. ಹೀಗೆ ದಕ್ಕದೇ ಇರುವುದೇ ಇಂದಿನ ವಾಸ್ತವವೇನೋ. ಲಲಿತಾ ಸುನೀತ ಶಬುನಂ, ಈಶ್ವರ್, ಶಶಾಂಕ, ಇವರೆಲ್ಲಾ ಚಲ್ಲಾಪಿಲ್ಲಿಯಾದ ವಿವಿಧ ಸ್ತರದ ಹೋರಾಟದ ಪ್ರತೀಕಗಳು. ಇಲ್ಲಿ ಕುಟುಂಬವನ್ನು ಒಪ್ಪಿಕೊಂಡಿರುವವರು, ಅದನ್ನು ನಿರಾಕರಿಸಿದವರು, ಕುಟುಂಬ ಮತ್ತು ಸಂಘಟನೆ ಎರಡರಲ್ಲೂ ಹೋರಾಡುತ್ತಿರುವವರು, ವಿಸ್ತೃತ ಕಟುಂಬದ ಮೂಲಕ ಹೊಸ ಕುಟುಂಬದ ಪರಿಕಲ್ಪನೆಯನ್ನು ರೂಪಿಸಿಕೊಂಡವರು ಇದ್ದಾರೆ- ಈ ಎಲ್ಲರ ಸಮಸ್ಯೆಗಳು ಚರ್ಚೆಗೆ ಒಳಪಟ್ಟಿವೆ ಒಂದಕ್ಕೊಂದು ಮುಖಾಮುಖಿಯಾಗಿವೆ. ಈ ಎಲ್ಲವೂ ಒಂದು ಏಕೀಕೃತ ಗ್ರಹಿಕೆಯ ಒಳಗೆ‌ಬರಬೇಕು ಎನ್ನುವುದನ್ನು ಈ ಕೃತಿ ಹೇಳುತ್ತಿರಬಹುದು. ಸಂಬಂಧಗಳನ್ನು ನಿರಾಕರಿಸಿ ಬದುಕಲು ಸಾಧ್ಯವಿಲ್ಲ. ಸಂಬಂಧಗಳಲ್ಲಿ ಬದುಕುವುದು ಅನಿವಾರ್ಯ. ( ಶಶಿ ದೇಶಪಾಂಡೆ) ಮದುವೆ ಅಥವಾ ಗಂಡನನ್ನು ನಿರಾಕರಿಸಿದಾಕ್ಷಣ ಪಿತೃಪ್ರಧಾನತೆಯ ಬಿಗಿ ಹಿಡಿತದಿಂದ ಬಿಡುಗಡೆ ಸಿಕ್ಕಿಬಿಡುವುದಿಲ್ಲ. ಯಾಕೆಂದರೆ ಮದುವೆಯ ವ್ಯವಸ್ಥೆಯ ಆಚೆಗೂ ಗಂಡಾಳಿಕೆ ಎನ್ನುವುದು ಇದೆ. (ಗಂಡಾಳಿಕೆ ನಡೆಸುವವರು ಪುರುಷರೇ ಆಗಬೇಕೆಂದಿಲ್ಲ, ಆ ಮಾದರಿಯನ್ನು ಅನುಸರಿಸುವವರೆಲ್ಲಾ ಗಂಡಾಳಿಕೆಯ ವರ್ತುಲದಲ್ಲೇ ಬರುತ್ತಾರೆ. ಉದಾ: ಪಲ್ಲವಿ) ಇದು ಕಾದಂಬರಿ ಆಗಿದೆಯೇ ಇಲ್ಲವೇ ಎನ್ನುವ ಪ್ರಶ್ನೆಯನ್ನು ಒತ್ತಟ್ಟಿಗಿಟ್ಟು ಈ ಪುಸ್ತಕ ಎತ್ತುವ ಪ್ರಶ್ನೆಗಳ ಕಡೆಗೆ ಗಮನ ಹರಿಸುವುದಾದರೆ ಇದಕ್ಕೆ ತನ್ನದೇ ಆದ ಸಾಮಾಜಿಕ ಮಹತ್ವವಿದೆ. ಸಾಹಿತ್ಯಕ ಮಹತ್ವದ ಬಗ್ಗೆ ನಾನು ಏನೂ ಹೇಳಲಾರೆ. ಇದು ಕಾದಂಬರಿಯಾಗಿ ಯಶಸ್ವಿಯಾಗಿದೆಯೇ? ಪ್ರಣಾಳಿಕೆಗಳ ಸಂಕಲನವೇ? ಎನ್ನುವ ಪ್ರಶ್ನೆಗೆ ಉತ್ತರ ಬೇರೆ ನೆಲೆಯಲ್ಲಿಯೇ ಹುಡುಕಬೇಕಾಗಿದೆ ಇಂತಹ ಕೃತಿಗಳು ಕಾದಂಬರಿಯ ಹೊಸವ್ಯಾಖ್ಯೆಗೆ ಕಾಯುತ್ತಿವೆಯೇ ಅಥವಾ ಸಾಹಿತ್ಯದ ಹೊಸ ಪ್ರಕಾರವನ್ನಾಗಿಯೇ ಗುರುತಿಸಬೇಕೇ? ಗೊಂದಲ ನನಗೆ. ಕಾಲವಷ್ಟೇ ನಿರ್ಧರಿಸಬಲ್ಲುದು. ಗೇ ಗಳಲ್ಲಿ ಕೂಡ ಒಬ್ಬ ಹೆಣ್ಣು ಭೂಮಿಕೆಯನ್ನು ನಿಭಾಯಿಸಿದರೆ ಇನ್ನೊಬ್ಬ ಗಂಡು ಭೂಮಿಕೆಯನ್ನು ನಿಭಾಯಿಸುವುದನ್ನು ನಾನು ನೋಡಿದ್ದೇನೆ. ಭೂಮಿಕೆಗಳಿಗೆ ಅಂಟಿಕೊಂಡಿರುವ ತಾರತಮ್ಯ ಭಾವನೆ ಹೋಗಬೇಕು - ಇಂತಹ ಸೈದ್ಧಾಂತಿಕ ಗೊಂದಲಗಳ ನಡುವೆ ನಾವು ಹಾದು 'ಹೋಗುತ್ತಿದ್ದೇವೆ. ಈ ಗೊಂದಲವನ್ನು ತಲ್ಲಣ'ಗಳನ್ನು ಭಾಷಾಂತರಿಸುತ್ತಿವೆ. ಭೂಮಿಕೆಗಳು ಅದಲು ಬದಲಾಗುವುದಾದರೆ ನಾವು ಹೆಣ್ಣು ಮಕ್ಕಳೇ ಸಿದ್ಧರಾಗುವುದಿಲ್ಲ . ಮದುವೆಯಾಗುವ ಗಂಡು ತನಗಿಂತ ಒಳ್ಳೆಯ ಉದ್ಯೋಗ, ಸಂಬಳ, ತನಗಿಂತ ಎತ್ತರ ಇರಬೇಕೆಂದೇ ಹೆಣ್ಣು ಮಕ್ಕಳು ಬಯಸುತ್ತಾರೆ. Home maker ಹುಡುಗನಿಗೆ ಯಾರಾದರೂ ಹೆಣ್ಣು ಕಟ್ಟಾರೆಯೇ? ಅನಕೂಲಸ್ಥ ಪುರೋಹಿತರನ್ನಾಗಲೀ , ರೈತರನ್ನಾಗಲೀ ಮದುವೆಯಾಗಲು ಯಾರೂ ಮುಂದೆ ಬರುತ್ತಿಲ್ಲ ಎನ್ನುವ ಕೊರಗು ಇತ್ತೀಚೆಗೆ ಕಂಡು ಬರುತ್ತಿದೆ. ಈ ಎಲ್ಲವನ್ನೂ ಸ್ತ್ರೀವಾದ ಸಂಹಿತೆ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಅನಿವಾರ್ಯವಿದೆ. ಮಹಿಳೆಯರ ಪರವಾದ ಕಾನೂನುಗಳು ಜಾರಿಗೆ ಬಂದಿವೆ ನಿಜ. ಅದು ಹೆಚ್ಚು ಅನ್ವಯವಾಗುತ್ತಿಲ್ಲ. ಬಲಿಪಶುಗಳಾದ ಹೆಣ್ಣುಮಕ್ಕಳಿಗೆ ಅದಕ್ಕೆ access ಸಿಗುತ್ತಿಲ್ಲ ಎನ್ನುವುದು ಒಂದು ಕಡೆಗಾದರೆ ಇನ್ನೊಂದು ಕಡೆ ವಿದ್ಯಾವಂತ ಹೆಣ್ಣುಮಕ್ಕಳು ಇದನ್ನು misuse ಮಾಡಿಕೊಳ್ಳುತ್ತಿರುವ ಕೇಸ್ ಗಳು ಗಮನಕ್ಕೆ ಬರುತ್ತಿವೆ. ಇದರಿಂದಾಗಿ ನಿಜವಾಗಿ ಅಗತ್ಯವಿರುವ ಹೆಣ್ಣುಮಕ್ಕಳಿಗೆ ಇದರಿಂದ ಅನ್ಯಾಯವಾಗುತ್ತಿದೆ. ಸ್ತ್ರೀವಾದಿಗಳು ಇಂತಹ ಕಾನೂನು ದುರುಪಯೋಗ ಮಾಡಿಕೊಳ್ಳುವ ಮಹಿಳೆಯರ ವಿರುದ್ಧವಾಗಿಯೂ ಮಾತನಾಡಬೇಕಾಗಿದೆ. ಇದು ಸ್ತ್ರೀಯರ ಪ್ರಶ್ನೆ ಮಾತ್ರವಲ್ಲ ಇಡೀ ಸಮಾಜದ ಸಂಸ್ಕೃತಿಯ ಪ್ರಶ್ನೆ. ಆದುದರಿಂದ ಇದನ್ನು holistic ಆಗಿಯೇ ನೋಡಬೇಕಾಗಿದೆ. ಸ್ತ್ರೀವಾದದ ವ್ಯಾಪ್ತಿ ವಿಸ್ತೃತವಾಗ ಬೇಕಾಗಿದೆ.   ಹೆಣ್ಣುದೇಹ ಭಾಷೆ : ಈ ಕುರಿತಾಗಿ ಮಾತನಾಡಬೇಕೆಂದರೆ ಭಾಷೆಯ ರಚನೆಯಲ್ಲೇ ಇರುವ ಅವಳ ಗೈರು ಹಾಜರಿಯ ಬಗ್ಗೆ ಮಾತನಾಡಬೇಕು. ನಮ್ಮ ಸಂಸ್ಕೃತಿಯಲ್ಲಿ ಲೆಖಕರು, ಓದುಗರು, ವಿಮರ್ಶಕರೆಂದರೆ ಅವಶ್ಯವಾಗಿ ಅದು ಪುರುಷನೇ ಆಗಿರಬೇಕು. ಇಂಗ್ಲಿಷಿನಲ್ಲಿ mankind ಎನ್ನುವುದು humankind ಎಂಬ ಗ್ರಹಿಕೆಯೇ ಇದ್ದರೂ ಅಲ್ಲಿ ಅದು 'He' ಎನ್ನುವುದೇ ಅಘೋಷಿತ ಸತ್ಯ. ಜಿ. ವೆಂಕಟ ಸುಬ್ಬಯ್ಯನವರನ್ನು ಸಂದರ್ಶನ ಮಾಡುವಾಗ ಈ ಪ್ರಶ್ನೆಯನ್ನು ಕೇಳಿದ್ದೆ. ಅದಕ್ಕೆ ಅವರು 'ಅವನು' ಇರುವ ಕಡೆಯಲ್ಲಾ 'ಅವಳು' ಮಾಡಿಕೊಳ್ಳಿ ಏನಡ್ಡಿ? ಎಂದಿದ್ದರು. ಅದಕ್ಕೆ ನಾನು 'ಅವನು' ಇರಬಾರದೆಂದಲ್ಲ ಸರ್ ನನ್ನ ಪ್ರಶ್ನೆ. 'ಅವಳೂ' ಇರಬೇಕು ಎನ್ನುವುದು. ಹಾಗಾದರೆ 'ಅವಳು' ಎಂದೇ ಮಾಡಿಕೊಳ್ಳಿ ಎಂದಿದ್ದರು. ಒಂದು ಸಣ್ಣ ಅಪೀಲು ಬರೆಯಬೇಕಾದರೂ ಅವನ/ಳ ಮಾಡುತ್ತಾನೆ/ ಳೆ ಹೀಗೆ ಪ್ರತಿ ವಾಕ್ಯದಲ್ಲೂ ಬರೆದು ಬರೆದು ಸುಸ್ತಾಗಿಹೋಗಿ ಹೋಗತ್ಲಾಗೆ ಯಾವನೋ ಒಬ್ಬ ಎಂದು ಎಸೆದಿದ್ದೆ. ಒಂದು ಪರ್ಯಾಯ ಭಾಷೆಯನ್ನು ಕಟ್ಟುವುದು ಅಷ್ಟು ಸುಲಭವಲ್ಲ. ನನಗೆ ಭಾಷಾ ವಿಜ್ಞಾನ ಗೊತ್ತಿಲ್ಲ. ಓದುವ ಅವಕಾಶ ವಿದ್ದಾಗ ಓದಲಿಲ್ಲ.ಕೆ.ವಿ.ಎನ್. ಸರ್ ಇದಕ್ಕೆ ನೀವೇ ಉತ್ತರ ಕೊಡಬೇಕು. ಭಾಷೆಯಲ್ಲಿ ಮಹಿಳೆ ಉಳಿದಿರುವುದೆಂದರೆ ಬೈಗುಳಗಳಲ್ಲಿ. ಮತ್ತು ಭೋಗದ ಪ್ರತೀಕಗಳಲ್ಲಿ. ಉದಾ: ಗಾಂಚಾಲಿ ಎನ್ನುವ ಬೈಗಳುವಿದೆ. ಕನ್ನಡದ ಸಭ್ಯಸ್ತರೂ ಕೂಡ ಈ ಬೈಗಳವನ್ನು ಬಳಸುತ್ತಾರೆ. ಇದು ಹಿಂದಿಯ "ಗಾಂಡ್ ಚಲಾನಾ" ಪ್ರಯೋಗದಿಂದ ಬಂದಿರುವಂತಹದ್ದು. ನಿತಂಬಿನಿಯರೆಂದರೆ ಹೆಂಗಸರು ತಾನೇ? ಒಬ್ಬವ್ಯಕ್ತಿಯನ್ನು ಹೀನಾಯವಾಗಿ ಅವಮಾನಮಾಡುವುದೆಂದರೆ ಅವನಿಗೆ ಹತ್ತಿರವಾದ ಸ್ತ್ರೀಯರನ್ನು ಅವಮಾನಗೊಳಿಸುವುದು. ನಮ್ಮಲ್ಲೂ ಪ್ರೀತಿಯಿಂದ ಬೈಯುವ ಮುಂಡೇಮಗ, ಮುಂಡೇದೆ, ಉತ್ತರಕರ್ನಾಟಕದವರು ಪ್ರತಿಮಾತಿಗೂ ಸೇರಿಸುವ 'ಅವ್ನಾ' ಶಬ್ದ. ಇಂತಹವು ಹೇರಳವಾಗಿ ಸಿಗುತ್ತದೆ. ದೊಡ್ಡ ಪಟ್ಟಿಯನ್ನೇ ಮಾಡಬಹುದು. ಇದು ನಮ್ಮರಕ್ತದಲ್ಲಿ ಎಷ್ಟು ಅವಿನಾಭಾವದಿಂದ ಸೇರಿಹೋಗಿದೆಯೆಂದರೆ ಅದು ಅಸಹಜ ಎನಿಸುವುದೇ ಇಲ್ಲ. ಪ್ರಭುತ್ವ, ಸಮಾಜ, ಮಾರುಕಟ್ಟೆ ಎಲ್ಲವನ್ನೂ ಆಳುವವನು ಗಂಡಸೇ ಆಗಿರುವುದರಿಂದ ಈ ಭಾಷಾವಲಯದಲ್ಲಿ ಹೆಣ್ಣಿಗೆ ಪ್ರವೇಶವಿಲ್ಲ. (ಮಾರುಕಟ್ಟೆಯಲ್ಲಂತೂ ಹೆಣ್ಣು ದೇಹ ಹೇಗೆ ಮಾರಾಟಕ್ಕಿದೆ ಎಂಬುದನ್ನು ಹೇಳಬೇಕಾಗಿಯೇ ಇಲ್ಲ) ಹೆಸರಿಗೆ ಮಾತೃಭಾಷೆ! Mother tongue! ಆದರೆ ಇಲ್ಲಿ ಮಾತೆಯರೇ ಗಾಯಬ್. ಮಾತೆಯರ ಸಂಸ್ಕೃತಿಯೂ ಅವಹೇಳನಕ್ಕೆ ಗುರಿಯಾಗಿದೆ "ನಾನೇನು ಬಳೆ ತೊಟ್ಟುಕೊಂಡಿದ್ದೇನಾ?" ಎನ್ನುವುದು ನೇತ್ಯಾತ್ಮಕವಾದ ಪ್ರಯೋಗ. ಹೇಡಿತನದ ಪ್ರತೀಕ. "ಹೆಣ್ಣಿನ frontal lobe ಚಿಕ್ಕದಾಗಿರುವುದರಿಂದ "ಅವಳ ಬುದ್ಧಿ ಮೊಣಕಾಲ ಕೆಳಗೆ" ಇದೆ.!!!!! ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ಜಡ ಚೇತನ ಪ್ರತಿಯೊಂದು ವಸ್ತುವಿಗೂ ಪ್ರತ್ಯೇಕವಾದ ಲಿಂಗವೇ ಇದೆ. ಮರಾಠಿಗರಲ್ಲಿ ಕಪ್ಪು ಒಂದು ಲಿಂಗವಾದರೆ ಬಶಿ ಇನ್ನೊಂದು ಲಿಂಗ(cup and saucer) ಹಾಗೆಯೇ ಮಲಗಿರುವ ಕಂಭ ಮತ್ತು ನಿಂತಿರುವ ಕಂಭ. ಹಿಂದಿಯಲ್ಲಿ 'ಪೋಲಿಸ್ ಆಯಿ' ಎನ್ನುತ್ತಾರೆ (ಪೋಲಿಸ್ ಬಂದಳು) 'ಬೈಲ್ ಗಾಡಿ' ಅಲ್ಲಿ ಸ್ತ್ರೀಲಿಂಗ. ಪೋಲಿಸ್ ವ್ಯವಸ್ಥೆಯಲ್ಲಿ ಹಿದೆಂದಾದರೂ ಹೆಣ್ಣು ನುಸುಳಿದ್ದುಂಟೆ? ಬೈಲ್ (ಎತ್ತು) ಎಂದಾದರೂ 'ಅವಳಾ'ಗಬಹುದೇ. ನಮ್ಮ ಕನ್ನಡದ ಹಾಗೆ ಅಲ್ಲ, ಅವರ ಭಾಷೆಗಳಲ್ಲಿ ಸ್ತ್ರೀಪುರುಷ ಲಿಂಗಗಳು ಸಮನಾಗಿ ಬೆರೆತಿವೆ. ಹಾಗೆಂದಕ್ಷಣ ಲಿಂಗಸಮಾನತೆ ಅಲ್ಲಿ ಇದೆಯಂದಲ್ಲ. ಅಲ್ಲಿ ಕೂಡ ಹೆಣ್ಣು ದ್ವಿತೀಯ ಲಿಂಗಿಯೇ! ಬೇರೆ ಬೇರೆ ಸಾಂಸ್ಕೃತಿಕ ಕಾರಣಕ್ಕಾಗಿ ಮರಾಠಿ ಹೆಣ್ಣುಮಕ್ಕಳು ಕನ್ನಡದವರಿಗಿಂತ ಹೆಚ್ಚು ಸ್ವಾವಲಂಬಿಗಳು, ಆತ್ಮಸ್ಥೈರ್ಯ ಉಳ್ಳವರೂ ಆಗಿದ್ದಾರೆ.ಒಮ್ಮೆ ಮುಂಬಯಿ ಲೋಕಲ್ಲಿನ ಲೇಡೀಸ್ ಡಬ್ಬಾದಲ್ಲಿ ಹೋಗಿಬಂದು ನೋಡಿ. ಮಚ್ಚೀವಾಲಿಗಳಿಂದ ಹಿಡಿದು ಕಾರ್ಪೋರೇಟ್ ಡೈರಕ್ಟರ್ ಗಳರೆಗೆ ಎಂತಹ ಗಟ್ಟಿಗಿತ್ತಿಯರು ಎಂದು ಗೊತ್ತಾಗುತ್ತದೆ. ಅಲ್ಲಿ ಪುರುಷ ಪ್ರಾಧಾನ್ಯವಿಲ್ಲವೆಂದಲ್ಲ ಹೋರಾಡುವುದರಲ್ಲಿ ಗಟ್ಟಿಗಿತ್ತಿಯರು ಅಷ್ಟೇ.ಅದಕ್ಕೆ ನಮ್ಮರಾಷ್ಟ್ರೀಯ ಚಳವಳಿಗಳ ಕಾಲದಿಂದಲೇ ತಾಕತ್ತು ದೊರೆತಿದೆ. ಗುಲಾಬ್ ಗುಂಡೋಜಿ ಮಹಾಡ್ (https://www.facebook.com/share/p/1A6qppy2WN/) ಎನ್ನುವ ಸಂತ ಪೂರ್ತಿ ಹೆಣ್ಣು ವೇಷದಲ್ಲೇ ಸೀರೆ ಬಳೆ, ಕುಂಕುಮ ಇತ್ಯಾದಿ, ಇದ್ದರು. ಹೆಣ್ಣುಗಳಾಗದೇ ಮುಕ್ತಿಯೇ ಇಲ್ಲ ಎಂದ ಅನುಭಾವಿಗಳು ಹೆಣ್ಣುತನವನ್ನು ಆರೋಪಿಸಿಕೊಂಡರು. ಕೃಷ್ಣನೊಬ್ಬನೇ ಗಂಡಸು, ಭಕ್ತರೆಲ್ಲರೂ ಗೋಪಿಯರು, ಗೋಪೀ ಭಾವಕ್ಕಲ್ಲದೇ ಕೃಷ್ಣದಕ್ಕುವುದು ಸಾಧ್ಯವೇ ಇಲ್ಲ. ಹೀಗಾಗಿ ಅಕ್ಕನಿಗಾಗಲೀ, ಮೀರಾಳಿಗಾಗಲೀ ಹೆಣ್ಣುತನವನ್ನು ಆರೋಪಿಸಿಕೊಳ್ಳುವ ಅವಶ್ಯಕತೆಯೇ ಇರಲಿಲ್ಲ. ಪುರುಷನನ್ನು ಸೇರುವ ಉತ್ಕಟತೆ ಅವರ ಭಾಷೆಯಲ್ಲಿ ಸಹಜವಾಗಿಯೇ ವ್ಯಕ್ತವಾಯಿತು. ಇವರಿಬ್ಬರನ್ನೂ ನಾವು ಭಕ್ತಿಯ ಚೌಕಟ್ಟಿನಲ್ಲಿಯೇ ಇಟ್ಟು ನೋಡಬೇಕು. ಅವರನ್ನು ಆ context ನ ಆಚೆ ಎಳೆದು ತರಬಾರದೆಂದೇ ನನಗನಿಸುತ್ತದೆ. ಇಂದಿನ sexuality ಯ ಪ್ರಶ್ನೆಯನ್ನು ಅವರಿಗೆ ಲಗತ್ತಿಸಬಾರದು. ಅವರ ಧೈರ್ಯ ಸಾಹಸ,ಅಸ್ಮಿತೆಯನ್ನು ನಾವು ಮಾದರಿಯನ್ನಾಗಿ ಇಟ್ಟುಕೊಳ್ಳಬಹುದಷ್ಟೇ. ಪಿತೃಪ್ರಧಾನ ಭಾಷೆಗೆ ಒಂದು counter ಭಾಷೆ ಇರುವುದಾದರೆ ಅದು ಭಕ್ತಿಯ ನೆಲೆಯಲ್ಲಿಯೇ. ಇಲ್ಲಿ ಕೂಡ ಭಗವಂತ ಪುರುಷ supreme God ಎಂದು ವಾದಿಸುವ ಸಾಧ್ಯತೆಗಳೂ ಇವೆ. ಆದರೆ ದೇವರು ಅವನು ಕಲ್ಲಾಗಿ ಕುಳಿತಿರುತ್ತಾನೆ. ಭಕ್ತರು ತಾನೆ ಮಾತನಾಡುವವರು? ಭಕ್ತರಲ್ಲಿ ಕೂಡ ಸ್ತ್ರೀ ಪುರುಷ ತಾರತಮ್ಯ ಕಾಣಬಹುದಾದರೂ ಭಕ್ತಿಯ ಭಾಷೆಯಲ್ಲಿ ಅಲ್ಲ ಎಂದೇ ನನಗೆ ಎನಿಸುತ್ತದೆ. ಯಾಕೆಂದರೆ ಎಲ್ಲರೀತಿಯ ಮಾನವ ಯಾಜಮಾನ್ಯಕ್ಕೆ ಮೊದಲು ಕೌಂಟರ್ ಕೊಟ್ಟಿದ್ದು ಭಕ್ತಿ ಚಳವಳಿಯೇ ಅಲ್ಲವೇ?   ಎರಡುಸಾವಿರದೈನೂರು ವರುಷಗಳ ಆನಂತರವೂ ಬುದ್ಧ ಚರ್ಚೆಯಲ್ಲಿದ್ದಾನೆ. ಕೆಲವರು ಯಶೋಧರೆಯ ಪರವಾಗಿ ನಿಂತು ಬುದ್ಧನನ್ನು ಅಪರಾಧೀ ಸ್ಥಾನದಲ್ಲಿ ನಿಲ್ಲಿಸಿದರೆ ಇನ್ನು ಕೆಲವರು ಅವನ ತಾತ್ವಿಕ ನೆಲೆಗಳಿಗೆ ಮಹತ್ವಕೊಟ್ಟು, ಮನುಷ್ಯ ಪ್ರೀತಿಯನ್ನು ಸಾರುವ ಅವನ ಸಿದ್ಧಾಂತಗಳಿಗೆ ಬೆಲೆಕೊಟ್ಟು ಅವನನ್ನು ಎತ್ತಿಹಿಡಿದಿದ್ದಾರೆ. ಈ ಎರಡೂ ನೆಲೆಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕಾದರೆ ಬುದ್ಧ ಬದುಕಿದ ಕಾಲದ ಸಾಮಾಜಿಕ ಸಂದರ್ಭವನ್ನು ಗಮನಿಸಬೇಕಾಗಿದೆ. ಬಲವಾಗಿ ಬೇರೂರಿದ್ದ ವೈದಿಕ ಧರ್ಮಕ್ಕೆ ಪರ್ಯಾಯವಾಗಿ ಒಂದು ಹೊಸ ಧರ್ಮವನ್ನು ರೂಪಿಸುವಲ್ಲಿ ಬುದ್ಧ ಎದುರಿಸಿದ ಸಾಮಾಜಿಕ ಸಮಸ್ಯೆಗಳು, ರೂಢಿಗತ ನಂಬಿಕೆಗಳು, ಅನಿವಾರ್ಯಗಳು, ಕಣ್ಣಿಗೆ ಕಾಣದ (ಇನ್ವಿಸಿಬಲ್) ಪಾಖಂಡಿತನದ ಆಚರಣೆಗಳು – ಇವುಗಳ ವಿರುದ್ಧ ತೆಗೆದು ಕೊಳ್ಳಬೇಕಾದ ನಿಲುವುಗಳು – ಇವೆಲ್ಲವನ್ನು ಅಖಂಡವಾಗಿ ಗ್ರಹಿಸಿದರೆ ಮಾತ್ರ ಬುದ್ಧನ ಹತ್ತಿರಕ್ಕೆ ಹೋಗಬಹುದೇನೋ. (ಬುದ್ಧನಿಗೂ ಮೊದಲೇ ಜೈನಧರ್ಮದ ಅವತರಣಿಕೆಯಿಂದಾಗಿ ಬುದ್ಧನ ತತ್ವಗಳನ್ನು ಗ್ರಹಿಸಲು ಜನರಿಗೆ ಸುಲಭವಾಗಿರಬಹುದು.( ಶೈಲಜಾ) ಇತ್ತೀಚಿನ ದಿನಗಳಂತೂ ನಾವು ಬೈನರಿಗಳಲ್ಲೇ ಮಾತನಾಡುತ್ತಿದ್ದೇವೆ. ಅವುಗಳ ನಡುವಿನ ಸುವರ್ಣ ಮಧ್ಯಮ (ಗ್ರೇ ಏರಿಯಾ) ದ ಸಂಕೀರ್ಣ ಒಳನೋಟ ದಕ್ಕುವುದು ಒಂದು ಜವಾವ್ದಾರಿಯುತ ಸೂಕ್ಷ್ಮ ಕಾಣ್ಕೆಗೆ ಮಾತ್ರ. ಈ ಮಧ್ಯಮ ಮಾರ್ಗದಲ್ಲಿ ಪರಿಪೂರ್ಣತೆ ಎನ್ನುವುದು ಇರುವುದೇ ಇಲ್ಲ. ಎಲ್ಲವೂ ಪ್ರಯೋಗಶೀಲ ನೆಲೆಯಲ್ಲಿ ಅನೇಕ ವೈರುಧ್ಯಗಳನ್ನು ಒಳಗೊಂಡ, ಪೂರ್ಣತೆಯ ಎಡೆಗೆ ಚಲಿಸುವುದಷ್ಟೇ ಗುರಿಯಾಗಿರುತ್ತದೆ. ಇಂತಹ ಒಂದು ಜವಾಬ್ದಾರಿಯುತ ಒಳ ನೋಟವನ್ನು , ಅದಕ್ಕೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳನ್ನು ಸಂಶೋಧನಾತ್ಮಕವಾಗಿ ವಿಶ್ಲೇಷಿಸುವ , ಶೈಲಜಾ ಅವರ ಅನನ್ಯ ಕೃತಿ ‘ಥೇರೀಗಾಥಾ ಕಾಣಿಸಿದ ಹೆಣ್ಣು- ಬೌದ್ಧ ಧರ್ಮದಲ್ಲಿ ಮಹಿಳೆ. ಭಿಕ್ಕುಣಿಯರ ವಿಷಯದಲ್ಲಿ ಬುದ್ಧ ತೆಗೆದುಕೊಳ್ಳುತ್ತಿದ್ದ ಪ್ರಗತಿಶೀಲ ನಿಲುವುಗಳು ಹೊರಗಿನ ಸಮಾಜದ ನಿಷ್ಠುರು ನಿಲುವುಗಳಿಗೆ ಹೇಗೆ ವಿರುದ್ಧವಾಗಿದ್ದವು ಈ ನೆಲೆಯಲ್ಲಿ ಬುದ್ಧ ಎದುರಿಸಿದ, ಹೊಂದಾಣಿಕೆ ಮಾಡಿಕೊಂಡ ವಿಷಯಗಳು ಚರ್ಚಿತವಾಗಿದೆ. ಬುದ್ಧನಿಗೆ ಪ್ರಾರಂಭದಲ್ಲಿ ಭಿಕ್ಕುಣಿಯರನ್ನು ಸಂಘಕ್ಕೆ ಸೇರಿಸಿಕೊಳ್ಳುವುದರಲ್ಲಿ ವಿರೋಧವಿರುತ್ತದೆ. ಸ್ವತಃ ತನ್ನ ಚಿಕ್ಕ ತಾಯಿ ಗೌತಮಿಯೇ ಇದಕ್ಕೆ ಅಸ್ತಿವಾರ ಹಾಕುವವಳು. ಅವಳ ಬೇಡಿಕೆಯನ್ನೂ ಬಹಳ ಸಲ ನಿರಾಕರಿಸಿ ಆನಂತರ ಆನಂದನ ಸಲಹೆಯ ಮೇರೆಗೆ ಭಿಕ್ಕುಣಿಯರ ಸಂಘ ರೂಪುಗಳ್ಳೊಲು ತನ್ನ ಪರವಾನಗಿಯನ್ನು ಕೊಡುತ್ತಾನೆ. ಒಂದು ಕಾಲದ ನಾಡಿ ಮಿಡಿತವನ್ನು ಹಿಡಿಯಬೇಕಾದರೆ ಆಯಾ ಕಾಲದ ಬದಲಾಗುವ ಸಾಮಾಜಿಕ ಮಿಡಿತಗಳನ್ನು ಗ್ರಹಿಸುವುದು ಅಗತ್ಯ. ಈ ಮಿಡಿತವೆನ್ನುವುದು ಎಲ್ಲಾ ಕಾಲಕ್ಕೂ ಒಂದೇ ಆಗಿರುವುದಿಲ್ಲ. ಅವು‌ ಆಯಾ ಸಂದರ್ಭ, ಸನ್ನಿವೇಶಗಳಿಗೆ ಬದಲಾಗುತ್ತಲೇ ಇರುತ್ತವೆ. ಹೀಗಾಗಿ ಅವು ವೈರುಧ್ಯಗಳಿಂದ ಕೂಡಿರುವುದು ಸಹಜ. ಯಾಕೆಂದರೆ ಅಲ್ಲಿ ಬದಲಾವಣೆಯೇ ಶಾಶ್ವತ. ಬದಲಾವಣೆಗಳನ್ನು ಸಾಕ್ಷಿಪ್ರಜ್ಞೆಯಿಂದ ಗಮನಿಸುತ್ತಾ ಚಲಿಸುವ ನಡೆಯೇ ಸುವರ್ಣ ಮಧ್ಯಮ ಮಾರ್ಗ. ಹೆಣ್ಣು ಎಂದರೆ ಮಾಯೆ ಎನ್ನುವ ಪರಿಕಲ್ಪನೆ ಮೇಲುಗೈಯಾಗಿದ್ದ ಕಾಲದಲ್ಲಿ ಅಂತಹ ನೂರಾರು ಹೆಣ್ಣುಮಕ್ಕಳನ್ನು ತನ್ನ ಬೌದ್ಧ ಸಂಘಕ್ಕೆ ಸೇರಿಸಿಕೊಂಡು ಅವರನ್ನು ಮೋಕ್ಷದ ಮಾರ್ಗದತ್ತ ಒಯ್ಯುತ್ತಾನೆ ಬುದ್ಧ. ಆಶ್ಚರ್ಯವೆಂದರೆ ಅವರಲ್ಲಿ ಅದ್ಧಕಾಶೀ, ಅಂಬಪಾಲಿಯರಂತಹ ವೇಶ್ಯೆಯರೂ ಇರುವುದು. “ಹೆಣ್ಣಿನ ಸ್ಥಿತಿಯೇ ನೋವು” – ಈ ನೋವೇ ಗಂಡುಗಳ ಪಳಗಿಸಬಲ್ಲ ತರಬೇತುದಾರ ಎಂಬ ಘೋಷ ವಾಕ್ಯ ಬರುತ್ತದೆ. ಈ ನೋವು ಗಂಡುಗಳನ್ನು ಮಾತ್ರವಲ್ಲ ಅನುಭವಿಸುವ ಸಾಧಕಿಯರನ್ನೂ ಪರಿಪೂರ್ಣತೆಯತ್ತ ಕೊಂಡೊಯ್ಯುತ್ತದೆ ಎನ್ನುವುದು ತಿಳಿದು ಬರುತ್ತದೆ. ಇದು ಥೇರಿಯರ ಬದುಕಿನ ಗಾಥೆ. ಮಹಾಪ್ರಜಾಪತಿ ಗೌತಮಿ, ಖೇಮಾ, ಬದ್ಧಾ ಕುಂಡಲಕೇಶೀ, ಕಿಸಾಗೌತಮಿ ಮುಂತಾದ ಹನ್ನೆರಡು ಭಿಕ್ಕುಣಿಯರ ಸಾಹಸ, ಸಾಧನೆಗಳ ಕಥೆಯ ಜೊತಗೆ, ಭಿಕ್ಕುಣಿಗಳ ಸಂಘದಲ್ಲಿ ಬದಲಾಗುತ್ತಲೇ ಬಂದ ಸಾಮಾಜಿಕ ಸಂದರ್ಭಗಳಲ್ಲಿ ಹೆಣ್ಣಿನ ಸ್ಥಾನಮಾನ, ಅವರ ಸಮಸ್ಯೆಗಳು, ಅವರ ಸಂಘರ್ಷಗಳು, ಸ್ತ್ರೀ ಪುರುಷ ಸಮಾನತೆಯ ಪ್ರಶ್ನೆಗಳು, ಸೋದರೀತ್ವದ ಪರಿಕಲ್ಪನೆ, ಭಿಕ್ಕುಗಳು ಮತ್ತು ಭಿಕ್ಕುಣಿಯರ ನಡುವಿನ ಕಾನೂನಾತ್ಮಕ ಭೇಧಗಳು, ಭಿಕ್ಕುಗಳು ಹಾಗೂ ಸ್ವತಃ ಬುದ್ಧನಲ್ಲೇ ಇದ್ದ ವೈರುಧ್ಯಗಳು, ಅನೇಕ ವೇಳೆ ಭಿಕ್ಕುಣಿಯರ ವಿರುದ್ಧವಾಗಿ ತೆಗೆದುಕೊಳ್ಳುತ್ತಿದ್ದ ನಿಲುವುಗಳು, ಬುದ್ಧ ಅವುಗಳನ್ನು ಪರಿಹರಿಸಿದ ಬಗೆ, ದಾಂಪತ್ಯದಲ್ಲಿ ಪತ್ನಿ ಪತಿಯ ಅನುವರ್ತಿಯಲ್ಲ ಸಹವರ್ತಿಯಾಗಬೇಕು ಎನ್ನುವುದನ್ನು ಸೂಚಿಸುತ್ತಿದ್ದ ಬಗೆ ಆ ಮೂಲಕ ಸಮಾಜದಲ್ಲಿ ಸದ್ದಿಲ್ಲದೇ ಕುಟುಂಬದಲ್ಲಿ ಲಿಂಗಸಮಾನತೆಯನ್ನು ಸೂಚಿಸುತ್ತಿದ್ದ ರೀತಿ, ಭಿಕ್ಕುಣಿಯರ ಮಾನಸಿಕ ಧೃಡತೆ, ಧಮ್ಮಕ್ಕೆ ಅವರಿಗಿರುವ ಬದ್ಧತೆ, ಅಲ್ಲದೇ ಅವರ ವೇಷಭೂಷಗಳು ಅವರ‌ ಮುಟ್ಟಿನ ಸಮಸ್ಯೆಗಳು, ಭಿಕ್ಕುಗಳ ಮುಂದೆ ಸಂದರ್ಶನಕ್ಕೆ ಹಾಜರಾಗುವಾಗ ಅವರು ಅನುಭವಿಸುತ್ತಿದ್ದ ಮುಜುಗರ ಅದಕ್ಕೆ ಬುದ್ಧ ಸೂಚಿಸಿದ ಪರಿಹಾರ, ಹೀಗೆ ಸಂಘವನ್ನು ರೂಪಿಸಿ ಬೆಳೆಸುವಲ್ಲಿ ಉಂಟಾದ ಸಂಘರ್ಷಗಳು ಎಲ್ಲವನ್ನೂ ಬಹಳ ಸೂಕ್ಷ್ಮವಾಗಿ ಇಲ್ಲಿ ವಿಶ್ಲೇಷಿಸಲಾಗಿದೆ. ೨೫೦೦ ವರ್ಷಗಳ ಹಿಂದೆ ಹೆಣ್ಣುಮಕ್ಕಳ ಬಗ್ಗೆ ಇಂತಹ ಒಂದು ಚರ್ಚೆ ನಡೆದದ್ದು ವಿಸ್ಮಯವೇ ಸರಿ. ಮಹಿಳೆಯರ ವಿಷಯದಲ್ಲಿ, ಯುಗಪರಿವರ್ತನೆಯ ಸಂಧಿಕಾಲದ ತಲ್ಲಣಗಳನ್ನು, ಬುದ್ಧ ಮತ್ತು ಅವನ ಅನುಯಾಯಿಗಳು ನಿರ್ವಹಿಸಿದ ರೀತಿಯ ಬಗೆಗೆ ಹೊಸದೊಂದು ನೋಟವನ್ನೇ ಈ ಕೃತಿ ಪ್ರದಾನ ಮಾಡುತ್ತದೆ. “ಬಹುಶಃ ಬೌದ್ಧಗ್ರಂಥಗಳನ್ನು ಹೊರತು ಪಡಿಸಿದರೆ ಮಹಿಳೆಯರ ದಿನನಿತ್ಯ ಬದುಕಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ದೊರೆಯುವುದಿಲ್ಲ.ಅನೇಕ ವೃತ್ತಿಯಲ್ಲಿ ತೊಡಗಿರುವ ಮಹಿಳೆಯರ ಉಲ್ಲೇಖ ಮಾಡುವುದಲ್ಲದೇ ಸಾರ್ವಜನಿಕ ಬದುಕಿನಲ್ಲಿಯೂ ಅವರು ಪಾಲ್ಗೊಳ್ಳುತ್ತಿದ್ದರು” ಎಂಬುದನ್ನು ಅನೇಕ ಗ್ರಂಥಗಳ ಆಧಾರದಿಂದ ಲೇಖಕಿ ಸಿದ್ಧಪಡಿಸುತ್ತಾರೆ. “ಗಣಿಕೆಯರು ಮತ್ತು ವೇಶ್ಯೆಯರನ್ನು ಕೀಳಾಗಿ ಪರಿಭಾವಿಸಿರುವುದು ಆರಂಭದ ಪಾಲಿ ಗ್ರಂಥಗಳಲ್ಲಿ ಕಂಡು ಬರುವುದಿಲ್ಲ”. “ಬುದ್ಧನಿಗೆ‌ ಬಹುಶಃ ಗಾಬರಿ ಇದ್ದದ್ದು ಭಿಕ್ಕುಣಿಯರ ಬಗ್ಗೆ ಅಲ್ಲ. ತನ್ನದೇ ಭಿಕ್ಕುಗಳ ಬಗ್ಗೆ.ಅವರು ಬಹುಬೇಗ ಭ್ರಷ್ಟರಾಗಬಲ್ಲರು ಎಂಬುದು ಅವನಿಗೆ ಗೊತ್ತಿತ್ತು” ಬುದ್ಧ ತನ್ನ ಕಾಲದ ಸಾಮಾಜಿಕ ವ್ಯವಸ್ಥೆಯ ಪ್ರವಾಹಕ್ಕೆ ಎದುರಾಗಿ ಹೀಗೆ ಈಜುತ್ತಿದ್ದ ಎನ್ನುವುದಕ್ಕೆ ಲೇಖಕಿ ಕೊಡುವ ಕೆಲವು ಉದಾಹರಣೆಗಳು ವಿಸ್ಮಯಕಾರಕವಾಗಿವೆ. ಉದಾಹರಣೆಗೆ : ಕಾರ್ಮಿಕರು ಹಾಗೂ ಸೇವಕರು ಖತ್ತಿಯ (ಕ್ಷತ್ರಿಯ), ಬ್ರಾಹ್ಮಣ ಮತ್ತು ಗಹಪತಿಗಳಿಗಂತ ಕೀಳು….ಎಂಬ ನಂಬಿಕೆ ಆಗಿನ ಸಮಾಜದಲ್ಲಿತ್ತು. ಆದರೆ ಆ ಕಾರಣಕ್ಕೆ ಅವರಿಗೆ ಸಂಘಕ್ಕೆ ಸೇರುವ ಅವಕಾಶವನ್ನು ಬುದ್ಧ ನಿರಾಕರಿಸಿರಲಿಲ್ಲ. ಕ್ಷೌರಿಕರು, ಕದುರೆ ತರಬೇತುಗಾರರು, ಬೆಸ್ತರ ಮಕ್ಕಳು ಚಂಡಾಲನೊಬ್ಬನ ಮಗ ಕೂಡ ಸಂಘಕ್ಕೆ ಸದಸ್ಯನಾಗಿದ್ದ” “ಮುಟ್ಟಾದ ಭಿಕ್ಕುಣಿಯರು ಕುಳಿತಡೆ, ನಿಂತೆಡೆ ಅವರು ಓಡಾಡಿದ ಕಡೆಯೆಲ್ಲಾ ರಕ್ತದ ಕಲೆಗಳಾಗುತ್ತಿವೆ ಎಂದು ಮಹಾಪ್ರಜಾಪತಿ ಗೌತಮಿ, ಬುದ್ಧನಿಗೆ ಹೇಳುತ್ತಾ ” ಹೆಂಗಸರು ಬಟ್ಟೆಯ ಚೂರುಗಳನ್ನು ಹೊಸೆದು ಮಾಡಿದ ಅಣಿಕೋಲಕ ಅಂದರೆ ಕಡಾಣಿ ಅಥವ ಕಡಗೀಲಿನಂತಹ ಬಟ್ಟೆಯನ್ನ ಧರಿಸಬಹುದೇ? ” ಎಂದು ಕೇಳುತ್ತಾಳೆ. ಅದಕ್ಕೆ ಅವನು ಒಪ್ಪಿ ಯೋನಿಯಲ್ಲಿ ಅದನ್ನು ಎಷ್ಟು ಆಳಕ್ಕೆ ತುರುಕಿಕೊಳ್ಳಬಹುದು? ಎಂಬೆಲ್ಲಾ ಚರ್ಚೆಗಳು ನಡೆದ ನಂತರ ಕೊನೆಗೆ ಬುದ್ಧ ಅವರಿಗೆ ಸೊಂಟದ ಸುತ್ತ ಒಂದು ಉಡುದಾರದಂತಹ ದಾರವನ್ನು ಕಟ್ಟಿಕೊಂಡು ಒಂದು ಬಟ್ಟೆಯ ತುಂಡನ್ನು ಕೌಪೀನದಂತೆ ಧರಿಸುವಂತೆ ಹೇಳುತ್ತಾನೆ. “ಆ ಕಾಲದಲ್ಲಿ ಬಟ್ಟೆ ಸುಲಭವಾಗಿ ಲಭ್ಯವಿರಲಿಲ್ಲ. ಬಳಕೆಯಾದ ಮೇಲೆ ಬಟ್ಟೆಯನ್ನು ಒಗೆದು ಸಂಘಕ್ಕೆ ವಾಪಸ್ಸು ಕೊಡಬೇಕಿತ್ತು. ಏಕೆಂದರೆ ಆ ಬಟ್ಟೆ ಸಂಘದ ಆಸ್ತಿಯಾಗಿತ್ತು. ಇದು ಓದುಗರನ್ನು ಅವಾಕ್ಕಾಗಿಸುವ ಸಂಗತಿ. ಮುಟ್ಟು ಎನ್ನುವುದು‌ ಮೈಲಿಗೆಯಾಗಿರದಿದ್ದರೂ ಕೆಲವು ಕಡೆ ಆಚರಣೆಯಲ್ಲಿ ಇರಲಿಲ್ಲ. ಮುಟ್ಟಾದ ಭಿಕ್ಕುಣಿಯರು ಸ್ತೂಪಕ್ಕೆ ಪ್ರದಕ್ಷಿಣೆ ಬರುವುದನ್ನು ನಿಷೇಧಿಸಲಾಗಿತ್ತು,” ಎಂದು ಹೇಳುತ್ತಾ ಹಿಂದು ಧರ್ಮದ ಪ್ರಭಾವದ ಹಿನ್ನೆಲೆಯಲ್ಲಿ ಇದನ್ನು ನೋಡಬೇಕು ಎನ್ನುವ ಲೇಖಕಿಯ ಸಮದಂಡಿಯಾದ ದೃಷ್ಟಿಯನ್ನು ಮೆಚ್ಚಲೇಬೇಕು. ಈ ಎಲ್ಲ ವಿಚಾರಗಳು ಬುದ್ಧನನ್ನು ಅರ್ಥಮಾಡಿಕೊಳ್ಳುವಲ್ಲಿ ಹೊಸ ನೋಟವೊಂದನ್ನು ದಯಪಾಲಿಸುತ್ತವೆ. ಇಂಗ್ಲಿಷ್ ಪಾಲಿ ಮುಂತಾದ ಭಾಷೆಗಳಲ್ಲಿ ದೊರಕುವ ಹಲವಾರು ಗ್ರಂಥಗಳ ಆಧಾರದ ಮೇಲೆ ಇಂತಹ ಒಂದು ಅದ್ಭುತ ಕೃತಿಯನ್ನು ನೀಡಿದ ಲೇಖಕಿ ಶೈಲಜಾ ಅವರಿಗ ಅಭಿನಂದನೆಗಳು.

Friday, 28 March 2025

ನಾವುಗಳು ಕನ್ನಡ ಎಂ.ಎ. ಓದುತ್ತಿದ್ದ ಕಾಲದಲ್ಲಿ (೧೯೭೯-೮೧) ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ನಾಲ್ಕು ಐದು ತರಗತಿಗಳು ನಡೆಯುತ್ತಿದ್ದವು. ಹೀಗಿದ್ದರೂ ಎರಡು ವರುಷದ ಕೊನೆಗೆ ನಮಗೆ ದಕ್ಕಿದ ಕನ್ನಡ ಸಾಹಿತ್ಯ ಎಷ್ಟು ? ಇದರ ಬಗ್ಗೆ ನಮಗೆ ಹೇಳಿಕೊಳ್ಳಲು ಸಂಕೋಚವಾಗುತ್ತಿತ್ತು. ಸಾಹಿತ್ಯದ ಸಾಗರವನ್ನು ಮೊಗೆಯಲು ನಮ್ಮ ಬಳಿಯಿರುವ ಪಾತ್ರವೇ ಚಿಕ್ಕದೆನಿಸುತ್ತಿತ್ತು. ಹಾಗೆ ಭಾವಿಸಲು ನಮ್ಮ ಅಧ್ಯಾಪಕರು ಗಳೇ ಕಾರಣ. ನಮಗೆ ಇದ್ದ ಅಧ್ಯಾಪಕರುಗಳಂತೂ ನಮಗೆ ಸ್ವಂತ ಆಲೋಚನೆ ಮಾಡುವ ಶಕ್ತಿ ಯನ್ನು ಬೆಳೆಸಿದವರು. ಕಾಪಿ ಹೊಡೆಯಲು ಸಾಧ್ಯವಿಲ್ಲದ ಪ್ರಶ್ನೆಗಳು ನಮ್ಮ ಪರೀಕ್ಷಾ ಪತ್ರಿಕೆ ಗಳಲ್ಲಿರುತ್ತಿದ್ದವು. ಪ್ರಬಂಧಗಳ ಅಸೈನ್ಮೆಂಟ್ ಗಳಲ್ಲಿ ಏನಾದರೂ ಕಾಪಿ ಹೊಡೆದರಂತೂ ಅವರಿಗೆ ಗೊತ್ತಾಗಿಬಿಡುತ್ತಿತ್ತು. ಯಾಕೆಂದರೆ ಅವರಿಗೆ ಎಲ್ಲವೂ ಕರತಲಾಮಲಕ ವಾಗಿದ್ದವು. ನಮಗೆಲ್ಲರಿಗೂ ಸ್ವಂತವಾಗಿ ಏನಾದರೂ ಬರೆದು ಮೇಷ್ಟ್ರು ಗಳ ಶಹಬ್ಬಾಸ್ ಗಿರಿಯನ್ನು ಪಪಡೆದುಕೊಳ್ಳಬೇಕೆಂಬ ಮಹದಾಸೆಇರುತ್ತಿತ್ತೇ ವಿನಃ ಯಾರಿಗೂ ಕಾಪಿ ಹೊಡೆದು ಹೇಗೋ get on ಆಗಬೇಕೆಂದು ಎನಿಸುತ್ತಿರಲಿಲ್ಲ. ಆಗ ನಮ್ಮ ಬ್ಯಾಚ್ನಲ್ಲಿ ಯಾರಿಗೂ ಫಸ್ಟ್ ಕ್ಲಾಸ್ ದೊರೆಯಲಿಲ್ಲ. ಅವರಲ್ಲಿ ಕೆಲವರು ಇಂದು ಗಂಭೀರ ಬರವಣಿಗೆಯಲ್ಲಿ ತೊಡಗಿಕೊಂಡು ಹೆಸರು ಗಳಿಸಿದ್ದಾರೆ. ಪಾಠಗಳ ಜೊತೆಗೆ ಅಧ್ಯಾಪಕರು ಬದುಕಿನ ಮೌಲ್ಯಗಳನ್ನೂ ಕಲಿಸಿದರು. " ನೀವು ಇಲ್ಲಿಂದ ಹೊರ ಹೋಗುವಾಗ ದೊಡ್ಡ ಸಾಹಿತಿಗಳೇನಾಗಬೇಕಿಲ್ಲ ಕೇವಲ ಮನುಷ್ಯರಾದರೆ ಸಾಕು' ಇದು ಅಂದಿನ ಅಧ್ಯಕ್ಷರಾಗಿದ್ದ ಜಿ.ಎಸ್ ಎಸ್ ಅವರು ನಮ್ಮ ಬೀಳ್ಕೊಡುಗೆ ಸಮಯದಲ್ಲಿ ಹೇಳಿದ ಮಾತು. ಈಗ ಹೆಚ್ಚಿನ ಎಂ.ಎ ತರಗತಿ ಗಳಲ್ಲಿ ಪಾಠವೇ ನಡೆಯುವುದಿಲ್ಲವಂತೆ. (ಇದಕ್ಕೆ ಅಪವಾದಗಳಿರಬಹುದು) ವಿದ್ಯಾರ್ಥಿಗಳ ಅಭಿವೃದ್ಧಿಯ ಬಗ್ಗೆ ಅಧ್ಯಾಪಕರುಗಳಿಗೂ ಇರುವ ಆಸ್ಥೆ ಅಷ್ಟಕ್ಕಷ್ಟೇ.ವಿದ್ಯಾರ್ಥಿಗಳು ಕಾಪಿ ಹೊಡೆದರೂ ಆ ಅಧ್ಯಾಪಕರುಗಳಿಗೆ ತಿಳಿಯುವುದೇ ಇಲ್ಲ. ಏಕೆಂದರೆ ಮೊದಲು ಅವರು ಓದಿದ್ದರೆ ತಾನೇ? ಆದರೂ ಈ ಎಲ್ಲಾ ವಿದ್ಯಾರ್ಥಿಗಳಿಗೆ ಇಂದು ಶೇಕಡಾ ೭೦ಕ್ಕಿಂತ ಕಡಿಮೆ ಅಂಕಗಳು ಬರುವುದಿಲ್ಲ. ಮೇಲಿನ ಈ ಸ್ಥಿತಿ ಗೆ ಪಿಎಚ್.ಡಿ ಪಡೆದವರೂ ಹೊರತಲ್ಲ. ಕತೆ.ಕಾದಂಬರಿ, ಕವಿತೆ ನಾಟಕಗಳಲ್ಲಿ ಸಂಶೋಧನೆ ಮಾಡಿದ ಅವರಿಗೆ ಆಯಾ ಪ್ರಕಾರದಲ್ಲಿನ ಪ್ರಸ್ತುತ ಸಾಹಿತ್ಯಕೃತಿಗಳು ಏನು ಹೇಳುತ್ತವೆ ಎಂದು ಸ್ವತಂತ್ರವಾಗಿ ನಾಲ್ಕು ಸಾಲು ಹೇಳಲು ಬರುವುದಿಲ್ಲ. ಅಣಬೆಗಳಂತೆ ಹುಟ್ಟಿಕೊಳ್ಳುತ್ತಿರುವ ಇಂತಹ " ಪಿ.ಎಚ್.ಡಿ" ಗಳು, ಒಂದು ಸರಳ ಕವಿತೆಯನ್ನೂ ಅರ್ಥೈಸಲಾರದ 'ಪ್ರಭೃತಿಗಳು' ಇನ್ನು ತಮ್ಮ ವಿದ್ಯಾರ್ಥಿಗಳಿಗೆ ಯಾವ ಮೌಲ್ಯವನ್ನು ಕಲಿಸಿಯಾರು? ಆದರೆ ಈಗ ಗಲ್ಲಿಗಲ್ಲಿಗಳಲ್ಲಿ ಪ್ರಶಸ್ತಿಗಳು, ಬಿರುದು ಬಾವಲಿಗಳು ಹೇರಳವಾಗಿ ದೊರೆಯುತ್ತಿವೆ. ಸದಾ ಪತ್ರಿಕೆಗಳಲ್ಲಿ ರಾರಾಜಿಸುವ ಹೆಸರುಗಳು! ಕನ್ನಡ ಉಳಿಸೋಣ ಎಂದು ಎಲ್ಲಾ ಕಡೆ ಬೊಬ್ಬೆ!!!! ಎಂಥ ಕನ್ನಡವನ್ನು ಉಳಿಸಬೇಕು? ಹೊರನಾಡ ಕನ್ನಡಿಗರಿಗಂತೂ ಕನ್ನಡ ಕಲಿಯುವವರಿಗೆ ಕರ್ನಾಟಕ ಸರ್ಕಾರದಿಂದ ಅನೇಕ ಅನುದಾನಗಳಿವೆ. ಅನುದಾನಕ್ಕಾಗಿ ಕನ್ನಡವೇ, ಇಲ್ಲ ಕನ್ನಡಕ್ಕಾಗಿ ಅನುದಾನವೇ? ಕನ್ನಡಾಂಬೆ ನೀನೇ ಕಾಪಾಡಬೇಕು. 2017.11 ಹೆಗಲ ಸಂಭ್ರಮ ಬದುಕೆಲ್ಲ ಬವಣೆ ಪಟ್ಟ ಮಗಳೊಬ್ಬಳು ತನ್ನ ಮುದಿ ತಾಯಿಗೆ ಹೇಳುತ್ತಾಳೆ " ಹೊರೆ ಎಂದು ಎನಿಸುವುದಕ್ಕೆ ಮುಂಚೆ ನೀನೇ ಹೆಗಲಿನಿಂದ ಇಳಿದುಬಿಡು" (ಮಂಥನ ಧಾರಾವಾಹಿ) ನನಗೆನಿಸುತ್ತದೆ ಅದು 'ಹೆಗಲೇರಿಬಿಡು' ಎಂದಾಗ ಬೇಕೇನೋ. ಬಿಡಿ, ಹೆಗಲಿನಿಂದ ಇಳಿ ಎಂದರೂ ಹೆಗಲೇರು ಎಂದೇ ಅರ್ಥ. ಹೆಗಲ ಮೇಲೆ ಹೊತ್ತದ್ದನ್ನು ಸುಡುಭೂಮಿಯಲ್ಲಿ ಇಳಿಸಲೇಬೇಕಲ್ಲ? ಇನ್ನೆಷ್ಟು ದಿನ ಬಾಕಿ ಇದೆ ? ಈ ಮಾತನ್ನು ನನಗೇ ಹೇಳಿಕೊಂಡರೂ ನನಗಿಂತ ಮುದುಕಿಯಾದ ಅಮ್ಮನಿಗೆ ನೋವಾಗಬಹುದು. ಹೆಗಲಿಗೇರಿಸಿಕೊಂಡು ಸಂಭ್ರಮ ಪಟ್ಟ, ಬದುಕಿನ ಜಾತ್ರೆ ತೋರಿಸಿದ, ಜೀವ ಒತ್ತೆ ಇಟ್ಟು ಸಲಹಿದ ತಾಯಿಯನ್ನು ಹೆಗಲಿನಿಂದ ಇಳಿಸುವುದಕ್ಕೆ ಇಲ್ಲ ಏರಿಸುವುದಕ್ಕೇ ಎಲ್ಲಾ ಮಕ್ಕಳಿಗೂ ಅವಸರ. ಇಳಿದು ಬಿಡಬೇಕು ಮಕ್ಕಳ ಹೆಗಲಮೇಲಿನಿಂದ ಹೊರೆಯಾಗುವ ಮುನ್ನ.......july 24/18 ಓದಿನ ಸ್ವಾತಂತ್ರ್ಯ ಮಾಸ್ತಿಯವರ ‘ಸುಬ್ಬಣ್ಣ’ ಕಾದಂಬರಿಯ (ಪ್ರಸ್ತಾವನೆ?) ಲ್ಲಿ ಹೀಗೆ ಬರೆಯುತ್ತಾರೆ “ಸ್ತ್ರೀ ವರ್ಣನೆಯೆಂದು ಬರೆಯುವ ವರ್ಣನೆ ಪ್ರಾಯಶಃ ಮಾನವನು ಸ್ತ್ರೀಯರ ವಿಚಾರದಲ್ಲಿ ತೋರಬೇಕಾದ ಮರ್ಯಾದೆಯನ್ನು ಮೀರುತ್ತದೆಂದು ನನ್ನ ಭಾವನೆ. ಅಯ್ಯಾ ಕವಿ, ಯಾವುದನ್ನು ಕೇವಲ ಶೃಂಗಾರದ ಆವಾಸವೆಂದು ಕಾಮುಕಾವಸ್ಥೆಯಲ್ಲಿ ನೀನು ಭ್ರಮಿಸಿ ನಿನ್ನಂಥ ಕಾಮುಕರಿಗೆ ವರ್ಣಿಸಿ ಹೇಳುವೆಯೋ ಆ ಸ್ಥನಯುಗ್ಮವನ್ನು ಲೋಕಮಾತೆ ನನ್ನನಿನ್ನಂಥ ಸಾವಿರ ಕ್ಷುದ್ರ ಜೀವಿಗಳ ಪಾಲನೆಗಾಗಿ ಧರಿಸಿರುವವಳು. ಇದನ್ನು ವಿಟಪುರುಷನಂತೆ ವರ್ಣಿಸುವುದಕ್ಕೆ ನಿನ್ನ ಧೃಷ್ಟತನವೆಷ್ಟಿರಬಹುದು? ಸ್ತ್ರೀಯು ಪ್ರೇಯಸಿ ಹೇಗೋ ಅದಕ್ಕಿಂತ ಹೆಚ್ಚಾಗಿ ಮಾತೆಯಾಗಿರುವಳು .. ಯಾವ ಸ್ತ್ರೀಯಲ್ಲಿಯೇ ಆಗಲಿ ಆಕಾರದ ಸೊಗಸು ಪ್ರಮುಖವಾಗಿರುವುದು ಸ್ವಲ್ಪ ಕಾಲ ಮಾತ್ರ. ಆಮಲೆ ನಮಗೆ ತೋರುವುದು ಆ ಅವರ್ಣನೀಯವಾದ ಸ್ತ್ರೀವ್ಯಕ್ತಿತ್ವ, ಸಾವಿರ ಸಂದರ್ಭದಲ್ಲಿ ನೋಡಿರುವ ಆ ಪ್ರೇಮ, ಆ ದಯೆ, ಆ ಕನಿಕರ,ಆ ವಿಭ್ರಮ, ಆ ಲಾಲಿತ್ಯ, ಆ ಸೌಕುಮಾರ್ಯ, ಆ ಸ್ತ್ರೀತ್ವ” ಮಾಸ್ತಿಯವರ ಮೇಲಿನ ಮಾತುಗಳು ನಮ್ಮ ಪ್ರಾಚೀನ ಕವಿಗಳು ತಮ್ಮ ಕಾವ್ಯಗಳಲ್ಲಿ ಅಭಿವ್ಯಕ್ತಿಸಿರುವ ಹೆಣ್ಣಿನ ಚಿತ್ರಣಕ್ಕೆ ನೀಡಿದ ಪ್ರತಿಕ್ರಿಯೆಯಾಗಿದೆ. ಹೆಣ್ಣು ಭೋಗಕ್ಕೆ ಅಕರ ಎನ್ನುವ ಆಶಾದೇವಿಯವರ ಮಾತುಗಳು ಹೊಸತೇನಲ್ಲಾ. ವಿಜಯಾ ದಬ್ಬೆಯವರ ಕಾಲದಿಂದಲೂ ಇದನ್ನು ಕೇಳುತ್ತಲೇ ಬಂದಿದ್ದೇವೆ. ಹೀಗೆ ಮಾತನಾಡುವಾಗ, ಪ್ರಾಚೀನ ಕಾವ್ಯಗಳ ಸಾಹಿತ್ಯಕ ಅನನ್ಯತೆ ಬಗ್ಗೆ ಖಂಡಿತಾ ಎರಡು ಮಾತಿಲ್ಲ. ಪ್ರಾಚೀನಕಾವ್ಯಗಳನ್ನು ನೋಡುವ ಅನೇಕ ವಿಧಾನಗಳಲ್ಲಿ ಸ್ತ್ರೀವಾದೀ ಅಧ್ಯಯನವೂ ಒಂದು. ಆ ನಿಟ್ಟಿನಲ್ಲಿ ನೋಡುವಾಗ ಉದ್ಭವಿಸುವ ಪ್ರಶ್ನೆಗಳಿವು. ಹೆಣ್ಣನ್ನು ದೇಹದಿಂದ ಮಾತ್ರ ಗುರುತಿಸುತ್ತಿದ್ದ ಕಾಲವೊಂದಿತ್ತು ಆ ಕಾಲದ ಅಲೋಚನೆಯ ಭಾಗವಾಗಿ ಅಂದಿನ ಕಾವ್ಯಗಳಲ್ಲಿ ಹೆಣ್ಣು ಕೇವಲ ದೇಹಿಯಾಗಿ ಮೈದಳೆದಿದ್ದಾಳೆ. ಏಕೆಂದರೆ ಅವಳಿಗೆ ಆತ್ಮ ದೊರೆತದ್ದೇ ವಚನಕಾರರ ಕಾಲದಲ್ಲಿ ಎಂದು ರಘುನಾಥ್ ಅವರು ಹೇಳುತ್ತಾರೆ. ಅವರ ಈ ಮಾತುಗಳನ್ನು ಒಪ್ಪಿದರೂ ಪುರುಷನ ಲೈಂಗಿಕ ಕಾಮನೆಗಳನ್ನು ಪ್ರಚೋದಿಸುವ ಹೆಣ್ಣಿನ ಅಂಗಗಳೇ ಏಕೆ ಮೇಲುಗೈ ಪಡೆದುಕೊಂಡವು ಎನ್ನುವ ಪ್ರಶ್ನೆಗೆ ಉತ್ತರ ದೊರೆಯುವುದು ಕಷ್ಟ. ಒಬ್ಬ ತಂದೆಯೂ ಕೂಡ ತನ್ನ ಮಗಳಲ್ಲಿಯೂ ಇಂತಹ ಕಾಮಪ್ರಚೋದಕ ಅಂಗಗಳನ್ನೇ ಗಮನಿಸಿ ಮಾತನಾಡುತ್ತಾನೆ. ಲೈಂಗಿಕ ಅಸ್ಮಿತೆಯನ್ನು ಅಸ್ತಿತ್ವವನ್ನು ಗುರುತಿಸುವ ರೀತಿಯಿದು ಎಂದ ಸಮರ್ಥಿಸಿಕೊಂಡರೂ ತಂದೆಯೊಬ್ಬ ಅದನ್ನು ಗುರುತಿಸುವುದನ್ನು ಸ್ವೀಕರಿಸಲು ಮುಜುಗರವಾಗುತ್ತದೆ- ವಡ್ಡಾರಾದನೆಯ ಕಾರ್ತೀಕ ಋಷಿಯ ಕತೆಯನ್ನು ಒಪ್ಪಿಕೊಂಡರೂ. ಕಾವ್ಯರಚನೆಗೆ ತೊಡುಗುತ್ತಿದ್ದವರು ಪುರುಷರೇ ಆದುದರಿಂದ ಕಾವ್ಯವನ್ನು ರಂಜನೀಯವಾಗಿಸುವುದೂ ಮತ್ತು ಮೋಕ್ಷದೆಡೆಗೆ ಕೊಂಡೊಯ್ಯವುದೂ ಅವರ ಉದ್ದೇಶವಾದುದರಿಂದ ಇಲ್ಲಿ ‘ಹೆಣ್ಣು ಭೋಗಕ್ಕೆ ಆಕರವಾಗಿ ವೈರಾಗ್ಯಕ್ಕೆ ಪರಿಕರವಾಗಿ’ ಬಂದಿದ್ದಾಳೆ, ಅಷ್ಟೇ. ಜೊತೆಗೆ ಅಷ್ಟಾದಶ ವರ್ಣನೆಗಳಂತಹ ಕಾವ್ಯ ನಿಯಮಗಳೂ ಇದಕ್ಕೆ ಪೂರಕವಾಗಿಯೇ ಇದ್ದವು. ಒಂದು ಪಕ್ಷ ಹೆಣ್ಣು ಮಕ್ಕಳೇ ಆಕಾಲದಲ್ಲಿ ಕಾವ್ಯ ರಚನೆಗೆ ತೊಡಗಿದ್ದಿದ್ದರೂ ಅವರಿಗೆ ಪುರುಷರಿಗಿದ್ದಂತಹ ಸ್ವಾತಂತ್ರ್ಯ ಖಂಡಿತವಾಗಿ ಸಿಗುತ್ತಿರಲಿಲ್ಲ ಎನ್ನುವುದಕ್ಕೆ “ರಾಧಿಕಾ ಸಾಂತ್ವನಂ” ಕೃತಿಯನ್ನು ಪ್ರಕಟಿಸಲು ಮುಂದಾದ ಮುದ್ದುಪಳನಿಗೆ ದೊರಕಿದಂತಹ ಕಪಾಳಮೋಕ್ಷವೇ ಸಾಕ್ಷಿ. (ಅಕ್ಕ ಮಹಾದೇವಿ ಯನ್ನು ಚೆನ್ನಮಲ್ಲಿಕಾರ್ಜುನ ಪಾರು ಮಾಡಿದ್ದರಿಂದ ಅವಳು ಬಚಾವಾದಳು) ಕಾವ್ಯವನ್ನು ಇತ್ತೀಚಿನವರೆಗೆ ಸೌಂದರ್ಯಾತ್ಮಕ ದೃಷ್ಟಿಯಿಂದಲೇ ನೋಡುತ್ತ ಬಂದಿದ್ದೇವೆ. ಗಂಭೀರವಾದ ಸ್ತ್ರೀವಾದ ಮತ್ತು ಅನ್ಯ ಶಿಸ್ತೀಯ ಅಧ್ಯಯನಗಳು ಹುಟ್ಟಿಕೊಂಡಿದ್ದೇ ಇತ್ತೀಚೆಗೆ (ಸು. 1990 ಆನಂತರ) ಆ ದೃಷ್ಟಿಯಿಂದ ನೋಡುವ ಸ್ವಾತಂತ್ರ್ಯವೂ ಓದುಗರಿರಬೇಕು. June 29/18 ಮೀನು ಪೇಟೆಯ ವಿಸ್ಮಯ ಮುಷ್ಟಿ ಭತ್ತ; ಕೊಳಗ ಅಕ್ಕಿ, ಹೊರೆಹುಲ್ಲಾಗುವುದು ಒಂದು ವಿಸ್ಮಯ. ಅಂತಹ ಪ್ರಾಕೃತಿಕ ವಿಸ್ಮಯವನ್ನು ಹಿಡಿದಿಡುವ ಕವಿತೆಯೂ ಒಂದು ವಿಸ್ಮಯವೇ. ವಿಸ್ಮಯಕ್ಕೆ ವಿಸ್ಮಯವೇ ಉತ್ತರ. ಒಂದು ವಿಸ್ಮಯವನ್ನು ಮತ್ತೊಂದು ವಿಸ್ಮಯದಿಂದ ಮಾತ್ರ ಹಿಡಿದಿಡಲು ಸಾಧ್ಯ. ಕವಿತೆಯೊಳಗಿನ ವಿಸ್ಮಯ ಓದುಗರ ವಿಸ್ಮಯದಲ್ಲಿ ಪಲ್ಲವಿಸಿ ಇನ್ನೂ ಹೆಚ್ಚಿನ ವಿಸ್ಮಯಗಳಿಗೆ ದಾರಿಮಾಡಿಕೊಡುತ್ತದೆ- ಮುಷ್ಟಿ ಭತ್ತ ಖಂಡುಗ ಅಕ್ಕಿಯಾಗುವ ಹಾಗೆ. ಹೀಗೆ ಕವಿತೆಯ ಓದೆಂದರೆ ವಿಸ್ಮಯಗಳ ಸರಮಾಲೆ. ಅನಂತ ವಿಸ್ಮಯಗಳ permutation combination. ಸೃಜನಶೀಲತೆ ಎಂದರೇನೇ ವಿಸ್ಮಯಗಳ ಬೆನ್ನುಹತ್ತುವುದು. ವಿಸ್ಮಯ ಕಣ್ಣಿಗೆ ಕಾಣುತ್ತದೆ, ಘನವಾಗಿ ಕೈಗೆ ದಕ್ಕುತ್ತದೆ. ಆದರೆ ಅದರ ಹಿಂದಿನ ಕಾರ್ಯ ಕಾರಣ ಅಥವಾ ತತ್ವ ಮಾತ್ರ ಅಗೋಚರವಾದುದು. ಹೀಗೆ ದೃಶ್ಯ ಮತ್ತು ಅದೃಶ್ಯಗಳ ಸಂಘರ್ಷ, ಹೇಳಲಾರದ ಸಂಕಟಕ್ಕೆ ಎಡೆಮಾಡಿಕೊಡುತ್ತದೆ. ಇಂತಹ ಸಂಕಟದಿಂದಲೇ ಕವಿತೆ ಹುಟ್ಟಿಬರುತ್ತದೆ. ಎಲ್ಲಾ ಹುಟ್ಟಿನ ಮೂಲ ಸಂಕಟದಾಯಕವಾದದ್ದು ಎಂದು ನಮಗೆ ತಿಳಿದೇ ಇದೆ. ಆದುದರಿಂದಲೇ ಹೊರಗಿನ ಸಂಕಟಕ್ಕೆ ಕವಿತೆ ಮಿಡಿಯುವ ಹಾಗೆ ಇನ್ನಾವುದೂ ಮಿಡಿಯಲಾರದು. “ಸಾವು ತಪ್ಪಿ ಬದುಕುಳಿದ ಒಂದೆರಡು ಮಿಡುಕುವ ಮೀನನ್ನೆತ್ತಿ ನೇರಕೆಂಡದೊಲೆಯಲ್ಲಿ ಸುಟ್ಟು ತಾಟಿಗಿಡುವ” ನಿರ್ದಯಿಯಲ್ಲ ಕವಿತೆ. ಕಾವ್ಯ ಖಡ್ಗವಾಗುತ್ತದೆ ಎಂಬುದು ನಿಜ. ಖಡ್ಗವಾಗುವುದಾದರೂ ಅದು ಇನ್ನೊಂದನ್ನು ಕೊಲ್ಲಲಿಕ್ಕಲ್ಲ. ಬದಲಾಗಿ ಮಾನವೀಯತೆಯನ್ನು ಮೆರೆಯಲಿಕ್ಕೆ ಸಮಾನತೆಯನ್ನು ಎತ್ತಿಹಿಡಿಯಲಿಕ್ಕೆ ಮಾತ್ರ. ಮೀನು ಪೇಟೆಯ ತುಂಬಾ ಹೀಗೆ ಮಾಗಿಯ ‘ಟಿಸಿಲೊಡೆದ ಹಾದಿಗಳ ನೋವಿ’ದೆ. ನೋವಿನಲ್ಲಿ ನಿದ್ದೆ ಬಾರದ ರಾತ್ರಿಗಳಿಗೆ, ‘ಮಂಪರಿನ ಮುಲಾಮು ತರುವ’ ಕನಸಿದೆ. ಇದರ ಜೊತೆಗೆ ಹೂವಿನ ಬಳ್ಳಿಗಳು ಹೂ ಪಕಳೆ ಬಿಡಿಸುವ ಹೊತ್ತಿನ ಖಷಿಯೂ ಇದೆ. ‘ಸೋಲು ಗೆಲವುಗಳ ಅಭಂಗದ ಜುಗಲ್ ಬಂದಿ’ ಗಳು ಇವು. ಮಾನವ ಪ್ರೀತಿಗಾಗಿ ಹಂಬಲಿಸುವ ಕವಿತೆಗಳಿವು. ಪ್ರೀತಿಯ ಎದೆಗೂಡಲ್ಲಿ ಬೆಚ್ಚಗೆ ಸುಖಿಸುವ ಕವಿತೆಗಳಿವು. ಸಮಾನತೆ, ಸಮಾನಾಂತರತೆ ಇವುಗಳ ಮೂಲಧಾತು. ಇವುಗಳ ಆಧಾರವಿಲ್ಲದ ಪ್ರೀತಿ ಧೋಖಾದಾಯಕವಾದಾಗಲೆಲ್ಲಾ (ಚಿತ್ತಾಲರು ಟಂಕಿಸಿದ ಪದ) ಇವು ನೀರಿನಿಂದ ಹೊರತೆಗೆದ ಮೀನುಗಳಂತೆ ಚಡಪಡಿಸುತ್ತವೆ. ‘ಬೆಂಕಿಯಿಂದ ಬಾಣಲೆಗೂ, ಬಾಣಲೆಯಿಂದ ಬೆಂಕಿಗೂ’ ಜಿಗಿಯುತ್ತವೆ. ಪ್ರೀತಿ, ಸುಖ ಅನುಭವವಾದಾಗ ಸಲಿಲದಲಿ ಲೀಲಾಜಾಲ ಈಜುವ ಮೀನುಗಳಾಗುತ್ತವೆ. ಮುಂಜಾನೆ, ಸಂಜೆ ಅಥವಾ ರಾತ್ರಿ ಪಾರಿಜಾತ ಪಕಳೆ ಬಿಡಿಸುವ ಹೊತ್ತಿಗಾದರೂ ‘ಅವನು’ ಬಂದೇ ಬರುತ್ತಾನೆ ಎನ್ನುವ ನಿರೀಕ್ಷೆಯಲ್ಲಿ ಸಂತೃಪ್ತಗೊಳ್ಳುತ್ತವೆ. ರೇಣುಕಾ ರಮಾನಂದರ ಈ ‘ಮೀನು ಪೇಟೆ’ ನನಗೆ ಹತ್ತಿರವಾಗಲು ಇನ್ನೊಂದು ಕಾರಣವೂ ಇದೆ. ಇದು ನನ್ನ ಗೆಳತಿ ಸುಶೀಲಾ ಶೆಟ್ಟಿಯ ನೆನಪಿನ ಕಾವ್ಯ ಪುರಸ್ಕಾರ ಪಡೆದುಕೊಂಡಿರುವುದು. ಸುಶೀಲಾ ಶೆಟ್ಟಿ ನನಗೆ ಹತ್ತಿರದ ಗೆಳತಿ ಆಗುವ ಮುನ್ನವೇ ತೀರಿಕೊಂಡರು. ಅವರ ಹೆಸರಿನಲ್ಲಿ ಅವರ ಪತಿ ಸೀತಾರಾಮ ಶೆಟ್ಟಿಯವರು ಪ್ರಾರಂಭಿಸಿದ ಕವಿತಾ ಸ್ಪರ್ಧೆಯಲ್ಲಿ ಪ್ರಥಮ ವರುಷದ ಬಹುಮಾನ ಪಡೆದುಕೊಳ್ಳುವ ಭಾಗ್ಯ ನನ್ನ ಗೆಳತಿ ಕವಿ ಕುಸುಮಾಳ ಜೊತೆಗೆ ನನ್ನದೂ ಅಗಿದ್ದಿತು. ಅದನ್ನು ಈಗ ರೇಣುಕಾ ಕೂಡ ಹಂಚಿಕೊಂಡಿದ್ದಾರೆ. ಬಹಳ ಪರಿಣಾಮಕಾರೀ ಪ್ರತಿಮೆಗಳ ಮೂಲಕ ಆರ್ದ್ರವಾದ, ಆಪ್ತವಾದ ಕವಿತೆಗಳನ್ನು ಬರೆಯುವ ರೇಣುಕಾ ಅವರ ಭಾವ ಪ್ರಪಂಚಕ್ಕೆ ಇನ್ನೂ ಹೆಚ್ಚಿನ ಅಮೂರ್ತ ಲೋಕಗಳು ದಕ್ಕಲಿ. ಅದೃಶ್ಯವನ್ನು ಸೆರೆಹಿಡಿಯುವಂತಾಗಲೀ. ಅವರು ತಮ್ಮ ಪ್ರಥಮ ಹೆಜ್ಜೆಯಲ್ಲೇ ಸಾಧಿಸಿದ ಈ ಯಶಸ್ಸು ಪ್ರಶಂಸನೀಯವಾದುದು. June 25 /18 ******* ನಾಚಾರಮ್ಮ ಆಖ್ಯಾನ ಬಹಳ ಹಿಂದೆ ಕೇರಳದ ಶಂಕೋಟ್ಟೈ (ಚಂಗೋಟ್ಟೈ) ಎನ್ನುವ ಪ್ರದೇಶದಿಂದ ವಲಸೆ ಬಂದು ಹಾಸನ, ಶಿವಮೊಗ್ಗದ ಸುತ್ತಮುತ್ತ 'ಸಂಕೇತಿ' ಎಂಬ ಜನಾಂಗ ನೆಲೆನಿಂತಿತು. ನಂಬೂದರಿ ಹಾಗೂ ಪಾಲಕ್ಕಾಡ್ ಅಯ್ಯರ್ ಜನಾಂಗವು 'ಸಂಕೇತಿ' ಗಳಿಂದಲೇ ಕವಲೊಡೆದ ಎರಡು ಜನಾಂಗಗಳೆಂದು ಖ್ಯಾತ ಸಂಶೋಧಕರಾದ ಪ್ರಣತಾರ್ತಿ ಹರನ್ ಅವರು ಅಭಿಪ್ರಾಯ ಪಡುತ್ತಾರೆ. ಈ ಜನಾಂಗ ಸಂಗೀತ, ಕೃಷಿ ಹಾಗೂ ವೇದಾಧ್ಯಯನಗಳಿಗೆ ಹೆಸರಾಗಿರುವಂತೆ ಒರಟುತನಗಳಿಗೂ ಹೆಸರಾಗಿದೆ. ನನಗೆ ಈಗ ಹೇಳಬೇಕಾಗಿರುವುದು ಈ ಜನಾಂಗದ ಚರಿತ್ರೆಯನ್ನಲ್ಲ. ಬದಲಾಗಿ ಈ ಜನಾಂಗದ ಮೂಲ ಮಹಿಳೆಯನ್ನಲಾಗುವ ನಾಚಾರಮ್ಮನ ಆಖ್ಯಾನವನ್ನು. ಈಕೆ ವೇದ ಶಾಸ್ತ್ರಗಳಲ್ಲಿ ಪಾರಂಗತಳೂ, ವಿದ್ವಾಂಸಳೂ ಆಗಿದ್ದಳಂತೆ. ಅವಳನ್ನು ಹಣಿಯುವ ಸಲುವಾಗಿ ಪುರುಷ ಸಮೂಹ, ಅವಳ ಸೀರೆಗೆ ಬಳಪದ ಕಲ್ಲಿನ ಪುಡಿಯನ್ನು ಸವರಿ ಅದನ್ನು ಉಟ್ಟುಕೊಂಡು ನೆರೆದ ಸಮೂಹಕ್ಕೆ ಊಟ ಬಡಿಸಲು ಆಗ್ರಹಿಸಿದರಂತೆ. ನುಣುಪಾದ ಬಳಪದ ಹುಡಿಯಿಂದಾಗಿ ಅವಳ ಸೀರೆ ಜಾರಿ ಅವಳಿಗೆ ಅವಮಾನ ಮಾಡುವ ಹುನ್ನಾರ ವಿತ್ತಂತೆ. ಸಹಜವಾಗಿ ಸೂಕ್ಷ್ಮ ಬುದ್ಧಿಯವಳಾದ ಅವಳು ಆ ಸೀರೆಯನ್ನು ತೆಗೆದು ಕೊಂಡು ತನ್ನ ಕಂಕುಳ ಬಳಿ ಬಲವಾದ ಗಂಟು ಬಿಗಿದು ಸೀರೆ ಜಾರದ ಹಾಗೆ ಸುತ್ತಿಕೊಂಡಳಂತೆ(ಕೊಡವ ಮಹಿಳೆಯರ ಹಾಗೆ)ಅದೇ ಮುಂದೆ 'ಗಂಡೀಚೀರೆ' ಎಂದು ಹೆಸರು ವಾಸಿಯಾಯಿತು. (ಗಂಟು ಹಾಕಿದ ಸೀರೆ?)ಇತ್ತೀಚಿನವರೆಗೆ ಸಂಕೇತಿಗಳ ಮನೆಯ ಹಿರಿಯ ಮಹಿಳೆಯರು ಇಂತಹ ಸೀರೆ ಉಡುತ್ತಿದ್ದರು. ಲಾಗಾಯ್ತಿನಿಂದಲೂ, ಹೆಣ್ಣಿನ ಆತ್ಮ ಸ್ಥೈರ್ಯ, ಎದೆಗಾರಿಕೆ, ಬುದ್ಧಿವಂತಿಕೆಗಳು ಎಸೆಯುವ ಸವಾಲುಗಳನ್ನು ಎದುರಿಸಲಾರದ ಪಿತೃಪ್ರಧಾನ ವ್ಯವಸ್ಥೆ ಹೀಗೆ ಹೆಣ್ಣಿನ ಸೀರೆ ಕಳಚಿ ಅವಮಾನ ಮಾಡುವ, ಹೀಗೆ ಮಾಡುವುದರ ಮೂಲಕ ಅವಳನ್ನು ಹಣಿಯುವ ಕುಟಿಲೋಪಾಯಗಳನ್ನು ಹೆಣ್ಣಿನ ಮೇಲೆ ಎಸಗುತ್ತಲೇ ಇದೆ. ಇದಕ್ಕೆ ನಮ್ಮ ದ್ರೌಪದಿಯ ಕತೆಯೇ ಒಂದು ಪ್ರತೀಕ. ಅದು ಇಂದೂ ಕೂಡ ಮುಂದುವರೆಯುತ್ತಿರುವುದು ಅತ್ಯಂತ ವಿಷಾದದ ಸಂಗತಿ. June 2015 ನಮ್ಮ ಕಾಲದ ಅಪರೂಪದ ಕವಿ ವಿದ್ವಾಂಸ ಶ್ರೀ ಆನಂದ ಝುಂಜರವಾಡರ "ಬೆಂಚಿಲ್ ರಸ್ತೆಯ ಕವಿತೆಗಳ" ಬಗ್ಗೆ ಪಲ್ಲವ ಪ್ರಕಾಶನ ಹಾಕಿದ ಪೋಸ್ಟ್ ನೋಡಿ ಬಹಳ ಹಿಂದೆ ಈ ಸಂಬಂಧವಾಗಿ ಝುಂಜರವಾಡರಿಗೆ ಬರೆದ ಪತ್ರವನ್ನು ಇಲ್ಲಿ ಹಾಕುತ್ತಿದ್ದೇನೆ. ಝುಂಜರವಾಡರು ನಮ್ಮ ಅಪ್ತ ಮಿತ್ರರೂ ಹೌದೆನ್ನಲು ತುಂಬಾ ಖುಷಿಯಾಗುತ್ತದೆ, ಮಾನ್ಯರಾದ ಆನಂದ ಝುಂಜರವಾಡ ಅವರೇ, ನಮಸ್ಕಾರಗಳು. ನಿಮ್ಮ ಕವಿತೆಗಳು ಬಂದು ಬಹಳ ದಿವಸಗಳಾದವು. ತಡವಾಗಿ ಪ್ರತಿಕ್ರಿಯಿಸುತ್ತಿದ್ದೇನೆ ಕ್ಷಮಿಸಿ. ನೀವು ಪ್ರೀತಿಯಿಂದ ಕಳುಹಿಸಿದ “ಬೆಂಚಿಲ್ ರಸ್ತೆಯ ಕವಿತೆಗಳನ್ನು” ಕೈಗೆತ್ತಿಕೊಳ್ಳುವುದೇ ಒಂದು ಸಾಹಸ. ಅದಕ್ಕೆ ಸಾಕಷ್ಟು ಪೂರ್ವ ತಯಾರಿಯೂ ಬೇಕು. ಈಗ ನೋಡಿಯೇ ಬಿಡೋಣವೆಂದು ಓದುವ ಪ್ರಯತ್ನಮಾಡುತ್ತಿದ್ದೇನೆ. (ಒಂದು ತಿಂಗಳಿನಿಂದ) ಇಷ್ಟು ಅಮೂರ್ತವಾಗಿ, ಸಂಕೀರ್ಣವಾಗಿ ಕವಿತೆ ಬರೆಯುವವರು ಈಗ ಕಡಿಮೆ. ಈಗ ಎಲ್ಲವೂ ಮಾರುಕಟ್ಟೆಯ ಅವಸರಕ್ಕೆ ಮೂರು ಮೊಳ ನೇಯ್ದುಹೊರಬರುವ ಕವಿತೆಗಳೇ ಆಗಿವೆ. ಇಂದಿನ ಇಂತಹ ಅವಸರದ ಸೃಜನಶೀಲವ್ಯಾಪಾರದ ವ್ಯಂಗ್ಯವನ್ನು ನೀವೂ ಇಲ್ಲಿ ಗಮನಿಸಿದ್ದೀರಿ (ಬದನೆಕಾಯಿ ಪುರಾಣ). ಈ ಕವಿತೆಗಳು ನಮ್ಮನ್ನು ಜಿಜ್ಞಾಸೆಗೆ ಹಚ್ಚುತ್ತವೆ. ಅರ್ಥದ ಆಚೆಗೇ ನಿಂತುಬಿಡುತ್ತದೆ. ಕವಿತೆಗೆ ಅರ್ಥ ಹಚ್ಚುತ್ತೇನೆ ಎಂದರೆ ಅದು ಅಹಂಕಾರದ ಮಾತಾಗುತ್ತದೆ. ನಿಮ್ಮ ಕವಿತೆಗಳ ಓದು ಒಂದು ಅನಿರ್ವಚನೀಯ ಅನುಭವವನ್ನು ಕೊಟ್ಟಿತು, ಅದನ್ನು ಮಾತುಗಳಲ್ಲಿ ಇಳಿಸಲಿ ಹೇಗೆ? ಕವಿತೆಗೆ ಅರ್ಥವಿಲ್ಲ ಎನ್ನುವುದೂ ಒಂದು ಅರ್ಥವೇ ಎಂದೂ ನೀವೇ ಹೇಳುತ್ತೀರಲ್ಲವೇ? ರಾಜಶೇಖರ್ ಅವರು ಅದನ್ನೇ “ಕವಿತೆಯಲ್ಲಿ ಅಪಾರ್ಥವೂ ಒಂದು ಅರ್ಥವೇ” ಎನ್ನುತ್ತಾರೆ. ಅಮೂರ್ತವನ್ನು ಮುಟ್ಟುವುದಾದರೂ ಹೇಗೆ? ನಮಗೆ ಪರಿಚಿತವಾದ ಮೂರ್ತ ಕಲ್ಪನೆಗಳಿಂದ ಮಾತ್ರವೇ ಮುಟ್ಟುತ್ತೇವೆ ಎಂದರೆ ಕವಿತೆಗೆ ಅಪಾರ್ಥವನ್ನೇ ಹಚ್ಚುತ್ತೇವೆ ಎಂದೇ ಆಗುತ್ತದಲ್ಲವೇ? ಈ ಎಲ್ಲ ಕವಿತೆಗಳಲ್ಲಿ ಏನೋ ಒಂದು ರೀತಿಯ chaos ಇದ್ದ ಹಾÀಗೆ ಕಾಣುತ್ತದೆ. chaos ನಿಂದಲೇ cosmos ನ್ನು ಕವಿತೆ ರೂಪಿಸುತ್ತದೆ ಎಂದು ಅರವಿಂದ ನಾಡಕರ್ಣಿಯವರು ಹೇಳುತ್ತಿದ್ದುದು ನೆನಪಾಗುತ್ತದೆ. ಇಂದಿನ ಪ್ರಕ್ಷುಬ್ಧ ವರ್ತಮಾನವೇ ಹಾಗಿದೆ. ಅಥವಾ ಎಲ್ಲಾ ಕಾಲದಲ್ಲಿಯೂ ಇದು ಹೀಗೆಯೇ ಇದ್ದಿತೇ? ನಿಮ್ಮ “ನಸುಕಿನಿಂದ ನಸುಕಿಗೆ” ಕವಿತೆ ಓದಿದಾಗ ಹೀಗೆ ಎನಿಸಿತು. ಜಿ.ಎಸ್.ಎಸ್. ಅವರ ‘ಮಬ್ಬಿನಿಂದ ಮಬ್ಬಿಗೆ’ ಕವಿತೆ ನೆನಪಾಯಿತು. ಇದು ಚರಿತ್ರೆಯ ಪಯಣದ ಹೆಜ್ಜೆ .ಇಲ್ಲಿ ಎಂತಹ ghostly ಯಾದ ಚಿತ್ರವನ್ನು ಕೊಡುತ್ತೀರಿ? “ತೊಗಲ ಲಟ್ಟಿಸಿ ಕೊಬ್ಬಿದ ನೆಣದ ಹುರಿದು ತುಂಬಿ ತಟ್ಟಿ ಕರೆವ ಗಣಹೋಮದ ಕುರುಕುಲು ತಿಂಡಿ” ಇದು ಈ ಕಾಲದ ಉಮ್ಮಳವೇ? ‘ಪಾಡಿನುಮ್ಮಳ’À ಎನ್ನುವುದು ಕಾಲದ ಉಮ್ಮಳವೇ ಅಲ್ಲವೇ? ಎಲ್ಲ ಲೌÀಕಿಕ ವ್ಯಾಪರಗಳನ್ನೂ ದಾಖಲಿಸುತ್ತಾ ಮುದ್ರಿಸುತ್ತಾ ಹೋಗುವ “ಸೂರ್ಯ ಮುದ್ರಣಾಲಯವೇ ಬಂದಾಗುವ” ಮನುಷ್ಯನ ಲಾಲಸೆಯನ್ನು ಎತ್ತಿತೋರಿಸುವ ವ್ಯಂಗ್ಯ. ಇದು ಆದುನಿಕತೆಯ ಶಾಪವೇನೋ?- ಲಾಲಸೆ ಮತ್ತು ಭೋಗಿಸುವ ದೈಹಿಕ ಕ್ಷಮತೆ ಇವೆರಡರ ನಡುವೆÀ ತಾಳಮೇಳವಿಲ್ಲವಾಗಿ ಮನುಷ್ಯ ಎರಡು ದೋಣಿಯ ಮೇಲೆ ಕಾಲಿಟ್ಟು ಪಯಣಿಸುವ ಅಪಾಯದಂಚಿಗೆ ಬಂದು ನಿಂತಿರುವುದು. ಎಲ್ಲವಕ್ಕೂ ಅವಸರದ ನಡಿಗೆ. ಕಾಯುವ ತಾಳ್ಮೆ ಇಲ್ಲ ಹದವಾಗಿ ಬೆಂದು ಪಾಕ ಗೊಳ್ಳುವ ಸಹಿಷ್ಣುತೆ ಇಲ್ಲ. Short cut ದಾರಿ EzÀÄ short circuit ನ ಅಪಾಯವನ್ನೂ ತೋರಿಸುತ್ತದೆ. ಎಲ್ಲವನ್ನೂ ನಮ್ಮ ಮೂಗಿನ ನೇರಕ್ಕೇ ವ್ಯಾಖ್ಯಾನಿಸಿ, ವಿಂಗಡಿಸಿ, ಅವಕ್ಕೆ ಒಂದು ಹೆಸರು ಕೊಟ್ಟು, ತೀರ್ಪು ಬರೆದುಬಿಟ್ಟರೆ ಮುಗಿಯಿತು. ಸತ್ಯದಂತೆ ಕವಿತೆ ಯಾವ ವ್ಯಾಖ್ಯಾನಕ್ಕೂ ನಿಲ್ಲದು, ನಮ್ಮ ಗ್ರಹಿಕೆಯಾಚೆಗೇ ಅದು ಮೀರಿ ನಿಲ್ಲುವುದು ಎಂಬ ನಿಜ ನಿಮ್ಮ ಕವಿತೆಗಳ ಓದಿನಿಂದ ನನಗೆ ಪ್ರಾಪ್ತವಾಯಿತು. ಎಲ್ಲವೂ ಹಾಳಾಗಿದೆ ಎಂದು ಷರಾ ಹೊರಡಿಸಿಬಿಟ್ಟರೆ ಅದರಲ್ಲೇನು ದೊಡ್ಡಸ್ತಿಕೆ ಇದೆ? ಎಲ್ಲವನ್ನೂ ಮತ್ತೆ ಸರಿಪಡಿಸಬಹುದು, ಸುಧಾರಿಸಬಹುದು ಸೃಜನಶೀಲವಾದುದಕ್ಕೆ ಸಾವಿಲ್ಲ ಅದು ಸಿಮೆಂಟಿನ ಗೋಡೆ ಬಿರುಕಿನಲ್ಲಿಯೂ ಕುಡಿಯೊಡೆಯುವ ಚಿಗುರಿನಂತೆ. ಯಾವ ಶಕ್ತಿಯೂ ಒಳ್ಳೆಯದನ್ನು ದಮನಗೊಳಿಸಲಾರದು ಎನ್ನುವ ಆಶಾವಾದವೂ ಇಲ್ಲಿ ಕಂಡು ಬರುವುದು ಮಹತ್ವವಾದುದು. “ಬಾನ-ತಾಣದಲಿ ನಕ್ಷತ್ರದಾಚೆಗೆ ನೀಲಾಂಜನ ಬೆಳಗಿ ಮುಗಿಲ ಮುತ್ತೈದೆ ಮುರಿದು ಹೊಸತೊಂದೆsÉ ನಿರಿಗೆ ಘಳಿಗಿ” (ನಭೋ ನಾಟ್ಯ) ಈ ಸಾಲುಗಳು ಹೊಸ ಬದುಕೊಂದು ಪಲ್ಲವಿಸುವ ಮುನ್ಸೂಚನೆಯಾಗಿ ಕಾಣುತ್ತಾ ಒಂದು ರೀತಿಯ ಭೂಮಾನುಭೂತಿಯನ್ನು ಉಂಟುಮಾಡುತ್ತವೆ. ಇಂಗ್ಲೆಂಡಿನಲ್ಲಿ ಕುಳಿತು ಬರೆದ ಈ ಕವಿತೆಗಳು ಭಾರತದತ್ತ ಮುಖಮಾಡಿವೆ. ಆದುದರಿಂದಲೇ ಭಾರತದ ಚರಿತ್ರೆ ಹಾಗೂ ವರ್ತಮಾನಗಳ crisis ನ್ನು ನೋಡುವ ನೋಟಕ್ಕೆ ಒಂದು ರೀತಿÀಯ ವಸ್ತುನಿಷ್ಠ ದೂರವೂ ದೊರಕಿದೆ. ನಿಮ್ಮ ಕವಿತೆಗಳನ್ನು ಅರ್ಥಮಾಡಿಕೊಳ್ಳಲು ಒಂದೆರೆಡು ಓದು ಸಾಲದು. ಕಾಲದ ಧಾವಂತದಲ್ಲಿರುವವರಿಗೆ ಕವಿತೆಗೆ ಕೊಡಲು ಸಮಯವೆಲ್ಲಿದೇ? ಎಲ್ಲವೂ ಇನಸ್ಟಂಟ್ ಆಗಿಯೇ ದೊರಕಬೇಕು ಎನ್ನುವ ಕಾಲದಲ್ಲಿರುವವವರಿಗೆ ಕವಿತೆಯ ಒಳಹೊಕ್ಕು ಅದನ್ನು ಆತ್ಮಸಾತ್ ಮಾಡಿಕೊಳ್ಳುವ ತಾಳ್ಮೆ ಎಲ್ಲಿದೆ? ನಿಮ್ಮ ಕವಿತೆಗಳನ್ನು ಓದಿದಾಗ ನನಗೆ ಹೊಳೆದ ಅನಿಸಿಕೆಗಳು ಇವು. ಇದು ನನ್ನ ಗ್ರಹಿಕೆಯ ಮಿತಿ. ನನ್ನ ಅಧ್ಯಯನ ಹಾಗೂ ಕಾಣ್ಕೆಯ ಮಿತಿಯೂ ಹೌದು. ನಮ್ಮ ನಮ್ಮ ಸಾಮರ್ಥ್ಯಕ್ಕೆ ತಕ್ಕ ಹಾಗೆ ಕವಿತೆ ತನ್ನ ರಹಸ್ಯವನ್ನು ಬಿಟ್ಟುಕೊಡುತ್ತದೆ. ಕವಿತೆ, ನಮ್ಮ ಕಾಣ್ಕೆಯ ಆಳ ಅಗಲಗಳನ್ನು ಅಳೆಯುವ ಮಾನದಂಡವೂ ಹೌದು. ಇಂತಹ ಸುಂದರ ಕವಿತೆಗಳನ್ನು, ನಿಮ್ಮ ಕೂಸುಗಳನ್ನು ನನ್ನ ಬಳಿ ಕಳುಹಿಸಿದ್ದಕ್ಕೆ ಬಹಳ ಧನ್ಯವಾದಗಳು. ಅವುಗಳೊಡನೆ ಆಡುವಾಗ ದೊರಕಿದ ಖುಷಿಯನ್ನಂತೂ ಮರೆಯಲಾರೆ. ನಮಸ್ಕಾರಗಳು. June ಹಾಜಿಮಲಂಗ್ ದರ್ಗಾ, ಪಂಚಮುಖಿ ಮಹಾದೇವ್ ಮಂದಿರ್, ಶನಿ ಮಂದಿರ್ ಎಲ್ಲವೂ ಒಂದು ಕಿ.ಮೀ ಅಳತೆಯಲ್ಲಿ ಪ್ರಶಾಂತವಾಗಿ ನೆಲೆಸಿವೆ. ಒಂದಿನಿತೂ ಸಪ್ಪಳ ವಿಲ್ಲ...... ದೇವರುಗಳ ನಡುವೆ ಜಗಳವಿಲ್ಲ. ಅವು ಕಲ್ಲು ದೇವರುಗಳು ಎಂದು ವಾದಿಸಬಹುದು. ಅವುಗಳನ್ನು ಸೌಹಾರ್ದದ ಪ್ರತೀಕವಾಗಿ ನೋಡಿದರೆ, ಹಾಗೆ ಬದುಕನ್ನು ರೂಪಿಸಿಕೊಂಡರೆ ನಾವೂ ಕೂಡ ಜಗಳವಿಲ್ಲದೇ ಬದುಕಬಹುದು. ನನ್ನ ಸೊಸೆ ಮರಾಠಿ, ಆದರೆ ಕನ್ನಡ ಚೆನ್ನಾಗಿ ಮಾತನಾಡುತ್ತಾಳೆ. ನಾವಿಬ್ಬರೂ ಗಂಡ ಹೆಂಡತಿ ಬೇರೆ ಬೇರೆ ಪಂಗಡಗಳಿಗೆ ಸೇರಿದವರು. ನಮ್ಮ ಬೀಗರದ್ದೂ ಕೂಡ ಮರಾಠಿ ಮತ್ತು ಕನ್ನಡ ಸಂಗಮ. 'ನಿಮ್ಮ ಮನೆಯಲ್ಲಿಯೇ ಒಂದು ರೀತಿ national integration ಇದೆ' ಎಂದು ಸ್ನೇಹಿತರು ಕಿಚಾಯಿಸುತ್ತಾರೆ. ನಾಲ್ಕು ಪಂಗಡಗಳು ಸೇರಿರುವ ಈ ಕೌಟುಂಬಿಕ ಬದುಕಿಗೆ ಯಾವುದೂ ಕೂಡ ತೊಡಕಾಗಿಲ್ಲ. ನಮ್ಮ ನಡುವೆ ಏನಾದರೂ ಭಿನ್ನಾಭಿಪ್ರಾಯಗಳಿದ್ದರೆ ಅದು ಸಾಮಾನ್ಯವಾದ ಅತ್ತೆ ಸೊಸೆಯ ನಡುವಿನ ಭಿನ್ನಾಭಿಪ್ರಾಯವೇ ಹೊರತು ಕನ್ನಡ ಮರಾಠಿಯ ನಡುವಿನದ್ದಲ್ಲ. ಮರಾಠೀ ಮಹಿಳೆಯರ ಕೆಚ್ಚು, ಸ್ವಾಭಿಮಾನ ಎಲ್ಲರಿಗೂ ಎಂದಿಗೂ ಆದರ್ಶ ಪ್ರಾಯವೇ. ಪುಸ್ತಕ ಪ್ರಯೋಜನ : ಸದ್ಗುರು ಜಗ್ಗಿ ವಾಸುದೇವ್ ಅವರು ಅಜ್ಞಾನವೇ ಒಳ್ಳೆಯದು ಎನ್ನುತ್ತಾರೆ. ಜ್ಞಾನಕ್ಕಾದರೆ ಒಂದು ಮಿತಿ ಇದೆ ಆದರೆ ಅಜ್ಞಾನಕ್ಕೆ ಮಿತಿಯೇ ಇಲ್ಲ. ಅಜ್ಞಾನಕ್ಕೆ ಜ್ಞಾನದೆಡೆಗೆ ಚಲಿಸಬೇಕೆಂಬ ಸಣ್ಣ ಸಾಧ್ಯತೆಯಾದರೂ ಇರುತ್ತದೆ. ಆದರೆ ಜ್ಞಾನಕ್ಕೆ ಹೊಸತನ್ನು ನೋಡುವ ಅಂತಹ ಎಲ್ಲ ಬಾಗಿಲುಗಳೂ ಮುಚ್ಚಿರುತ್ತವೆ.ಎಂದು ಅಭಿಪ್ರಾಯ ಪಡುತ್ತಾರೆ. 'ಓದುವುದೆಂದರೆ' ಎನ್ನುವ ಮರಾಠಿ ಮೂಲದ ಕೃತಿಯಲ್ಲಿ ಆನಂದ ಜೋಷಿಯವರು "ಸಾಕ್ಷರತೆ ಎಂದರೆ ಕೇವಲ ಅಕ್ಷರ ಜ್ಞಾನವಲ್ಲ. ಸಂಬಂಧಪಟ್ಟ ವಿಷಯಗಳ ಜ್ಞಾನಕೂಡ ಹೌದು. ನಾವು ಎಷ್ಟೋ ವಿಷಯಗಳಲ್ಲಿ ಅನಕ್ಷರರಾಗಿರುತ್ತೇವೆ" ಎಂದು ಹೇಳುತ್ತಾರೆ. ಓದು ಅಥವಾ ಜ್ಞಾನ ನಮ್ಮಲ್ಲಿ ವಿನಯವನ್ನು ಬೆಳೆಸಬೇಕು ಎಂಬುದು ಲಾಗಾಯ್ತಿನಿಂದ ಬಂದ ನುಡಿ. 'ನನ್ನ ಆಭಿಪ್ರಾಯ ನನಗೆ ಸರಿ ನಿನ್ನ ಅಭಿಪ್ರಾಯವೂ ಸರಿಯಿರಬಹುದು ಅದನ್ನು ನಾನು ಗೌರವಿಸುತ್ತೇನೆ', ಎನ್ನುವುದು ನಿಜವಾದ ಜ್ಞಾನಿಗಳ ಧೋರಣೆ. ಒಂದೋ ಎರೆಡೋ ವಿಷಯಗಳನ್ನು ಸ್ವಲ್ಪ ಜಾಸ್ತಿ ಓದಿಕೊಂಡ ಮಾತ್ರಕ್ಕೆ ನಾವು ಸಕಲಕಲಾ ವಲ್ಲಭರಂತೆ ಇತರರನ್ನು ಜಂಘೀ ಕುಸ್ತಿಗೆ ಎಳೆಯುವ ಪೈಲ್ವಾನರಂತೆ ಅಖಾಡಾಕ್ಕೆ ಎಳೆಯುವುದು ಪ್ರಬುದ್ಧತೆಯ ಲಕ್ಷಣವೆಂದೇನೂ ಎನಿಸಿಕೊಳ್ಳುವುದಿಲ್ಲ. ನಮ್ಮ ತಾತನ ಕಾಲದಲ್ಲಿ ವಾದ ವಿವಾದಗಳು ಹೀಗೆಯೇ ನಡೆಯುತ್ತಿದ್ದುವಂತೆ.ಎದುರಾಳಿಯನ್ನು ಹಣಿಯುವುದಷ್ಟೇ ಅವನ ಗುರಿ. (ತಾನು ಎಲ್ಲಾ ಬಲ್ಲೆ ಎದುರಿಗೆ ಇರುವುವವನು ಶತಮೂರ್ಖ, ಅವನಿಗೆ ಏನು ಗೊತ್ತು ಮಹಾ ಎನ್ನುವ ದುರಹಂಕಾರ ಮೂಲವಾದುದು) ಯಾಜ್ಞವಲ್ಕ್ಯ ಗಾರ್ಗಿಗೆ ಧಮ್ಕಿ ಹಾಕಿದ ಉದಾಹರಣೆ ಕೂಡಾ ನಮ್ಮಲ್ಲಿದೆಯಲ್ಲಾ? ಪುಸ್ತಕದ ಓದು ನಮ್ಮನ್ನು ಬೆಳೆಸದಿದ್ದರೆ, ನಮ್ಮನ್ನು ದುರಹಂಕಾರಿಗಳನ್ನಾಗಿ ಮಾಡಿದರೆ ಅಂತಹ ಲಕ್ಷ ಕೋಟಿ ಪುಸ್ತಕಗಳನ್ನು ಓದಿ ಪ್ರಯೋಜನವಾದರೂ ಏನು? ಶಂಕರಚಾರ್ಯ ಮತ್ತು ಮಂಡನ ಮಿಶ್ರಾ ಅವರ ನಡುವೆ ನಡೆದ ಸಂವಾದ ಎಂತಹ ಆರೋಗ್ಯ ಪೂರ್ಣವಾದುದಾಗಿತ್ತು ಎಂಬುದರ ಬಗ್ಗೆ ಒಂದು ಚರ್ಚೆ ಈಚೆಗೆ ಯೂಟ್ಯೂಬ್ ನಲ್ಲಿ ಹಬ್ಬಿತ್ತು. ಸ್ವತಃ ಮಂಡನ ಮಿಶ್ರ ತಮ್ಮ ಹೆಂಡತಿಯನ್ನೇ ನಿರ್ಣಾಯಕಳನ್ನಾಗಿ ಕೂರಿಸಿ, ಅ ಹೆಂಡತಿ ಪತಿಯ ಸೋಲನ್ನು ಘೋಷಿಸುವ, ಯಾವುದೇ ಪೂರ್ವಾಗ್ರಹವಿಲ್ಲದ ಚರ್ಚೆಯ ಸ್ವರೂಪವನ್ನು ಅಲ್ಲಿ ಪ್ರಶಂಸಿಸಲಾಗಿತ್ತು. ನಮ್ಮ ಚರ್ಚೆಗಳ ಸ್ವರೂಪ ಕೂಡ ಹೀಗೆ ಇರಬೇಕು ಎನ್ನುವುದಕ್ಕೆ ಇದು ಒಂದು ಮಾದರಿಯೂ ಹೌದು. ಆವೇಶಕ್ಕೆ ಒಳಗಾಗಿ ಎದುರಾಳಿಯನ್ನು ಮನಬಂದಂತೆ ಬೈದಾಡುವುದೆಂದರೆ ಅದು ದೌರ್ಬಲ್ಯದ ಪ್ರತೀಕ. ಆದುದರಿಂದ ದುರಹಂಕಾರದ ಜ್ಞಾನಕ್ಕಿಂತ ಅಜ್ಞಾನವೇ ಮೇಲು ಎನ್ನುವ ಸದ್ಗುರು ಅವರ ಮಾತು ಸರಿ. April.25 ಕಾವ್ಯ ಸಂವಾದ : “ರಾಮನುಜನ್ ರೆಟೆರಿಕ್ ಸೋಗಿನ ಕಟ್ಟಾ ವಿರೋಧಿ. ಸೋಗಿಲ್ಲದೆ ಮಾತಾಡಬಲ್ಲವರಾದ್ದರಿಂಡ ಕಾವ್ಯದಲ್ಲಿ ಮಾಂತ್ರಿಕತೆಗೆ ಮೊರೆ ಹೋದವರು. ರಾಮಾನುಜನ್ನರ ಕಾವ್ಯದಿಂದ ಅತೃಪ್ತರಾಗುವುದು ಸಹಜ. ಆದರೆ ಸೋಗಿನ ಜನ ಅವರನ್ನು ಸಪ್ಪೆಯೆಂದು ತಿಳಿಯುವುದು ಅರ್ಥಹೀನ” -ಯು.ಆರ್. ಅನಂತಮೂರ್ತಿ. ಕುಂತ್ಯಾಡಿ ನಿತೀಶ್ ರ ವರು ಕಳುಹಿಸಿದ ಈ ಮಾತುಗಳನ್ನು ನಾನು ಪ್ರಸಿದ್ಧ ಕವಿ ಚಿಂತಕ ಝುಂಜರವಾಡ ಅವರಿಗೆ ಕಳುಹಿಸಿದಾಗ ನಮ್ಮಿಬ್ಬರ ನಡುವೆ ನಡೆದ ಮಾತುಕತೆಯನ್ನು ಹಾಗೆಯೇ ಹಂಚಿಕೊಳ್ಳುತ್ತಿದ್ದೇನೆ. ಝುಂ : ಸೋಗಿನ ಜನ ಕಾವ್ಯದ ಮಾಂತ್ರಿಕತೆಯನ್ನೂ ದ್ವೇಷಿಸುತ್ತಾರೆ. ಕಾವ್ಯದ ಜೊತೆ ಸಂವಾದ ಮಾಡುವವರಿಗಿರಲಿ, ಚಾಟ್ ಮಾಡುವವರಿಗೂ, ಅವರನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆಯಿಲ್ಲ. ನಾನು: ಸರ್ ಈಗ ಹೆಚ್ಚಿನ ಕವಿತೆಗಳು ಸಂತೆಗೆ ಮೂರು ಮೊಳ ಹೊಸೆಯುವಂತೆ ಅವಸರದ ಕ್ರಿಯೆಗಳೇ ಆಗಿವೆಯಲ್ಲಾ? ಝುಂ : ಅವು ಈ ಕಾಲದ ತ್ಯಾಜ್ಯಗಳು. ಅವುಗಳಿಂದ ವಿಕಿರಣಗೊಳ್ಳುವ ವಿಶಾನಿಲದಿಂದ ನಾವು ಎಚ್ಚರದಿಂದಿರಬೇಕು. " ಕಾಲದ ಚೂರಿ ಕತ್ತರಿಸಿಬಿಟ್ಟಿದೆ ಕವಿತೆಯ ಕಣ್ಣು ಮುಖಗಳ ರುಂಡವ ಸೂರ್ಯನ ಮೇಲ್ಮನವಿ ತಿರಸ್ಕೃತ' ಚಂದ್ರಗೆ ವಿಧಿಸಿಬಿಟ್ಟಿದೆ ದಂಡವ. ನಾನು; ನಿಮ್ಮ ಮಾತು ನಿಜ ಸರ್ ಆದರೆ ಇಂದಿನ ಅವಸರದ ಯುಗದಲ್ಲಿ ಒಪ್ಪಿಕೊಳ್ಳವ ಸೌಹಾರ್ದತೆ, ವಿನಯ ಯಾರಿಗಿದೆ? ಇಂದು ಒಂದು ಕವಿತಾ ಸಂಕಲನ ಬಂದರೆ ನಾಳೆ ಅದಕ್ಕೊಂದು ಪ್ರಶಸ್ತಿ. ಜೊತೆಗೆ ತಮ್ಮದೇ ಹೊಗಳು ಭಟ್ಟರ ಗುಂಪು ಬೇರೆ! ಝುಂ : ಈ ಜಗನ್ನಾಥನ ರಥ ಈಗ ಅವಸರ್ಪಿಣಿ ಗತಿಯಲ್ಲಿದೆ. ಉತ್ಸರ್ಪಿಣಿ ಯುಗವೂ ಮುಂದೆ ಬಂದೀತು. "ರಣ ರಣ ಬಿಸಿಲು.ಜನ್ಮಾಂತರದ ಸೇಡು ತೀರಿಸಿ ಕೊಳ್ಳುವ ಸೂರ್ಯ. ಕತ್ತಲೆಯ ಕಪ್ಪು ಕೇಕ್ ಕಟ್ ಮಾಡಲು ಹೊಂಬೆಳಕಿನ ಬಂಗಾರದ ಚಾಕು ವಿಗೆ ಹೊಸ ಹುರುಪು. ಪ್ರತಿ ನಿತ್ಯ ಅನಂತ ಸಂಕಟಗಳ ಹುಟ್ಟು ಹಬ್ಬ.ನೆನೆ-ರುಬ್ಬಿ ಉಬ್ಬುವ ಶುಭ್ರ ಹಬ್ಬಗಳ ತಟ್ಟೆಗೆ ಬಡಿಸಿ ಕೊಂಡ ನಂಬಿಕೆಯ ಕೊಸಂಬರಿಗೆ ಉಪ್ಪು ಜಾಸ್ತಿಯಾಗಿ ಅಪಧಮನಿ ಗಳಲ್ಲಿ ಹರಿಯುತ್ತಿರುವದೆಲ್ಲ ಬೆವರ ಪಾನಕ,ನಿಟ್ಟುಸಿರ ಒಲೆ ಬೆಂಕಿ,ಒತ್ತಡ ಹೆಚ್ಚಾಗಿ ಪ್ರಸ್ತದ ದಿನವೂ ಬಾಗಿಲು ತೆರೆದಿಟ್ಟು ಕೊಂಡೆ ಅಪ್ಪಿ ಕೊಳ್ಳಬೆಕಿದೆ ಒಪ್ಪಾದವರೆಂದು ತಪ್ಪು ತಿಳಿದ ಹೆಪ್ಪು ಗೊಂಡ ಮಂದಿ.ತುಪ್ಪಳ ಮಾತ್ರ ತೂಗುವದಿಲ್ಲ ಕಸಾಯಿಯ ಧಣಿ,ಮಾಂಸವನ್ನೂ ಹಾಕಬಾರದಲ್ಲಿ ಕೈ ಹಾಕಿ ತೂಗುತ್ತಾನೆ ವಿಲಂಬಿ ಎಂಬ ನಂಬಿಕೆ-ದ್ರೋಹಿ.ಭಾವದ ಬೆಸುಗೆ ಬಿಚ್ಚಿದರೆ ಶಬ್ದದ ಕೂಡು ಕುಟುಂಬಕ್ಕೆ ನೆಲೆ ಯಾದರು ಎಲ್ಲಿದೆ? ನಾನು ಕವಿತೆಯ ಛತ್ತರಿ ಕಾಪಾಡುತ್ತದೆ ಎಂದು ಕೊಂಡಿದ್ದೆ.ಇಲ್ಲ,ಈಗ ನಾನು ಜಾರುತ್ತಿರುವ ಜಗತ್ತಿನಲ್ಲಿ ಸಾವೂ ಇಲ್ಲ,ಇಲ್ಲ ವೈಖರಿಯ ನಿದ್ದೆ" ನಾನು : ವಿಲಂಬಿಯ ಮಾರಣ ಹೋಮಕ್ಕೆ ಕವಿತೆಯ ಆಹುತಿ !! "ಶಿವೇತರಕ್ಷತಯೇ. ಕವಿತೆ ಕಾಪಾಡುವುದಿಲ್ಲವೇ ಸರ್? ಝುಂ :ಆ ಯೋಗ್ಯತೆ ಈ ಬೆವರುವ, ಕಣ್ಣೀರಿಡುವ, ನೆಕ್ಕುವ ಬಿಕ್ಕುವ ಜೀವಕ್ಕೆ ಎಲ್ಲಿದೆ ಮೇಡಂ? ನಾನು : ನೀವೇ ಹೀಗೆ ಹೇಳಿದರೆ......? ಝುಂ : ಇಲ್ಲ ಮೇಡಂ ನಾನು ಸೋತಿದ್ದೇನೆ. ಕವಿತೆಯನ್ನು ತಾಯಿಯೆಂದು ನೋಡುವ ಯೋಗ್ಯತೆ ಇಲ್ಲದವನಾಗಿದ್ದೇನೆ ಎಂದು ನಿಮ್ಮಂತಹ ಸೋದರ ಸೋದರಿಯರ ಎದುರು ಪಾಪ ಪ್ರಜ್ಞೆಯಿಂದ ಒಪ್ಪಿಕೊಂಡೇ ನಾನು ನಿರ್ಗಮಿಸುವ ಕಾಲ ಹತ್ತಿರ ಬಂದೇ ಬಿಟ್ಟಂತೆ ಎನಿಸುತ್ತಿದೆ. ನಾನು: ಕವಿತೆ ತಾಯಿಯೇ ಯಾಕೆ ಆಗಬೇಕು ಪ್ರೇಯಸಿ, ಗೆಳೆಯ ....ಇನ್ನೂ ಏನೇನೋ ಯಾಕೆ ಆಗಬಾರದು? ಝುಂ: ಎಲ್ಲ ಜೀವ ಕಾಮವೂ ದೇವಕಾಮವಾಗಿ ಮಾಗಲೆಂದೇ ಇರುವ ಪ್ರೋಸೆಸ್ ಗಳೆಂದು ಪು.ತಿ.ನ ಹೇಳುತ್ತಾರೆ. ಬೇಂದ್ರೆ " ಓ ತಾಯಿ ಮಾಯಿ ಶಿವಜಾಯಿ ಕಾಯಿ" ಎಂದೇ ಕೂಗುತ್ತಾರೆ.ಕುವೆಂಪುವಿಗೂ ತಾಯಿಯೇ ಆದರ್ಶ. ಕ್ರಿಯೆ ಪ್ರಕ್ರಿಯೆ ಆಗದಿದ್ದರೆ ಅದು ಕೇವಲ ಪ್ರತಿಕ್ರಿಯೆ ಆಗಿ ಮಾತ್ರ ಉಳಿದುಕೊಳ್ಳುತ್ತದೆ. ನಾನು: 'ಬಂದ ಬಾಗಿಲು ಮಣ್ಣು ಬಿಡುವ ಬಾಗಿಲು ಮಣ್ಣು ನಡುವೆ ಕಾಪಾಡುವುದು ತಾಯಕಣ್ಣು"- ಬಹುಶಃ ಕೆ.ಎಸ್.ನ ಅವರಿಗೂ ತಾಯಿಯೆಂದರೆ ಕವಿತೆಯೇ ಇರಬಹುದಲ್ಲವೇ? ಝುಂ: ಖಂಡಿತ ಕವಿತೆಯನ್ನು ನಮ್ಮ ಕವಿಗಳು ತಾಯಿ ಎಂದು ಭಾವಿಸಿದ್ದರು ಎನ್ನುವುದು ಝುಂಜರವಾಡರು ಮೇಲೆ ಉಲ್ಲೇಖಿಸಿದ ಕವಿತೆಗಳಿಂದ ಸ್ಪಷ್ಟವಾಗಿ ತಿಳಿಯುತ್ತದೆ. ಕವಿತೆ, ಕವಿಗೆ ಮತ್ತು ಓದುಗರಿಗೆ ಏಕಕಾಲಕ್ಕೆ ಹೊಸಜನ್ಮ ನೀಡುತ್ತದೆಯಾದ್ದರಿಂದ ಅದು ತಾಯಿ. ಈ ತಾಯಿ ಗುಣವನ್ನು ಪೋಷಿಸಿದರೆ ಮಾತ್ರ ಒಬ್ಬಳು ಕವಿಯಾಗಬಲ್ಲಳು. ಅವಸರಕ್ಕೆ ಹೊಟ್ಟೆಯಲ್ಲಿ ಬೀಜ ಮೊಳೆಯುವುದಿಲ್ಲ. ಹೆರಿಗೆಯಾಗುವುದಿಲ್ಲ. ಅದಕ್ಕೆ ಕಾಯಬೇಕು. ಕಾಯುವುದು ಎಂದರೆ ಮಾಗುವುದು. ತಾಯಿಯಾಗುವುದು ಎಂದರೂ ಮಾಗುವುದೇ. 'ಜೀವಕಾಮ' 'ದೇವಕಾಮ ಆಗಬೇಕು ಎಂಬುದರ ಅರ್ಥಕೂಡ ಇದುವೇ ಆಗಿರಬೇಕು. ಕಾಮ ಮಾಗಬೇಕು. ಇಲ್ಲಿ 'ದೇವ' ಯಾಕೆ ಬೇಕು ಎಂಬುದು ಇನ್ನೊಂದು ಚರ್ಚೆಯನ್ನೇ ಆಹ್ವಾನಿಸುವಂತಹದ್ದು. 'ಕೌಶಿಕ ಬೇಡ ಚೆನ್ನಮಲ್ಲಿಕಾರ್ಜುನ ಬೇಕು. ರಾಣಾ ಬೇಡ ಗಿರಿಧರ ಗೋಪಾಲನೇ ಬೇಕು' ಎನ್ನುವಷ್ಟು ಸರಳವಾಗಿ ಯಾಕೆ ಇರಬಾರದು? ಕೌಶಿಕ, ರಾಣಾ ಎಂದರೆ ಬಂಧನ. ಚೆನ್ನಮಲ್ಲಿಕಾರ್ಜುನ ಗಿರಿಧರ ಗೋಪಾಲ ಎಂದರೆ ಬಿಡುಗಡೆ. ಆತ್ಯಂತಿಕ ಬಿಡುಗಡೆಗಾಗಿ ಹಾತೊರೆಯುವುದೇ ಕಾವ್ಯದ ಲಕ್ಷಣ. March -25 ಗುಬ್ಬಕ್ಕಾ ಗುಬ್ಬಕ್ಕಾ ಬಾಗಿಲು ತೆಗಿಯೇ..... ಅಂದಿನಿಂದ ಇಂದಿನವರೆಗೂ ಬಾಗಿಲು ತೆಗೆಯದಿರಲು ಗುಬ್ಬಕ್ಕಂಗೆ ಸಾವಿರ ನೆಪಗಳು. ಗುಬ್ಬಿ ಬಾಗಿಲು ತೆಗೆಯೋಲ್ಲ. ಸೂರಿಲ್ಲದ ಕಾಗೆ ಚಳೀಲಿ ನಡುಗೋದು ತಪ್ಪೋಲ್ಲ..ಮಕ್ಕಳಿಗೆ ಈ ಕತೆ ಹೇಳಿ...ಹೇಳಿ... ' ಮುಂಡೇದು ಕಾಗೆಗೆ ಹಂಗೇ ಆಗ್ಬೇಕು' ಅನ್ನಿಸೋ ಹಾಗೆ ಮಾಡಿಬಿಟ್ಟಿದ್ದೇವೆ. ಹಾಗೆ ನೋಡಿದರೆ ಎಲ್ಲ ದಿನಗಳೂ ಗುಬ್ಬಚ್ಚಿಗಳ ದಿನವೇ March -20 ಸಾಹಿತ್ಯದಲ್ಲಿ ಸ್ವಾಸ್ಥ್ಯ vs ಅಸ್ವಾಸ್ಥ್ಯ ಸಂವಾದಕ್ಕೊಂದು ಪ್ರತಿಕ್ರಿಯೆ: “ಅಸ್ವಸ್ಥ ಜಗತ್ತು : ಕನ್ನಡ ಹಾಗೂ ಮರಾಠಿ ಅಂತರ್ ಭಾರತಿ ಸಾಹಿತ್ಯ ಸಂವಾದ” ಎಂಬ ಎರಡು ದಿನಗಳ ಕಾರ್ಯಕ್ರಮವನ್ನು ಮೈಸೂರು ಅಸೋಸಿಯೇಷನ್ ಸಂಸ್ಥೆಯು, ಸಾನೆಗುರೂಜಿ ಟ್ರಸ್ಟ್. ಮುಂಬಯಿ ಇದರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದಿತು. ಸಿ.ಎನ್ ರಾಮಚಂದ್ರನ್ ಅವರು ಉದ್ಘಾಟಕರಾಗಿ ಹಾಗೂ ಮರಾಠಿಯ ಖ್ಯಾತ ಪತ್ರಕರ್ತ ಕುಮಾರ್ ಕೇತ್ಕರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಆನಂತರ ಎಸ್. ಆರ್ .ವಿಜಯಶಂಕರ್, ಬಿ.ಎನ್ ಸುಮಿತ್ರಾಬಾಯಿ ಹಾಗೂ ಮುಂಬಯಿ ದೈನಿಕ ‘ಕರ್ನಾಟಕಮಲ್ಲ’ದ ಪತ್ರಕರ್ತ ಚಂದ್ರಶೇಖರ ಪಾಲತ್ತಾಡಿಯವರು ಸಂವಾದದಲ್ಲಿ ಪಾಲ್ಗೊಂಡಿದ್ದರು. “ಸಂಪೂರ್ಣ ಸಾಮಾಜಿಕ ಸ್ವಾಸ್ಥ್ಯ ಎನ್ನುವುದು ಒಂದು ಆದರ್ಶವಷ್ಟೆ. ಅದು ವಾಸ್ತವದಲ್ಲಿ ಯಾವ ಕಾಲಕ್ಕೂ ಇರಲಿಲ್ಲ, ಇರುವುದು ಸಾಧ್ಯವೂ ಇಲ್ಲ. ಕಾಲದಿಂದ ಕಾಲಕ್ಕೆ ಈ ಅಸ್ವಾಸ್ಥ್ಯದ ಸ್ವರೂಪ ಬದಲಾಗುತ್ತಿರುತ್ತದೆ.. ಸನಾತನ ವಾದುದೆಲ್ಲವೂ ಸ್ವಸ್ಥವಾಗಿದ್ದಿತು ಎಂದು ಹೇಳಲು ಬರುವುದಿಲ್ಲ. ನಮ್ಮ ಸಾಹಿತ್ಯ ಚರಿತ್ರೆಯಲ್ಲಿ , ಒಂದರ ಪ್ರತಿಕ್ರಿಯೆಯಂಬಂತೆ ಇನ್ನೊಂದು ಚಳವಳಿ ಹುಟ್ಟಿಕೊಂಡಿದ್ದೇ ಇದಕ್ಕೆ ಸಾಕ್ಷಿ. ಹೀಗೆ ನಮ್ಮ ಇತಿಹಾಸದಲ್ಲಿ ಕಂಡು ಬರುವ ಯುದ್ಧಗಳೂ ಕೂಡ ಒಂದಲ್ಲ ಒಂದು ರೀತಿಯ ಅಸ್ವಾಸ್ಥ್ಯದ ರೂಪವೇ ಆಗಿದೆ. ನಮಗೆ ಈಗಿರುವ ಅಸ್ವಾಸ್ಥ್ಯ ಪಂಪನಿಗಿರಲಿಲ್ಲ ಎಂದ ಮಾತ್ರಕ್ಕೆ ಪಂಪನ ಕಾಲ ಸ್ವಸ್ಥವಾಗಿತ್ತೆಂದು ಹೇಳಲು ಬರುವುದಿಲ್ಲ. ಪಂಪ ತನ್ನ ಕಾಲದ ಒಂದು ರೀತಿಯ ‘ಅಕ್ರಮದ’ ಮೇಲೆ ಸಾಧಿಸಿದ ವಿಕ್ರಮವೂ ಹೌದು ಎನ್ನುವುದಕ್ಕೆ ಅವನ ಕೃತಿಯೇ ಸಾಕ್ಷಿ. ‘ಸನಾತನ ವೃಕ್ಷ’ ಎನ್ನುವುದನ್ನು ಏಕ ಕಾಂಡ ವೃಕ್ಷದ ರೀತಿಯಲ್ಲಿ (ಪೈನ್ ವೃಕ್ಷದ ಹಾಗೆ) ನಿರೂಪಿಸಲಾಗಿದೆ. ನಿಜವಾಗಿ ನೋಡಿದರೆ ನಮ್ಮ ಭೂತಕ್ಕೆ ನಿಜವಾದ ಪ್ರತಿಮೆಯೆಂದರೆ ಅಸಂಖ್ಯ ಬೇರು ಬಿಳಲುಗಳಿರುವ ಆಲದಮರವೇ ಹೊರತು ಏಕ ಕಾಂಡ ವೃಕ್ಷವಲ್ಲ. ಆಲದಮರ ಬಹುಸಂಸ್ಕøತಿಯನ್ನು ಪ್ರತಿನಿಧಿಸುತ್ತದೆ”- ಇವು ಸಂವಾದದ ಮುಖ್ಯ ಅಂಶಗಳು. ಎಲ್ಲ ಕಾಲದಲ್ಲಿಯೂ ಈ ಅಸ್ವಸ್ಥತೆ ಎನ್ನುವುದು ಇದ್ದದ್ದೇ ಅದಕ್ಕೇಕೆ ತಲೆಕೆಡಿಸಿಕೊಳ್ಳಬೇಕು ಎಂದು ತಣ್ಣಗೆ ಕುಳಿತುಕೊಳ್ಳುವ ಹಾಗಿಲ್ಲ. ಪ್ರತಿಯೊಂದು ಕಾಲದ ಅಸ್ವಾಸ್ಥ್ಯವೂ ತನ್ನ ಸಾಮಾಜಿಕ ಸಂದರ್ಭಕ್ಕೆ ತಕ್ಕಂತೆ ಪರಿಹಾರವನ್ನು ಬೇಡುತ್ತದೆ. ಅದನ್ನು ಉಪಶಮನಗೊಳಿಸಲು ಉಪಾಯಗಳನ್ನು ಕಂಡುಕೊಳ್ಳಬೇಕಾದುದು ‘ನಮ್ಮ’ ಜವಾಬ್ದಾರಿಯಾಗಿದೆ. ಈ ‘ನಮ್ಮ’ ಎನ್ನುವುದು ಅಷ್ಟು ಸರಳವಾದುದೇನಲ್ಲ. ಸಾಮಾಜಿಕ ಚಿಂತಕಿಯಾದ ಸಿ.ಎಸ್. ಲಕ್ಷ್ಮಿಯವರು ಈ ‘ನಾವು’ ಮತ್ತು ನಮ್ಮ’ ಎಂದರೆ ಯಾರು? ಎಂದು ಕೇಳುತ್ತಾರೆ. ಅದು ಎಷ್ಟು ಸಂಕೀರ್ಣವೆಂದರೆ ಇಡೀ ನಮ್ಮ ಸಾಮಜಿಕ ಶ್ರೇಣೀಕರಣದತ್ತ, ಧರ್ಮ ಮತ್ತು ಲಿಂಗರಾಜಕಾರಣದತ್ತ ಬೆರಳು ಮಾಡಿತೋರಿಸುತ್ತದೆ. ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬ ಪ್ರಶ್ನೆ ಬೃಹದಾಕಾರವಾಗಿ ಎದ್ದುನಿಲ್ಲುತ್ತದೆ. ಅದರ ಜೊತೆ ಬೆಕ್ಕು ಯಾವುದು? ಇಲಿಗಳೆಂದರೆ ಯಾರು ಎಂಬುದನ್ನೂ ಸ್ಪಷ್ಟಪಡಿಸಿಕೊಳ್ಳಬೇಕಾದ ಅನಿವಾÀರ್ಯತೆ ಧುತ್ತೆಂದು ಎದುರಿಗೆ ಬರುತ್ತದೆ. ಇದುವೇ ಅಸ್ವಾಸ್ಥ್ಯದ ಸ್ವರೂಪವನ್ನೂ, ಅದರ ವಿರುದ್ಧದ ಹೋರಾಟದ ಉಪಾಯಗಳನ್ನೂ ನಿರ್ಧರಿಸುತ್ತದೆ. ಆದುದರಿಂದ ಅಸ್ವಾಸ್ಥ್ಯ ಕೂಡ ಏಕ ರೀತಿಯದಾಗಿರಲು ಸಾಧ್ಯವಿಲ್ಲ. ಇದಕ್ಕೆ ಒಂದು ಸಾಮಾನ್ಯ ಪರಿಹಾರ ಸಾಧ್ಯವಿಲ್ಲ. ಒಬ್ಬರ ಸ್ವಾಸ್ಥ್ಯ ಇನ್ನೊಬ್ಬರ ಅಸ್ವಾಸ್ಥ್ಯಕ್ಕೆ ಕಾರಣವಾಗಬಹುದು. ಕಾಲಕ್ರಮೇಣ ಇದೂ ಅದಲುಬದಲಾಗಬಹುದು. ಇದೂ ಕೂಡ ಒಂದು ರೀತಿಯ ‘ಮಾಯೆ’ ಯಂತೆ. ಇತ್ಯಾತ್ಮಕ ಹಾಗೂ ನೇತ್ಯಾತ್ಮಕ ಎರಡು ನೆಲೆಗಳಲ್ಲಿಯೂ ಇರುವುದಕ್ಕಿಂತ, ಡಿಸ್ಟಾರ್ಟ್ ಆಗಿ ಕಾಣುವುದೇ ಹೆಚ್ಚು. ಸಮಸ್ಯೆಯ ಉಗಮ ಹಾಗೂ ಸ್ವರೂಪವನ್ನೇ ಪತ್ತೆಹಚ್ಚಲು ಸಾಧ್ಯವಿಲ್ಲದಾಗ ಅದಕ್ಕೆ ಪರಿಹಾರ ಕಂಡುಕೊಳ್ಳುವ ಸಾಹಸವನ್ನು ಹೇಗೆ ಮಾಡಲು ಸಾಧ್ಯ.? ಈ ದೃಷ್ಟಿಯಲ್ಲಿ ಅಖಂಡ ಅಥವಾ ಹೋಲಿಸ್ಟಿಕ್ ಎನ್ನುವ ಪರಿಕಲ್ಪನೆಯೂ ಕೂಡ ಮಿಥ್ಯೆಯೇ ಏನೋ. ಎಲ್ಲಿಯ ತನಕ ಮನುಷ್ಯನ ಲಾಲಸೆ, ಸ್ವಾರ್ಥಗಳು ನಾಶವಾಗುವುದಿಲ್ಲವೋ ಅಲ್ಲಿಯವರೆಗೆ ಇಂತಹ ವಿಚಾರ ಸಂಕಿರಣಗಳು, ಸಂವಾದ, ಚರ್ಚೆಗಳು, ವಾಗ್ಯುದ್ಧಗಳೂ ನಡೆಯುತ್ತ್ತಲೇ ಇರುತ್ತವೆ. ಅದು ಅನಿವಾರ್ಯಕೂಡ. Feb 25/17 ಪದ್ಮಾವತ್ ಹಲ್ಲಾಗುಲ್ಲಾ 'ಪದ್ಮಾವತ್' ಚಿತ್ರವನ್ನು ಕಳೆದವಾರವೇ ನೋಡಿ ಕೊಂಡು ಬಂದೆ. ಬಿಡುಗಡೆಯ ಮುಂಚೆಯೇ ಅದಕ್ಕೆ ಕೋರ್ಟ್ ಹಾಗೂ ಸೆನ್ಸಾರ್ ಮಂಡಳಿಯಿಂದ ಒಳ್ಳೆಯ ಪ್ರಚಾರ ಸಿಕ್ಕಿಬಿಟ್ಟಿತ್ತು. ಅದು ಬಿಡುಗಡೆಯಾದ ಮೇಲೆ ಅದನ್ನು ನೋಡಿ ಬಂದು ನಿರಾಶರಾಗಿ, ಹತಾಶರಾದವರು ಮೈಮೇಲೆ ಬಂದಂತೆ ಬರೆದರು, ಈಗಲೂ ಬರೆಯುತ್ತಿದ್ದಾರೆ. ನಾಲ್ಕೇ ದಿನದಲ್ಲಿ ಕೋಟ್ಯಾಂತರ ಬಾಚಿಕೊಂಡಾಗಿದೆ. ಇದನ್ನು ಒಂದು ಪ್ರೇಮ ಸಿನಿಮಾ ಎಂದು ನೋಡಬೇಕೋ? ಚರಿತ್ರೆಯೆಂದು ನೋಡಬೇಕೋ? ತಿಳಿಯದು. ಚರಿತ್ರೆಯೆಂದು ನೋಡಿದರೆ ಸಿನಿಮಾದ ಕಥೆ support ಮಾಡುವುದಿಲ್ಲ( ಜೋಹರ್ ಬಿಟ್ಟರೆ). ಪ್ರೇಮ ಕಥೆಯೆಂದು ನೋಡಿದರೆ ೨೧ ನೇ ಶತಮಾನದ ಸಮಾಜ ಒಪ್ಪುವುದಿಲ್ಲ(ಜೋಹರ್ ಕರಣಕ್ಕಾಗಿ) ಬೆಂಕಿ ಹಾಯುವುದು ೨೧ ನೇ ಶತಮಾನಕ್ಕೆ ಒಪ್ಪಿಗೆಯಾಗಲಾರದು ನಿಜ, ಆದರೆ ಸೂಕ್ಷ್ಮವಾಗಿ ಇಂದು ಜೋಹರ್ ಬೇರೆ ಬೇರೆ ರೀತಿಯಲ್ಲಿ ನಡೆಯುತ್ತಿದೆ. ಎಷ್ಟು ರಾಮ್ ಮೋಹನ್ ರಾಯ್ ಗಳು, ವಿಲಿಯಂ ಬೆಂಟಿಕ್ ಗಳು ಬಂದರೇನು, ನಮ್ಮ ಅದೇ ಚರಿತ್ರೆ ಇಂದು ಇನ್ನೊಂದು ರೂಪದಲ್ಲಿ ಮುಂದುವರೆಯುತ್ತಿದೆ. "I felt reduced to vagina only" ಎಂದು ಸಂಜಯ್ ಲೀಲಾ ಬನ್ಸಾಲಿಗೆ ಬರೆದ ಪತ್ರವೊಂದರಲ್ಲಿ ನಟಿ ಸ್ವರಭಾಸ್ಕರ್ ಹೇಳಿದ್ದು ಸರಿಯಿರಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ದಿನಾ ಪತ್ರಿಕೆಯಲ್ಲಿ ಬರುವ ಹೆಣ್ಣಿನ ಮೇಲಾಗುವ ಅತ್ಯಾಚಾರದ ಹಿಂದೆ vagina ವಲ್ಲದೇ ಬೇರೆ ಏನಿದೆ? ಹೆಣ್ಣಿನ ಸಾಮಾಜಿಕ ಸ್ಥಾನಮಾನಗಳ ನಿಟ್ಟಿನಲ್ಲಿ ಮೇಲ್ಪದರಲ್ಲಿ ಬಹಳಷ್ಟು ಬದಲಾವಣೆಯಾಗಿರಬಹುದು. ಆದರೆ ಮೂಲಭೂತವಾಗಿ ಏನು ಬದಲಾವಣೆಯಾಗಿದೆ? ಪದ್ಮಾವತ್ ಇರಲಿ ಗುಲಾಬಿ ಗ್ಯಾಂಗ್, ಲಜ್ಜಾ, ಕಿರಗೂರಿನ ಗಯ್ಯಾಳಿಗಳು ಮುಂತಾದ ಅತ್ಯಂತ ಪ್ರಬಲ ಮಹಿಳಾಪರ ಸಿನಿಮಾಗಳು ಬಂದುಹೋದ ಮೇಲೂ ಏನು ವ್ಯತ್ಯಾಸವಾಗಿದೆ? ನಾನಂತೂ ಅದರ ಅದ್ಧೂರಿ ಸೆಟ್ಟಿಂಗ್ ಮಾತ್ರಾ ನೋಡಿಕೊಂಡು ಬಂದೆ. ಯುದ್ಧದ ದೃಶ್ಯಗಳು, ಖಿಲ್ಜಿಯ ಶೌರ್ಯ ಪ್ರದರ್ಶನ ಇಲ್ಲಿ ಅದ್ಭುತ. ಇಲ್ಲಿ ಅವನು ಖಳನಾಯಕ ಎನ್ನುವುದು ನಿಜ. ಆದರೆ ನಾಯಕನಿಗಿಂತ ಖಳನಾಯಕನ ಪಾತ್ರವೇ ಭರ್ಜರಿಯಾಗಿದೆ. ಅವನನ್ನು ಬೇಕೆಂತಲೇ ಕೆಟ್ಟದಾಗಿ ತೋರಿಸಿದ್ದಾರೆ ಎಂದು ಬಷೀರ್ ಹೇಳುವುದನ್ನು ಕೇಳಿ ನನಗೆ ಹೆದರಿಕೆಯಾಗುತ್ತಿದೆ. (ಅದಕ್ಕೆ ಕಾರಣಗಳೂ ಈ ಸಿನಿಮಾದಲ್ಲಿವೆ). ಬಷೀರ್, ನಾನು ನಿಮಗೆ ಎರಡು ವರುಷ ಪಾಠ ಹೇಳಿ ಕೊಟ್ಟ ಅಧಿಕಾರದಿಂದ ಹೇಳುತ್ತಿದ್ದೇನೆ, ದಯವಿಟ್ಟು ಸುಮ್ಮನಿರಿ ಈ ಸಿನಿಮಾ ಇಂದು ಕೇವಲ vagina ಕ್ಕೆ ನಿಂತಿದೆ. ಅಲ್ಲಿಯೇ ಇರಲಿ. ಯಾಕೆಂದರೆ vagina, ಖಿಲ್ಜಿಯ ಅಥವಾ ರಜಪೂತ ನಾಯಕನ ಖಡ್ಗದಷ್ಟು ಅಪಾಯಕಾರಿಯಲ್ಲ . ಅದು ರಕ್ತ ಹರಿಸುತ್ತದೆ ಅಷ್ಟೆ ರಕ್ತಪಾತ ಮಾಡುವುದಿಲ್ಲ. ಪದ್ಮಾವತಿ ದಿಟ್ಟವಾಗಿ ಕಾಡಿನಲ್ಲಿ ಒಬ್ಬಳೇ ಶಿಕಾರಿ ಮಾಡುವ ಸಂದರ್ಭ, ಕೆಲವು ಸನ್ನಿವೇಶಗಳಲ್ಲಿ ಮನೆಯ ರೀತಿ ರಿವಾಜಿಗೆ ಪರಂಪರೆಗೆ ವಿರುದ್ಧವಾಗಿ ತೆಗೆದುಕೊಳ್ಳುವ ನಿರ್ಧಾರಗಳು ಸಿನಿಮಾದ ಆಕರ್ಷಕ ಸಂಗತಿಗಳು, ಜೋಹರ್ ನ ಹಲ್ಲ ಗುಲ್ಲಾ ದಲ್ಲಿ ಇವುಗಳನ್ನು ಮರೆಯಬಾರದು ಅಷ್ಟೇ. ಸೆನ್ಸಾರ್ ಮಂಡಳಿಯವರು ಸಿನಿಮಾದ ಕೊನೆಯ ದೃಶ್ಯವನ್ನೂ ಕತ್ತರಿಸಿ ಹಾಕಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು? ಆಗ ಸ್ವರ ಭಾಸ್ಕರ್ ಸಂಜಯ್ ಲೀಲಾ ಬನ್ಸಾಲಿಗೆ ಪತ್ರ ಬರೆಯುವ ಪ್ರಮೇಯವೇ ಬರುತ್ತಿರಲಿಲ್ಲ. Feb-3/2017 4 12 Comments 2 Shares 22 ಈ ಮುಂಡೇವು ಇಲ್ಲೇ ಈ ನಮ್ಮ್ ಕನ್ನೇಗೋಡ್ನ ಕೊಪ್ಪಲ್ನಾಗೇ ಉಟ್ಟಿ ಬೆಳ್ದೋವು, ಇದ್ಯಾ ಬುದ್ದೀ ಕಲ್ತು ದೊಡ್ ಗಾದೋವು. ಈಗ ಇವು ಥೇಟ್ ಥೇಮ್ಸ್ ನದಿಯಲ್ಲೇ ಅಂಡು ತೊಳಕೊಂಡೋರಂಗೆ ಮಾತಾಡ್ತಾವೆ. ಶಿವನನ್ನು, ಶಿವಭಕ್ತರನ್ನು ಎಲ್ಲೋ ಹೊರಗೆ ಅರಸುವ ಬಸವಣ್ಣನನ್ನು ಕುರಿತು " ಪ್ರಸಾದದ ಕುಳಿಯಲ್ಲಿ (ಎಂಜಲು ತೊಟ್ಟಿ) ಕುಳಿತ ಮರುಳ ಶಂಕರದೇವನನ್ನು ನೀನು ಕಾಣೆಯಾ?" ಎಂದು ಅಲ್ಲಮಪ್ರಭು ಹಂಗಿಸುತ್ತಾನೆ. ಶ್ರೀಧರ ಸ್ವಾಮಿಗಳು ಸಿಹಿಯ ಮೇಲಿನ ತಮ್ಮ ಮೋಹವನ್ನು ನೀಗಿಕೊಳ್ಳಲು ಸಗಣಿ ಮುದ್ದೆಯ ಜೊತೆಗೆ ಬೆಲ್ಲವನ್ನು ಕಲಸಿ ತಿನ್ನುತ್ತಾರೆ. ನನ್ನ ಮಲ ಇನ್ನೊಂದು ಜೀವದ ಆಹಾರ ಅದರ ಬಗೆಗೆ ನನಗೆ ಅಸಹ್ಯವಿಲ್ಲ" ಎಂದು ಒಬ್ಬ ವಿದ್ವಾಂಸರು ಹೇಳುತ್ತಾರೆ. ಪ್ರಸಿದ್ಧ ಹೋಟೆಲ್ ಉದ್ಯಮಿ ವಿಟ್ಠಲ ಕಾಮತರ ತಂದೆ, ಗ್ರಾಹಕರು ತಿನ್ನದೇ ಉಳಿಸಿದ ಎಂಜಲ ರುಚಿ ನೋಡಿ ತಾವು ಒದಗಿಸಿದ ಆಹಾರದ ಲೋಪದೋಷಗಳನ್ನು ತಿಳಿದುಕೊಳ್ಳಲು, ತಿದ್ದಿಕೊಳ್ಳಲು ಪ್ರಯತ್ನಿಸುತ್ತಾರೆ. ಹೊಲಸಿನ ಜೊತೆಗೆ ಇದ್ದು ಬದುಕುವುದಕ್ಕೆ ಬಹಳ ಅಧ್ಯಾತ್ಮಿಕ ಸ್ಥೈರ್ಯ ಬೇಕು. ತಾಯಿ ಹರಕು ಬಟ್ಟೆಯ ತಿರುಕಿ, 'ಹೊಲತಿ', ನಯ ನಾಜೂಕಿಲ್ಲದ ಒರಟು ಮಾತಿನವಳು ನಿಜ. ಆದರೆ ಅವಳನ್ನು ಬಿಟ್ಟು ಓಡಿದರೆ ನಮಗೆ ಗತಿಯೆಲ್ಲಿದೆ? ತಾಯಿಯಲ್ಲದೇ ನಮ್ಮನ್ನು ಇನ್ನಾರು ಕಾಯುವವರು? "ಕಾಮನಕಟ್ಟೆ ಜಗಳವೇ ಮುಗಿದಿಲ್ಲ ಇನ್ನು ಅಮೇರಿಕಾಕ್ಕೆ ಹೋಗಿ ಮಾಡುವುದೇನು?" ಎಂದು ಬೇಂದ್ರೆ ಒಮ್ಮೆ ಹೇಳಿದ್ದರು. ಸ್ವಚ್ಛತೆಯೆಂದರೆ ಕೇವಲ ನಗರಪಾಲಿಕೆಯ ಗುಡಿಸೋಣವೇ? ಗುಡಿಸುವ ತಾಖತ್ತಿಲ್ಲದಿದ್ದರೆ ಪರವಾಗಿಲ್ಲ. ಕನಿಷ್ಟ ಪಕ್ಷ ಹೊಲೆ ಮನೆಯಲ್ಲಿ ಬದುಕುವುದನ್ನಾದರೂ ಕಲಿಯೋಣ- ಪೊರಕೆಗೆ ಕಡ್ಡಿ ಜೋಡಿಸುತ್ತಾ...1/8/18 ಅನ್ನಪೂರ್ಣೇ ಸದಾಪೂರ್ಣೇ… ತಾಯಿಯೆಂದರೆ ‘ಅನ್ನಪೂರ್ಣೇಶ್ವರಿ’ಯೇ. ಹಸಿದು ಕಂಗಾಲಾದಾಗ, ಸೋತು ನೆಲಕಚ್ಚಿದಾಗ ನೆನಪಾಗುವುದು ತಾಯಿಯೇ. ಹಾಲುಣಿಸಿ ತಣಿಸುತ್ತಾಳೆ, ಮಡಿಲಲ್ಲಿ ಮಲಗಿಸಿಕೊಂಡು ಸಂತೈಸುತ್ತಾಳೆ. ಅವಳು ‘ಶಂಕರಃ ಪ್ರಾಣ ವಲ್ಲಭೆ’ ಕೂಡ ಹೌದು. ಅಪ್ಪ ಸಾಮಾಜಿಕ ಸತ್ಯ, ಜೈವಿಕ ಸತ್ಯವೂ ಹೌದು. ಅದರೆ ಮಗುವಿಗೆ ಅದು ಮುಖ್ಯವಲ್ಲ. ಅವಳು ಶಂಕರ ವಲ್ಲಭೆಯಾಗದೇ ತÀನ್ನ ಅಸ್ತಿತ್ವ ಸಾಧ್ಯವಿಲ್ಲ ಎಂಬುದರ ಅರಿವು ಅದಕ್ಕಿಲ್ಲ. ಅದಕ್ಕೆ ಗೊತ್ತಿರುವುದು ಹಸಿವಾದಾಗ ಅಳುವುದೊಂದೇ. ಆಗ ಹಾಲುಕೊಡುತ್ತಾಳೆ. ಎಲ್ಲಿಂದ ಕೊಡುತ್ತಾಳೆ? ಹೇಗೆ ಕೊಡುತ್ತಾಳೆ? ಅದರ ಬಗ್ಗೆ ಅದಕ್ಕೆ ತಿಳಿವಿಲ್ಲ. ಮೊಲೆ ಚೀಪುವ ಮಗುವಿಗೆ ಅದರ ಗಾತ್ರ ಬಣ್ಣದ ಅರಿವಿರುವುದಿಲ್ಲ. ಮಗು ಎಲ್ಲೋ ಅತ್ತಾಗ ತಾಯಿಯ ಮೊಲೆಯಲ್ಲಿ ಹಾಲೊಸರುತ್ತದೆ. ಇದು ಕೇವಲ ಜೈವಿಕ ಸತ್ಯವಲ್ಲ ಭಾವನಾತ್ಮಕ ಸತ್ಯ ಕೂಡ ಹೌದು. ಮಗುವಿಗೆ ತಾಯಿಯೊಡನೆ ಭೌತಿಕ ನೆಂಟೆಂದರೆ ಅವಳ ಬಿಸಿ ಅಪ್ಪುಗೆ ಮತ್ತು ಅವಳ ಹಾಲು ಮಾತ್ರ. ಮಗುವಿಗೆ ಇದು ಭೌತಿಕ ಸತ್ಯ ಎನ್ನುವುದಕ್ಕಿಂತ ಹೆಚ್ಚಾಗಿ ಭಾವನಾತ್ಮಕ ಸತ್ಯ. ಯಾಕೆಂದರೆ ಅದು ಕಣ್ಣುಬಿಡುವ ಮುನ್ನವೇ ಇವು ಅದರ ಅನುಭವದ ಭಾಗವಾಗಿರುತ್ತದೆ. ಗಂಡು ಮಗುವಿನ ಸುಪ್ತ ಮನಸ್ಸಿನಲ್ಲಿ ಆದಿಕಾಲದ ಗಂಡುತನದ ನೆನಪುಗಳು ಇರಬಹುದು ಅದು ಜಾಗೃತವಾದಾಗ ಫ್ರಾಯ್ಡ್ ಹೇಳುವ ‘ಲಿಬಿಡೋ’ ನಿಜವೆನಿಸಬಹುದು. ಲಿಬಿಡೋ ಮನಶಾಸ್ತ್ರೀಯ ಸತ್ಯ. ಆದರೆ ಅದು ಸಾಮಾಜಿಕ ಸತ್ಯಕ್ಕೆ ಲಾಗೂ ಆಗುವುದಿಲ್ಲ. ಅಲ್ಲದೇ ಎಲ್ಲಕ್ಕೂ ಮೂಲವಾದ ನೈಸರ್ಗಿಕ ಸತ್ಯವೊಂದಿದೆ. ಅದು ನಮ್ಮ ಎಲ್ಲಾ ಸಾಮಾಜಿಕ ಸತ್ಯಗಳನ್ನು ನುಂಗಿ ನೀರು ಕುಡಿಯುವಂತಹದ್ದು. ಇಂತಹ ಅನೇಕ ಸತ್ಯಗಳ ಘರ್ಷಣೆಯಲ್ಲಿ ಗಂಡಿಗೆ ತಾಯಿ ಹೆಣ್ಣಾಗಿ ಕಾಣುತ್ತಾಳೆ. ಈ ಘರ್ಷಣೆಯ ಪ್ರತಿರೂಪವಾಗಿ ದೇವಿಯ ವಿಗ್ರಹಗಳು ರೂಪುಗೊಂಡಿರಬಹುದು. ದೇವಿಯನ್ನು ಹೀಗೆ ನೋಡುವುದಕ್ಕೂ ನಮ್ಮ ಹೆಣ್ಣುಗಳನ್ನು ಲಾಗಾಯ್ತಿನಿಂದ ಭೌತಿಕವಾಗಿ ಕಾಣುತ್ತಾ ಬಂದಿರುವುದಕ್ಕೂ ಸಂಬಂಧವಿದೆ ಎಂದು ನನಗನ್ನಿಸುತ್ತದೆ. ಪರಸ್ತ್ರೀ ಕೇವಲ ಅನ್ನಪೂರ್ಣೆಯಾಗಿದ್ದರೆ ಅವಳು ಹೆಣ್ಣಾಗಿ ಕಾಣುತ್ತಿರಲಿಲ್ಲ. ಅವಳ ಮೇಲೆ ಪ್ರತಿನಿತ್ಯ ಅತ್ಯಾಚಾರಗಳು ನಡೆಯುತ್ತಿರಲಿಲ್ಲ. ಒಂದು ಕಡೆ ತಾಯಿಯನ್ನೂ ಕೂಡುವ, ಮಗಳನ್ನೂ ಭೋಗಿಸುವ ವಿಕೃತ ಮನಸ್ಸು ರೂಪುಗೊಂಡದ್ದು ಎಲ್ಲಿಂದ? ನಾವು ಕಾಣುವುದು ನಮ್ಮ ಅಂತರಂಗದ ಸತ್ಯ. ಹೆಣ್ಣಿನ ಭೌತಿಕ ಆಕೃತಿ ಬಹಿರಂಗದ ಸತ್ಯ. ಕಾಣುವ ನೋಟದಲ್ಲೇ ಐಬು ಇರುವುದಾದರೇ ಬಹಿರಂಗವನ್ನು ಎಷ್ಟು ನೇರ್ಪುಗೊಳಿಸಿದರೆ ತಾನೇ ಏನು ಪ್ರಯೋಜನ? ಮಗು ಹಸಿದಿರುವುದು ಅಮ್ಮನ ಹಾಲಿಗೆ, ಹಪಾಹಪಿ ಅವಳ ಮಡಿಲಿಗೆ. ಆಗ ಅವಳು ಕೇವಲ ಅನ್ನಪೂರ್ಣೆಯಾಗಿ ಕಾಣಬೇಕು. ಹಾಗೆ ಕಾಣದೇ ಶಂಕರಃ ಪ್ರಾಣ ವಲ್ಲಭೆಯಾಗಿ ಕಂಡರೇ? ಮಗುವಿನ ಮುಗ್ಧತೆ ನಾಶವಾಗಿಬಿಡುತ್ತದೆ. ಅಲ್ಲಿ ತಾಯಿ ಇರುವುದಿಲ್ಲ ಬದಲಾಗಿ ಉದಮದದ ಹೆಣ್ಣೆದ್ದು ಬರುತ್ತಾಳೆ. ಮೇಲಿನ ವಿಚಾರಗಳು ಕೇವಲ ನನ್ನ ಅಭಿಪ್ರಾಯ. ಇದರಿಂದ ಯಾರ ಮನಸ್ಸನ್ನೂ ನೋಯಿಸುವ ಉದ್ದೇಶವಿಲ್ಲ 5/8/18 ಮರೆತೇನಂದರೆ ಮರೆಯಲಿ ಹೇಗೆ ನಾಡಿಗ್ ಮೇಷ್ಟ್ರೇ.... ಮೇಷ್ಟ್ರು ಹೋಗೇ ಬಿಡ್ತಾರೆ ಅಂತ ಗೊತ್ತಿದ್ದಿದ್ರೆ ನನ್ನೆಲ್ಲಾ ಅಸಮಾಧಾನಗಳನ್ನು ಬದಿಗಿಟ್ಟು ಒಂದು ಕರೆಯನ್ನು ಖಂಡಿತಾ ಮಾಡುತ್ತಿದ್ದೆ. ಮಾಡಲಿಲ್ಲ ಕಾಲ ಮಿಂಚಿ ಹೋಯಿತು. ನಾಡಿಗ್ ಸರ್ ಕ್ಷಮಿಸಿಬಿಡಿ. ಎಷ್ಟು ಪ್ರೀತಿಯೋ ಅಷ್ಟೇ ಕೋಪ. "ಆ ಕಳ್ಳನ ಹತ್ರ ನೀನು ಯಾಕೆ ಹೋಗಿದ್ದು?" ನನ್ನ ಕವಿತೆಗಳ ಕಟ್ಟನ್ನು ಬಗಲಲ್ಲಿ ಇರುಕಿಕೊಂಡು, ಅವು ಕವಿತೆಗಳಾಗಿಯೋ ಇಲ್ಲವೋ ಅವು ಪ್ರಕಟಿಸಲು ಅರ್ಹವೋ ಅಲ್ಲವೋ ಎಂದು ತಿಳಿದುಕೊಳ್ಳಲು ಅವರ ಬಳಿಗೆ ಹೋಗಿದ್ದೆ.ಅದಕ್ಕೂ ಮುನ್ನ ಪ್ರಸಿದ್ಧ ಸಾಹಿತಿಗಳೊಬ್ಬರ ಬಳಿಗೆ ಹೋಗಿ ಅವುಗಳನ್ನು ತೋರಿಸಿದ್ದೆ. ಅದು ಅವರಿಗೆ ತಿಳಿದು ಮೇಲಿನ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದರು. 'ಇನ್ನೂ ಫ್ರೀ ವರ್ಸ್ ನಲ್ಲೇ ಇದೀಯಾ' ಎಂದು ಆ ಕೋಪದಲ್ಲೇ ಬಹುಶಃ ನುಡಿದಿದ್ದರೆನಿಸುತ್ತೆ. ಆಮೇಲೆ ಎಲ್ಲವನ್ನೂ ಮರೆತು ತಮ್ಮ ಮನೆಗೆ ಕರೆದು ಬಳಿಯಲ್ಲಿ ಕುಳಿತುಕೊಂಡು ಸಿಗರೇಟು ಹೊಗೆ ಲೀಲೆಯಿಂದ ಬಿಡುತ್ತಾ ಒಂದು ರೀತಿಯ ಅಮಲಿನಲ್ಲಿ ಬೇಂದ್ರೆಯವರ ಕವಿತೆಯೊಂದನ್ನು ಓದಲು ಪ್ರಾರಂಬಿಸಿದರು. ಕವಿತೆ ಓದುವ ರೀತಿಯನ್ನು ಮೇಷ್ಟ್ರಿಂದ ಕಲಿಯಬೇಕು. ಎಷ್ಟು ಚೆಂದ ಓದುತ್ತಿದ್ದರು! ಓದಿ ಮುಗಿದ ಮೇಲೆ 'ನನ್ನೆಲ್ಲಾ ಕಾವ್ಯಶಕ್ತಿಯನ್ನು ನಿನಗೆ ಧಾರೆ ಎರೆಯಬೇಕೆನಿಸುತ್ತದೆ' ಎಂದರು. ಸರಿ ಹೊರಡ್ತೀನಿ ಎಂದಾಗ, ಕಾವ್ಯದ ಹುಚ್ಚನ್ನು ಹತ್ತಿಸಿದ ಸ್ವತಃ ಕಾವ್ಯದ ಹುಚ್ಚರೇ ಆಗಿದ್ದ ನನ್ನ ಇನ್ನೊಬ್ಬ ಮೆಚ್ಚಿನ ಮೇಷ್ಟ್ರ್ರ ಬಗ್ಗೆ 'ಅವನೂ ಹೀಗೆ ನಿನ್ನ ಹಾಗೆ ಬಂದು ನನ್ನ ಕುರ್ಚಿಯ ಹಿಂದೆ ಕೈಕಟ್ಟಿಕೊಂಡು ನಿಲ್ಲುತ್ತಿದ್ದ' ಆ ವೇಳೆಗೆ ಆ ಗುರುಗಳು ತಮ್ಮ ಕಾಲ ಮುಗಿಸಿಯಾಗಿತ್ತು. ತೀರಿಕೊಂಡ ನನ್ನ ಮೆಚ್ಚಿನ ಗುರುಗಳ ಬಗ್ಗೆ ನಾಡಿಗರು ಆಡಿದ ಮಾತು ಕೇಳಿ ಕೋಪಗೊಂಡು ಎದ್ದು ಬಂದಿದ್ದೆ. ಆನಂತರ ಬಹಳ ಸಲ ಫೋನ್ ಮಾಡಿದರು. "ಏನೇನೋ ಬೂರ್ನಾಸೆಲ್ಲಾ ಬರೀತೀಯ" ಎನ್ನುವ ರೇಗು, ಅವರ ಕವಿತೆಗಳ ಬಗ್ಗೆ ಮಾತ್ರ ನಾನು ಏನೂ ಬರೆದಿಲ್ಲ ಎನ್ನುವ ಆಕ್ಷೇಪವನ್ನು ತೋರಿಸಿಕೊಳ್ಳುವ ರೀತಿಯಾಗಿತ್ತು ಅದು. ಆಮೇಲೆ ಅವರ ದಾಂಪತ್ಯ ಗೀತೆಗಳ ಬಗ್ಗೆ ನಾನು ಬರೆದಾಗ ತುಂಬಾ ಖುಷಿ ಪಟ್ಟಿದ್ದರು. ಮುಂದಿನದು ವಿಚ್ಛೇದನ ಗೀತೆಯಾ ಎಂದು ತಮಾಷೆಮಾಡಿದ್ದೆ. ಒಂದು ಪುಸ್ತಕ ಅನುವಾದ ಮಾಡಿದೀಯಾ ರಾಷ್ಟ್ರೋತ್ಥಾನದವರು ಪ್ರಕಟಿಸಿದ್ದಾರೆ ನನಗೆ ಹೇಳಲೇ ಇಲ್ಲ -ಮತ್ತೆ ಫೋನ್. ಸರ್ ಅದು ನಾನಲ್ಲ ಇನ್ನೊಬ್ಬರು ಗಿರಿಜಾಶಾಸ್ತ್ರಿ ಎಂದಿದ್ದಕ್ಕೆ, ಇಬ್ಬಿರಿದ್ದಾರಾ ಹೌದಾ? ಮತ್ತೆ ನಮ್ಮ ಗಿರಿಜಾಶಾಸ್ತ್ರಿ ಅಂತ ಗೊತ್ತಾಗೋದು ಹೇಗೆ? ನಿನ್ನ ಹೆಸರಿನ ಹಿಂದೆ ಡಾಕ್ಟರ್ ಹಾಕ್ಕೋ. ಸರ್ ಅದು ನನಗೆ ಇಷ್ಟವಿಲ್ಲ' ಎಂದಿದ್ದಕ್ಕೆ ಹೇಳಿದಷ್ಟು ಮಾಡು ಎನ್ನುವ ಅಧಿಕಾರ ವಾಣಿಯಲ್ಲಿ ಹೇಳಿ ಪೋನ್ ಇಟ್ಟುಬಿಟ್ಟರು. ರಾತ್ರಿ ೧೧ರ ವೇಳೆಗೆ ಲ್ಯಾಂಡ್ ಲೈನಿಗೆ ಫೋನ್ ಬಂದರೆ ಅದು ಖಂಡಿತಾ ನಾಡಿಗರದೇ. ನಶೆಯಲ್ಲಿ ಜೋರು ನಗು- ಫೋನ್ ರಿಸೀವರ್ ನ್ನು ಒಡೆಯುವಷ್ಟು.ಸಿಗರೇಟಿನ ವಾಸನೆ ಬೆಂಗಳೂರಿನಿಂದ ಮುಂಬಯಿವರೆಗೆ ಹರಡಿದ ಹಾಗೆ. ಎಲ್ಲಿ ಅವನು ರಘುನಾಥ? ಕರೀ ಅವನನ್ನ. ಸರ್ ಅವರು ಕೆಳಗೆ ಹೋಗಿದ್ದಾರೆ. ಅವನು ಬಂದ ಮೇಲೆ ಫೋನ್ ಮಾಡಲು ಹೇಳು. ರಘುನಾಥ್ ಮಂಗಳೂರಿನಲ್ಲಿ ಪುನಶ್ಚೇತನ ಶಿಬಿರಕ್ಕೆ ಹೋದಾಗ ಸಂಪನ್ಮೂಲ ವ್ಯಕ್ತಿಯಾಗಿ ನಾಡಿಗರು ಬಂದಿದ್ದರು. ಆಗ ಸಂಜೆ ಅವರ ಜೊತೆ ಪಾರ್ಟಿಗೆ, ನಂಜಿಕೊಳ್ಳುವ ಕವಿತಾ ವಾಚನಕ್ಕೆ ಯಾರಾದರೂ ಜೊತೆ ಬೇಕು. ಸರಿ ರಘುನಾಥ್ ಅವರ ವಿದ್ಯಾರ್ಥಿಯಾದ್ದರಿಂದ ಅವರನ್ನೇ ಕಳಿಸಿದರು. ಅವರ 'ಪಂಚಭೂತ'ಕವಿತೆಗಳಿರಬೇಕು ಓದುತ್ತಾ ಹೋದರು. ಮುಗಿಸಿ ಹೇಗಿದೆ? ಎಂದು ರಘುನಾಥ್ ರನ್ನು ಕೇಳಿದರು. ಇವರು ಚೆನ್ನಾಗಿಲ್ಲ ಎಂದರು. ಇನ್ನು ಶುರು, ನೀನೇನು ಉಪನಿಷತ್ತು ಓದಿದ್ದೀಯಾ, ನಿನಗೆ ವೇದ ಪುರಾಣಗಳು ಗೊತ್ತಾ? ಬಾಣಗಳ ಸುರಿಮಳೆ. "ವೇದಪುರಾಣಗಳು ಇದ್ದು ಬಿಟ್ರೆ ಕವಿತೆ ಆಗಿಬಿಡುತ್ತಾ?" ಇದು ರಘುನಾಥ್ ರಿಂದ ಗುರುವಿಗೇ ತಿರುಮಂತ್ರ. ಕನ್ನಡ ಅಧ್ಯಯನ ಕೇಂದ್ರದಲ್ಲಿ ಎಂ.ಎ. ಓದುವ ದಿನಗಳಲ್ಲಿ ರಘುನಾಥ ಅವರ ಬಂಟನಾಗಿದ್ದರು. ಅವರು ಹೋದಲ್ಲೆಲ್ಲಾ ಅವರನ್ನು ಹಿಂಬಾಲಿಸಿಕೊಂಡು ಅವರನ್ನು ಕಿಚಾಯಿಸುತ್ತಿದ್ದರು. ವಿದ್ಯಾರ್ಥಿಗಳ ಜೊತೆ ನಾಡಿಗರು ಬಹಳ ಸಲುಗೆಯಿಂದ ಇರುತ್ತಿದ್ದರು. ಒಂದು ದಿನ ಕ್ಲಾಸು ಮುಗಿಸಿ ನಾವು ವಿದ್ಯಾರ್ಥಿಗಳೆಲ್ಲಾ ಹೊರಗೆ ನಿಂತಿದ್ದೆವು. ನೇರ ನಮ್ಮ ಬಳಿ ಬಂದರು. ಬೆಲ್ ಬಾಟಂ ಪ್ಯಾಂಟು, ಇನ್ ಶರ್ಟ್, ಬಿಳೀ ತಲೆ, 'ಬಿಳಿ ಮೀಸೆ ಹೊತ್ತ ಯುವಕ' ಹಾಗೆಂದು ಅವರೇ ತಮ್ಮನ್ನು ತಾವು ಕರೆದು ಕೊಳ್ಳುತ್ತಿದ್ದರು. 'ನೋಡು ಹೇಗೆ?' ಎನ್ನುವಂತೆ ಸವಾಲನ್ನು ಗೆದ್ದವರ ಹಾಗೆ ಮೀಸೆ ತಿರುವಿದರು. ರಘುನಾಥ್ ಅವರತ್ತ ಬೆರಳು ತೋರುತ್ತ "ಅನ್ನಾಕೆರೆನೀನಾ" ವನ್ನು ಓದದೆಯೇ ಬಂದು ಪಾಠ ಮಾಡುತ್ತೇನೆಂದು ಇವನಿಗೆ ಹೇಳಿದ್ದೆ. ಹೇಗಿತ್ತು ಕ್ಲಾಸು? ನಮಗೆ ಪಾಶ್ಚಾತ್ಯ ಸಾಹಿತ್ಯವನ್ನು ಅವರು ಕಲಿಸುತ್ತಿದ್ದರು. ವೇಸ್ಟ್ ಲ್ಯಾಂಡ್ ನ್ನು ಪಾಠಮಾಡಿದವರೂ ಅವರೇ. ಅದರ ಬಗ್ಗೆ ಬರೆದುಕೊಂಡು ಬರಲು ಹೇಳಿದರು. ನಾನು ಅವರು ಪಾಠಮಾಡಿದ ಅಂಶಗಳ ಮೇಲೆ ಸ್ವಂತವಾಗಿ, ಬಾಲಿಶವಾಗಿ ಒಂದೆರೆಡು ಪುಟ ಬರೆದು ಒಪ್ಪಿಸಿದ್ದೆ. ನನ್ನ ಗೆಳತಿ ಯಾವುದೋ ಪುಸ್ತಕದಿಂದ ಕಾಪಿ ಹೊಡೆದು ದುಂಡಾದ ಅಕ್ಷರಗಳಲ್ಲಿ ಬರೆದು ಒಪ್ಪಿಸಿದ್ದಳು ಅವಳಿಗೆ ಸಹಜವಾಗಿಯೇ ನನಗಿಂತ ಹೆಚ್ಚಿನ ಮಾರ್ಕು ದೊರೆತಿತ್ತು. ಆಗ ನನಗೆ ಮೇಷ್ಟ್ರರ ಮೇಲೆ ಬಂದ ಕೋಪ ಅಷ್ಟಿಷ್ಟಲ್ಲ. ಆದರೆ ವಿದ್ಯಾರ್ಥಿ ಜೀವನ ಕಳೆದ ಮೇಲೂ ೩೦-೪೦ ವರುಷ ನಮ್ಮ ಜೊತೆಗೆ ಸಂಪರ್ಕವನ್ನುಇಟ್ಟುಕೊಂಡಿದ್ದರೇ ಹೊರತು ಆ ಗೆಳತಿಯ ಜೊತೆಗಲ್ಲ. ಫೊನ್ ಮಾಡಿದಾಗಲೆಲ್ಲಾ ಬೆಂಗಳೂರಿಗೆ ಬಂದಾಗ ಮನೆಗೆ ಬರಬೇಕೆಂದು ಹೇಳುತ್ತಿದ್ದರು. ಕೆಲವು ದಿನಗಳ ಹಿಂದೆ ಗಂಟಲು ನೋವೆಂದೂ ಬಯಾಪ್ಸಿಗೆ ಹೋಗುತ್ತಿರುವುದಾಗಿಯೂ ಪ್ರಹ್ಲಾದ ದಿವಾಣಜಿಯವರ ಬಳಿ ಫೊನಿನಲ್ಲಿ ಹೇಳಿದ್ದರಂತೆ. ಆಗಲಾದರೂ ನಾನು ಒಂದು ಕರೆ ಮಾಡಿ ಹೇಗಿದ್ದೀರಾ ಸರ್ ಎಂದು ಕೇಳಿದ್ದಿದ್ದರೆ ತುಂಬಾ ಸಂತೋಷವಾಗುತ್ತಿತ್ತು ಅವರಿಗೆ. ನನಗೂ ಇಂದು ಸಮಾಧಾನವಾಗುತ್ತಿತ್ತು. ಏನೋ ಅವಜ್ಞೆ ಕವಿಯಿತು.ಅವರ ಬಗ್ಗೆ ಇದ್ದ ಅಸಮಾಧಾನವೇ ಮೇಲುಗೈ ಪಡೆದುಬಿಟ್ಟಿತು. ಅವರ ಒರಟುಮಾತು ಕೋಪದ ಹಿಂದೆ ಇದ್ದ ಪ್ರೀತಿಯನ್ನಾಗಲೀ ಅವರ ಅಸಹಾಯಕತೆಯನ್ನಾಗಲೀ ತಿಳಿದುಕೊಳ್ಳಲೇ ಇಲ್ಲ. world is too much within us ಎಂದು ವರ್ಡ್ಸ್ ವರ್ತ್ ಹೇಳಿದ್ದು ಸುಳ್ಳಲ್ಲ ಮೇಷ್ಟ್ರೇ. ಕೊಳುಕೊಡುಗೆಗಳ ನನ್ನದೇ ಲೆಕ್ಕಾಚಾರಗಳಲ್ಲಿ ಮುಳುಗಿಹೋದೆ. ಎಲ್ಲೋ ಲೆಕ್ಕ ತಪ್ಪಿ ಹೋಯಿತು. ನೀವು ಹೊರಟುಬಿಟ್ಟಿರಿ ಮೇಷ್ಟ್ರೇ, ನಾನು ನಿಮ್ಮ ಹಿಂದೆಯೇ ಇರುವೆ.ಆದರೂ ಪಕ್ವವಾಗಿಲ್ಲ. ಇನ್ನು ಬಳ್ಳಿಯಿಂದ ಅನಾಯಾಸ ತೊಟ್ಟು ಕಳಚುವುದೆಂತು? ಕ್ಷಮಿಸಿಬಿಡಿ ಮೇಷ್ಟ್ರೇ. 7/8/18 1 Comment 2 ಬೆಳಗ್ಗಿನಿಂದ ಯಾರೋ ಒಬ್ಬ ಕೆಳಗೆ ಬೀದಿಯಲ್ಲಿ"ಬೀಸ್ ರುಪಯ್ಯಾ .. ಬೀಸ್ ರುಪಯ್ಯಾ.." ಎಂದು ಗಂಟಲು ಹರ್ಕೋತಿದ್ದಾನೆ. ಮೆಂತ್ಯ ಸೊಪ್ಪು ಇರಬೇಕು. ಹದಿನಾರನೇ ಮಹಡಿಯಲ್ಲಿ ಕುಳಿತು ಟಿ.ವಿ. ನೋಡುತ್ತಿರುವಾಗಲೂ ಅದು ನನಗೆ ಕೇಳಿಸುತ್ತಿದೆ. ರಾತ್ರಿ ಒಂಬತ್ತು ಗಂಟೆಯಾದರೂ ಆ ಕೂಗು ನಿಂತಿಲ್ಲ. ನಾನು ಊಟಮಾಡುವಾಗ ಆ ದನಿ ಇನ್ನೂ ಹೆಚ್ಚು ಕರ್ಕಶವಾದಂತೆ ಭಾಸವಾಗುತ್ತದೆ. ಇದು ನನ್ನ ಕವಿತೆಯ ವಸ್ತುವಾಗುವುದು ಕ್ರೌರ್ಯ ಎನಿಸುತ್ತದೆ. "ಬೀದಿ ವ್ಯಾಪಾರಿಗಳನ್ನೆಲ್ಲಾ ಎನ್ ಕ್ಯಾಶ್ ಮಾಡ್ಕೋತೀಯಾ" ಎಂದು ಇವನು ಹೇಳುತ್ತಾನೆ.10/8/18 ಇನ್ನೊಂದು ಅಡುಗೆ ಮನೆ ಆಖ್ಯಾನ ರೊಟ್ಟೀಲಿ ಸೇರ್ಕೊಂಡಿರೋ ಕೂದಲನ್ನ ತೆಗೆಯೋಕ್ಕೆ ಆಗೋಲ್ಲ ಅಂತಾಲ್ಲ ಕರೆದು ತೋರಿಸೋದು. ಕೂದಲು ಹಾಕಿದ್ದೀಯಾ ನೋಡು ಅಂತ ಹೇಳೋಕೆ..... ಬಟಾಣಿ ಬಿಡಿಸ್ಕೊಂಡು ಇಟ್ಕೋಕೋಬೇಕು. ಈರುಳ್ಳಿ ಹಸಿಮೆಣಸಿನಕಾಯಿ, ಕ್ಯಾರೆಟ್, ದೊಡ್ಡಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಹೀಗೇ ಇನ್ನೂ ಬೇಕಾದ್ದ ತರಕಾರೀನೆಲ್ಲಾ ಸಣ್ಣಗೆ ಹೆಚ್ಚಿಟ್ಟು ಕೊಳ್ಳಬೇಕು. ತೆಂಗಿನಕಾಯಿ ಹೆಚ್ಚಾಗಿಯೇ ತುರಿದಿಟ್ಟುಕೊಳ್ಳಬೇಕು. ಚಟ್ನಿಗೂ ಬೇಕಲ್ಲ. ರೊಟ್ಟಿ ತಟ್ಟೋಕು ಮುಂಚೆ ಚಟ್ನಿಗೆ ರುಬ್ಬಿ ಒಗ್ಗರಣೆ ಹಾಕಿ ಒಂದು ಬಟ್ಟಲಿಗೆ ಸುರಿದು ಟೇಬಲ್ಲಿನ ಮೇಲೆ ಇಟ್ಟು ಬರಬೇಕು. ಅದಕ್ಕೂ ಮುಂಚೆ ಪಪ್ಪಾಯನೋ, ಕಲ್ಲಂಗಡೀನೋ ಹಚ್ಚಿ ಹೋಳು ಮಾಡಿ ಅದನ್ನೂ ಟೇಬಲ್ಲಿನ ಮೇಲೆ ಇಡಬೇಕು. ಹೀಗೆ ಅಡುಗೆ ಮನೆಗೂ ಹಾಲ್ ಗೂ ಓಡಾಟದ ನಡುವೆಯೇ ಗ್ಯಾಸ್ ಹಚ್ಚುವ ಮೊದಲೇ, ಬಾಣಲೆಗೆ, ಹೆಚ್ಚಾಗದಂತೆ ಕಡಿಮೆಯೂ ಆಗದಂತೆ ಎಣ್ಣೆ ಸವರಿ ರೊಟ್ಟಿ ತಟ್ಟಿರಬೇಕು. ಫ್ರಿಜ್ಜಿನಿಂದ ಮೊಸರು ಬೆಣ್ಣೆ ನೆನಪಿನಿಂದ ಮೊದಲೇ ತೆಗೆದಿಡಬೇಕು. ಈ ಎಲ್ಲದರ ಮಧ್ಯೆ ರೊಟ್ಟಿ ಸೀಯದ ಹಾಗೆ ನೋಡಬೇಕು. ಗ್ಯಾಸ್ ಉರಿ ಹೆಚ್ಚು ಕಮ್ಮಿ ಆಗುತ್ತಿರಬೇಕು. ಇಷ್ಟೆಲ್ಲಾ ಜಾಗರೂಕತೆಯಿಂದ, ಪ್ರೀತಿಯಿಂದ ಮಾಡುವಾಗ ಪಾಪಿ ಕೂದಲೆಳೆ ಮುಂಡೇದು ಹೇಗೋ ಬಂದು ಸೇರಿಕೊಂಡುಬಿಟ್ಟಿರುತ್ತದೆ. ಯಾರಾದರೂ ನೆಂಟರು ಬಂದಾಗ ಹೀಗೆ ಆಗಿಬಿಟ್ಟರೆ ಎನ್ನುವ ಅವ್ಯಕ್ತ ಭಯ ಮಾಡುವಾಕೆಗೂ ಇರುತ್ತದೆ.ಎಷ್ಟೆಂದರೂ ಮಾನದ ಪ್ರಶ್ನೆ. ಕೂದಲೇನು ಬಟಾಣಿಯೇ, ಪ್ರೀತಿಯಿಂದ ಹಿಟ್ಟಿಗೆ ಹಾಕಿ ಕಲಸಿ ರೊಟ್ಟಿ ತಟ್ಟಲು......?!14/818 ಈಸಕ್ಕಿಯಾಸೆ ನಮಗೇಕೆ.........? ಅ :ಮೈಸೂರು ಸಿಲ್ಕ್ ಸೀರೆಗಳು ತುಂಬಾ ಕಮ್ಮಿ ಬೆಲೆಗೆ ಮಾರಾಟಕ್ಕಿವೆಯಂತೆ, ನಮ್ಮೆಜಮಾನ್ರು ಮನೆ ಖರ್ಚಿಗೆ ಅಂತ ಕೊಡೋ ಹಣದಲ್ಲಿ ಸ್ವಲ್ಪ ಉಳಿಸಿದ್ದೆ, ಅದರಲ್ಲಿ ಸೀರೆ ತೊಗೋಳೋಣಾ ಅಂತಿದ್ದೀನಿ. ಆಮೇಲೆ ಅವರು ಕೇಳಿದ್ರೆ ಅಮ್ಮ ಕೊಡಿಸಿದ್ರು ಅಂತ ಹೇಳಿಬಿಡ್ತೀನಿ. ಕ: ಹಾಗೆ ಯಾಕೆ ಹೇಳ್ತೀ? ಮನೆ ಖರ್ಚಿಗೆ ಕೊಟ್ಟ ಹಣ ಮಿಗಿಸಿದ್ದೆ ಅದರಲ್ಲಿ ತೊಗೋಳ್ತೀನಿ ಅಂತಾ ರಾಜರೋಷವಾಗಿ ಹೇಳು. ಸುಳ್ಳು ಯಾಕೆ? ಅ: ಹಾಗೆ ಹೇಳಿದ್ರೆ, ಇಷ್ಟೆಲ್ಲಾ ಖರ್ಚಿದೆ ಈಗ ಬೇಡಾ ಅಂತಾರೆ. ಕ : ಬೇಡ, ತೊಗೊಂಡು ಬಂದ ಮೇಲೆ ಹೇಳು ಆಗ ಏನು ಮಾಡ್ತಾನೆ? ತಲೆ ಕಡಿದು ಬಿಡ್ತಾನಾ? ಅ : ಹಾಗೇನಾದ್ರೂ ತಂದ್ರೆ, ಇನ್ನು ಮುಂದೆ ಮನೆ ಖರ್ಚಿಗೆ ಕೊಡೋ ಹಣದಲ್ಲಿ ಕಡಿತ ಆಗಿಬಿಡುತ್ತೆ.. ಕ : ನಿನಗೆ ಅಷ್ಟು ಆಸೆ ಇದ್ರೆ ಮನೇಲೇ ಕೂತಿರ್ತೀಯಲ್ಲಾ? ನೀನೇ ಸಂಪಾದಿಸು, ನಾಲ್ಕು ಮಕ್ಕಳಿಗೆ ಪಾಠ ಹೇಳು. ಸಂಪಾದನೇನೂ ಆಗುತ್ತೆ, ಅಸೆನೂ ಈಡೇರುತ್ತೆ, ನಿನ್ನ ಗಂಡನ ಕೈಕಟ್ಟಿದಾಗ ಅವರಿಗೂ ಸಹಾಯ ಮಾಡಬಹುದು. ನನ್ನ ಹೆಂಡ್ತಿ ಎಷ್ಟು ಜಾಣೆ ಅಂತ ಆಗ ನಿನ್ನ ಬಗ್ಗೆ ಅಭಿಮಾನಾನೂ ಮೂಡತ್ತೆ. ಅದು ಬಿಟ್ಟು ಕಳ್ಳತನ ಯಾಕೆ? ಅದು ಸರಿ ಮೊನ್ನೆ ದೇಶಪಾಂಡೆ ಮೇಡಮ್ ಸ್ವಚ್ಛತಾ ಅಭಿಯಾನಕ್ಕೆ ಕರೆದಿದ್ರಲ್ಲಾ ನೀನು ಯಾಕೆ ಬರ್ಲಿಲ್ಲ? ಅ: ಹ್ಞೂ.. ಕರೆದಿದ್ರು. ನಮ್ಮೆಜಮಾನ್ರಿಗೆ ಹೀಗೆ ಕೆಳವರ್ಗದ ಹೆಂಗಸರ ತರಹ ಬೀದೀಲೆಲ್ಲಾ ಪೊರಕೆ ಹಿಡ್ಕೊಂಡು ಓಡಾಡೋದು ಇಷ್ಟ ಇಲ್ಲ ಅಂತ ಹೇಳಿಬಿಟ್ಟೆ. ಯಜಮಾನ್ರಿಗೆ ಇಷ್ಟ ಇಲ್ಲ!!? ಪಾಪ ಆ ಯಜಮಾನ ಎಲ್ಲೋ ತನ್ನ ಕಛೇರಿಯಲ್ಲಿ ಬಾಸ್ ಜೊತೆ ಗುದ್ದಾಡುತ್ತಲೋ, ಇಲ್ಲ ತನ್ನ ಸಹೋದ್ಯೋಗಿಗಳ ಜೊತೆ ತಿಕ್ಕಾಡುತ್ತಲೋ ...ಅವನ ತಲೆ ಕೆಟ್ಟು ಕೆರ ಹಿಡಿದು ಹೋಗಿರೋತ್ತೆ. ಇದೆಕ್ಕೆಲ್ಲಾ ಪುರುಸೊತ್ತು ಎಲ್ಲಿರುತ್ತೆ? ಇಲ್ಲಿ ಇವಳು ಸಲೀಸಾಗಿ ತನ್ನ ಗಂಡನ ಭುಜದಮೇಲೆ ಬಂದೂಕನ್ನಿಟ್ಟು ಗುರಿ ಸಾಧಿಸಿಬಿಡುತ್ತಾಳೆ. ತನಗೆ ಕೆಂಪಿನ ನೆಕ್ಲೇಸೋ, ಮೈಸೂರು ಸಿಲ್ಕ್ ಸೀರೇನೋ ಬೇಕೆಂದಾಗ ಗಂಡನನ್ನು ಪುಸಲಾಯಿಸಿ ಓಲೈಸಿ ಗಿಟ್ಟಿಸಿಕೊಳ್ಳುವ, ತನಗೆ ಬೇಡವೆಂದಾಗ ಅದನ್ನು ಗಂಡನ ಮೇಲೆ ಹಾಕಿಬಿಡುವ ಕೌಶಲ್ಯ ನಮ್ಮ ಕೆಲ ಹೆಣ್ಣುಮಕ್ಕಳಿಗೆ ಚೆನ್ನಾಗಿಯೇ ಕರತಲಾಮಲಕವಾಗಿರುತ್ತದೆ. ಒಂದು ಹಾಕೋಳೋದು ಚೆನ್ನ. ಅದೇನು ಒಂದರ ಮೇಲೆ ಹತ್ತು ಹೇರಿಕೊಳ್ಳೋದು ಚೆಂದವೇ? ಜಿ.ಎಸ್.ಎಸ್. ಹೇಳ್ತಾರಲ್ಲಾ "ನಾರಿಯೋ ಒಡವೆಗಳ ಲಾರಿಯೋ " ಅಂತ. ಹಾಗೆ ಹೇರಿಕೊಳ್ಳೋದು ಅಶ್ಲೀಲ ಮಾತ್ರವಲ್ಲ ಪಾಪ ಕೂಡ. ಹಕ್ಕಿಗೆ ಮಾತ್ರ ಹೋರಾಡುವುದಲ್ಲ ಕರ್ತವ್ಯ ಪ್ರಜ್ಞೆಯೂ ಇರಬೇಕು. ನನ್ನ ಸಂಸಾರದಲ್ಲೇ ನಾನು ಕಳ್ಳತನ ಮಾಡಬಹುದಾದರೆ, ಹೊರಗೆ ಗಂಡನ ಕಳ್ಳತನಕ್ಕೂ ಕುಮ್ಮಕ್ಕು ಕೊಟ್ಟ ಹಾಗೆ. ನಮ್ಮಲ್ಲಿ ಭ್ರಷ್ಟಾಚಾರ ಹೆಚ್ಚಾಗಲು ಸ್ವಲ್ಪ ಮಟ್ಟಿಗೆ ನಮ್ಮ ಹೆಣ್ಣು ಮಕ್ಕಳ ಲಾಲಸೆಯೂ ಕಾರಣ. ಗಂಡಸಿಗೆ ಹೆಂಡತಿ ಒಂದು ದೌರ್ಬಲ್ಯವಾಗಬಾರದು ನೋಡಿ. ಹಾಗೆ, ಅಗತ್ಯಕ್ಕಿಂತಾ ಹೆಚ್ಚಾದುದು ನಮಗೆ ಬೇಡ ಎಂದು ಗಂಡನಿಗೆ ತಪರಾಕಿ ಕೊಡುವ ಲಕ್ಕಮ್ಮನ ಧೈರ್ಯ ಪ್ರತಿ ಹೆಂಗಸಿಗೂ ಇರಬೇಕು. ನಮ್ಮ ಅಜ್ಜಿಯರ ಹಾಗೆ ಮನೆಯನ್ನೂ ಸಮರ್ಥವಾಗಿ ನಿಭಾಯಿಸದ, ಈಗಿನ ಕಾಲಕ್ಕೆ ತಕ್ಕಂತೆ ಔದ್ಯೋಗಿಕ ತಹತಹವನ್ನೂ ಇಟ್ಟುಕೊಳ್ಳದ ಇಂತಹ ಕೆಲವು ಸೋಮಾರಿ, ಬೇಜವಾಬ್ದಾರಿ ಹೆಂಗಸರ ಬಗ್ಗೆ ನನಗೆ ಅತೀವ ಸಿಟ್ಟಿದೆ. ಒಂದು ಸಮಾಧಾನವೆಂದರೆ ಇಂತಹ ಮಹಿಳೆಯರು ಬಹಳ ಸಂಖ್ಯೆಯಲ್ಲಿ ಇಲ್ಲ ಎಂಬುದೇ ಆಗಿದೆ. 16/818 ಈಸಕ್ಕಿಯಾಸೆ ನಮಗೇಕೆ.........? ಅ :ಮೈಸೂರು ಸಿಲ್ಕ್ ಸೀರೆಗಳು ತುಂಬಾ ಕಮ್ಮಿ ಬೆಲೆಗೆ ಮಾರಾಟಕ್ಕಿವೆಯಂತೆ! ನಮ್ಮೆಜಮಾನ್ರು ಮನೆ ಖರ್ಚಿಗೆ ಅಂತ ಕೊಡೋ ಹಣದಲ್ಲಿ ಸ್ವಲ್ಪ ಉಳಿಸಿ ದ್ದು ಇದೆ, ಅದರಲ್ಲಿ ಸೀರೆ ತೊಗೋಳೋಣಾ ಅಂತಿದ್ದೀನಿ. ಆಮೇಲೆ 'ಇವರು' ಕೇಳಿದ್ರೆ ಅಮ್ಮ ಕೊಡಿಸಿದ್ರು ಅಂತ ಹೇಳಿಬಿಡ್ತೀನಿ. ಕ: ಹಾಗೆ ಯಾಕೆ ಹೇಳ್ತೀ? ಮನೆ ಖರ್ಚಿಗೆ ಕೊಟ್ಟ ಹಣ ಮಿಗಿಸಿದ್ದೆ ಅದರಲ್ಲಿ ತೊಗೋಳ್ತೀನಿ ಅಂತಾ ರಾಜಾರೋಷವಾಗಿ ಹೇಳು. ಸುಳ್ಳು ಯಾಕೆ? ಅ: ಹಾಗೆ ಹೇಳಿದ್ರೆ, ಇಲ್ಲಸಲ್ಲದ ಖರ್ಚು ತೋರಿಸಿ, ಈಗ ಬೇಡಾ ಅಂತಾರೆ. ಕ : ಬೇಡ, ತೊಗೊಂಡು ಬಂದ ಮೇಲೆ ಹೇಳು. ಆಗ ಏನು ಮಾಡ್ತಾನೆ? ತಲೆ ತೆಗೀತಾನಾ? ಅ : ಹಾಗೇನಾದ್ರೂ ತಂದ್ರೆ, ಇನ್ನು ಮುಂದೆ ಮನೆ ಖರ್ಚಿಗೆ ಕೊಡೋ ಹಣದಲ್ಲಿ ಕಡಿತ ಆಗಿಬಿಡುತ್ತೆ.. ಕ : ನಿನಗೆ ಅಷ್ಟು ಆಸೆ ಇದ್ರೆ ಮನೇಲೇ ಕೂತಿರ್ತೀಯಲ್ಲಾ? ನೀನೇ ಸಂಪಾದಿಸು, ನಾಲ್ಕು ಮಕ್ಕಳಿಗೆ ಪಾಠ ಹೇಳು. ಸಂಪಾದನೇನೂ ಆಗುತ್ತೆ, ಆಸೇನೂ ಈಡೇರುತ್ತೆ, ನಿನ್ನ ಗಂಡನ ಕೈಕಟ್ಟಿದಾಗ ಅವನಿಗೂ ಸಹಾಯ ಮಾಡಬಹುದು. 'ನನ್ನ ಹೆಂಡ್ತಿ ಎಷ್ಟು ಜಾಣೆ' ಅಂತ ಆಗ ನಿನ್ನ ಬಗ್ಗೆ ಅಭಿಮಾನಾನೂ ಮೂಡತ್ತೆ. ಅದು ಬಿಟ್ಟು ಕಳ್ಳತನ ಯಾಕೆ? ಅದು ಸರಿ ಮೊನ್ನೆ ದೇಶಪಾಂಡೆ ಮೇಡಮ್ ಸ್ವಚ್ಛತಾ ಅಭಿಯಾನಕ್ಕೆ ಕರೆದಿದ್ರಲ್ಲಾ ನೀನು ಯಾಕೆ ಬರ್ಲಿಲ್ಲ? ಅ: ಹ್ಞೂ.. ಕರೆದಿದ್ರು. ಹೀಗೆ ಕೆಳವರ್ಗದ ಹೆಂಗಸರ ತರಹ ಬೀದೀಲೆಲ್ಲಾ ಪೊರಕೆ ಹಿಡ್ಕೊಂಡು ಓಡಾಡೋದು ನಮ್ಮೆಜಮಾನ್ರಿಗೆ ಇಷ್ಟ ಇಲ್ಲ ಅಂತ ಹೇಳಿಬಿಟ್ಟೆ...ಯಾರು ಹೋಗ್ತಾರೆ? ಕ :ಯಜಮಾನ್ರಿಗೆ ಇಷ್ಟ ಇಲ್ಲ!!? (ಪಾಪ ಆ ಯಜಮಾನ ಎಲ್ಲೋ ತನ್ನ ಕಚೇರಿಯಲ್ಲಿ ಬಾಸ್ ಜೊತೆ ಗುದ್ದಾಡುತ್ತಲೋ, ಇಲ್ಲ ತನ್ನ ಸಹೋದ್ಯೋಗಿಗಳ ಜೊತೆ ತಿಕ್ಕಾಡುತ್ತಲೋ ...ಅವನ ತಲೆ ಕೆಟ್ಟು ಕೆರ ಹಿಡಿದು ಹೋಗಿರೋತ್ತೆ. ಇದೆಕ್ಕೆಲ್ಲಾ ಪುರುಸೊತ್ತು ಎಲ್ಲಿರುತ್ತೆ? ಇಲ್ಲಿ ಇವಳು ಸಲೀಸಾಗಿ ತನ್ನ ಗಂಡನ ಭುಜದಮೇಲೆ ಬಂದೂಕನ್ನಿಟ್ಟು ಗುರಿ ಸಾಧಿಸಿಬಿಡುತ್ತಾಳೆ) ನಿನಗೆ ಕೆಂಪಿನ ನೆಕ್ಲೇಸೋ, ಮೈಸೂರು ಸಿಲ್ಕ್ ಸೀರೇನೋ ಬೇಕೆಂದಾಗ ಗಂಡನನ್ನು ಪುಸಲಾಯಿಸಿ, ಓಲೈಸಿ ಗಿಟ್ಟಿಸಿಕೊಳ್ಳೋಕೆ ಗೊತ್ತಾಗುತ್ತೆ, ಈಗ ಇಷ್ಟ ಇಲ್ಲಾಂತ ಗಂಡನ ಮೇಲೆ ಹಾಕಿ ಅವನನ್ನು ಕೆಟ್ಟೋನನ್ನಾಗಿ ಮಾಡಿಬಿಡೋದಾ? ಒಂದು ನೆಕ್ಲೋಸೋ, ಹಾರಾನೋ ಹಾಕೋಳೋದು ಚೆನ್ನ..ಕಣೇ. ಅದೇನು ಒಂದರ ಮೇಲೆ ಹತ್ತು ಹೇರಿಕೊಳ್ಳೋದು ಚೆಂದವೇ? ಜಿ.ಎಸ್.ಎಸ್. ಹೇಳ್ತಾರಲ್ಲಾ "ನಾರಿಯೋ ಒಡವೆಗಳ ಲಾರಿಯೋ " ಅಂತ. ಹಾಗೆ ಹೇರಿಕೊಳ್ಳೋದು ಅಶ್ಲೀಲ ಮಾತ್ರವಲ್ಲ ಪಾಪ ಕೂಡ ..... ನೋಡು ಹಕ್ಕಿಗೆ ಮಾತ್ರ ಹೋರಾಡುವುದಲ್ಲ ಕರ್ತವ್ಯ ಪ್ರಜ್ಞೆಯೂ ಇರಬೇಕು. ನನ್ನ ಸಂಸಾರದಲ್ಲೇ ನಾನು ಕಳ್ಳತನ ಮಾಡಬಹುದಾದರೆ, ಹೊರಗೆ ಗಂಡನ ಕಳ್ಳತನಕ್ಕೂ ಕುಮ್ಮಕ್ಕು ಕೊಟ್ಟ ಹಾಗೆ. ನಮ್ಮಲ್ಲಿ ಭ್ರಷ್ಟಾಚಾರ ಹೆಚ್ಚಾಗಲು ಸ್ವಲ್ಪ ಮಟ್ಟಿಗೆ ನಮ್ಮ ಹೆಣ್ಣು ಮಕ್ಕಳ ಲಾಲಸೆಯೂ ಕಾರಣ. ಅ: ಅಯ್ಯೋ..ಲಂಚ ತೊಗೋಳಿ ಅಂತಾ ನಾನೇನು ಹೇಳಿದ್ದೀನಾ? ಸ್ವಂತ ಬುದ್ಧಿ ಗಂಡಸಿಗೆ ಇರಬೇಡ್ವಾ? ಮದ್ವೆ ಮಾಡ್ಕೊಂಡಮೇಲೆ ಹೆಂಡ್ತಿ ಮಕ್ಕಳನ್ನು ನಿಭಾಯಿಸೋದು ಅವನ ಕರ್ತವ್ಯ ಅಲ್ಲವಾ? ಅವನು ಎಲ್ಲಿಂದ ತಂದ್ರೆ ನನಗೇನು? ಕ: ನಿನ್ನ ಆಸೆಗಳನ್ನ ಸ್ವಲ್ಪ ಕಮ್ಮಿ ಮಾಡ್ಕೋ.. ಆಗ ಅವನು ಹೊರಗೆ ಕೈಚಾಚೋದು ತಪ್ಪುತ್ತೆ. ಅಜ್ಜಿ, ಅಷ್ಟು ಬಡತನದಲ್ಲೂ ಹೊರಗೆ ಏನೂ ಬಿಟ್ಟುಕೊಡದಹಾಗೆ ಹತ್ತು ಮಕ್ಕಳ ಸಂಸಾರ ನಿಭಾಯಿಸಲಿಲ್ವೇನೇ? ಅದೇನು ಕಮ್ಮೀ ಅಂತೀಯ ಅಥವಾ ಅವಳಿಗೆ ಬುದ್ಧಿ ಇರಲಿಲ್ಲ ಅಂತೀಯೋ...? ಗಂಡಸಿಗೆ ಹೆಂಡತಿ ಒಂದು ದೌರ್ಬಲ್ಯವಾಗಬಾರದು ನಿಜ. ಹಾಗೆ, ಅಗತ್ಯಕ್ಕಿಂತಾ ಹೆಚ್ಚಾದುದು ನಮಗೆ ಬೇಡ ಎಂದು ಗಂಡನಿಗೆ ತಪರಾಕಿ ಕೊಡುವ ಧೈರ್ಯ ಕೂಡ ಪ್ರತಿ ಹೆಂಗಸಿಗೂ ಇರಬೇಕು ಇಲ್ಲಿ ನೋಡೇ... ನೀನು ಕೋಪ ಮಾಡ್ಕೊಂಡ್ರೂ ಪರವಾಗಿಲ್ಲ. ನಮ್ಮ ಅಜ್ಜಿಯರ ಹಾಗೆ ಮನೆಯನ್ನೂ ಸಮರ್ಥವಾಗಿ ನಿಭಾಯಿಸದ, ಈಗಿನ ಕಾಲಕ್ಕೆ ತಕ್ಕಂತೆ ವ್ಯಾವಸಾಯಿಕ (career oriented) ತಹತಹವನ್ನೂ ಇಟ್ಟುಕೊಳ್ಳದ ನಿನ್ನಂತಹ ಕೆಲವು ಸೋಮಾರಿ, ಬೇಜವಾಬ್ದಾರಿ ಹೆಂಗಸರ ಬಗ್ಗೆ ನನಗೆ ಅತೀವ ಸಿಟ್ಟಿದೆ. ಒಂದು ಸಮಾಧಾನವೆಂದರೆ ಸದ್ಯ ಇಂತಹ ಮಹಿಳೆಯರು ಬಹಳ ಸಂಖ್ಯೆಯಲ್ಲಿ ಇಲ್ಲ. ಯಾವಾಗಲೂ ಹೆಣ್ಣುಮಕ್ಕಳನ್ನು ವಹಿಸಿಕೊಂಡು ಮಾತಾಡ್ತೀನಿ ಅಂದ ಮಾತ್ರಕ್ಕೆ ಅವರ ಕಳ್ತನಾನೂ support ಮಾಡ್ತೀನಿ ಅಂತ ತಿಳ್ಕೋಬೇಡಾ.... 16/818 ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಮುಚ್ಚುವುದು...... "ದೂರ ಬೆಟ್ಟದಲ್ಲಿ ಪುಟ್ಟ ಮನೆಯಿರಬೇಕು ಮನೆಯಸುತ್ತ ಹೂವ ರಾಶಿ ಹಾಸಿರಬೇಕು" ಎನ್ನುವುದು ಎಂಥ ಅಪಾಯಕಾರಿ ಸ್ವಪ್ನ ಎನ್ನುವುದು ನಮಗೀಗ ಅರಿವಿಗೆ ಬರುತ್ತಿದೆ. ಕೇವಲ ಬೆಟ್ಟದ ಮೇಲಲ್ಲ ಬೆಟ್ಟಲ ತಪ್ಪಲಲ್ಲಿ ಮನೆಯಿರುವುದೂ ಅಪಾಯಕಾರಿಯೇ!ಇಂತಹ ಸುಂದರ ಸ್ವಪ್ನವೊಂದು ದುಃಸ್ವಪ್ನವಾಗಿರುವುದಕ್ಕೆ ನಾವೇ ಕಾರಣ. ಮನೆ ಮುರಿಯುವುದೇನೆಂಬುದು ಈಗ ನಮಗೆ ಕೇವಲ ಮಾತಿನ ಸತ್ಯವಾಗಿ ಉಳಿದಿಲ್ಲ. ಅದು ನಮ್ಮ ಕಣ್ಣೆದುರೇ ಜರಗುತ್ತಿದೆ. ಸತ್ತವರಿಗಾಗಿ ಅಳಬೇಕೋ? ಮನೆ ಮುರಿದದ್ದಕ್ಕೆ ಅಳಬೇಕೋ? ಹೆಣ ಸಂಸ್ಕಾರ ಮಾಡಬೇಕೋ, ಮನೆ ದುರಸ್ತಿ ಮಾಡಿಸಬೇಕೋ? ಇಲ್ಲ ಈ ಕ್ಷಣದ ಹೊಟ್ಟೆ ಪಾಡಿಗಾಗಿ ಮೇಲಿನಿಂದ ಬೀಳುವ ಆಹಾರ ಪೊಟ್ಟಣಗಳನ್ನು ಹಿಡಿಯಲು ಕಾಯುತ್ತಾ ಕೂರಬೇಕೋ? ಮನೆ ದುರಸ್ತಿ ಮಾಡಲು ಕರೆಯುವುದಾದರೂ ಯಾರನ್ನು? ಎಲ್ಲರೂ ನೀರಿನಲ್ಲಿ ಮುಳುಗಿರುವಾಗ! ಹುಲ್ಲುಕಡ್ಡಿಯ ಆಸರೆಗಾಗಿ ಹೋರಾಡುತ್ತಿರುವಾಗ?ಕಷ್ಟಗಳು ಗುಳೆ ಎದ್ದು ಬರುವುದೆಂದರೆ ಇದೇ ಎನೋ? ಪ್ರವಾಹ ಪೀಡಿತರ ನೆರವಿಗೆ ಜನ ಧಾವಿಸುತ್ತಾ ಮಾನವೀಯತೆಯನ್ನು ಮೆರೆದಿದ್ದಾರೆ. ಯಾರೋ ಒಬ್ಬರು ನಿರಾಶ್ರಿತರನ್ನೆಲ್ಲಾ ತಮ್ಮ ಮನೆಗೆ ಆಹ್ವಾನಿಸಿರುವ ಸಂಗತಿ ವಾಟ್ಸಾಪ್ ಫೇಸ್ ಬುಕ್ ಗಳಲ್ಲಿ ಹರಿದಾಡುತ್ತಿದೆ. ಇನ್ನಾರೋ ಬಟ್ಟೆ ಬರೆ ಸಂಗ್ರಹಿಸುವ ಕೇಂದ್ರ ಮಾಹಿತಿಗಳನ್ನು ದೂರವಾಣಿಯ ಸಂಖ್ಯೆಗಳನ್ನೂ ಒದಗಿಸುತ್ತಿದ್ದಾರೆ. ಮೊನ್ನೆ ದೂರದರ್ಶನದಲ್ಲಿ, "ನೆರೆಪೀಡಿತರ ನೆರವಿಗೆ ಹರಿದು ಬರುತ್ತಿರುವ ಆಹಾರ ಮತ್ತು ಉಡುಪುಗಳ ಸಂಗ್ರಹಣೆ ಮಿತಿ ಮೀರಿದ್ದು ಅದರ ವಿಲೇವಾರಿ ಕಷ್ಟವಾಗುತ್ತಿದೆ, ದಯವಿಟ್ಟು ಇನ್ನು ಮುಂದೆ ಅವುಗಳನ್ನು ಯಾರೂ ಕಳುಹಿಸಬೇಡಿ" ಎಂದು ಮುಖ್ಯಮಂತ್ರಿಗಳು ಆದೇಶ ಕೊಟ್ಟಿದ್ದಾರೆ.ನೆರವಿನ ನೆಪದಲ್ಲಿ ನಾವು ನಮಗೆ ಬೇಡದ ಚಿಂದಿಗಳನ್ನು ಎಸೆಯುವ dumping yard ಆಗುತ್ತಿದೆಯೇ ನೆರೆಪೀಡಿತ ಪ್ರದೇಶ? ಎನ್ನುವ ಅನುಮಾನವೂ ಬರುತ್ತಿದೆ. ಇದಕ್ಕೆ ಕಾರಣ ಇಲ್ಲೊಬ್ಬರು ದಯವಿಟ್ಟು ಹೊಸ ಬಟ್ಟೆಗಳನ್ನು ಕಳುಹಿಸಿ ಹಳೆಯದು ಬೇಡ ಎಂಬ ಪೋಸ್ಟ್ ಹಾಕಿರುವುದೇ ಆಗಿದೆ. ಮಾನವೀಯತೆಯನ್ನು ಮೆರೆಯುವವರೂ ನಾವೇ, ಅದಕ್ಕೆ ಕಂಟಕಪ್ರಾಯರಾಗಿರುವವರೂ ನಾವೇ! ಅನಿಯಂತ್ರಿತ ಗಣಿಗಾರಿಕೆ ಚಟುವಟಿಕೆಗಳು, ಕಾಡ ಕಡಿದು ನಾಡು ಮಾಡುವ ಅವಿವೇಕ,ಅಣಬೆಯಂತೆ ಹುಟ್ಟಿಕೊಳ್ಳುತ್ತಿರುವ ಕೈಗಾರಿಕೋದ್ಯಮಗಳು ಇವುಗಳು ಇಲ್ಲದಿದ್ದರೆ ಈ ಮಟ್ಟದ ಅನಾಹುತ ಸಂಭವಿಸುತ್ತಿರಲಿಲ್ಲ ಎಂದು ಅನೇಕ ಭೂವಿಜ್ಞಾನ ತಜ್ಞರು ಪತ್ರಿಕೆಗಳಲ್ಲಿ ಹೇಳಿಕೆ ಕೊಡುತ್ತಿದ್ದಾರೆ. ಬಿಳಿಮಲೆಯವರು ತಮ್ಮ ಗೋಡೆಯಮೇಲೆ "ಬಂಟಮಲೆಯಲ್ಲಿ ಹನಿ ತುಂಡಾಗದೆ ವಾರಗಟ್ಲೆ ಭಾರೀ ಮಳೆ ಬೀಳುತ್ತದೆ. ಬಿರುಗಾಳಿಯಂಥಾ ಗಾಳಿಗೆ ಬೃಹತ್ ಮರಗಳು ಧರೆಗುರುಳುತ್ತವೆ. ಸಣ್ಣ ತೊರೆಗಳು ಬೃಹದಾಕಾರವಾಗಿ ಬೆಳೆದು ಎಲ್ಲವನ್ನೂ ಕೊಚ್ಚಿಕೊಂಡು ಹೋಗುತ್ತಾ ಧುಮ್ಮಿಕ್ಕಿ ಹರಿಯುತ್ತವೆ. ಮಣ್ಣಿನ ಗೋಡೆಯ ಸೋರುವ ಮನೆಯಲ್ಲಿ ಬೀಳುವ ನೀರನ್ನು ಹೊರಗೆ ಸರಿಸಲು ಒದ್ದಾಡುತ್ತಿದ್ದ ಅಮ್ಮ ಆರಿದ್ರಾ ಮಳೆಯ ಆರ್ಭಟೆಗೆ ಹೆದರಿ ಅಳುತ್ತಿದ್ದ ದಿನಗಳು ಈಗ ನೆನಪಾಗುತ್ತಿವೆ. ಆದರೆ ಒಮ್ಮೆಯೂ ಈ ಬಂಟಮಲೆ ಕುಸಿದಿಲ್ಲ. ಅಲ್ಲಿ ಬದುಕುತ್ತಿದ್ದ ನಮ್ಮ ಮನೆಗಳನ್ನು ಕಸಿದುಕೊಂಡಿಲ್ಲ. ನೂರಾರು ವರ್ಷಗಳಲ್ಲಿ ಅಲ್ಲಿ ಮಳೆಯಿಂದಾಗಿ ಯಾರೂ ಜೀವ ಕಳೆದುಕೊಂಡಿಲ್ಲ. ಬಹುಶ: ಅಲ್ಲಿರುವ ಜನರು ಬಂಟಮಲೆಯನ್ನು ಕಡಿದು ತುಂಡರಿಸದಿರುವುದೇ ಇದಕ್ಕೆ ಕಾರಣವಿರಬಹುದೇ? ಬೆಟ್ಟದ ಇಳಿಜಾರಿನಲ್ಲಿಯೇ ಇಲ್ಲಿನ ಮನೆಗಳಿವೆ, ತೋಟಗಳಿವೆ, ಹಾದಿಯೂ ಇದೆ. ಅಲ್ಲಿನ ಮರಗಳು ಮಣ್ಣನ್ನು ಭದ್ರವಾಗಿ ಹಿಡಿದಿಟ್ಟಿವೆ. ನನಗಿಂತ ಎತ್ತರದ ಬರೆಗಳನ್ನು ನಾನು ಕಂಡೇ ಇಲ್ಲ. ಪ್ರಕೃತಿಯನ್ನು ನಾಶಮಾಡದೆ, ಸಂಸ್ಕೃತಿಯನ್ನು ಕಟ್ಟಿಕೊಂಡ ನಮ್ಮ ಹಿರಿಯರ ಈ ಮಾದರಿಯು ನಮಗೊಂದು ಆದರ್ಶವಾಗುವುದೇ? ಏನೂ ತಿಳಿಯುತ್ತಿಲ್ಲ" ಎಂದು ಪ್ರಕಟಿಸಿರುವ ವಿಷಾದದಲ್ಲಿಯೇ ನಮ್ಮ ಈಗಿನ ಎಲ್ಲಾ ಅವಗಡಗಳಿಗೂ ಉತ್ತರವಿದೆ. ಈಗ ಕೆಲವು ವರ್ಷಗಳ ಹಿಂದೆ ಕೇದಾರನಾಥನೇ ನೀರುಪಾಲಾಗಿದ್ದ. ಆಗಲೂ ನಮ್ಮ ಜನ ಹೀಗೇ ಹುಯಿಲಿಟ್ಟರು, ಸಹಾಯಕ್ಕೆ ಧಾವಿಸಿದರು. ಅದಕ್ಕೂ ಹಿಂದೆ ಮುಂಬಾದೇವಿಯೂ ಮುಳುಗಿ ಹೋಗಿದ್ದಳು ಅಗಲೂ ಜನ ಮಾನವೀಯತೆಯನ್ನು ಮೆರೆದರು ಪತ್ರಿಕೆಗಳು ಕೊಂಡಾದಿದವು. ಸಹಾಯಕ್ಕೆ ಈಗ ಧಾವಿಸುವ ನಾವೇ "ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಮುಚ್ಚು"ವುದಕ್ಕಿಂತ, ಮೊದಲೇ ಪರಿಸರ ಸಂರಕ್ಷಣೆಯ ಬಗ್ಗೆ ಕಾಳಜಿ ತೋರಿಸಿದ್ದಿದ್ದರೆ ಈ ಅನಾಹುತಗಳು ಸಂಭವಿಸುತ್ತಿರಲಿಲ್ಲ. ಪರಿಸರ ಸಂರಕ್ಷಿಸುವುದಿರಲಿ ಅಂತಹ ಗಣಿಧಣಿಗಳನ್ನು ಪಲ್ಲಕಿಯಿಲ್ಲಿಟ್ಟು ನಾವು ಮೆರವಣಿಗೆ ಮಾಡುತ್ತೇವಲ್ಲಾ......? ಕಾಲುವೆಗಳನ್ನು ಒತ್ತರಿಸಿ ಮನೆಗಳನ್ನು ಕಟ್ಟಿಕೊಳ್ಳುತ್ತೇವಲ್ಲಾ ...? ಅಂತಹ ಸಂದರ್ಭಗಳಲ್ಲಿ ನಾವುಗಳೇಕೆ ಜಾಗೃತರಾಗುವುದಿಲ್ಲ? ಅಂತಹ ವಿನಾಶಕಾರೀ ಕೃತ್ಯಗಳನ್ನು ವಿರೋಧಿಸುವುದಿಲ್ಲ? ಅದಕ್ಕಿಂತ ಚಿಂದಿ ಬಟ್ಟೆಗಳನ್ನು, ಬ್ರೆಡ್ಡು ತುಂಡುಗಳನ್ನು ಎಸೆಯುವುದು, ಮುಖ್ಯಮಂತ್ರಿ ಪರಿಹಾರ ನಿಧಿಗೆ ಪುಡಿಗಾಸಿನ ಚೆಕ್ ಹರಿಯುವುದೇ ಸುಲಭವೆಂತಲೇ?.....20/8/18 ಅವನು -ಅವಳು ಅವನು: ಎಲ್ಲಾ ರಿಯಾಕ್ಷನರಿ ಕವಿತೆಗಳು. ಅವಳು : ರಿಯಾಕ್ಷನರಿ ಅಂದ್ರೆ ಪ್ರತಿಗಾಮಿ ಎಂತಲಾ ಅವನು : ತಕ್ಷಣಕ್ಕೆ ಪ್ರತಿಕ್ರಿಯಿಸಿ ಹುಟ್ಟಿದ ಕವಿತೆಗಳು. ಅವಳು : ಎಲ್ಲ ಕವಿತೆಗಳೂ ಲೌಕಿಕ ಅನುಭವಕ್ಕೆ ಹುಟ್ಟುವ ಪ್ರತಿಕ್ರಿಯೆಗಳೇ ಅಲ್ಲವಾ? ಅವನು: ಇಲ್ಲ ಅದು ಧ್ಯಾನಸ್ಥ ನೆಲೆಯಲ್ಲಿ ಪಾಕಗೊಳ್ಳಬೇಕು. ‘ಆಳಕ್ಕೆ ಗುದ್ದಲಿಯೊತ್ತಿ ಅಗೆಯ’ ಬೇಡವಾ? ಆಗ ತಾನೇ ‘ಗೆರೆಮಿರಿವ ಚಿನ್ನ’ ಪ್ರಕಾಟವಾಗುವುದು. ಅವಳು: ‘ಕುಂಕುಮ ಭೂಮಿ’ಗೇಕೆ ಆಳಕ್ಕೆ ಅಗೆಯಬೇಕು? ಸ್ವಲ್ಪ ಅಗೆದರೂ ಸಾಕು. ನಮಗೆ ಚಿನ್ನವೇಕೆ? ಅನ್ನ ಸಾಕಲ್ಲ. ಅವನು: ಕುಂಕುಮ ಭೂಮಿಗೂ ಅಗೆತ ಅಗತ್ಯವಿದೆ. ಅದೂ ಕೂಡ ಶ್ರಮದಾಯಕ ಕಸುಬು. ದುಡಿಮೆಗೂ ಕಾವ್ಯಕ್ಕೂ ಅಂಟಿದ ನಂಟಿದೆ. ಹಾಡು ಹುಟ್ಟಿದ್ದೇ ದುಡಿಮೆಯಿಂದ. ದುಡಿಮೆ ಕೂಡ ಒಂದು ಧ್ಯಾನವೇ. ಧ್ಯಾನಸ್ಥ ನೆಲೆಯಲ್ಲಿ ರೂಪುಗೊಳ್ಳದ ಕವಿತೆ ಗಳು ಸಂತೆಗೆ ಮೂರು ಮೊಳ ನೇಯುವ ಹಾಗೆ, instant ಕವಿತೆಗಳಾಗಿಬಿಡುತ್ತವೆ. ಇದು instant ಯುಗ, ready to eat ಯುಗ. ಕವಿತೆಗಳೂ ಹಾಗೆ ಆಗಿಬಿಟ್ಟಿರುವುದು ದುರಂತ. ಅವಳು : ಸ್ಪೂರ್ತಿ, ಸ್ಫುರಣೆ, spontaneity ಇವು ಕೂಡಾ instant ಆದವುಗಳೇ ಅಲ್ಲವಾ? ಶಿವ, ಸದ್ಯೋಜಾತ ಅಂದರೆ ತತಕ್ಷಣಕ್ಕೆ ಪ್ರಕಟವಾಗುವವನು. ಶಿವೇತರದಿಂದ ಕಾಪಾಡುವ ಕವಿತೆ ಸ್ವತಃ 'ಶಿವ'ವಾಗಿರುವಾಗ, ತತಕ್ಷಣಕ್ಕೆ ಏಕೆ ಪ್ರಕಾಟವಾಗಬಾರದು. ಅವನು : ಶಿವ ಸರಿ, ಅವನು ತತಕ್ಷಣಕ್ಕೆ ಪ್ರಕಟವಾಗುವವನೂ ಸರಿ. ಆದರೆ ಹಾಗೆ ಪ್ರಕಟವಾಗುವ ಶಿವನ ಹಿಂದೆ, ಕಾಲವೂ ಕುಳಿತು ಥರಗುಟ್ಟುವ ಹಿಮದಲ್ಲಿ ತಪಸ್ಸು ಮಾಡಿದ ಚರಿತ್ರೆಯಿದೆ. ಹುತ್ತಗಟ್ಟದೆ ಚಿತ್ತ, ರಾಮಾಯಣ ಹುಟ್ಟಲಾರದು.spontaneous ಆಗಿರಬಹುದು ಆದರೆ ಅದು "recollected in tranquility" ಎಂಬುದನ್ನೂ ನೆನಪಿಡಬೇಕು. ಈ tranquilityಯಲ್ಲಿಯೇ ಕವಿತೆ/ಶಿವ ಪ್ರತ್ಯಕ್ಷವಾಗುವುದು. ಕೀಟ್ಸ್ ಕೂಡ ತನ್ನ Grecian Urn ಕವಿತೆಯಲ್ಲಿ ಇದನ್ನೇ ಹೇಳ್ತಾನಲ್ಲ Beauty is Truth, truth beauty. ಅದೂ ಕೂಡ ಸತ್ಯ ಶಿವ ಸುಂದರವೆಂಬ ನಮ್ಮ ಕಲ್ಪನೆಯೇ ಅಲ್ಲವೇ? ಅವನು ತನ್ನ ಇನ್ನೊಂದು "Endymion" ಎಂಬ ಕವಿತೆಯಲ್ಲಿ "A thing of beauty is joy forever" ಎನ್ನುತ್ತಾನೆ. ಅಂದರೆ ತಕ್ಷಣದ ಅನುಭವವೊಂದು ಸಾರ್ವಕಾಲಿಕ ಅನುಭವವಾಗಿ ಕವಿತೆಯಲ್ಲಿ ದಾಖಲಾಗಿಬಿಡುತ್ತದೆ. ಕಾಲಾತೀತವಾಗುವುದು,ಅಮರವಾಗುವುದು ಎಂದರೆ ಇದೇ ಅಲ್ಲವೇ? ಹೂವು ತಕ್ಷಣಕ್ಕೆ ಹುಟ್ಟಿ ತಕ್ಷಣ ಸಾಯುತ್ತದೆ. ಕವಿತೆ ಹಾಗಲ್ಲ. ಅದು ತತಕ್ಷಣ ಪ್ರಕಟವಾಗುವ ಮುನ್ನ ಭಾವಲೋಕದಲ್ಲಿ ಬೆಂದಿರಬೇಕು. ಅದಕ್ಕೆ ಅಗಾಧ ತಾಳ್ಮೆ ಬೇಕು. ಧ್ಯಾನಸ್ಥಳಾಗದೇ ತಾಳ್ಮೆ ದಕ್ಕುವು ದಿಲ್ಲ. ತಾಳ್ಮೆಯಿಲ್ಲದ್ದು ಪಾಕಗೊಳ್ಳುವುದಿಲ್ಲ. ಪಾಕಗೊಳ್ಳದೇ ಇರುವುದು ಕವಿತೆಯಾಗುವುದಿಲ್ಲ. ಅಂತಲ್ಲದವು ಪ್ರಯತ್ನಪೂರ್ವಕ ಹೊಸೆದ ಕವಿತೆಗಳಾಗುತ್ತವೆಯೇ ಹೊರತು ನವಮಾಸ ಗರ್ಭದಲ್ಲಿ ಕಾವು ಕೂತು ಹುಟ್ಟಿದ ವಿಸ್ಮಯವಾಗುವುದಿಲ್ಲ. ಯಾಕೋ ಏನೋ ಇಂದಿನ ಹೆಸರಾಂತ ಕವಿಗಳೂ ಕೂಡ instant mode ಗೆ ಬಿದ್ದುಬಿಟ್ಟಿದ್ದಾರೆ. ಹಿರಿಯರೇ ಹೀಗೆ ಮಾಡಿದರೆ ಕಿರಿಯರನ್ನು ಮುನ್ನಡೆಸುವರು ಯಾರು? ಅದೂ ಈ ಫೇಸ್ ಬುಕ್ ಯುಗದಲ್ಲಿ! ಬರೆದದ್ದೇ ಕವಿತೆ. ಅದಕ್ಕೆ ಒಂದಷ್ಟು ಅವರದೇ ಆದ ಗೆಳೆಯರ ಗುಂಪುಗಳು, soooper, ಎಂದೋ wonderful ಎಂದೋ ಇಮೋಜಿಗಳನ್ನು ಒತ್ತಿಬಿಟ್ಟರೆ ಸಾಕು. ಎಷ್ಟು ಲೈಕುಗಳು ಬಿದ್ದಿವೆ ಎಂಬುದೇ ಕವಿತೆಯ ಮಾನದಂಡ.ಹೊಗಳಿಕೆಯ ಸುರಿಮಳೆಯಲ್ಲಿ ಕವಿಗೆ ತಾನು ಬೆಳೆದು ಬಿಟ್ಟೆ ಎನ್ನುವ ಭಾವ ಹುಟ್ಟಿಬಿಡುತ್ತದೆ. ಅಲ್ಲಿಗೆ ಕವಿತೆ ಸತ್ತು ಹೋಗುತ್ತದೆ. ಕಾರಣವಿಲ್ಲದೇ ಹೊಗಳುವ ಸ್ನೇಹಿತರು ಕವಿತೆಗಳನ್ನು ಕವಿಗಳನ್ನು ಕೊಲ್ಲುವವರೇ ಹೊರತು ಬೆಳೆಯಲು ಬಿಡುವವರಲ್ಲ. ಇಂದು ಈ ಎಚ್ಚರ ಕಡಿಮೆಯಾಗುತ್ತಿರುವುದು ದುರಂತ. ಇದಕ್ಕೆ ಇಂದು ಗಲ್ಲಿಗೊಂದು ಪ್ರತಿಷ್ಠಾನಗಳು ಹುಟ್ಟಿಕೊಂಡು, ಕವಿತಾ ಸಂಕಲನವೊಂದು ಅಚ್ಚಿನ ಮನೆಯಿಂದ ಹೊರಬರುವುದೇ ತಡ ಪ್ರಶಸ್ತಿಗಳನ್ನು ಘೋಷಿಸಿಬಿಡುವುದೂ ಒಂದು ಕಾರಣ. ಅವಳು : ಅಂದರೆ ಕವಿತೆಗಳ ಕಾಲನ್ನು ಫೇಸ್ ಬುಕ್ ಎಳೆಯುವ ಹಾಗೆ ಇನ್ನಾವುದೂ ಎಳೆಯಲಾರದು ಎನ್ನುತ್ತೀಯಾ? ಅವನು : ಕೆಲವು ಒಳ್ಳೆಯ ಕವಿತೆಗಳೂ ಇರುತ್ತವೆ ಆದರೆ ಹೆಚ್ಚಿನವುಗಳಿಗೆ ಪರಂಪರೆಯ ಬೆನ್ನೆಲಬಿರುವುದಿಲ್ಲ. ಕವಿತೆ ಎಷ್ಟೇ ಆಕರ್ಷಕವಾಗಿದ್ದರೂ ನೂರಾರು ಜನ ವಾಹ್, ವಾಹ್ ಎಂದರೂ ಪರಂಪರೆಯೊಳಗೆ ಬೇರು ಬಿಡದ ಕವಿತೆಗಳಿಗೆ ಆಯಸ್ಸು ಕಡಿಮೆ. ತಾತ್ಕಾಲಿಕ ಪ್ರಸಿದ್ಧಿಯಷ್ಟೇ. ಕವಿಗಳು ಪ್ರಕರ್ತರು ಎಂದೆನಿಸಬಾರದು ನೋಡು. ಅವಳು : ನಮ್ಮ ಕಾವ್ಯ ಪರಂಪರೆಯ ಕವಿಗಳಿಗೆ ಅರಿವು ಮೂಡಿದಾಗ ಮಾತ್ರ ತಮಗೆ ಅರಿವಿಲ್ಲದೆಯೇ ಅವರು ತಮ್ಮ ಕಾವ್ಯ ಪರಂಪರೆಯೊಡನೆ ಅನುಸಂಧಾನಕ್ಕೆ ಇಳಿಯುತ್ತಾರೆ. ಅಲ್ಲವಾ? ಅವನು : ಹೌದು ಪರಂಪರೆಯ ಜೊತೆಗೆ ಗುರುತಿಸಿಕೊಳ್ಳುವುದೂ ಮತ್ತು ಅದನ್ನು ಮುಂದಿನ ಪೀಳಿಗೆಗೆ ದಾಟಿಸುವುದೂ ಕವಿಯ ಜವಾಬ್ದಾರಿ. ಪರಂಪರೆಯೆಂದಾಕ್ಷಣ ಶಿಷ್ಟ ಪರಂಪರೆಯೆಂದೇನಲ್ಲ. ಅವಳು : ಹೌದು, ಕಾರ್ತೀಕ ಋಷಿಯ ಕತೆ, ಅಮೃತಮತಿಯ ಕತೆಗಳು ಜಾನಪದದಲ್ಲಿ ಸಿಗುತ್ತವೆ ಎಂದು ಹೇಳುತ್ತಾರೆ. ಜಾನಪದ ಸಂಸ್ಕೃತಿಯೊಂದು ಹೇಗೆ ಶಿಷ್ಟ ಪರಂಪರೆಯ ಭಾಗವಾಗಿ ಬಿಡುತ್ತದೆ? ಹಾಗೆಯೇ ಶಿಷ್ಟ ಪರಂಪರೆಯ ಬೇರುಗಳು ಜಾನಪದದಲ್ಲಿ ಅಡಗಿರುತ್ತವೆ? ಏ.ಕೆ. ರಾಮಾನುಜಂ ಗುರುತಿಸುವ ಮುನ್ನೂರು ರಾಮಯಣಗಳು ಕೂಡ ಈ ರೀತಿಯ ಅನುಸಂಧಾನಗಳಿಂದಲೇ ಹುಟ್ಟಿರಬೇಕು. ಕವಿಯಾದವಳಿಗೆ ಇದರ ಅರಿವು ಇರಬೇಕು ಎನ್ನುತ್ತೀಯಾ? ಅವನು : ಮಹತ್ವದ ಕವಿತೆ ಹುಟ್ಟುವುದು ಹೀಗೆ. ಉಳಿದವು ಆ ಕ್ಷಣಕ್ಕೆ ಹುಟ್ಟಿ ಆ ಕ್ಷಣಕ್ಕೆ ಸಾಯುತ್ತವೆ. ಪರಂಪರೆಯ ಬಗ್ಗೆ ಅರಿವು ಮೂಡಿಸುವುದೂ ಕವಿಯೊಬ್ಬಳ ಜವಾಬ್ದಾರಿ. ಸಂವಾದ ಅತ್ತೆ : ಹುರಳಿ ಕಾಯಿ ಪಲ್ಯ ಮಾಡ್ತೀಯೇನೇ? ಕೊಡು, ನಾರು ಬಿಡಿಸಿ ಹೆಚ್ಚಿಕೊಡ್ತೀನಿ. ಸೊಸೆ : ಬೇಡ ಅತ್ತೆ..ಪರವಾಗಿಲ್ಲ ನಾನೇ ಮಾಡ್ಕೋತೀನಿ (ಹುಳು ಇದ್ರೆ ನಿಮಗೆ ಕಾಣೋಲ್ಲ). ನೀವು ಸುಮ್ನೆ ಕೂತ್ಕಳಿ ಅತ್ತೆ...... ಅತ್ತೆ : ಬೇಜಾರು ಕಣೇ.. ಸೊಸೆ : ಬೇಜಾರಾದ್ರೆ ಜಪ ಮಾಡಿ. ಇಲ್ಲಾಂದ್ರೆ ಟಿ.ವಿ ನೋಡಿ ಅತ್ತೆ : ಅಗೋ ನಿನ್ನ ಮಗ ಎದ್ದು ಬಂದ, (ಲಗುಬಗೆಯಿಂದ) ಬಾರೋ ಕಾಫಿ ಬೆರಸ್ತೀನಿ. ಮೊಮ್ಮಗ : ಬೇಡ ಅಜ್ಜಿ, ನೀನು ಆರಾಮವಾಗಿರು ಅಮ್ಮ ಮಾಡ್ಕೊಡ್ತಾಳೆ. ನೀನು ಸುಮ್ನೆ ಕೂತ್ಕಕೊಂಡು ಟಿ.ವಿ ನೋಡು. ಅತ್ತೆ: ತೆಂಗಿನ ಕಾಯಿ ಒಡೆದಿದೀಯಾ ಕೊಡು.. ತುರಕೊಡ್ತೀನಿ. ಸೊಸೆ: ಇಲ್ಲ ಅತ್ತೆ ನಾನು ಆಗ್ಲೇ ತುರ್ಕೊಂಡು ಆಯ್ತು. ನೀವು ಸುಮ್ನೆ ಕೂತ್ಕಳಿ ಅತ್ತೆ.... ಜಪ ಮಾಡಿ, ಇಲ್ಲಾಂದ್ರೆ ಟಿ.ವಿ ನೋಡಿ. ಅತ್ತೆ : ಆಗ್ಲೆ ಎಂಟೂವರೆ ಆಯ್ತಲ್ಲವಾ ನಿನ್ನ ಗಂಡನಿಗೆ ಆಫೀಸಿಗ ಹೋಗೋಕೆ ಹೊತ್ತಾಗಲಿಲ್ವಾ? ಇನ್ನೂ ಚಪಾತಿ ಹಿಟ್ಟನ್ನೇ ಕಲಸಿಲ್ಲಾ? ಡಬ್ಬಿಗೆ ಏನು ಹಾಕಿ ಕೊಡ್ತೀಯಾ? (ಸೆರಗು ಸಿಕ್ಕಿಸಿಕೊಂಡು) ಇರು ನಾನು ಬೇಗ ಚಪಾತಿ ಹಿಟ್ಟು ಕಲಸಿಬಿಡ್ತೀನಿ. ಸೊಸೆ : ಅಯ್ಯಯ್ಯೋ ಬೇಡ...ಅದನ್ನ ಫುಡ್ ಪ್ರೋಸೆಸರ್ ನಲ್ಲಿ ಕಲಸ್ತೀನಿ. ನೀವು ಸುಮ್ನೆ ಕೂತ್ಕಳಿ ಅತ್ತೆ...... ಜಪ ಮಾಡಿ ಇಲ್ಲಾಂದ್ರೆ ಟಿ.ವಿ ನೋಡಿ ಅತ್ತೆ: ಹೋಗ್ಲಿ ಕುಂಬಳಕಾಯಿ ಹೆಚ್ಚಲಾ..? ಸೊಸೆ : ಅದೆಷ್ಟು ಹೊತ್ತು ಹಚ್ಚಿಕೊಂಡ್ರಾಯ್ತು ಬಿಡಿ. ಅದೂ ಅಲ್ದೇ ತುಂಬಾ ಬೇಗ ತರಕಾರಿಗಳನ್ನು ಹಚ್ಚಿ ಇಡಬಾರದಂತೆ, ಬಿ.ಎಂ. ಹೆಗ್ಡೆ ಹೇಳ್ತಾರೆ. ನೀವು ಸುಮ್ನೆ ಕೂತ್ಕಳಿ ಅತ್ತೆ..... ಜಪ ಮಾಡಿ, ಇಲ್ಲಾಂದ್ರೆ ಟಿ.ವಿ ನೋಡಿ ಅತ್ತೆ: ಹೋಗಲಿ ಕೊತ್ತಂಬರಿ ಸೊಪ್ಪನ್ನಾದ್ರೂ ಬಿಡಿಸಿ, ಡಬ್ಬಿಗೆ ಹಾಕಿಡ್ತೀನಿ. ನಿನಗೆ ಸುಲಭ ಆಗುತ್ತೆ. ಸೊಸೆ: ಇಲ್ಲ ಅತ್ತೆ, ಸಣ್ಣಮ್ಮ ಅಗ್ಲೇ ಬಿಡಿಸಿಟ್ಟು ಹೋಗಿದ್ದಾಳೆ.(ಕೂದಲು ಸೇರ್ಕೊಂಡಿರುತ್ತೆ ನಿಮಗೆ ಕಣ್ ಕಾಣೋಲ್ಲ. ಆಮೇಲೆ ಅದೇನಾದ್ರೂ ಅಡುಗೇಲಿ ಸಿಕ್ಕರೆ ನಿಮ್ಮ ಮಗ ಹೋ ಅಂತಾರೆ) ನೀವು ಸುಮ್ನೆ ಕೂತ್ಕಳಿ.... ಅತ್ತೆ ಜಪ ಮಾಡಿ ಇಲ್ಲಾಂದ್ರೆ ಟಿ.ವಿ ನೋಡಿ ಅತ್ತೆ: ಇವೊತ್ತು ಹಬ್ಬ ಕಣೇ ನೀವೆಲ್ಲಾ ಒಟ್ಟಿಗೇ ಊಟಕ್ಕೆ ಕೂತ್ಕೋಳಿ ನಾನು ಬಡಿಸ್ತೀನಿ... ಸೊಸೆ: ಇಷ್ಟು ವರ್ಷ ಮಾಡಾಯ್ತಲ್ಲಾ ಅತ್ತೆ, ಈಗಲಾದ್ರೂ ರಾಮ ಕೃಷ್ಣಾ ಅಂತಾ ಇರ ಬಾರದಾ? (ಸಧ್ಯ ನೀವು ಬೇರೆ ಕೈತೊಳ್ಕೋಳೋದಿಲ್ಲ. ಉಗುರು ನೋಡಿದ್ರೆ ಅಷ್ಟು ಬೆಳಸ್ಕೊಂಡಿದ್ದೀರಾ-ಮೈಯೆಲ್ಲಾ ಕಡಿತ ಆಗುತ್ತೆ ಕೆರ್ಕೋಳ್ಳೋಕೆ ಅಂತಾ..ಇನ್ನು ಅದರಲ್ಲಿ ಏನೇನು ಸೇರ್ಕೊಂಡಿರುತ್ತೋ. ಬಚ್ಚಲಿಗೆ ಹೋದ್ರೆ ಸರಿಯಾಗಿ ನೀರೂ ಹಾಕ್ಕೋದಿಲ್ಲ) ಜಪಾ ಮಾಡಿ ಇಲ್ಲಾಂದ್ರೆ ಸುಮ್ನೆ ಕೂತ್ಕೊಂಡು ಟಿ.ವಿ. ನೋಡಿ ಅತ್ತೆ .....ಏ... ‘ಶಂಕರ’ ಛಾನೆಲ್ ಹಾಕ್ಕೊಡೋ ಅಜ್ಜೀಗೆ. ಅತ್ತೆ : (ಶಂಕರ ಛಾನೆಲ್ ಮುಂದೆ) ಸ್ವಲ್ಪ ಜೋರು ಮಾಡೋ ಕೇಳ್ಸೋದೆ ಇಲ್ಲಾ. ಮೊಮ್ಮಗ : ಅಮ್ಮ, ಅಜ್ಜಿ ಟಿ.ವಿ ನೋಡ್ತಾನೆ ತೂಕಡಿಸ್ತಿದ್ದಾರೆ.....(ನಗು) ಮಗ: ಏನಿದು ಇಷ್ಟು ಜೋರಾಗಿ ಟಿ.ವಿ. ಹಾಕಿದ್ದೀರಲ್ಲಾ ಬೀದೀಗೆಲ್ಲಾ ಕೇಳಿಸಬೇಕಾ? mute ಮಾಡಿ, ಆಯ್ತೇನೆ ಅಡುಗೆ? ಹೊತ್ತಾಯ್ತು. ಅತ್ತೆ : ಟಿ.ವಿ ಆರಿಸಿಬಿಟ್ಯೇನೋ..... ಸರಿ ಬಿಡು. ಸೀರೇನಾದ್ರೂ ಒಕ್ಕೋಳ್ತೀನಿ... ಮಗ : ಬೇಡಾಮ್ಮ... ನೀನು ಯಾಕೆ ಒಕ್ಕೋಬೇಕು.. ಸುಮ್ನೆ.. ಅವಳು ನಿನ್ನ ಸೀರೇನೇ ಮಿಷಿನ್ ಗೆ ಹಾಕ್ತಾಳೆ ಕೊಡು. ಅತ್ತೆ : ಒಗೆಯುವ ಸೀರೆ ಸೆಳೆದುದುಕೊಳ್ಳಲು ಬಂದ ಮಗನ ಕೈಯಿಂದ ಸರ್ರನೆ ಕಿತ್ತುಕೊಂಡು. ಹೋಗೋ ನಿನ್ನ ಕೆಲ್ಸ ನೋಡ್ಕೋಹೋಗು. ನನ್ನ ಸೀರೇನ ನಾನೇ ಒಕ್ಕೋಬೇಕೋ. ಅದನ್ನ ಯಾರಾದ್ರೂ ಮುಟ್ಟಿದ್ರೆ ಸುಮ್ಮನಿರೋಲ್ಲಾ ನಾನು. ******* ೯0 ರ ಮುದುಕಿಯದ್ದು ಈಗ ಸಾಮ್ರಾಜ್ಯ ಕಳೆದುಕೊಂಡ ರಾಜನ ಸ್ಥಿತಿ ಆಗಿದೆ. ಅವಳು ತನ್ನ ಸಮ್ರಾಜ್ಯದಿಂದ ಗಡೀಪಾರಾಗಿದ್ದಾಳೆ. ಅವಳ ಸರ್ವಸ್ವವಾದ ಒಲೆಯಿಂದ ಉಚ್ಚಾಟನೆಯಾಗಿದೆ. "ಅಮ್ಮಂದಿರೆಲ್ಲಾ ಸಾಯಲಿ" ಎಂದು ಮಗಳು ಫೇಸ್ ಬುಕ್ ನಲ್ಲಿ ಪದ್ಯ ಬರೆದು ಹಾಕಿದರೆ ಮನೆಯ ಮಾನ ಕಳೆದಳೆಂದು ತವರಿನವರು ಮುಖ ಊದಿಸಿಕೊಳ್ಳುತ್ತಾರೆ . 10/9/18. ಅಮ್ಮಂದಿರೆಲ್ಲಾ ಸಾಯಲಿ ............ ಆಗ ನಾನು ಪುಟ್ಟ ಮಗುವಾಗಿದ್ದೆ ಅಮ್ಮ ಯುವತಿ ಅದು ಏನು, ಇದು ಯಾಕೆ, ಹೇಗೆ ಸಾವಿರ ಸವಾಲು ಕಾಲಿಗೆ ತೊಡರುತ್ತಿದ್ದೆ ಅಮ್ಮನಿಗೆ ಸಂಭ್ರಮ ಮುತ್ತುಕೊಟ್ಟು ಎದೆಗವಚಿಕೊಂಡು ಕಂದಾ... ಹೂಬಳ್ಳಿಯಲಿ ಉಯ್ಯಾಲೆಯಾಡಿಸಿದ್ದಳು ಹಕ್ಕಿಯಂತೆ ಹಾರಿಸಿ ಮೇಲೆ“ “ಜಾಮೂನು ನಾದದಲಿ ಜಾಳಿಸಿ”ದ್ದಳು ಚಂದಮಾಮನ ಲೋಕಕ್ಕೆ ಒಯ್ದಿದ್ದಳು.. ಅಮ್ಮ ಬಟ್ಟೆಯೊಗೆಯುವಾಗ ನಾನೂ ಪುಟ್ಟ ಕೈಜೋಡಿಸುತ್ತಿದ್ದೆ ಮನೆಯಲ್ಲಾ ಓಕುಳಿ ಚೆಲ್ಲಿದ ಹಾಲು ಆಟಿಕೆಗಳು ದಿಕ್ಕಾಪಾಲು ಅಮೇಧ್ಯ ಅನ್ನ ಗುರುತು ಹತ್ತದೆ ಮೈಯೆಲ್ಲಾ ಬಳಿದುಕೊಳ್ಳುತ್ತಿದ್ದೆ ಅಮ್ಮ ಬಿಸಿನೀರು ಕಾಯಿಸಿ ಮೃದು ಮಧುರ ಮೀಯಿಸಿ ಸ್ವಚ್ಛ ಬಟ್ಟೆತೊಡಿಸಿ ದೃಷ್ಟಿತೆಗೆಯುತ್ತಿದ್ದಳು ನಸುನಗುತ್ತಲೇ ಕಾಗೆ ಗುಬ್ಬಿಯ ಗೂಡಿಗೆ ಗರಿ ಮೂಡಿಸಿದ್ದಳು. ............................. ಈಗ ಅಮ್ಮನ ಕುರುಡುಗಣ್ಣುಗಳಲ್ಲಿ ಗೂಡುವೋದ ಒಡಲಲ್ಲಿ ಒಂಬತ್ತು ದಶಕದ ನೀರು ಸೋರಿಹೋಗಿದೆ ಆದರೂ ಅವಳು ಅಂಗನವಾಡಿಯ ಆರರ ಬಾಲೆ ಹಠಮಾರಿ ಜಗಮೊಂಡಿ ಜೀವಂತಿಕೆಯ ಸೆಲೆ ನಿಂತರೆ ನಿಲ್ಲದೆ ಕೂತಲ್ಲಿ ಕೂರದೆ ಬಾಲಸುಟ್ಟ ಬೆಕ್ಕು..... ತೊಂಬತ್ತರ ಅರೆ ಕುರುಡಿ ಎಡವುತ್ತಾಳೆ ತೊಡರುತ್ತಾಳೆ ಚೆಲ್ಲಿ ಸುರಿಯುತ್ತಾಳೆ ಕೊಟ್ಟ ಆಹಾರವನ್ನು ಅವಳ ಬಟ್ಟೆಯೇ ಹೆಚ್ಚು ತಿನ್ನುತ್ತದೆ ಮನೆಮಂದಿಯ ಮೌÀನವೂ ....... ತರ್ಜನಿ ಬೆರಳಲ್ಲಿ ಆಜ್ಞೆ ಹೊರಡಿಸಿದರೆ ಕಲ್ಲುಗೊಂಬೆಯಂತೆ ನಿಲ್ಲುತ್ತಾಳೆ ಅವಳೂ ಕೇಳುತ್ತಾಳೆ ಅದು ಏನು ಇದು ಯಾಕೆ, ಹೇಗೆ ನೂರು ಪ್ರಶ್ನೆ ಸಾವಿರ ವಿಸ್ಮಯಗಳಿಗೆ ದೊರಕುವುದು ಬೆದರು ಬೆತ್ತ ಗದರು ದೊಣ್ಣೆ ದೇಹ ಮದದ ಠೇಂಕಾರ ಪಾಯಸದೊಳಗೆ ಬಿದ್ದ ನೊಣ ಹೆಕ್ಕಿ ಉಗುರಿನಿಂದ ಹಾರಿಸುವ ತಾತ್ಸಾರ ಮಾತಿನ ಚಾಟಿಯ ಬೀಸು ಅತಿಯಾದರೆ ಆಗಸಕ್ಕೆ ಕೈಚೆಲ್ಲಿ ನಿಲ್ಲುತ್ತಾಳೆ ನಕ್ಷತ್ರಗಳಿಗೆ ಅವಳ ಕಣ್ಣುಗಳು ಈಗ ಬೀಳುವುದಿಲ್ಲ... ಕಾಶಿಗೆ ಹೋಗಬೇಕೆÉನ್ನುತ್ತಾಳೆ “ಕಾಲಿದ್ದ ಮುರುವ (ಕಾಸಿದ್ದ?) ಕೈಲಾಸಕ್ಕೆ ಹೋದರೆ ನೀನೆಲ್ಲಿಗೆ ಹೋದೀಯೇ ಮುರ್ಕಾಟಿ” ಎಲ್ಲ ಅಮ್ಮಂದಿರೂ ಕಾಶಿಗೆ ಹೋಗಲಿ ಕಾಶಿಪಟ್ಟಣದ ನೆಲವೇ ಅವರ ನುಂಗಿ ನೀರು ಕುಡಿಯಲಿ ಗಂಗೆ ರೋಸಿ ತನ್ನ ಪ್ರವಾಹದೊಳಗೆ ಎಳೆದೊಯ್ಯಲಿ ಬದರಿಯ ಪ್ರಪಾತದೊಳಗೆ ಕೇದಾರದ ಕಣಿವೆಗಳೊಳಗೆ ಜಾರಿ ಬಿದ್ದೇ ಹೋಗಲಿ ಹಿಮಾಲಯದ ಕಾಡ್ಗಿಚ್ಚುಗಳು ಸುಡಲಿ ಆದರೆ ಅವರ ಅಸ್ಥಿಗಳು ಮಾತ್ರ ಯಾವ ಮಕ್ಕಳ ಕೈಗೂ ದಕ್ಕದೇ ಹೋಗಲಿ.. ಬದುಕಿನ ಸಣ್ಣ ಸಣ್ಣ ಸಂಗತಿಗಳು ನಗಣ್ಯ ಕ್ಷಣಗಳು ಮಹತ್ವ ಎನಿಸಿಬಿಡುವುದು ಸಾವಿನ ಸಮ್ಮುಖದಲ್ಲಿ. ಅಯ್ಯೋ ನಿನ್ನೆ ಸಾಯಂಕಾಲ ಇಲ್ಲೇ ಮಾತಾಡ್ತಾ ಕೂತಿದ್ದ, ಹೋದವಾರ ತಾನೇ ನಾವಿಬ್ಬರೂ ಒಟ್ಟಿಗೆ ಹೋಟೆಲ್ ನಲ್ಲಿ ಊಟ ಮಾಡಿದ್ವೀ. ಮೊನ್ನೆ ತಾನೆ ಫೋನ್ ನಲ್ಲಿ ನನ್ನ ಹತ್ತಿರ ಎಷ್ಟು ಮಾತಾಡಿದ್ಳು? ಹೋಗೇ ಬಿಟ್ನಾ?.....ಹೋಗೇ ಬಿಟ್ಳಾ? ಬದುಕಿದ್ಧಾಗ ಒಟ್ಟಿಗೆ ಊಟ ಮಾಡುವ ಕಾಫಿ ಕುಡಿಯುವ, ಫೋನಿನಲ್ಲಿ ಮಾತನಾಡುವ ಕ್ಷುಲ್ಲಕ ಸಂಗತಿಗಳು ಸತ್ತ ಮೇಲೆ ಮಹತ್ವದ್ದಾಗಿ ಬಿಡುತ್ತವೆ. ಕಾಲದ ಪ್ರಜ್ಞೆ ನಮ್ಮನ್ನು ಕೊಲ್ಲುವ ಹಾಗೆ ಬೇರೆ ಯಾವುದೂ ಕೊಲ್ಲಲಾರದು. ಕಾಲ ಸಾಪೇಕ್ಷವಾದುದರಿಂದಲೋ ಏನೋ ನಮ್ಮ ನಮ್ಮ ಕಾಲಗಳು ಮಾತ್ರ ನಮಗೆ ಮುಖ್ಯವಾಗಿ ಬಿಡುತ್ತವೆ. ಇದು ಕಾಲದ ವಿಸ್ಮಯ 18/9/18 ಭೈರವೀ ಆಲಾಪ....... "ಸತ್ಯವಂತರಿಗಿದು ಕಾಲವಲ್ಲ. ದುರ್ಜನರಿಗೆ...ಪರಮ ಪಾಪಿಗಳಿಗೆ ಸುಭಿಕ್ಷಕಾಲ...ಸೌಖ್ಯ ಕಾಲ" ಎಂದೆಲ್ಲಾ ಪುರಂದರ ದಾಸರು ಹೇಳುರುವುದು ಬಹಳ ಪ್ರಸಿದ್ಧವಾಗಿದೆ. ಈ ಕೀರ್ತನೆಯ ಸಾರ್ವಕಾಲಿಕ, ವಿಶ್ವಾತ್ಮಕ ಮೌಲ್ಯವನ್ನು ಇಲ್ಲಿ ಹೇಳುವುದು ನನ್ನ ಉದ್ದೇಶವಲ್ಲ. ಈ ಕೀರ್ತನೆಯನ್ನು ಸಾಮಾನ್ಯವಾಗಿ ಹಾಡುವುದು ಭೈರವಿ ರಾಗದಲ್ಲಿ. ಪುರಂದರ ದಾಸರೇ ಇದನ್ನು ಭೈರವಿ ರಾಗಕ್ಕೆ ಅಳವಡಿಸಿದರೋ ಅಥವಾ ಮೊದಲು ಅಳವಡಿಸಿದವರು ಯಾರು? ಎಂಬುದು ನನ್ನ ಅರಿವಿನ ಆಚೆಯ ಸಂಗತಿ. ಆದರೆ ಬಹಳ ಆಶ್ಚರ್ಯ ಎಂದರೆ ಇದನ್ನು ಭೈರವಿ ರಾಗದಲ್ಲಿ ಯಾಕೆ ಅಳವಡಿಸಿದರು ಎಂಬುದು. ಹಿಂದೂಸ್ತಾನಿ ಶೈಲಿಯಲ್ಲಂತೂ ಭೈರವಿ ಹಾಡಿಯಾಯಿತೆಂದರೆ ಸಂಗೀತ ಕಚೇರಿ ಮುಕ್ತಾಯವಾಯಿತೆಂದೇ ಅರ್ಥ. 'ಭೈರವಿ' ದುಷ್ಟ ಸಂಹಾರಕ್ಕೆ ಹೆಸರಾದವಳು. ಸಜ್ಜನರನ್ನು ಪೀಡಿಸುವ ಪರಮ ಪಾಪಿಗಳನ್ನು ನಿರ್ನಾಮ ಮಾಡಿ ಜಗತ್ತನ್ನು ಕಾಪಾಡಿದವಳು. ಆದರೆ ಮೇಲಿನ ಕೀರ್ತನೆಯಲ್ಲಿ ಅಂತಹ ಸಾಕ್ಷಾತ್ ಭೈರವಿಯೇ ಕೈಚೆಲ್ಲಿ ಅಸಹಾಯಕಳಾಗಿ The END ಎನ್ನುವಂತೆ ನಿಂತಿದ್ದಾಳೆ. 20/9/18 ಪಾಪದ ಕೊಡ ತುಂಬಿದಾಗ ಭೈರವಿ ಬರಬೇಕು, ಬರುತ್ತಾಳೆ ಎನ್ನುವುದು ನಮ್ಮ ಆಸೆ, ಕನಸು. ರಕ್ತ ಬೀಜಾಸುರರ ಅಂತ್ಯವಾಯಿತೆನ್ನುವುದು ನಮ್ಮ ಭ್ರಮೆ. ಯಾರೋ ಬಂದು ಕಾಪಾಡುತ್ತಾರೆ ಎನ್ನುವುದು ನಮ್ಮ ಸಾಮಾಜಿಕ ಹೊಣೆಗೇಡಿತನ. ಇಲ್ಲ, ಭೈರವಿ ಬರುವುದಿಲ್ಲ. ನಾವೇ ಭೈರವಿ, ಭೈರವರಾಗಬೇಕು. ಹಾಗೆ ಆಗುವುದಕ್ಕೂ ಮುನ್ನ ನಾವು ಎಷ್ಟು ಸತ್ಯವಂತರು ಎನ್ನುವುದನ್ನು ನಮ್ಮನ್ನು ನಾವೇ ಕೇಳಿಕೊಳ್ಳಬೇಕಾಗಿದೆ. ಆಶೆ ಎಂಬ ತಳವೊಡೆದ ದೋಣಿಯಲಿ ದೂರ ತೀರ ಯಾನ ಯಾರ ಲೀಲೆಗೋ ಯಾರೋ ಏನೋ ಗುರಿಯಿರದೆ ಬಿಟ್ಟ ಬಾಣ ಇದು ಬಾಳು ನೋಡು ತಿಳಿದೆನೆಂದರೂ ತಿಳಿದ ಧೀರನಿಲ್ಲ ಹಲವುತನದ ಮೈಮರೆಸುವಾಟವಿದು ನಿಜವು ತೋರದಲ್ಲ.... ಗೋಪಾಲ ಕೃಷ್ಣ ಅಡಿಗರ ಈ ಕವಿತೆ ಬಹಳ ಕಾಡುವಂತಹದು. ಅಷ್ಟೇ ಜನಪ್ರಿಯ ಕೂಡ. ಯಾಕೆಂದರೆ ಇದು ಹಾಡುವ ಕವಿತೆ. ನವೋದಯ ಸ್ವಭಾವಕ್ಕೆ ಹತ್ತಿರವಾದುದು. ಇದು ನವ್ಯ ಮಾರ್ಗ ಪ್ರವರ್ತಕ ಕವಿತೆಗಳ ಸಾಲಿಗೆ ಸೇರುವುದಿಲ್ಲ. ಇದು ಅಡಿಗರ ಉಳಿದ ಕವಿತೆಗಳಿಗೆ ಹೋಲಿಸಿದರೆ ಮಹತ್ವದ ಕವಿತೆ ಎಂದು ಹೇಳ ಬರುವುದಿಲ್ಲ. ಇಡೀ ಕವಿತೆ ರೂಪಕಗಳಲ್ಲಿ ಹೇಳುತ್ತಿರುವುದೇ ಬದುಕಿನ ಬಗ್ಗೆ, ಅದನ್ನೇ ಕೊನೆಯ ಎರಡು ಸಾಲುಗಳು ವಾಚ್ಯವಾಗಿಸಿ ಕವಿತೆಯ ಅನುಭವವನ್ನು dilute ಮಾಡಿಬಿಡುತ್ತವೆ. ಬೇಂದ್ರೆಯವರ ಇದು ಬರಿ ಬೆಳಗಲ್ಲೋ ಅಣ್ಣಾ..ಸಾಲಿಗೂ ಇಂತಹುದೇ ಆಕ್ಷೇಪಗಳಿವೆ. ಇದು ಅಭೌತಿಕ ನೆಲೆಗೆ ಕೊಂಡೊಯ್ಯುತ್ತದೆ ಎಂದು ಕೆಲವರು ಹೇಳಿದರೆ, ಕವಿತೆಯ ತೀವ್ರತೆಯನ್ನು ಪೇಲವಗೊಳಿಸಿಬಿಡುತ್ತದೆ ಎಂದೂ ಕೆಲವರು ಹೇಳುವವರಿದ್ದಾರೆ. ಇವಕ್ಕೆ ಮಾಂತ್ರಿಕ ಗುಣ (ಭಾವಗೀತಾತ್ಮಕ) ಇರುವುದರಿಂದ ಸಂಗೀತದ ಮೂಲಕ ಆರ್ದ್ರಗೊಳಿಸಿಬಿಡುತ್ತವೆ. ಮೋಡಿ ಮಾಡಿಬಿದುತ್ತವೆ. ಒಮ್ಮೆ ಅನಂತ ಮೂರ್ತಿ - 'ಓದುವ ಕವಿತೆಗಳೇ ಶ್ರೇಷ್ಠ ಕವಿತೆಗಳು ಹಾಡುವ ಕವಿತೆಗಳಲ್ಲ' ಎಂದು ಹೇಳಿದ್ದು ಈ ಅರ್ಥದಲ್ಲೇ. ಹೀಗೆಂದಾಕ್ಷಣ ಇವು ಆ ಕವಿತೆಗಳ ಮೌಲ್ಯಮಾಪನವಲ್ಲ ಎಂಬುದನ್ನು ನಾವು ಗಮನದಲ್ಲಿಡಬೇಕು. ಮಹತ್ವದ ಕವಿಗಳ ರಚನೆಗಳಲ್ಲಿ ಕೂಡ ಸಾಧಾರಣ ಸಾಲುಗಳು ನುಸುಳಿರುತ್ತವೆ. ಅಂದ ಮಾತ್ರಕ್ಕೆ ಅಂತಹ ರಚನೆಗಳು ಕವಿಯನ್ನು ಅಳೆಯುವ ಮಾನದಂಡವಾಗುವುದಿಲ್ಲ. ಆ ಕವಿಯ ಸಮಗ್ರ ಕವಿತೆಗಳನ್ನು ಇಟ್ಟುಕೊಂದು ಅಭ್ಯಾಸ ಮಾಡುವುದರ ಮೂಲಕವೇ ಒಂದು ಅಭಿಪ್ರಾಯಕ್ಕೆ ತಲಪಲು ಸಾಧ್ಯ. ಅಂತಹ ಸಮಗ್ರ ಆಧ್ಯಯನದಿಂದ ಕೂಡಿದ, ಜವಾಬ್ದಾರಿಯುತ ವಸ್ತುನಿಷ್ಥ ಅಭಿಪ್ರಾಯ ವೈಯಕ್ತಿಕವಾಗಿರುವುದರ ಜೊತೆಗೆ ಪರಂಪರೆಯ ನಿರ್ದೇಶನವನ್ನೂ ಏಕಕಾಲಕ್ಕೆ ಮಾಡುತ್ತಿರುತ್ತದೆ. ಒಬ್ಬ ಕವಿಯ ಕೃತಿಗಳ ಸಮಗ್ರ ಅಧ್ಯಯನವೆಂದರೆ ಇಡೀ ಪರಂಪರೆಯ ಅಧ್ಯಯನವೇ ಆಗಿರುತ್ತದೆ. ಪರಂಪರೆಯ ಜೊತೆಗೆ ಯಾವಾಗಲೂ ಕವಿತೆ ಅನುಸಂಧಾನ ಮಾಡುತ್ತಲೇ ಇರುತ್ತದೆ. ಕವಿಯ ಸಮಗ್ರ ರಚನೆಗಳು ಇರಲಿ, ಕವಿತೆಯ ಯಾವುದೋ ಒಂದು ಸಾಲನ್ನು ಇಟ್ಟುಕೊಂಡು ಆ ಕವಿಯನ್ನು/ಕವಿತೆಯನ್ನು ಹಿಗ್ಗಾ ಮುಗ್ಗಾ ಎಳೆದು ತೇಜೋವಧೆ ಮಾಡಿ, ಇದಮಿತ್ಥಂ ಎಂದು ಷರಾ ಎಳೆದು ಬಿಟ್ಟರೆ ಕವಿಗೆ ಅನ್ಯಾಯ ಮಾಡಿದಂತೆ. ಅದು ನಮ್ಮ ಅಧ್ಯಯನದ ಮಿತಿಯೇ ಹೊರತು ಕವಿಗೆ ಕವಿತೆಗೆ ಯಾವ ರೀತಿಯ ಕುಂದೂ ಬರುವುದಿಲ್ಲ. ಬಹಳ ವಿಷಾದವೆಂದರೆ ನಮ್ಮ ಕವಿತೆಯ ಓದು ಡಿ.ವಿ.ಜಿ. ಯವರ ಮಂಕುತಿಮ್ಮನ ಕಗ್ಗವೋ ಇಲ್ಲ ಕೆ.ಎಸ್.ನ ಅವರ "ರಾಯರು ಬಂದರು ಮಾವನ ಮನೆಗೆ" ಇಷ್ಟಕ್ಕೇ ಸೀಮಿತವಾಗಿ ಅಲ್ಲಿಯೇ ನಿಂತು ಬಿಟ್ಟಿದೆ. ಆನಂತರದ ನೂರು ವರ್ಶಗಳಲ್ಲಿ ಕನ್ನಡ ಕಾವೇರಿಯಲ್ಲಿ ಎಷ್ಟೋ ನೀರು ಹರಿದು ಹೋಗಿದೆ. ಅದರ ಲಕ್ಷ್ಯ ನಮಗಿಲ್ಲ. ನಮ್ಮ ಓದಿನ ಆಧಾರದ ಮೇಲೆ, ಅದೇ ಸಾಮರ್ಥ್ಯದ ಮೇಲೆ ನಾವು ಸಮಕಾಲೀನ ಕವಿತೆಗಳ ಬಗ್ಗೆ ತೀರ್ಪನ್ನು ಕೊಡುತ್ತಿದ್ದೇವೆ. ಕಾವ್ಯ ಲಕ್ಷಣಗಳನ್ನು ರೂಪಿಸುತ್ತಿದ್ದೇವೆ. ಕಾವ್ಯಮೀಮಾಂಸೆ, ಸಾಹಿತ್ಯ ವಿಮರ್ಶೆಯ ಪಾಠ ಮೊದಲು ಫೇಸ್ ಬುಕ್ ವಿಮರ್ಶಕರಿಗೆ/ ಕವಿಗಳಿಗೆ ಆಗಬೇಕಾಗಿದೆ. ಯಾಕುಂದೇಂದು ತುಷಾರ ಹಾರ ಧವಲಾ" ಈ ಶ್ಲೋಕವನ್ನು ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಮಕ್ಕಳು ಸಣ್ಣವರಿರುವಾಗಲೇ ಕಲಿಸಲಾಗುತ್ತದೆ. ಅದರಲ್ಲಿ "ಯಾ ಬ್ರಹ್ಮಾಚ್ಯುತ ಶಂಕರ ಪ್ರಭೃತಿಭಿರ್ದೇವೈಃ ಸದಾ ಪೂಜಿತಾ"ಎನ್ನುವ ಸಾಲೂ ಬರುತ್ತದೆ.. ನಮ್ಮ ಮನೆಗೆ ಬಂದಿದ್ದ ವಿಷ್ಣು ಪಾರಮ್ಯವನ್ನು ಎತ್ತಿ ಹಿಡಿಯುವ ಜನಾಂಗಕ್ಕೆ ಸೇರಿದ ಮಹಿಳೆಯೊಬ್ಬರು ಈ ಶ್ಲೋಕವನ್ನು ಹೇಳುತ್ತಾ "ಶಂಕರಪ್ರಭೃತಿಭಿ.. ಎನ್ನುವುದನ್ನು skip ಮಾಡಿ ಅದಕ್ಕೆ ಇನ್ನೇನೋ ವಿಶೇಷಣ ಸೇರಿಸಿಕೊಂಡು ಹೇಳುತ್ತಿದ್ದರು. ಬಾಲ್ಯದಿಂದಲೂ ಈ ಶ್ಲೋಕವನ್ನು ಕೇಳುತ್ತಾ ಬಂದಿದ್ದ ನನಗೆ ಇದು ಎಲ್ಲೋ ಮಿಸ್ ಹೊಡೀತಿದೆಯಲ್ಲಾ ಎನಿಸಿತು. ಉತ್ತರ ಕರ್ನಾಟಕದ ಒಂದು ಭಾಗದ, ಶಿವ ಪಾರಮ್ಯವನ್ನು ಎತ್ತಿ ಹಿಡಿಯುವ ಜನ 'ಹರಿವಾಣ' ಕ್ಕೆ ಅದರಲ್ಲಿ ಹರಿ ಇರುವುದರಿಂದ 'ಹರವಾಣ' ಎನ್ನುತ್ತಾರಂತೆ. ಬಾಲ್ಯದಲ್ಲೇ ಮುಗ್ಧ ಮನಸ್ಸನ್ನು ನಮ್ಮ ಅಜ್ಞಾನ, ಅತಿರೇಕಗಳು ಹೇಗೆ ಭ್ರಷ್ಟಗೊಳಿಸಿಬಿಡುತ್ತವೆ!!!! ಎಲ್ಲಾ ಹಿರಣ್ಯಕಶಿಪು ವಿನ, ರಕ್ತಬೀಜಾಸುರನ ಸಂತಾನಗಳು. ಜಿ.ಎಸ್. ಎಸ್ ಅವರ 'ಗಂಗೆಯ ಶಿಖರಗಳಲ್ಲಿ' ಕೃತಿಯಲ್ಲಿ ಒಂದು ಕಡೆ - ಹರಿದ್ವಾರ್ ಮತ್ತು ಹರದ್ವಾರ್ ಎನ್ನುವ ಎರಡೂ ಪ್ರಯೋಗಗಳಿವೆ. ಅದು ಹರಿದ್ವಾರವೂ ಹೌದು ಹರದ್ವಾರವೂ ಯಾಕೆಂದರೆ ಈ ಪ್ರದೇಶದ ಮೂಲಕವೇ ಒಂದು ದಿಕ್ಕಿನಲ್ಲಿ ನಡೆದರೆ ಬದರಿ ಇನ್ನೊಂದು ದಿಕ್ಕಿನಲ್ಲಿ ನಡೆದರೆ ಕೇದಾರ ಸಿಗುತ್ತದೆ, ಎನ್ನುತ್ತಾರೆ. ನಮ್ಮ ಊರಿನಲ್ಲಿ ಕೆಲವರು ಶಿವನ ಉತ್ಸವ ಬಂದರೆ ಬಾಗಿಲು ಹಾಕಿಕೊಳ್ಳುತ್ತಿದ್ದರು. 'ಸ್ಮಾರ್ತ ಕುಲದಲ್ಲಿ ಹುಟ್ಟಿಯೂ ವೈಷ್ಣವ ಕುಲಕ್ಕೆ ಬಂದು ಸೇರಿದ ನೀವು ಎಷ್ಟು ಅದೃಷ್ಟವಂತರು! ಇದು ನಿಮ್ಮ ಪೂರ್ವಾರ್ಜಿತ ಪುಣ್ಯ' ಎಂದು ಒಬ್ಬ ಪರಿಚಯಸ್ಥರು ದಾರಿಯಲ್ಲಿ ಸಿಕ್ಕಿ ಮಡಿ ಮಡಿಯಾಗಿ ದೂರ ಸರಿಯುತ್ತಾ ನನ್ನನ್ನು ಪ್ರಶಂಸೆ ಮಾಡಿದ್ದರು. ಅತ್ತೆಯವರು ಬದುಕಿದ್ದಾಗ 'ಬೇಡದ ಸೊಸೆ' ಯಾದ ನಾನು 'ಇದೇ ಮನೆಗೆ ಒಬ್ಬಳು ಮುಸಲ್ಮಾನ ಮತ್ತು ಇನ್ನೊಬ್ಬ ಕ್ರಿಶ್ಚಿಯನ್ ಸೊಸೆಯನ್ನು ನಾನೇ ತರುತ್ತೇನೆ ನೋಡುತ್ತಿರಿ' ಎಂದು ರೋಷದಿಂದ ಅವರಿಗೆ ಹೇಳಿದ್ದೆ. ಈಗ ರಿಹಾನ ನನ್ನ ಮನೆ ಸ್ವಚ್ಛ ಗೊಳಿಸುವ ಮಹಾಲಕ್ಷ್ಮಿ. ರೂಪದಲ್ಲೂ ಥೇಟ್ ಅವಳೇ.... ನವರಾತ್ರಿಯಲ್ಲಿ ಅವಳನ್ನೇ ಕೂರಿಸಿ ಪೂಜೆ ಮಾಡಿಬಿಡಬಹುದು. ಹಣೆಗೊಂದು ಬಿಂದಿಯಿಲ್ಲ ಅಷ್ಟೇ. ಅವಳನ್ನು ಕೆಲಸದವಳು ಎನ್ನಲು ಮನಸ್ಸಾಗುವುದಿಲ್ಲ. 'ನೀನು ಇನ್ನೊಂದು ಹತ್ತು ವರುಷ ಚಿಕ್ಕವಳಾಗಬಾರದಿತ್ತೇನೆ?' ಎಂದು ಪ್ರೀತಿಯಿಂದ ಗದರುತ್ತೇನೆ. ಯಾವ ಬಂಧವೋ ಏನೋ ನಮ್ಮನ್ನು ಅಪ್ಪ ಅವ್ವನೆಂದೇ ಭಾವಿಸಿದ್ದಾಳೆ. ಇವಳಾರವಳು, ಇವಳಾರವಳು ಇವಳಾರವಳು?...... ಮನೆ ಮುಂದಿನ ಚರಂಡಿಯನ್ನೇ ದಾಟದವರು ಇನ್ನು ಸಮುದ್ರ ದಾಟಿಯಾರೇ? 11/10/8 ದೇವೀ ಮಹಾತ್ಮ್ಯೆ...... ಅವನು : "ತೂ ಔರತ್ ಹೈ ಯಾದ್ ರಖ್" (ಕಿಡಿ ಕಾರುವ ಕಣ್ಣುಗಳು. ಸೋಟೆ ತಿವಿಯುವ ಕೈ. ಎದೆ ಸೀಳಿದರೆ ಮೂರಕ್ಷರ ಇಲ್ಲ. ಶುದ್ಧ ಅಲಾಲ್ ಟೋಪಿ ನನ್ಮಗ). ಟೀಚರಮ್ಮ :ಅದು ನನಗೆ ಗೊತ್ತಿದೆ, ನೀನೇನು? ಗಂಡಸಾ? ಅದೇ ಒಂದು ಕ್ವಾಲಿಫಿಕೇಷನ್ನಾ - ರೇಪ್ ಮಾಡೋಕೆ? ರೇಪ್ ಮಾಡೋದು ಪೌರುಷ ಅಂದ್ಕೊಂಡಿದೀಯಾ? ನನ್ನ ಆತ್ಮ ವಿಶ್ವಾಸ ಕುಗ್ಗಿಸೋಕ್ಕೆ ಬೇರೆ ಏನಾದ್ರೂ ದಾರಿ ಇದ್ಯಾ ನೋಡು ಹೋಗು....ಬಂದ್ಬಿಟ್ಟಾ ದೊಡ್ಡದಾಗಿ... ಹೆಂಡತಿನೇ ಆಗಿದ್ರು ಅವಳ ಒಪ್ಪಿಗೆ ಇದ್ದರೆ ಮಾತ್ರ ಕೂಡುವವನು ನಿಜವಾದ ಹೀರೋ ಕಣೋ ..ತಿಳ್ಕೋ..... ಮೊದ್ಲು ಮೂರನೇ ಕ್ಲಾಸು ಪಾಸ್ ಮಾಡಿ ಬಾ.. ಆಮೇಲೆ ನನ್ನ ಶಾಲೇನಲ್ಲೇ ಜವಾನನ ಕೆಲ್ಸ ಕೊಡ್ತೀನಿ ಬೇಕಾದ್ರೆ. ಸಾಕ್ಷಾತ್ ನವದುರ್ಗಿಯರೂ # Me Too # ಗೆ ಚಾಲನೆ ಕೊಡಬೇಕಾಗಿರುವ ಅನಿವಾರ್ಯ ನಮ್ಮ ಸಂಸ್ಕೃತಿಯ ದುರಂತ. 12/10/18 ನಮ್ಮ ಮನೆಯ ಕೆಲಸದವಳು ರಿಯಾನ. ಅವಳಿಗೆ ಮನೆಯಲ್ಲಿ ಎನೋ ಸಮಸ್ಯೆ. ಬಗೆಹರಿಯಲಾರದ ಕಷ್ಟಗಳ ಪರಂಪರೆ. ಮೊನ್ನೆ ಬಿಜಾಪುರದಿಂದ ಯಾರೋ ಪೀರ್ ಬಾಬಾ ಬಂದಿರುವರೆಂದೂ ಕಷ್ಟಗಳಿಗೆ ಪರಿಹಾರ ಸೂಚಿಸುವರೆಂದೂ, ಅವರಿಗೆ ಏನು ಹೇಳದೆಯೂ ಎಲ್ಲಾ ತಿಳಿಯುವುದೆಂದು ಅವರ ಬಳಿಗೆ ತಾನು ಹೋಗುವುದಾಗಿ ಹೇಳಿದ್ದಳು. ಇಂದು ಮುಂಜಾನೆ ಅವಳು ಬಂದಾಗ ಪೀರ್ ಬಾಬನ ಬಳಿಗೆ ಹೋಗಿದ್ದೆಯಾ? ಎಂದು ಕೇಳಿದಾಗ ಅವಳು ಪೀರ್ ಬಾಬ ಅವಳ ಕಷ್ಟದ ಸ್ವರೂಪಗಳನ್ನೆಲ್ಲಾ ಚಾಚೂ ತಪ್ಪದೇ ಹೇಳಿದರಂತೆ. ಅಲ್ಲದೇ, "ಬೇಟೀ ನಿನಗೆ ಯಾರೋ ಕೆಟ್ಟದು ಮಾಡಲು ಪ್ರಯತ್ನಿಸುತ್ತಿರಬಹುದು. ಆದರೆ ನೀನು ಮಾತ್ರ ಅದೇ ರೀತಿ ಅವರಿಗೆ ಮರು ಮಾಟ ಮಾಡಿಸಿ ಎದಿರೇಟು ಕೊಡಬೇಡ. ನಿಮ್ಮ ಮನೆಯ ಬಾಬಾ ಚಾಂದ್ ಪೀರ್ ನ್ ಹೆಸರಲ್ಲಿ ದಿನಾಲು ಒಳ್ಳೆಯದಾಗಲೀ ಎಂದು ಪ್ರಾರ್ಥಿಸಿಕೊಂಡುದೀಪ ಹಚ್ಚು. ನಿನಗೆ ಮತ್ತು ನಿನ್ನ ಗಂಡ ಮಕ್ಕಳಿಗೆ ಅದು ರಕ್ಷಣೆಯನ್ನು ನೀಡುತ್ತದೆ. ನಿನಗೆ ಕೆಟ್ಟ್ಟದು ಮಾಡಿದವರು ಅವರೇ ಅನುಭವಿಸುತ್ತಾರೆ. ನೀನು ಮಾತ್ರ ಕೆಟ್ಟದ್ದನ್ನು ಯಾರಿಗೂ ಬಯಸ ಬೇಡ. ಹಾಗೇನಾದರೂ ನೀನು ಬಯಸಿದರೆ ನನ್ನ ಬಳಿಗೆ ಇನ್ನೊಮ್ಮೆ ಬರಬೇಡ ಎಂದು ಆ ಪೀರ್ ಬಾಬಾ ಅವಳಿಗೆ ತಾಕೀತು ಮಾಡಿದರಂತೆ. "ಯಾರವರು ನಾನೂ ನೋಡಬೇಕಿತ್ತು" ,ಎಂದು ರಿಯಾನಾಳನ್ನು ಕೇಳಿದೆ. "ಸಚ್ಚೀ ಆಂಟೀ?" ಎಂದು ಬೆರಗಾಗಿ ಕೇಳಿದಳು. ಅವರು ಇನ್ನೊಮ್ಮೆ ಮುಂಬಯಿಗೆ ಬಂದಾಗ ನನ್ನನ್ನು ಅವರ ಬಳಿಗೆ ಕರೆದುಕೊಂದು ಹೋಗುವುದಾಗಿ ಹೇಳಿದ್ದಾಳೆ. ಜಿಹಾದ್ ಎಂದರೆ ಇದೇ ಅಲ್ಲವೇ? ನಮ್ಮ ಕಣ್ಣಪಟ್ಟಿಗಳನ್ನು ಕಿತ್ತೆಸೆಯುವ ಅರಿವು ಎಂದರೆ ಇದೇ ಅಲ್ಲವೇ? ತತ್ವಪದಕಾರರು ಸಮೃದ್ಧಗೊಳಿಸಿದ ನೆಲದಲ್ಲಿ ಸೌಹಾರ್ದದ ಮಾತಿನ ಹೊರತಾಗಿ ಇನ್ನೇನು ಹೊರಬೀಳಲು ಸಾಧ್ಯ? ರಿಯಾನ ನನಗೆ ಮಗಳಿಗಿಂತಲೂ ಹೆಚ್ಚು! 8/2015 ಸಮಕಾಲೀನ ಪಿ.ಎಚ್. ಡಿ ಎಂಬ ಪ್ರಹಸನ : ನನ್ನ ಸೊಸೆ ರಾಜಾಸ್ಥಾನದ ಒಂದು ವಿ.ವಿಯಲ್ಲಿ HR ವಿಷಯದಲ್ಲಿ ಸಂಶೋಧನೆ ಮಾಡುತ್ತಿದ್ದು ಮಹಾಪ್ರಬಂಧವನ್ನು ಸಲ್ಲಿಸಿದ್ದಾಳೆ. ಬರುವ ತಿಂಗಳು ಮೌಖಿಕ ಪರೀಕ್ಷೆ. ಇದಕ್ಕೆ ಹಾಜರಾಗುವುದಕ್ಕೂ ಮುನ್ನ ಅವಳು ತಾನು ಬರೆದು ಸಲ್ಲಿಸಿದ ಮಹಾಪ್ರಬಂಧ ಸ್ವಂತದ್ದೆಂದು (original) ತೋರಿಸಲು ಅಫಿದವಿತ್ ಸಲ್ಲಿಸಬೇಕು. ಅದರ ಜೊತೆಗೆ ಕೋರ್ಸ್ ಮಾಡುವ ಸಂದರ್ಭದಲ್ಲಿ ತಾನು ಯಾವುದೇ ರೀತಿಯ ರಾಗಿಂಗ್ ನಲ್ಲಿ ಪಾಲುಗೊಂಡಿಲ್ಲ ಎಂಬುದನ್ನೂ ಅಫಿದವಿತ್ ಮೂಲಕ ಸಾಬೀತು ಪಡಿಸಬೇಕು. ಮಹಾಪ್ರಬಂಧವನ್ನು ಸಲ್ಲಿಸುವುದಕ್ಕೂ ಮುನ್ನ ಮಹಾಪ್ರಬಂಧ ಕೃತಿ ಚೌರ್ಯ ಪರೀಕ್ಷೆಗೆ ಒಳಗಾಗಬೇಕು(plagiarism test) ಯಾವುದೇ ಕೃತಿಯಿಂದ ಹತ್ತು ಕಡೆಗಿಂತಲೂ ಹೆಚ್ಚು ನಕಲು ಮಾಡಿರುವುದು ಕಂಡು ಬಂದರೆ ಅ ಮಹಾಪ್ರಬಂಧ ಅಸಿಂಧುವಾಗುತ್ತದೆ, ಸಲ್ಲಿಸುವಂತಿಲ್ಲ. ಇಂತಿಷ್ಟೇ ಪುಟಗಳು ಇರಬೇಕೆಂಬ ನಿಯಮವಿದೆ.ಇಷ್ಟೆಲ್ಲಾ ಅಗ್ನಿ ಪರೀಕ್ಶೆಗಳನ್ನು ದಾಟಿ ಮೌಖಿಕ ಪರೀಕ್ಷೆಗೆ (Viva ) ಕರೆ ಬಂತೆಂದರೆ ಅರ್ಧ ಗೆದ್ದ ಹಾಗೆ. ಮುಂಬಯಿ ವಿ.ವಿ.ಯ ಹಾಗೆ ಇಲ್ಲಿಯೂ ಪಿಎಚ್. ಡಿ ಮೌಖಿಕ ಪರೀಕ್ಷೆ ತೆರೆದ ರೂಪದ್ದು (ಓಪನ್ ವೈವಾ). ಆದರೆ ಅಲ್ಲಿ ಭಾಷೆ ಬರುತ್ತದೆ ಎಂಬ ಕಾರಣಕ್ಕೆ ಯಾವುದೇ ವೆಂಕ ನಾಣಿ ಸೀನಿಗೆ ಪ್ರವೇಶವಿಲ್ಲ. ಸಂಬಂಧ ಪಟ್ಟ ವಿಷಯದಲ್ಲಿ ಸ್ನಾತರಾಗಿರುವವರಿಗೆ, ಪಿ.ಎಚ್.ಡಿ ವಿದ್ಯಾರ್ಥಿಯನ್ನು ಪ್ರಶ್ನಿಸಬಲ್ಲ ಅರ್ಹತೆ ಉಳ್ಳವರಿಗೆ ಮಾತ್ರ ಪ್ರವೇಶ. ವಿದ್ಯಾರ್ಥಿ, ಅವರು ಕೇಳುವ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಬೇಕು. ಅದರಲ್ಲಿ ತೋರಿಸುವ ಜಾಣ್ಮೆ ಆತ್ಮ ವಿಶ್ವಾಸ ಇವುಗಳೆಲ್ಲವನ್ನೂ ಗಣನೆಗೆ ತಂದುಕೊಂದು, ಮೂರು ನಾಲ್ಕು ರೆಫ್ರಿಗಳು ತೂಗಿ ನೋಡಿ ಪಾಸ್ ಮಾಡಿದ ನಂತರವೇ ಪಿ.ಎಚ್.ಡಿ ಡಿಗ್ರಿ. ಹೀಗೆ ....ನಮ್ಮಲ್ಲಿಯೇನಾದರೂ ಕೃತಿಚೌರ್ಯ ಪರೀಕ್ಷೆ ನಡೆದರೆ ದೇವರೇ ಗತಿ! ನಾವು ಕೋಟ್ ಗಳ ವೀರರು. ಅಗತ್ಯವಿರಲಿ ಬಿಡಲಿ. ಇಡೀ ಪ್ರಬಂಧವನ್ನು ಕಂಡ ಕಂಡ ಗ್ರಂಥಗಳ ಉಲ್ಲೇಖಗಳಿಂದ ತುಂಬಿಸಿಬಿಟ್ಟಿರುತ್ತೇವೆ. ಅದನ್ನು ನಮ್ಮ ವಿಷಯಕ್ಕೆ ಸಂಬಂಧಿಸಿದಂತೆ ಒಪ್ಪುವ ಅಥವಾ ವಿರೋಧಿಸುವ ಕಾರಣಗಳನ್ನು ಸೂಚಿಸುವುದಿಲ್ಲ. ಕೊಟೇಶನ್ ಒಂದು ಅಲಂಕಾರ ಅಷ್ಟೇ. ಹೀಗಾಗಿ ಅದು ನಿಜವಾದ ಅರ್ಹದಲ್ಲಿ ಮಹಾಪ್ರಬಂಧವಾಗಿ ಸಾವಿರ ಪುಟ ದಾಟಿರುತ್ತದೆ. ಶ್ರೀನಿವಾಸ ಹಾವನೂರರು ಪಿ.ಎಚ್. ಡಿ ಯೆಂದರೆ making one book out of ten books ಎಂದು ತಮಾಷೆ ಮಾದುತ್ತಿದ್ದರು. ಇಂದು ಹೆಚ್ಚಾಗಿ ಅನ್ವರ್ಥವಾಗಿ ಅದೇ ಆಗಿದೆ. ಯಾಕೆಂದರೆ ಹೀಗೆ ಪಿ.ಎಚ್. ಡಿ ಮಾಡಿದ ವ್ಯಕ್ತಿಗೆ ಅವನದೇ/ಅವಳದೇ ವಿಷಯದ ಯಾವುದಾದರೊಂದು ಪುಸ್ತಕ ಕೊಟ್ಟು ನೋಡಿ, ಅದು ಏನು ಹೇಳುತ್ತಿದೆ ಎಂದು ಸ್ವಂತವಾಗಿ ಆಲೋಚಿಸಲು ಬರುವುದಿಲ್ಲ. ಇನ್ನು ವಿಮರ್ಶೆ ಬರೆಯುವುದು ದೂರದ ಮಾತು. ಬರೆದರೂ ಯಾವುದೇ ಒಳನೋಟಗಳಿಲ್ಲದ ನಾಲ್ಕು ಸಾಲುಗಳನ್ನು (ತನ್ನದಲ್ಲದ) ಹೊಸೆಯಬಹುದು. ಕೆಲವು ಸಲ ಇಡೀ ಪ್ರಬಂಧವೇ ಯಾವುದೋ ಪ್ರಬಂಧದ ನಕಲಾಗಿರುವುದುಂಟು. ಒಮ್ಮೆ ಕಲ್ಬುರ್ಗಿಯವರು ನಮಗೆ ಸಿಕ್ಕಿ ಅವರ ಪುಸ್ತಕದಿಂದ ಇಡಿ ಇಡಿಯಾಗಿ ಕದ್ದು ಪಿ.ಎಚ್.ಡಿ ಪಡೆದುಕೊಂಡಿದ್ದಲ್ಲದೇ ಪುಸ್ತಕವನ್ನೂ ಛಾಪಿಸಿಬಿಟ್ಟ ಶೂರನೊಬ್ಬನ ಬಗ್ಗೆ ಹೇಳುತ್ತಿದ್ದರು. ಓದುಗರೆಲ್ಲಾ ಮೂರ್ಖರು ಎಂದು ತಿಳಿದುಕೊಂಡಂತೆ ಅವರು ಬೀಗುವುದೇನು? ಪಿ.ಎಚ್. ಡಿ ಬಂದ ಮರುದಿನವೇ ಪ್ರಕಟಿಸಿಬಿಟ್ಟು ಸನ್ಮಾನಗಳ ಜಾತ್ರೆಯೇನು? ಶಾಲುಗಳನ್ನು ಹೆಗಲ ಮೇಲೆ ಎಸೆಯುವುದೇನು? ಮೌಖಿಕ ಪರೀಕ್ಷೆಯಲ್ಲ, ಜಾತ್ರೆಯಲ್ಲಿ ಸೇರಿದ ಕುರಿಗಳನ್ನು ಮೆಚ್ಚಿಸುವ ಅದು ಮಾರಿ ಹಬ್ಬ. ಒಬ್ಬಳಾದರೂ ಎದ್ದು ಪ್ರಶ್ನೆ ಕೇಳಿದರೆ ನೋಡಿ! ಅಯ್ಯೋ ಕೇಳಲು ಅವಳಿಗೆ ಗೊತ್ತಿರಬೇಕಲ್ಲಾ? ಚೆಂದ ಕಾಂಜೀವರಂ ಸೀರೆ, ನೆಕ್ಲೇಸು ಪ್ರದರ್ಶನ ಮಾಡಲು ವಿಷಯದಲ್ಲಿ ಪರಿಣಿತಿ ಯಾಕಾದರೂ ಬೇಕು? ನಮ್ಮ ಮಾರ್ಗದರ್ಶಕರಾದ ಡಾ. ತಾಳ್ತಜೆ ವಸಂತ್ ಕುಮಾರ್ ಅವರು ಯಾವಾಗಲೂ ವಿದ್ಯಾರ್ಥಿಗಳಿಗೆ ಹೇಳುವ ಮಾತೆಂದರೆ "ನಿಜವಾದ ಸಂಸೋಧನೆ ಪ್ರಾರಂಭವಾಗುವುದೇ ಪಿ.ಎಚ್.ಡಿ.ಯನಂತರ" ಇಲ್ಲಿ ಪಿ.ಎಚ್.ಡಿ. ಯನಂತರ ಪ್ರಾರಂಭವಾಗುವುದು ಸನ್ಮಾನ ಸಮಾರಂಭಗಳು, ಬಿರುದು ಬಾವಲಿಗಳು. ಕಪಾಟಿನಲ್ಲಿ ಇಡುಕಿರಿದ ಶಾಲುಗಳು..... ಷೋ...ಕನ್ನಡದ ಷೋ ನಡೆಯುತ್ತದೆ .....ಬನ್ನಿ ನೀವೂ ನೋಡಿ...14/10/18 ನೀನಾ ಇಷ್ಟೇ ಬಿಡು........ಬೂರ್ನಾಸು... ನಾವೇಕೆ ಇಷ್ಟು judgemental ಆಗುತ್ತಿದ್ದೇವೆ. ಎಲ್ಲಾ ವಿಷಯಕ್ಕೂ ಪ್ರತಿಕ್ರಿಯಿಸುತ್ತೇವೆ- ಇಡೀ ಬ್ರಹ್ಮಾಂಡವನ್ನೇ ಕರತಲಾಮಲಕ ಮಾಡಿಕೊಂಡವರಂತೆ? ಎಷ್ಟು ಗೊತ್ತು ನಮಗೆ? ಕೇಳಿಕೊಳ್ಳುವುದಿಲ್ಲ. ಮುಖಪುಸ್ತಿಕೆಯಲ್ಲಿ ಏನಾದರೂ ಕಂಡಿತೋ ಬಟನ್ ಒತ್ತುವುದೇ! ದಿಢೀರನೆ ನಮ್ಮದೇ ತಕ್ಕಡಿಯಲ್ಲಿ ಹಾಕಿ ತೂಕ ಮಾಡಿ ಇನ್ನೊಬ್ಬರ ಹಣೆ ಬರಹ ಬರೆವ ಪಂಟರು ನಾವು.. ಫೇಸ್ ಗಳಿಗೆ ಮಸಿ ಬಳಿಯುವ ಫೇಸ್ ಬುಕ್ !!!! 25/9/18 "ಯಾಕುಂದೇಂದು ತುಷಾರ ಹಾರ ಧವಲಾ" ಈ ಶ್ಲೋಕವನ್ನು ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಮಕ್ಕಳು ಸಣ್ಣವರಿರುವಾಗಲೇ ಕಲಿಸಲಾಗುತ್ತದೆ. ಅದರಲ್ಲಿ "ಯಾ ಬ್ರಹ್ಮಾಚ್ಯುತ ಶಂಕರ ಪ್ರಭೃತಿಭಿರ್ದೇವೈಃ ಸದಾ ಪೂಜಿತಾ"ಎನ್ನುವ ಸಾಲೂ ಬರುತ್ತದೆ.. ನಮ್ಮ ಮನೆಗೆ ಬಂದಿದ್ದ ವಿಷ್ಣು ಪಾರಮ್ಯವನ್ನು ಎತ್ತಿ ಹಿಡಿಯುವ ಜನಾಂಗಕ್ಕೆ ಸೇರಿದ ಮಹಿಳೆಯೊಬ್ಬರು ಈ ಶ್ಲೋಕವನ್ನು ಹೇಳುತ್ತಾ "ಶಂಕರಪ್ರಭೃತಿಭಿ.. ಎನ್ನುವುದನ್ನು skip ಮಾಡಿ ಅದಕ್ಕೆ ಇನ್ನೇನೋ ವಿಶೇಷಣ ಸೇರಿಸಿಕೊಂಡು ಹೇಳುತ್ತಿದ್ದರು. ಬಾಲ್ಯದಿಂದಲೂ ಈ ಶ್ಲೋಕವನ್ನು ಕೇಳುತ್ತಾ ಬಂದಿದ್ದ ನನಗೆ ಇದು ಎಲ್ಲೋ ಮಿಸ್ ಹೊಡೀತಿದೆಯಲ್ಲಾ ಎನಿಸಿತು. ಉತ್ತರ ಕರ್ನಾಟಕದ ಒಂದು ಭಾಗದ, ಶಿವ ಪಾರಮ್ಯವನ್ನು ಎತ್ತಿ ಹಿಡಿಯುವ ಜನ 'ಹರಿವಾಣ' ಕ್ಕೆ ಅದರಲ್ಲಿ ಹರಿ ಇರುವುದರಿಂದ 'ಹರವಾಣ' ಎನ್ನುತ್ತಾರಂತೆ. ಬಾಲ್ಯದಲ್ಲೇ ಮುಗ್ಧ ಮನಸ್ಸನ್ನು ನಮ್ಮ ಅಜ್ಞಾನ, ಅತಿರೇಕಗಳು ಹೇಗೆ ಭ್ರಷ್ಟಗೊಳಿಸಿಬಿಡುತ್ತವೆ!!!! ಎಲ್ಲಾ ಹಿರಣ್ಯಕಶಿಪು ವಿನ, ರಕ್ತಬೀಜಾಸುರನ ಸಂತಾನಗಳು. ಜಿ.ಎಸ್. ಎಸ್ ಅವರ 'ಗಂಗೆಯ ಶಿಖರಗಳಲ್ಲಿ' ಕೃತಿಯಲ್ಲಿ ಒಂದು ಕಡೆ - ಹರಿದ್ವಾರ್ ಮತ್ತು ಹರದ್ವಾರ್ ಎನ್ನುವ ಎರಡೂ ಪ್ರಯೋಗಗಳಿವೆ. ಅದು ಹರಿದ್ವಾರವೂ ಹೌದು ಹರದ್ವಾರವೂ ಯಾಕೆಂದರೆ ಈ ಪ್ರದೇಶದ ಮೂಲಕವೇ ಒಂದು ದಿಕ್ಕಿನಲ್ಲಿ ನಡೆದರೆ ಬದರಿ ಇನ್ನೊಂದು ದಿಕ್ಕಿನಲ್ಲಿ ನಡೆದರೆ ಕೇದಾರ ಸಿಗುತ್ತದೆ, ಎನ್ನುತ್ತಾರೆ. ನಮ್ಮ ಊರಿನಲ್ಲಿ ಕೆಲವರು ಶಿವನ ಉತ್ಸವ ಬಂದರೆ ಬಾಗಿಲು ಹಾಕಿಕೊಳ್ಳುತ್ತಿದ್ದರು. 'ಸ್ಮಾರ್ತ ಕುಲದಲ್ಲಿ ಹುಟ್ಟಿಯೂ ವೈಷ್ಣವ ಕುಲಕ್ಕೆ ಬಂದು ಸೇರಿದ ನೀವು ಎಷ್ಟು ಅದೃಷ್ಟವಂತರು! ಇದು ನಿಮ್ಮ ಪೂರ್ವಾರ್ಜಿತ ಪುಣ್ಯ' ಎಂದು ಒಬ್ಬ ಪರಿಚಯಸ್ಥರು ದಾರಿಯಲ್ಲಿ ಸಿಕ್ಕಿ ಮಡಿ ಮಡಿಯಾಗಿ ದೂರ ಸರಿಯುತ್ತಾ ನನ್ನನ್ನು ಪ್ರಶಂಸೆ ಮಾಡಿದ್ದರು. ಅತ್ತೆಯವರು ಬದುಕಿದ್ದಾಗ 'ಬೇಡದ ಸೊಸೆ' ಯಾದ ನಾನು 'ಇದೇ ಮನೆಗೆ ಒಬ್ಬಳು ಮುಸಲ್ಮಾನ ಮತ್ತು ಇನ್ನೊಬ್ಬ ಕ್ರಿಶ್ಚಿಯನ್ ಸೊಸೆಯನ್ನು ನಾನೇ ತರುತ್ತೇನೆ ನೋಡುತ್ತಿರಿ' ಎಂದು ರೋಷದಿಂದ ಅವರಿಗೆ ಹೇಳಿದ್ದೆ. ಈಗ ರಿಹಾನ ನನ್ನ ಮನೆ ಸ್ವಚ್ಛ ಗೊಳಿಸುವ ಮಹಾಲಕ್ಷ್ಮಿ. ರೂಪದಲ್ಲೂ ಥೇಟ್ ಅವಳೇ.... ನವರಾತ್ರಿಯಲ್ಲಿ ಅವಳನ್ನೇ ಕೂರಿಸಿ ಪೂಜೆ ಮಾಡಿಬಿಡಬಹುದು. ಹಣೆಗೊಂದು ಬಿಂದಿಯಿಲ್ಲ ಅಷ್ಟೇ. ಅವಳನ್ನು ಕೆಲಸದವಳು ಎನ್ನಲು ಮನಸ್ಸಾಗುವುದಿಲ್ಲ. 'ನೀನು ಇನ್ನೊಂದು ಹತ್ತು ವರುಷ ಚಿಕ್ಕವಳಾಗಬಾರದಿತ್ತೇನೆ?' ಎಂದು ಪ್ರೀತಿಯಿಂದ ಗದರುತ್ತೇನೆ. ಯಾವ ಬಂಧವೋ ಏನೋ ನಮ್ಮನ್ನು ಅಪ್ಪ ಅವ್ವನೆಂದೇ ಭಾವಿಸಿದ್ದಾಳೆ. ಇವಳಾರವಳು, ಇವಳಾರವಳು ಇವಳಾರವಳು?...... ಮನೆ ಮುಂದಿನ ಚರಂಡಿಯನ್ನೇ ದಾಟದವರು ಇನ್ನು ಸಮುದ್ರ ದಾಟಿಯಾರೇ? 10/10/18 ದೇವೀ ಮಹಾತ್ಮ್ಯೆ...... ಅವನು : "ತೂ ಔರತ್ ಹೈ ಯಾದ್ ರಖ್" (ಕಿಡಿ ಕಾರುವ ಕಣ್ಣುಗಳು. ಸೋಟೆ ತಿವಿಯುವ ಕೈ. ಎದೆ ಸೀಳಿದರೆ ಮೂರಕ್ಷರ ಇಲ್ಲ. ಶುದ್ಧ ಅಲಾಲ್ ಟೋಪಿ ನನ್ಮಗ). ಟೀಚರಮ್ಮ :ಅದು ನನಗೆ ಗೊತ್ತಿದೆ, ನೀನೇನು? ಗಂಡಸಾ? ಅದೇ ಒಂದು ಕ್ವಾಲಿಫಿಕೇಷನ್ನಾ - ರೇಪ್ ಮಾಡೋಕೆ? ರೇಪ್ ಮಾಡೋದು ಪೌರುಷ ಅಂದ್ಕೊಂಡಿದೀಯಾ? ನನ್ನ ಆತ್ಮ ವಿಶ್ವಾಸ ಕುಗ್ಗಿಸೋಕ್ಕೆ ಬೇರೆ ಏನಾದ್ರೂ ದಾರಿ ಇದ್ಯಾ ಹೋಗಿ ಹುಡ್ಕು...ಬಂದ್ಬಿಟ್ಟಾ ದೊಡ್ಡದಾಗಿ... ಹೆಂಡತಿನೇ ಆಗಿದ್ರು ಅವಳ ಒಪ್ಪಿಗೆ ಇದ್ದರೆ ಮಾತ್ರ ಕೂಡುವವನು ನಿಜವಾದ ಹೀರೋ ಕಣೋ ..ತಿಳ್ಕೋ..... ಮೊದ್ಲು ಮೂರನೇ ಕ್ಲಾಸು ಪಾಸ್ ಮಾಡಿ ಬಾ.. ಆಮೇಲೆ ನನ್ನ ಶಾಲೇನಲ್ಲೇ ಜವಾನನ ಕೆಲ್ಸ ಕೊಡ್ತೀನಿ ಬೇಕಾದ್ರೆ. ಸಾಕ್ಷಾತ್ ನವದುರ್ಗಿಯರೂ # Me Too # ಗೆ ಚಾಲನೆ ಕೊಡಬೇಕಾಗಿರುವ ಅನಿವಾರ್ಯ ನಮ್ಮ ಸಂಸ್ಕೃತಿಯ ದುರಂತ. 12/10/18 ನಾವು ಹ್ಯಾರಿ ಪಾಟರ್, ಸ್ಪೈಡರ್ ಮ್ಯಾನ್, ಬ್ಯಾಟ್ ಮ್ಯಾನ್ ಎಲ್ಲಾ ಒಪ್ಪಕೊಳ್ತೀವಿ ಆದರೆ ಹನುಮಂತ ಹಾರೋದನ್ನು ಯಾಕೆ ಪ್ರಶ್ನಿಸ್ತೀವಿ? ಬಾಹುಬಲಿ ಬಗ್ಗೆನೂ ತಕರಾರು ಇದೆ. ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿ ವಾಮನಕ್ರಮಮಂ ಮುಟ್ಟುಗೆ ಮುಟ್ಟದಿರ್ಕೆ ನಭಮಂ ಹರನಂ ನರನೊತ್ತಿ ಗಂಟಲಂ ಮೆಟ್ಟುಗೆ ಮೆಟ್ಟದಿರ್ಕೆ ಕವಿಗಳ್ ಕೃತಿಬಂಧದೊಳಲ್ತೆ ಕಟ್ಟಿದರ್ ಮುಟ್ಟಿದರಿಕ್ಕಿ ಮೆಟ್ಟಿದರದೇನಳವಗ್ಗಳಮೋ ಕವೀಂದ್ರರ (ನೇಮಿಚಂದ್ರನ ಲೀಲಾವತಿ ಕಾವ್ಯ) [ಕಪಿಗಳು ಕಡಲನ್ನು ಕಟ್ಟಿದರೋ ಇಲ್ಲವೋ, ವಾಮನ ನಭವನ್ನು ಮುಟ್ಟಿದನೋ ಇಲ್ಲವೋ, ಅರ್ಜುನ ಹರನ ಗಂಟಲನ್ನು ಒತ್ತಿ ಮೆಟ್ಟಿದನೋ ಇಲ್ಲವೋ, ನಮ್ಮ ಕವಿಗಳಂತೂ ತಮ್ಮ ಕಾವ್ಯದ ಮೂಲಕ ಮುಟ್ಟಿದರು, ಇಕ್ಕಿ ಮೆಟ್ಟಿದರು] 23/10/18 ನಾಳೆ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪ್ರತಿಮೆಯ ಅನಾವರಣ. ವಿಶ್ವದಲ್ಲೇ ಅತೀ ಎತ್ತರದ ಪ್ರತಿಮೆಯೆಂದು ಹೆಸರಾದ ಇದು ಎಷ್ಟು ಬೃಹತ್ ಎಂದರೆ ಅದರ ಕಾಲ್ಬೆರಳುಗಳೇ ಆರೇಳು ಅಡಿಗಳಷ್ಟು ಎತ್ತರವಂತೆ! ಪ್ರವಾಸಿಗರು ೭೯೦ ಅಡಿಗಳ ( ಮೂರ್ತಿಯ ಎತ್ತರ ೫೯೭ ಅಡಿ) ಆ ಮೂರ್ತಿಯನ್ನು ಅಖಂಡವಾಗಿ ಕಾಣಲು ಅದರ ಕೆಳಗೆ ನಿಂತರೆ ಸಾಧ್ಯವಿಲ್ಲ. ಏಳು ಕಿ. ಮೀ.ನಷ್ಟು ದೂರದಿಂದಲೇ ಪ್ರತಿಮೆ ಕಾಣುತ್ತದೆಯಂತೆ! ಹತ್ತಿರದಿಂದ ಕಾಣಬೇಕೆಂದರೆ ಅಷ್ಟೇ ಎತ್ತರಕ್ಕೆ ಏರಬೇಕು. ಇಲ್ಲ, ದೂರದಿಂದಲೇ ನೋಡಬೇಕು. ಪ್ರತಿಮೆಯ ಎದೆ ಭಾಗದಲ್ಲಿ ನಿರ್ಮಾಣ ವಾಗಿರುವ ವೀಕ್ಷಣಾ ಗ್ಯಾಲರಿಯಿಂದ ಹೊರಗಿನ ಪ್ರಪಂಚ ಅದ್ಭುತವಾಗಿ ಕಾಣಿಸುತ್ತದೆಯಂತೆ!!! ಭೂಮ ಸದೃಶವಾದುದನ್ನು ಅಖಂಡವಾಗಿ ಕಾಣಲು ನಾವೂ ನಮ್ಮ ಎತ್ತರವನ್ನು ಹೆಚ್ಚಿಸಿಕೊಳ್ಳಬೇಕು. 30/10/18 ದೀಪಾವಳಿ ತಿಂಡಿ ಮತ್ತು ಒಂದು ಹೊಸ ಸೀರೆಯನ್ನು ರಿಹಾನಳಿಗೆ ಕೊಟ್ಟೆ. ಕುಂಕುಮ ಕೊಡೋಲ್ವಾ ಎಂದು ಇವನು ಛೇಡಿಸಿದ. ಇಲ್ಲ ಅವಳ ಧರ್ಮಕ್ಕೆ ವಿರುದ್ಧವಾದುದನ್ನು ನಾನು ಮಾಡೋಲ್ಲ, ಎಂದು ಖಾರವಾಗಿಯೇ ಹೇಳಿ ಅಡುಗೆ ಮನೆ ಹೊಕ್ಕೆ. ಹಿಂದಿನಿಂದ ಓಡಿ ಬಂದ ರಿಹಾ ಅರಿಸಿನ ಕುಂಕುಮವನ್ನು ಕೊರಳಿಗೆ ಹಚ್ಚಿಕೊಂಡು ಹೊರಗೆ ಓಡಿದಳು. ನಿನ್ನ ಗಂಡ ನೋಡೋಕ್ಕೆ ಮುಂಚೆ ಅಳಿಸಿಕೊಂಡು ಬಿಡೇ ......ಎಂದು ಕೂಗಿದೆ. ನಗುತ್ತಾ ಮನೆ ಬಾಗಿಲೆಳೆದುಕೊಂಡು ಹೋದಳು. 8/11/18 ಪುರೋಹಿತರೊಬ್ಬರ ಮನೆಗೆ ಹೋಗಿದ್ದೆವು. ಬಿಸಿಲಲ್ಲಿ ಬಂದವರೆಂದು ಒಳ ಕರೆದು ನೀರುಬೇಕಾ ಎಂದು ಕೇಳಿದರು. ಮಹಾ ಸಂಪ್ರದಾಯಸ್ಥರು. ಪಾಪ ಭೀರುಗಳು. ಬಡತನ ರಾರಾಜಿಸುವ ಗೋಡೆಗಳು. ಅಲ್ಲೊಂದು ಶಿರಡಿ ಸಾಯಿಬಾಬಾನ ಫೋಟೋ. ಮನೆಯಾಚೆ ಬಂದಾಗ ಇವನು " ಈ ವಯ್ಯ ಸಾಯಿಬಾಬನ ಫೋಟೋ ಇಟ್ಟುಕೊಂಡಿದ್ದಾನೆ" ಅಂದ. ಅದಕ್ಕೆ ನಾನೆಂದೆ, "ಏನೀಗ ? ಅವರೇನು ದಾವೂದ್ ಇಬ್ರಾಹಿಂ ಫೋಟೋ ಇಲ್ಲ ದಂತ ಚೋರ ವೀರಪ್ಪನ್ ಫೋಟಾನಾ ಇಟ್ಕೊಂಡಿರೋದು? ಸಾಯಿಬಾಬಾನ ಫೋಟೋ ತಾನೇ? This is too much......" 10/11/18 ಅನಂತ್ ಕುಮಾರ್ ಅವರು ಇನ್ನಿಲ್ಲವಾದ ಈ ಕ್ಷಣದಲ್ಲಿ ಅವರ ಬಗ್ಗೆ ಬಹಳ ಒಳ್ಳೆಯ ಮಾತುಗಳನ್ನು ಆಡುತ್ತಿದ್ದಾರೆ. ಸಾವಿನ ಸಂದರ್ಭದಲ್ಲಿ ಇದು ಸಹಜ ಎನಿಸಬಹುದು. ಆದರೆ ಅವರು ನನ್ನಂತಹ ಸಾಮಾನ್ಯಳ ಬದುಕಿನಲ್ಲಿ ಕೂಡ ಒಂದು ಒಳ್ಳೆಯ ನೆನಪನ್ನು ಬಿಟ್ಟುಹೋಗಿದ್ದಾರೆ. ಈ ಹೊತ್ತಿನಲ್ಲಿ ನಾನು ಅದನ್ನು ನೆನೆಯಬೇಕಾಗಿದೆ. ಹಗುರಾಗಬೇಕಾಗಿದೆ. ನನಗೆ ಅವರ ವೈಯಕ್ತಿಕ ಪರಿಚಯವಿಲ್ಲ. ಈಗ್ಗೆ ೧೫ ೧೬ ವರುಷಗಳ ಕೆಳಗೆ ಅವರು HRD ಮಂತ್ರಿಗಳಾಗಿದ್ದ ಸಂದರ್ಭ. ಆಗ ನನಗೆ ಸಂಶೋಧನೆಗೆಂದು ಅದೇ ಇಲಾಖೆಯ ಎರಡು ವರುಷಗಳ ವಿದ್ಯಾರ್ಥಿ ವೇತನ ದೊರೆತಿತ್ತು. ಯಾವ ಕಾರಣಕ್ಕೋ ನಾಲ್ಕು ತಿಂಗಳ ನನ್ನ ವಿದ್ಯಾರ್ಥಿ ವೇತನವನ್ನು ತಡೆಹಿಡಿಯಲಾಗಿತ್ತು - ಅಧ್ಯಯನ ಪ್ರಗತಿಯ ವರದಿಗಳನ್ನು ನಿಯಮಿತವಾಗಿ ಕಳುಹಿಸಿದ ಮೇಲೂ. ನಾನು ಆಗ ಅನಂತ್ ಕುಮಾರ್ ಅವರಿಗೆ ಈ ಕುರಿತಾಗಿ ಅವರ ದೆಹಲಿಯ ಮನೆಯ ವಿಳಾಸಕ್ಕೆ ಕನ್ನಡದಲ್ಲಿ ಒಂದು ಪತ್ರ ಬರೆದೆ. ಅವರಿಂದ ಪ್ರತಿಕ್ರಿಯೆ ಬರುವ ಆಸೆ ಕನಸು ಮನಸ್ಸಿನಲ್ಲೂ ಇರಲಿಲ್ಲ. ಒಂದು ದಿನ ಅಚಾನ್ಕಾಗಿ ಭಾರತ ಸರ್ಕಾರದ ಲಕೋಟೆ ನನ್ನ ಮನೆ ಬಾಗಿಲಿಗೆ ರಿಜಿಸ್ಟರ್ಡ್ ಪೋಸ್ಟ್ ಮೂಲಕ! ಅದರೊಳಗೆ ನನ್ನ ವಿದಾರ್ಥಿ ವೇತನವನ್ನು ತಡೆಹಿಡಿಯಲು ಕಾರಣಗಳನ್ನು ಕೇಳಿರುವುದರ ಪತ್ರವಲ್ಲದೇ ವಿದ್ಯಾರ್ಥಿ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು HRD ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಖಡಕ್ ಆಗಿ ಬರೆಯಲಾದ ಪತ್ರ ಕೂಡಾ ಲಗತ್ತಾಗಿತ್ತು. ನನಗೆ ಅವರು ಈ ವಿವರಗಳನ್ನು ಕಳುಹಿಸುವ ಅಗತ್ಯವಿರಲಿಲ್ಲ್ದ. ಅದಾದ ಒಂದು ತಿಂಗಳ ಒಳಗೇ ನನಗೆ ನನ್ನ ವಿದ್ಯಾರ್ಥಿವೇತನದ ಚೆಕ್ ಕೂಡ ಬಂದಿತು. ಅವರ ತಾಯಿಯ ಹೆಸರೂ ನನ್ನದೇ ಆಗಿದ್ದುದೂ ಒಂದು ಯೋಗಾ ಯೋಗವೇ ಸರಿ! ನಮ್ಮವರೇ ನನಗೆ ಕಾಲೆಳೆದಿದ್ದಾರೆ ಇದರಿಂದ, ಆನಂತರ ಕೇಂದ್ರ ಸರ್ಕಾರದಿಂದ ದೊರೆತ ಇನ್ನೊಂದು ವಿದ್ಯಾರ್ಥಿವೇತನದಲ್ಲಿ ೪ ವರುಷಗಳ ಫೆಲೋಷಿಪ್ ಗೆ ಖೋತಾ ಆಗಿದೆ. ಆದರೆ ಕುಟಿಲತೆಯಿಂದ ನನ್ನ ಫೆಲೋಷಿಪ್ ನ್ನು ಕಿತ್ತುಕೊಂಡರೂ ಅಧ್ಯಯನ ಮುಂದುವರೆಸಿ ಪುಸ್ತಕ ಪ್ರಕಟಿಸಿದ್ದೇನೆ. ನನಗೆ ಇದರ ಬಗ್ಗೆ ಕಹಿಯೇನೂ ಇಲ್ಲ. ಎಲ್ಲ ರೀತಿಯ ಜನರೂ ಇರುತ್ತಾರೆ. ಇಂತಹ ಸಂದರ್ಭದಲ್ಲಿ, ಅಂದು ಅನಂತ್ ಕುಮಾರ್ ಅವರು ತಮ್ಮ ಕಾರ್ಯ ಬಾಹುಳ್ಯದಲ್ಲಿಯೂ ನನಗೆ ಸಹಾಯವೆಸಗಿದ್ದು ಬಹಳ ಮಹತ್ವದ ಸಂಗತಿ ಎನಿಸುತ್ತದೆ. ಅದನ್ನು ಹೇಗೆ ಮರೆಯಲಿ? ಜಗತ್ತು ಅಷ್ಟು ಕೆಟ್ಟಿಲ್ಲ, ಎಂದು ಬದುಕನ್ನು ಸಹನೀಯವಾಗಿಸಲು ಇಂತಹವರ ನಡವಳಿಕೆಗಳೇ ಕಾರಣ. ಅನಂತ್ ಕುಮಾರ್ ಅವರೇ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ 12/11/18 ಹರಕಲು ಗಂಡಸರು ಇವನು ಕೆಳಗೆ ಕೊತ್ತಂಬರಿ ಸೊಪ್ಪು ತರೋಕೋ ಇಲ್ಲ ಕಟಿಂಗ್ ಹೋಗೋಕೋ ಒಳ್ಳೆ ದೊರೆಮಗನ ತರಹ ಇಸ್ತ್ರಿ ಹಾಕಿದ ಬಟ್ಟೆ ಹಾಕ್ಕೊಂಡು ಹೋಗ್ತಾನೆ. ಅದೇ ಯೂನಿವರ್ಸಿಟಿಗೆ ಹೋಗೋವಾಗ ದರವೇಸಿ ಪ್ಯಾಂಟು, ಗೂಬೆ ಷರಟು ಹಾಕ್ಕೊಂಡುಬಿಡ್ತಾನೆ. (ಮುಖ್ಯ ಅತಿಥಿಯಾಗಿ ಯಾವುದಾದರೂ ಕಾರ್ಯಕ್ರಮಕ್ಕೆ ಹೋಗೋವಾಗಲೂ ಹೀಗೆ). ಈ ವಿಷಯಕ್ಕಾಗಿ ನಮ್ಮನೇಲಿ warಓ warಉ. ನೀನು ಈ ರೀತಿ ಜೋಬದ್ರ, ಯಾಯಾವಾರನ ತರಹ ಬಂದ್ರೆ ನಾನು ನಿನ್ನ ಜೊತೆ ಬರೋಲ್ಲ....ಅಂತಾ ನಾನು ಹೋ... ನಿನಗೆ ನನ್ನನ್ನು ಗಂಡ ಅಂತಾ ಹೇಳ್ಕೋಳ್ಳೋಕೆ ಅಷ್ಟು ಅವಮಾನ ಆದ್ರೆ ನಾನು ನಿನ್ನ ಜೊತೆ ಬರೋಲ್ಲ ಆಯ್ತಾ ..... ಹೇಳ್ಕೋಳ್ಳೋದು ಏನು ಇಡೀ ಮುಂಬಯಿ ಜಗತ್ತಿಗೆ ಗೊತ್ತಿದೆಯಲ್ಲಾ? ನಾವು ಗಂಡ ಹೆಂಡತಿ ಅಂತ? ಆಕಾಶ ಪಾತಾಳ ಹೋರಾಡಿ ಮದ್ವೆ ಮಾಡ್ಕೊಂಡಿದ್ದು ಇದಕ್ಕೇನಾ? ಮೂವ್ವತ್ತೈದು ವರುಷದಮೇಲೆ ಈ ಮಾತಾ? ..... "ನಾನೇನು ಹರಕಲು? ನೋಡು ಆ ಚೀಫ್ ಕಮೀಷನರ್ ಆಗಿದ್ದವರು, ಪ್ರಖ್ಯಾತ ಕತೆಗಾರ ಆ ಸತ್ಯನಾರಾಯಣ ಅವರೇ 'ಹರಕಲು ಬನಿಯನ್' (ಪ್ರಬಂಧ) ಹಾಕ್ಕೋತಾರಂತೆ? ಇನ್ನು ನಾನು ಬಡವಾ. ಮೇಷ್ಟ್ರು. ಬಿಡೇ..ಯಾರು ಏನೂ ತಿಳ್ಕೋಳ್ಳಲ್ಲಾ. ಅದೂ ಅಲ್ಲದೇ ನಿಮ್ಮಣ್ಣ ಹಾಕ್ಕೋಳಲ್ವಾ? ನಿನ್ನ ತಮ್ಮ ಹಾಕ್ಕೋಳಲ್ವಾ? ನಿನ್ನ ಅವ್ರು ಹಾಕ್ಕಾಳೋಲ್ವಾ? ಇವರು ಹಾಕೋಳಲ್ವಾ?.....ಹರಕಲು ಬನಿಯನ್ನೂ..." ಶುರು. K.S ಅವರ 'ಹರಕಲು ಬನಿಯನ್' ಓದುತ್ತಾ ಜಗದೀಶ ಕೊಪ್ಪ ಎಷ್ಟು inspire ಆಗಿಬಿಟ್ಟರೂಂದ್ರೆ ಹರಕಲು ಬನಿಯನ್ ಜೊತೆಗೆ ಹರಕಲು ಚಡ್ಡೀನೂ ಸೇರಿಸಿಬಿಟ್ರು. ಅವರ ಮನೇಲೂ ಹೀಗೇ ಗಂಡ ಹೆಂಡತಿ ನಡುವೆ warಓ war ಅಂತೆ ಅಂತೂ ಎಲ್ಲಾ ಗಂಡಸರೂ ಹರಕಲೇ ಬಿಡು...... .....14/11/18 ಸೀರೆಯ ಮಾಯೆ ಸೊಸೆಗೆ ಸೀಮಂತ ಮಾಡಬೇಕು. ಆಗ ಗಂಡನ ಮನೆಯ ಸಾಂಪ್ರದಾಯಕ ೯ ಗಜದ ಸೀರೆ ಉಡಿಸಬೇಕು. ನನಗೆ ಬರೋಲ್ಲ. ಆದ್ದರಿಂದ ಯೂಟ್ಯೂಬ್ ನಲ್ಲಿ ಸೀರೆ ಉಡಿಸುವ ರೀತಿಯನ್ನು ನೋಡಿದೆ!!!!! ಅಬ್ಬಬ್ಬಾ. ಸುತ್ತಿ ಸುಳಿದು, ಸುಳಿದೂಸುತ್ತಿ ಬಿಗಿಯಾಗಿ ಕಚ್ಚೆ ಬಿಗಿದು! ಸೀರೆಯೇನೋ ದೊಡ್ಡದೇ. ಆದರೆ ಅದರೊಳಗಿನ ನಡಿಗೆ ಸ್ವಲ್ಪ ಜೋರಾದರೂ ಮುಗ್ಗರಿಸಿ ಬೀಳುವುದೇ! ಕಾಲಿಗೆ ತೊಡರುವಂತೆ ಉಡಿಸಿ, ಕಾಲುಗಳು ಸಮ ಸಮ ಚಲಿಸಬೇಕು! ಇನ್ನು ಹಾರುವುದು, ನೆಗೆಯುವುದಕ್ಕುಂಟೇ? ಭಲಾ ಭಲಾ ಪಿತೃಪ್ರಧಾನತೆಯ ಉಪಾಯವೇ! 16/11/18 Spirituality ಎಂದರೆ ದೇವರ ಕುರಿತು ಮಾತನಾಡುವುದಲ್ಲ. ಅದೆಂದರೆ ಎಲ್ಲವನ್ನೂ ಒಳಗೊಳ್ಳುವುದು ಎಂದು ಸದ್ಗುರು ಹೇಳಿದರು. ಎಲ್ಲವನ್ನೂ ಒಳಗೊಂಡು ಹಾಡುವ ಟಿ.ಎಂ. ಕೃಷ್ಣನ ಸಂಗೀತದ ರೆಕ್ಕೆಗಳನ್ನು ಕತ್ತರಿಸಲು ಯತ್ನಿಸಿದರು. ಪ್ರಯೋಗಶಾಲೆಯಲ್ಲಿ ಕೊಚ್ಚಿ, ಕತ್ತರಿಸಿ ಹೆಸರಿಡುವ ಭೇದವಾದಿಗಳ ವ್ಯವಸ್ಥೆಗೆ ಒಳಗೊಳ್ಳುವುದೆಂದರೆ 'ಒಳಗ್ ಹಾಕುವುದು' ಅಷ್ಟೇ....... 23/11/18 ನಮ್ಮ ಬಾಲ್ಕನಿಯಲ್ಲಿ ಒಂದು ಬಳ್ಳಿ ಅದರಲ್ಲಿ ಈಗ ಕೆಲವು ಕಾಯಿಗಳು ಬಿಡುತ್ತಿವೆ. "ಅದೇನದು ಕಾಯಿ ಬಿಟ್ಟಿದೆಯಲ್ಲಾ?" -ಗೊತ್ತಿಲ್ಲ. ಮಂಗಳೂರು ಸೌತೇಕಾಯಿ ತರಹ ಕಾಣಿಸುತ್ತೆ ಕಲ್ಲಂಗಡಿನೂ ಇರಬಹುದೇನೋ? ನನಗೇನು ಗೊತ್ತು? "ಬೀಜ ಹಾಕಿದವಳು ನೀನಲ್ಲವಾ? ಏನು ಬಿತ್ತಿದೆ?" ಬೀಜ ನಾನೇನು ಹಾಕಿಲ್ಲ ಗಾಳಿಗೆ ಹಾರ್ಕೊಂಡು ಬಂದು ಬಿದ್ದಿರಬಹುದು. ಇಲ್ಲ ಯಾವುದೋ ಹಕ್ಕಿ ತಂದು ಹಾಕಿರಬಹುದು........ ಮನುಷ್ಯ ಸೃಷ್ಟಿಯನ್ನು ಬಿಟ್ಟರೆ ಒಟ್ಟು ನಿಸರ್ಗ ವ್ಯವಸ್ಥೆಯಲ್ಲಿ ಬೀಜದ ಪ್ರಶ್ನೆಯೇ ಬರುವುದಿಲ್ಲ. ಏನಿದ್ದರೂ ಬೆಳೆ ಮತ್ತು ಫಲವಷ್ಟೇ ಮುಖ್ಯವಾದುದು. ಹಾಗೆ ನೋಡಿದರೆ ಬೀಜ ಭೌತಿಕವಾಗಿ ಅದೃಶ್ಯವೇ ನಗಣ್ಯವೇ! ಪ್ರೇಮ್ ಚಂದ ಅವರ 'ಮಗು' ಎಂಬ ಕಥೆಯಲ್ಲಿ ಗಂಗು ಎಂಬ ಹುಡುಗ, ಓಡಿಹೋದ ತನ್ನ ಹೆಂಡತಿ ಮಗುವಿನೊಂದಿಗೆ ಮರಳಿದಾಗ ಸಂತೋಷದಿಂದ ಸ್ವೀಕರಿಸುತ್ತಾನೆ. (ಅವಳಿಗೆ ಮೂರನೆಯ ಮದುವೆ ಇವನಿಗೆ ಮೊದಲನೆಯದು. ಯಾರಿಗೋ ಬಸಿರಾದ ಕಾರಣ ಕಾಣೆಯಾಗಿರುತ್ತಾಳೆ) ನಮ್ಮ ಮಾಸ್ತಿಯವರ 'ವೆಂಕಟಿಗನ ಹೆಂಡತಿಯ' ಕಥೆ ನೆನಪಾಗುತ್ತದೆ. ಆಗ ನಿರೂಪಕ ಇದಕ್ಕೆ ವಿರೋಧಿಸುವಾಗ ಗಂಗು ಹೇಳುತ್ತಾನೆ "ಬೆಳೆಯಿಂದ ತುಂಬಿದ ಹೊಲವನ್ನು ಯಾರು ತಾನೇ ನಿರಾಕರಿಸುತ್ತಾರೆ?" 24/11/18 ನೋಡೀ ಸ್ವಾಮಿ ನಾವಿರೋದೆ ಹೀಗೆ...... “ನೀಂಗ್ ತೆಂಕಲೆಯಾ, ವಡಗಲೆಯಾ?” ಪುರೋಹಿತರು ನಾಮದ ಕಡ್ಡಿಯನ್ನು ಕೈಯಲ್ಲಿ ಹಿಡಿದು ಕೇಳಿದರು. ನನಗೆ ಒಂದುಕ್ಷಣ ಗೊಂದಲವಾಯಿತು. ಯಾಕೆಂದರೆ ನಾನು ಈ ಪಂಗಡದಲ್ಲಿ ಹುಟ್ಟಿರಲಿಲ್ಲ. ಹುಟ್ಟಿದ್ದು ಇವನು. ಪಕ್ಕದಲ್ಲೇ ಕೂತಿದ್ದ, ಇದನ್ನೇನಾದರೂ ಇವನು ಕೇಳಿಸಿಕೊಂಡರೆ ಬಾಂಬ್ ಸಿಡಿಯುವುದು ಖಂಡಿತ ಎಂದು ಅಂದುಕೊಳ್ಳುವಷ್ಟರಲ್ಲೇ “ನಾಮಕ್ಕೆ ಪೀಠ ಇಡಬೇಕೋ ಇಲ್ಲವೋ ಅದನ್ನಾದರೂ ಹೇಳಮ್ಮಾ?” ಅಸಹನೆಯಿಂದ ಪುರೋಹಿತರು ಕೇಳಿದರು. ಹ್ಞಾಂ..ಹ್ಞಾಂ ಪೀಠ ಇದೆ ಎಂದು ಹೇಳಿಬಿಟ್ಟೆ. ಆಮೇಲೆ ನಾದಿನಿಗೆ ಫೋನ್ ಮಾಡಿ ನಾವು ‘ಪೀಠಸ್ಥರು’ ಎಂಬುದನ್ನು ಕೇಳಿ ಖಚಿತ ಪಡಿಸಿಕೊಂಡೆ. ನಿಮ್ಮ ಕುಲದೇವರು ಯಾರು? ಗಾಬರಿಯಿಂದ ತಕ್ಷಣ ‘ತಿರುಪತಿ ವೆಂಕಟರಮಣ’ ಎಂದು ಹೇಳಿಬಿಟ್ಟೆ. ಗೋತ್ರ ಕೇಳಿದಾಗಲೂ ಉತ್ತರಿಸಿದೆ ಮೂಢನಂತೆ ಪಕ್ಕದಲ್ಲೇ ಕೂತಿದ್ದ ಇವನನ್ನು ಪುರೋಹಿರು ವಿಚಿತ್ರ ಪ್ರಾಣಿ ಎನ್ನುವಂತೆ ನೋಡಿದರು. ‘ಇವರಿಗೆ ಸ್ವಲ್ಪ ಕಿವಿ ಮಂದ’ ಎಂದು ನಾನೇ ಸಮಜಾಯಿಷಿ ಕೊಟ್ಟೆ. ಅದು ನಿಜವೂ ಹೌದು. ಸದ್ಯ ನನ್ನ ಪುಣ್ಯ, ಇವನೇನಾದರೂ ಎಲ್ಲವನ್ನೂ ಕೇಳಿಸಿಕೊಂಡಿದ್ದರೆ 'ಏನಾದರೂ ಮಾಡಿಕೋ ನಾನು ಮೇಲಿರತೀನಿ ಊಟಕ್ಕೆ ಹಾಕಿದಾಗ ಹೇಳು ಬರ್ತೀನಿ' ಎಂದು ಒಂದು ಪುಸ್ತಕ ಹಿಡಿದು ಸಭಾಗೃಹದ ಒಂದು ಮೂಲೆ ಸೇರಿಬಿಡುತ್ತಿದ್ದ. ನಾವೇ ಅತಿಥೇಯರು!! ಸೊಸೆಯ ಗರ್ಭಸಂಸ್ಕಾರ ನಡೆಯುತ್ತಿದೆ! ಬಂದವರಿಗೆ ಮನೆಯ ಯಜಮಾನ ಎಲ್ಲಿ ಎಂದು ಕೇಳಿದರೆ ಏನು ಹೇಳುವುದು? ಅಲ್ಲದೆ ಹೋಮದ ವಿಧಿಯ ಪ್ರತಿಯೊಂದು ಘಟ್ಟದಲ್ಲೂ ಪುರೋಹಿತರು 'ಅಪ್ಪ ಎಂಗೇ, ಅಪ್ಪ ಎಂಗೇ?' ಎಂದು ಮಗನನ್ನು ಕೇಳುತ್ತಿದ್ದರು. ಮಗ ‘ತಿರುಮಣಿ ’ (ನಾಮ) ಹಾಕಿಕೊಂಡು ಹೋಮಕ್ಕೆ ತುಪ್ಪ ಸುರಿಯುತ್ತಿದ್ದ. ಸಂಬಂಧವೇ ಇಲ್ಲದಂತೆ ಕುಳಿತ ಅಪ್ಪ. ನನ್ನ ಮೇಲೆ ಮಗನ ಕೆಂಗಣ್ಣು. ನಮ್ಮ ರಿಯಾನಾ ಮತ್ತು ನಮ್ಮ ಹೌಸಿಂಗ್ ಸೊಸೈಟಿಯಲ್ಲಿ ಕಸ ತೆಗೆಯುವ ಜೈಭೀಮ್ ಜಾತಿಗೆ ಸೇರಿದ ಮಾದೇವಿ ಇವರುಗಳೇ ಮೊದಲು ಸೊಸೆಗೆ ಉಡಿ ತುಂಬಬೇಕು ಎಂಬ ಕಂಡೀಷನ್ ಜೊತೆಗೆ ಈ ಕಾರ್ಯಕ್ರಮ ಮಾಡುವುದಕ್ಕೆ ಒಪ್ಪಿಗೆ ನೀಡಿದ್ದ. ಅವರುಗಳು ತಡವಾಗಿ ಬಂದಿದ್ದರಿಂದ ಇವನ ಆಸೆ ನೆರವೇರದಿದ್ದರೂ ಕೊನೆಗಾದರೂ ಬಂದು ವೇದಿಕೆ ಹತ್ತಿ ಅಕ್ಷತೆಕಾಳು ಸೊಸೆಯ ತಲೆಯ ಮೇಲೆ ಹಾಕಿದರಲ್ಲಾ ಅದೊಂದೇ ಸಂತೋಷ. ಬೆಂಗಾಲಿಯ ಡೋಲಾ ಸಹಾ, ಒರಿಸ್ಸಾದ ಪಾಣಿಗ್ರಾಹಿ, ಆಂಧ್ರದ ಪದ್ಮಾವತಿ, ಕೇರಳದ ರಮಾ, ಮರಾಠಿಯ ಛಾಯಾ ತಾಂಬೆ, ಲತಾ ಪಾಂಚಾಲ್, ಸರಸ್ವತಿ ಐಯ್ಯರ್, ಲಲಿತಾ ಗೌಡ ಕನ್ನಡದವರೇ ಆದ ಇಂದಿರಾ ಸುಮಾ, ದಾಕ್ಷಾಯಣಿ ಎಲ್ಲ ಜೊತೆಗೂಡಿದರು. ಜತ್ಯಾತೀತವಾಗಿ ಬದುಕಬೇಕೆಂದು ಪ್ರಯತ್ನಮಾಡುವವರು, ಸಾಂಪ್ರದಾಯಕವಾದ ಯಾವ ಆಚರಣೆಯನ್ನೂ ಮಾಡಬಾರದು. ಚಿಕ್ಕವರಿದ್ದಾಗಿನಿಂದಲೂ ಮಕ್ಕಳಿಗೆ ಇವನು ಹೇಳಿಕೊಟ್ಟುದೇ 'ನಾವು ಶೂದ್ರರು' ಎಂದು. ನನ್ನ ಚಿಕ್ಕ ಮಗ ಮೂರೋ ನಾಲ್ಕೋ ವರುಷವದವನಿದ್ದಾಗ ಯಾರೋ ಜಾತಿ ಕೇಳಿದಾಗ “ಹಮ್ ಶೂದ್ರ ಹೈಂ” ಎಂದಿದ್ದ. ಜನಗಣತಿ ಮಾಹಿತಿ ಸಂಗ್ರಹಿಸಲೆಂದು ಸಂಬಂಧಪಟ್ಟ ಕಾರ್ಯಕರ್ತನೊಬ್ಬ ಮನೆಗೆ ಬಂದು 'ಆಪ್ ಕಾ ಜಾತ್ ಕೌನ್ಸಾ?' ಎಂದು ಕೇಳಿದಾಗ 'ಹಮ್ ಇನ್ಸಾನ್ ಹೈಂ' ಎಂದು ಒರಟಾಗಿ ಉತ್ತರಿಸಿದ್ದ. ಕಕಮಕವಾದ ಅವನು 'ಅದು ಸರಿ ಆದರೆ ಒಂದು ಜಾತಿ ಇgಲೇ ಬೇಕಲ್ಲ?' ಇಲ್ಲದಿದ್ದರೆ 'ನಾಜಾಯಿಸ್'(ಕಾನೂನು ಬಾಹಿರ) ಆಗಿಬಿಡುತ್ತೆ” 'ಇಲ್ಲ' ಇವನದು ಒಂದೇ ಹಟ –ಇವನು ‘ಇನ್ಸಾನ್’ ಬಿಡಲಾರ ಅವನು ‘ಜಾತಿ’ ಬಿಡಲಾರ. ಕೊನೆಗೆ ಜಗ್ಗಾಡಿ ಸೋತ ಅವನು ‘ಆಪ್ ಕಾ ಭಾಷಾ?’ ಎಂದವನೇ ಕೊನೆಗೆ ಸಿಕ್ಕಿದ ಉತ್ತರದಿಂದ ಜಾತಿಯ ಕಾಲಂನಲ್ಲಿ 'ಕಾನಡಿ' ಎಂದು ಬರೆದುಕೊಂಡು ಹೋಗಿದ್ದ. ಶೂದ್ರ ಕೂಡ ಒಂದು ಜಾತಿ ಸೂಚಕವೇ ಯಾರಾದರೂ ಜಾತಿ ಕೇಳಿದರೆ 'ಕಾನಡಿ, ಕನ್ನಡ್' ಎಂದು ಹೇಳಿ ಮಕ್ಕಳೇ' ಎಂದು ನನ್ನ ಮಕ್ಕಳಿಗೆ ತಿಳಿ ಹೇಳಿದ್ದೆ. 'ಅವರು ಹೇಳಿಬಿಟ್ಟರೆ ಏನು? ನಿನ್ನ ಹೆಸರಲ್ಲಿ, ನಿನ್ನ ನಾಲಗೆಯಲ್ಲಿ ಬ್ರಾಹ್ಮಣರ ಬೇಳೆ ಹುಳಿ ವಾಸನೆ ಬರುತ್ತದಲ್ಲಾ?' ಹಂಗಿಸಿದ. "ಅದರಲ್ಲಿ ನನ್ನ ತಪ್ಪೇನು? ಹೆಸರನ್ನು ಬೇಕಾದರೆ ಕತ್ತರಿಸಿಕೊಳ್ಳಬಲ್ಲೆ, ಆದರೆ ನಾಲಗೆಯನ್ನು ಕತ್ತರಿಸಿಕೊಳ್ಳಲೇ?' ಅಲ್ಲದೇ ಕನ್ನಡವೆಂದರೆ ‘ಪಲವುಂ ನಾಲಗೆಯುಳ್ಳ’ ಆದಿಶೇಷನಲ್ಲವೇ?" ನಾನು ತಿರುಗೇಟು ಕೊಟ್ಟೆ. 'ನಾಲಗೆಯನ್ನು ಕತ್ತರಿಸಿಕೊಳ್ಳಲು ಸಾದ್ಯವಿಲ್ಲ ನಿಜ ಆದರೆ ಆ ನಾಲಗೆಗೆ ಅಂಟಿಕೊಂಡಿರುವ ಶ್ರೇಷ್ಠತೆಯ ಭ್ರಮೆಯನ್ನಾದರೂ ಕತ್ತರಿಸಿಕೊಳ್ಳಬಹುದಲ್ಲಾ?' ಅವನದು ಮರು ಸವಾಲು.. ಈ ಭ್ರಮೆ ಅಡಿಗರು ಹೇಳುವ ಹಾಗೆ 'ಅಂತರಾಳಗಳಲ್ಲಿ ನಿಂತ ನೀರುಗಳಲ್ಲಿ ಕಂತಿ ಕೈಬಡಿವ ಬೀಜಾಣು ಜಾಲ' ಈ ಜಾಲದಿಂದ ತಪ್ಪಸಿಕೊಳ್ಳುವುದು ಹೇಗೆ? ಈ ಕರ್ಮದಪಾಂಗನ್ನು ಕಳೆಯುವುದು ಹೇಗೆ? ಅದರ ಪ್ರಯತ್ನದಲ್ಲಿ ನಾನು ವಿಪಶ್ಶನದತ್ತ ತಿರುಗಿದರೆ... ಇವನು ತನ್ನ ನಾಲಗೆಯನ್ನು ಬೇಕೆಂದೇ ಗ್ರಾಮೀಣ ಘಮಲಿಗೆ ತಿರುಗಿಸಿಕೊಂಡ. ಮದುವೆಯಾದ ಹೊಸತರಲ್ಲಿ ನನ್ನ ತವರು ಮನೆಯ ಕಡೆಯವರು ಯಾರಾದರೂ ಬಂದಾಗ ಆ ಘಮಲನ್ನು ಇವನು ಹೊರಸೂಸುವಾಗ ನನಗೆ ಮುಜಗರವಾಗುತ್ತಿತ್ತು. ಅಮ್ಮ ಒಂದು ಸಲ 'ಯಾಕೆ ನಿನ್ನ ಗಂಡ ಹಾಗೆ ಮಾತಾಡ್ತಾರೆ?' ಎಂದಿದ್ದರು. 'ನಮ್ಮ ಮನೆಯವರ ಹತ್ತಿರವಾದರೂ ಸರಿಯಾಗಿ ಮಾತಾಡು ಪ್ಲೀಸ್' ಎಂದು ಗುಟ್ಟಾಗಿ ಬೇಡಿಕೊಳ್ಳುತ್ತಿದ್ದೆ. 'ಸರಿ ಅಂದ್ರೆ ಏನಮ್ಮ? ಭಾಷೆನಲ್ಲಿ ಶುದ್ಧ ಅಶುದ್ಧ ಇಲ್ಲವೇ ಇಲ್ಲ. ನಾನು ಮಾತಾಡೋದೆ ಇಂಗೆ' ನೀನು ಏನು ಬೇಕಾದರೂ ಮಾಡ್ಕೋ ಅನ್ನೋ ವರಸೆ. "ಅಪ್ಪ ತುಂಬಾ ಜಿದ್ದಿ" ಮಗ ಬಾಣಬಿಟ್ಟಿದ್ದ.. ಅತ್ಯಂತ ಸೌಮ್ಯ ವ್ಯಕ್ತಿತ್ವದೊಳಗಿನ ಇವನ ಹಟಮಾರಿತನ ಮೊದಲಿಗೆ ಬಯಲಾದದ್ದು ನಮ್ಮ ಮದುವೆಯ ಸಂದರ್ಭದಲ್ಲಿ. 'ಆ ಹೋಮ, ಗೀಮ ಕಾಲ್ತೊಳೆಯೋದು ಏನೂ ಬೇಡ. ಕುರ್ಚಿಮೇಲೆ ಕೂತು ಹಾರ ಬದಲಾಯಿಸೋಳ್ಳೋದು ಅಷ್ಟೇ' ಅದನ್ನು ನಿಮ್ಮಣ್ಣಂಗೆ ಹೇಳಿಬಿಡು. 'ಅವರು ಮದುವೆಗೆ ಒಪ್ಪಕೊಂಡಿರೋದೇ ಹೆಚ್ಚು ಇನ್ನು ಇದನ್ನೂ ಹೇಳಿದರೆ..ಕಟ್ಟಾ ಸಂಪ್ರದಾಯವಾದಿಗಳಾದ ಅವರಿಗೆ ಬೇಸರವಾಗುವುದಿಲ್ಲವೇ?. ಮೊದಲೇ ಬೇಸರವಾಗಿರುವ ಅವರಿಗೆ ಇದರಿಂದ ಸ್ವಲ್ಪವಾದರೂ ಸಂತೋಷ ಆಗುವುದಾದರೆ ಆಗಲಿ...'4/12/18 ನಾನು ಇಷ್ಟಪಡುವ ಹುಡುಗಿಯನ್ನು ಮದುವೆಯಾಗುವ ಭಾಗ್ಯ ದೊರೆತಿದ್ದರೆ ಎಂಟುದಿನಗಳ ಕಾಲ ಬೇಕಾದರೂ ಕೂತು ಮದುವೆ ಮಾಡಿಕೊಳ್ಳುತ್ತಿದ್ದೆ ಎಂದು ಒಮ್ಮ ನಮ್ಮ ಮನೆಗೆ ಬಂದಿದ್ದ ಗೆಳೆಯ ಶಿವರಾಮ್ ಪಡಿಕ್ಕಲ್ ಹೇಳಿದ್ದರು. ಹೇಗಾದರೂ ಮಾಡಿ ಸಾಂಪ್ರದಾಯಕ ಮದುವೆಗೆ ಒಪ್ಪಿಸು ಎಂದು ಅಣ್ಣ, ಅದಕ್ಕೆ ವಿರುದ್ಧ ಪಟ್ಟು ಹಿಡಿದ ಇವನು. ಕೊನೆಗೆ 'ನನಗೆ ಅಣ್ಣನೂ ಬೇಡ ನೀನೂ ಬೇಡ. ನನಗೆ ಮದುವೆಯೇ ಬೇಡ. ನಾನು ಅಮ್ಮನ ಮನೆಯನ್ನೂ ತೊರೆದು ಎಲ್ಲಾದರೂ ಹಾಸ್ಟೆಲ್ ನಲ್ಲಿರುತ್ತೇನೆ' ಎಂದು ಧಮ್ಕಿ ಹಾಕಿದೆ. ಮೆತ್ತಗಾದ, ಒಪ್ಪಿಕೊಂಡ. ಎರಡೂ ಕಡೆ ಪುರೋಹಿತರು ಆದೇಶ ಕೊಡುತ್ತಿದ್ದಾರೆ. ಇವನು ಸೊಟ್ಟಗೆ ಕೂತು, ಅಸಹನೆಯಿಂದ ಬೇಕಾಬಿಟ್ಟಿಯಾಗಿ ಹೋಮಕ್ಕೆ ಸಮಿಧೆಯನ್ನು ಎಸೆಯುತ್ತಿದ್ದ. ನಿಷ್ಠಾವಂತರಾದ ಪುರೋಹಿರಿಗೆ ನೋವಾಗಿರಬೇಕು. ಇವನ 'ನಿಷ್ಠೆ'ಯನ್ನು ಕಂಡ ಅವರಲ್ಲಿ ಒಬ್ಬರು ಮಂತ್ರ ಹಾರಿಸಿದರು. ಹೀಗೆ ಮಾಡಿದ್ದು ಇನ್ನೊಬ್ಬರಿಗೆ ಕೆಡುಕೆನಿಸಿತು. 'ಮಂತ್ರ ಹಾರಿಸಿದರಲ್ಲಾ?' ಜಗಳಕ್ಕೆ ನಿಂತರು. ಇಬ್ಬರೂ ಕೈ ಕೈ ಮಿಲಾಯಿಸುವುದೊಂದು ಬಾಕಿ. ಅಣ್ಣ ಓಡಿ ಬಂದು ಕೈಮುಗಿದು ಬೇಡಿಕೊಂಡ. ಇವನು ಮಾತ್ರ ಅವರೊಳಗೆ ಜಗಳ ಹತ್ತಿಸಿ ತನಗೆ ಸಂಬಂಧವೇ ಇಲ್ಲದವನ ಹಾಗೆ ಕೂತಿದ್ದ. ಯಾವುದಾದರೂ ಪುಸ್ತಕ ಇದ್ದಿದ್ದಿರೆ ಈ ರಗಳೆಯೇ ಬೇಡವೆಂದು ಹಸೆಮಣೆಯೆ ಮೇಲೆಯೇ ಓದುತ್ತಾ ಕುಳಿತುಬಿಡುತ್ತಿದ್ದನೇನೋ... "ಜಾತ್ಯಾತೀತತೆ ಎನ್ನುವುದು ಮನೆಯ ಹೊರಗೆ ಇಲ್ಲದಿದ್ದರೆ ಅದನ್ನು ಮನೆಯೊಳಗೆ ಸಾಧಿಸುವುದು ಎಷ್ಟು ಕಷ್ಟ? ನಮ್ಮ ಹಾಗೆ ನಿಷ್ಠುರವಾಗಿ ಒಂದು ಪಕ್ಷ ಸಾಧಿಸಲು ಪ್ರಯತ್ನಿಸಿದರೆ ಆಗ ಮಕ್ಕಳು ಗೊಂದಲದಲ್ಲಿ ಬೀಳುತ್ತಾವೆ. ಅದಕ್ಕೇ ಇರಬೇಕು ಬೆಳೆದ ಮಕ್ಕಳು your feminism and appa's secularism is disgusting ಎಂದು ಈಗ ಉಲ್ಟಾ ಹೊಡೆದಿರೋದು" 'ಯಾವುದೇ ಆಗಲಿ ಮೊದಲು ಮನಸ್ಸಿನಲ್ಲಿ ಬರಬೇಕು ಆಗ ಅದು ಮನೆಯೊಳಗೆ ಬರುತ್ತದೆ. ಮನೆಯೊಳಗೆ ಬಂದದ್ದು ಹೊರಗೂ ಬರುತ್ತದೆ. ಮನಸ್ಸಿನೊಳಗೇ ಬರದಿದ್ದರೆ ಮಾತ್ರ ಕಷ್ಟ' ಇವನು ಪಟ್ಟು ಬಿಡಲಿಲ್ಲ. ಜಾತ್ಯಾತೀತವಾಗಿ ಬದುಕಬೇಕೆಂಬುದು ಒಂದು ಸಾಮೂಹಿಕ ಸಂಕಲ್ಪವಾಗಬೇಕು. ನಮ್ಮ ಪಾಡಿಗೆ ನಾವು ಬದುಕುತ್ತೇವೆ ಎಂಬುದು ಸುಳ್ಳು. ಸಂಬಂಧದೊಳಗೆ ನಾವು ಬದುಕಬೇಕಾಗಿರುವುದು ಅನಿವಾರ್ಯ. ಆಗ ಸಮಜಾಯಿಷಿ ಹೊಂದಾಣಿಕೆಯ ಅಗತ್ಯವಿದೆ. ಯಾರನ್ನಾದರೂ ಬಿಡಬಹುದು ಮಕ್ಕಳನ್ನು ಹೇಗೆ ಬಿಡುವುದು? 35 ವರುಷಗಳ ಹಿಂದೆ ಬೆಂಗಳೂರಿನಲ್ಲಿ ಸಾಂಪ್ರದಾಯಕವಾದ ನಮ್ಮ ಮದುವೆಯ ಆಚರಣೆಗೂ ಮುನ್ನ ತಂಜಾವೂರಿನ ಕೋರ್ಟವೊಂದರಲ್ಲಿ ಆದ ನಮ್ಮ ಮದುವೆಯ ನೋಂದಣಿಯ ಸಂದರ್ಭದಲ್ಲಿ ವಾಂಗ್ ಬೊಷಿ, (ಚೀನಾ), ಹಯತ್ ಪಾಷಾ (ಚೆನ್ನೈ) ಮಾರ್ಕ್ಸ್ (ತಂಜಾವೂರು) ರಾಜನಾಥ್ ಭಟ್ (ಕಾಶ್ಮೀರ), ಶರ್ಮಾ (ಅಸ್ಸಾಂ), ಕರಮ್ ಜೀತ್ ಸಿಂಗ್ (ಪಂಜಾಬ್) ಮುಂತಾದವರು ಉಪಸ್ಥಿತರಿದ್ದುದನ್ನು ನೆನಪಿಸಿದ. ಆ ಸವಿನೆನಪನ್ನು ನಾವು ಮರಾಠಿ ನೆಲದಮೇಲೆ ಆಗಾಗ ಕನ್ನಡದಲ್ಲಿ ಮೆಲಕು ಹಾಕುತ್ತಿರುತ್ತೇವೆ. 4/12/18 ನನ್ನ ನಿನ್ನೆಯ "ನೋಡಿ ಸ್ವಾಮಿ ನಾವಿರೋದೆ ಹೀಗೆ...." ಪೋಸ್ಟಿಗೆ ಅನೇಕ ಮಿಶ್ರ ಪ್ರತಿಕ್ರಿಯೆಗಳು ಬಂದವು. ಎಲ್ಲರಿಗೂ ಧನ್ಯವಾದಗಳು. ಕೆಲವರಿಗೆ ನನ್ನ ಪ್ರಗತಿಯ ಪರಿಕಲ್ಪನೆ ಓಬೀರಾಯನ ಕಾಲದ್ದು ಎನಿಸಿದ್ದಿರಬಹುದು. ಅದರಲ್ಲಿ ಏನೇನೂ ವಿಶೇಷವಿಲ್ಲ ಎಂದೂ ಎನಿಸಿದ್ದಿರಬಹುದು. ಕೆಲವರಿಗಂತೂ ನಾನು ಏನೂ ಮಾಡದೆ ಡಂಗುರ ಸಾರಿಕೊಂಡು ಬರುತ್ತಿದ್ದೇನೆ ಎಂದೂ ಎನಿಸಿರಬಹುದು. ಹೌದು ನಿಜ, ೨೧ ನೆಯ ಶತಮಾನದ ಪ್ರಗತಿಯ ಲೆಕ್ಕಕ್ಕೆ ನನ್ನದು ಸೊನ್ನೆಯೇ. ಆದರೆ ಕಟ್ಟಾ ಸಂಪ್ರದಾಯಸ್ಥರ ಮನೆಯಿಂದ ಬಂದ ನಾನು ಮನೆಯ ಎಲ್ಲಾ ನಿಷೇಧಗಳನ್ನು ಮುರಿದವರಲ್ಲಿ ಮೊದಲಿಗಳು. First Bad girl of our family. ಇದಕ್ಕೆ ಕಾರಣ ಬೆಂಗಳೂರು ವಿ.ವಿ. ಕನ್ನಡ ವಿಭಾಗದಲ್ಲಿ (೧೯೭೯-೮೧) ನನಗೆ ದೊರೆತ ಸಂಸ್ಕಾರ. ದ್ವಿತೀಯ ಎಂ.ಎ. ಮುಗಿಯುವ ಹೊತ್ತಿಗೆ ಒಂದೆರಡಾದರೂ ಅಂತರ್ಜಾತೀಯ ವಿವಾಹಗಳು ನಿಶ್ಚಯವಾಗಿರುತ್ತವೆ ಎಂದು ವಿಭಾಗದ ಅಂದಿನ ನಮ್ಮ ಗುರುಗಳು ತಮಾಷೆ ಮಾದುತ್ತಿದ್ದುದುಂಟು. ಪ್ರಗತಿಯ ಪರಿಕಲ್ಪನೆಯನ್ನು ಮೊತ್ತಮೊದಲಬಾರಿಗೆ ನನಗೆ ಪರಿಚಯಿಸಿದ ವಿಭಾಗವದು. ಬದುಕಿನ ದೃಷ್ಟಿಕೋನವನ್ನು ಬದಲಿಸಿದ ಗುರುಗಳು ಅಲ್ಲಿನವರು. ಬಂಡಾಯ ಆಗಷ್ಟೇ ವೇದಿಕೆಗೆ ಹತ್ತಿದ ಕಾಲವದು. ಆ ಸಮಯದಲ್ಲಿ ನಾನಂತೂ ಕಂಡ ಕಡೆಗೆ ಕಲ್ಲು ಹೊಡೆದಿದ್ದೇನೆ. ಆದರೆ ಈಗ ಅದರ ಆವೇಶವೆಲ್ಲ ಕಳೆದು ಮಾಗಿದ್ದೇನೆ ಎಂದು ನಾನು ತಿಳಿದುಕೊಂಡಿದ್ದೇನೆ. ಈ ವಿಷಯದಲ್ಲಿ ನನಗೆ "ನಮ್ಮ ದೇಶದಲ್ಲಿ ಎಲ್ಲಾ ಶತಮಾನಗಳೂ ಏಕ ಕಾಲಕ್ಕೆ ಜೀವಿಸುತ್ತಿರುತ್ತವೆ" ಎಂಬ ಅನಂತಮೂರ್ತಿಯವರ ಮಾತು ನೆನಪಾಗುತ್ತದೆ. 'ಗೃಹ ಮತ್ತು ಪ್ರಪಂಚ' ಎಂಬ ಪಾರ್ಥಾ ಚಟರ್ಜಿಯವರ ವಾದವೂ ಇದೇ ಆಗಿದೆ. ಹೊರ ಪ್ರಪಂಚದಲ್ಲಿ ೨೧ ನೆಯ ಶತಮಾನ ಧೌಡಾಯಿಸುತ್ತಿದ್ದರೆ ಮನೆಯ ಒಳಗೆ ಅನೇಕ ಶತಮಾನಗಳು ಆಮೆ ನಡಿಗೆಯಲ್ಲಿ ಚಲಿಸುತ್ತಿರುತ್ತವೆ. ಮನೆಯೊಳಗಿನ ಕಾಲ ಮತ್ತು ಹೊರ ಪ್ರಪಂಚದ ಕಾಲಕ್ಕೆ ತಾಳಮೇಳಗಳಿಲ್ಲವಾಗಿ ಅಪಘಾತ ನಿಶ್ಚಿತ. ಬದುಕೆಂಬ ಗಾಡಿಯ ಎರಡು ಗಾಲಿಗಳಿಗೆ ಬೇರೆ ಬೇರೆ ವೇಗ!!! ಎತ್ತು ಏರಿಗೆ ಎಮ್ಮೆ ನೀರಿಗೆ. ಮನೆಯೊಳಗಿನ ವೇಗಕ್ಕೆ ಸರಿಹೊಂದಿಸಿಕೊಂಡು ಹೊರಗಿನ ಪ್ರಪಂಚಕ್ಕೆ ತೆರೆದುಕೊಳ್ಳದೇ ಬದುಕುವವರಿಗೆ ಸುಖ. All Happy families are alike ಎಂದು ಟಾಲ್ಸಟಾಯ್ ಹೇಳುತ್ತಾನಲ್ಲಾ? ನನಗಿಂತ ನೂರು ವರುಷ ಹಿಂದೆ ಹುಟ್ಟಿದ ಪಂಡಿತಾ ರಮಾಬಾಯಿ ಈಗಲೂ ನನಗಿಂತ ನೂರು ವರುಷ ಮುಂದಿದ್ದಾರೆ. ಹನ್ನೆರಡನೆಯ ಶತಮಾನದಲ್ಲಿ ಅಕ್ಕ ತೋರಿದ ಧೈರ್ಯ ನನಗೆ ಇಂದೂ ತೋರಲು ಸಾಧ್ಯವಿಲ್ಲ. ಹೀಗಾಗಿ ಪ್ರಗತಿ ಎನ್ನುವುದು ಸಾಪೇಕ್ಷವಾದುದು. ಸಮಾಜವಾದ ಎಂದರೆ "ಒಬ್ಬರ ಮನೆಯಲ್ಲಿ ಮೈಸೂರು ಪಾಕ್ ಮಾಡಿದರೆ ಎಲ್ಲರ ಮನೆಯಲ್ಲೂ ಮಾಡುವುದು" ಎಂದು ನಾವು ಬಾಲ್ಯದಲ್ಲಿ ತಿಳಿದಿದ್ದೆವು. ಪ್ರಗತಿಯ ಪರಿಕಲ್ಪನೆಯನ್ನೂ ನಾವು ಹಾಗೇ ಗ್ರಹಿಸಿದರೆ ಆಗ ಅದು ಅಷ್ಟೇ ಹಾಸ್ಯಾಸ್ಪದ ಮತ್ತು ಬಾಲಿಶವಾಗುತ್ತದೆ. ಅದನ್ನು ಸಾರಾ ಸಗಟಾಗಿ ಸಾಮಾನ್ಯೀಕರಿಸಿ ಹೇಳಲು ಸಾಧ್ಯವಿಲ್ಲ. ಅಂತರ್ ಜಾತಿಯ ವಿವಾಹಗಳು ಬಹಳ ಸರ್ವೇ ಸಾಮಾನ್ಯ ಎಂದು ಕೆಲವರಿಗೆ ಅನ್ನಿಸಿದರೆ ಅದು ಅವರ ಕುಟುಂಬ ಅದರ ಸುತ್ತಮುತ್ತಲಿನ ಸತ್ಯವಷ್ಟೇ. ನನ್ನ ಸುತ್ತಲಿನ ನಾಲ್ಕಾರು ಕುಟುಂಬಗಳಲ್ಲಿ ಅಂತರ್ಜಾತಿ ವಿವಾಹಗಳು ನಡೆದಿವೆ ಎಂದ ಮಾತ್ರಕ್ಕೆ ಅದು ಇಡೀ ಇಂಡಿಯಾವನ್ನು ಪ್ರತಿನಿಧಿಸುವುದಿಲ್ಲ. ದಲಿತ ನೊಬ್ಬ ಮೇಲ್ಜಾತಿಯ ಹುಡುಗಿಯನ್ನು ಪ್ರೀತಿಸಿದ ಎನ್ನುವ ಕಾರಣಕ್ಕೆ ಈಗಲೂ ಕೊಲೆಗಳು ನಡೆಯುತ್ತಿವೆ. ಉತ್ತರ ಭಾರತದಲ್ಲಿ ಜಾಟ್ ಜನಾಂಗದವರು ದಲಿತರ ಮೇಲೆ ನಿರಂತರವಾಗಿ ಮಾಡುತ್ತಿರುವ ದಬ್ಬಾಳಿಕೆ ಜನಜನಿತ. 'ನಾವು ಹೆಣ್ಣು ಮಕ್ಕಳನ್ನು ನೌಕರಿಗೆ ಕಳಿಸುವುದಿಲ್ಲ' ಎಂದು ಪಕ್ಕದ ಮನೆಯ ಒರಿಯಾ ಹೆಂಗಸು ಹೇಳುತ್ತಾಳೆ- ಬೆಳಗಿನ ಏಳುಗಂಟೆಗೆಲ್ಲಾ ನೀಟಾಗಿ ಅಲಂಕರಿಸಿಕೊಂಡ ಹೆಣ್ಣುಮಕ್ಕಳು ಲೋಕಲ್ ಹಿಡಿಯಲು ಓಡುವ ವೇಗದ ಮುಂಬಯಿಯಲ್ಲಿ !! ಐಯರ್ ಜನಾಂಗಕ್ಕೆ ಸೇರಿದ ನನ್ನ ಪರಿಚಯಸ್ಥರೊಬ್ಬರು ತಮ್ಮ ಮಗಳನ್ನು ಮುಸ್ಲಿಂ ಯುವಕನೊಂದಿಗೆ ೨೦ ವರುಷಗಳಷ್ಟು ಹಿಂದೆಯೇ ಎಲ್ಲಾ ಸಂಬಂಧಿಕರನ್ನೂ ಸಿಂಗಾಪೂರಿಗೆ ಕರೆದುಕೊಂಡು ಹೋಗಿ ನಿಖಾ ಮಾಡಿಕೊಟ್ಟು ಬಂದಿದ್ದಾರೆ. ಇಂತಹ ವಿವಾಹಗಳು ೨೦ ವರುಷಗಳೇಕೆ? ೨೦೦ ವರುಷಗಳಷ್ಟು ಹಿಂದೆಯೂ ನಡೆದಿರುವ ಉದಾಹರಣೆಗಳಿವೆ. ಹೀಗಾಗಿ ಪ್ರಗತಿ, ಅಭಿವೃದ್ಧಿಯ ಪರಿಕಲ್ಪನೆ ಬಹಳ ಸಂಕೀರ್ಣವಾದುದು. ಇಷ್ಟು ಸಂಕೀರ್ಣವಾದುದನ್ನು ಸರಳೀಕರಿಸಿ they lived happily ever after ಎಂದು ಷರಾ ಬರೆಯುವುದು ಸರಿಯಲ್ಲ. ಬದಲಾವಣೆಗೆ ಹೊರಳಿಕೊಳ್ಳುವ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಸಂಕ್ರಮಣಾವಸ್ಥೆಯ ತಲ್ಲಣಗಳಿರುತ್ತವೆ. ಆದರೆ ಅವುಗಳ ಕಾಲಗಳು ಮಾತ್ರ ಬೇರೆ ಬೇರೆ ಯಾಗಿರುತ್ತವೆ. (ಸಂಕಲನ ಪತ್ರಿಕೆಯಲ್ಲಿ 'ನನ್ನ ಅಪ್ಪ' ಮಾಲಿಕೆಯಡಿ ಬರೆದ ಒಂದು ಲೇಖನದಲ್ಲಿ ನಾನು ಇಂತಹ ನನ್ನ ತಲ್ಲಣಗಳನ್ನು ಪ್ರಸ್ತಾಪಿಸಿದ್ದೇನೆ) 5/12/18 ಅಂತರಾಳಗಳಲ್ಲಿ ನಿಂತ ನೀರುಗಳಲ್ಲಿ ಕಂತಿ ಕೈ ಬಡಿವ ಬೀಜಾಣು ಜಾಲ ನನ್ನ ಬೀಗಿತ್ತಿ ನಲವತ್ತರ ಹರೆಯದಲ್ಲೇ ಉಡಾಳ ಗಂಡನನ್ನು ಕಳೆದುಕೊಂಡ ಚೆಲುವಾದ ಹೆಂಗಸು. ಬಹಳ ಕಷ್ಟ ಪಟ್ಟು ಮೇಲೆ ಬಂದವರು. ಮಗಳಿಗೆಂದು ಬೆಂಗಳೂರಿನಲ್ಲಿ ಬಹಳ ತೂಕದ ಚಿನ್ನದ ಬಳೆ ಮಾಡಿಸಿ ತಂದಿದ್ದರು. ಮಗಳಿಗೆ ಬಳೆ ತೊಡಿಸುವ ಕಾರ್ಯಕ್ರಮದಲ್ಲಿ ಅವರಿಗೆ ಅದೇನು ಸಂಭ್ರಮ! "ನೀವೇ ನಿಮ್ಮ ಮಗಳಿಗೆ ಬಳೆ ತೊಡಿಸಬೇಕೆಂದು" ನಾನು ಹೇಳಿದೆ. ಅವರು ವೇದಿಕೆ ಹತ್ತಿ ಗಾಜಿನ ಬಳೆಗಳಿಗೆ ಪೂಜೆ ಮಾಡುವಾಗ ಒಂದೇ ಒಂದು ಕ್ಷಣ ನನ್ನೊಳಗೆ ಯಾವುದೋ ಅಸ್ವಸ್ಥ ಭಾವ, ಅಸಹನೆಯ ಎಳೆ ಹಾದು ಹೋಯಿತಲ್ಲಾ??? ಏನದು? ಯಾವ ಜನ್ಮದು ಶತ್ರು ನನ್ನ ಕಾಲೆಳೆಯಿತು ಹೀಗೆ? ಮನೆಗೆ ಬಂದು "I am Sorry Pls forgive me, I love you and thank you ಎಂದು ಹಲವಾರು ಬಾರಿ EFT (emotionally focused Therapy) ಮಾಡಿಕೊಂಡೆ. ನನಗೆ ನನ್ನಿಂದ ಬಿಡುಗಡೆ ಬೇಕಿತ್ತಲ್ಲಾ???? 6/12/18 ಮಗಳು ಜಾನಕಿ ಸಂವಾದ : ಟಿ.ಎನ್. ಸೀತರಾಮ್ ನಿರ್ದೇಶನದ 'ಮಗಳು ಜಾನಕಿ' ಧಾರಾವಾಹಿಯ ಸಂವಾದ ಕಾರ್ಯಕ್ರಮ ನಿನ್ನೆ ಕಲರ್ ಸೂಪರ್ ವಾಹಿನಿಯಲ್ಲಿ ಬಿತ್ತರವಾಯಿತು. ಪ್ರೇಕ್ಷಕರೆಲ್ಲರೂ ಪಾತ್ರಗಳಿಗೆ 'ನೀವು ಹಾಗೆ ಮಾಡಬಹುದಿತ್ತಲ್ಲವಾ? ಹೀಗೆ ಮಾಡಬಹುದಿತ್ತಲ್ಲವಾ? ಹೀಗೇಕೆ, ಹಾಗೇಕೆ ಮಾಡಿದಿರಿ? ಎಂದೆಲ್ಲಾ ಪ್ರಶ್ನೆಗಳ ಸುರಿಮಳೆ ಸುರಿಸಿದರು. ಅವರೆಲ್ಲಾ 'ನಿರ್ದೇಶಕರು ಹಾಗೆ ಮಾಡಲು ಹೇಳಿದರು ನಮಗೇನು ಗೊತ್ತು ಅವರನ್ನೇ ಕೇಳಿ' ಎಂದು ಒಂದೇ ಮಾತು ಹೇಳಿಬಿಟ್ಟಿದ್ದರೆ ಸಂವಾದದ ಉದ್ದೇಶವೇ ಢಮಾರ್ ಆಗಿಬಿಡುತ್ತಿತ್ತು- ಅಲ್ಲಿ ಬರುವ ಒಂದು ಪಾತ್ರ ಹರಿಕುಮಾರನ ಹಾಗೆ. ಆದರೆ ಯಾರೂ ಹಾಗೆ ಹೇಳಲಿಲ್ಲ. ಧಾರಾವಾಹಿಯ ತಮ್ಮ ಪಾತ್ರದ ಚಲನೆಗೆ ತಾವೇ ಜವಾಬ್ದಾರಿಯೆಂಬಂತೆ ವರ್ತಿಸಿ ಉತ್ತರಕೊಟ್ಟರು. ನನಗೆ ಇದು ಬಹಳ ಖುಷಿಕೊಟ್ಟ ಸಂಗತಿ. ಇದು ನನಗೆ ನಮ್ಮ ಬದುಕಿನ ಒಂದು ರೂಪಕವಾಗಿ ಕಾಣಿಸಿತು. ಎಲ್ಲರನ್ನೂ ಆಡಿಸುವವನು ನಿರ್ದೇಶಕನೇ! ಪಾತ್ರಗಳು ಅವನಾಡಿಸುವ ಸೂತ್ರದ ಬೊಂಬೆಗಳು. ಇದು ವಿಧಿವಾದಿಗಳ, ಕರ್ಮವಾದಿಗಳ ಚರ್ವಿತ ಚರ್ವಣ ಮಾತು. ನನಗೆ ಬೆರಗು ಗೊಳಿಸುವ ಸಂಗತಿಯೆಂದರೆ, ಇದರ ಅರಿವಿದ್ದರೂ ನಮ್ಮ ನಮ್ಮ ಕರ್ಮಗಳಿಗೆ ನಾವೇ ಜವಾಬ್ದಾರಿಯಾಗುವ ಪ್ರಜ್ಞೆಯಿದೆಯಲ್ಲಾ ಬದುಕಿಗೆ ಅದೇ ಮುಖ್ಯ. ಈ ಜವಾಬ್ದಾರಿಯೇ ಬದುಕು ಎಂದು ನಾನಾದರೂ ಭಾವಿಸುತ್ತೇನೆ. ಜವಾಬ್ದಾರಿಯಿಲ್ಲದವರು ಬದುಕಿದ್ದರೂ ಸತ್ತ ಹಾಗೆ. ಅನೇಕ ವೇಳೆ ನಮ್ಮ ಕೈಯಲ್ಲಿ ಏನೂ ಇಲ್ಲವೆಂದು ತಿಳಿದ ಅಸಾಹಾಯಕತೆಯ ಕ್ಷಣಗಳಲ್ಲೂ ನಾವು ಕೈದುವ ಬಿಸುಟು ಉತ್ತರಕುಮಾರನಂತೆ ಓಡುವುದಿಲ್ಲ. ಇದು ನಮ್ಮ ಬದುಕಿನ ವ್ಯಂಗ್ಯ ಕೂಡ. ಬದುಕಿನ ಜೀವಂತಿಕೆ ಇರುವುದೇ ಇಲ್ಲಿ. ಕರ್ಮ ಸಿದ್ಧಾಂತವನ್ನು ಒಪ್ಪುವವರೂ ಎಲ್ಲವನ್ನೂ ಸಂಚಿತ ಕರ್ಮದ ತಲೆಯ ಮೇಲೆ ಹಾಕಿ escape ಆಗುವ ಹಾಗಿಲ್ಲ. ಇಚ್ಛಾಶಕ್ತಿ (Free will) ಎನ್ನುವುದೂ ಇದೆ ಎಂದು ಆ ಕೃಷ್ಣ ಪರಮಾತ್ಮನೇ ಅಪ್ಪಣೆ ಕೊಡಿಸಿರುವನಲ್ಲಾ? 8/12/18 ಬರದೊಡಲಿನಿಂದ ಚಿಮ್ಮಿದ ಊಟೆ ಪ್ರೀತಿಯ ಜಯಲಕ್ಶ್ಮೀ ನಮಸ್ಕಾರಗಳು. ಮೊನ್ನೆಯಷ್ಟೇ ನಿಮ್ಮ 'ಮುಕ್ಕು ಚಿಕ್ಕಿಯ ಕಾಳು' ನನ್ನ ಕೈಸೇರಿತು. ಒಂದೇ ಗುಕ್ಕಿಗೆ ಓದಿ ಕುಳಿತೆ. ಅಭಿನಂದನೆಗಳು ನಿಮಗೆ. 'ಮುಕ್ಕು ಕಾಳು, ಚಿಕ್ಕಿ ಕಾಳು' ಕೂಡ, ಹದವಾದ ಮಣ್ಣು, ನೀರು, ಗಾಳಿ ದೊರೆತರೆ ಹೇಗೆ ಒಳ್ಳೆಯ ಬೆಳೆಯಾಗಿ ಚಿಗಿಯಬಲ್ಲದು ಎಂಬುದನ್ನು ಬಹಳ ಸುಂದರವಾಗಿ ತೋರಿಸಿಕೊಟ್ಟಿದ್ದೀರಿ. ಮುಕ್ಕು ಕೇವಲ ಮೌನೇಶನ ಅಂಗ ವಿಕಲತೆ ಮಾತ್ರವಲ್ಲ, ಅವನ ತಾಯಿ ತಂದೆ, ಅಜ್ಜ ಅಜ್ಜಿಯರ ನಿರಕ್ಷರತೆ, ಬಡತನ ಬರ ಪ್ರದೇಶದ ಕಷ್ಟ ಕಾರ್ಪಣ್ಯಗಳೂ ಹೌದು. ಎಲ್ಲಾ ರೀತಿಯ ವೈಷಮ್ಯಗಳ ಒಡಲಿನಿಂದಲೇ ಸೃಜನಶೀಲತೆಯ ಸೆಲೆ ಚಿಮ್ಮುತ್ತದೆ. ಸೃಜನಶೀಲತೆಯನ್ನು ಯಾವುದೂ ಕಟ್ಟಿ ಹಾಕಲಾರದು ಎಂಬುದಕ್ಕೆ ಸಮರ್ಥವಾದ ಅಭಿವ್ಯಕ್ತಿ ದೊರೆತಿದೆ. ಮೌನೇಶನ ಕೀಳರಿಮೆಯ ಪರಿ ಇಲ್ಲಿ ಅನನ್ಯವಾಗಿ ವ್ಯಕ್ತವಾಗಿದೆ. ಸೃಜನಶೀಲತೆಯೇ ಅವನ ಕೀಳರಿಮೆಯನ್ನು ಮೀರಲು ಕಾರಣವಾಗಿದೆ/ ಸಾಧನವಾಗಿದೆ. ಹಾಗೆಯೇ ಅವನ ತಾಯಿ ಅನುಭವಿಸುವ ಸಂಕಟಗಳೂ ಅವನ ಸೃಜನಶೀಲತೆ ಚಿಗುರಲು ಹದವಾದ ಮಣ್ಣನ್ನೇ ಸುರಿದಿದೆ. ಇಲ್ಲಿ ಬಳಸಿರುವ ಭಾಷೆ ಈ ಕೃತಿಯ ಒಂದು ಶಕ್ತಿ. ಮುಂಬಯಿಗಳಾದ ನನಗೆ ಇವು ಅಪರಿಚಿತವೆನಿಸಲೇ ಇಲ್ಲ. ನನ್ನ ಸುತ್ತಮುತ್ತಲಿನವರೆಲ್ಲಾ ಅವರೇ ಆಗಿದ್ದಾರೆ. ಕೆ. ಸತ್ಯನಾರಾಯಣ ಅವರು ಹೇಳಿರುವಂತೆ ನೀವು ಬಿಜಾಪುರದ ಆಡುನುಡಿಗಳನ್ನು ಬೆಸೆಯಲು ಬಳಸಿರುವ ಶಿಷ್ಟ ಭಾಷೆ ಸಂವಹನಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳುತ್ತದೆ. ಸಿ.ಎನ್ ಆರ್ ಅವರು ಹೇಳಿರುವಂತೆ ಕಲಾವಿದನೊಬ್ಬನ ಕಲೆಯ ಕುರಿತಾದ ತಾಂತ್ರಿಕ ವಿವರಗಳು, ಸಾಧನೆಯ ಮೆಟ್ಟಿಲುಗಳು, ಅದಕ್ಕೆ ಉಂಟಾಗುವ ಅಡತಡೆಗಳ ಬಗ್ಗೆ ಇನ್ನೂ ಹೆಚ್ಚು ಕೇಂದ್ರೀಕರಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದು ಓದುಗಳಾದ ನನಗೆ ಎನಿಸುತ್ತದೆ. ಇದು ಕತೆಯೊಂದನ್ನು ಕಾದಂಬರಿಯಾಗಿ ಬೆಳೆಸುವಲ್ಲಿನ ಸಮಸ್ಯೆಯೂ ಇರಬಹುದು. ಇರಲಿ, ಮೊದಲ ಪ್ರಯತ್ನದಲ್ಲೇ ನೀವು ಒಂದು ಯಶಸ್ವೀ ಕಾದಂಬರಿಯನ್ನು ಕೊಟ್ಟಿರುವಿರಿ. ಕಾದಂಬರಿ ಪ್ರಕಾರದಲ್ಲಿ ನೀವು ಕೃಷಿ ಮಾಡಬಲ್ಲಿರಿ ಎಂಬುದನ್ನು ತೋರಿಸಿಕೊಟ್ಟಿರುವಿರಿ. ನಿಮ್ಮ ಮುಂದಿನ ಕಾದಂಬರಿಗಳಲ್ಲಿ ಬದುಕಿನ ಸಂಕೀರ್ಣತೆ ಹೆಚ್ಚು ಹೆಚ್ಚು ಅನಾವರಣಗೊಳ್ಳಲಿ. ನಿಮಗೆ ಶುಭವಾಗಲಿ. ಗಿರಿಜಾ 14/12/2018 ಕನಕದಾಸರ- ಸಾಂಸ್ಕೃತಿಕ ಅನುಸಂಧಾನ ರಾಷ್ಟ್ರೀಯ ವಿಚಾರ ಸಂಕಿರಣ. ಇದರಲ್ಲಿ ಅವರ ಜಾತಿಯ ಪ್ರಸ್ತಾಪಕ್ಕೆ ಆಡಿದ ಮಾತುಗಳ ವಿರುದ್ಧ ಕೆಲವರು ರಡ್ವಾದ ಮಾಡಿದರು. ನಮ್ಮ ದೇಶದಲ್ಲಿ ಜಾತಿ ಎನ್ನುವುದು ವಾಸ್ತವ ಅದನ್ನು ನಾವು ಒಪ್ಪಿಕೊಳ್ಳಬೇಕು. ಅದರ ಈ ವೈವಿಧ್ಯವನ್ನು ಮೆಚ್ಚಿಕೊಳ್ಳುವುದರ ಜೊತೆಗೇ ಅದರ ತಾರತಮ್ಯ ಧೋರಣೆಗಳೂ ನಮ್ಮ ಅತಿ ದೊಡ್ಡ ಸಾಮಾಜಿಕ ಅನಿಷ್ಟವಾಗಿದೆ. ಜಾತಿ ರಾಜಕಾರಣ ನಮ್ಮಲ್ಲಿ ಲಾಗಾಯ್ತಿನಿಂದಲೂ ಬೇರೆ ಬೇರೆ ಸ್ವರೂಪಗಳಲ್ಲಿ ಮೆರೆದಿದೆ. ಅಧಿಕಾರವಿಲ್ಲದ, ಸಾಮಾಜಿಕ ವರ್ಚಸ್ಸಿಲ್ಲದ ಪಾಪದವರು ಇದಕ್ಕೆ ಬಲಿಯಾಗುತ್ತಲೇ ಬಂದಿದ್ದಾರೆ. ಎಂಬುದನ್ನೂ ಒಪ್ಪಿಕೊಳ್ಳಬೇಕು. ಜಾತಿ ಇಲ್ಲದಿದ್ದರೆ ಎಲ್ಲರೂ ಇಸ್ತ್ರಿಮಾಡಿದ ಸಮವಸ್ತ್ರ ಹಾಕಿಕೊಂಡ ಹಾಗೆ ಕಾಣುತ್ತಾರೆ ಎಂದು ವೈದೇಹಿಯವರು ಒಮ್ಮೆ ಹೇಳಿದ್ದರು. ಮುಂದೆ ನಡೆದ ಸಂವಾದದಲ್ಲಿ ಜಾತಿ ಎನ್ನುವ ಅಸ್ಮಿತೆಯನ್ನು ಒಪ್ಪಿಕೊಂಡು ಅದನ್ನು ಕನಕದಾಸರು ಮೀರಿದ ಬಗೆಯನ್ನು ರಘುನಾಥ್ ತಿಳಿಸಿದರು. " ಪ್ರಜಾವಾಣಿ ಪತ್ರಿಕೆಯಲ್ಲಿ 'ಕನಕದಾಸರು ಬೇಡರ ಜಾತಿಗೆ ಸೇರಿದವರು ಅವರು ಕುರುಬರಲ್ಲ' ಎಂಬ ಸುದ್ದಿಯನ್ನು ಅವರು ಆಕ್ಷೇಪಿಸುತ್ತಾ ಕನಕದಾಸರು ತಾವೇ ತಮ್ಮ ಒಂದು ಕೀರ್ತನೆಯಲ್ಲಿ ತಾನು ಕುರುಬ ಬೀರಯ್ಯ ತನ್ನ ದೈವ ಎಂದು ಹೇಳಿಕೊಂಡಿದ್ದಾರೆ ಹೀಗಿರುವಾಗ ಅವರನ್ನು ಬೇಡರ ಕುಲಕ್ಕೆ ಸೇರಿಸುವುದು ಹೇಗೆ ಸರಿ? ಇದೆಲ್ಲವನ್ನೂ ಒಂದು ಪಕ್ಕಕ್ಕಿಟ್ಟು ನೋಡುವಾಗ ಆತ್ಮ ಯಾವ ಕುಲ ಎಂದು ಟೀಕಿಸಿದವರೇ ಕನಕದಾಸರು. ತಮ್ಮ ಅಸ್ಮಿತೆಯನ್ನು ಒಪ್ಪಿಕೊಂಡು ಅದನ್ನು ಮೀರಿದವರು ಅವರು. 'ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ' ಎಂದವರೇ 'ಕೊನೆಗೆ ಬಯಲು ಆಲಯದೊಳಗೊ ಆಲಯವು ಬಯಲೊಳಗೊ' ಎನ್ನುವ ಒಂದು ಹಂತವನ್ನು ತಲಪಿಬಿಡುತ್ತಾರೆ. ಇದು ಕನಕದಾಸರು ಹಂತ ಹಂತವಾಗಿ ತಮ್ಮ ಅಸ್ಮಿತೆಯನ್ನು ವಿಸ್ತರಿಸಿಕೊಂಡ / ಮೀರಿದ ಪರಿ. ಇಂದು ಕನಕದಾಸರು ನಮಗೆ ಮುಖ್ಯವಾಗಬೇಕಾದುದು ಈ ಕಾರಣಕ್ಕೇ ಹೊರತು ಅವರು ಬೇಡರ ಜಾತಿಗೆ ಸೇರಿದ್ದರೆ? ಕುರುಬರಾಗಿದ್ದರೇ? ಎಂಬುದು ನಮ್ಮ ಸಂಶೋಧನೆಯ ಉದ್ದೇಶವಾಗಬಾರದು" ಎಂದು ಹೇಳಿದರು. ಜಾತಿಗದ್ದಲದಲ್ಲಿದ್ದ ಸಭೆಗೆ ,ರಘುನಾಥ್ ಅವರ ಮಾತು ಎಷ್ಟು ಅರ್ಥವಾಯಿತೋ ತಿಳಿಯದು. 15/12/2018 ಕೆಲವು ವರ್ಷಗಳ ಹಿಂದಿನ ಮಾತು. ಕರ್ನಾಟಕ ಸಂಘದಲ್ಲಿ ಕರ್ನಾಟಕ ಸಂಸ್ಕೃತಿಗೆ ಸಂಬಂಧಿಸಿದಂತೆ ಕ್ವಿಜ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಅದರಲ್ಲಿ ಕನ್ನಡ ಸಾಹಿತ್ಯ ಚರಿತ್ರೆಗೆ ಸಂಬಂಧಿಸಿದಂತೆ ೫೦ ಪ್ರಶ್ನೆಗಳು ಇದ್ದವು. ಅವುಗಳನ್ನು ಟೈಪ್ ಮಾಡುವುದು ನನ್ನ ಕೆಲಸ. ಟೈಪ್ ಮಾಡುತ್ತಾ ಹೋದ ನನಗೆ ಆಘಾತವಾಯಿತು. ಇಡೀ ಕನ್ನಡ ಸಾಹಿತ್ಯ ಚರಿತ್ರೆಗೆ ಸಂಬಂಧಿಸಿದಂತೆ ಕೊಟ್ಟ ಐವತ್ತು ಪ್ರಶ್ನೆಗಳಲ್ಲಿ ಸಂಚಿ ಹೊನ್ನಮ್ಮನನ್ನು ಬಿಟ್ಟರೆ ಬೇರೆ ಯಾವ ಮಹಿಳೆಯೂ ಇರಲಿಲ್ಲ. "ನಯಸೇನ ಪಯಸೇನ ಅಂತಾ ಬರೀ ಹಳಗನ್ನಡ ಕೊಟ್ಟರೆ ಹೆಂಗಸರು ಯಾರು ಇರ್ತಾರೆ ? ಅದರಲ್ಲೂ ಅಕ್ಕನನ್ನು ಬಿಟ್ಟುಬಿಟ್ಟಿದ್ದೀರಾ ಇದು ತುಂಬಾ ಅನ್ಯಾಯ" "ನನಗೆ ನೆನಪಿಗೆ ಬಂದಷ್ಟು ಬರೆದಿದ್ದೀನ್ರೀ. ನಿಮಗೆ ಏನಾದರೂ ಸೇರಿಸಬೇಕೆಂದಿದ್ದರೆ ಸೇರಿಸಿ" ನಮ್ಮ ನೆನಪುಗಳನ್ನೂ ಕೂಡಾ ನಮ್ಮ ವ್ಯವಸ್ಥೆ ಹೇಗೆ ಸುಪ್ತವಾಗಿ ನಿಯಂತ್ರಿಸುತ್ತದೆ!!!!! ಜಗಳವಾಡಿ ಕೊನೆಗೆ ನಾನು ಇನ್ನೊಂದು ನಾಲ್ಕು ಲೇಖಕಿಯರ ಹೆಸರುಗಳನ್ನು ಸೇರಿಸಿದೆ. "ಹತ್ತು ಪರ್ಸೆಂಟಾದರೂ ಆಯಿತಲ್ಲ ಬಿಡಿ" ಎಂದು ನಕ್ಕರು. ನಾನು ನಗಲಿಲ್ಲ. 18/12/2018 ಪ್ರೀತಿ ತುಂಬಿದ ಮುಗ್ಧ ಮನಸ್ಸುಗಳೇ ಕ್ಷಮಿಸಿಬಿಡಿ....... ಲ್ಯಾಂಡ್ ಲೈನ್ ಸಮಸ್ಯೆಯೆಂದು ಸ್ಥಳೀಯ ಟೆಲೆಫೋನ್ ಇಲಾಖೆಗೆ ಹೋಗಿದ್ದೆ. ಅಲ್ಲಿ ಜನವೇ ಇರಲಿಲ್ಲ. ಈಗ BSNL Land line ಯಾರಿಗೆ ಬೇಕು ಹೇಳಿ? ಅಲ್ಲಿ ಒಬ್ಬ ತಿರುಪತಿ ಪ್ರಸಾದವೆಂದು ಹಂಚುತ್ತಿದ್ದವನು ನನ್ನಂತಹ ಗ್ರಾಹಕಳ ಬಳಿಗೂ ಬಂದು 'ಲೋ ಮಾಜಿ ತಿರುಪತಿ ಕ ಪ್ರಸಾದ್' ಎಂದ. ನಾನು ಎರಡೂ ಕೈ ನೀಡಿ ಪ್ರಸಾದ ತೆಗೆದುಕೊಂಡವಳು ಅವನಿಗೆ ಕಾಣುವಂತೆ ಕಣ್ಣಿಗೆ ಒತ್ತಿಕೊಂಡು, ಅವನು ಕಾಣದಂತೆ ಅಲ್ಲೇ ಇದ್ದ ಒಂದು ಕಾಗದ ಹರಿದು ಪೊಟ್ಟಣದಲ್ಲಿ ಕಟ್ಟಿಕೊಂಡು ಬ್ಯಾಗಿನೊಳಗೆ ಹಾಕಿಕೊಂಡು ಬಿಟ್ಟೆ. ಉಳಿದವರೆಲ್ಲಾ ಧನ್ಯರಾದಂತೆ ಕಣ್ಣಿಗೆ ಒತ್ತಿಕೊಂಡು ತಿಂದರು. ನಮ್ಮಲ್ಲಿ ದೇವರ ಪ್ರಸಾದವೆಂದರೆ ಮರುಮಾತೇ ಇಲ್ಲ. ಅದೊಂದು ಆತ್ಯಂತಿಕ ಸತ್ಯ. ನಮ್ಮ ದೇಶದಲ್ಲಿ ಇರುವ ಹೆಚ್ಚು ಜನ ಹೀಗೆ ಮುಗ್ಧರು, ಎಲ್ಲವನ್ನೂ ದೇವರು ನೋಡಿಕೊಳ್ಳುತ್ತಾನೆ, ಎಲ್ಲಾ ಒಳಿತೇ ಆಗುತ್ತದೆ ಎನ್ನುವ ಅಮಾಯಕರು. ಇಲ್ಲಿ ನೀರೆಲ್ಲವೂ ತೀರ್ಥ. ಎಲ್ಲಿ ಹೋದರೂ ಅದು ಗಂಗೆ. ಪರಿಚಿತರು ಅಪರಿಚಿತರು ಎನ್ನುವ ಭೇದವಿಲ್ಲದೇ (ಪ್ರಸಾದದ ವಿಷಯಕ್ಕಾದರೂ) ಎಲ್ಲರನ್ನೂ ತಮ್ಮಂತೆ ಬಗೆವ ಈ ಜನರ ಕಾಳಜಿಯ ಹಿಂದಿನ ಪ್ರೀತಿ ದೊಡ್ಡದು. ಇಂತಹ ಒಳಗೊಳ್ಳುವ ಸಂಸ್ಕೃತಿಗೆ, ಮುಗ್ಧತೆಯ ತಿಳಿಗೊಳಕ್ಕೆ ಈಗ ಯಾರೋ ಕೆಲವು ಕೆಟ್ಟ ಜನ ವಿಷ ಹಾಕಿಬಿಟ್ಟಿದ್ದಾರೆ. ಮುಗ್ಧ ಅಮಾಯಕ ಪ್ರೀತಿಯನ್ನೂ ಅನುಮಾನದಿಂದ ನೋಡುವಂತೆ ಮಾಡಿಬಿಟ್ಟಿದ್ದಾರೆ. ಪ್ರೀತಿ ತುಂಬಿದ ಮುಗ್ಧ ಮನಸ್ಸುಗಳೇ ಕ್ಷಮಿಸಿಬಿಡಿ. 21/12/18 ಗಿಣಿ ಮತ್ತು ಮೀನಾಕ್ಷಿ : ಬೆಳೆಗೆದ್ದು ಬಾಲ್ಕನಿಗೆ ಬಂದರೆ ಎದುರು ಕಟ್ಟಡದ ೧೨ ನೆಯ ಮಹಡಿಯ ಮೇಲೆ ನೀರಿನ ಟ್ಯಾಂಕಿನ ಬಳಿ ಏಳೆಂಟು ಗಿಣಿಗಳು!!! ಅವು ಒಂದೊನ್ನೊಂದು ಅಟ್ಟಿಸಿಕೊಂಡು ಹೋಗುವುದೇನು, ಛೇಡಿಸುವುದೇನು? ಕೇಬಲ್ ವೈರ್ ಗಳು ತಮಗಾಗಿಯೇ ಇವೆಯಂಬಂತೆ ಅವುಗಳ ಮೇಲೆ ಜೋತಾಡುವುದೇನು ಸರ್ಕಸ್ ಮಾಡುವುದೇನು? ಎಂತಹ ಉಲ್ಲಾಸ! ಏನು ಜೀವಂತಿಕೆ? ಸುಮ್ಮಾನ ಅವಕ್ಕೆ ! ಅಷ್ಟರಲ್ಲಿ ಅಡುಗೆಮನೆ ಕರೆಗೆ ಓಗೊಡಬೇಕಾಯಿತು. ಓಡಿದೆ. ಹೆಚ್ಚುತ್ತಾ, ಬಾಡಿಸುತ್ತಾ ಜೊತೆಗೆ ಯೂಟ್ಯೂಬ್ ತೆರೆದರೆ 'ಮೀನಾಕ್ಷೀ ಮೇ ಮುದಂ ದೇಹಿ ! ಟಿ.ಎಂ.ಕೃಷ್ಣ ಅವರ ಧ್ವನಿಯಲ್ಲಿ ಪೂರ್ವಿಕಲ್ಯಾಣಿ.. ರಾಗ ತಾನ ಪಲ್ಲವಿಯ ಪೂರ್ಣ ಭೋಜನ. ತಾಯ ಕೈಯಿಂದ ತಪ್ಪಿಸಿಕೊಂಡು ಸಂತೆಯಲಿ ಕಳೆದು ಹೋದಂತಹ ಮಗುವೊಂದರ ಆತ್ಮದ ಮೊರೆ ಆಲಾಪದಲ್ಲಿ. ತಾನದಲ್ಲಿ ಅವಳು ಸಿಕ್ಕ ಸಂಭ್ರಮ. ಪಲ್ಲವಿಯಲ್ಲಿ ಜಗತ್ತೆಲ್ಲಾ ಪ್ರೀತಿಯಿಂದ ಕೂಡಿರುವಂತಹ ಬೆಚ್ಚಗಿನ ಭಾವ. ಅಡುಗೆ ಮನೆಯಿಂದ ಕೈ ಒರೆಸುತ್ತಾ ಹೊರ ಬಂದು ನೋಡಿದರೆ ಗಿಣಿಗಳೆಲ್ಲಾ ಹಾರಿಹೋಗಿದ್ದವು. "ಮೀನ ಲೋಚನಿ ಪಾಶ ಮೋಚನಿ ಮಾನಿನಿ ಕದಂಬ ವನ ವಾಸಿನಿ" ಹಳದಿ ಬೆಳಕಾಗಿ ಎಲ್ಲಾ ಕಡೆ ಹರಿದಿದ್ದಳು. 26/12/18 ತಿರುಗಾಲ ತಿಪ್ಪಿಯರು ಭಾರತಿ, ಸಂಧ್ಯಾ ಮತ್ತು ಅಂಜಲಿ ಇವರನ್ನು ತಿರುಗಾಲ ತಿಪ್ಪಿಯರು ಎಂದು ನಾನು ಹಿಂದೊಮ್ಮೆ ಕರೆದಿದ್ದೆ. ಇದು ಅವರ ತಿರುಗಾಟದ ಹುಚ್ಚಿಗೆ ನನ್ನದೊಂದು ಪುಟ್ಟ ಪ್ರತಿಕ್ರಿಯೆ: ಅಕ್ಕ ಮಹಾದೇವಿ ಯ ಬಗೆಗಿನ "scribbles on Akka" ಎಂಬ ಸಾಕ್ಷ್ಯ ಚಿತ್ರದ ಸಂಶೋಧನೆಗೆಂದು ಒಂದು ವರುಷ ಮಣ್ಣು ಹೊತ್ತಿದ್ದೆ. ಅದರ ಪ್ರೀಮಿಯರ್ ಪ್ರದರ್ಶನ ಮುಗಿದ ಮೇಲೆ ದೆಹಲಿ ಮೂಲದ ಪತ್ರಕರ್ತೆಯೊಬ್ಬಳು ಬಂದು Lalded used to sit naked in the market place that was her space, what is Akka mahadevi's space? ಎಂದು ಕೇಳಿದಳು ಅದಕ್ಕೆ Her journey is her space ಎಂದು ಉತ್ತರಿಸಿದ್ದೆ. ಎಲ್ಲಾ ಹೆಣ್ಣು ಮಕ್ಕಳ ಆತ್ಯಂತಿಕ ಬಿಡುಗಡೆ ಇರುವುದೇ ಅವರ ಸ್ವತಂತ್ರ ಪಯಣಗಳಲ್ಲಿ. ಅಭಿನಂದನೆಗಳು ಭಾರತೀ, ಅಂಜಲೀ ಸಂಧ್ಯಾ. ನನಗೂ ತಿರುಗಾಟವೆಂದರೆ ಒಂದು ರೀತಿ ಹುಚ್ಚು. ಅಕ್ಕನನ್ನು ಹುಡುಕಿಕೊಂಡು ಅಲೆದ ನನ್ನ ಅನುಭವವನ್ನು ನನ್ನ ಪುಸ್ತಕದಲ್ಲಿ ದಾಖಲಿಸಿದ್ದೇನೆ. ಏನನ್ನೋ ಹುಡುಕುತ್ತಾ ಅಲೆಯುವಾಗ ಅಲೆತ ನಮ್ಮನ್ನು ವರ್ತಮಾನದಲ್ಲಿ ಕಟ್ಟಿಹಾಕಿಬಿಡುತ್ತದೆ. ಕೇವಲ ವರ್ತಮಾನದಲ್ಲಿ ಬದುಕುವುದಕ್ಕಿಂತ ಬೇರಿನ್ನಾವ ಆತ್ಮ ಶೋಧನೆ ಇದೆ? ಶೋಧಕಿಯರೆಲ್ಲಾ ಆತ್ಮಸಾಧಕಿಯರೇ! ಅಕ್ಕನ ಪರಂಪರೆಯನ್ನು ಮುಂದುವರೆಸುತ್ತಿರುವವರು!!!!!!! 30/12/18 ಪ್ರೀತಿಯ ಉಮಾ ನಿಮ್ಮ 'ಕಡೇ ನಾಲ್ಕು ಸಾಲು' ಚೊಚ್ಚಿಲ ಕೂಸನ್ನು ನನಗೆ ಕಳುಹಿಸಿಕೊಟ್ಟಿದ್ದೀರಿ. ಧನ್ಯವಾದಗಳು ಮತ್ತು ಅಭಿನಂದನೆಗಳು. ಇಲ್ಲಿರುವ ಕವಿತೆಗಳನ್ನು ಮುಖಪುಸ್ತಿಕೆಯಲ್ಲಿ ಆಗಾಗ ಓದಿರುವೆನಾದರೂ ಅವು ಸಂಕಲನದ ರೂಪದಲ್ಲಿ ಕೈಗೆ ಬರುವಾಗ ಮುದ್ದಾದ ಮಗುವೊಂದು ಕೈಗೆ ಬಂದ ಹಾಗೆ. ಹೊಸ ರೂಪ, ಹೊಸ ವಾಸನೆ, ಹೊಸ ಸ್ಪರ್ಷ ಕೊಡುವ ಅನುಭವ ಅನಿರ್ವಚನೀಯವಾದುದು. ತಾಯಂದಿರಿಗೆ ಇದರ ಬಗ್ಗೆ ಹೇಳಬೇಕಾಗಿಯೇ ಇಲ್ಲ. ನಿಮ್ಮ ಕವಿತೆಗಳು ಸಹಜವಾಗಿ ಅರಳಿರುವಂತಹವು. ಅವುಗಳನ್ನು ಗುದ್ದಿ, ಕೃತಕ ಬಣ್ಣ ಬಳಿದು ಬಲವಂತವಾಗಿ ಹಣ್ಣು ಮಾಡಿ ಮಾರುಕಟ್ಟೆಗೆ ಇಳಿಸಲಾಗಿಲ್ಲ. ದೈನಂದಿನ ನಗಣ್ಯವೆನ್ನಬಹುದಾದ ಎಲ್ಲಾ ವ್ಯಾಪಾರಗಳೂ ಇಲ್ಲಿ ಮೊಗ ಪಡೆದಿವೆ. ಸಾಮಾನ್ಯವಾಗಿ ಚಲಿಸುವ ಸಾಲುಗಳು ಕೊನೆಗೆ ಪಡೆದುಕೊಳ್ಳುವ ತಿರುವಿನಿಂದಾಗಿ (punch lines) ಇಡೀ ಕವಿತೆಯನ್ನು ಹೊಸ ಬೆಳಕಲ್ಲಿ ನಿಲ್ಲಿಸುತ್ತವೆ. ಕಡೇ ನಾಲ್ಕು ಸಾಲಿನಿಂದಾಗಿಯೇ ಸಾರ್ಥಕವೆನಿಸುತ್ತವೆ. ಒಂದು ರೀತಿಯಲ್ಲಿ ಈ ಸಂಕಲನದ ಶೀರ್ಷಿಕೆಯನ್ನು ಅನ್ವರ್ಥಗೊಳಿಸಿಬಿಡುತ್ತವೆ. ಶಿರ್ಷಿಕೆಯ ಕವಿತೆಯಲ್ಲಿ 'ನಾಪತ್ತೆಯಾದ ಕಡೇ ನಾಲ್ಕು ಸಾಲನ್ನು ಬರೆದುಬಿಟಿದ್ದರೆ ಕವಿತೆಯಲ್ಲಿನ ಕತೆ ಬಹುಶಃ ಪೂರ್ಣಗೊಳ್ಳುತ್ತಿರಲಿಲ್ಲ ಎನಿಸುತ್ತದೆ. ಅಪೂರ್ಣತೆಯೇ ಕವಿತೆಯ ಶಕ್ತಿ. ಅನೇಕ ಸಲ ಕವಿಗಳಿಗೆ ಓದುಗರ ಗ್ರಹಿಕೆಯ ಶಕ್ತಿಯ ಬಗ್ಗೆ ಅನುಮಾನ. ಈ ಅನುಮಾನವೇ ಅನೇಕ ಸಲ ಕವಿತೆಯನ್ನು ವಾಚ್ಯದತ್ತ ತಳ್ಳಿಬಿಡುತ್ತದೆ. ನಿರಾಸಕ್ತ/ಅನಾಸಕ್ತ ಕವಿಗೆ ಮಾತ್ರ 'ಹೊಳೆದದ್ದೇ ತಾರೆ ಉಳಿದದ್ದು ಆಕಾಶ' ಎನ್ನುವ ಒಂದು ಸಮತೋಲ ಮನಸ್ಥಿತಿ ಸಾಧ್ಯವಾಗುತ್ತದೆ. ಅಪೂರ್ಣತೆಯೇ ಸತ್ಯ. ಆದುದರಿಂದ ನಿಮ್ಮ ಕಡೇ ನಾಲ್ಕು ಸಾಲಿನ ಗೈರು ಹಾಜರಿಯೂ ಮಹತ್ವವಾದುದೇ. ಸೊಪ್ಪು ಮಾರುವವಳು, ಅಡುಗೆ ಮನೆ ಜಗತ್ತು, ಕಳೆದು ಹೋದ ಗೆಳತಿ, ದಾರಿ, ಪಾದ ಕಾರಣ,ಪುಟ್ಟಕ್ಕನ ಓಲೆ, ವಾಸನೆ, ಹಿತ್ತಲು... ಈ ಕವಿತೆಗಳ ಜಗತ್ತು ನಮಗೆ ಬಹಳ ಪರಿಚಿತವಾದುದು. ಆದುದರಿದಲೇ ಬಹಳ ಅಪ್ಯಾಯಮಾನ ಎನಿಸುತ್ತವೆ. ಹೀಗೆ ಪರಿಚಿತವಾದುದರ ಮೂಲಕವೇ ಅಪರಿಚಿತವಾದುದರತ್ತ ಕೊಂಡೊಯ್ಯುವ 'ಕಡೇ ನಾಲ್ಕು ಸಾಲು'ಗಳಿಗೆ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಆಳ ಹರಹುಗಳು ಸಿದ್ಧಿಸಲಿ. ನಿಮಗೆ ಒಳಿತಾಗಲಿ. ಮೊದಲ ಪ್ರಯತ್ನದಲ್ಲೇ ಒಳ್ಳೆಯ ಕವಿತೆಗಳನ್ನು ಕೊಟ್ಟಿರುವಿರಿ. ಅಭಿನಂದನೆಗಳು. ನಿಮ್ಮ ಕೂಸುಗಳನ್ನು ನನ್ನೊಡನೆ ಆಡಲು ಬಿಟ್ಟು ನನ್ನ ಖುಷಿಗೆ ಕಾರಣರಾಗಿರುವ ನಿಮಗೆ ಧನ್ಯವಾದಗಳು. ಗಿರಿಜಾ. 2/1/19 ಅವರ್ ಬಿಟ್ ಇವರ್ ಬಿಟ್ ಅವರ್ಯಾರು....? ಸುನೀತಾ ಎರಡು ಮಕ್ಕಳ ತಾಯಿ. ನೋಡಲು ಲಕ್ಷಣವಾದ ಲವಲವಿಕೆಯ ಹೆಣ್ಣು. ಸದಾ ಶಿಸ್ತು ಚಟುವಟಿಕೆ...ಪಾದರಸ. ನನ್ನ ಮುಂದೆ ಬಂದು ನಿಂತಿದ್ದಳು. ಕೆದರಿದ ತಲೆ. ಅತ್ತು ಕೆಂಪಾದ ಕಣ್ಣುಗಳು. ಮಾಸಲು ಸೀರೆ. ನನ್ನನ್ನು ಕಂಡೊಡನೆಯೇ ಭುಜದ ಮೇಲೆ ತಲೆಯಿಟ್ಟು ಭೋರೆಂದು ಅತ್ತಳು. "ನಿನಗೆ ಅವನ ಮೇಲೆ ಅಷ್ಟೊಂದು ಕ್ರಷ್ ಇದ್ರೆ ಎರಡು ದಿನ ಅವನ ಜೊತೆ ಬೇಕಾದರೆ ಇದ್ದು ಬಾ.. ಮಕ್ಕಳಿಗೆ ಏನಾದರೂ ನಾನು ಹೇಳಿಕೊಳ್ಳುತ್ತೇನೆ" ಅಂತ ಇವನು ಅಂದಾ ಚಿಕ್ಕಮ್ಮಾ..... ಬದಗನ ಇನಿದನಿಗೆ ಸಿಕ್ಕ ಅಮೃತಮತಿಯಂತಾಗಿದ್ದಳು. ಸರಿ ಅವನೇನೋ ಹೋಗು ಅಂದ, ನೀನು ಹೋಗ್ತೀಯ.... ಆಮೇಲೆ...? ಇನ್ನೂ ನಾಲ್ಕು ದಿನ ಅಲ್ಲೇ ಇರೋಣ ಅನ್ನಿಸುತ್ತೆ. ವರ್ಷವೂ ಇರಬೇಕು ಅನ್ನಿಸುತ್ತೇ ಆಮೇಲೆ ಆಮೇಲೇನು? ಯೋಚನೆ ಮಾಡಿದ್ದೀಯಾ? ಗಂಡ ಮಕ್ಕಳಿಗೋಸ್ಕರವೇ ಬದುಕಬೇಕೆಂದು ನಾನು ಹೇಳುವುದಿಲ್ಲ. ಆದರೆ ನಮಗೋಸ್ಕರವಾದರೂ ಬದುಕಬೇಕಲ್ಲವಾ?ಹೊಸ ಸೀರೆ ಕಂಡಾಗ ಅದನ್ನು ತೊಗೋಬೇಕು ಅನ್ನೋ ಆತುರ. ಕೊಂಡು ಕೊಂಡಮೇಲೆ ಉಟ್ಟುಕೊಳ್ಳೋ ಆತುರ. ನಾಲ್ಕು ಸಲ ಉಟ್ಟುಕೊಂಡ ಮೇಲೆ ಬೇಸರ ಬರಲ್ವೇನೆ? ಅದನ್ನು ಆಗ ಹಳೇ ನಿರಾಜಿಗೆ ಹಾಕಬಹುದು. ಸಂಬಂಧಗಳನ್ನು ಎಲ್ಲಿಗೆ ಹಾಕೋದು? ಒಂದು ಹಳತಾಗ್ತಾ ಇದ್ದ ಹಾಗೆ ಇನ್ನೊಂದು ಹೊಸತಾಗಿ ಆಕರ್ಷಕವಾಗಿ ಕಾಣಿಸುತ್ತೆ. ಬರೀ ಕಾಣಿಸೋದು ಅಷ್ಟೇ ನಿಜವಾಗಿ ಇರೋಲ್ಲ. ಅದರ ಬೆನ್ನುಹತ್ತಿ ಹೋದೆ ಅಂತ ಇಟ್ಕೋ ಅದೂ ಅಷ್ಟೇ ಸೀರೆ ಕತೇನೇ. ನೋಡೇ ಇದು ನೈತಿಕತೆಯ ಪ್ರಶ್ನೆಯಲ್ಲ. ಹಾಗೆ ನೋಡಿದರೆ ನೈತಿಕ ಅನೈತಿಕ ಇಲ್ಲವೇ ಇಲ್ಲ. ಬೇರೆಯವರ ಸಲುವಾಗಿ ಬದುಕಬೇಕಾದರೆ ಇದೆಲ್ಲ ಬೇಕು. (ಮಕ್ಕಳು ಬಿಡು ದೊಡ್ಡೋವಾದಮೇಲೆ ನಮ್ಮನ್ನು ಬಿಟ್ಟು ಹೋಗುವುವೇ? ಆದರೆ ಅವುಗಳ ಮನಸ್ಸನ್ನು ರೂಪಿಸುವ ಜವಾಬ್ದಾರಿಯೂ ಇದೆಯಲ್ಲಾ?) ಆದರೆ ನಮಗಾಗಿ ಬದುಕಬೇಕಾಗಿದೆಯಲ್ಲಾ? ಇದು ಸಂಬಂಧಗಳ ಗೋಜಲಿನಲ್ಲಿ ಸಿಕ್ಕಿ ಅದರಿಂದ ಹೊರಬರಬೇಕಾದ ಸಂಘರ್ಷದ ಪ್ರಶ್ನೆ. ಈ ಸಂಘರ್ಷ ಕೇವಲ ನಿನ್ನದು...ನಿನ್ನದು ಮಾತ್ರ! ಇದರಲ್ಲಿ ನಿನ್ನ ಸಹಾಯಕ್ಕೆ ಯಾರೂ ಬರಲಾರರು. ಪ್ರತಿಯೊಬ್ಬರದೂ ಏಕಾಂಗಿ ಹೋರಾಟವೇ!!! ನಾವು ಸಂಬಂಧಗಳ ಆಚೆ ಬದುಕಲು ಸಾಧ್ಯವಿಲ್ಲ. ಅದರೊಳಗಿದ್ದೇ ಹೋರಾಡಬೇಕು. ಅಮೃತಮತಿ ಯಾವುದೋ ಧೂಮ್ರಪ್ರಭೆ ಎಂತಲೋ ಏನೋ ಆ ನರಕದಲ್ಲಿ ಬಿದ್ದು ಸಾಯ್ತಾಳಂತೆ. ಜನ್ನ ಗಂಡು ನೋಡು ಅದಕ್ಕೆ ಹಾಗೆ ಬರೆದಿದ್ದಾನೆ. ಇಹವೇ ಭಯಾನಕವಾಗಿ ರುವಾಗ ಪರಗತಿ ಏನಾದರೇನು?ಅವರ್ ಬಿಟ್ ಇವರ್ ಬಿಟ್ ಅವರನ್ನು ಹಿಡಿಯುವ ಕಣ್ಣಾಮುಚ್ಚಾಲೆಯಲ್ಲಿ ನಾವು get on ಆಗೋದು ಹೇಗೆ? ಅದು ನನ್ನ ಪ್ರಶ್ನೆ. ಹಾಂ. ಇನ್ನೊಂದು ವಿಷಯ ಮರೆತಿದ್ದೆ ನಿನ್ನ ಆ ಅವನಿಗೆ ಹೆಂಡತಿಯೂ ಇದ್ದಾಳಲ್ಲ? ಅವಳಿಗೂ ಹೀಗೆ ಅನಿಸಿದರೆ ಏನು ಮಾಡುತ್ತಾನೆ ನಿನ್ನ ಆ ಅವನು? ನೋಡು ನನಗೆ ಅನ್ನಿಸಿದ್ದನ್ನು ಹೇಳಿದ್ದೇನೆ. ಯೋಚನೆ ಮಾಡು. ಆದರೆ ನೀನು ಏನೇ ಹೇಳು ಮಾರಾಯ್ತಿ ಈ ಬೇಡನ ಬೆಲೆಗೆ ಸಿಕ್ಕ ಹುಲ್ಲೆಯ ಸ್ಥಿತಿ ಯಾರಿಗೂ ಬರಬಾರದು ಕಣೇ. ಅದರ ಹೊರಗಿರುವವರೆಲ್ಲಾ ನನ್ನ ಹಾಗೆ ನೀತಿ ಉಪದೇಶ ಮಾಡುವವರೇ. ಇರಲಿ ಹೋಗಿ ಬಾ ನಿನಗೆ ಒಳ್ಳೆಯ ದಾಗಲಿ J®ègÀ°èAiÀÄÆ M§â CªÀÄÈvÀªÀÄw EgÀ¯ÁgÀ¼ÉÃ? ¸ÀgÀ¸Àéw PÉ ಹೌದು ಎಲ್ಲರಲ್ಲೂ ಒಬ್ಬ ಅಮೃತಮತಿ ಇರುತ್ತಾಳೆ ಎಂಬ ಗ್ರಹಿಕೆ ಈ ಪೋಸ್ಟ್ ನ ಹಿಂದಿದೆ. ಬದಗನ ಹಿಂದೆ ಹೋಗುವುದೊಂದು ಪರ್ಯಾಯವಿರಬಹುದು-ಅದು ಬದಗನಲ್ಲೇ ನಿಂತರೇ! ಯಶೋಧರನ ಹಾಗೆ ಬದಗನೂ ಬೇಸರ ಬಂದರೆ ಆಗ ಏನು ಎಂಬ ಪ್ರಶ್ನೆ. ಎಲ್ಲವೂ ಬದಲಾಗುತ್ತಲೇ ಹೋಗುತ್ತದಲ್ಲವೇ? (ಅನಿಚ್ಛ ಬೋಧ !) ನಮ್ಮೊಳಗೆ ಬದುಕಿನ ಬಗ್ಗೆ ಒಂದು ಸ್ಪಷ್ಟತೆ, ಗುರಿ ಇದ್ದರೆ ಬದಲಾವಣೆಗಳನ್ನು ಅವು ಬಂದು ಹಾಗೆ ಸ್ವೀಕರಿಸುತ್ತೇವೆ. ಅಂತಹ ಪ್ರಬುದ್ಧತೆ ಇರುವವರಿಗೆ ಅಲ್ಲ ಈ ನನ್ನ ಮಾತುಗಳು. ಹೆಂಗಸು ಗಂಡಿಗಿಂತ ಪ್ರಬುದ್ಧಳು ಹೀಗಾಗಿ ಈ ವಿಷಯದಲ್ಲಿ ಗಂಡಸರು (ಅಂತಃಪುರ ತುಂಬಿಸಿಕೊಳ್ಳುವ) ಹೆಂಗಸರಿಗೆ ಮಾದರಿಯಾಗಬೇಕಿಲ್ಲ ಎನ್ನುವುದು ನನ್ನ ಅಭಿಪ್ರಾಯ. ಇದು ಸಾಂಪ್ರದಾಯಕವಾಗಿ ಕಾಣಬಹುದು. ಆದರೆ practical ಆಗಿಲ್ಲವೇ? ಗಂಡಸು ಮಾಡ್ತಾನೆ ಅದಕ್ಕೇ ಹೆಂಗಸೂ ಮಾಡಬೇಕು ಎನ್ನುವುದಕ್ಕಿಂತ ಹೆಂಗಸರಿಗೇ ಇರುವ ಅನನ್ಯ ಶಕ್ತಿಸಾಧ್ಯತೆಗಳ ಕಡೆಗೆ ಗಮನಹರಿಸುವುದು ಒಳ್ಳೆಯದಲ್ಲವೇ? 9/1/19 ಬೆಂಕಿಯಿಂದ ಬಾಣಲೆಗೆ....... ೩೨ರ ಆಸುಪಾಸಿನಲ್ಲಿರುವ ರೇವತಿ ಚೆಂದದ ಹುಡುಗಿ ಪ್ರತಿಭಾವಂತೆಯೂ ಕೂಡ. ಒಂದೆರೆಡು ಒಳ್ಳೆಯ ಕತೆಗಳನ್ನು ಬರೆದಿದ್ದಾಳೆ. ಕಳೆದ ತಿಂಗಳು ಹತ್ತು ಹದಿನೈದು ಕತೆಗಳ ಹಸ್ತಪ್ರತಿಯನ್ನು ನನ್ನ ಮನೆಗೆ ತಂದು ಕೊಟ್ಟು ಅವುಗಳನ್ನು ನೋಡಿಕೊಡಬೇಕೆಂದು ಕೇಳಿಕೊಂಡಳು. ಪುರುಸೊತ್ತು ಇಲ್ಲದಿದ್ದರೂ ಪ್ರತಿಭವಂತೆಯಾದ ಅವಳನ್ನು ನಿರಾಶೆಗೊಳಿಸಬಾರದೆಂದು ಒಪ್ಪಿಕೊಂಡಿದ್ದೆ. ಒಂದು ದಿನ ಫೋನ್ ಮಾಡಿ ಮನೆಗೆ ಬಂದಳು. ಮೇಡಂ ಕತೆಗಳನ್ನು ಓದಿದಿರಾ? ಕುಳಿತುಕೊಳ್ಳುತ್ತಾ ಕೇಳಿದಳು. ನಾನು ಅವಳಿಗೆ ಏನು ಉತ್ತರ ಕೊಡಬೇಕೆಂದು ತಿಳಿಯದೇ ಒಳಗಿನಿಂದ ನೀರು ತಂದುಕೊಟ್ಟೆ. ಮತ್ತೊಮ್ಮೆ ಕೇಳಿದಳು, ‘ಹೇಳಿ ಮೇಡಂ ನನ್ನ ಕತೆಗಳು ಹೇಗೆನ್ನಿಸಿತು?’ ಹೊಳೆವ ಕಣ್ಣುಗಳು, ಬೆನ್ನತುಂಬ ಬಿರುಮುಡಿ, ಎತ್ತರದ ನಿಲುವಿನ ಹುಚ್ಚು ಹಿಡಿಸುವ ರೂಪ. “ಒಬ್ಬಳೇ ಎಲ್ಲೂ ಹೊರಗೆ ಹೋಗಬೇಡ ಗಂಡಸರು ನಿನ್ನ ಹರ್ಕೊಂಡು ತಿಂದು ಬಿಡ್ತಾರೆ” ಎಂದು ಛೇಡಿಸಿದ್ದೆ ಒಮ್ಮೆ. ‘ಮೇಡಂ ನೀವು ಹೀಗೆ ಹೇಳ್ತಿರಾ?” ಎನ್ನುವ ಅರ್ಥದಲ್ಲಿ ನಿಬ್ಬೆರಗಾಗಿ ನೋಡಿದ್ದಳು. ಹೌದು ಕಣೆ, ಸೆಮಿನಾರಿನಲ್ಲಿ ಮಾತಾಡೋದೇ ಬೇರೆ. ಮಗಳಾದ್ರೆ ಮಾತಾಡೋದೆ ಬೇರೆ. ನೀನು ನನ್ನ ಮಗಳ ತರಹ. ಕಾನೂನು ನಮ್ಮ ಪರವಾಗಿ ಇದೆ ನಿಜ. ಆದ್ರೆ ಜೀವನ ಪೂರ್ತಿ ಕೋರ್ಟು ಕಚೇರಿ ಅಲೆಯೋಕ್ಕೆ ಆಗುತ್ತಾ? ತಲೆ ಗಟ್ಟಿ ಇದೆ ಅಂತ ಗೋಡೆ ಹಾಯೋದೇ? ನಾನು ಒಬ್ಬ ತಾಯಿಯಾಗಿ ಹೇಳ್ತಿದೀನಿ. ಸೆಮಿನಾರ್ ನಲ್ಲಿ ಪ್ರಬಂಧ ಮಂಡಿಸೋ ಪ್ರಬಂಧಕಾರಳಾಗಿ ಅಲ್ಲ. ಎಂದಿದ್ದೆ ಈ ಮಾತಿಗೆ ಆಗಲೇ ಎಂಟು ಹತ್ತು ವರುಷಗಳಾದವು. “ಮೇಡಂ ನನ್ನ ಕತೇ...” ಎಂದಳು ನೋಡು ರೇವತಿ ನಿನ್ನ ಕತೆಗಳಲ್ಲಿ ಒಳ್ಳೆಯ ಕತೆಗಳಾಗುವ ಎಲ್ಲಾ ಲಕ್ಷಣಗಳೂ ಇವೆ. ಒಳ್ಳೆಯ ಐಡಿಯಾಲಜಿ ಇದೆ. ಆದರೆ ಕತೆ ಎಂದರೆ ಕೊನೆಗೂ ಒಂದು ಕಲಾಕೃತಿಯಾಗಬೇಕಲ್ಲವಾ? ಅದರ ಬಗ್ಗೆ ಇನ್ನೂ ಸ್ವಲ್ಪ ಯೋಚನೆ ಮಾ ಡು. ಕನ್ನಡದ ಒಳ್ಳೆಯ ಕತೆಗಳನ್ನು ಹೆಚ್ಚು ಓದು, ಕತೆಗೆೊಂದು ಪರಂಪರೆಯಿದೆ. ಒಳ್ಳೆಯ ಕತೆಗಾರ್ತಿಗೆ ಅದರ ಬಗ್ಗೆ ಅರಿವಿರಬೇಕು. ಒಳ್ಳೆಯ ಕತೆಯಾವುದು ಕೆಟ್ಟ ಕತೆ ಯಾವುದು ಅದಕ್ಕೆ ಕಾರಣಗಳೇನು ಎಂಬುದನ್ನು ಹೇಳಭುದೇ ಹೊರತು ಕತೆಯನ್ನು ಹೇಗೆ ಬರೆಯಬೇಕೆಂದು ಹೇಳುವುದು- ಕಷ್ಟ. ಸ್ವಲ್ಪ ತಡೆ. ಅವಸರ ಮಾಡಬೇಡ, ಇದು ನಿನ್ನ ಮೊದಲನೆಯ ಸಂಕಲನ. First impression is the best impression ಎನ್ನುತ್ತಾರೆ ನೋ ಡು. ಹಾಗೆ ಆಗಬೇಕಲ್ವಾ? ಅದನ್ನು ಇನ್ನಷ್ಟು fine ಹೇಗೆ ಮಾಡಬಹುದು ಅಂತ ಯೋಚನೆ ಮಾಡು. ನಿರಾಶಳಾಗುವುದು ಬೇಡ ನಿನಗೆ ಒಳ್ಳೆಯದಾಗಲೀ ಎಂದು ಹೇಳಿದಾಗ , “ಏನ್ ಮೇಡಂ ಹೀಗೆ ಹೇಳ್ತೀರಾ? ಯಾವುದೋ ದೊಡ್ಡ ಸಾಹಿತಿಯ ಹೆಸರು ಹೇಳಿ ಮೊನ್ನೆ ‘ಆ’ ಸರ್ ಸಿಕ್ಕಿದ್ದರು ತುಂಬಾ ಹೊಗಳಿದರು ಮೇಡಂ. "ನೀನು ಅದ್ಭುತ ಕತೆಗಾರ್ತಿ ಇನ್ನೂ ಯಾಕೆ ಸಂಕಲನ ತಂದಿಲ್ಲ ಮುನ್ನುಡಿಯನ್ನು ನಾನೇ ಬೇಕಾದರೆ ಬರೆದೇನು? ಇಷ್ಟು ಬುದ್ಧಿವಂತ ಹುಡುಗಿಯರು ಸುಮ್ಮನೆ ಕೂರುವುದಾ..." ಎಂದೆಲ್ಲಾ . ಅಂತಹವರು ಹೇಳಿದಮೇಲೆ....?. ಆ ಸಾಹಿತಿ ನನಗೂ ಪರಿಚಿತರೇ. ನನ್ನ ಬಗ್ಗೆ ರೇವತಿ ತಪ್ಪು ತಿಳಿಯಬಾರದೆಂದು " ನೋಡಮ್ಮಾ ನನಗೆ ಅನ್ನಿಸಿದ್ದನ್ನು ನಾನು ಹೇಳಿದೆ ಅಷ್ಟೇ. ಅದೂ ನೀನು ನನ್ನನ್ನು ಕೇಳಿದ್ದರಿಂದ ಇನ್ನು ನಿನ್ನ ಇಷ್ಟ " ಅವಳ ಕತೆಗಳ ಕಡತವನ್ನು ಮರಳಿಸಿ, ಜೊತೆಗೆ ಕನ್ನಡದ ಶ್ರೇಷ್ಠ ಕತೆಗಳ ಸಂಕಲನಗಳನ್ನೂ ಅವಳ ಕೈಗಿತ್ತೆ. ಸ್ವಲ್ಪ ದಿನಗಳಾದನಂತರ ಮತ್ತೆ ಯಾವುದೋ ವಿಚಾರಸಂಕಿರಣದಲ್ಲಿ ಸಿಕ್ಕಿದ್ದಳು. ಊಟಕ್ಕೆ ನನ್ನ ಬಳಿಯೇ ಬಂದು ಕುಳಿತಳು. ‘ನಿಮ್ಮ ಕಥಾಸಂಕಲನ ಎಲ್ಲಿಯವರೆಗೆ ಬಂತು?’ ಕೇಳಿದೆ. ತಲೆ ತಗ್ಗಿಸಿದಳು, ಮುಖ ಕೆಂಪಾಗಿತ್ತು. ಅಳುವುದೊಂದು ಬಾಕಿ. ಮೇಡಂ 'ಆ' ಸರ್ ಮುನ್ನುಡಿ ಬರ್ಕೊಡ್ತೀನಿ ಅಂದಿದ್ರಲ್ಲ? ಅದಕ್ಕೆ ಎಲ್ಲಾನೂ ಹೊತ್ಕೊಂಡು, ಹೋದವಾರ ಅವರು ಮುಖ್ಯ ಅತಿಥಿಗಳಾಗಿದ್ದರಲ್ಲಾ ಆ ಕಾರ್ಯಕ್ರಮಕ್ಕೆ ಹಾಜರಾಗಿ , ಕೊನೆಗೆ ಹಸ್ತಪ್ರತಿಗಳನ್ನು ಕೊಡಲು ಹೋದೆ. “ಇಲ್ಲಿ ಬೇಡ, ಅದನ್ನೆಲ್ಲಾ ತೊಗೊಂಡು ಹೋಗೋಕೆ ಆಗೋಲ್ಲ ಮನೆಗೆ ಬನ್ನಿ” ಅಂದರು. ಆಗ ನನ್ನ husband ಕೈಲಿ ಕಳಿಸ್ತೀನಿ ಅಂದೆ. “ನಿಮ್ಮ ಕತೆಗಳನ್ನ ತುಂಬಾ ರಿಪೇರಿ ಮಾಡಬೇಕು, ಅಲ್ಲಲ್ಲಿ ಬಹಳ ಜಾಳಾಗಿವೆ. ಅಲ್ಲದೇ ಸಮಕಾಲೀನ ಧೋರಣೆಗಳ ಬಗ್ಗೆ ಕತೆ ಬರೆಯುವವರಿಗೆ ಒಳ್ಳೆಯ ಅರಿವಿರಬೇಕು ಅದನ್ನೆಲ್ಲಾ ದೀರ್ಘವಾಗಿ ಚರ್ಚೆ ಮಾಡಬೇಕಾಗುತ್ತೆ, ಅದಕ್ಕೆ ಮನೇಗೆ ಬನ್ನಿ, ಆರಾಮವಾಗಿ ಮಾತಾಡೋಣ ಅಂದಿದ್ದು. ನಿಮ್ಮ ಮನೆಯವರು ಹೇಳಿ ಕೇಳಿ ಉದ್ಯಮಿ ಅವರಿಗೆ ಇದೆಲ್ಲಾ ಏನು ಗೊತ್ತಿರುತ್ತೆ ? ಅವರನ್ನು ನೀವು ಕರ್ಕೊಂಡು ಬಂದ್ರೆ ಅವರಿಗೆ ಬೋರ್ ಆಗೋಲ್ವಾ ಸುಮ್ನೆ ಅವರಿಗೆ ಯಾಕೆ ತೊಂದರೆ ಕೊಡ್ತೀರಾ" ಅಂದ್ರು, ಅವರ ಮನೆಗೆ ಒಬ್ಬಳೆ ಹೇಗೆ ಹೋಗಲಿ ಮೇಡಂ? ಇಂತಹ ಕತೆಗಳನ್ನು ನಾನು ಬಹಳ ಕೇಳಿದ್ದೆನಾದರೂ ಇಷ್ಟು ಹತ್ತಿರದಿಂದ ನೋಡುವ 'ಭಾಗ್ಯ' ದೊರೆತಿರಲಿಲ್ಲ. 'ಬಿಚ್ಚಿಟ್ಟ ಬುತ್ತಿ' ಎನ್ನುವ ಒಂದು ಸಂದರ್ಶನದಲ್ಲಿ ಎಸ್.ಎನ್. ಸೇತುರಾಮ್ ಅವರು " ಹೆಣ್ಣಿಗೆ ಮುಕ್ತ ಅವಕಾಶ ಬೇಕು ಅಂತ ಹೇಳಿಬಿಟ್ರು ಆದರೆ ಅದರಿಂದ ಗಂಡಿಗೇ ಲಾಭ ಆಗುತ್ತೆ ಅಂತ ಯೋಚಿಸಲಿಲ್ಲ. ನಮ್ಮ ಸಮಾಜ, ಹೆಣ್ಣುಮಕ್ಕಳ ಈ ಮುಕ್ತತೆಗೆ ಸಿದ್ಧವಾಗಿದೆಯೇ ಇಲ್ಲವೆ ಎಂದು ಯೋಚನೆ ಮಾಡಲಿಲ್ಲ. ಇವಳಿಗೆ ಹೇಗೆ ಕಾಣಬೇಕು ಎಂದು ಹೇಳಿಕೊಟ್ಟೆವೇ ಹೊರತು ಅವಳನ್ನು ಹೇಗೆ ಕಾಣಬಾರದು ಎಂದು ಇವನಿಗೆ ಹೇಳಿಕೊಡಲಿಲ್ಲ. ಎಂದರು. ಹೆಣ್ಣು ಒಳಗಿದ್ದರೂ, ಹೊರಗೆ ಕಾಲಿಟ್ಟರೂ ಪಿತೃಪ್ರಧಾನ ವ್ಯವಸ್ಥೆಗೇ ಲಾಭ!!!!!! “ಮೇರಿಕೋಮ್ “ ಚಿತ್ರ ನೋಡಿಕೊಂಡು ಬಂದು ಬಹಳ ಉತ್ಸಾಹದಿಂದ ಅವಳೇ ಈ ಎಲ್ಲ ಸಮಸ್ಯೆಗೆ ಪರಿಹಾರವೆಂದು ಒಂದು ಲೇಖನ ಬರೆದಿದ್ದೆ. ಆದರೆ ಯಾರ ಯಾರ ಹತ್ತಿರ ಗುದ್ದಾಡುವುದು? ಎಲ್ಲೆಲ್ಲಿಗೆ #Me too ವನ್ನು ಕೊಂಡೊಯ್ಯುವುದು? ಅಲ್ಲದೇ ಎಲ್ಲರಿಗೂ ಮೇರಿಕೋಮ್ ಆಗಲು ಸಾಧ್ಯವೇ? ಇದು ಮೇಲು ನೋಟಕ್ಕೆ ಕೇವಲ ಹೆಣ್ಣುಮಕ್ಕಳ ಸಮಸ್ಯೆಯಾಗಿ ಕಾಣಿಸುತ್ತದೆ ಆದರೆ ಇದು ಗಂಡಿನ ಸಮಸ್ಯೆಯೂ ಹೌದು. ಹೆಣ್ಣಿನ ಸಾಮಿಪ್ಯವನ್ನು ನಿಭಾಯಿಸುವುದರ ಸಮಸ್ಯೆ. ನಮ್ಮ ವ್ಯವಸ್ಥೆಗೆ ಲಾಗಾಯ್ತಿನಿಂದಲೂ ಇದು ಒಂದು ಸಮಸ್ಯೆ ಎಂದು ಎನಿಸಲೇ ಇಲ್ಲ. (ಏಕೆಂದರೆ ಹೆಣ್ಣು ಒಳಗೇ ಇದ್ದಳಲ್ಲಾ?) ಹೀಗಾಗಿ ಈ ನಿಟ್ಟಿನಲ್ಲಿ ಯೋಚಿಸಲೇ ಇಲ್ಲ. ಇಲ್ಲಿ ಇಬ್ಬರೂ ಬಲಿಪಶುಗಳೇ.... 25/1/19. ಎಸ್. ಎನ್. ಸೇತುರಾಮ್ ಅವರು ಕನ್ನಡ ರಾಜ್ಯೋತ್ಸವದ ಒಂದು ಕಾರ್ಯಕ್ರಮದಲ್ಲಿ "ಕನ್ನಡ ಧಾರವಾಹಿಗಳವರೆಲ್ಲರೂ ವಿಷದ ಬಾಟ್ಲಿಯನ್ನು ಹಿಡಿದುಕೊಂಡೇ ತಿರಗ್ತಾ ಇದ್ದಾರೆ. ೬೬ ವರುಷ ಆಯ್ತು, ಈಗ ವಿಷ ತೊಗೋಳ್ಳಬೇಕೆಂದ್ರೂ ಅದು ಎಲ್ಲಿ ಸಿಗುತ್ತೆ ಅಂತ ಗೊತ್ತಿಲ್ಲ. ವಿಷ ಎಲ್ಲಿ ಸಿಗುತ್ತೆ ಅಂತಾ ನಿಮಗೆ ಗೊತ್ತಾ ಸಾರ್?" ಎಂದು ಸಭಿಕರನ್ನು ಕೇಳುತ್ತಾರೆ. ಅವರು ಮುಂದುವರೆದು "ಸಾಮಾನ್ಯಜನರಿಗೆ ಬೇಕಾದುದನ್ನು ನಾವು ಕೊಡುತ್ತೇವೆಂದು ಧಾರಾವಾಹಿ ಮಾಡುವವರು ಹೇಳುತ್ತಾರೆ, ಸಾಮಾನ್ಯ ಜನ ಏನು ಅಷ್ಟು ಗಬ್ಬೆದ್ದು ಹೋಗಿದ್ದಾರಾ? ಬೌದ್ಧಿಕವಾದುದಕ್ಕೆ ಅವರೇನೂ ಅರ್ಹರಲ್ಲವಾ?...TRP ಯನ್ನೂ ಹಣ ಕೊಟ್ಟು ಕೊಂಡು ಕೊಳ್ಳುತ್ತಾರಂತೆ" ಎಂದು ಹೇಳಿದುದು ಎಷ್ಟು ಸತ್ಯ! ಸತ್ಯವನ್ನು ಎದೆಗೆ ಒದ್ದು ಹೇಳುತ್ತಾರೆ, ಅದಕ್ಕೇ ಅವರ ಮಾತುಗಳು, ಕತೆಗಳು ಧಾರಾವಾಹಿಗಳೆಂದರೆ ನನಗೆ ಮೆಚ್ಚುಗೆ. ಉದ್ಯಮಿಯೊಬ್ಬ ಹೇಳಿಕೊಂಡಿದ್ದ: ಏನೇನೋ ತಯಾರು ಮಾಡಿ ಕೈಸುಟ್ಟುಕೊಂಡೆ. ದಡ ಹತ್ತಲಿಲ್ಲ. ಬೀದಿಗೆ ಬಂದಿದ್ದೆ. ಆದರೆ ಈಗ ವಿಷ ತಯಾರಿಸಲು ಶುರು ಮಾಡಿದ್ದೇನೆ. ಧಾರಾವಾಹಿಗಳವರಿಂದ ಈಗ ನನ್ನ ಉತ್ಪನ್ನಕ್ಕೆ ಬಹಳ ಬೇಡಿಕೆ. ನನ್ನ ಬಿಸಿನೆಸ್ಸು ಬಹಳ ಪ್ರವರ್ಧಮಾನಕ್ಕೆ ಬಂದಿದೆ. 26/1/19 ನಾಳೆ ನಡೆಯುವ ಫಂಕ್ಷನ್ ಗೆ ಯಾವ ಸೀರೆ ಉಟ್ಟುಕೊಳ್ಳಲಿ ಎನ್ನುವ ಸಂದಿಗ್ಧತೆ ಕೊನೆಗೊಳ್ಳುವುದು- ಹಿಂದಿನ ಫಂಕ್ಷನ್ ನಲ್ಲಿ ಯಾವ ಸೀರೆ ಉಟ್ಟಿದ್ದೆ,ಯಾವ ಸರ ಹಾಕ್ಕೊಂಡಿದ್ದೆ ಅದನ್ನು ಯಾರೆಲ್ಲ ನೋಡಿದ್ದರು? ನಾಳೆ ಯ ಕಾರ್ಯಕ್ರಮ ಕ್ಕೆ ಅವರುಗಳೇ ಬರುತ್ತಾರಾ ಇಲ್ಲ ಬೇರೆಯವರಾ? ಎಂಬುದು ಸ್ಪಷ್ಟ ವಾದ ಮೇಲೆಯೇ. ಈಚೀಚೆಗೆ ಯಾಕೊ ಕಳೆದ ಕಾರ್ಯಕ್ರಮದಲ್ಲಿ ಯಾವ ಸೀರೆ ಉಟ್ಟಿದ್ದೇ ಎಂಬುದೇ ನೆನಪಾಗುವುದಿಲ್ಲ. ಸೀರೆಗಳು ಹೆಚ್ಚಾಗಿವೆಯೋ ಅಥವಾ ಕಾರ್ಯಕ್ರಮ ಗಳೋ?ಇಲ್ಲ, ವಯಸ್ಸಿಗೆ ಸಹಜವಾಗಿ ಮರೆವು ಹೆಚ್ಚಾಗಿದೆಯೋ? ಹೊರಟು ನಿಂತಾಗ "ಏನು ನಿನಗೆ ಇದೊಂದೇ ಸೀರೇನಾ ಇರೋದು?" ಎಂದು ಇದರ ಬಗ್ಗೆ ಎಂದೂ ತಲೆಕೆಡಿಸಿಕೊಳ್ಳದ ಇವನು ಹೇಳಿದಾಗ, ಹೌದೇ!? ಇದನ್ನೇ ಯಾವಾಗಲೂ ಉಡುತ್ತಿದ್ದೇನೆಯೇ? ಎನಿಸುತ್ತದೆ. ಎಲ್ಲಾ ಪೊಳ್ಳಿಗೂ ವಿಸ್ಮೃತಿ ಹತ್ತಿಬಿಡಲಿ. ಸೀರೆ ಉಟ್ಟಿದ್ದೇ ನೆನಪಾಗದಿರಲಿ. ಅಕ್ಕ ನಿನ್ನಷ್ಟು ಧೈರ್ಯ ನನಗಿಲ್ಲ ಕಣೆ. ನಿನಗಿಂತ ೯೦೦ ವರುಷ ಮುಂದಿದ್ದೇನೆ. ಅಷ್ಟು ಆಧುನಿಕ. ಉನ್ನತ ಶಿಕ್ಷಣ!!!!!!! ಸ್ತ್ರೀ ವಾದಿ ಬೇರೆ ಮುಂಡ ಮೋಚ್ಕೋಳ್ಳದಕ್ಕೆ....... 5/2/19 ಬೆಟ್ಟ ಮಹಮದನ ಬಳಿಗೆ ಬಂದರೆ...... "ಧ್ರುವೀಕರಣ" ಈ ಶಬ್ದ ರಾಜಕಾರಣಕ್ಕೆ ಮಾತ್ರ ಮೀಸಲಾಗಿರಬೇಕಿಲ್ಲ.ಅದು ಕುಟುಂಬದೊಳಗಿನ ಗಂಡಹೆಂಡತಿಯರಿಗೂ ಅನ್ವಯಿಸಬಹುದು. “ನಾನೊಂದು ತೀರ ನೀನೊಂದು ತೀರ” ಎನ್ನುವ ಹಾಡೊಂದು ಕನ್ನಡದಲ್ಲಿದೆ. ಅದರಲ್ಲಿ ಒಂದು ಧ್ರುವ ಮಾತ್ರ ಆಧಿಕಾರ, ವ್ಯವಸ್ಥೆ ಪ್ರಭುತ್ವವೆಂದು ಯಾವಾಗಲೂ ಪ್ರಬಲ. ಅದಕ್ಕೇ ಅವುಗಳ ಮಧ್ಯೆ ಯಾವಾಗಲೂ ಜಗಳ. ತಂಜಾವೂರಿನ ತಮಿಳು ವಿ.ವಿ.ಯ ರಾಜಾರಾಂ ಎನ್ನುವ ಪ್ರಾಧ್ಯಾಪಕರು "ಶಂಡೆಯೆನ್ನಾಲೇ ಕಲ್ಯಾಣಂ ಕಲ್ಯಾಣಮೆನ್ನಾಲೆ ಶಂಡೆ" (ಮದುವೆಯೆಂದರೇನೇ ಜಗಳ, ಜಗಳವೆಂದರೇನೇ ಮದುವೆ)ಎಂದು ಯಾವಾಗಲೂ ಹೇಳುತ್ತಿದ್ದರು.(೧೯೮೨-೮೩) ಇಂತಹ ಪ್ರಬಲವೆಂದುಕೊಂಡಿರುವ ಧ್ರುವವೊಂದು ದುರ್ಬಲ ಎಂದು ನಂಬಿಸಲಾಗಿರುವ ಧ್ರುವದೊಳಕ್ಕೆ ಪ್ರವೇಶ ಮಾಡಿಬಿಟ್ಟರೆ? ಕುಟುಂಬದೊಳಗೆ ದೈಹಿಕವಾಗಿ ಅವು ಸಮೀಪದಲ್ಲಿರಬಹುದು ‘ಉತ್ತರಧ್ರುವದಿಂ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿರ’ಬಹುದು. ಆದರೆ ಅವೆರಡರ ಲೋಕದೃಷ್ಟಿಮಾತ್ರ ಬೇರೆ ಬೇರೆಯೇ! ಈ ಅತಿ ಧ್ರುವಗಳು ಹತ್ತಿರ ಬರುವುದು ಅಸಾಧ್ಯ. 'ಬೆಟ್ಟ ಮಹಮದನ ಬಳಿಗೆ' ಬರುವ ರೀತಿಯದು (ಅಸಾಧ್ಯ ಎನ್ನುವ ದೃಷ್ಟಿಯಿಂದ) ಹಾಗೆ ಬಂದರೆ ಏನಾಗುತ್ತದೆ ಎನ್ನುವುದಕ್ಕೆ, ಇಬ್ಬರ ಲೋಕದೃಷ್ಟಿಯೂ ಪರಸ್ಪರ ಮಿಲನಗೊಂಡು, ಹೆಣ್ಣುಗಂಡಿನ ಲೋಕದೃಷ್ಟಿಗಳ ನಡುವಿನ ಸಾಂಸ್ಕೃತಿಕ ಪೂವ್ರಗ್ರಹಗಳು ಕರಗಿ ಅವರಿಬ್ಬರ ನಡುವೆ ಒಂದು ಅರ್ಥಪೂರ್ಣ ಸಂಕಥನ ಏರ್ಪಡುತ್ತದೆ ಎನ್ನುವುದಕ್ಕೆ ಒಂದು ಉತ್ತಮ ಉದಾಹರಣೆ ಕೆ.ಸತ್ಯನಾರಾಯಣ ಅವರ "ಏನದು ಕಣಕಲೆ" ಪ್ರಬಂಧ (ಸ್ಕೂಲು ಬಿಡುವ ಸಮಯ). ಕನ್ನಡ ಸಾಹಿತ್ಯದ ತುಂಬಾ ಈ ಕಣಕಲೆಯ (ಪಿರಿಪಿರಿ ಯ) ಅತಿರೇಕಾವಸ್ಥೆಯನ್ನು 'ಮೂಕಜ್ಜಿಯಿಂದ ಹಿಡಿದು ಅಮ್ಮಚ್ಚಿಯವರೆಗೆ' ಕಾಣುತ್ತೇವೆ. ಈ ಕಣಕಲೆಗೆ ಕುಟುಂಬಲ್ಲಿರುವ ಧ್ರುವೀಕರಣವೇ ಕಾರಣ. ಇದು ವ್ಯವಸ್ಥೆಯ ಒಳಗಿರುವವರಿಗೆ ಕಾಣುವುದೇ ಇಲ್ಲ. ಇದನ್ನು ಕಾಣಲು ಎರಡೂ ಧ್ರುವಗಳು ತಮ್ಮ ಅಸ್ಮಿತೆಯನ್ನು ವಿಸ್ತರಿಸಿಕೊಳ್ಳಬೇಕು. ವಿಸ್ತರಿಸಿಕೊಳ್ಳುತ್ತಾ ಅದನ್ನು ಕಳೆದು ಕೊಳ್ಳಬೇಕು. ಇದು ಒಂದು ನಿರ್ಲಿಪ್ತ ಆನುಭಾವಿಕ ದೃಷ್ತಿಗೆ ಮಾತ್ರ ಸಿದ್ಧಿಸುವಂತಹದ್ದು. “ಈ ಪ್ರಬಂಧಕಾರರ ಹಿಂದಿನ ಪ್ರಬಂಧಗಳನ್ನು ಓದಿದವರಿಗೆ ಈ ಸಂಕಲನದ ರಚನೆಗಳು ಲಾಲಿತ್ಯದ ಕಡೆಗೆ ವಾಲಿರುವುದು ಗೋಚರಿಸುತ್ತದೆ” ಎಂದು “ಸ್ಕೂಲು ಬಿಡುವ ಸಮಯ” ಸಂಕಲನಕ್ಕೆ ಮುನ್ನುಡಿ ಬರೆದ ಸುಧಾಕರ ದೇವಾಡಿಗ ಅವರು ಅಭಿಪ್ರಾಯ ಪಡುತ್ತಾರೆ. ಲಾಲಿತ್ಯವಂತೂ ಅವರ ಎಲ್ಲ ಬರಹಗಳಲ್ಲಿ ಕಂಡು ಬರುವ ಅಂಶವಾಗಿದೆ. ಆದರೆ ನನಗೇನೋ ಇವು ಆತ್ಮ ಶೋಧನೆಯತ್ತ ಸಾಗಿವೆ ಎಂದೇ ಎನಿಸುತ್ತದೆ. ಅಸ್ಮಿತೆಯನ್ನು ವಿಸ್ತರಿಸಿಕೊಳ್ಳುತ್ತಾ ಅದನ್ನು ಕಳೆದುಕೊಳ್ಳುವ ಹಂತದಲ್ಲಿವೆ ಎಂದೇ ಎನಿಸುತ್ತದೆ. ಕೇಂದ್ರದ ಗುರುತ್ವಾಕರ್ಷಣೆಯಿಂದ ತಪ್ಪಿಸಿಕೊಂಡು ಅಂಚಿಗೆ ಸರಿಯುವ ಈ ಗುಣವನ್ನು ಅವರ ಮೊದಲ ಕಥೆಗಳಲ್ಲೇ ಕಾಣಹುದಾಗಿದೆ. 'ಕೆ.ಸತ್ಯನಾರಾಯಣ ಅವರ ಪ್ರಬಂಧಗಳಲ್ಲಿ ಕಣ್ಣಂಚಿನ ಲೋಕ” ಎಂಬ ಒಂದು ಲೇಖನವನ್ನು ಅವರ ‘ನಿಂತ ಬಂಡಿ' (೨೧೧೦) ಸಂಕಲನದ ಕುರಿತಾಗಿ ಬರೆದಿದ್ದೆ.ಈ ಅಂಚಿನ ಲೋಕವನ್ನು ದೇವಾಡಿಗರೂ ಗುರುತಿಸಿರುವುದು ತುಂಬಾ ಸಂತೋಷದ ಸಂಗತಿ. ಹೀಗೆ ಅವರ ಮೊದಲ ಕತೆಗಳಲ್ಲೇ ಬೀಜ ರೂಪದಲ್ಲಿ ಕಾಣಿಸಿಕೊಂಡ, ಅಸ್ಮಿತೆಯನ್ನು ವಿಸ್ತರಿಸಿಕೊಳ್ಳುವ ಈ ರೂಪ ಇಂದು ಬೆಳೆದು ಹೆಮ್ಮರವಾಗಿರುವುದು ನಮಗೆಲ್ಲಾ ಹೆಮ್ಮೆಯ ಸಂಗತಿ. ಒಂದು ಒಳ್ಳೆಯ ಪುಸ್ತಕದ ಓದು ಕೊಡುವ ಖುಷಿಗೆ ಸಮಾನವಾದುದು ಜಗತ್ತಿನಲ್ಲಿ ಯಾವುದೂ ಇಲ್ಲ. ಅಭಿನಂದನೆಗಳು ಸರ್. 5/2/19 ಎಲ್ಲಾದರೂ ಊರಿಗೆ ಹೊರಡಬೇಕು ಅಂದ್ರೆ 'ನಾನು ನಾಯಿ ಆಗಿಬಿಟ್ಟಿರ್ತೀನಿ' ಎನ್ನುವ ಗೆಳತಿಯ ಮಾತು ಊರಿಗೆ ಹೊರಡುವಾಗೆಲ್ಲಾ ನೆನಪಾಗುತ್ತದೆ. ಊರಿಗೆ ಹೊರಡೋದು ಸಾಕು ಈ ನಾಯಿಪಾಡೂ ಸಾಕು. ಒಳನಾಡಿನಲ್ಲಿ ಇರುವವರಿಗೇ ಮಜಾ. ಮನೆ ಬೀಗ ಹಾಕಿಕೊಂಡು ಅವರು ಎಲ್ಲೂ ಹೋಗಲಾರರು. ಅದೂ ಅಲ್ಲದೇ "ಅಯ್ಯೋ ನಮ್ಮೆಜಮಾನ್ರಿಗೆ ಊಟಕ್ಕೆ ತೊಂದರೆ ಆಗುತ್ತೆ" ಎನ್ನುವುದೇ ದೊಡ್ಡ ಕಾರಣ. ಹೊರನಾಡಿನಲ್ಲಿರುವ ನಮಗೆ ಮಾತ್ರ ಮನೆ ಮಕ್ಕಳು ಸಂಸಾರ, ಏನೂ ಇಲ್ಲ!!!! ಪ್ರತಿ ವರ್ಷ ಮಕ್ಕಳ ಶಾಲೆಗೆ ರಜೆ ಬಂದ ಮಾರನೆಯ ದಿನವೇ ಊರಿಗೆ "ಬೋರಿಯಾ ಬಿಸ್ತರ್" ಕಟ್ಟುವುದೇ. ಏನೇ ಬೋರಿ ಓಡಾಟ? ಅಂದ್ರೆ ಶಾನುಭೋಗರ ಮನೆ ಬೀಗರೂಟ ಅಂದ್ರಂತೆ. ನನಗೂ ೩೫ ವರುಷಗಳಿಂದ ಒಂದೇ ಸಮ ಈ ಓಡಾಟ ಸಾಕಾಗಿದೆ. ಪ್ರಯಾಣ ಹೊರಟಾಗೆಲ್ಲಾ ಮಾಲುತಾಯಿ ವಾಘ್ಮೋರೆ ನೆನಪಾಗುತ್ತಾಳೆ. ಎಪ್ಪತ್ತರ ಆಸುಪಾಸಿನ ವೃದ್ಧೆ. ಬಹಳ ಸಮಾಧಾನದ ಹೆಂಗಸು. ಕಂಡವರನ್ನೆಲ್ಲಾ ಮಾತನಾಡಿಸುವ ಪ್ರೀತಿ. ಒಂದು ದಿನವಾದರೂ ಗೊಣಗಿದವಳಲ್ಲ. ಕೊರಗಿದವಳಲ್ಲ. ಅಂತಹ ಪ್ರಬುದ್ಧ ಹೆಣ್ಣುಮಗಳನ್ನು ನಾನು ಕಂಡದ್ದೇ ಇಲ್ಲ. ಅಂತಹ ಒಳ್ಳೆಯ ಹೆಂಗಸಿಗೆ ಕ್ಯಾನ್ಸರ್. ಕೊನೆಯ ಸ್ಟೇಜ್ ಎಂದು ಗೊತ್ತಾಯಿತು. ನೋಡಲು ಹೋಗಿದ್ದೆ. ಮುಖದ ಮೇಲೆ ಅದೇ ಸಮಾಧಾನ. ತಾನು ಹೆಚ್ಚು ದಿನ ಬದುಕಲಾರೆ ಎಂಬುದು ಅವಳಿಗೆ ತಿಳಿದಿತ್ತು. "ಬಾರೇ..." ಕೈಹಿಡಿದು ಬಳಿ ಕೂರಿಸಿಕೊಂಡಳು. "ಈ ಪ್ರಯಾಣ ಅನ್ನೋದು ಎಷ್ಟು ಸುಖಕರವಾದದ್ದು ಅಲ್ಲವೇನೇ ? ಟೂಥ್ ಪೇಸ್ಟ್ ತೊಗೊಂಡೆಯಾ? ಬ್ರಶ್, ಬಾಚಣಿಗೆ ಇಟ್ಕೊಂಡೆಯಾ? ಗ್ಯಾಸ್ ಆಫ್ ಮಾಡಿದ್ಯಾ, ಟಿಕೆಟ್ ಇದ್ಯಾ? ತಂಟೆ ತಕರಾರಿಲ್ಲ......" ಬೊಚ್ಚು ಬಾಯಿತುಂಬಾ ನಕ್ಕಿದ್ದಳು. ಮಾರನೆಯ ದಿನವೇ ಹೋಗಿ ಬಿಟ್ಟಳು. ಅವಳ ಕೊನೆ ಘಳಿಗೆಯ ಮಾತುಗಳು ಮಾತ್ರ ಎದೆಯಾಳದಲ್ಲಿ ಪಟ್ಟಾಗಿ ಕುಳಿತು ಬಿಟ್ಟಿವೆ. 13/2/19 ಕೆಲವರು ಕೆಲಸದವಳಿಗೆ ಕೊಡುವ ಕಾಫಿಗೆ ನೀರು ಬೆರೆಸಿ, ಪಾತ್ರೆಯಲ್ಲೇ ಕೊಡುತ್ತಾರೆ.ಅದನ್ನು ತೊಳೆಯಲು ಹಾಕಿದ ಲೋಟಕ್ಕೆ ಅವಳೇ ಬಗ್ಗಿಸಿಕೊಂಡು ಕುಡಿಯಬೇಕು. ಫ್ರಿಜ್ ನಲ್ಲಿಟ್ಟ ರಾತ್ರಿಯ ತಂಗಳನ್ನು ಬಿಸಿ ಸಹ ಮಾಡದೇ ಹಾಗೇ ಕೊಡುವುದು ಅವರು ವಾಡಿಕೆ. ಅವಳಿಗೆ ಏನಾದರೂ ಕೊಡಬೇಕಾದರೆ ಅವಳನ್ನು ಮುಟ್ಟದೇ, ನೆಲದ ಮೇಲೆ ದೂರದಿಂದ ಇಡುವುದು. ಮೇಲಿನಿಂದ ಕೈಗೆ ಎಸೆಯುವುದು ಈ ಎಲ್ಲವನ್ನೂ ಬಾಲ್ಯದಲ್ಲಿ ನಮ್ಮ ಮನೆಯಲ್ಲಿಯೇ ಕಂಡವಳು ನಾನು. (ಅಷ್ಟೇ ಅಲ್ಲದೆ ನನ್ನ ಮಡಿ ಅಜ್ಜಿಗೆ ನಾನೇ ಅಸ್ಪ್ರಶ್ಯ ಳಾಗಿದ್ದೆ) ಈ ಅಸ್ಪೃಶ್ಯತಾ ಆಚರಣೆಯ ವಿರುದ್ಧ ಬಂಡೆದ್ದವಳು. ಈಗಲೂ ಕೆಲವರ ಮನೆಯಲ್ಲಿ ಇದನ್ನು ಕಾಣುವಾಗ ಮನಸ್ಸು ಅಸ್ವಸ್ಥವಾಗುತ್ತದೆ. ಕೆಲಸದವಳು ಕೆಲಸ ಮಾಡುತ್ತಾಳೆ ಅದಕ್ಕೆ ತಕ್ಕ ಸಂಬಳ ನಾವು ಕೊಡುತ್ತೇವೆ. ಹಾಗೆಂದ ಮಾತ್ರಕ್ಕೆ ಅವಳು ಹಳಸಲು, ತಂಗಳು ತಿನ್ನಲು ಯೋಗ್ಯಳೇ? ಅವಳೇನು ಕಸದ ತೊಟ್ಟಿಯೇ? ಕೆಲಸದ ಘನತೆಯನ್ನು ಎತ್ತಿ ಹಿಡಿಯಬೇಡವೇ? ಒಂದು ದಿನ ಅವಳು ಬಾರದಿದ್ದರೆ (ಅದೂ ಅತಿಥಿಗಳು ಬಂದಾಗ) ಮನೆಗೆ ಮನೆಯೇ ಅಲ್ಲೋಲ ಕಲ್ಲೋಲ .ಹೀಗಿದ್ದೂ ಅವರುಗಳನ್ನು ಬಳಸಿಕೊಂಡು ಬಿಸಾಡುತ್ತೇವೆ. ಅದು ನಮ್ಮ ಹಕ್ಕು. 23/2/19 ನಾನು ಮತ್ತು ನನ್ನ ರಿಹಾ....... ಮನೆ ಕೆಲಸದವರ ಬಗ್ಗೆ ನೆನ್ನೆ ಹಾಕಿದ ನನ್ನ ಪೋಸ್ಟಿಗೆ ಅನೇಕರಿಂದ, ನಾನು ಭಾವಿಸಿರುವುದೇ ತಪ್ಪೇನೋ ಎನ್ನುವಷ್ಟರಮಟ್ಟಿಗೆ ಆಶಾದಾಯಕ ಪ್ರತಿಕ್ರಿಯೆಗಳೇ ಬಂದವು. ಅದು ಬಹಳ ಸಂತೋಷ. ಪ್ರತಿಕ್ರಿಯಿಸಿದವರಲ್ಲಿ ಯಾರೂ ಕೆಲಸದವರು ಇರಲಿಲ್ಲ ಎನ್ನುವುದು ಈ ಚರ್ಚೆಗೆ ಇರುವ ಇನ್ನೊಂದು ಆಯಾಮವನ್ನು ಮರೆಮಾಚುತ್ತದೆ ಎಂಬುದೂ ಸತ್ಯ. ಕೆಲಸದವರ ಸ್ಥಾನಮಾನಗಳಲ್ಲಿ ಬಹಳ ಬದಲಾವಣೆಗಳಾಗಿವೆ ಅವು ಹಿಂದಿನಂತೆ ಇಲ್ಲ ಎಂಬುದೂ ಸ್ವಾಗತಾರ್ಹವಾದರೂ ಅವರ ಸ್ಥಾನಮಾನಗಳ ಬಗ್ಗೆ ಅವರ ಸಮಸ್ಯೆಗಳ ಸ್ವರೂಪದ ಬಗ್ಗೆ ಗೂಗಲ್ ಮಾಮ ಕೊಡುವ ಅಂಕಿ ಅಂಶಗಳನ್ನು ನೋಡಿದರೆ ಅವರ ಸ್ಥಿತಿ ಅಷ್ಟು ಆಶಾದಾಯಕವಾಗಿಲ್ಲವೆಂದೇ ತಿಳಿದುಬರುತ್ತದೆ. ಕೇವಲ ಮೇಲ್ಪದರದ ಬದಲಾವಣೆಗಳಾಗಿವೆಯೇ ಹೊರತು ಅವರ ಸ್ಥಿತಿಗತಿಯಲ್ಲಿ ಮೂಲಭೂತ ವ್ಯತ್ಯಾಸಗಳಾಗಿಲ್ಲವೆಂದೇ ಎನಿಸುತ್ತದೆ. ಗೂಗಲ್ ಮಾಮನನ್ನು ಬಿಡಿ, ಮನೆಕೆಲಸದವರನ್ನು 'ಬಹಳ ಚೆನ್ನಾಗಿ' ನೋಡಿಕೊಳ್ಳುವ ನಮ್ಮ ಮನೆಗಳಲ್ಲೇ ಏನಾದರೂ ವಸ್ತು ಕಳವಾಯಿತೆಂದರೆ, (ರಾತ್ರಿಯ ಅಡುಗೆ ಹೆಚ್ಚಾಗಿ ಉಳಿಯಿತೆಂದರೂ) ಮೊದಲು ಮನಸ್ಸಿಗೆ ತಟ್ಟನೆ ಹೊಳೆಯುವ ಹೆಸರೇ ಮನೆಕೆಲಸದವರದ್ದು. ಇದಕ್ಕೆ ಅಪವಾದಗಳಿರಬಹುದು. ಹೊರ ಊರಿಗೇನಾದರೂ ಹೋಗಬೇಕೆಂದರೆ ಕೆಲಸದವಳಿಗೆ ಮನೆಯ ಕೀಲಿ ಕೊಟ್ಟು ಮನೆಯನ್ನು ಅವಳ ಸುಪರ್ದಿಗೆ ಒಪ್ಪಿಸಿ ಹೋಗುವುದು ಮುಂಬಯಿಯಲ್ಲಿ ಸರ್ವೇ ಸಾಮಾನ್ಯ. ಹೀಗೆ ನಾವೂ ರಿಹಾನಾಳಿಗೆ ಸಹಾಯವಾಗಲೆಂದು ಪಕ್ಕದ ಮನೆಯಲ್ಲಿ ಬೀಗದ ಕೈಯಿಟ್ಟು ಹತ್ತು ದಿನಗಳ ಮಟ್ಟಿಗೆ ಯಾವುದೋ ಕಾರ್ಯನಿಮಿತ್ತ ಒಳನಾಡಿಗೆ ಹೋಗಿದ್ದೆವು. ಹೀಗೆ ಹತ್ತು ದಿವಸ ಮನೆಬಿಟ್ಟು ಹೋಗಿ ಮತ್ತೆ ಮರಳಿ ಮನೆಗೆ ಬಂದು ಬಾಗಿಲು ತೆಗೆದಾಗ ಮನೆ ಚಕಾ ಚಕ್ ಹೊಳೆಯುತ್ತಿತ್ತು. ಬಾಲ್ಕನಿಯ ಗಾಜುಗಳನ್ನು ಒರೆಸಿ, ಫ್ಯಾನುಗಳನ್ನು , ಫ್ರಿಜ್ , ಬಚ್ಚಲು, ವಾಷ್ಬೇಸಿನ್, ಡೈನಿಂಗ್ ಟೇಬಲ್, ಕಂಪ್ಯೂಟರ್ ಟೇಬಲ್ ಇತ್ಯಾದಿ ಎಲ್ಲವನ್ನೂ ಸ್ವಚ್ಛಗೊಳಿಸಿದ್ದಳು. ಅಡುಗೆ ಕೋಣೆಯಲ್ಲಂತೂ ಪಾತ್ರೆ ಪಡಗಗಳೆಲ್ಲಾ ಸ್ವಸ್ಥಾನ ಸೇರಿದ್ದವು. ಒರೆಸಿದ ಒಲೆ, ಕಟ್ಟೆ ಮನಸ್ಸಿಗೆ ಮುದನೀಡಿದವು. ಬಾಲ್ಕನಿಯಲ್ಲಿದ್ದ ಗಿಡಗಳು ನಳನಳಿಸುತ್ತಿದ್ದವು. ಮಂಚದ ಹಾಸು ಹೊದಿಕೆಗಳನ್ನು ಒಗೆದು ಮಡಿಯಾದ ಹಾಸುಗಳನ್ನು ಸುಕ್ಕಿಲ್ಲದಂತೆ ಹಾಸಿದ್ದಳು. ಒಣಗಿದ ಬಟ್ಟೆಗಳನ್ನು ಇಸ್ತ್ರಿ ಮಾಡಿದಂತೆ ನೀಟಾಗಿ ಮಡಚಿ ಮಂಚದ ಮೇಲೆ ಇಟ್ಟಹೋಗಿದ್ದಳು ರಿಹಾನಾ.ಯಾಕೆಂದರೆ ನಾನು ಬಟ್ಟೆಯ ಕಪಾಟುಗಳಿಗೆ ಬೀಗ ಜಡಿದು ಕೊಂಡು ಹೋಗಿದ್ದೆ. (ಅದಕ್ಕೆ ಬೀಗ ಹಾಕಬೇಕಾದ ಅವಶ್ಯಕತೆ ಇರಲಿಲ್ಲ. ಆದರೂ ಕೆಲವು ಬೆಲೆ ಬಾಳುವ ವಸ್ತ್ರಗಳಿದ್ದವು ಎನ್ನುವ ಕಾರಣಕ್ಕೆ ಬೀಗಹಾಕಿದ್ದೆ.) ಊರಿನಿಂದ ಮನೆಗೆ ಬಂದ ತಕ್ಷಣ ಕನ್ನಡಿಯಂತೆ ಹೊಳೆಯುತ್ತಿದ್ದ ಮನೆ ನೋಡಿ ಖುಷಿಯಾಯಿತಾದರೂ ಕಪಾಟುಗಳಿಗೆ ಬೀಗ ಜಡಿದಿದ್ದಕ್ಕೆ ನನ್ನ ಬಗ್ಗೆ ನನಗೇ ಅಸಹ್ಯವೆನಿಸಿತು. ಕೈಯೆತ್ತಿ ನೀಡಿದರೂ ಸಂಕೋಚ ಪಡುವ ಅವಳ ಸ್ವಭಾವ ಗೊತ್ತಿದ್ದರೂ ಗೋಡಂಬಿ ದ್ರಾಕ್ಷಿಗಳನ್ನು ಫ್ರಿಜ್ಜಿನಲ್ಲಿ ಬಚ್ಚಿಟ್ಟಿದ್ದೆ. ಗಂಡಸರಿಗಿಂತ ಹೆಂಗಸರಿಗೆ ಮನೆಯ ಸ್ವಚ್ಛತೆಯ ಬಗ್ಗೆ ಹೆಚ್ಚು ಕಾಳಜಿ. ಕೆಲವೊಮ್ಮೆ ಗೀಳು ಕೂಡಾ. ಮನೆಯ ಸ್ವಚ್ಛತೆ, ಸುಖದ ಅನುಭವ ಕೊಡುವಂತೆ ಇನ್ನಾವುದೂ ಕೊಡದು. ಅಂತಹ ಸುಖದ ಅನುಭವ ಕೊಡುತ್ತಿರುವವಳು ನನ್ನ ರಿಹಾನ. ರಿಹಾನಾಳನ್ನು ನನ್ನ ಮನೆಯ ಲಕ್ಷ್ಮಿ, ನನ್ನ ಮಗಳು ಎಂದೇ ಎಲ್ಲರಿಗೆ ಪರಿಚಯಿಸುತ್ತಿದ್ದೆ. ಈಗ ಕಪಾಟಿಗೆ ಬೀಗ ಹಾಕುವುದರ ಮೂಲಕ ಆ ಮಗಳಿಗೆ, ಮಹಾಲಕ್ಷ್ಮಿ ಗೆ ಅಪಮಾನಮಾಡಿದ ಪಾಪ ಪ್ರಜ್ಞೆ ಕಾಡುತ್ತಿದೆ. ನೂರು ಗ್ರಾಂ ಬಾದಾಮಿ ತಾನೇ? ಮನೆ ಮಗಳಲ್ಲದೆ ಇನ್ನಾರು ತಿನ್ನಬೇಕು ಎಂಬ ಯೋಚನೆ ಒಮ್ಮೆಯೂ ಸುಳಿದಿರಲಿಲ್ಲ. ಯಾವಾಗಲೋ ಬಂದು ಹಾಯ್ ಬಾಯ್ ಎಂದು ಫೋನಿನಲ್ಲೋ ಇಲ್ಲ ಪ್ರತ್ಯಕ್ಷವಾಗಿಯೊ ವಿಚಾರಿಸಿಕೊಳ್ಳುವ ನನ್ನ ಮಕ್ಕಳೇ ಎಲ್ಲವನ್ನೂ ತಿನ್ನ ಬೇಕು!! ಸ್ವಲ್ಪ ತಲೆನೋವೆಂದರೆ ಸಾಕು ಅಮೃತಾಂಜನದ ಬಾಟಲಿಯನ್ನು ಹಿಡಿದುಕೊಂಡು ಓಡಿ ಬರುವ, ಮಂಡಿ ನೋವೆಂದಾಗೆಲ್ಲಾ ಮುಲಾಮು ಹಚ್ಚುವ, ನನ್ನ ಶೋಕಿಗೆ ಹೇರ್ ಡೈ ಮೆಹಂದಿ ಬಳಿಯುವ ಸದಾ ನನ್ನ ಬಳಿಯಿದ್ದು ನಮ್ಮಿಬ್ಬರ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಿರುವ ರಿಹಾನಾ ಮಾತ್ರ ಏನೂ ತಿನ್ನಬಾರದು!! ಏಕೆಂದರೆ ಅವಳು ನನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗಳಲ್ಲ. ನಿರಕ್ಷರಕುಕ್ಷಿ. ಸಂಬಳದ ಹೊರತಾಗಿ ಅವಳಿಗೆ ಯಾವ ಹಕ್ಕೂ ಇಲ್ಲ. ಮನೆಕೆಲಸದವರನ್ನು ತಮ್ಮ ಮನೆಯ ಸದಸ್ಯೆಯೆಂದೇ ಭಾವಿಸುವ, ಮೇಲಿನ ಯಾವ ಪಾಪಪ್ರಜ್ಞೆಯೂ ಬಾಧಿಸದ ಅನೇಕ ಉದಾರ ಚರಿತರು ಈ ದುನಿಯಾದೊಳಗೆ ಇರಬಹುದು. ಆದರೆ ನಾನು ಮಾತ್ರ ಪಾಪಿ. ಅಗೋ ಬಂದಳು ರಿಹಾನಾ "ಆಂಟೀ ಆಪ್ ಆಗಯೇ..!!! ಅರಳಿದ ಮುಖ, ಕಣ್ಣಲ್ಲಿ ಮಿಂಚು! ನೀವಿಲ್ಲದಿದ್ದರೆ ನನಗೆ ಈ ಮನೆಯೊಳಗೆ ಕಾಲಿಡುವುದಕ್ಕೇ ಬೇಜಾರು" ಮುಖ ಊದಿಸುತ್ತಾ ಹುಸಿಕೋಪ ತೋರುತ್ತಾಳೆ. ನನ್ನ ಕಂಗಳು ತುಂಬಿ ಬಂದಿವೆ. ಬೃಹದೀಶ್ವರನ ಸನ್ನಿಧಿಯಲ್ಲಿ.....ಭಾಗ-೧ ತಂಜಾವೂರಿನ ‘ಬೃಹದೀಶ್ವರ’’ನ ಬೃಹದ್ ಅಂಗಳದಲ್ಲಿ ತ್ರಿಶೂರ್ ಸಹೋದರರ ‘ಭೋ ಶಂಭೋ” ಕೇಳುವುದೊಂದು ಅದ್ಭುತ ಅನುಭೂತಿ. ಆ ಹಾಡುಗಾರಿಕೆಯ ಆಳ ಎತ್ತರ ವಿಸ್ತಾರಗಳು, ಪುರಾತನ ದೇವಾಲಯದ ಆಳ ಎತ್ತರಗಳನ್ನು ಅಭಿನಯಿಸುತ್ತಿರುವಂತೆ, ಶಿವಾನುಭವವೊಂದು ಜಗದಗಲ ಮುಗಿಲಗಲ ವಿಸ್ತರಿಸುತ್ತಾ ಹೋದ ಹಾಗೆ ಯಾರಿಗಾದರೂ ಭಾಸವಾದರೆ ಆಶ್ಚರ್ಯ ಪಡಬೇಕಾಗಿಲ್ಲ. ಸ್ವಾಮಿ ದಯಾನಂದ ಸರಸ್ವತಿಯವರ ರಚನೆಯಾದ ಈ ‘ಭೋ ಶಂಭೋ' ಕೀರ್ತನೆ ರೇವತಿ ರಾಗದಲ್ಲಿದೆ. ರೇವತಿ ರಾಗದ ನಮನಶೀಲತೆಯೇ ಅಂತಹದು ಕೇಳಿದವರನ್ನೆಲ್ಲಾ ಇನ್ನಿಲ್ಲದಂತೆ ಆರ್ದ್ರ ಗೊಳಿಸಿಬಿಡುವಂತಹದ್ದು. ಇದಕ್ಕೂ ಮೊದಲು ಮಹಾರಾಜಪುರಂ ಸಂತಾನಂ ಅವರು ಈ ಹಾಡನ್ನು ಸೊಗಸಾಗಿ ಹಾಡಿದ್ದಾರೆ. ಸಾವಿರ ವರುಷಗಳ ಹಳೆಯ ದೇವಾಲಯದ ಭವ್ಯತೆ (1003-1010) ಹಾಡಿನ ರಚನೆಯ ಕಾಲ ಮತ್ತು ಶಿವನ ಅನಾದಿ ಕಲ್ಪನೆ ಈ ಮೂರೂ ಸಂಗತಿಗಳು ಮೇಳೈಸಿದ ಪ್ರಾಚೀನತೆಯ ಘಮಲು ಹೊಕ್ಕರೆ ಒಳಗೆ, ಭೂಮಾನುಭೂತಿ ಅವಶ್ಯ ಎದುರಿಗೆ!!! ದೇವಾಲಯ, ಅದರೊಳಗಿರುವ ಬೃಹದೀಶ್ವರ ಮತ್ತು ಅವನ ಕುರಿತಾದ ಹಾಡು ಒಳಗೆ ತಾಳ ಹಾಕುವಾಗ ವಿಸ್ಮಯಕ್ಕಲ್ಲದೇ ಬೇರೇ ಭಾವಕ್ಕೆ ಎಡೆಯುಂಟೇ? ಚೋಳರು ಶಿವಪಾರಮ್ಯವನ್ನು ಹಾಡಿದರು, ಅದಕ್ಕೆ ಸರಿ ಸುಮಾರು ಆ ಕಾಲದಲ್ಲಿಯೇ ಇದ್ದ ಶೇಕ್ಕಿಳಾರ್ ಕವಿಯ ಪೆರಿಯಪುರಾಣದ ಅರವತ್ತುಮೂರು ಪುರಾತನ ಶಿವಭಕ್ತರ ಜೀವನ ಚರಿತ್ರೆಯಲ್ಲಿಯೂ ಇಂತಹುದೇ ಶಿವಪಾರಮ್ಯವನ್ನು ಕಾಣುತ್ತೇವೆ. ಶೇಕ್ಕಿಳಾರ್ ಹರಿಹರನ ಮೂಲಕ ಕನ್ನಡಕ್ಕೆ ಬಂದದ್ದಂತೂ ನಮ್ಮ ಮಧ್ಯಕಾಲೀನ ಸಾಹಿತ್ಯದ ಮಹತ್ವವನ್ನೇ ಹೆಚ್ಚಿಸಿದೆ. ಬೃಹದೀಶ್ವರ ನಮಗೆ ಹೀಗೆ ಕೂಡ ಹತ್ತಿರ. ಬೃಹದೀಶ್ವರ ದೇವಾಲಯದ ಪುರಾತತ್ವಕ್ಕೆ ಇರುವ (ಭೌಗೋಳಿಕವಾಗಿ)ಇನ್ನೊಂದು ಮಹತ್ವದ ಕನ್ನಡದ ನಂಟೆಂದರೆ ತಂಜಾವೂರಿಗೆ ಹನ್ನೊಂದು ಕಿ.ಮೀ. ದೂರದಲ್ಲೇ ಇರುವ ತಿರುವಯ್ಯಾರ್. ಶಾಂತವಾಗಿ ಹರಿಯುತ್ತಿರುವ ಕಾವೇರಿ ನದಿಯ ತೀರದ ಮೇಲೆ ಯಾವುದೇ ಸದ್ದು ಗದ್ದಲಗಳಿಲ್ಲದೆ ಶಾಂತಿರಸವನ್ನೇ ಮೈಗೂಡಿಸಿಕೊಂಡಿರುವ ಕರ್ನಾಟಕ ಸಂಗೀತ ರತ್ನತ್ರಯರಲ್ಲಿ ಒಬ್ಬರಾದ ತ್ಯಾಗರಾಜರ ಸಮಾಧಿ. ಕಾವೇರಿ ದಡದಲ್ಲಿ ನಿಂತು ಕಿವಿಗೊಟ್ಟು ಸೂಕ್ಷ್ಮವಾಗಿ ಕೇಳಿದರೆ ಇತಿಹಾಸದಲ್ಲಿ ಆಗಿ ಹೋದ ಸಂಗೀತೋತ್ಸವಗಳ ಕೇಳಿಯನ್ನು ಕಾವೇರಿ ನಮಗೆ ಕೇಳಿಸುತ್ತಾಳೆ. ಕನ್ನಡಿಗರಾದ ನಮಗೆ ಇದು ಇನ್ನೂ ಹತ್ತಿರ, ಯಾಕೆಂದರೆ ಈ ಸಮಾಧಿಯನ್ನು ಕಟ್ಟಿಸಿದಾಕೆ ಸಂಗೀತ ಸಾಮ್ರಾಜ್ಞಿ ಬೆಂಗಳೂರು ನಾಗರತ್ನಮ್ಮ. ಆಕೆ ಕೂಡ ತ್ಯಾಗರಾಜರ ಎದುರಿಗೇ ಇನ್ನೊಂದು ಪುಟ್ಟ ಗುಡಿಯಲ್ಲಿ ವಿರಾಜಮಾನಳಾಗಿರುವುದನ್ನು ನೋಡಿದರೆ ರೋಮಾಂಚನವಾಗುತ್ತದೆ. ಅವಳ ಸಾಹಸಗಾಥೆಯನ್ನು, ಆಕೆಯ ಸಂಗೀತ ಪ್ರೇಮವನ್ನು, ತ್ಯಾಗರಾಜರ ಮೇಲಿನ ಅವಳ ಎಣೆಯಿಲ್ಲದ ಭಕ್ತಿಯನ್ನು ಜಗದೀಶ ಕೊಪ್ಪ ಅವರು ಅವಳ ಬಗೆಗಿನ ತಮ್ಮ ಪುಸ್ತಕದಲ್ಲಿ ಬಹಳ ಅನನ್ಯವಾಗಿ ಬಿಚ್ಚಿಟ್ಟಿದ್ದಾರೆ. ಪ್ರಾಚೀನ ಸಂಸ್ಕೃತಿಯ ಅರಿವು ತಂದುಕೊಡುವ ಧನ್ಯತಾ ಭಾವ ಅನನ್ಯವಾದುದು. ಅದರ ಬೃಹದ್ ಸ್ವರೂಪ ನಮ್ಮೊಳಗಿನ ಅಹಂಕಾರವನ್ನು ಸ್ವಲ್ಪ ಮಟ್ಟಿಗಾದರೂ ಇಲ್ಲವಾಗಿಸಿಕೊಳ್ಳಲು ಸಾಧ್ಯವಾಗಬಹುದು. ಅದರ ಹಿನ್ನೆಲೆಗೆ ಹಾಡಿದ್ದರಂತೂ ಅದು ಎದೆಯೊಳಗೆ ಕರಗಿ ಕೆನ್ನೆಯಮೇಲೆ ಹರಿಯುವುದಂತೂ ಖಂಡಿತ. ಕೋಟೆ ಕಟ್ಟಿ ಮೀಸೆ ತಿರುವಿ ಮೆರೆದ ಚೋಳ ಸಾಮ್ರಾಜ್ಯವಾಗಲೀ, ದೇವಾಲಯದ ಕಟ್ಟುವಿಕೆಗೆ ಮಣ್ಣುಹೊತ್ತ ಕಾರ್ಮಿಕರಾಗಲೀ ಇಂದು ಮಣ್ಣಾಗಿರಬಹುದು. ಆದರೆ ಅವರೆಲ್ಲಾ ಬೃಹದೀಶ್ವರ ದೇವಾಲಯದ ಭಿತ್ತಿಗಳ ಮೇಲೆ ಅಮರರಾಗಿದ್ದಾರೆ. ಅವರನ್ನು ಕಾಣವುದಕ್ಕಾದರೂ ಪುರಾತನ ದೇವಾಲಯಗಳಿಗೆ ಭೇಟಿ ಕೊಡಬೇಕು. ಎಂದರೋ ಮಹಾನುಭಾವುಲು ಅಂದುರಿಕಿ ವಂದನಮುಲು. ಕೆಳಗಿನ ಫೋಟೋಗಳಲ್ಲಿ ಒಂದನ್ನು ಖ್ಯಾತ ಪುರಾತತ್ವ ಶೋಧಕರೂ, ಛಾಯಾಚಿತ್ರಗ್ರಾಹಕರೂ ಆದ ಡಾ. ಮೈಸೂರು ನಾಗರಾಜ ಶರ್ಮಾ ಅವರು ಪರಿಷ್ಕರಿಸಿಕೊಟ್ಟಿದ್ದಾರೆ. 19/3/19 Top of Form 76DrSangita G Naik, Venkata Narayana and 74 others 18 Comments2 Shares LikeShow more reactions CommentShare Comments View 9 more comments Kamala Hemmige Chenda. “ಮೀನಾಕ್ಷಿ ಮೇ ಮುದಂ ದೇಹಿ” ಮುತ್ತುಸ್ವಾಮಿ ದೀಕ್ಷಿತರ, ಪೂರ್ವಿಕಲ್ಯಾಣಿ ರಾಗದಲ್ಲಿರುವ “ಮೀನಾಕ್ಷಿ ಮೇ ಮುದಂ ದೇಹಿ” ಕೃತಿಯನ್ನು ಎದೆಷ್ಟು ಬಾರಿ ಕೇಳಿರುವೆನೋ. ಸುಬ್ಬುಲಕ್ಷ್ಮಿ, ಸಂತಾನಂ, ಕೆ.ವಿ ನಾರಾಯಣಸ್ವಾಮಿ ಯವರಿಂದ ಹಿಡಿದು ಇತ್ತೀಚಿನ ಟಿ.ಎಂ ಕೃಷ್ಣ, ಅರುಣಾ ಸಾಯಿರಾಂ ಮುಂತಾದ ಪ್ರಸಿದ್ಧ ಸಂಗೀತಗಾರರು ಇದನ್ನು ವಿಸ್ತಾರವಾಗಿ ಹಾಡಿದ್ದಾರೆ. ಈ ಕೃತಿಯನ್ನು ಹಾಡದ ಸಂಗೀತಗಾರರೇ ಇಲ್ಲವೇನೋ. ಅಷ್ಟು ಪ್ರಸಿದ್ಧ, ಅಷ್ಟು ಗಂಭೀರ, ಅಷ್ಟು ವಿಶಾಲ!! ನಮ್ಮ ಮನೆಯ ಮುಂದಿನ ಕಟ್ಟಡದ ಟೆರೇಸ್ ಮೇಲೆ ಆಡುವ ಗಿಣಿಗಳನ್ನು ನೋಡಿದಾಗಲೆಲ್ಲಾ ನನಗೆ ಈ ಕೀರ್ತನೆಯೇ ನೆನಪಾಗುವುದು. ಗಿಣಿಗಳು ಹೀಗೆ ಆಟವಾಡುವಾಗ ನಾನು ನನ್ನ ಮೊಬೈಲ್ ನಲ್ಲಿ ಮೀನಾಕ್ಷಿಗೆ ಮೊರೆ ಹೋಗುತ್ತೇನೆ. ಪ್ರತಿ ಸಲ ಕೇಳಿದಾಗಲೂ ರಾಗದ ವಿಸ್ತಾರದೊಂದಿಗೆ ಒಳಗೆ ಹೊಸದೊಂದು ಬೆಳಕಿನ ಪ್ರವಾಹ, ಸ್ವರ ಸಂಚಾರದೊಂದಿಗೆ ಹೊಸದೊಂದು ಆನಂದದ ಸಂಚಲನೆ ಕೆನ್ನೆಮೇಲೆ ಕಣ್ಣೀರಾಗಿ ಹರಿಯುತ್ತದೆ. ನಾನು ಈ ಮೀನಾಕ್ಷಿಯನ್ನು ನೋಡಲೇಬೇಕು ಎಂದು ತಂಜಾವೂರಿನಲ್ಲಿ ತಂಗಿದ್ದಾಗ ಗಂಡನಿಗೆ ದುಂಬಾಲು ಬಿದ್ದೆ. ನಾನೇನು ಭಕ್ತಿಯಿಂದಲೋ, ಶ್ರದ್ಧೆಯಿಂದಲೋ ಎಂದೂ ದೇವಾಲಯಗಳಿಗೆ ಭೇಟಿ ಕೊಟ್ಟವಳಲ್ಲ. ಅವುಗಳ ವಾಸ್ತು ವೈಭವ, ಪ್ರಾಚೀನತೆ, ಕಾಲದ ನಿಷ್ಠುರತೆಗೆ ಸೆಡ್ಡುಹೊಡೆಯುತ್ತ ಅಮರವಾಗಿ, ಭವ್ಯವಾಗಿ ಸ್ಥಾವರಗೊಳ್ಳುವ ಪರಿ, ತಾಂತ್ರಿಕತೆ ಮತ್ತು ಸಾಮುದಾಯಕತೆ ಎರಡನ್ನೂ ಮೇಳೈಸುವ ರೀತಿ ಎಂದಿಗೂ ಬೆರಗುಹುಟ್ಟಿಸುವಂತಹವೇ. ದೇವಸ್ಥಾನಗಳು ಕೇವಲ ಪೂಜಾ ಸ್ಥಳಗಳು ಮಾತ್ರವಾಗಿರಲಿಲ್ಲ ಜನಸಂಘಟನೆಯ ಕ್ಷೇತ್ರಗಳೂ ಆಗಿದ್ದವು. ಆದರೆ ಮೀನಾಕ್ಷಿಯನ್ನು ನೋಡಲು ಮುತ್ತುಸ್ವಾಮಿ ದೀಕ್ಷಿತರ ಕೃತಿಯಲ್ಲಡಗಿದ ಅಪರಂಪಾರ ಭವ್ಯತೆಯೇ ಕಾರಣವಾಗಿತ್ತು. ಮಧುರೈ ನಗರವನ್ನು ಅನೇಕ ರಾಜರು ಆಳಿರಬಹುದು, ಅವಳು ಹೊರಗಿನ ಪೌರುಷದ ಆಕ್ರಮಣಕ್ಕೆ ತುತ್ತಾಗಿರಬಹುದು. ಆದರೂ ಇಂದಿಗೂ ಅದನ್ನು ಆಳುತ್ತಿರುವವಳು ಮೀನಾಕ್ಷಿಯೇ. ಅವಳ ತಾಯಿ, ತಂದೆಯರು ಗಂಡು ಮಗುವಿಗಾಗಿ ತಪಸ್ಸುಗೈದರಂತೆ ಆದರೆ ಹುಟ್ಟಿದ್ದು ಹೆಣ್ಣುಮಗು. ಆದರೇನು ! ಪಾಂಡ್ಯ ರಾಜ್ಯವನ್ನೇ ಆಳಿತು ಆ ಹೆಣ್ಣು. ‘ಸುಂದರೇಶ’ನನ್ನು ಅವಳು ಕೈಹಿಡಿದರೂ ಇಲ್ಲಿನ ಸ್ವಾಮಿನಿ ಅವಳೇ. ಹದಿನಾಲ್ಕು ಎಕರೆ ಭೂಮಿಯಲ್ಲಿ ಕಟ್ಟಲಾದ ಭವ್ಯ ಮಂದಿರ. ದೇವಾಲಯದ ಒಳಗೇ ಸಾವಿರ ಕಂಭಗಳಿವೆ, ಹದಿನಾಲ್ಕು ಗೋಪುರಗಳಿವೆ. ಕಲ್ಯಾಣಿ ಇದೆ. ಮಾರುಕಟ್ಟೆಗಳಿವೆ. ಜೊತೆಯಲ್ಲಿ ಸಹ ದೇವರುಗಳಿದ್ದಾರೆ. ಮುತ್ತುಸ್ವಾಮಿ ದೀಕ್ಷಿತರ ಈ ಕೃತಿಯಲ್ಲಿ ಅವಳ ವೈಭವವನ್ನು ಬಣ್ಣಿಸಲಾಗಿದೆ. ಈ ದೇವಾಲಯ ಅವಳ ಭವ್ಯತೆಗೆ ಪ್ರತೀಕವಾಗಿದೆ. ಒಂದು ಕಾಲಕ್ಕೆ ಮಧುರೈ ಪಟ್ಟಣ ಕದಂಬ ವೃಕ್ಷಗಳಿಂದ ಸುತ್ತವರಿಯಲ್ಲಪಟ್ಟ ನಾಡಾಗಿದ್ದರಿಂದ ಅವಳನ್ನು ಕದಂಬವನವಾಸಿನಿಯೆಂದೇ ಕರೆಯಲಾಗುತ್ತದೆ. ಇವಳು ಲಲಿತೆಯ ಮಂತ್ರಿಯೂ ಆಗಿರುವಳಂತೆ. (ಲಲಿತಾಸಹಸ್ರನಾಮ). ಅವಳು ‘ಮೇಚಕಾಂಗಿ’ ಶ್ಯಾಮಲ ವರ್ಣದವಳು, ದಕ್ಷಿಣದ ತುದಿಯಲ್ಲಿ ಹುಟ್ಟಿದವಳು ಇನ್ನು ಗೌರಿ ಆಗಲು ಹೇಗೆ ಸಾಧ್ಯ? ಬಿಳಿಯರು ಬರದಿದ್ದರೆ ಕಪ್ಪು ಬಣ್ಣವೇ ನಮ್ಮ ಸೌಂದರ್ಯದ ಪ್ರತೀಕವಾಗುತ್ತಿತ್ತೆಂದು ರಾಮ ಮನೋಹರ ಲೋಹಿಯಾ ಹೇಳುತ್ತಾರೆ. (ಸೌಂದರ್ಯ ಮತ್ತು ಮೈ ಬಣ್ಣ) ಬಿಳಿಯರ ಗುಲಾಮತನದಿಂದ ಸಾಂಸ್ಕøತಿಕವಾಗಿ ನಮಗೆ ಇನ್ನೂ ಬಿಡುಗಡೆ ಸಿಕ್ಕಿಲ್ಲ ಆದುದರಿಂದ ಸುಂದರವಾದುದೆಲ್ಲಾ ಬಿಳಿಯೇ ಆಗಿರಬೇಕೆಂದು ನಾವು ಭಾವಿಸುತ್ತೇವೆ. ಆದರೆ ಇಲ್ಲಿ ಮೀನಾಕ್ಷಿ ಶ್ಯಾಮಲೆ! ‘ಮರಕತ ಛಾಯೆ! ಹಸಿರು (ಶ್ಯಾಮಲ) ರತ್ನದ ಬೆಳಕನ್ನು ಎಲ್ಲೆಡೆಗೆ ಬೀರುತ್ತಿರುವ ಅವಳು ಎಂತಹ ಸುಂದರಿ ಎಂದರೆ ‘ವಿಧು ವಿಡಂಬನ ವದನೆ’ ಚಂದ್ರನನ್ನೂ ಅಣಕಿಸುವಂತಹ ವದನವನ್ನು ಉಳ್ಳವಳು. ಈ ‘ಮಧುರಾಪುರಿ ನಿಲಯೆ’ಯನ್ನು ನೋಡಲೆಂದು ದಕ್ಷಿಣ ದಿಕ್ಕಿನ ಬಾಗಿಲ ಕಡೆಗೆ ಹೋದೆವು. ಬೃಹದೀಶ್ವರನ ಸನ್ನಿದಿಯಲ್ಲಿ ‘ಭೋ ಶಂಭೋ’ ( ತ್ರಿಶೂರ್ ಸಹೋದರರು) ‘ಬೃಹದೀಶ್ವರ ಮಹಾದೇವ’ (ಬಾಲಮುರಳಿಕೃಷ್ಣ) ಕೃತಿಗಳನ್ನು ತೃಪ್ತಿಯಾಗುವ ಹಾಗೆ ಕೇಳಿದಂತೆ ಇಲ್ಲಿ ಕೂಡ ಟಿ.ಎಂ ಕೃಷ್ಣ ವಿಸ್ತಾರವಾಗಿ ಹಾಡಿರುವ ‘ಮೀನಾಕ್ಷಿ ಮೇ ಮುದಂ ದೇಹಿ’ ಕೇಳುವ ಆಸೆಯಿಂದ ಮೊಬೈಲ್ ನ್ನು ಚೀಲದಿಂದ ತೆಗೆದು ತಯಾರಾಗಿ ಇಟ್ಟುಕೊಂಡೆ. ಅಲ್ಲಿ ಹೋಗಿ ನೋಡಿದಾಗ ಮೊಬೈಲೇನು !? ಒಂದು ಸಣ್ಣ ಸೂಜಿಯನ್ನು ದೇವಾಲಯದ ಒಳಗೆ ಬಿಡಲಿಲ್ಲ. ಅಷ್ಟು ಭದ್ರತೆ. “ದೇವರಿಗೆ ಯಾಕೆ ಸೆಕ್ಯುರಿಟಿ? ತನ್ನನ್ನು ತಾನು ರಕಿಸಿಕೊಳ್ಳದಂತಹವಳು ಅವಳಾವ ದೇವಿ?” ಪಕ್ಕದಲ್ಲಿ ನಿಂತ ಇವನು ಶುರು ಮಾಡಬಿಟ್ಟ. “ನೀನು ಬೇಕಾದರೆ ಚಪ್ಪಲಿ ಕಾಯುತ್ತಾ ಇಲ್ಲೇ ನಿಂತಿರು ನಾನು ಮಾತ್ರ ಒಳಗೆ ಹೋಗುವವಳೇ!” ಎಂದು ಬೀಸಿ ಕೊಂಡು ಹೊರಟೆ. ಈ ಮೀನಾಕ್ಷಿ ಅವಳ ಗಂಡನಂತಲ್ಲ. ಬೃಹದೀಶ್ವರನಿಗೆ ಯಾವ ಭದ್ರತೆಯೂ ಇಲ್ಲ. ಗರ್ಭಗುಡಿಯಲ್ಲೂ ಫೋಟೋ ಕ್ಲಿಕ್ಕಿಸಬಹುದು. ಭೋಳೇ ಶಂಕರ ಅವನ ಬಳಿ ಏನಿದೆ? ಬರೀ ಬೂದಿ! ಅದೂ ಅಲ್ಲದೆ ಹೆಣ್ಣಿಗೆ ತಾನೇ ಅಲಂಕಾರ? ಗಂಡು ಒಂದು ಲಂಗೋಟಿ ಕಟ್ಟಿಕೊಂಡು ನಡೆದರೂ ಏನೂ ವ್ಯತ್ಯಾಸವಾಗುವುದಿಲ್ಲವಲ್ಲ. ಇವಳು “ಮಣಿ ವಲಯೆ”! ಹಾಡಿನಲ್ಲಿರುವ ಈ ‘ಮಣಿ ವಲಯೆ’ ಶಬ್ದವನ್ನು ಯಾರೋ ಮಣಿಗಳಿಂದ ಕೂಡಿದ ಬಳೆ ಎಂದು ಅನುವಾದ ಮಾಡಿದ್ದಾರೆ. ಮುತ್ತು ಸ್ವಾಮಿದೀಕ್ಷಿತರ ಈ ಕೃತಿ ಇರುವುದು ಸಂಸ್ಕøತದಲ್ಲಿ. ‘ವಳೆ’ ಎನ್ನುವುದು ತಮಿಳಿನ ಶಬ್ದ. ಇದು ನಿಜವಾಗಿ, ರತ್ನಗಳ ಪ್ರಭಾವಲಯದಿಂದ ಕೂಡಿರುವವಳು ಎಂದಾಗಬೇಕು. ಗರ್ಭಗುಡಿ ಸಮೀಸುತ್ತಿರುವಾಗ ಈ ರತ್ನದ ಪ್ರಭಾವಲಯ ಯಾರಿಗಾದರೂ ಪರಿಚಯವಾಗುತ್ತದೆ. ಬೇರೆ ವಿದ್ಯುತ್ ದೀಪಗಳಿಲ್ಲ. ರತ್ನದ ಬೆಳಕಲ್ಲೇ ಅವಳನ್ನು ಕಾಣಬೇಕು. ಅಲ್ಲಿ ಅವಳು ಕಾಣಲಿಲ್ಲ! ಕಂಡದ್ದು ಕೇವಲ ಹೊಳೆಯುವ ಪ್ರಭೆಯಷ್ಟೇ! ವಯ್ಯಾರವಾಗಿ ನಿಂತಿರುವ ಒಂದು ಪ್ರಭಾವಲಯ! ನಾನು ಅವಳ ಹೆಗಲ ಮೇಲಿನ ಗಿಣಿಗಾಗಿ ಹುಡುಕುತ್ತಿದ್ದೆ. ಅಲ್ಲಿ ನಿಂತು ಹುಡುಕಲು ವ್ಯವಧಾನವೆಲ್ಲಿದೆ? ಕಣ್ತುಂಬ ನೋಡಲು ಬಿಡದಂತೆ ತಳ್ಳುವವರೇ!! ಮಂಟಪಗಳು, ಕಂಬಗಳ ಮೂಲಕ ಹಾದು ಬರುತ್ತಿರುವಾಗ ನನ್ನ ಕಣ್ಣುಗಳು ಎಂ.ಎಸ್. ಸುಬ್ಬುಲಕ್ಷ್ಮಿಯನ್ನು ಅರಸುತ್ತಿದ್ದವು. ಆ ಮೀನ ಕಣ್ಣುಗಳು ಪರವಶತೆಯಿಂದ ಹಾಡುತ್ತಿದ್ದವು. ಒಂಬತ್ತು ಗಜದ ಸಾಂಪ್ರದಾಯಕ ಸೀರೆ. ಹೊಳೆಯುವ ವಜ್ರದ ಮೂಗುಬೊಟ್ಟು, ಅಗಲ ಕುಂಕುಮ ! “ಮಧುರಾಪುರಿ ನಿಲಯೆ, ಮಣಿ ವಲಯೇ ..ವಿಧು ವಿಡಂಬನ ವದನೆ!!!!!” ನನಗೆ ಗೊತ್ತಿಲ್ಲದಂತೆ ಹಾಡಿಕೊಳ್ಳುತ್ತಿದ್ದೆ. ಏನು ಸುಬ್ಬುಲಕ್ಷ್ಮಿ ತನ್ನ ತವರೂರಿಗೆ ಬಂದು ಬಿಟ್ಟಳಾ? ಪಕ್ಕದಲ್ಲಿ ಬರುತ್ತಿದ್ದವ ತಿವಿದ. ಪುಳಿಯೋಗರೆ, ಪೊಂಗಲ್ ಪೊಟ್ಟಣ ಹಿಡಿದುಕೊಂಡು ನಾವು ಹೊರಬಂದೆವು. ತಕ್ಷಣ “ನಿನ್ನ ಮೀನಾಕ್ಷಿಯದು ಪಕ್ಕಾ ಬಿಸಿನೆಸ್ ಮನೋಧರ್ಮ ಬಿಡು” ಎಂದು ಛೇಡಿಸುತ್ತಾ, ಅದೇನೋ “ಮಧುರೈ ಸೀರೆ ಅಂತಿದ್ಯೆಲ್ಲಾ” ಅಂದ. ಮಧುರೈ ಒಂದು ಕಾಲದಲ್ಲಿ ಕಾಟನ್ ಚುಂಗಡಿ ಸೀರೆಗಳಿಗೆ ಪ್ರಸಿದ್ಧವಾಗಿದ್ದಿತು. ಅಂಗಡಿಯೊಂದರೊಳಗೆ ಹೊಕ್ಕು ಕೇಳಿದರೆ ಮುಂಬಯಿ, ಸೂರತ್ಗಳ ಫ್ಯಾಷನ್ ಡಿಸೈನರ್ ಸೀರೆಗಳನ್ನೇ ತೋರಿಸಿದರು. ‘ಮೀನಾಕ್ಷಿಯೂ ತುಂಬಾ ಮಾಡರ್ನ್ ಆಗಿಬಿಟ್ಟಿದ್ದಾಳೆ’ ಎಂದು ಅಂಗಡಿಯ ಹೊರಗೆ ನಿಂತಿದ್ದ ಇವನು ನಕ್ಕ. ಅಂಗಡಿಯಲ್ಲಿ ನಿಭಾಯಿಸುವಷ್ಟು ನನಗೆ ತಮಿಳು ಬರುತ್ತಿದ್ದರೂ ಹಿಂದಿಯಲ್ಲಿಯೇ ಮಾತನಾಡಿಸಿದರು. ಟೋಪಿ ಹಾಕುವುದರಲ್ಲಿ ಮುಂಬಯಿಗರಿಗೇನು ಕಮ್ಮಿಯಿಲ್ಲ. ನನಗೆ ವ್ಯಾಪಾರದ ಮೂಡ್ ಇರಲಿಲ್ಲ. ನನ್ನ ಮನಸ್ಸಿನ ತುಂಬಾ ಮುತ್ತುಸ್ವಾಮಿ ದೀಕ್ಷಿತರ ಮೀನಾಕ್ಷಿಯೇ ತುಂಬಿಕೊಂಡಿದ್ದಳು. ಮೀನಾಕ್ಷಿಯ ವೈಭವ ಪರಿಚಯವಾಯಿತು. ಇದು ಅವಳ ಹೊರ ವಲಯ. ಅದಕ್ಕೆ ಅದರದೇ ಆದ ಮಿತಿ ಇದ್ದೇ ಇದೆ. ಆದರೆ ದೀಕ್ಷಿತರ ಕೀರ್ತನೆ ಕೊಟ್ಟ ಸುಖವನ್ನು, 'ಮುದವನ್ನು'ಸಾಕ್ಷಾತ್ ಮೀನಾಕ್ಷಿಯೂ ಕೊಡಲಿಲ್ಲ. 20/3/19 Top of Form 41Venkata Narayana, Bhavana Madhusudan and 39 others 20 Comments1 Share LikeShow more reactions CommentShare Comments Sugunadevi Suguna ಮೀನಾಕ್ಷಿ ಯನ್ನು ಮೈಮೇಲೆ ಆವಾಹಿಸಿಕೊಂಡು ಬರೆದ ಆಪ್ತ ಬರಹ. ಮೀನಾಕ್ಷಿಯನ್ನು ನೋಡಿದಂತಾಯಿತು. 1 Delete or hide this LikeShow more reactions · Reply What an excellent Writing.Only Girija Madam can write like this.Writers who write on music and musicians without knowing about Music should read this piece.This itself can become an independent essay and travel piece- . K. Satyanarayana Bottom of Form NAPÁgÀzÀ ±ÀAR£ÁzÀ VjeÁ±Á¹Ûç “ªÀiÁ£À¸À ¸ÀAZÀgÀgÉà §æºÀä¤ ªÀiÁ£À¸À ¸ÀAZÀgÀgÉÔ (N ªÀÄ£À¸Éìà §æºÀä£ÉqÉUÉ ¸ÀAZÀj¸ÀÄ) F ºÁqÀÄ ¥ÀæSÁåvÀ ¸ÀAVÃvÀUÁgÀgÀ£ÀÄß ªÀiÁvÀæ ¸É¼É¢®è, §zÀ¯ÁV 70 gÀ zÀ±ÀPÀzÀ PÉÆ£ÉUÉ vÉ®ÄV£À°è ‘±ÀAPÀgÁ¨sÀgÀtA’ ZÀ®£ÀavÀæ vÉgÉPÀAqÀ ºÉƸÀvÀgÀ°è F ºÁqÀÄ J®è zÀQëët ¨sÁÀgÀwÃAiÀÄgÀ £Á®UÉAiÀÄ ªÉÄïÁqÀÄwÛvÀÄÛ. ¸ÁªÀÄ gÁUÀzÀ°ègÀĪÀ F PÀÈwAiÀÄ£ÀÄß gÀa¹zÀªÀgÀÄ ¸ÀzÁ²ªÀ §æºÉäÃAzÀægÀÄ JA§ ¸ÀAUÀw ºÉaÑ£À d£ÀPÉÌ UÉÆwÛ®è. ¸ÀzÁ²ªÀ §æºÉäÃAzÀægÀÄ CzÉéöÊvÀ ¹zÁÞAvÀPÉÌ vÀªÀÄä£ÀÄß ªÀÄÄr¥ÁVlÄÖPÉÆAqÀ M§â CªÀzsÀÆvÀgÉAzÀÄ ºÉüÀ¯ÁUÀÄvÀÛzÉ. PÀ£ÁðlPÀ ¸ÀAVÃvÀzÀ ªÁUÉÎÃAiÀÄPÁgÀgÀ°è PÀÆqÀ EªÀgÀÄ ¥ÀæªÀÄÄRgÀÄ. ¸ÀAVÃvÀ ªÀ®AiÀÄzÀ°è EªÀgÀ E£ÉÆßAzÀÄ PÀÈw ‘§Ææ» ªÀÄÄPÀÄAzÉÃw gÀ¸À£ÉÃ’ (£Á®UÉAiÉÄà ªÀÄÄPÀÄAzÀ£À £ÁªÀĪÀ£ÀÄß d¦¸ÀÄ) J£ÀÄߪÀ QÃvÀð£ÉAiÀÄÆ CµÉÖà ¥Àæ¹zÀÞªÁVzÉ. n.JªÀiï PÀȵÀÚ EzÀ£ÀÄß PÀÄgÀÄAf gÁUÀzÀ°è ¸ÉÆUÀ¸ÁV ºÁrzÁÝgÉ. ‘¸ÀªÀðA §æºÀäªÀÄAiÀÄA’, ‘£À»gÉà £À»Ã ±ÀAPÁ’, ‘D£ÀAzÀ¥ÀÆtð ¨ÉÆÃzsÉÆÃºÀA’, ’¹ÜgÀvÁ £À»Ã £À»gÉà ªÀiÁ£À¸Á’, ‘vÁ¥ÀvÀæAiÀÄ ¸ÁUÀgÀªÀÄeÁÕ£À’, ‘¸ÀägÀ ªÁgÀA ªÁgÀA ZÉÃvÀPÀ’, ‘¥ÀÆtð¨ÉÆÃzsÉÆÃºÀA ¸ÀzÁ£ÀAzÀ ¥ÀÆtð¨ÉÆÃzsÉÆÃºÀA’ ªÀÄÄAvÁzÀªÀÅ CªÀgÀÄ gÀa¹zÀgÉ£À߯ÁzÀ E¥ÀàvÀÛPÀÆÌ ºÉaÑ£À ¸ÀAVÃvÀPÉÌ ¸ÀA§A¢ü¹zÀ ¸ÀA¸ÀÌøvÀ PÀÈwUÀ¼ÀÄ. ªÀÄzsÀÄgÉÊ ¤AzÀ ¸ÀĪÀiÁgÀÄ JgÀqÀƪÀgÉ UÀAmÉUÀ¼À ¥ÀæAiÀiÁt PÀgÀÆjUÉ. PÀgÀÆgÀÄ CzÀgÀ ªÉʱÀå ¨ÁåAQ¤AzÁV J®èjUÉ ¥ÀjavÀ. DzÀgÉ CzÀgÀ E£ÉÆßAzÀÄ ªÀÄÄR ªÀiÁvÀæ ºÉaÑ£À d£ÀjUÉ UÉÆwÛ®è. PÀgÀÆgÀ §½ EgÀĪÀ £ÉgÀÆgï JA§ ¥ÀÄlÖ ºÀ½îAiÀÄ°è ¸ÀzÁ²ªÀ §æºÉäÃAzÀægÀ ¸ÀªÀiÁ¢ü EzÉ. PÀgÀÆj¤AzÀ¯Éà £ÉgÀÆjUÉ ºÉÆÃUÀ¨ÉÃPÀÄ CzsÀð vÁ¹£À ¥ÀæAiÀiÁt. PÁªÉÃj wÃgÀzÀ°ègÀĪÀ £ÉgÀÆj£À ¤dð£À ºÀ½îAiÀİè½zÀÄ ¸ÀzÁ²ªÀ §æºÉäÃAzÀægÀ D±ÀæªÀÄzÀ ªÀÄÄAzÉ £ÁªÀÅ ¤AvÁUÀ PÀvÀÛ®Ä DªÀj¹vÀÄÛ. EzÀ£ÀÄß ‘¸ÀzÁ²ªÀ §æºÉäÃAzÀæÀæ C¢üµÁ×£À’À JAzÀÄ PÀgÉAiÀįÁUÀÄvÀÛzÉ. ¤±Àê§ÝªÁzÀ ¥Àæ±ÁAvÀ D±ÀæªÀÄzÉÆ¼ÀUÉ CPÀëgÀ±ÀB ‘vÉAUÀÄ UÀjUÀ¼À £ÀqÀÄªÉ vÀÄA§Ä ZÀA¢gÀ §AzÀÄ’ CªÀÅ UÁ½UÉ C®ÄUÁqÀĪÁUÀ ‘¨É½î ºÀ¸ÀÄUÀ¼À ºÁ®Ä’ J¯ÉèqÉ ZɰèvÀÄÛ. ºÉeÉÓ ElÖ vÀPÀët ¥ÀæAiÀiÁtzÀ DAiÀiÁ¸ÀªÉ¯Áè PÀgÀV ºÉÆÃUÀĪÀ ªÁvÀªÀgÀt. ‘zsÁå£À ¸ÁzsÀ£É’ EAzÀÄ ªÀiÁgÀÄPÀmÉÖAiÀÄ ªÀ¸ÀÄÛªÁV ©nÖgÀĪÁUÀ, J¯Áè D±ÀæªÀÄUÀ¼ÀÆ ¸ÀAvɪÀiÁ¼ÀUÀ¼Éà DVgÀĪÁUÀ F D±ÀæªÀÄ ªÀiÁvÀææ CªÉ®èPÀÆÌ C¥ÀªÁzÀªÁV ¤AwvÀÄÛ. D gÁwæ vÀAUÀ®Ä £ÀªÀÄUÉ MAzÀÄ PÉÆÃuÉ ¨ÉÃPÉAzÀÄ C°è£À ªÀåªÀ¸ÁÜ¥ÀPÀgÀ£ÀÄß PÉýzÁUÀ »AzÉ ªÀÄÄAzÉ £ÉÆÃqÀzÉà M¦à PÉÆÃuÉAiÀÄ QðPÉÊ PÉÆlÖgÀÄ. C°ègÀĪÀ PÉÆÃuÉUÀ¼ÀÄ PÀÆqÀ £Á¯ÉÆÌÃ, LzÉÆÃ CµÉÖÃ. ºÉZÀÄÑ d£À §gÀ®Ä C°è CªÀPÁ±ÀÀªÉà E®è. ªÀÄgÀVqÀUÀ½AzÀ, ºÀ¸ÀÄ PÀgÀÄ PÉÆnÖUɬÄAzÀ PÀÆrzÀ, fÃgÀÄAqÉUÀ¼À ±À§Ý ©lÖgÉ ¨ÉÃgÉÆAzÀÄ ¸À¢Ý®èzÀ D±ÀæªÀÄ. ¸ÀzÁ ¸ÀzÀÄÝ UÀzÀÝ®UÀ¼À £ÀqÀĪÉAiÉÄà §zÀÄPÀÄwÛgÀĪÀ £ÀªÀÄUÉ C°èAiÉÄà PÉ®ªÁgÀÄ ¢£ÀUÀ¼ÁzÀgÀÆ vÀAUÀ¨ÉÃPÉA§ D¸ÉAiÀÄ£ÀÄß D ¥Àj¸ÀgÀ GAlĪÀiÁrvÀÄÛ. ¸Àé®à zÀÆgÀzÀ°èAiÉÄà F±ÀégÀ£À MAzÀÄ ¥ÀÄlÖ UÀÄr. CzÀgÀ »A§¢AiÀİèAiÉÄà ¸ÀzÁ²ªÀ §æºÉäÃAzÀægÀ ¸ÀªÀiÁ¢ü. E°è ¸ÀzÁ²ªÀgÀÄ fêÀAvÀ ¸ÀªÀiÁ¢üAiÀiÁVzÀÝgÉAzÀÄ ºÉüÀ¯ÁUÀÄvÀÛzÉ. F D¢üµÁ×£ÀªÉà C®èzÉà ªÀÄ£ÀªÀÄzÀÄgÉÊ. PÁ², ¥ÀÆj, PÀgÁaUÀ¼À°èAiÀÄÆ EªÀjUÉ ¸ÀªÀiÁ¢üUÀÀ¼À£ÀÄß ¤ªÀiÁðt ªÀiÁqÀ¯ÁVzÉ JAzÀÄ w½zÀħgÀÄvÀÛzÉ. ¥ÀgÀªÀĺÀA¸À AiÉÆÃUÁ£ÀAzÀgÀ ‘Autobiography of a YOGI” ¥ÀĸÀÛPÀzÀ°è EªÀgÀ fêÀ£À ZÀjvÉæAiÀÄ «ªÀgÀUÀ¼ÀÄ, ¥ÀªÁqÀUÀ¼ÀÄ ºÁUÀÆ fêÀ ¸ÀªÀiÁ¢üAiÀÄ G¯ÉèÃR«zÉ. (“An Idyll in South India” pp 389-391) ¸ÀzÁ²ªÀ §æºÉäÃAzÀægÀÄ ¸ÀªÀiÁ¢üAiÀiÁUÀĪÀ ªÉÆzÀ®Ä(1755), vÁªÀÅ fêÀ ¸ÀªÀiÁ¢üAiÀiÁzÀ MA§vÀÛ£ÉAiÀÄ ¢£À vÀªÀÄä vÀ¯ÉAiÀÄ ªÉÄÃ¯É MAzÀÄ ©®é ªÀÈPÀë ¨É¼ÉAiÀÄĪÀÅzÉAzÀÆ, ºÀvÀÛ£ÉAiÀÄ ¢£À PÁ²¬ÄAzÀ §æºÀäZÁjAiÉÆ§â ²ªÀ°AUÀªÀ£ÀÄß vÀgÀĪÀªÀ£ÉÉAzÀÆ CzÀ£ÀÄß ©®éªÀÈPÀëzÀ ªÀÄÄAzÉ ¥ÀæwµÁ×צ¸À¨ÉÃPÉÀAzÀÄ ºÉýzÀgÀAvÉ. CzÀÄ ºÁUÉAiÉÄà £ÀqɬÄvÉA§ PÀxɬÄzÉ. CzÀPÉÌ ¸ÁQëAiÉÄA§AvÉ FUÀ®Æ ©®éªÀÈPÀëPÉÌ ¥ÀÆeÉ £ÀqɸÀ¯ÁUÀÄvÀÛzÉ. EzÀgÀ C®APÁgÀªÉAzÀgÉ ªÀÈPÀëPÉÌ ¸ÀÄvÀÛ¯ÁVgÀĪÀ MAzÀÄ PÁµÁAiÀÄ ªÀ¸ÀÛçªÀµÉÖÃ. ¸ÀªÀiÁ¢üAiÉÄAzÀgÉ D ªÀÈPÀëªÉà DVzÉ. CzÀgÀ ªÀÄÄAzÉ ¸ÀgÀ¼ÀªÁzÀ ªÉÄïÁÒªÀt EgÀĪÀ ²ªÀ°AUÀPÉÌ PÀÆqÀ FUÀ ¥ÀÆeÉ £ÀqÉAiÀÄÄvÀÛzÉ. ©®éªÀÈPÀëzÀ DªÀgÀtzÀ°è zsÁå£À ªÀiÁqÀ®Ä ¥Àæ±À¸ÀÛªÁzÀ eÁUÀ. E°è ºÉZÀÄÑ d£À zsÁå£À ªÀiÁqÀ¯ÉAzÉà §gÀÄvÁÛgÉ. ¥ÀÆeÉAiÀÄ UÀzÀÝ®QÌAvÀ zsÁå£ÀPÉÌà ºÉZÀÄÑ ¥Á±À¸ÀÛöå E°è. zÉñÀzÀ ««zsÀ ¨sÁUÀ¢AzÀ ¸ÁzsÀPÀgÀÄ zsÁå£À ¸ÁzsÀ£ÉUÁVAiÉÄà E°è §AzÀÄ ºÀ®ªÁgÀÄ ¢£ÀUÀ¼ÀÄ vÀAUÀĪÀÅzÀÄAlÄ. F D±ÀæªÀÄzÀ DqÀ½vÀPÉÌ AiÀiÁªÀÅzÉà ¯Á¨sÁPÁAPÉë¬Ä®è J£ÀÄߪÀÅzÀÄ, PÀrªÉÄ ¨É¯ÉAiÀÄ ¸ÀĸÀfÓvÀ PÉÆÃuÉUÀ¼ÀÄ EgÀĪÀÅzÉà ¸ÁQë. ºÉÆgÀV¤AzÀ §AzÀªÀjUÉ E°è zÉÆgÀPÀĪÀ DwxÀå, ¹§âA¢ ªÀUÀðzÀªÀgÀ ¦æÃwAiÀÄ £ÀqÁªÀ½ ¨ÉgÀUÀÄ ºÀÄnÖ¸ÀĪÀAvÀºÀzÀÄÝ. ¸ÀzÁ²ªÀ §æºÉäÃAzÀægÀ ¨Á®åzÀ ºÉ¸ÀgÀÄ ²ªÀgÁªÀÄPÀȵÀÚ. EªÀgÀ PÁ® ¸Àj ¸ÀĪÀiÁgÀÄ ºÀ¢£ÉAl£Éà ±ÀvÀªÀiÁ£ÀzÀ D¢¨sÁUÀ. PÀÄA¨sÀPÉÆÃtzÀ ªÉÆÃPÀë ¸ÉÆÃªÀĸÀÄAzÀgÀ CªÀzsÁ¤ ªÀÄvÀÄÛ ¥ÁªÀðw J£ÀÄߪÀ vÉ®ÄUÀÄ ªÀÄÆ®zÀ zÀA¥ÀwUÀ¼ÀÄ EªÀgÀ vÁ¬Ä vÀAzÉAiÀÄgÉAzÀÄ w½zÀÄ §gÀÄvÀÛzÉ. ¨Á®åzÀ°èAiÉÄà §ºÀ¼À ¥Àæw¨sÀªÀAvÀgÁzÀ CªÀgÀÄ C£ÉÃPÀ ªÉÃzÀ ±Á¸ÀÛçUÀ¼À£ÀÄß C¨sÁå¸ÀªÀiÁqÀ®Ä wgÀÄ«¸ÉÊ£À®ÆègÀÄ JA§°èUÉ ºÉÆÃUÀÄwÛzÀÝgÀAvÉ. C°è CªÀgÀÄ M§â CAiÀÄåªÁ¼ï J£ÀÄߪÀ zÉÆqÀØ ¹zÀÞgÀ£ÀÄß ¨sÉÃn ªÀiÁrzÀÝgÀAvÉ. vÁ¬ÄvÀAzÉAiÀÄgÀ DUÀæºÀPÉÌ PÀlÄÖ©zÀÄÝ ºÀ¢£ÉüÀ£Éà ªÀAiÀĹìUÉ ªÀÄzÀĪÉAiÀiÁzÀgÀÆ ¯ËQPÀzÀ C£Á¸ÀQÛ¬ÄAzÀ ªÀÄ£ÉAiÀÄ£ÀÄß vÉÆgÉzÀÄ ¸À£Áå¸À ¹éÃPÀj¹zÀgÀAvÉ. EªÀgÀ C¸ÁªÀiÁ£Àå «zÀévÀÄÛ ªÀÄvÀÄÛ ¥Àæw¨sÉAiÀÄ£ÀÄß UÀªÀĤ¹zÀ CA¢£À ªÉÄʸÀÆgÀÄ ªÀĺÁgÁdgÀÄ D¸ÁÜ£À «zÁéA¸ÀgÀ£ÁßV £ÉëĹzÀgÀAvÉ. ªÁPÁåxÀð ¸À¨sÉUÀ¼À£ÀÄß £ÀqɸÀĪÀÅzÀÄ, ±Á¸ÁÛçxÀð ¸ÀàzsÉðUÀ¼À£ÀÄß £Àqɹ ¥ÀArvÀgÀ£ÀÄß DAiÉÄÌ ªÀiÁqÀĪÀÅzÀÄ ªÀÄÄAvÁzÀ PÉ®¸ÀUÀ½UÉ £ÉêÀÄPÀªÁzÀgÀÄ. ªÉÃzÁAvÀzÀ ZÀZÉð, ªÀUÁézÀUÀ¼À°è ¥ÀArvÀgÀ£ÀÄß ºÀtÂAiÀÄĪÀÅzÉà PÉ®¸ÀªÁ¬ÄvÀÄ. EzÀ£ÀÄß w½zÀ CªÀgÀ UÀÄgÀÄ vÀªÀÄä §½UÉ PÀgɹPÉÆAqÀÄ “J®ègÀ ¨ÁAiÀÄ£ÀÆß ªÀÄÄaѸÀÄwÛ¢ÝÃAiÉÄÃ, DzÀgÉ ¤£Àß ¨Á¬Ä ªÀÄÄZÀÄѪÀÅzÀÄ AiÀiÁªÁUÀ?” JAzÀÄ PÉýzÀgÀAvÉ. UÀÄgÀÄUÀ¼À ªÀiÁvÀÄ ¸ÀzÁ²ªÀ §æºÉäÃAzÀæ°è ¸ÁUÀgÀzÀ §zÀ¯ÁªÀuÉAiÀÄ£ÀÄß vÀA¢vÀÄ. PÉÆ£ÉUÉ J®èªÀ£ÀÆß ©¸ÀÄlÄ DvÀä±ÉÆÃzsÀ£ÉAiÀÄ°è ¤gÀvÀgÁzÀgÀÄ. fêÀ£À ¥ÀAiÀÄðAvÀ ªÀiË£À zsÁgÀuÉ ªÀiÁrzÀgÀÄ. J®è jÃwAiÀÄ ¥Áæ¥ÀAaPÀ £ÀqÁªÀ½UÀ¼À£ÀÄß vÉÆgÉzÀÄ ºÀÄZÀÑ£ÀAvÉ C¯ÉzÀgÀÄ. ¸À£Áå¸À ¹éÃPÀj¹ PÀpt vÀ¥ÀzÀ°è ¤gÀvÀgÁzÀgÀÄ. ¸ÀvÀå ±ÉÆÃzsÀ£ÉAiÀÄ UÁqsÀ CªÀ¸ÉÜAiÀİè vÀªÀÄä£Éßà vÁªÀÅ ªÀÄgÉvÀÄ ¨ÉvÀÛ¯ÉAiÀiÁV PÉ®ªÉǪÉÄä CgɧvÀÛ¯ÉAiÀiÁV C¯ÉAiÀÄÄwÛzÀÝgÀAvÉ. UÀÄgÀÄUÀ¼ÁzÀ ¥ÀgÀªÀIJªÉÃAzÀæ ¸ÀgÀ¸ÀéwAiÀĪÀgÀ£ÀÄß ¨sÉÃnªÀiÁrzÁUÀ CªÀgÀÄ EªÀjUÉ ¸ÀzÁ²ªÀ §æºÉäÃAzÀæ JAzÀÄ £ÁªÀÄPÀgÀtªÀiÁrzÀgÉAzÀÄ w½zÀÄ §gÀÄvÀÛzÉ. vÀªÀÄä DzÁåvÀä ¸ÁzsÀ£ÉAiÀÄ ¥ÀAiÀÄtzÀ°è ªÉÃzÁAvÀzÀ ªÉÄÃ¯É ‘§æºÀä ¸ÀÆvÀææªÀÈwÛ CxÀªÁ §æºÀä vÀvÀé ¥ÀæPÁ²PÁ’, ‘AiÉÆÃUÀ ¸ÀÄzsÁPÀgÀ’, ‘¹zÁÞAvÀ PÀ®àªÀ°è’, ‘¥ÀgÀªÀĺÀA¸ÁZÁAiÀÄð’, ‘²ªÀAiÉÆÃUÀ ¢Ã¦PÁ’, ªÀÄÄAvÁzÀ 16PÀÆÌ ºÉZÀÄÑ CzÉÊvÀ ¹zÁÞAvÀPÉÌ ¸ÀA§A¢ü¹zÀÀ PÀÈwUÀ¼À£ÀÄß gÀa¹zÀ ±ÉæÃAiÀĸÀÄì EªÀgÀzÀÄ. ¸ÁªÀiÁ£ÀåªÁV J®è CªÀzsÀÆvÀgÀ fêÀ£ÀzÀ®Æè £ÀqÉAiÀÄĪÀ ¥ÀªÁqÀzÀ WÀl£ÉUÀ¼ÀÄ EªÀgÀ fêÀ£ÀzÀzÀ®Æè £ÀqÉ¢gÀ§ºÀÄzÁzÀ C£ÉÃPÀ PÀvÉUÀ½ªÉ. EªÀÅUÀ¼À£ÀÄß ‘¸ÀzÁ²ªÀ ¸ÀÛªÀ’ J£ÀÄߪÀ ºÉ¸Àj£À°è UÀÄrAiÀÄ ©üwÛUÀ¼À ªÉÄÃ¯É PÉvÀÛ¯ÁVzÉ. EªÀgÀÄ C£ÉÃPÀ ¸ÁzsÀPÀjUÉ ¢ÃPÉëAiÀÄ£ÀÄß PÉÆlÖ G¯ÉèÃRUÀ¼ÀÆ EªÉ. D¸ÁÜ£À «zÁéA¸À ªÀįÁèj J£ÀÄߪÀ ¢Ã¥ÁA¨Á¥ÀÄjAiÀÄ «zÁéA¸À£ÉƧ⠸ÀzÁ²ªÀ§æºÉäÃAzÀægÀ AiÉÆÃUÀ ±ÀQÛAiÀÄ §UÉUÉ ¸ÀgÀ¥sÉÆÃf gÁd¤UÉ §gÉzÀ£É£À߯ÁzÀ ¥ÀvÀæªÀÅ vÀAeÁªÀÇj£À ¸ÀgÀ¸Àéw ªÀĺÀ¯ï£À ¸ÀAUÀæºÀUÀ¼À°è EªÉAiÀÄAvÉ. UÀÄgÀÄUÀ¼ÁzÀ ¥ÀgÀªÀIJªÉÃAzÀæjUÉ MªÉÄä, CªÀgÀ ²µÀå ¸ÁªÀiÁfPÀ ²µÁÖZÁgÀUÀ¼À£ÀÄß ªÀÄgÉvÀÄ ºÀÄZÀÑ£ÀAvÉ gÀ¸ÉÛUÀ¼À°è PÀÄtÂAiÀÄÄwÛgÀĪÀÅzÀgÀ §UÉÎ zÀÆgÀÄ ºÉÆÃ¬ÄvÀÄ. ²µÀå ºÀÄZÀÑ£ÁzÀ §UÉÎ CªÀjUÉ D£ÀAzÀ ªÁ¬ÄvÀÄ. £À£ÀßAvÀºÀ CzÀȵÀÖ±Á°UÀ¼ÀÄ EzÁÝgÉAiÉÄÃ? JAzÀÄ ¸ÀÄT¹zÀgÀÄ. MªÉÄä ¸ÀzÁ²ªÀgÀÄ ²æÃzsÀgÀ CAiÀÄåªÁ¼ï CªÀgÀ£À£ÀÄ ¨sÉÃnAiÀiÁzÁUÀ ‘¤£Àß ªÀiË£À £À£ÀUÉ ¸ÀAvÉÆÃµÀvÀA¢zÉ. DzÀgÉ zÉêÀgÀ PÀÄjvÀÄ ºÁqÀĪÀÅzÀ£ÀÄß AiÀiÁPÉ ©lÄÖ ©mÉÖ? JAzÀÄ PÉýzÀgÀÄ. DUÀ ªÀiË£À ªÀÄÄjzÀgÀÄ. CA¢¤AzÀ C£ÉÃPÀ ¸ÀAVÃvÀ PÀÈwUÀ¼À gÀZÀ£ÉUÀ¼À°è vÉÆqÀVPÉÆAqÀgÀÄ. CªÀÅUÀ¼À°è FUÀ zÉÆgÉwgÀĪÀÅzÀÄ PÉêÀ® 33 PÀÈwUÀ¼ÀÄ ªÀiÁvÀæ. EªÀgÀ PÀÄjvÁzÀ C£ÉÃPÀ UÀæAxÀUÀ¼ÀÄ ºÉÆgÀ§A¢ªÉ. C®èzÉ vÀ«Ä½£À°è ZÀ®£ÀavÀæ PÀÆqÀ EzÉ. vÀ«Ä½£À ¥Àæ¹zÀÞ QÃvÀð£ÀPÁwð «±ÁR ºÀjAiÀĪÀgÀÄ ¥Àæ¸ÀÄÛvÀ ¥Àr¸ÀĪÀ ¸ÀzÁ²ªÀ §æºÉäÃAzÀæ ZÀjvÀA §ºÀ¼À d£À¦æAiÀĪÁVzÉ. ¸ÀzÁ²ªÀ §æºÉäÃAzÀæÀægÀÄ M§â CªÀzsÀÆvÀgÁzÀÄzÀjAzÀ¯ÉÆÃ K£ÉÆÃ CªÀgÀÄ gÀa¹gÀĪÀ ¸ÀAVÃvÀ PÀÈwUÀ¼À°è DvÀä±ÉÆÃzsÀ£ÉAiÀÄ D¯Á¥À«zÉAiÉÄà ºÉÆgÀvÀÄ ¸ÁPÁgÀ ¨sÀQÛAiÀÄ ªÉʨsÀªÀUÀ½®è. CzÉéöÊvÀzÀ ¥ÀgÀªÀĺÀA¸À UÀwAiÉÄà CªÀgÀ ªÁUÉÎÃAiÀÄvÉAiÀÄ ¸ÀégÀÆ¥ÀªÀÇ DVzÉ. EªÀgÀ ºÉ¸Àj£À°è EA¢UÀÆ ¥Àæw ªÀgÀĵÀ £ÉgÀÆgÀ ªÀÄvÀÄÛ ªÀÄ£ÀªÀÄzÀÄgÉÊ JA§°è ¸ÀAVÃvÉÆÃvÀìªÀªÀ£ÀÄß £ÀqɸÀ¯ÁUÀÄvÀÛzÉ. ಓಂಕಾರದ ಶಂಖನಾದ ಗಿರಿಜಾಶಾಸ್ತ್ರಿ “ಮಾನಸ ಸಂಚರರೇ ಬ್ರಹ್ಮನಿ ಮಾನಸ ಸಂಚರರೇ” (ಓ ಮನಸ್ಸೇ ಬ್ರಹ್ಮನೆಡೆಗೆ ಸಂಚರಿಸು) ಈ ಹಾಡು ಪ್ರಖ್ಯಾತ ಸಂಗೀತಗಾರರನ್ನು ಮಾತ್ರ ಸೆಳೆದಿಲ್ಲ, ಬದಲಾಗಿ 70 ರ ದಶಕದ ಕೊನೆಗೆ ತೆಲುಗಿನಲ್ಲಿ ‘ಶಂಕರಾಭರಣಂ’ ಚಲನಚಿತ್ರ ತೆರೆಕಂಡ ಹೊಸತರಲ್ಲಿ ಈ ಹಾಡು ಎಲ್ಲ ದಕ್ಷ್ಷಿಣ ಭಾರತೀಯರ ನಾಲಗೆಯ ಮೇಲಾಡುತ್ತಿತ್ತು. ಸಾಮ ರಾಗದಲ್ಲಿರುವ ಈ ಕೃತಿಯನ್ನು ರಚಿಸಿದವರು ಸದಾಶಿವ ಬ್ರಹ್ಮೇಂದ್ರರು ಎಂಬ ಸಂಗತಿ ಹೆಚ್ಚಿನ ಜನಕ್ಕೆ ಗೊತ್ತಿಲ್ಲ. ಸದಾಶಿವ ಬ್ರಹ್ಮೇಂದ್ರರು ಅದ್ವೈತ ಸಿದ್ಧಾಂತಕ್ಕೆ ತಮ್ಮನ್ನು ಮುಡಿಪಾಗಿಟ್ಟುಕೊಂಡ ಒಬ್ಬ ಅವಧೂತರೆಂದು ಹೇಳಲಾಗುತ್ತದೆ. ಕರ್ನಾಟಕ ಸಂಗೀತದ ವಾಗ್ಗೇಯಕಾರರಲ್ಲಿ ಕೂಡ ಇವರು ಪ್ರಮುಖರು. ಸಂಗೀತ ವಲಯದಲ್ಲಿ ಇವರ ಇನ್ನೊಂದು ಕೃತಿ ‘ಬ್ರೂಹಿ ಮುಕುಂದೇತಿ ರಸನೇ’ (ನಾಲಗೆಯೇ ಮುಕುಂದನ ನಾಮವನ್ನು ಜಪಿಸು) ಎನ್ನುವ ಕೀರ್ತನೆಯೂ ಅಷ್ಟೇ ಪ್ರಸಿದ್ಧವಾಗಿದೆ. ಟಿ.ಎಮ್ ಕೃಷ್ಣ ಇದನ್ನು ಕುರುಂಜಿ ರಾಗದಲ್ಲಿ ಸೊಗಸಾಗಿ ಹಾಡಿದ್ದಾರೆ. ‘ಸರ್ವಂ ಬ್ರಹ್ಮಮಯಂ’, ‘ನಹಿರೇ ನಹೀ ಶಂಕಾ’, ‘ಆನಂದಪೂರ್ಣ ಬೋಧೋಹಂ’, ‘ಸ್ಥಿರತಾ ನಹೀ ನಹಿರೇ ಮಾನಸಾ’, ‘ತಾಪತ್ರಯ ಸಾಗರಮಜ್ಞಾನ’, ‘ಸ್ಮರ ವಾರಂ ವಾರಂ ಚೇತಕ’, ‘ಪೂರ್ಣಬೋಧೋಹಂ ಸದಾನಂದ ಪೂರ್ಣಬೋಧೋಹಂ’ ಮುಂತಾದವು ಅವರು ರಚಿಸಿದರೆನ್ನಲಾದ ಇಪ್ಪತ್ತಕ್ಕೂ ಹೆಚ್ಚಿನ ಸಂಗೀತಕ್ಕೆ ಸಂಬಂಧಿಸಿದ ಸಂಸ್ಕøತ ಕೃತಿಗಳು. ಮಧುರೈ ನಿಂದ ಸುಮಾರು ಎರಡೂವರೆ ಗಂಟೆಗಳ ಪ್ರಯಾಣ ಕರೂರಿಗೆ. ಕರೂರು ಅದರ ವೈಶ್ಯ ಬ್ಯಾಂಕಿನಿಂದಾಗಿ ಎಲ್ಲರಿಗೆ ಪರಿಚಿತ. ಆದರೆ ಅದರ ಇನ್ನೊಂದು ಮುಖ ಮಾತ್ರ ಹೆಚ್ಚಿನ ಜನರಿಗೆ ಗೊತ್ತಿಲ್ಲ. ಕರೂರ ಬಳಿ ಇರುವ ನೆರೂರ್ ಎಂಬ ಪುಟ್ಟ ಹಳ್ಳಿಯಲ್ಲಿ ಸದಾಶಿವ ಬ್ರಹ್ಮೇಂದ್ರರ ಸಮಾಧಿ ಇದೆ. ಕರೂರಿನಿಂದಲೇ ನೆರೂರಿಗೆ ಹೋಗಬೇಕು ಅರ್ಧ ತಾಸಿನ ಪ್ರಯಾಣ. ಕಾವೇರಿ ತೀರದಲ್ಲಿರುವ ನೆರೂರಿನ ನಿರ್ಜನ ಹಳ್ಳಿಯಲ್ಲಿಳಿದು ಸದಾಶಿವ ಬ್ರಹ್ಮೇಂದ್ರರ ಆಶ್ರಮದ ಮುಂದೆ ನಾವು ನಿಂತಾಗ ಕತ್ತಲು ಆವರಿಸಿತ್ತು. ಇದನ್ನು ‘ಸದಾಶಿವ ಬ್ರಹ್ಮೇಂದ್ರರ ಅಧಿಷ್ಠಾನ’ ಎಂದು ಕರೆಯಲಾಗುತ್ತದೆ. ನಿಶ್ಶಬ್ದವಾದ ಪ್ರಶಾಂತ ಆಶ್ರಮದೊಳಗೆ ಅಕ್ಷರಶಃ ‘ತೆಂಗು ಗರಿಗಳ ನಡುವೆ ತುಂಬು ಚಂದಿರ ಬಂದು’ ಅವು ಗಾಳಿಗೆ ಅಲುಗಾಡುವಾಗ ‘ಬೆಳ್ಳಿ ಹಸುಗಳ ಹಾಲು’ ಎಲ್ಲೆಡೆ ಚೆಲ್ಲಿತ್ತು. ಹೆಜ್ಜೆ ಇಟ್ಟ ತಕ್ಷಣ ಪ್ರಯಾಣದ ಆಯಾಸವೆಲ್ಲಾ ಕರಗಿ ಹೋಗುವ ವಾತವರಣ. ‘ಧ್ಯಾನ ಸಾಧನೆ’ ಇಂದು ಮಾರುಕಟ್ಟೆಯ ವಸ್ತುವಾಗಿ ಬಿಟ್ಟಿರುವಾಗ, ಎಲ್ಲಾ ಆಶ್ರಮಗಳೂ ಸಂತೆಮಾಳಗಳೇ ಆಗಿರುವಾಗ ಈ ಆಶ್ರಮ ಮಾತ್ರ್ರ ಅವೆಲ್ಲಕ್ಕೂ ಅಪವಾದವಾಗಿ ನಿಂತಿತ್ತು. ಆ ರಾತ್ರಿ ತಂಗಲು ನಮಗೆ ಒಂದು ಕೋಣೆ ಬೇಕೆಂದು ಅಲ್ಲಿನ ವ್ಯವಸ್ಥಾಪಕರನ್ನು ಕೇಳಿದಾಗ ಹಿಂದೆ ಮುಂದೆ ನೋಡದೇ ಒಪ್ಪಿ ಕೋಣೆಯ ಕೀಲಿಕೈ ಕೊಟ್ಟರು. ಅಲ್ಲಿರುವ ಕೋಣೆಗಳು ಕೂಡ ನಾಲ್ಕೋ, ಐದೋ ಅಷ್ಟೇ. ಹೆಚ್ಚು ಜನ ಬರಲು ಅಲ್ಲಿ ಅವಕಾಶವೇ ಇಲ್ಲ. ಮರಗಿಡಗಳಿಂದ, ಹಸು ಕರು ಕೊಟ್ಟಿಗೆಯಿಂದ ಕೂಡಿದ, ಜೀರುಂಡೆಗಳ ಶಬ್ದ ಬಿಟ್ಟರೆ ಬೇರೊಂದು ಸದ್ದಿಲ್ಲದ ಆಶ್ರಮ. ಸದಾ ಸದ್ದು ಗದ್ದಲಗಳ ನಡುವೆಯೇ ಬದುಕುತ್ತಿರುವ ನಮಗೆ ಅಲ್ಲಿಯೇ ಕೆಲವಾರು ದಿನಗಳಾದರೂ ತಂಗಬೇಕೆಂಬ ಆಸೆಯನ್ನು ಆ ಪರಿಸರ ಉಂಟುಮಾಡಿತ್ತು. ಸ್ವಲ್ಪ ದೂರದಲ್ಲಿಯೇ ಈಶ್ವರನ ಒಂದು ಪುಟ್ಟ ಗುಡಿ. ಅದರ ಹಿಂಬದಿಯಲ್ಲಿಯೇ ಸದಾಶಿವ ಬ್ರಹ್ಮೇಂದ್ರರ ಸಮಾಧಿ. ಇಲ್ಲಿ ಸದಾಶಿವರು ಜೀವಂತ ಸಮಾಧಿಯಾಗಿದ್ದರೆಂದು ಹೇಳಲಾಗುತ್ತದೆ. ಈ ಆಧಿಷ್ಠಾನವೇ ಅಲ್ಲದೇ ಮನಮದುರೈ. ಕಾಶಿ, ಪೂರಿ, ಕರಾಚಿಗಳಲ್ಲಿಯೂ ಇವರಿಗೆ ಸಮಾಧಿಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ತಿಳಿದುಬರುತ್ತದೆ. ಪರಮಹಂಸ ಯೋಗಾನಂದರ ‘Autobiography of a YOGI” ಪುಸ್ತಕದಲ್ಲಿ ಇವರ ಜೀವನ ಚರಿತ್ರೆಯ ವಿವರಗಳು, ಪವಾಡಗಳು ಹಾಗೂ ಜೀವ ಸಮಾಧಿಯ ಉಲ್ಲೇಖವಿದೆ. (“An Idyll in South India” pp 389-391”) ಸದಾಶಿವ ಬ್ರಹ್ಮೇಂದ್ರರು ಸಮಾಧಿಯಾಗುವ ಮೊದಲು(1755), ತಾವು ಜೀವ ಸಮಾಧಿಯಾದ ಒಂಬತ್ತನೆಯ ದಿನ ತಮ್ಮ ತಲೆಯ ಮೇಲೆ ಒಂದು ಬಿಲ್ವ ವೃಕ್ಷ ಬೆಳೆಯುವುದೆಂದೂ, ಹತ್ತನೆಯ ದಿನ ಕಾಶಿಯಿಂದ ಬ್ರಹ್ಮಚಾರಿಯೊಬ್ಬ ಶಿವಲಿಂಗವನ್ನು ತರುವವನೆಂದೂ ಅದನ್ನು ಬಿಲ್ವವೃಕ್ಷದ ಮುಂದೆ ಪ್ರತಿಷ್ಠ್ಠಾಪಿಸಬೇಕೆಂದು ಹೇಳಿದರಂತೆ. ಅದು ಹಾಗೆಯೇ ನಡೆಯಿತೆಂಬ ಕಥೆಯಿದೆ. ಅದಕ್ಕೆ ಸಾಕ್ಷಿಯೆಂಬಂತೆ ಈಗಲೂ ಬಿಲ್ವವೃಕ್ಷಕ್ಕೆ ಪೂಜೆ ನಡೆಸಲಾಗುತ್ತದೆ. ಇದರ ಅಲಂಕಾರವೆಂದರೆ ವೃಕ್ಷಕ್ಕೆ ಸುತ್ತಲಾಗಿರುವ ಒಂದು ಕಾಷಾಯ ವಸ್ತ್ರವಷ್ಟೇ. ಸಮಾಧಿಯೆಂದರೆ ಆ ವೃಕ್ಷವೇ ಆಗಿದೆ. ಅದರ ಮುಂದೆ ಸರಳವಾದ ಮೇಲ್ಛಾವಣಿ ಇರುವ ಶಿವಲಿಂಗಕ್ಕೆ ಕೂಡ ಈಗ ಪೂಜೆ ನಡೆಯುತ್ತದೆ. ಬಿಲ್ವವೃಕ್ಷದ ಆವರಣದಲ್ಲಿ ಧ್ಯಾನ ಮಾಡಲು ಪ್ರಶಸ್ತವಾದ ಜಾಗ. ಇಲ್ಲಿ ಹೆಚ್ಚು ಜನ ಧ್ಯಾನ ಮಾಡಲೆಂದೇ ಬರುತ್ತಾರೆ. ಪೂಜೆಯ ಗದ್ದಲಕ್ಕಿಂತ ಧ್ಯಾನಕ್ಕೇ ಹೆಚ್ಚು ಪಾಶಸ್ತ್ಯ ಇಲ್ಲಿ. ದೇಶದ ವಿವಿಧ ಭಾಗದಿಂದ ಸಾಧಕರು ಧ್ಯಾನ ಸಾಧನೆಗಾಗಿಯೇ ಇಲ್ಲಿ ಬಂದು ಹಲವಾರು ದಿನಗಳು ತಂಗುವುದುಂಟು. ಈ ಆಶ್ರಮದ ಆಡಳಿತಕ್ಕೆ ಯಾವುದೇ ಲಾಭಾಕಾಂಕ್ಷೆಯಿಲ್ಲ ಎನ್ನುವುದು, ಕಡಿಮೆ ಬೆಲೆಯ ಸುಸಜ್ಜಿತ ಕೋಣೆಗಳು ಇರುವುದೇ ಸಾಕ್ಷಿ. ಹೊರಗಿನಿಂದ ಬಂದವರಿಗೆ ಇಲ್ಲಿ ದೊರಕುವ ಆತಿಥ್ಯ, ಸಿಬ್ಬಂದಿ ವರ್ಗದವರ ಪ್ರೀತಿಯ ನಡಾವಳಿ ಬೆರಗು ಹುಟ್ಟಿಸುವಂತಹದ್ದು. ಸದಾಶಿವ ಬ್ರಹ್ಮೇಂದ್ರರ ಬಾಲ್ಯದ ಹೆಸರು ಶಿವರಾಮಕೃಷ್ಣ. ಇವರ ಕಾಲ ಸರಿ ಸುಮಾರು ಹದಿನೆಂಟನೇ ಶತಮಾನದ ಆದಿಭಾಗ. ಕುಂಭಕೋಣದ ಮೋಕ್ಷ ಸೋಮಸುಂದರ ಅವಧಾನಿ ಮತ್ತು ಪಾರ್ವತಿ ಎನ್ನುವ ತೆಲುಗು ಮೂಲದ ದಂಪತಿಗಳು ಇವರ ತಾಯಿ ತಂದೆಯರೆಂದು ತಿಳಿದು ಬರುತ್ತದೆ. ಬಾಲ್ಯದಲ್ಲಿಯೇ ಬಹಳ ಪ್ರತಿಭವಂತರಾದ ಅವರು ಅನೇಕ ವೇದ ಶಾಸ್ತ್ರಗಳನ್ನು ಅಭ್ಯಾಸ ಮಾಡಿದ್ದರಂತೆ. ತಾಯಿತಂದೆಯರ ಆಗ್ರಹಕ್ಕೆ ಕಟ್ಟುಬಿದ್ದು ಹದಿನೇಳನೇ ವಯಸ್ಸಿಗೆ ಮದುವೆಯಾದರೂ, ಲೌಕಿಕದ ಬಗ್ಗೆ ಅನಾಸಕ್ತರಾದ ಇವರು ಮನೆಯನ್ನು ತೊರೆದು ಸನ್ಯಾಸ ಸ್ವೀಕರಿಸಿದರಂತೆ. ಇವರ ಅಸಾಮಾನ್ಯ ವಿದ್ವತ್ತು ಮತ್ತು ಪ್ರತಿಭೆಯನ್ನು ಗಮನಿಸಿದ ಅಂದಿನ ಮೈಸೂರು ಮಹಾರಾಜರು ಆಸ್ಥಾನ ವಿದ್ವಾಂಸರನ್ನಾಗಿ ನೇಮಿಸಿದರಂತೆ. ವಾಕ್ಯಾರ್ಥ ಸಭೆಗಳನ್ನು ನಡೆಸುವುದು, ಶಾಸ್ತ್ರಾರ್ಥ ಸ್ಪರ್ಧೆಗಳನ್ನು ನಡೆಸಿ ಪಂಡಿತರನ್ನು ಆಯ್ಕೆ ಮಾಡುವುದು ಮುಂತಾದ ಕೆಲಸಗಳಿಗೆ ನೇಮಕವಾದರು. ವೇದಾಂತದ ಚರ್ಚೆ, ವಾಗ್ವಾದಗಳಲ್ಲಿ ಪಂಡಿತರನ್ನು ಹಣಿಯುವುದೇ ಕೆಲಸವಾಯಿತು. ಇದನ್ನು ಒಬ್ಬ ವಾಕ್ಯಾರ್ಥಿಯಿಂದ ತಿಳಿದ ಅವರ ಗುರು, ಸದಾಶಿವರನ್ನು ತಮ್ಮ ಬಳಿಗೆ ಕರೆಸಿಕೊಂಡು “ಎಲ್ಲರ ಬಾಯನ್ನೂ ಮುಚ್ಚಿಸುತ್ತಿದ್ದೀಯೇ, ಆದರೆ ನಿನ್ನ ಬಾಯಿ ಮುಚ್ಚುವುದು ಯಾವಾಗ?” ಎಂದು ಕೇಳಿದರಂತೆ. ಗುರುಗಳ ಮಾತು ಸದಾಶಿವ ಬ್ರಹ್ಮೇಂದ್ರಲ್ಲಿ ಸಾಗರದ ಬದಲಾವಣೆಯನ್ನು ತಂದಿತು. ಕೊನೆಗೆ ಎಲ್ಲವನ್ನೂ ಬಿಸುಟು ಆತ್ಮಶೋಧನೆಯಲ್ಲಿ ನಿರತರಾದರು. ಜೀವನ ಪರ್ಯಂತ ಮೌನ ಧಾರಣೆ ಮಾಡಿದರು. ಎಲ್ಲ ರೀತಿಯ ಪ್ರಾಪಂಚಿಕ ನಡಾವಳಿಗಳನ್ನು ತೊರೆದು ಹುಚ್ಚನಂತೆ ಅಲೆದರು. ಸನ್ಯಾಸ ಸ್ವೀಕರಿಸಿ ಕಠಿಣ ತಪದಲ್ಲಿ ನಿರತರಾದರು. ಸತ್ಯ ಶೋಧನೆಯ ಗಾಢ ಅವಸ್ಥೆಯಲ್ಲಿ ತಮ್ಮನ್ನೇ ತಾವು ಮರೆತು ಬೆತ್ತಲೆಯಾಗಿ ಕೆಲವೊಮ್ಮೆ ಅರೆಬತ್ತಲೆಯಾಗಿ ಅಲೆಯುತ್ತಿದ್ದರಂತೆ. ಗುರುಗಳಾದ ಪರಮಶಿವೇಂದ್ರ ಸರಸ್ವತಿಯವರನ್ನು ಭೇಟಿಮಾಡಿದಾಗ ಅವರು ಇವರಿಗೆ ಸದಾಶಿವ ಬ್ರಹ್ಮೇಂದ್ರ ಎಂದು ನಾಮಕರಣಮಾಡಿದರೆಂದು ತಿಳಿದು ಬರುತ್ತದೆ. ತಮ್ಮ ಆಧ್ಯಾತ್ಮ ಸಾಧನೆಯ ಪಯಣದಲ್ಲಿ ವೇದಾಂತದ ಮೇಲೆ ‘ಬ್ರಹ್ಮ ಸೂತ್ರ್ರವೃತ್ತಿ ಅಥವಾ ಬ್ರಹ್ಮ ತತ್ವ ಪ್ರಕಾಶಿಕಾ’, ‘ಯೋಗ ಸುಧಾಕರ’, ‘ಸಿದ್ಧಾಂತ ಕಲ್ಪವಲ್ಲಿ’, ‘ಪರಮಹಂಸಾಚಾರ್ಯ’, ‘ಶಿವಯೋಗ ದೀಪಿಕಾ’, ಮುಂತಾದ 16ಕ್ಕೂ ಹೆಚ್ಚು ಅದೈತ ಸಿದ್ಧಾಂತಕ್ಕೆ ಸಂಬಂಧಿಸಿದ ಕೃತಿಗಳನ್ನು ರಚಿಸಿದ ಶ್ರೇಯಸ್ಸು ಇವರದು. ಸಾಮಾನ್ಯವಾಗಿ ಎಲ್ಲ ಅವಧೂತರ ಜೀವನದಲ್ಲೂ ನಡೆಯುವ ಪವಾಡದ ಘಟನೆಗಳು ಇವರ ಜೀವನದದಲ್ಲೂ ನಡೆದಿರಬಹುದಾದ ಅನೇಕ ಕತೆಗಳಿವೆ. ಇವುಗಳನ್ನು ‘ಸದಾಶಿವ ಸ್ತವ’ ಎನ್ನುವ ಹೆಸರಿನಲ್ಲಿ ಗುಡಿಯ ಭಿತ್ತಿಗಳ ಮೇಲೆ ಕೆತ್ತಲಾಗಿದೆ. ಇವರು ಅನೇಕ ಸಾಧಕರಿಗೆ ದೀಕ್ಷೆಯನ್ನು ಕೊಟ್ಟ ಉಲ್ಲೇಖಗಳೂ ಇವೆ. ಆಸ್ಥಾನ ವಿದ್ವಾಂಸ ಮಲ್ಲಾರಿ ಎನ್ನುವ ದೀಪಾಂಬಾಪುರಿಯ ವಿದ್ವಾಂಸನೊಬ್ಬ ಸದಾಶಿವಬ್ರಹ್ಮೇಂದ್ರರ ಯೋಗ ಶಕ್ತಿಯ ಬಗೆಗೆ ಸರಫೋಜಿ ರಾಜನಿಗೆ ಬರೆದನೆನ್ನಲಾದ ಪತ್ರವು ತಂಜಾವೂರಿನ ಸರಸ್ವತಿ ಮಹಲ್ ನ ಸಂಗ್ರಹಗಳಲ್ಲಿ ಇದೆಯಂತೆ. ಗುರುಗಳಾದ ಪರಮಶಿವೇಂದ್ರರಿಗೆ ಒಮ್ಮೆ, ಅವರ ಶಿಷ್ಯ ಸಾಮಾಜಿಕ ಶಿಷ್ಟಾಚಾರಗಳನ್ನು ಮರೆತು ಹುಚ್ಚನಂತೆ ರಸ್ತೆಗಳಲ್ಲಿ ಕುಣಿಯುತ್ತಿರುವುದರ ಬಗ್ಗೆ ದೂರು ಹೋಯಿತು. ಶಿಷ್ಯ ಹುಚ್ಚನಾದ ಬಗ್ಗೆ ಅವರಿಗೆ ಆನಂದ ವಾಯಿತು. ನನ್ನಂತಹ ಅದೃಷ್ಟಶಾಲಿಗಳು ಇದ್ದಾರೆಯೇ? ಎಂದು ಸುಖಿಸಿದರು. ಒಮ್ಮೆ ಸದಾಶಿವರು ಶ್ರೀಧರ ಅಯ್ಯವಾಳ್ ಅವರನ್ನು ಭೇಟಿಯಾದಾಗ ‘ನಿನ್ನ ಮೌನ ನನಗೆ ಸಂತೋಷತಂದಿದೆ. ಆದರೆ ದೇವರ ಕುರಿತು ಹಾಡುವುದನ್ನು ಯಾಕೆ ಬಿಟ್ಟು ಬಿಟ್ಟೆ? ಎಂದು ಕೇಳಿದರು. ಆಗ ಮೌನ ಮುರಿದರು. ಅಂದಿನಿಂದ ಅನೇಕ ಸಂಗೀತ ಕೃತಿಗಳ ರಚನೆಗಳಲ್ಲಿ ತೊಡಗಿಕೊಂಡರು. ಅವುಗಳಲ್ಲಿ ಈಗ ದೊರೆತಿರುವುದು ಕೇವಲ 33 ಕೃತಿಗಳು ಮಾತ್ರ. ಇವರ ಕುರಿತಾದ ಅನೇಕ ಗ್ರಂಥಗಳು ಹೊರಬಂದಿವೆ. ಅಲ್ಲದೆ ತಮಿಳಿನಲ್ಲಿ ಚಲನಚಿತ್ರ ಕೂಡ ಇದೆ. ತಮಿಳಿನ ಪ್ರಸಿದ್ಧ ಕೀರ್ತನಕಾರ್ತಿ ವಿಶಾಖ ಹರಿಯವರು ಪ್ರಸ್ತುತ ಪಡಿಸುವ ಸದಾಶಿವ ಬ್ರಹ್ಮೇಂದ್ರ ಚರಿತಂ ಬಹಳ ಜನಪ್ರಿಯವಾಗಿದೆ. ಸದಾಶಿವ ಬ್ರಹ್ಮೇಂದ್ರರು ಒಬ್ಬ ಅವಧೂತರಾದುದರಿಂದಲೋ ಏನೋ ಅವರು ರಚಿಸಿರುವ ಸಂಗೀತ ಕೃತಿಗಳಲ್ಲಿ ಆತ್ಮಶೋಧನೆಯ ಆಲಾಪವಿದೆಯೇ ಹೊರತು ಸಾಕಾರ ಭಕ್ತಿಯ ವೈಭವಗಳಿಲ್ಲ. ಅದ್ವೈತದ ಪರಮಹಂಸ ಗತಿಯೇ ಅವರ ವಾಗ್ಗೇಯತೆಯ ಸ್ವರೂಪವೂ ಆಗಿದೆ. ಇವರ ಹೆಸರಿನಲ್ಲಿ ಇಂದಿಗೂ ಪ್ರತಿ ವರುಷ ನೆರೂರ ಮತ್ತು ಮನಮದುರೈ ಎಂಬಲ್ಲಿ ಸಂಗೀತೋತ್ಸವವನ್ನು ನಡೆಸಲಾಗುತ್ತದೆ. Top of Form 13Venkata Narayana, Saroja Ashwin Lodaya and 11 others 15 Comments6 Shares ವಸಂತ ರಾಗ ವಸಂತ ಬಂದ ಋತುಗಳ ರಾಜ ತಾ ಬಂದ ಚಿಗುರನು ತಂದ, ಹೆಣ್ಗಳ ಕುಣಿಸುತ ನಿಂದ ಚಳಿಯನು ಕೊಂದ ಹಕ್ಕಿಗಳುಲಿಗಳೆ ಚೆಂದ ಕೂವೂ, ಜಗ್ ಜಗ್, ಪುವ್ವೀ ಟೂವಿಟ್ಟವು ಬಿ. ಎಂ. ಶ್ರೀ ಯವರ ಪ್ರಸಿದ್ಧವಾದ ‘’ವಸಂತ ಬಂದ’ ಎನ್ನುವ ಕವಿತೆ ಯಾರಿಗೆ ಗೊತ್ತಿಲ್ಲ? ಮಕ್ಕಳಾಗಿದ್ದಾಗ ನಾವೆಲ್ಲಾ ಈ ಕವಿತೆಯನ್ನು ಹಾಡುತ್ತಲೇ ದೊಡ್ಡವರಾದೆವು. ಈಗ ಲೂ ಈ ಕವಿತೆ ಕಿವಿಗೆ ಬಿದ್ದರೆ ಬಾಲ್ಯದ ಆ ಆಡುಂಬೊಲವೇ ಕಣ್ಣೆದುರಿಗೆ ಬರುತ್ತದೆ. ಇದು ವಸಂತ ಋತುವಿನ ಹಾಡೇ ಆದರೂ ನಿಜವಾಗಿ ಇದು ಹಕ್ಕಿಯ ಹಾಡು. ವಸಂತ ಋತುವಿನ ಆಗಮನವನ್ನು ಸಾರುವುದೇ ‘'ಗಿಡ ಗಂಟಿಗಳ ಕೊರಳೊಳಗಿಂದ'’ ಹಾಡುವ ಈ ಹಕ್ಕಿಗಳು. ಇಂಗ್ಲಿಷಿನಲ್ಲಿ ‘ಸಂಗೀತಕ್ಕೆ ಭಾಷೆಯೆಂಬುದಿಲ್ಲ’ (Music knows no language) ಎಂಬ ಮಾತಿದೆ. ನಿಜ, ಸಂಗೀತಕ್ಕೆ ಮನುಷ್ಯ ನಿರ್ಮಿತವಾದ ಒಂದು ಭಾಷೆಯಿಲ್ಲ. ಮನುಷ್ಯ ನಿರ್ಮಿತವಾದ ಭಾಷೆಗೆ ಅಡ್ಡಗೋಡೆಗಳೇ ಹೆಚ್ಚು. ಗೋಡೆ ದಾಟಲು ದುಬಾಷಿಗಳ ಸಹಾಯವಿಲ್ಲದೇ ಸಾಧ್ಯವಿಲ್ಲ. ಆದರೆ ಸಂಗೀತದ ಭಾಷೆ ಪ್ರೇಮ. ಅದು ಎಲ್ಲ ಗೋಡೆಗಳನ್ನೂ ಏಕ ಕಾಲಕ್ಕೆ ಒಡೆದು ಹಾಕಬಲ್ಲುದು ಎನ್ನುವುದಕ್ಕೆ ಬಿ.ಎಂ.ಶ್ರೀ ಅವರ ಈ ಕವಿತೆಯೇ ಸಾಕ್ಷಿ. ಈ ಕವಿತೆ ಎಷ್ಟು ಸಶಕ್ತವಾಗಿದೆಯೆಂದರೆ ಬಹಳ ದಿನಗಳವರೆಗೆ, ಬಹಳ ಜನರಿಗೆ ಅದು ನ್ಯಾಷ್ ಕವಿಯ ‘Spring’ ಎಂಬ ಇಂಗ್ಲಿಷ್ ಕವಿತೆಯ ಅನುವಾದವೆಂದು ತಿಳಿದಿರಲಿಲ್ಲ. ಈ ಪದ್ಯವನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ತರುವಾಗ ಬಿ.ಎಂ.ಶ್ರೀ ಯವರು 4 ಮತ್ತು 8ನೆಯ ಸಾಲಿನಲ್ಲಿ ಅನುರಣಗೊಳ್ಳುವ ಕೂವೂ.. ಜಗ್ ..ಜಗ್.. ಪೂವ್ವೀ.. ಟೂ ವಿಟ್ಟವು... (Cuckoo – jug-jug- pu -we tu witta-woo) ಎಂಬ ಸಾಲನ್ನು ಕನ್ನಡಕ್ಕೆ ಅನುವಾದ ಮಾಡದೇ, ಆಶ್ಚರ್ಯಕರವಾಗಿ ಇಂಗ್ಲಿಷಿನಲ್ಲಿ ಇರುವ ಹಾಗೆಯೇ ಇಟ್ಟಿದ್ದಾರೆ (ಕುಕೂ ಎನ್ನುವುದು ಕುವೂ ಆಗಿರುವುದನ್ನು ಬಿಟ್ಟರೆ). ಇಂಗ್ಲಿಷಿನ ‘ಟೂ-ವಿಟ್ಟವೂ’ ಎನ್ನುವ ಹಕ್ಕಿಯ ಧ್ವನಿ ಕನ್ನಡದಲ್ಲಿ ಕ್ರಿಯಾಪದವಾಗಿ ಸಾರ್ಥಕವಾಗಿಬಿಟ್ಟಿದೆ. ಈ ಸಾಲುಗಳಲ್ಲಿರುವುದು ಹಕ್ಕಿಯ ಕೂಗು. ಆದುದರಿಂದಲೇ ಹಕ್ಕಿಯ ಕೂಗಿಗೆ ಅನುವಾದ ಬೇಕಿಲ್ಲ. ಇಂಗ್ಲೆಂಡಿನ ಕುಕೂ, ಸೈಬೀರಿಯನ್ ಫ್ಲೆಮಿಂಗೋಗಳು ನಮ್ಮ ಕೋಗಿಲೆ , ಹಂಸಗಳ ಜೊತೆಗೆ ಸುಲಭವಾಗಿ ಸಂವಹನಿಸಬಲ್ಲವು. ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ದೇಶ ದೇಶಾಂತರ ಹಾರಿ ಬರಬಲ್ಲವು. ಆದರೆ ಮನುಷ್ಯನಿಗೆ ಮಾತ್ರ ತಾನು ನಿರ್ಮಿಸಿಕೊಂಡಿರುವ ಸಂಕೀರ್ಣ ಗೋಡೆಗಳ ಕಾರಣದಿಂದಾಗಿ ತನ್ನ ಮನೆಯ ಹಿತ್ತಲನ್ನೂ ದಾಟಲು ಅಸಾಧ್ಯವಾಗಿದೆ. ಬಿ.ಎಂ.ಶ್ರೀಯವರು ತಮ್ಮ ಅನುವಾದದಲ್ಲಿ ಪ್ರಜ್ಞಾಪೂರ್ವಕವಾಗಿ ಮೂಲವನ್ನು ಬದಲಾಯಿಸದೇ ಉಳಿಸಿಕೊಂಡಿರುವ ಹಕ್ಕಿಯ ಹಾಡಿನ ಈ ಸಾಲುಗಳು ಸಂಗೀತದ ಸೀಮಾತೀತ ನೆಲೆಗೆ ಪ್ರತೀಕವಾಗಿದೆ. ವಸಂತ ಬಂದ ಋತುಗಳ ರಾಜ ತಾ ಬಂದ ಚಿಗುರನು ತಂದ, ಹೆಣ್ಗಳ ಕುಣಿಸುತ ನಿಂದ ಚಳಿಯನು ಕೊಂದ ಹಕ್ಕಿಗಳುಲಿಗಳೆ ಚೆಂದ ಕೂವೂ, ಜಗ್ ಜಗ್, ಪುವ್ವೀ ಟೂವಿಟ್ಟವು ಕುರಿನೆಗದಾಟ ಕುರುಬರ ಕೊಳಲಿನೂದಾಟ ಇನಿಯರ ಬೇಟ, ಬನದಲಿ ಬೆಳದಿಂಗಳೂಟ, ಹೊಸ ಹೊಸ ನೋಟ, ಹಕ್ಕಿಗೆ ನಲವಿನ ಪಾಠ, ಕೂವೂ, ಜಗ್ ಜಗ್, ಪುವ್ವೀ ಟೂವಿಟ್ಟವು ಮಾವಿನ ಸೊಂಪು ಮಲ್ಲಿಗೆ ಬಯಲೆಲ್ಲ ಕಂಪು ಗಾಳಿಯ ತಂಪು, ಜನಗಳ ಜಾತ್ರೆಯ ಗುಂಪು ಕಿವಿಗಳಿಗಿಂಪು ಹಕ್ಕಿಗಳುಲುಹಿನ ಪೆಂಪು ಕೂವೂ, ಜಗ್ ಜಗ್, ಪುವ್ವೀ ಟೂವಿಟ್ಟವು ಬಂದ ವಸಂತ ನಮ್ಮಾ ರಾಜ ವಸಂತ ಎಲ್ಲ ತತ್ವದೆಲ್ಲೆ ಮೀರಿ....... ಗೋಪಾಲಕೃಷ್ಣ ಭಾರತಿಯವರ ‘ನಂದನಾರ್’ “ಇರಕ್ಕಂ ವರಾಮಲ್ ಪೋನದೆನ್ನ ಕಾರಣಂ ಎನ್ ಸ್ವಾಮಿಕ್ಕ್” (ಎನ್ನಮೇಲೆ ಕರುಣೆ ಬಾರದೇ ಹೋದುದಕ್ಕೆ ಏನು ಕಾರಣವಿರಬಹುದು, ಎನ್ನ ಸ್ವಾಮಿಗೆ?) ಬಾಂಬೆ ಜಯಶ್ರೀ ಬೇಹಾಗ್ ರಾಗದಲ್ಲಿ ಹಾಡುತ್ತಿದ್ದಾರೆ. ಹೊರಗೆ ಶಬ್ದವೇ ಮೈವೆತ್ತಿದ ಹಾಗೆ ಕಿವಿಗಡಚಿಕ್ಕುವ ಮುಂಬಯಿ. ಒಳಗೆ ನಿಧಾನ ಹರಿಯುವ ಮಂದಾಕಿನಿ. ಅದೂ ಸಾರಂಗಿಯ ಜೊತೆಗೆ!? ಸಾರಂಗಿ ಸಾಮಾನ್ಯವಾಗಿ ಹಿಂದೂಸ್ಥಾನಿ ಗಾಯನಕ್ಕೆ ಇಂಬುಗೊಡುವ ಸಾಧನ. ಆದರೆ ಇಲ್ಲಿ ಕರ್ನಾಟಕ ಸಂಗೀತದ ‘ಇರಕ್ಕಂ .......’ತಮಿಳು ಕೃತಿಯನ್ನು ಸಾರಂಗಿ ಹಾಡುತ್ತಿದೆ. ಸಾರಂಗಿಯಿಂದ ಹಾಡಿಗೆ ಮೆರಗೋ? ಹಾಡಿನಿಂದ ಸಾರಂಗಿಗೆ ಮೆರಗೋ! ತಿಳಿಯದಂಥ ಒಂದು ಅವಿನಾಭಾವ ಎರಡರ ನಡುವೆ ಏರ್ಪಟ್ಟು ಹೊಸ ಅನುಭವ ಸೃಜಿಸಿದೆ. ಇದು ಕೇಳಿದಷ್ಟು ಸಲ, ಕೇಳಿದಾಗಲೆಲ್ಲ ಸೃಜಿಸುವ ಹೊಸ ಭಾವ. ಹಾಡಿನ ತುಂಬಾ ಒಂದು ರೀತಿಯ ಕಾರುಣ್ಯದ ಶೋಧ. ಕಾರುಣ್ಯವೇ ಸ್ಥಾಯಿಯಾದುದು, ಶಾಶ್ವತವಾದುದು, ಬದುಕಿನ ನಿಜ ಎನ್ನುವ ಭಾವವನ್ನು ಹುಟ್ಟಿಸುವ ವಿನಮ್ರ ಹಾಡುಗಾರಿಕೆ. ‘ಇರಕ್ಕಂ.......’ ಧಾತುವಿನ ಮೇಲೆ ಕೊಡುವ ಒತ್ತ್ತು ಮತ್ತು ತಡೆ “ನೀ ಎನ್ನ ಮೇಲೆ ಕರುಣೆ ತೋರದೇ ಹೋದುದುಕ್ಕೆ ಏನಾದರೂ ಬಲವಾದ ಕಾರಣವಿರಲೇ ಬೇಕು ಇಲ್ಲದಿದ್ದರೆ ನೀನು ಹೀಗೆ ಮಾಡುವವನಲ್ಲ” ಎನ್ನುವ ಭಾವದ ಸ್ಫುರಣೆಯನ್ನು ನೀಡುತ್ತದೆ. ಈ ಭಾವವನ್ನು ತೀವ್ರವಾಗಿಸುವುದು ಜೊತೆಗಿರುವ ಸಾರಂಗಿಯ ಅದ್ಭುತ ನಡೆ. ಈ ಹಾಡನ್ನು ಹಲವಾರು ಪ್ರಸಿದ್ಧ ಹಾಗೂ ನವ ಗಾಯಕರ [ಪಾಲ್ಘಾಟ್ ಕೆ.ವಿ. ನಾರಾಯಣ ಸ್ವಾಮಿ, ಸುಬ್ಬುಲಕ್ಷ್ಮಿ, ಉನ್ನಿಕೃಷ್ಣನ್, ಟಿ.ಎಂ. ಕೃಷ್ಣನ್, ಭರತ್ ಸುಂದರ್, ಒ.ಎಸ್. ಅರುಣ್, ಶಂಕೋಟ್ಟೈ ಹರಿ (ಹರಿ ಕಥೆ)] ಕಂಠದಲ್ಲಿ ಕೇಳಿದ ಮೇಲೆ ಹಾಡಿನ ಮೂಲವನ್ನು ಅರಸುತ್ತಾ ಹೋದೆ. ಈ ಹಾಡಿನ ಭಾವವನ್ನು ಹಿಡಿದ ಮೇಲೆ ಅರ್ಥವನ್ನು ಅರಸುವುದು ವ್ಯರ್ಥ ಎನಿಸಿಬಿಟ್ಟಿತು. ಭಾಷೆ ಭಾವವನ್ನು ಕೊಲ್ಲುವ ಹಾಗೆ ಇನ್ಯಾವುದೂ ಕೊಲ್ಲಲಾರದು. ಆದರೆ ಭಾಷೆ ಬೇಕು. ಅದು ಒಂದು ವಾಹಕ. ಊರು ತಲಪಿದ ಮೇಲೆ ವಾಹನದ ಹಂಗೇಕೆ? ಬೇಂದ್ರೆಯವರು “ಶಬ್ದಕೋಶದೊಳಗಾ ಅರ್ಥಗಳು ಸತ್ತಿರತಾವೋ ತಮ್ಮಾ” ಎಂದು ದಿವಾಣಜಿಯವರಿಗೆ ಹೇಳಿದ ಮಾತು ನೆನಪಾಗುತ್ತದೆ. ಈ ಹಾಡನ್ನು ರಚಿಸಿದವರು ಗೋಪಾಲಕೃಷ್ಣ ಭಾರತಿ (1810–1896) ಎನ್ನುವ ಕರ್ನಾಟಕ ಸಂಗೀತದ ಪ್ರಸಿದ್ಧ ವಾಗ್ಗೇಯಕಾರರುಗಳಲ್ಲಿ ಒಬ್ಬರು. ಇವರು ತ್ಯಾಗರಾಜರ ಸಮಕಾಲೀನರೆಂದು ತಿಳಿದು ಬರುತ್ತದೆ. ನಾಗಪಟ್ಟಣಂ ಬಳಿಯ ಒಂದು ಹಳ್ಳಿಯಿಂದ ಬಂದ ಇವರ ಹಿರಿಯ ತಲೆಮಾರಿನವರು ಒಳ್ಳೆಯ ವೀಣಾ ವಾದಕರಾಗಿದ್ದರಂತೆ. ಒಮ್ಮೆ ತ್ಯಾಗರಾಜರು ಇವರನ್ನು ಭೇಟಿಯಾದಾಗ ಅಭೋಗಿ ರಾಗದಲ್ಲಿ ಏನಾದರೂ ರಚಿಸಲು ಸಾಧ್ಯವೇ ಎಂದು ಕೇಳುತ್ತಾರೆ. ಆಗ ಆ ಕ್ಷಣವೇ ಇವರು “ಸಭಾಪತಿಕು ವೇರೆ ದೈವಂ ಸಮಾನಮಾಗುಮೇ” (ನಟರಾಜನಿಗೆ ಸಮನಾಗುವ ಅನ್ಯ ದೈವ ಉಂಟೇ?) ಎನ್ನುವ ಕೀರ್ತನೆಯನ್ನು ರಚಿಸುತ್ತಾರೆಂದೂ, ಅದನ್ನು ಕೇಳಿ ಒಪ್ಪಿದ ತ್ಯಾಗರಾಜರು “ಇನ್ನು ಈ ರಾಗ ನಿನ್ನದು ಈ ರಾಗದಲ್ಲಿ ಇನ್ನುಮುಂದೆ ನಾನು ರಚಿಸುವುದಿಲ್ಲ” ಎಂದು ಹೇಳಿದುದಾಗಿ ಒಂದು ದಂತಕಥೆ ಇದೆ. ತ್ಯಾಗರಾಜರಿಗೋ ಶ್ರೀರಾಮನೇ ಆತ್ಯಂತಿಕ ದೈವ! ಆದರೆ ಗೋಪಾಲಕೃಷ್ಣ ಭಾರತಿಯವರು ‘ಚಿದಂಬರದ ನಟರಾಜನಿಗೆ ಯಾರಾದರೂ ಸಮಾನರಾಗುವವರೇ?’ ಎಂದು ಕೊಂಡಾಡಿದ್ದು ಶಿವನನ್ನು. ತ್ಯಾಗರಾಜರು ಅದನ್ನು ಒಪ್ಪಿಕೊಂಡು ಆ ರಾಗವನ್ನು ಗೋಪಾಲಕೃಷ್ಣ ಭಾರತಿಯವರಿಗೇ ಬಿಟ್ಟುಬಿಡುತ್ತಾರೆ!!! ಕವಿಗೆ ಕವಿ ಮಣಿಯುವ ರೀತಿ ಅನನ್ಯವಾದುದು. ಆದರೆ ಇದು ನಿಜವಾಗಿ ಒಬ್ಬ ಸಂತ ಇನ್ನೊಬ್ಬ ಸಂತನಿಗೆ ಮಣಿಯುವ ರೀತಿ. ಇಬ್ಬರೂ ಬ್ರಾಹಣ್ಯದ ಪೊಳ್ಳು ಮೌಲ್ಯಗಳನ್ನು, ಹುಸಿ ಆಚರಣೆಗಳನ್ನು ಗಾಳಿಗೆ ತೂರಿ ತಮ್ಮ ಜನಾಂಗದವರ ಅಸಮಾಧಾನಕ್ಕೆ ತುತ್ತಾದವರು. ಗೋಪಾಲಕೃಷ್ಣ ಭಾರತಿಯವರಂತೂ ಭಕ್ತಿ ಎನ್ನುವುದು ಕೇವಲ ಮೇಲ್ಜಾತಿಯ ಗುತ್ತಿಗೆ ಎಂದು ಭಾವಿಸಿದ್ದ ಸಂದÀರ್ಭದಲ್ಲಿ ತಮ್ಮ “ಸಭಾಪತಿಕು ವೇರೆ ದೈವಂ” ಕೃತಿಯಲ್ಲಿ ದಲಿತರಾದ ತಿರುನೀಲಕಂಠರ್, ಇಹಪ್ಪಗೈ ನಾಯನ್ಮಾರ್ ಮತ್ತು ನಂದನಾರ್ ಅವರನ್ನು ಸ್ಮರಿಸಿ ಭಕ್ತಿ ಸಾಹಿತ್ಯದ ಮೇರೆಗಳನ್ನು ಮೀರಿದ್ದಾರೆ. ಕರ್ನಾಟಕದಲ್ಲಿ 12ನೇ ಶತಮಾನದಲ್ಲಿ ಎದ್ದ ಸಾಮಾಜಿಕ ಸಮಾನತೆಯ ಪ್ರಶ್ನೆ ತಮಿಳು ನಾಡಿನಲ್ಲಿ ನಾಯನ್ಮಾರರುಗಳ ಕಾಲದಲ್ಲಿಯೇ (6-8 ನೇ ಶತಮಾನ) ಪ್ರಾರಂಭವಾಯಿತು. ಆದರೂ 19ನೇ ಶತಮಾನದಲ್ಲಿ ಗೋಪಾಲಕೃಷ್ಣ ಭಾರತಿಯವರಿಗಾಗಲೀ ತ್ಯಾಗರಾಜರಿಗಾಗಲೀ ಇದನ್ನು ಮತ್ತೆ ಎದುರಿಸಬೇಕಾಯಿತು, ಇದರ ಬಗ್ಗೆ ಬರೆಯಬೇಕಾಯಿತು. ಅದರ ಬಗ್ಗೆ ಈಗಲೂ ಮಾತನಾಡಬೇಕಾಗಿ ಬಂದಿರುವುದು ನಮ್ಮ ದುರಂತ. ಗೋಪಾಲಕೃಷ್ಣ ಭಾರತಿಯವರು ಅದ್ವೈತ ಸಿದ್ಧಾಂತಕ್ಕೆ ಸಂಬಂಧಿಸಿದಂತೆ ಅನೇಕ ಕೃತಿಗಳನ್ನು ಬರೆದಿದ್ದಾರೆ. ಅವರ “ಎಪ್ಪೊ ವರುವಾರೋ.... ಚಿದಂಬರನಾಥನ್” (ಯಾವಾಗ ಬರತ್ತಾರೋ ......) ಎನ್ನುವ ಕೀರ್ತನೆಯಂತೂ ತಮಿಳಿನಲ್ಲಿ ಬಹಳ ಪ್ರಸಿದ್ಧವಾಗಿದೆ. ಇವುಗಳ ಜೊತೆಗೆ ‘ನಂದನಾರ್ ಚರಿತ್ರಂ’ ಎನ್ನುವ ಕಥಾಕಾಲಕ್ಷೇಪವನ್ನೂ ರಚಿಸಿದ್ದಾರೆಂದೂ ತಿಳಿದು ಬರುತ್ತದೆ. ತಮಿಳು ರಂಗಭೂಮಿಯಲ್ಲೂ ಇದು ಬಹಳ ಪ್ರಸಿದ್ಧವಾದ ಪ್ರಯೋಗವಾಗಿದೆ. ಅಂದಿನ ರಾಷ್ಟ್ರೀಯ ಚಳವಳಿಯ ಓಘಕ್ಕೆ ಶಕ್ತಿಪ್ರವಾಹವನ್ನು, ಭಾವಸಂದರ್ಭವನ್ನೂ ಒದಗಿಸಿದ ಶ್ರೇಯಸ್ಸು ‘ನಂದನಾರ್ ಚರಿತ್ರಂ’ಗೆ ಸಲ್ಲುತ್ತದೆ. ನಂದನಾರ್ಗೆ ಚಿದಂಬರ ಶಿವನನ್ನು ಕಾಣುವುದರ ಬಗ್ಗೆ ಇದ್ದ ತೀವ್ರ ಹಪಾಹಪಿಯನ್ನು ಭಾರತೀಯರ ಸ್ವಾತಂತ್ರ್ಯದ ಹಪಾಹಪಿಗೆ ಸಮೀಕರಿಸಲಾಯಿತು. ದಲಿತ ಚಳವಳಿಗಂತೂ ಇವನ ಕಥೆ ಒಂದು ಪ್ರಣಾಳಿಕೆಯೇ ಆಯಿತು. ನಂದನಾರ್ ಒಬ್ಬ ಅಸ್ಪಶ್ಯ, ಚಮ್ಮಾರ ಜಾತಿಗೆ ಸೇರಿದವನು. ಡೋಲು, ತಮಟೆ ಮುಂತಾದ ಚರ್ಮದ ವಾದ್ಯಗಳನ್ನು ಮಾಡುವುದು ಅವನ ಕೆಲಸ. ಶೇಕ್ಕಿಳಾರ್ ಕವಿಯ “ಪೆರಿಯ ಪುರಾಣ”ದಲ್ಲಿಯೂ ಇವನ ಕಥೆ ಇದೆ. ಅವನಿಗೆ ಯಾವಾಗಲೂ ಚಿದಂಬರದÀ ನಟರಾಜನ ಕಾಣುವ ಕನಸು. ಇವನಿಗೆ ‘ತಿರುನಾಳೈ ಪೋವಾರ್’ (ನಾಳೆ ಹೋಗುವವನು) ಎನ್ನುವ ಒಂದು ಪರಿಹಾಸ್ಯದ ‘ಅಡ್ಡ’ ಹೆಸರೂ ಇದೆ. ಪ್ರತಿದಿನ ‘ಚಿದಂಬರಕ್ಕೆ ಎಂದು ಹೋಗುವೆ?’ ಎಂದು ಕೇಳಿದಾಲೆಲ್ಲಾ ‘ನಾಳೆ ಹೋಗುವೆ’ ಎನ್ನುತ್ತಿದ್ದನಂತೆ. ಆದುದರಿಂದಲೇ ಅವನಿಗೆ ‘ನಾಳೆ ಹೋಗುವವನು’ ಎಂಬ ಹೆಸರು ಬಂದಿತೆಂದು ಕಥೆಯಿದೆ. ಅವನ ಈ ಹೆಸರೇ ಚಿದಂಬರಕ್ಕೆ ಹೋಗಬೇಕೆನ್ನುವ ಅವನ ಕನಸಿನ ತೀವ್ರತೆಯನ್ನೂ, ಅವನ ನಿಷ್ಠೆಯನ್ನೂ ಬಯಲಾಗಿಸುವುದರ ಜೊತೆಗೆ ಅದಕ್ಕೆ ತಡೆಯಾಗಿರುವ ನಮ್ಮ ಸಾಮಾಜಿಕ ಸ್ಥಿತಿಯನ್ನೂ, ದೇವಾಲಯಕ್ಕೆ ಪ್ರವೇಶ ಮಾಡುವುದರ ಬಗೆಗಿನ ಅವನ ಅವ್ಯಕ್ತ ಭಯವನ್ನೂ ಬಯಲಿಗೆಳೆಯುತ್ತದೆ. “ಇರಕ್ಕಂ” ಹಾಡಿನಲ್ಲಿ ಈ ಎಲ್ಲಾ ಭಾವಗಳು ಮುಪ್ಪರಿಗೊಂಡಿವೆ. ಹಗಲಿರುಳೂ ದುಡಿದು ತನ್ನ ಪಾಳಿಯ ಕೆಲಸಮಾಡಿ ಅವನ ಒಡೆಯನ ಅಪ್ಪಣೆ ಪಡೆದು ಕಡೆಗೂ ನಂದನ ಚಿದಂಬರಕ್ಕೆ ಹೊರಡುತ್ತಾನೆ. (ಶಿವನೇ ಬಂದು ಇವನ ಹೊಲದಲ್ಲಿ ಗೇದು ಚಿದಂಬರಕ್ಕೆ ಹೋಗಲು ಇವನಿಗೆ ಅನುವಾಗುತ್ತಾನೆ ಎನ್ನುವ ಕಥೆಯೂ ಇದೆ) ದಾರಿಯ ಮಧ್ಯದಲ್ಲಿ ಸಿಗುವ ಒಂದು ನದಿಯನ್ನು ದಾಟಿ ದೂರದಲ್ಲಿ ಕಾಣುವ ಮಂದಿರದ ಹೊಳೆಯುವ ಚಿನ್ನದ ಗೋಪುರ ನೋಡಿ ಉತ್ಸಾಹದಿಂದ ಕುಣಿಯುತ್ತಾನೆ. ಆದರೆ ಊರು ಹತ್ತಿರವಾಗುತ್ತಿದ್ದಂತೆ ಊರೊಳಗೆ ಹೊಗುವ ಅವನ ಧೈರ್ಯ ಉಡುಗಿ ಹೋಗುತ್ತದೆ. ದೇವರಿಂದ ಏನಾದರೂ ಕರೆ ಬರಬಹುದೇ ಎನ್ನುವ ಹಂಬಲದಲ್ಲಿ ಊರನ್ನು ಹಲವು ಬಾರಿ ಸುತ್ತುಹೊಡೆದು ದಣಿದು ಊರ ಹೊರಗೇ ಮಲಗಿಬಿಡುತ್ತಾನೆ. ಕನಸಿನಲ್ಲಾದರೂ ಬಂದು ದೇವರು ದೇವಾಲಯದ ಪ್ರವೇಶಕ್ಕೆ ಅಪ್ಪಣೆ ನೀಡಬಾರದೇ? ಎನ್ನುವ ಹಂಬಲದಿಂದ ಮೇಲಿಂದ ಮೇಲೆ ದೇವರಿಗೆ ಮೊರೆಯಿಡುತ್ತಾನೆ. ನಂದನಾರ್ ಇಟ್ಟ ಈ ಮೊರೆಯ ಸ್ವರೂಪವೇ ಬಹಳ ತೀವ್ರವಾಗಿ ಗೋಪಾಲಕೃಷ್ಣ ಭಾರತಿಯವರ “ಇರಕ್ಕಂ........” ಈ ಹಾಡಿನಲ್ಲಿ ವ್ಯಕ್ತವಾಗಿದೆ. ಈ ಹಾಡಿನಲ್ಲಿ ಅಡಗಿರುವ ದೈನ್ಯತೆ ನಮ್ಮ ಸಾಮಾಜಿಕ ಭೇದವಾದದ ಎದೆಗೆ ಚೂರಿ ಇಕ್ಕುತ್ತದೆ. ಸಮಾಜ, ಪ್ರಭುತ್ವ ಕೈ ಬಿಟ್ಟಾಗ ದೈವಕ್ಕೆ ತಾನೇ ಮೊರೆಹೋಗಬೇಕು? ಆದುದರಿಂದಲೇ ಬಹುಶಃ ಭಕ್ತಿ ಸಾಹಿತ್ಯದಲ್ಲಿ ಇವೆರೆಡರ ವಿರುದ್ಧ ಬಂಡಾಯದ ಒಳಹರಿವನ್ನು ಕಾಣುತ್ತೇವೆ. (ತಂಜಾವೂರಿನ ಸರ್ಫೋಜಿ ಮಹಾರಾಜ ತ್ಯಾಗರಾಜರಿಗೆ ಧನಕನಕಗಳಿಂದ ಸನ್ಮಾನ ಮಾಡಿದಾಗ ಅದನ್ನು ನಿರಾಕರಿಸಿ ಕಲ್ಯಾಣಿ ರಾಗದಲ್ಲಿ ‘ನಿಧಿಚಾಲಾ ಸುಖಮಾ ರಾಮುನಿ ಸೇವಾ ಸನ್ನಿಧಿ ಸುಖಮಾ’(ಯಾವುದು ಸುಖ ನಿಧಿಯೋ? ರಾಮನ ಸನ್ನಿಧಿ ಸೇವೆಯೋ)' ಕೃತಿಯನ್ನು ರಚಿಸಿದರಂತೆ) ಇಲ್ಲಿ ಗೋಪಾಲಕೃಷ್ಣ ಭಾರತಿಯವರ ನಂದನಾರ್ ಈ ಹಾಡಿನಲ್ಲಿ “ನೀನು ಕರುಣೆಯ ಕಡಲೆಂದು ಕೇಳಿ ನಂಬಿ ಬಂದೆ” ಎನ್ನುವಾಗ, ನಿಷ್ಕರುಣ ಸಮಾಜದ ಕಡೆಗೆ ಬೊಟ್ಟು ಮಾಡಿತೋರಿಸುತ್ತಲೇ, ಅದು ಇಲ್ಲಿ (ಚಿದಂಬರನ ಬಳಿ) ಹುಸಿಯಾಗಲೆಂದು ಪ್ರಾರ್ಥಿಸುತ್ತದೆ. ಶಿವ ಚಿದಂಬರ ಕಾಪಾಡಿಯೇ ತೀರುವ ಎನ್ನುವ ಅದಮ್ಯ ವಿಶ್ವಾಸ, ಅನನ್ಯವಾದ ಪ್ರಪತ್ತಿ ಮಾರ್ಗದಲ್ಲಿ ಅರಳುವ ನಮ್ರತೆಯ ಹೂವಾದ ಈ ಹಾಡು ಕೇಳುಗರನ್ನು ಇನ್ನಿಲ್ಲದಂತೆ ಆರ್ದ್ರ ಗೊಳಿಸಿಬಿಡುತ್ತದೆ. ಈ ಹಾಡಿನ ರಾಗವಾದ ಬೇಹಾಗ್ ಹಿಂದೂಸ್ಥಾನಿ ಮೂಲದ್ದು, ಕರ್ನಾಟಕ ಸಂಗೀತಕ್ಕೆ ಹಿಂದೂಸ್ಥಾನಿ ರಾಗ ಮತ್ತು ಹಿಂದೂಸ್ಥಾನಿ ವಾದ್ಯವಾದ ಸಾರಂಗಿಯನ್ನು ಬಳಸಿರುವುದಕ್ಕೆ (ಬಾಂಬೆ ಜಯಶ್ರೀಯವರ ಮತ್ತು ಭರತ್ ಸುಂದರ್ ಅವರ ಹಾಡಿನಲ್ಲಿ)ವಿಶೇಷ ಕಾರಣವಿರಬೇಕು. ಯಾಕೆಂದರೆ ಅಂದಿನ ಹಿಂದೂಸ್ಥಾನೀ ಗಾಯಕರಾದ ರಾಮದಾಸ ಎನ್ನುವವರು ಗೋಪಾಲಕೃಷ್ಣ ಭಾರತಿಗಳಿಗೆ ಹಿಂದೂಸ್ಥಾನಿ ಸಂಗೀತವನ್ನು ಕಲಿಸಿದ್ದರಂತೆ. ತಿರುಪೂಂಕೂರಿನ ಶಿವಲೋಕಾಂತರ್ ದೇವಾಲಯದ ಮುಂದೆ ತಮಟೆ ಬಾರಿಸುತ್ತ ಹೊರನಿಂತ ನಂದನನಿಗೆ ಒಳಗಿರುವ ಶಿವ ಕಾಣುತ್ತಿಲ್ಲ. ಕಾರಣ ಅವನ ಮುಂದೆ ಒಂದು ದೊಡ್ಡ ಕಲ್ಲಿನ ನಂದಿ ಅಡ್ಡವಾಗಿ ಕೂತಿದೆ. ಕಾಣದೆ ಹಪಹಪಿಸುತ್ತಿದ್ದಾನೆ. ಆಗ ಸಾಕ್ಷಾತ್ ಶಿವನೇ ನಂದಿಗೆ ದಾರಿ ಬಿಡಲು ಹೇಳಿದನೆಂದೂ ಅದು ಜರುಗಿತೆಂದೂ ಕಥೆ ಯಿದೆ. ನಂದನಾರ್ ಬಗ್ಗೆ ಬರೆಯುವಾಗ ಸಹಜವಾಗಿಯೇ ಕನಕದಾಸ ಮತ್ತು ಮಹಾರಾಷ್ಟ್ರದ ಸಂತ ಮಹರ್ ಜಾತಿಗೆ ಸೇರಿದ ಚೋಖಾಮಿಳ ಕಣ್ಣೆದುರಿಗೆ ಬರುತ್ತಾರೆ. ಅಪಮಾನಿತರಾದ ಕನಕದಾಸರು ದೇವಾಲಯದ ಮುಂದೆ ನಿಂತು “ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ” ಎಂದು ಅಂಗಲಾಚುತ್ತಾರೆ. ಅಂಗಲಾಚುವ ದೈನ್ಯಭಾವವನ್ನು ಪಿ.ಬಿ. ಶ್ರೀನಿವಾಸರ ಕಂಠದಲ್ಲಿ ಕೇಳಬೇಕು. 14 ನೆಯ ಶತಮಾನದಲ್ಲಿದ್ದ ಮರಾಠಿ ಸಂತ ಚೋಖಾಮಿಳ ಪಂಡರಾಪುರದ ವಿಟ್ಠಲನ ಎದುರಿಗೆ, ಅವನ ಮುಖಕ್ಕೆ ರಾಚುವಂತೆ ಎತ್ತರದ ದನಿಯಲ್ಲಿ ಹಾಡುತ್ತಾನೆ, “ಜೋಹರ್ ಮಾಯಿ ಬಾಪ್ ಜೋಹರ್.. ತುಮ್ಚಾ ಮಹರ್ಚಾ ಮಹರ್..ಮಹರ್” “ಮಾಯಿ ಬಾಪ್ಪಾ (ವಿಟ್ಠಲ, ರುಕುಮಾಯಿ) ನಿಮಗೆ ನಮಸ್ಕಾರ ! (ವಿಟ್ಠಲ) ನೀನು ಹಾರುವ, ಹಾರುವ ನಾ ನಿನ್ನ ಹೊಲೆಯರ ಹೊಲೆಯ, ಕಿಂಕರರ ಕಿಂಕರ ಹಸಿದು ಬಳಲಿ ನಿನ್ನ ಪ್ರಸಾದಕ್ಕಾಗಿ ಬಂದಿದ್ದೇನೆ ನಿನ್ನ ಭಕ್ತರು ಉಂಡೆಸೆದ ಎಂಜಲಿಗಾಗಿ ತಾಟೊಂದನ್ನು ತಂದಿದ್ದೇನೆ... ನೀ ಹಾರುವ ಹಾರುವ ನಾ ಹೊಲೆಯರ ಹೊಲೆಯಾ..” ಎಂದು ಕುಮಾರ ಗಂಧರ್ವ ಹಾಡುವ ಮರಾಠಿ ಅಭಂಗ (ಭೈರವಿ /ತೋಡಿ) ನಾಭಿಯಿಂದ ಉದ್ಭವವಾಗಿ ಹೊರಬರುವಾಗ ಹಾಡಿನ ಗತಿಹಿಡಿದು ನಿಜವಾಗಿ ಚೋಖಮಿಳ ಆವೇಶದಿಂದ ಕುಣಿಯತೊಡಗುತ್ತಾನೆ. ನಂದನಾರ್ ಆಗಲಿ ಕನಕದಾಸರಾಗಲೀ, ಚೋಖಾಮಿಳನಾಗಲೀ ಇವರೆಲ್ಲಾ ಹಾಡುವ ಹಾಡು ಒಂದೇ : “ಇರಕ್ಕಂ ವರಾಮಲ್ ಪೋನದೆನ್ನ ಕಾರಣಂ ಎನ್ ಸ್ವಾಮಿಕ್ಕ್” (ಎನ್ನಮೇಲೆ ಕರುಣೆ ತೋರದೇಹೋದುದಕ್ಕೆ ಏನು ಕಾರಣವಿರಬಹುದು, ಎನ್ನ ಸ್ವಾಮಿಗೆ?) Bottom of Form ಕೂರಗಳ್ಳಿಯಲ್ಲಿ ಚಿಗುರುತ್ತಿರುವ ಕನಸು ಅಮ್ಮನ ಏರು ಪೇರಾದ, ಕ್ಷಣ ಚಿತ್ತ ಕ್ಷಣ ಪಿತ್ತದ ಮಾನಸಿಕ ಸ್ಥಿತಿ. ಕಿವಿ ಮಂದವಾದರೂ ಬಾಯಿ ಮಂದವಲ್ಲ. ಕೇಳಿದೆ ಪ್ರಶ್ನೆಯನ್ನೇ ಹತ್ತುಸಲ ಕೇಳುವಾಗ ನೂರು ಸಲ ಉತ್ತರಿಸಬೇಕಾದ ಸ್ಥಿತಿ. ಸದಾ ೨೪×೭ ಹೈರಾಣಾದ ಮನೆಮಂದಿ. ಯಾವುದಾದರೂ Geriatrics (ವಯೋವೃದ್ಧರ) ತಜ್ಞರನ್ನು ಭೇಟಿ ಮಾಡಿ ಔಷಧೋಪಚಾರ ಮಾಡಬೇಕು ಎಂದು ನಾವು ಮಕ್ಕಳು ಮಾತನಾಡಿಕೊಳ್ಳುತ್ತಿದ್ದೆವು. ಅಷ್ಟರಲ್ಲಿ ಮೈಸೂರಿನ ಕೂರಗಳ್ಳಿಯಲ್ಲಿರುವ "ಚಿಗುರು" ಎನ್ನುವ ಮಾನಸಿಕ ಅಸ್ವಸ್ಥ ಮಹಿಳೆಯರಿರುವ ಆಶ್ರಮ ನೋಡಬೇಕೆನ್ನುವ ನನ್ನ ಹಂಬಲಕ್ಕೆ ಕಾಲ ಕೂಡಿ ಬಂತು. ಆಶ್ರಮದ ಪರಿಚಯವಿದ್ದ ಅಣ್ಣ ಸೀತಾರಾಮನೂ ಬಂದಿದ್ದರಿಂದ ನಾವು ತಮ್ಮನ ಕಾರಿನಲ್ಲಿ ಆಶ್ರಮ ನೋಡಲು ಹೊರಟೆವು. ೯೪ರ ಅಮ್ಮ ತಾನೂ ಬರುವ ಉತ್ಸಾಹ ತೋರಿದಳು. ಆಶ್ರಮದ ಮುಂದೆ ನಿಂತಾಗ ಯಾಕೋ ಭಯದಿಂದ ಎದೆ ಹೊಡೆದುಕೊಳ್ಳತೊಡಗಿತು. ಗೇಟಿನ ಬೀಗ ತೆಗೆದ ಮುದುಕಿಯೊಬ್ಬಳು, ಅಮ್ಮನ ಕೈಹಿಡಿದುಕೊಂಡು ನಿಧಾನವಾಗಿ ನಡೆದು ಬರುತ್ತಿರುವ ನಮ್ಮನ್ನು ನೋಡಿ "ಅಜ್ಜೀನ ಸೇರ್ಸಾಕ್ಕೆ ಬಂದಿದ್ದೀರಾ?" ಎಂದು ನನ್ನ ಭಯವನ್ನು ನಿಜಮಾಡುವಂತೆ ಕೇಳಿಯೇ ಬಿಟ್ಟಳು. ಏನೋ ಅಬದ್ಧವನ್ನು ಕೇಳಿದಂತೆ "ಇಲ್ಲ, ಇಲ್ಲ ಈ ಆಶ್ರಮ ನೋಡೋಕೆ ಬಂದಿದ್ದೀವಿ ಅಷ್ಟೇ" ಎಂದು ನಾನು ತಕ್ಷಣ ಹೇಳಿದೆ. ನಾವು ಒಳಗೆ ಕಾಲಿಟ್ಟಿದ್ದೇ ತಡ, ಬಿಲಗಳಿಂದ ಹೊರ ಬರುವ ಕಪ್ಪು ಪ್ರಾಣಿಗಳಂತೆ, ಸಾಮಾಜಿಕ ಅಬದ್ಧವನ್ನೇ ಮೈಮೇಲೆ ಹೊತ್ತುಕೊಂಡ ಹೆಂಗಸರು, ನೇತಾಡುವ ನೈಟಿಗಳು ನಡೆದು ಬರುತ್ತಿವೆಯೇನೋ ಎನ್ನುವಂತೆ ಒಬ್ಬೊಬ್ಬರಾಗಿ ಹೊರಬಂದರು. "ಚಿಗುರು" ಮಾನಸಿಕ ಅಸ್ವಸ್ಥ ಮಹಿಳೆಯರ ವಸತಿ ಮತ್ತು ಹಗಲು ಆರೈಕೆ ಕೇಂದ್ರ" ಈ ಆಶ್ರಮ ಸ್ಥಾಪನೆಯಾದದ್ದು ಆರು ವರ್ಷಗಳ ಹಿಂದೆ- ಸಣ್ಣ ಪ್ರಮಾಣದಲ್ಲಿ. ಇದನ್ನು ಆರಂಭಿಸಿದವರು, ಪ್ರೀತಿ, ಪ್ರೇಮ, ಹುಡುಗ ,ಹೊಟೆಲ್, ಪಿಕ್ನಿಕ್ ಸಿನಿಮಾ ಎಂದು ತನ್ನದೇ ಗಂಧರ್ವ ಲೋಕದಲ್ಲಿ ವಿಹರಿಸಬೇಕಾಗಿದ್ದ ಸಣ್ಣ ವಯಸ್ಸಿನ ಹುಡುಗಿ ಸುಷ್ಮಾ. ಮೈಸೂರು ವಿಶ್ವವಿದ್ಯಾಲಯದಿಂದ ಸಮಾಜ ಸೇವೆಯಲ್ಲಿ (MSW) ಸ್ನಾತಕೋತ್ತರ ಪದವಿಯನ್ನು ಪಡೆದ ತಕ್ಷಣ ಈಕೆ ಧುಮುಕಿದ್ದು ಕರಾಳ ಕೂಪವೊಂದರ ಉದ್ಧಾರಕ್ಕೆ. ಪಾದರಸದ ಚಿಲುಮೆಯಂತಹ ಚಟುವಟಿಕೆಯ ಹುಡುಗಿಯ ಕೈಹಿಡಿದು ಬೆಂಬಲಿಸುತ್ತಿರುವವರು ಒಲಿದು ಬಂದ ಗಂಡ ರವಿ. ಈಗ ಒಂದು ಪುಟ್ಟ ಮಗು. ಕರಾಳ ಕೂಪದಲ್ಲೇ ಅವರ ವಾಸವೂ. ನನಗೆ ಅದು ಕೂಪವಾದರೆ ಸುಷ್ಮಾ ದಂಪತಿಗೆ ಅದು ದೇವರ ಗುಡಿ. ಇದನ್ನು ಒಂದು ಗುಡಿಯಾಗಿಸುವಲ್ಲಿ ಸುಷ್ಮಾ ಅವರ ಬೆನ್ನು ತಟ್ಟಿ ಸಹಕರಿಸಿದವರು ಅವರ ಅಜ್ಜಿ. ನಾವು ಹೋದ ತಕ್ಷಣ ಸುಷ್ಮಾ ಮತ್ತು ಅವರ ಪತಿ ರವಿ ಹೊರಗೆ ಬಂದರು. ಅಂಗಳದಲ್ಲಿ ಕಪ್ಪು ನೆರಳುಗಳಂತೆ ಓಡಾಡುತ್ತಿದ್ದ ಮಾನಸಿಕ ಅಸ್ವಸ್ಥ ಮಹಿಳೆಯರನ್ನು ಸಾಲಾಗಿ ಕೂರಿಸಿದರು. ಒಬ್ಬಳು ತನಗೆ ತಾನೇ ಏನೋ ಮಾತನಾಡಿಕೊಳ್ಳುತ್ತಿದ್ದಳು, ನಡುನಡುವೆ ನಗು ಬೇರೆ. ಅಲ್ಲಲ್ಲಿ ತಮಿಳು ಮಾತುಗಳು ಕಿವಿಗೆ ಬೀಳುತ್ತಿದ್ದವು. ಮಾನಸಿಕ ಅಸ್ವಾಸ್ಥ್ಯಕ್ಕೆ, ನಿರ್ಗತಿಗೆ ಅವರದೇ ಆದ ಬೇರೆ ಬೇರೆ ಕಾರಣಗಳಿದ್ದವು. ದೇವಸ್ಥಾನದ ಮುಂದೆ ಭಿಕ್ಷೆ ಬೇಡುತ್ತಿದ್ದ ಒಬ್ಬ ಹೆಂಗಸು, ತಂದೆ ತಾಯಿಯನ್ನು ಕಳೆದುಕೊಂಡು ಬಂಧುಗಳ ದೌರ್ಜನ್ಯಕ್ಕೆ ಒಳಗಾದ, ದೇಹದ ಮೇಲಿನ ಗಾಯಗಳನ್ನು ಶಾಶ್ವತವಾಗಿ ಉಳಿಸಿಕೊಂಡಿರುವ ಒಬ್ಬ ಹುಡುಗಿ, ಗಂಡನ ಕ್ರೌರ್ಯಕ್ಕೆ ತುತ್ತಾದ ಹೆಂಗಸು,ತಲೆ ಕೂದಲನ್ನು ತಾನೇ ದಿನಾ ಕಿತ್ತುಕೊಳ್ಳುವ ಬೊಕ್ಕ ತಲೆಯ ಹೆಂಗಸು, ಮಕ್ಕಳಿಂದ ತ್ಯಜಿಸಲ್ಪಟ್ಟ ಹೆಂಗಸರು, ದಾರಿತಪ್ಪಿಸಿಕೊಂಡ ಹೆಂಗಸರು, ಗಂಡ ಕರೆದರೂ ಹೋಗಲೊಲ್ಲದ ಹೆಂಗಸರು ಹೀಗೆ ಇಪ್ಪತ್ತಕ್ಕೂ ಹೆಚ್ಚಿನ ಈ ಎಲ್ಲಾ ಹೆಂಗಸರು ಈ ಆಶ್ರಮದ ಸದಸ್ಯೆಯರು. ಹೆಚ್ಚಿನವರು ಐವತ್ತು ದಾಟಿದವರು. ಸುಷ್ಮಾ ರವಿಯವರನ್ನು ದೇವರೆಂದೇ ಭಾವಿಸುತ್ತಾರೆ. ಎಲ್ಲರಿಗೂ ಒಂದೇ ಮಾದರಿ ಕೂದಲನ್ನು ಕತ್ತರಿಸಲಾಗಿತ್ತು. ನಾನು ಇದರ ಬಗ್ಗೆ ಕೇಳಿದುದಕ್ಕೆ ಮೈಸೂರಿನ ಬ್ಯೂಟಿ ಪಾರ್ಲರ್ ನ ಒಡತಿಯೊಬ್ಬರ ಉಚಿತ ಸೇವೆ ಅದೆಂದು ತಿಳಿಯಿತು. ಅವರಲ್ಲಿ ಚಿಕ್ಕ ಹುಡುಗಿಯೊಬ್ಬಳಿಗೆ ಐಬ್ರೊ, ಫೇಶಿಯಲ್ ಕೂಡ ಮಾಡಿದ್ದರಂತೆ. ರೆವೆನ್ಯೂ ಸೈಟಿನಲ್ಲಿ ಒಂದು ಪುಟ್ಟ ಕಟ್ಟಡ ಕಟ್ಟಿಕೊಂಡು ಯಾವುದೇ ನಿಗದಿತ ಧನ ಸಹಾಯವಿಲ್ಲದೇ, ಸರ್ಕಾರದ ಒತ್ತಾಸೆಯೂ ಇಲ್ಲದೆ, ಆಶ್ರಮನಡೆಸುತ್ತಿರುವ ಈ ಯುವ ಜೋಡಿ, ಈ ಜಾಗ ಕಾನೂನು ಬಾಹಿರವಾಗಿರುವುದರಿಂದ ಕೋರ್ಟಿನ ಕಟೆಕಟೆಯನ್ನೂ ಹತ್ತಬೇಕಾಗಿದೆ. ಮೈಸೂರಿನ ಆಟೋಮೋಟಿವ್ ಅಕ್ಸೆಲ್ ಎನ್ನುವ ಸಂಸ್ಥೆಯೊಂದು ಈ ಆಶ್ರಮಕ್ಕೆ ಎರಡು ಹೊತ್ತು ಊಟದ ಪ್ರಾಯೋಜನೆ ಮಾಡುತ್ತಿದೆ. ಔಷಧೋಪಚಾರಕ್ಕೆ ಕೆ.ಆರ್. ಸರ್ಕಾರಿ ಆಸ್ಪತ್ರೆಯಿದೆ. ಪ್ರತಿತಿಂಗಳು ವಿದ್ಯುತ್, ಗ್ಯಾಸ್, ಮುಂತಾದವುಗಳಿಗೆ ೨೦ ಸಾವಿರ ತಗಲುವ ಖರ್ಚಿಗೆ ಅವರಿವರನ್ನು ಬೇಡಬೇಕು. ಯಾರಾದರೂ ಕೈಕೊಟ್ಟರೆ ಇವರೇ ಕೈಯಿಂದ ಹಾಕಬೇಕು. ದಾನಿಗಳ ಕೃಪೆ ಬಿಟ್ಟರೆ ಇಬ್ಬರಿಗೂ ಬೇರೇ ವರಮಾನವಿಲ್ಲ. ಸಮಾಧಾನ ತರುವ ಒಂದು ಸಂಗತಿಯೆಂದರೆ ಆಶ್ರಮದ ಸ್ವಚ್ಛತೆಯನ್ನು ಮಾತ್ರ ಕಾಪಾಡುವವರು ಈ ಮಹಿಳೆಯರೇ. ಆದ್ದರಿಂದ ಅದಕ್ಕಾಗಿ ಬೇರೆ ಹಣ ವ್ಯಯಿಸಬೇಕಾದ ಅಗತ್ಯವಿಲ್ಲ. ಅಲ್ಲಿ ಎಲ್ಲಾ ಮಹಿಳೆಯರು ಸ್ವೆಟರನ್ನು ಧರಿಸಿದ್ದರು. ಇಂತಹ ಸೆಕೆಯಲ್ಲಿ ಇದು ಆಶ್ಚರ್ಯವೆನಿಸಿ ಏಕೆಂದು ಕೇಳಿದೆ. ಅದಕ್ಕೆ "ಯಾರಾದರೂ ಕದ್ದುಕೊಂಡು ಹೋಗಿಬಿಡುವ ಭಯ, ಇಲ್ಲವೇ ಇಲ್ಲಿರುವ ಸದಸ್ಯೆಯರೇ ಒಬ್ಬರದ್ದನ್ನು ಇನ್ನೊಬ್ಬರು ಕಸಿದುಕೊಂಡು ಬಿಡಬಹುದೆಂಬ ಅನುಮಾನವೂ...." ಎಂದು ಸುಷ್ಮಾ ಹೇಳಿದಾಗ ನಕ್ಕ ನಗು ಅವರ ಸ್ಥಿತಿಯ ವಿಡಂಬನೆಯಾಗಿಯೇ ಕಂಡಿತು. "ಅವರಿಗೆ ಅದೊಂದು ಸುರಕ್ಷೆಯ ಭಾವವನ್ನೂ ಕೊಡಬಹುದು" ಎಂದು ಸೀತಾರಾಮ್ ಹೇಳಿದಾಗ ಮನಸ್ಸಿನ ನಿಗೂಢ ವ್ಯಾಪಾರಕ್ಕೆ ಅಚ್ಚರಿಯಾಗದೇ ಇರಲಿಲ್ಲ. ತನಗೆ ತಾನೇ ಮಾತನಾಡಿಕೊಳ್ಳುತ್ತಿದ್ದ ಒಬ್ಬ ದಪ್ಪ ಹೆಂಗಸನ್ನು ತೋರಿಸಿ, "ಇವಳು ನೋಡಿ ಮಂಚವನ್ನೇ ಗಂಡನೆಂದು ಭಾವಿಸಿ ಅದನ್ನು ದಿನಾ ಒದೆಯುತ್ತಾಳೆ. ಹಾಗೆ ಸತತವಾಗಿ ಒದ್ದು ಕಾಲ್ಬೆರಳುಗಳ ಉಗುರುಗಳೇ ಕಿತ್ತುಹೋಗಿವೆ" ಎಂದು ಸುಷ್ಮಾ ಹೇಳಿದಾಗ "ನಿನ್ನ ಗಂಡ ಎಲ್ಲಿ ಎಂದು" ಆ ಮಹಿಳೆಯನ್ನು ಕೇಳಿದೆ. "ನನ್ನ ಗಂಡ ಕಾರಲ್ಲಿ ಬಂದಿದ್ದ ಒಳ ಬರಲು ಬಿಡದ ಇವಳೇ ಅವನ ಜೊತೆ ಓಡಿ ಹೋದಳು" ಎಂದು ಸುಷ್ಮಾ ರವರನ್ನು ತೋರಿಸಿದಳು. ಅಲ್ಲದೆ ಸೊಂಟದ ಕೆಳಗಿನ ಭಾಷೆ ಬಳಸಿ ಹಸಿ ಹಸಿಯಾಗಿ ಬೈದಳು. ಕೇವಲ ಬೈಗುಳಗಳಲ್ಲ ಅವರ ದೈಹಿಕ ಆಕ್ರಮಣವನ್ನೂ ಸುಷ್ಮಾ ದಂಪತಿ ಸಹಿಸಿಕೊಳ್ಳಬೇಕು. ಇಷ್ಟಾದರೂ ಕಂಗಾಲಾದ ಮಹಿಳೆಯರ ಮೇಲಿನ ಅವರ ಪ್ರೀತಿ ದೊಡ್ಡದು. ಎಲ್ಲರೂ ಅವರ ಮಕ್ಕಳೇ. ಅವರೊಡನೆ ಕುಶಾಲು ಮಾತುಗಳು, ಪರಸ್ಪರ ಛೇಡಿಸುವಿಕೆ, ಜೋಕುಗಳು, ಹಾಡು ನೃತ್ಯಗಳು, ಯೋಗಾಭ್ಯಾಸ ಮುಂತಾದ ಚಟುವಟಿಕೆಗಳು ಅಂತಹ ಒಂದು ಕಂಗೆಟ್ಟ ಪರಿಸರವನ್ನು ಜೀವಂತವಾಗಿ ಇಟ್ಟಿದೆ. ಕಾಗದದ ಚೀಲಗಳನ್ನು ತಯಾರಿಸುವ, ಫಿನಾಯಿಲ್ ಉತ್ಪಾದನೆ ಮಾಡುವ ಸಣ್ಣ ಪುಟ್ಟ ಕಸುಬುಗಳಲ್ಲಿ ಕೂಡ ಈ ಮಹಿಳೆಯರು ತೊಡಗಿಕೊಂಡಿದ್ದಾರೆ. ಇವು ಆಶ್ರಮಕ್ಕೆ ಅಲ್ಪ ಪ್ರಮಾಣದ ಆದಾಯವನ್ನು ಒದಗಿಸುವಲ್ಲಿ ಸಹಾಯಕವಾಗಿವೆ. ಮನೋವೈದ್ಯಕೀಯ ಸಲಹೆ, ಚಿಕಿತ್ಸೆ ನೀಡಲು ಆಗಾಗ ತಜ್ಞರೂ ಇಲ್ಲಿಗೆ ಬರುವುದಿದೆ. ಇಂದಿನ ಕಾರ್ಪೊರೇಟ್ ಜಗತ್ತಿನ ನಮ್ಮ ಮಕ್ಕಳಿಗೆ ವಾರಾಂತ್ಯದಲ್ಲಿ ಕ್ಲಬ್ ಪಾರ್ಟಿ, ಮಾಲ್ ಗಳಲ್ಲಿ ಶಾಪಿಂಗ್ ಇಲ್ಲದೆ ಸಾಧ್ಯವೇ ಇಲ್ಲ. ತಿಂಗಳು ಎರಡು ತಿಂಗಳಿಗೊಮ್ಮೆ ಪ್ರವಾಸ ರಿಸಾರ್ಟುಗಳಲ್ಲಿ ವಾಸ್ತವ್ಯ ಮೋಜು ಮಜ. ಅಷ್ಟು "ಒತ್ತಡ" ಅವರಿಗೆ. ಅದೇ ವಯಸ್ಸಿನ ಸುಷ್ಮಾ ಮತ್ತು ರವಿ, ಮನುಷ್ಯರು ಮುಟ್ಟಲೂ ಅಸಹ್ಯ ವಾಗುವ ಮಹಿಳೆಯರನ್ನು ಅಪ್ಪಿಕೊಂಡಿದ್ದಾರೆ. ಸಿನಿಮಾ ಇರಲಿ, ಆಶ್ರಮದ ಗೇಟಿನಾಚೆ ಇಣುಕಿ ನೋಡಲೂ ಸಾಧ್ಯವಿಲ್ಲ. ಆಶ್ರಮದ ಒಳಗೇ ಕಟ್ಟಿಕೊಂಡ ಅವರ ಪುಟ್ಟ ಮನೆಗೆ ಬೇರೇ ಹೊರದಾರಿಗಳಿಲ್ಲ. ಹುಚ್ಚರ ಸಂತೆಯಲ್ಲಿಯೇ ತಮ್ಮ ಪುಟ್ಟ ಮಗುವನ್ನೂ ಬೆಳೆಸುತ್ತಿರುವ ಅವರಲ್ಲಿ ಯಾವುದೇ ನೇತ್ಯಾತ್ಮಕ ಭಾವನೆಗಳಿಲ್ಲ. ಭವಿಷ್ಯದ ಭಯಗಳಿಲ್ಲ. ಇಲ್ಲಿನ ಮಹಿಳೆಯರಿಗೆ ಮತದಾನ ಚಲಾಯಿಸುವ ಹಕ್ಕು ಇಲ್ಲದಿರುವುದೂ, ಸರ್ಕಾರದ ಅಲಕ್ಷ್ಯಕ್ಕೆ ಇಂತಹ ಸಂಸ್ಥೆ ಒಳಗಾಗಿರುವುದಕ್ಕೆ ಒಂದು ಕಾರಣವಾಗಿದೆ. ಅನೇಕ ವೈರುಧ್ಯಗಳ ನಡುವೆಯೂ ಈ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗಬೇಕೆಂಬ ಸುಷ್ಮಾ ದಂಪತಿಯ ಛಲ ಮೆಚ್ಚುವಂತಹದ್ದು. ನಾವು ಹೊರಟು ನಿಂತಾಗ "ನಿರಾಶ್ರಿತ ಮಹಿಳೆಯರು ಯಾರಾದರೂ ಇದ್ದರೆ ಕಳುಹಿಸಿ ಕೊಡಿ ಮೇಡಂ" ಎಂದು ರವಿ ಹೇಳಿದಾಗ ನಾನು ದಂಗಾಗಿ ಹೋದೆ. ಎಲ್ಲಾ ರೀತಿಯ ಸವಲತ್ತುಗಳಿದ್ದೂ ವಯಸ್ಸಿನ ಕಾರಣಕ್ಕೆ ನಡಾವಳಿಯಲ್ಲಿ ಸ್ವಲ್ಪ ಏರುಪೇರಾದ ಒಬ್ಬ ಅಮ್ಮನನ್ನು ನಿಭಾಯಿಸಲು ಕಷ್ಟ ಪಡುತ್ತಿರುವ ನಮ್ಮಂತಹವರ ನಡುವೆ , ತೀವ್ರವಾಗಿ ಅಸ್ವಸ್ಥ ರಾಗಿರುವ ಅನೇಕ ನಿರಾಶ್ರಿತ, ಕಂಗಾಲು ಮಹಿಳೆಯರನ್ನು ತಾಯಿಯರನ್ನಾಗಿ ಅಪ್ಪಿಕೊಂಡಿದ್ದಾರೆ. ನಾವು ನಮ್ಮ ಸ್ವಂತ ತಾಯಿಯರನ್ನು ಪೋಷಿಸುವುದರಲ್ಲಿ ದೊಡ್ಡಸ್ತಿಕೆಯನ್ನು ಮೆರೆಯುತ್ತಿದ್ದೇವೆ. ಆಶ್ರಮದಿಂದ ಹೊರಬಂದಾಗ ಕತ್ತಲಾವರಿಸುತ್ತಿತ್ತು. ಮೈಸೂರಿನ ಬೀದಿ ಬೀದಿಗಳು ದಸರಾ ಹಬ್ಬದ ದೀಪದ ಮೆರವಣಿಗೆಯ ವೈಭವದಿಂದ ಕಂಗೊಳಿಸುತ್ತಿದ್ದವು. "ಭೂತ ಪಿಶಾಚ ಉಚ್ಚಾಟಿಸುವ ಐಗಿರಿ ನಂದಿನಿಯ" ವಿದ್ಯುತ್ ಅಲೆ ಎಲ್ಲೆಡೆಯೂ ಹಬ್ಬಿ ಹರಡಿತ್ತು. ಈ ಆಶ್ರಮವನ್ನು ಒಂದು NGO ಮಾಡುವ ಪ್ರಯತ್ನ ದಲ್ಲಿದ್ದಾರೆ. ಅಲ್ಲಿಯವರೆಗೆ ದಾರಿ ದೂರ. ಆಸಕ್ತಿ ಇರುವ ದಾನಿಗಳು ಸುಷ್ಮಾ ರವಿಯವರ ಭುಜ ಬಲಗೊಳಿಸಲು ಧನ, ಧಾನ್ಯ, ಬಟ್ಟೆ ಯಾವ ರೀತಿಯಲ್ಲಾದರೂ ದೇಣಿಗೆಯನ್ನು ನೀಡಬಹುದಾಗಿದೆ. ಕಸೂತಿಯೆಂಬ ಅಡಗು ತಾಣ……… ಗಿರಿಜಾಶಾಸ್ತ್ರಿ ನೆನಪು ಇಲ್ಲಿ ಕಸೂತಿಯಾಗಿದೆ. ಬದುಕು ಇಂತಹ ಕೆಲವು ನೆನಪುಗಳ ಮೊತ್ತ. ನೆನಪುಗಳ ಆಯ್ಕೆ ಎನ್ನುವುದು ವಿಸ್ಮಯಕಾರಿಯಾದುದು. ಯಾವುದೋ ನಿಮಿತ್ತವಾಗಿ ಭೂತದ ನೆನಪು ವರ್ತಮಾನದೊಂದಿಗೆ ಕೊಕ್ಕೆ ಹಾಕಿಕೊಳ್ಳುತ್ತದೆ. ಇವೆರೆಡರ ನಡುವಿನ ಕಾರ್ಯ ಕಾರಣ ಸಂಬಂಧ ಎಂತಹುದೋ ಯಾರು ಬಲ್ಲರು? ವಾಸ್ತವದಲ್ಲಿ ಬದುಕು ನೂರು ಸಿಕ್ಕುಗಳಲ್ಲಿ ಸಿಕ್ಕಿ ನರಳುತ್ತದೆ, ಸಂತೋಷದಲ್ಲಿ ಉನ್ಮಾದ ಗೊಳ್ಳುತ್ತದೆ. ಆದರೆ ಅದು ನೆನಪಾಗಿ ಬರುವಾಗ ವಾಸ್ತವಕ್ಕಿರುವ ಎಲ್ಲಾ ರೀತಿಯ ಭಾವ ಲೇಪಗಳನ್ನು ಕಳೆದುಕೊಂಡು ಬಿಡುವುದರಿಂದ ಸುಖ ದುಃಖಗಳ ತೀವ್ರತೆ ಅದಕ್ಕೆ ತಟ್ಟುವುದಿಲ್ಲ. ಆದುದರಿಂದಲೋ ಏನೋ ‘ಅನುಭವವು ಸವಿಯಲ್ಲ ಅದರ ನೆನಪೇ ಸವಿಯು’ ಎಂದೆನಿಸುತ್ತದೆ. ಈ ಸವಿಯ ನೆನಪೇ ಬದುಕಿನ ಗ್ರಹಿಕೆಗೆ ಒಂದು ವಸ್ತುನಿಷ್ಠ ದೂರವನ್ನು ದಯಪಾಲಿಸುವುದರ ಜೊತೆಗೆ ಸಮಾಹಿತ ಸ್ಠಿತಿಯನ್ನೂ ದೊರಕಿಸಿಕೊಡುತ್ತದೆ. ಆದುದರಿಂದಲೇ ಅದು ಸವಿ. ನೆನಪುಗಳ ಇಂತಹ ಸವಿಯನ್ನು ಕಮಲಾ ತಮ್ಮ "ಕಸೂತಿಯಾದ ನೆನಪು" ಪ್ರಬಂಧಗಳ ಮೂಲಕ ನೀಡಿದ್ದಾರೆ. ಕಸೂತಿ ಸೃಜನಶೀಲವಾದದ್ದು. ಇದರಲ್ಲಿ ವಾಸ್ತವದ ಜೊತೆಗೆ ಕರ್ತೃವಿನ ಕಲ್ಪನೆ, ಪ್ರತಿಭೆ ಬೆರೆತಿದೆ. ಆದುದರಿಂದಲೇ ಅದು ಮಧುರವಾದ ಅನುಭವವನ್ನು ಕೊಡುತ್ತದೆ. ಬದುಕು ಕಸೂತಿಯಾಗುವುದೂ ಹೀಗೆಯೇ ನೆನಪುಗಳ ಮೂಲಕ. ಬದುಕು ಕಸೂತಿಯಾಗಲು ಕಲಾ ವಿನ್ಯಾಸದ ಸೂಕ್ಷ್ಮ ಕಣ್ಣುಗಳಿರಬೇಕು. ಫ್ರಾನ್ಸಿನ ಚಿತ್ತಾರದ ಕಿಟಕಿಗಳ ಜೊತೆಗೆ ಹಳ್ಳಿ ಮನೆಯ ನಾಜೂಕಿಲ್ಲದ ಬಗೆ ಬಗೆಯ ಕಿಟಕಿಗಳ ವಿನ್ಯಾಸಗಳೇ ಕಮಲಾ ಅವರಿಗೆ ಚಿತ್ತಾರದ ತುಣುಕುಗಳನ್ನು ಅಖಂಡವಾಗಿ ಕಾಣಲು ಕಣ್ಣುಗಳನ್ನು ದಯಪಾಲಿಸಿವೆ. ಈ ಕಿಟಕಿಗಳೇ ಅವರ ಲೋಕ ಗ್ರಹಿಕೆಯ ಮಾಧ್ಯಮ.. ಬದುಕಿನ ಒಂದು ಪಕ್ವವಾದ ಘಟ್ಟಕ್ಕೆ ಬಂದು ನಿಂತು ಹಿಂತಿರುಗಿ ನೋಡಿದಾಗ ನೆನಪುಗಳು ಬದುಕಿಗೆ ವಿಷಾದ ರಹಿತ (no regrets) ತೃಪ್ತ ಭಾವವನ್ನು ತಂದಿತ್ತರೆ ಅದು ನಿಜವಾಗಿ ಸಾರ್ಥಕವಾದ ಬದುಕು. ಇಂತಹ ಸಾರ್ಥಕ ಬದುಕಿನ ಬಣ್ಣ ಬಣ್ಣದ ತುಣುಕುಗಳನ್ನು ಕಮಲಾ ಅವರ ಲಘು ಪ್ರಬಂಧದಲ್ಲಿ ಕಾಣುತ್ತೇವೆ. ಎಲ್ಲಿಯೂ ಕಳೆದ ಕಾಲದ ಬಗ್ಗೆ ಆರೋಪಗಳಿಲ್ಲ, ವಂಚಿತವಾದುದರ ಬಗ್ಗೆ ಆಕ್ಷೇಪಗಳಿಲ್ಲ. ಕಾಲೆಳೆದವರ ಬಗ್ಗೆ ಕೋಪವಿಲ್ಲ. ಎಲ್ಲವೂ ಬದುಕಿನ ಪ್ರಸಾದ. ವಿಸಂಗತಿಗಳು ಏನಿದ್ದರೂ ಅವು ಬದುಕಿನ ಊರ್ಧ್ವಗಮನಕ್ಕೆ ಸಹಕಾರಿಯಾಗಿ ಬಂದವುಗಳೇ ಹೊರತು ವಿಷಾದ ಉಂಟುಮಾಡುವುದಕ್ಕಲ್ಲ. ಕಾಲೇಜು ಅಧ್ಯಾಪಕಿಯಾಗಿ ರೌಡಿ ಹುಡುಗರನ್ನೂ ಒಲಿಸಿಕೊಂಡ ಬಗೆ (ನ ಟ ಲೋಕನಾಥ್ ನೆನಪಿಸಿದ ವಿದ್ಯಾರ್ಥಿಗಳು), ಮುದ್ದು ಮಕ್ಕಳಿಗೆಲ್ಲ ಒಂದಾದರು ಬೊಂಬೆ ಸಿಗಲಿ ಎನ್ನುವ ಇಲ್ಲದವರ ಬಗ್ಗೆ ಕಕ್ಕುಲಾತಿ, ಗೋಡೆಗಳಿಲ್ಲದ ಬಯಲಲ್ಲಿ ಚಕ್ಕುಲಿ, ಕೋಡುಬಳೆ ಮಾಡಿ ಹಂಚುವ ಸಾಮುದಾಯಿಕ ಸೌಹಾರ್ದ (ಗೋಡೆಗಳಿಲ್ಲದ ಬದುಕು.), ಪಿತೃಪ್ರಧಾನತೆಯ ಎದುರು ಸೆಡ್ಡು ಹೊಡೆದು ನಿಲ್ಲುವ ಧೈರ್ಯ (ಪಾಳೆಗಾರಿಕೆ ಮನೋಭಾವದ), ವಯಸ್ಸಿಗೆ ತಕ್ಕ ಹಾಗೆ ಇರಬೇಕು ಎನ್ನುವ ಸಾಮಾಜಿಕ ಪೂರ್ವಗ್ರಹವನ್ನು ಬಯಲಾಗಿಸುವ ಲವಲವಿಕೆ ( ವಯಸ್ಸು ದೇಹಕ್ಕೆ....ಅರವತ್ತರ ಚೆಲುವೆ), ಕಣ್ಣು ತುಂಬಿಕೊಳ್ಳುವ ಅರಬ್ಬಿ ಹೆಣ್ಣುಗಳ ಆರ್ದ್ರತೆ, ಜೊತೆಗೆ ಅವರ ಆತ್ಮವಿಶ್ವಾಸ ( ಒಂದು ಪದ..), ಹೆಣ್ಣುಮಕ್ಕಳು ಮನೆ ಮೂಳಿಯಾಗುವುದರ ಸುಖದ ತರ್ಕ (ನೋವಿನ ಪೊಟ್ಟಣ), ಬದಲಾಗುತ್ತಿರುವ ಬೀದಿ ಕನ್ನಡಕ್ಕೆ (slang ) ತನ್ನನ್ನು ಮುಕ್ತವಾಗಿ ತೆರೆದುಕೊಳ್ಳುವ, ಅದನ್ನು ಗೊಣಗದೇ ಸ್ವೀಕರಿಸುವ ಪ್ರಬುದ್ಧತೆ ( ಈ ಫೇಸ್ ಬುಕ್ ನಲ್ಲಿ ನಂದೇ ಹವಾ), ವೈರಾಗ್ಯದ ಆಷಾಢಭೂತಿತನವನ್ನು ಪ್ರಶ್ನಿಸುತ್ತ ರಾಗ ರಂಗಿನ ಬದುಕನ್ನು ಅಪ್ಪಿಕೊಳ್ಳುವ ಜೀವಂತಿಕೆ (ವಿರಾಗದಲ್ಲೊಂದು ರಾಗ), ಇಂದು ಅತಿಯಾದ ಖಾಸಗೀತನ ಮನೆಯಲ್ಲಿರುವ ಸದಸ್ಯರನ್ನು ಭಾಗ ಮಾಡುತ್ತಿರುವ ಹೊತ್ತಿನಲ್ಲಿ ಮನೆಯವರನ್ನೆಲ್ಲಾ ಬೆಸೆಯುವ ಒಂದು ಪ್ರತೀಕವಾಗಿ ಮೈ ಪಡೆದುಕೊಂಡಿರುವ ಚಿಕ್ಕ ಮನೆಯ ಅನನ್ಯತೆ (ಚಿಕ್ಕ ಮನೆಯಲ್ಲಿ ಚೆಕ್ಕೆ ತುಂಬಿದೆ) ಹೀಗೆ ಹತ್ತು ಹಲವು ಬದುಕಿನ ಅನೇಕ ಸಣ್ಣ ಸಣ್ಣ ಸಂಗತಿಗಳನ್ನು ಅವರು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಅವುಗಳ ಬಗ್ಗೆ ಇರುವ ಸಾಮಾಜಿಕ ಪೂರ್ವಗ್ರಹವನ್ನು ಅವರು ಎಂದಿನ ಮೆಲು ದನಿಯಲ್ಲಿ ವ್ಯಕ್ತ ಪಡಿಸಿದ್ದಾರೆ. ಈ ಪಕ್ವ ಲೋಕ ಗ್ರಹಿಕೆಯೇ ಬದುಕಿಗೊಂದು ಬಣ್ಣ ಬಣ್ಣದ ಕಸೂತಿಯ ನಾಜೂಕು ಜಾಲಂಧರವನ್ನು (ಫ್ರಾನ್ಸಿನ ಕಿಟಕಿಗಳು) ದಯಪಾಲಿಸಿದೆ. ಕಿಟಕಿಯ ವಿನ್ಯಾಸ ಸೂಕ್ಷ್ಮವಾಗಿರುವುದರಿಂದಲೇ ಕಾಣುವ ದೃಶ್ಯವೂ ಚಿತ್ತಾರವಾಗಿದೆ. ಈ ವಿನ್ಯಾಸದ ಆಳಕ್ಕಿಂತ ಅದರ ಹರಹು ಬೆರಗು ಪಡಿಸುತ್ತದೆ ಬಾಲ್ಯದ ನೆನಪುಗಳು, ಮನೆ, ಹಿತ್ತಲು, ಅಟ್ಟ, ಕೊಟ್ಟಿಗೆ, ಅಡುಗೆ ಮನೆ ಬಚ್ಚಲು ಮನೆ, ಶಾಲೆ, ಕೋಡಿ ಬಿದ್ದ ಹಳ್ಳ ಎಲ್ಲಕ್ಕೂ ಒಂದು ರೀತಿಯ ಗ್ರಾಮೀಣ ಘಮ ಪ್ರಾಪ್ತವಾಗಿದೆ. ಪಂಚೇಂದ್ರಿಯಗಳಿಂದ ಗ್ರಹಿಸಿದ ಭೂತ ಸಂಗತಿಗಳು, ವರ್ತಮಾನದ ಅದೇ ವಾಸನೆ ರುಚಿ ಸ್ಪರ್ಶ ನೋಟ ಶಬ್ದದ ನಿಮಿತ್ತವಾಗಿ ಧುತ್ತನೆ ಎದುರಾಗುತ್ತವಂತೆ. ಆದರೆ ಅದಕ್ಕೆ ವಿಸ್ಮೃತಿ ಬಂದುಬಿಡುವುದರಿಂದ ಅವುಗಳ ಕಾರ್ಯಕಾರಣ ಸಂಬಂಧ ತಿಳಿಯದೇ ನಮ್ಮನ್ನು ಮಧುರವಾದ ಯಾತನೆಗೆ ತಳ್ಳಿಬಿಡುತ್ತದೆಂದು ಯಾವುದೋ ಮನಶ್ಶಾಸ್ತ್ರದ ಪುಸ್ತಕದಲ್ಲಿ ಓದಿದ ನೆನಪು. ಭೂತದ ವಾಸನೆ ವರ್ತಮಾನದಲ್ಲಿ ಪ್ರಕಟವಾಗುವ, ಭೂತ ವರ್ತಮಾನಗಳು ಲಾಳಿಯಾಡುವ ಬಗೆಯನ್ನು ಬಹಳ ಸರಳವಾಗಿ ಕಮಲಾ ಕಟ್ಟಿಕೊಟ್ಟಿದ್ದಾರೆ. ಲಾಳಿಯಾಡುವುದೆಂದರೇನೆ ಲಾಸ್ಯವಲ್ಲವೇ? ಅದು ಕಸೂತಿಯಲ್ಲಿನ ಬಳ್ಳಿಯ ಲಾಸ್ಯ. ಕಸೂತಿ ಹೆಣ್ಣು ಮಕ್ಕಳ ಪ್ರಪಂಚ. ಮನೆಯ ಗಂಡಸರ ಪ್ರೋತ್ಸಾಹಗಳಿರಲಿ ಅವಜ್ಞೆಗೆ ಒಳಗಾದ ಕದ್ದು ಮುಚ್ಚಿ ಅರಳುವ ಗುಹ್ಯ ಲೋಕ. ಹೆಣ್ಣುಮಕ್ಕಳಿಗೆ ಅದೊಂದು ಅಡಗು ತಾಣ. ಅಂತಹ ಕಸೂತಿಯ ಲೋಕವನ್ನು ದಿಟ್ಟತನದಿಂದ ತೆರೆದಿಟ್ಟ ಕಮಲಾಗೆ ಅಭಿನಂದನೆಗಳು.ಚಿತ್ತಾರದ ತುಣುಕುಗಳನ್ನು ಅಖಂಡವಾಗಿ ಕಾಣಲು ಕಣ್ಣುಗಳನ್ನು ದಯಪಾಲಿಸಿವೆ. ಈ ಕಿಟಕಿಗಳೇ ಅವರ ಲೋಕ ಗ್ರಹಿಕೆಯ ಮಾಧ್ಯಮ.. ಬದುಕಿನ ಒಂದು ಪಕ್ವವಾದ ಘಟ್ಟಕ್ಕೆ ಬಂದು ನಿಂತು ಹಿಂತಿರುಗಿ ನೋಡಿದಾಗ ನೆನಪುಗಳು ಬದುಕಿಗೆ ವಿಷಾದ ರಹಿತ (no regrets) ತೃಪ್ತ ಭಾವವನ್ನು ತಂದಿತ್ತರೆ ಅದು ನಿಜವಾಗಿ ಸಾರ್ಥಕವಾದ ಬದುಕು. ಇಂತಹ ಸಾರ್ಥಕ ಬದುಕಿನ ಬಣ್ಣ ಬಣ್ಣದ ತುಣುಕುಗಳನ್ನು ಕಮಲಾ ಅವರ ಲಘು ಪ್ರಬಂಧದಲ್ಲಿ ಕಾಣುತ್ತೇವೆ. ಎಲ್ಲಿಯೂ ಕಳೆದ ಕಾಲದ ಬಗ್ಗೆ ಆರೋಪಗಳಿಲ್ಲ, ವಂಚಿತವಾದುದರ ಬಗ್ಗೆ ಆಕ್ಷೇಪಗಳಿಲ್ಲ. ಕಾಲೆಳೆದವರ ಬಗ್ಗೆ ಕೋಪವಿಲ್ಲ. ಎಲ್ಲವೂ ಬದುಕಿನ ಪ್ರಸಾದ. ವಿಸಂಗತಿಗಳು ಏನಿದ್ದರೂ ಅವು ಬದುಕಿನ ಊರ್ಧ್ವಗಮನಕ್ಕೆ ಸಹಕಾರಿಯಾಗಿ ಬಂದವುಗಳೇ ಹೊರತು ವಿಷಾದ ಉಂಟುಮಾಡುವುದಕ್ಕಲ್ಲ. ಕಾಲೇಜು ಅಧ್ಯಾಪಕಿಯಾಗಿ ರೌಡಿ ಹುಡುಗರನ್ನೂ ಒಲಿಸಿಕೊಂಡ ಬಗೆ (ನ ಟ ಲೋಕನಾಥ್ ನೆನಪಿಸಿದ ವಿದ್ಯಾರ್ಥಿಗಳು), ಮುದ್ದು ಮಕ್ಕಳಿಗೆಲ್ಲ ಒಂದಾದರು ಬೊಂಬೆ ಸಿಗಲಿ ಎನ್ನುವ ಇಲ್ಲದವರ ಬಗ್ಗೆ ಕಕ್ಕುಲಾತಿ, ಗೋಡೆಗಳಿಲ್ಲದ ಬಯಲಲ್ಲಿ ಚಕ್ಕುಲಿ, ಕೋಡುಬಳೆ ಮಾಡಿ ಹಂಚುವ ಸಾಮುದಾಯಿಕ ಸೌಹಾರ್ದ (ಗೋಡೆಗಳಿಲ್ಲದ ಬದುಕು.), ಪಿತೃಪ್ರಧಾನತೆಯ ಎದುರು ಸೆಡ್ಡು ಹೊಡೆದು ನಿಲ್ಲುವ ಧೈರ್ಯ (ಪಾಳೆಗಾರಿಕೆ ಮನೋಭಾವದ), ವಯಸ್ಸಿಗೆ ತಕ್ಕ ಹಾಗೆ ಇರಬೇಕು ಎನ್ನುವ ಸಾಮಾಜಿಕ ಪೂರ್ವಗ್ರಹವನ್ನು ಬಯಲಾಗಿಸುವ ಲವಲವಿಕೆ ( ವಯಸ್ಸು ದೇಹಕ್ಕೆ....ಅರವತ್ತರ ಚೆಲುವೆ), ಕಣ್ಣು ತುಂಬಿಕೊಳ್ಳುವ ಅರಬ್ಬಿ ಹೆಣ್ಣುಗಳ ಆರ್ದ್ರತೆ, ಜೊತೆಗೆ ಅವರ ಆತ್ಮವಿಶ್ವಾಸ ( ಒಂದು ಪದ..), ಹೆಣ್ಣುಮಕ್ಕಳು ಮನೆ ಮೂಳಿಯಾಗುವುದರ ಸುಖದ ತರ್ಕ (ನೋವಿನ ಪೊಟ್ಟಣ), ಬದಲಾಗುತ್ತಿರುವ ಬೀದಿ ಕನ್ನಡಕ್ಕೆ (slang ) ತನ್ನನ್ನು ಮುಕ್ತವಾಗಿ ತೆರೆದುಕೊಳ್ಳುವ, ಅದನ್ನು ಗೊಣಗದೇ ಸ್ವೀಕರಿಸುವ ಪ್ರಬುದ್ಧತೆ ( ಈ ಫೇಸ್ ಬುಕ್ ನಲ್ಲಿ ನಂದೇ ಹವಾ), ವೈರಾಗ್ಯದ ಆಷಾಢಭೂತಿತನವನ್ನು ಪ್ರಶ್ನಿಸುತ್ತ ರಾಗ ರಂಗಿನ ಬದುಕನ್ನು ಅಪ್ಪಿಕೊಳ್ಳುವ ಜೀವಂತಿಕೆ (ವಿರಾಗದಲ್ಲೊಂದು ರಾಗ), ಇಂದು ಅತಿಯಾದ ಖಾಸಗೀತನ ಮನೆಯಲ್ಲಿರುವ ಸದಸ್ಯರನ್ನು ಭಾಗ ಮಾಡುತ್ತಿರುವ ಹೊತ್ತಿನಲ್ಲಿ ಮನೆಯವರನ್ನೆಲ್ಲಾ ಬೆಸೆಯುವ ಒಂದು ಪ್ರತೀಕವಾಗಿ ಮೈ ಪಡೆದುಕೊಂಡಿರುವ ಚಿಕ್ಕ ಮನೆಯ ಅನನ್ಯತೆ (ಚಿಕ್ಕ ಮನೆಯಲ್ಲಿ ಚೆಕ್ಕೆ ತುಂಬಿದೆ) ಹೀಗೆ ಹತ್ತು ಹಲವು ಬದುಕಿನ ಅನೇಕ ಸಣ್ಣ ಸಣ್ಣ ಸಂಗತಿಗಳನ್ನು ಅವರು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಅವುಗಳ ಬಗ್ಗೆ ಇರುವ ಸಾಮಾಜಿಕ ಪೂರ್ವಗ್ರಹವನ್ನು ಅವರು ಎಂದಿನ ಮೆಲು ದನಿಯಲ್ಲಿ ವ್ಯಕ್ತ ಪಡಿಸಿದ್ದಾರೆ. ಈ ಪಕ್ವ ಲೋಕ ಗ್ರಹಿಕೆಯೇ ಬದುಕಿಗೊಂದು ಬಣ್ಣ ಬಣ್ಣದ ಕಸೂತಿಯ ನಾಜೂಕು ಜಾಲಂಧರವನ್ನು (ಫ್ರಾನ್ಸಿನ ಕಿಟಕಿಗಳು) ದಯಪಾಲಿಸಿದೆ. ಕಿಟಕಿಯ ವಿನ್ಯಾಸ ಸೂಕ್ಷ್ಮವಾಗಿರುವುದರಿಂದಲೇ ಕಾಣುವ ದೃಶ್ಯವೂ ಚಿತ್ತಾರವಾಗಿದೆ. ಈ ವಿನ್ಯಾಸದ ಆಳಕ್ಕಿಂತ ಅದರ ಹರಹು ಬೆರಗು ಪಡಿಸುತ್ತದೆ ಬಾಲ್ಯದ ನೆನಪುಗಳು, ಮನೆ, ಹಿತ್ತಲು, ಅಟ್ಟ, ಕೊಟ್ಟಿಗೆ, ಅಡುಗೆ ಮನೆ ಬಚ್ಚಲು ಮನೆ, ಶಾಲೆ, ಕೋಡಿ ಬಿದ್ದ ಹಳ್ಳ ಎಲ್ಲಕ್ಕೂ ಒಂದು ರೀತಿಯ ಗ್ರಾಮೀಣ ಘಮ ಪ್ರಾಪ್ತವಾಗಿದೆ. ಪಂಚೇಂದ್ರಿಯಗಳಿಂದ ಗ್ರಹಿಸಿದ ಭೂತ ಸಂಗತಿಗಳು, ವರ್ತಮಾನದ ಅದೇ ವಾಸನೆ ರುಚಿ ಸ್ಪರ್ಶ ನೋಟ ಶಬ್ದದ ನಿಮಿತ್ತವಾಗಿ ಧುತ್ತನೆ ಎದುರಾಗುತ್ತವಂತೆ. ಆದರೆ ಅದಕ್ಕೆ ವಿಸ್ಮೃತಿ ಬಂದುಬಿಡುವುದರಿಂದ ಅವುಗಳ ಕಾರ್ಯಕಾರಣ ಸಂಬಂಧ ತಿಳಿಯದೇ ನಮ್ಮನ್ನು ಮಧುರವಾದ ಯಾತನೆಗೆ ತಳ್ಳಿಬಿಡುತ್ತದೆಂದು ಯಾವುದೋ ಮನಶ್ಶಾಸ್ತ್ರದ ಪುಸ್ತಕದಲ್ಲಿ ಓದಿದ ನೆನಪು. ಭೂತದ ವಾಸನೆ ವರ್ತಮಾನದಲ್ಲಿ ಪ್ರಕಟವಾಗುವ, ಭೂತ ವರ್ತಮಾನಗಳು ಲಾಳಿಯಾಡುವ ಬಗೆಯನ್ನು ಬಹಳ ಸರಳವಾಗಿ ಕಮಲಾ ಕಟ್ಟಿಕೊಟ್ಟಿದ್ದಾರೆ. ಲಾಳಿಯಾಡುವುದೆಂದರೇನೆ ಲಾಸ್ಯವಲ್ಲವೇ? ಅದು ಕಸೂತಿಯಲ್ಲಿನ ಬಳ್ಳಿಯ ಲಾಸ್ಯ. ಕಸೂತಿ ಹೆಣ್ಣು ಮಕ್ಕಳ ಪ್ರಪಂಚ. ಮನೆಯ ಗಂಡಸರ ಪ್ರೋತ್ಸಾಹಗಳಿರಲಿ ಅವಜ್ಞೆಗೆ ಒಳಗಾದ ಕದ್ದು ಮುಚ್ಚಿ ಅರಳುವ ಗುಹ್ಯ ಲೋಕ. ಹೆಣ್ಣುಮಕ್ಕಳಿಗೆ ಅದೊಂದು ಅಡಗು ತಾಣ. ಅಂತಹ ಕಸೂತಿಯ ಲೋಕವನ್ನು ದಿಟ್ಟತನದಿಂದ ತೆರೆದಿಟ್ಟ ಕಮಲಾಗೆ ಅಭಿನಂದನೆಗಳು. ಕಟು ಮಧುರದ ಗೀತೆ...... ಕೊಳದ ಮೇಲೆ ಬೀಸಿ ಬರುವ ಗಾಳಿಯೆಂದರೆ ತಂಪಾದ ಆಹ್ಲಾದಕರ ಗಾಳಿಯೆಂದೇ ಅರ್ಥ. ಆದರೆ ಅದು ಒಮ್ಮೊಮ್ಮೆ ಮಧ್ಯಾಹ್ನದ ಬಿರುಬಿಸಿಲಿನಲ್ಲೂ ಬೀಸಬಹುದು. ಆಗ ಆ ಗಾಳಿಗೆ ಬಿಸಿಲ ಧಗೆ ಇರುವುದು ಸಹಜ. ಜೀವನ ಎಂದರೆ ಕೇವಲ ಸುಖದ ಆಖ್ಯಾನ ಮಾತ್ರವಲ್ಲ. ಕಷ್ಟದ ಕಡು ಆಖ್ಯಾನವೂ ಹೌದು. ಪುತಿನ ಅವರ ಕವಿತೆಗಳಲ್ಲಿ ಕಾಣುವ ಇಂತಹ ಕಟು ಮಧುರದ ಆಖ್ಯಾನದ ಜೊತೆಗೆ ಕಮಲಾ ಅನುಸಂಧಾನ ಮಾಡಿದ್ದಾರೆ. ಪು.ತಿ.ನ ಎಂದ ಕೂಡಲೇ ನನ್ನ ನೆನಪಿನ ಬುತ್ತಿಯಿಂದ ಹೊರಗೆ ಇಣುಕುವುದು ‘ಬಹನು ಬರುತಿಹನವ್ವ ಬಂದನು ಕಂಡರೇ ಗತಿ ಕಾಣೆನೇ’ ಎನ್ನುವ ಪ್ರೇಮಿಯೊಬ್ಬಳ “ಪ್ರತೀಕ್ಷೆ”ಯ ಸಾಲುಗಳು, "ಈಚಲು ಮರದ ಕೆಳಗಿ”ನ ಪ್ರಬಂಧಗಳು, ಸಾಂಪ್ರದಾಯಕ ನಿಲುವಿನಲ್ಲೂ ಒಡಮೂಡಿದ “ಅಹಲ್ಯೆ”ಯ ಬಗೆಗಿನ ಮಾನವೀಯ ಕಳಕಳಿ. ಇವುಗಳಲ್ಲಿ ಕಾಣುವ ದೃಷ್ಟಿಕೋನವೇ ಪು.ತಿ.ನ ಅವರ ಈ ಕವಿತೆಗಳಲ್ಲಿಯೂ ಬಿಡಿ ಬಿಡಿಯಾಗಿ ಕೋದುಕೊಂಡಿವೆ. ಕೊಳದ ಮೇಲಿನ ಗಾಳಿ ಬೀಸುವಾಗ ಇಕ್ಕೆಲೆದ ಮರಗಿಡ ಬಳ್ಳಿಗಳ ಘಮಲನ್ನೂ ಹೊತ್ತು ತರುವುದುಂಟು. ಹಾಗೆಯೇ ಪು.ತಿ.ನ ಅವರ ಕವಿತೆಗಳು ಬದುಕಿನ ಅನೇಕ ಕಷ್ಟ ಸುಖದ ಬಣ್ಣ ವಾಸನೆಗಳನ್ನು ಓದುಗರಿಗೆ ದಾಟಿಸುವ ಬಗೆಯನ್ನು ಲೇಖಕಿ ತಮ್ಮ ವೈಯಕ್ತಿಕ ಬದುಕಿನ ಆಖ್ಯಾನದ ಸಣ್ಣ ಪುಟ್ಟ ಘಟನೆಗಳೊಂದಿಗೆ ಅನುಸಂಧಾನ ಮಾಡಿಕೊಳ್ಳುತ್ತಾ, ಕವಿತೆಯನ್ನು ವಿಸ್ತರಿಸುವುದು, ಕವಿತೆಯನ್ನು ಅರ್ಥೈಸುವ ಹೊಸ ಬಗೆಯಾಗಿದೆ. ಈ ಹೊಸ ಬಗೆ ಇನ್ನಷ್ಟೇ ಸಾಹಿತ್ಯ ಲೋಕದಲ್ಲಿ ಸ್ವೀಕೃತಗೊಂಡು ಚಲಾವಣೆಗೆ ಬರಬೇಕಾಗಿದೆ. ಅದಕ್ಕೆ ಕಾಯಬೇಕಾಗಿದೆ. ಇದು ಲೇಖಕಿಯ ವಸ್ತುನಿಷ್ಠ ಬರಹಗಳ ಮೇಲೆ ಪು.ತಿ.ನ ಕವಿತೆಗಳು ಬೀರಿದ ಪ್ರಭಾವಕ್ಕೆ ಸಾಕ್ಷಿಯೂ ಆಗಿದೆ. ಇದಕ್ಕೆ ಉದಾಹರಣೆಯಾಗಿ ಒಂದೆರೆಡು ಕವಿತೆಗಳನ್ನು ನೋಡಬಹುದು. “ಪ್ರತೀಕ್ಷೆ” ಕವಿತೆಯ ಪ್ರೇಮಿಯ ತಲ್ಲಣ “ಅಹಲ್ಯೆ” ಗೀತನಾಟಕದಲ್ಲಿ ಮುಂದುವರಿದಿದೆ. ಅದರ ಒಂದು ತುಣುಕೇ "ಹೆಣ್ಣೊಬ್ಬಳ ಕಣಸು" ಕವಿತೆಯಲ್ಲಿ ಪ್ರತಿಫಲನಗೊಂಡಿದೆ. ಬದುಕಿನ ಪಯಣದ ಯಾವುದೋ ತಿರುವಿನಲ್ಲಿ ಕಾಣುವ ಒಂದು ಮುಖ ಗಕ್ಕನೆ ಹಿಡಿದು ನಿಲ್ಲಿಸುವುದುಂಟು. ಅದರ ಆಕರ್ಷಣೆ, ಸೆಳವಿಗೆ ಹೆಸರಿಲ್ಲ. ಅದು ಆ ಕ್ಷಣದ ಸತ್ಯವಷ್ಟೇ. ಅದಕ್ಕೆ ಭವಿಷ್ಯವಿಲ್ಲ. ಒಂದು ಕ್ಷಣ ಮಿಂಚಿ ಮಾಯವಾಗುವಂತಹುದು. ಹೀಗೆ ಮಿಂಚಿ ಮಾಯವಾಗುವ ಆಕರ್ಷಣೆಯನ್ನು ಹೀನವಾಗಿ ನೋಡುವುದೇಕೇ? ಎನ್ನುವುದು ಕವಿಯ ಅಭಿಪ್ರಾಯ. ಲೇಖಕಿ ಇದನ್ನು ಅನುಸಂಧಾನ ಮಾಡಿರುವ ರೀತಿ ಅಚ್ಚರಿ ಹುಟ್ಟಿಸುತ್ತದೆ. ಎಲ್ಲರ ಬದುಕಿನಲ್ಲಿಯೂ ಹಾದು ಹೋಗುವ ಈ ಗಳಿಗೆಗಳು ತನ್ನ ಬದುಕಿನಲ್ಲಿಯೂ ಹಾದು ಹೋಗಿವೆ ಎಂದು ಹೇಳುವುದಕ್ಕೆ ಧೈರ್ಯ ಬೇಕು. ಕವಿಯ ಸಾಂಪ್ರದಾಯಕ ಮನಸ್ಸಿನಲ್ಲಿಯೂ ಬದುಕಿನ ವಾಸ್ತವವನ್ನು ಸಹಜವೆನ್ನುವಂತೆ ಒಪ್ಪಿಕೊಳ್ಳುವ ಒಂದು ಔದಾರ್ಯದ ಸೆಲೆ ಇರುವಂತೆ, ಲೇಖಕಿಯಲ್ಲಿಯೂ ಇದೆ. ಸಾಂಪ್ರದಾಯಕತೆಯಲ್ಲಿ ಕುಡಿಯೊಡೆಯುವ ಆಧುನಿಕತೆ ಇದು. ಇದೇ ಔದಾರ್ಯ "ಪತಿತ ಪಾವನ" ಕವಿತೆಯಲ್ಲಿಯೂ ಕಂಡು ಬರುತ್ತದೆ. ರಾಮನನ್ನು ಪತಿತ ಪಾವನ ಎಂದು ಪೂಜಿಸುವ ಜನರೇ ಯಾವುದೋ ಅನಿವಾರ್ಯ ಕಾರಣಕ್ಕೆ ಕಾಲು ಜಾರಿದ ಹೆಣ್ಣನ್ನು ಪತಿತೆ ಎಂದು ಅವಳನ್ನು ಜನ ಹೀನಾಯವಾಗಿ ಕಾಣುವ ಅವರ ಪೂರ್ವಾಗ್ರಹವನ್ನು ಕವಿ ಬಯಲಿಗೆಳೆದರೆ ಲೇಖಕಿ ಇಂತಹ ಶುದ್ಧತೆಯ ಅಗತ್ಯ ವಿದೆಯೇ? ಇದು ಅಂತರಂಗಕ್ಕೆ ಸಂಬಂಧಿಸಿದ್ದು ಎನ್ನುತ್ತಾ ಹೆಣ್ಣುಮಕ್ಕಳು ಬದುಕನ್ನು ಧೈರ್ಯವಾಗಿ ಎದುರಿಸುವುದನ್ನು ಕಲಿತುಕೊಳ್ಳಬೇಕು ಎಂದು ತಮ್ಮ ಊರಿನ ಪಂಚಾಯತಿಯೊಂದರ ಉಲ್ಲೇಖ ಮಾಡುತ್ತಾರೆ. "ರಂಗವಲ್ಲಿ" ಕವಿತೆಯಲ್ಲಿ ಮುಪ್ಪಿನ ಮುದುಕಿಯೊಬ್ಬಳು ಬೆಟ್ಟಹತ್ತಿ ದೇವಾಲಯದ ಮುಂದೆ ರಂಗೋಲಿ ಬಿಡಿಸುತ್ತಾಳೆ. ಇಲ್ಲಿ ಅವಳ ಶ್ರದ್ಧೆ ಭಕ್ತಿ ಯನ್ನು ಕವಿ ಬಯಲು ಮಾಡಿದ್ದರೆ ಲೇಖಕಿ ಮನೆಯವರ ತಿರಸ್ಕಾರಕ್ಕೆ ಒಳಗಾಗಿರುವ ಇಂದಿನ ವೃದ್ಧರ ಸ್ಥಿತಿಯ ಬಗೆಗೆ ಗಮನ ಸೆಳೆಯುತ್ತಾರೆ. ಹೀಗೆ ಪು.ತಿ.ನ ಅವರ ಕವಿತೆಗಳನ್ನು ಒಂದು ನೆಪವಾಗಿಟ್ಟುಕೊಂಡು ಲೇಖಕಿ ಅವುಗಳ ಓದಿನ ಪರಿಣಾಮದ ಜೊತೆಗೆ ತಮ್ಮ ಬದುಕಿನ ಅನುಭವಗಳನ್ನು ಒರೆಹಚ್ಚಿ ನೋಡಿದ್ದಾರೆ. ಇದು ವಿದ್ಯಾರ್ಥಿಗಳಿಗೆ ಒಂದು ರೀತಿಯ ಕೈಪಿಡಿಯೂ ಆಗಿದೆ. ಕಮಲಾ ಅವರಿಗೆ ಅಭಿನಂದನೆಗಳು. 23/10/20 'ಪೆದ್ದನ್ನನ ಇಕಾಲಜಿ ಮತ್ತು ಪರಿಸರ ಲೇಖನಗಳ ವಿದ್ಯೆ ಕಲಿಯಲು ಬಂದ ಜಾಬಾಲಳ ಮಗ ಸತ್ಯಕಾಮನ ಉತ್ಸಾಹ, ಪ್ರಾಮಾಣಿಕತೆಯನ್ನು ಕಂಡ ಗುರು ಹಾರೀತ ಮುನಿ ಅವನಿಗೆ ನಾನೂರು ಹಸುಗಳನ್ನು ಕೊಟ್ಟು ಅವುಗಳನ್ನು ಮೇಯಿಸಿಕೊಂಡು ಬರಲು ಕಾಡಿಗೆ ಕಳುಹಿಸುತ್ತಾನೆ ಮತ್ತು ಅವು ಸಾವಿರ ಸಂಖ್ಯೆಗಳಾಗುವವರೆಗೂ ಕಾಡಿನಲ್ಲಿಯೇ ಇರಬೇಕು ಎಂದು ಷರತ್ತು ಹಾಕುತ್ತಾನೆ. ಒಂದು ಗೂಳಿ, ಹಂಸ, ಹಕ್ಕಿ ಮತ್ತು ಬೆಂಕಿಯೊಡನೆ ಮಾಡಿದ ಸಂಭಾಷಣೆಯ ಮೂಲಕ ಅವನಿಗೆ‌ ಬ್ರಹ್ಮ ಜ್ಞಾನ ಪ್ರಾಪ್ತವಾಗುತ್ತದೆ, ಬ್ರಹ್ಮ ಸ್ವರೂಪ ವಿಶ್ವದ ಎಲ್ಲಾ ಜಡ ಚೇತನಗಳಲ್ಲೂ ಇದೆ ಎಂಬುದರ ಜ್ಞಾನೋದಯವಾಗುತ್ತದೆ, ಎಂಬ ಕಥೆ ಇದೆ. ಅಂದರೆ ವಿಶ್ವದ ಸಮಸ್ತ ಜೀವಜಾಲಗಳಲ್ಲೂ ಪ್ರವಹಿಸುತ್ತಿರುವ ತತ್ವವೊಂದೇ‌ ಅವು ಒಂದಕ್ಕೊಂದು ಸಂಬಂಧಿಸಿವೆ. ಅವುಗಳ ಅಳಿವು ಉಳಿವು ಪಾರಸ್ಪರಿಕವಾದುದು ಎಂಬುದೇ ಆತ್ಯಂತಿಕ ವಾಸ್ತವ ಇದೇ ಸತ್ಯಕಾಮನಿಗೆ ಆದ ಜ್ಞಾನೋದಯ. ನಿಸರ್ಗಕ್ಕಿಂತ ದೊಡ್ಡ ಗುರು ಇನ್ನೊಂದಿಲ್ಲ. ನಮ್ಮ ಸುತ್ತಮುತ್ತಲಿನ ಅದನ್ನು ಅದಮ್ಯವಾಗಿ ಪ್ರೀತಿಸುವ ಮನಸ್ಸಿರಬೇಕಷ್ಟೇ! ಅಷ್ಟೇ ಏಕೆ ನಾವೂ ಅದರ ಭಾಗವೇ ಆಗಿದ್ದೇವಲ್ಲ! ಈ ಅರಿವಿನ ಆಸ್ಫೋಟದಿಂದ, ಅದನ್ನು ನಿರಂತರವಾಗಿ ಜಾಗೃತವಾಗಿ ಇಟ್ಟುಕೊಳ್ಳುವುದರಿಂದ, ಆಗ ಯಾರೂ ಕೂಡ ಬ್ರಹ್ಮಜ್ಞಾನಿಯಾಗಬಹುದು. "ಕಾಡಮೂಲಕವೇ ಪಥ ಆಗಸಕ್ಕೆ" ಎನ್ನುತ್ತಾರೆ ಅಡಿಗರು. "ಕಲ್ಲಲಿ ಮಣ್ಣಲಿ ಎಲ್ಲೆಲ್ಲಿಯು ಚೈತನ್ಯ... ತೆಗೆ ಜಡವೆಂಬುದೆ ಸುಳ್ಳು"ಎನ್ನುತ್ತಾರೆ ಕುವೆಂಪು. ತೇಜಸ್ವಿಯವರಿಗೆ ಒಂದು ಸಣ್ಣ ಹುಳ ಹುಪ್ಪಟೆ, ಹಕ್ಕಿ, ಮಣ್ಣುಗುಡ್ಡೆ, ಬಿದ್ದಿರುವ ಬಂಡೆ ಇವುಗಳು ಕೂಡ ನಮ್ಮ ಪರಿಸರದ ಭಾಗವಾಗುತ್ತದೆ. ಇವುಗಳ ಜೊತೆ ಪ್ರೀತಿಯಿಂದ ಇರುವುದೇ ಬದುಕು. ಹೀಗೆ ನಮ್ಮ ವಿಶ್ವ ಒಂದು ಇನ್ನೊಂದನ್ನು ಸಂಕೀರ್ಣ ಸಂಬಂಧದ ಜಾಲದೊಳಗೆ ಬಂಧಿಸಿದೆ. ಆದುದರಿಂದಲೇ ವಿಶ್ವದೊಳಗಿನ ನಮ್ಮ ಅಸ್ತಿತ್ವಕ್ಕೆ ವ್ಯಕ್ತಿ ವಿಶಿಷ್ಟತೆ ಇಲ್ಲವಾದರೂ, ವಿಶ್ವವನ್ನು ನೋಡುವ, ಗ್ರಹಿಸುವ ಕ್ರಮಕ್ಕೆ ಇದೆ. ಇಂತಹ ಸಂಶ್ಲೇಷಣಾತ್ಮಕ ದೃಷ್ಟಿಕೋನವನ್ನು ಪುರುಷೋತ್ತಮ ರಾವ್ ಅವರ 'ಪೆದ್ದನ್ನನ ಇಕಾಲಜಿ ಮತ್ತು ಪರಿಸರ ಲೇಖನಗಳು' ಕೃತಿ ದಯಪಾಲಿಸುತ್ತದೆ. ಭೂಮಿಯಿರುವುದು ತನಗೊಬ್ಬನಿಗೆ ಮಾತ್ರ ಎಂಬ ಅಜ್ಞಾನ ಅಹಂಕಾರದಲ್ಲಿ, ಮನುಷ್ಯ ತನ್ನ ಉಪಯೋಗಕ್ಕೆ ಅನುವು ಮಾಡಿಕೊಡುವ ಅಭಿವೃದ್ಧಿಕಾರ್ಯಗಳನ್ನು ಕೈಗೊಳ್ಳುತ್ತಿದ್ದಾನೆ. ಅವನಿಗೇನಾದರೂ ಸತ್ಯಕಾಮನ ಕಾಣ್ಕೆ ಇದ್ದಿದ್ದೇ ಆದರೆ ಜಗತ್ತಿನ ಜೀವಜಾಲದಲ್ಲೇ ತಾನೆಂತಹ ಸ್ವಾರ್ಥಿ ಮತ್ತು‌ನಿಕೃಷ್ಟಪ್ರಾಣಿ ಎಂಬ ಅರಿವಾಗುತ್ತಿತ್ತು. 'ಪೆದ್ದನ್ನನ ಇಕಾಲಜಿ' ಓದುಗರಿಗೆ ಸತ್ಯಕಾಮನ ಕಣ್ಣುಗಳನ್ನು ದಯಪಾಲಿಸುತ್ತವೆ. ಭೂಮಿಗೆ ಕನ್ನ ಹಾಕಿ "ಪಾತಾಳ ಕಾಣುತ್ತಿರುವ ತಾಯ್ಗಂಡರ" ವಿಷ ವರ್ತುಲದಲ್ಲಿ ಇಂತಹ ಪುಸ್ತಕಗಳು ಎಷ್ಟು ಬಂದರೂ ಸಾಲದು. ಪರಿಸರವೆಂದರೆ ನದಿ ಜಲಪಾತಗಳು ಗುಡ್ಡ ಗುಹೆಗಳು, ನೀರಿನ ಒರತೆಗಳು,ಕಾಡುಗಳು, ಪ್ರಾಣಿಗಳು, ಸಸ್ಯರಾಶಿ, ನಿಸರ್ಗದ ಭಾಗವೇ ಆದ ಮನುಷ್ಯ ಸಂಬಂಧಗಳ ಆರ್ದ್ರತೆ, ಪ್ರೀತಿ ಎಲ್ಲವೂ ಇಲ್ಲಿ ಲೇಖಕರ ಕ್ಯಾಮರಾ ಕಣ್ಣಿಗೆ ಸಿಕ್ಕಿ ಒಂದು ವಿಸ್ಮಯ ಲೋಕವನ್ನು ಸೃಷ್ಟಿಸಿವೆ. ಕಾಡಿನಲ್ಲಿ ಚಾರಣ ಮಾಡುತ್ತಾ ಸೃಷ್ಟಿಯ ವಿಸ್ಮಯಗಳನ್ನು, ಅವುಗಳ ಬಗಗೆ ಬೇರೂರಿರುವ ಭ್ರಮೆಗಳನ್ನು ಹರಿಸುತ್ತಾ ಲೇಖಕರು ಕಾಡುಗುಡ್ಡಗಳಲ್ಲಿ ಚಾರಣ ಮಾಡುವಾಗ ಓದುಗರೂ ಅವರ ಜೊತೆ ಹೈಕಿಂಗ್ ಹೊರಡುತ್ತಾರೆ. ಇದೊಂದು ವೈಜ್ಞಾನಿಕ ಕೃತಿಯಾದರೂ ಓದುಗರಿಗೆ ಹಾಗೆನಿಸುವುದಿಲ್ಲ . 'ಕಾಂತಾ ಸಂಹಿತೆಯ' ಕಥಾ ಗುಣ ಇದಕ್ಕಿದೆ. ಲೇಖಕರ ಕಾಂತೆ ಮತ್ತು ಅತ್ತೆ ಲಲಿತಮ್ಮನವರ ಮಾತೃಹೃದಯ ಈ ಜೀವಜಾಲವನ್ನು ಪೊರೆಯುವ ಪ್ರತೀಕಗಳಾಗಿಯೂ ಬಂದಿರುವುದೇ ಇದಕ್ಕೆ ಕಾರಣ. ಕತ್ತಾಳೆ, ಲಾಂಟಾನ, ಕಲಗಚ್ಚು, ಮುಂತಾದ ನಿಷ್ಪ್ರಯೋಜಕವೆಂದು ಕೊಂಡ ವಸ್ತುಗಳ ಶಕ್ತಿ, ಮಲೆನಾಡ ಕಾಡು, ಬಯಲು ಸೀಮೆಯ ಬಂಜರು , ಅವರ ಜನ ಜೀವನ ಹಾಗೂ ಅವರ ಭಾಷೆಯಲ್ಲಿರುವ ವ್ಯತ್ಯಾಸ ಇವುಗಳ ಸುತ್ತ ಸ್ವಾರಸ್ಯಕರ ಕಥೆಗಳು ಚಲ್ಲವರಿದಿವೆ. ಕಾಡಿನಲ್ಲಿ ಸಿಗುವ ಅನೇಕ ಕಾಡು ಸಸ್ಯಗಳು ಅವುಗಳ ವೈಜ್ಞಾನಿಕ ಹಿನ್ನೆಲೆ, ಉಪಯೋಗ, ಅದರ ಚರಿತ್ರೆ, ಅವುಗಳ ವಲಸೆಯ ಸ್ವರೂಪ, ಅವುಗಳ ವೈಜ್ಞಾನಿಕ ಹೆಸರುಗಳು ಎಲ್ಲವನ್ನೂ ಇಲ್ಲಿ ಕೊಟ್ಟಿರುವುದು ಲೇಖಕರ ಸ್ಪಷ್ಟ ಗ್ರಹಿಕೆಗೆ ಉದಾಹರಣೆಯಾಗಿದೆ. ಪ್ರಾಗೈತಿಹಾಸಿಕ ಗುಹೆಗಳು, ಮಾರಕ ಸಯನೈಡ್ ಗುಡ್ಡವೊಂದನ್ನು ಹಸಿರು ಮುಕ್ಕಳಿಸುವ ಗುಡ್ಡವನ್ನಾಗಿಸುವಲ್ಲಿ ಪರಿಸರ ಪ್ರೇಮಿ ತ್ಯಾಗರಾಜು ಮುಂತಾದವರ ಶ್ರಮ ಪರಿಸರಕ್ಕಾಗಿ ತೆತ್ತುಕೊಳ್ಳುವ ಪ್ರೀತಿ ಅನನ್ಯವಾಗಿ ಚಿತ್ರಣಗೊಂಡಿವೆ. ಪ್ರಾಣಿಗಳ ಮೇಲಾಗುವ ಕಾಡ್ಗಿಚ್ಚಿನ ಪರಿಣಾಮಗಳು, ಜಿಂಕೆಯನ್ನು ರಕ್ಷಿಸಿದ ಪ್ರಸಂಗ ನೀರಿನಗೋಪುರಗಳು, ಆನೆಗಳು, ಹಾವುಗಳು, ಕರಡಿ, ನವಿಲುಗಳು, ಚಿರತೆ,ನಾಯಿ ಬೆಕ್ಕುಗಳು, ಬಾವುಲಿಗಳು, ಮುಳ್ಳುಹಂದಿ, ಮುಂಗುಸಿ ಮುಂತಾದ ಪ್ರಾಣಿಗಳ ಗುಣ ಸ್ವಭಾವಗಳು, ಅವುಗಳ ಸ್ವಭಾವಕ್ಕೆ ಅಂಟಿರುವ ತಪ್ಪುಕಲ್ಪನೆಗಳು, (ಲೇಖಕರು ಅವುಗಳಿಗೆ ಎದುರಾದಾಗ ಅನುಭವಿಸುವ ಸೂಕ್ಷ್ಮ ಸಂವೇದನೆ) ಕಾಡಿನೊಳಗೆ ಚಾರಣ ಮಾಡಿಸುವ ಸ್ಥಳೀಯ ಮುಗ್ಧ ಜ್ಞಾನಿಗಳು (ಕರ್ವಾಲೋದ ಮಂದಣ್ಣನನ್ನು ಹೋಲುವ ಪದ್ದನ್ನ ಮುಂತಾದ ಸ್ಥಳೀಯರು) ಈ ಎಲ್ಲವುಗಳ ಅಸ್ತಿತ್ವವನ್ನು ಸಾಮಾಜಿಕವಾಗಿ ಮತ್ತು‌ ವೈಜ್ಞಾನಿಕ ನೆಲೆಗಳಲ್ಲಿ ಸ್ಪಷ್ಟಪಡಿಸುತ್ತಾ ಅವುಗಳನ್ನು ಒಂದು ಅಖಂಡವಾದ ಕಾಣ್ಕೆಯೊಳಗೆ ಬಂಧಿಸುವುದು ಈ ಕೃತಿಯ ಹೆಗ್ಗಳಿಕೆ ಯಾಗಿದೆ. ಇಂತಹ ಅನನ್ಯ ಕೃತಿಯನ್ನು ಬರೆದ ಪುರುಷೋತ್ತಮರಾವ್ ಅವರಿಗೆ ಅಭಿನಂದನೆಗಳು. ಮುಂಬಯಿಯಲ್ಲಿ ರಘುನಾಥ್ ಅವರ ವಿದ್ಯಾರ್ಥಿಯಾಗಿದ್ದ ಜನಾರ್ಧನ ಅವರ ಮೂಲಕ ಈ ಕೃತಿಯನ್ನು ತಲಪಿಸಿದ್ದಾರೆ. ಇಬ್ಬರಿಗೂ ಧನ್ಯವಾದಗಳು.9/4/25 ಸುದ್ದಿಸಂಗಾತಿಯ ಸಾಹಸಗಾಥೆ 7/4/25 ಈಚೀಚೆಗೆ ನನಗೇಕೋ ಸ್ತ್ರೀವಾದವೆಂದರೆ ಮಹಿಳೆಯರು ತಮ್ಮ ಶಕ್ತಿಯ ಸಂಪೂರ್ಣ ಸಾಮರ್ಥ್ಯಕ್ಕೆ ಪೂರ್ತಿಯಾಗಿ ಅರಳುವುದೇ ಎನಿಸುತ್ತಿದೆ. ಹೀಗೆ ಎನಿಸುವುದಕ್ಕೆ ಕಾರಣ ಇತ್ತೀಚೆಗೆ ಬಿಡುಗಡೆಯಾದ ನಾಗಮಣಿ ಎಸ್. ರಾವ್ ಅವರ 'ಸುದ್ದಿ ಸಂಗಾತಿಯ ಸ್ವಗತ'. ನಾಗಮಣಿಯವರು ೧೯೫೭ ರಲ್ಲೇ ಪಿ.ಆರ್. ರಾಮಯ್ಯನವರು ಸ್ಥಾಪಿಸಿದ 'ತಾಯಿನಾಡು' ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಸೇರಿಕೊಳ್ಳುತ್ತಾರೆ. ಅದಕ್ಕೂ ಒಂದು ವರ್ಷ ಮುಂಚೆ 'ಜನಮಿತ್ರ' (೧೯೫೬) ಪತ್ರಿಕೆಯಲ್ಲಿ ಕೇವಲ ಇಪ್ಪತ್ತು ವರುಷಗಳ ಯುವತಿ -ಸಹ ಸಂಪಾದಕರಾಗುತ್ತಾರೆ. ಅಂದರೆ ನಾನು ಹುಟ್ಟುವುದಕ್ಕೂ ಎರಡು ವರ್ಷಗಳ ಮುನ್ನವೇ- ೬೮ ವರುಷಗಳ ಹಿಂದೆ!! ಅವರು ಆ ಕಾಲಕ್ಕೆ ಹುಡುಗರ ಜೊತೆ ಕುಳಿತು ಅಭ್ಯಾಸ ಮಾಡಿ ಬಿ.ಎ. ಪದವೀಧರೆಯಾಗಿ ಪತ್ರಿಕಾರಂಗಕ್ಕೆ ಬಂದಿರುತ್ತಾರೆ. ನಮ್ಮ ದೇಶದಲ್ಲಿ ಒಂದೇ ಕಾಲದಲ್ಲಿ ಎಲ್ಲಾ ಶತಮಾನಗಳೂ ಬದುಕಿರುತ್ತವೆ ಎಂದು URA ಹೇಳುತ್ತಿದ್ದರು, ಅದು ನಿಜ. ಇವರಿಗಿಂತ ಹತ್ತು ವರ್ಷಗಳಷ್ಟೇ ದೊಡ್ಡವರು ನನ್ನಮ್ಮ. ಏಳನೇ ತರಗತಿ ಮುಗಿದ ನಂತರ ಶಾಲೆ ಬಿಡಿಸಿ ಅಜ್ಜ ಮನೆಯಲ್ಲಿ ಕೂರಿಸಿದರು. ಅಜ್ಜನ ಮೇಲೆ ಆಕ್ಷೇಪವಿಲ್ಲ. ತಮ್ಮ ಕಾಲವನ್ನು ಮೀರುವ ಧೈರ್ಯ ಹೆಚ್ಚಿನವರಿಗೆ ಇರುವುದಿಲ್ಲ. ಕಾಲದ ಸವಾಲಿಗೆ ಬಾಗಿ ಹದಿನಾಲ್ಕು ವರ್ಷಕ್ಕೇ ಮದುವೆ ಮಾಡಿಬಿಟ್ಟರು. ಅಮ್ಮ ಕೂಡ ತುಂಬಾ ಬುದ್ಧಿವಂತೆಯಾಗಿದ್ದಳು. ಆದರೆ ಅವಳಿಗೆ ಅವಳೊಳಗಿನ ಶಕ್ತಿಯ ಸಾಮರ್ಥ್ಯಕ್ಕೆ ಪೂರ್ಣವಾಗಿ ಅರಳಲು ಸಾಧ್ಯವಾಗದೇ ಹೋಯಿತು. ಇಂತಹ ಕಾಲದಲ್ಲೇ ನಾಗಮಣಿಯವರು ಬಿ.ಎ. ಮಾಡಿ, ಬಿ.ಎಲ್ ಮಾಡಿ, ಪತ್ರಕರ್ತೆಯಾಗಿ, ಆಕಾಶವಾಣಿಯ ಸುದ್ದಿವಾಚಕಿಯಾಗಿ, ಲೇಖಕಿಯರ ಸಂಘವನ್ನು ಕಟ್ಟಿ ಬೆಳೆಸಿ ಅದರ ಅಧ್ಯಕ್ಷೆಯೂ ಆಗಿ ಅನೇಕ ಸಾಹಿತ್ಯಕ ಕಾರ್ಯಕ್ರಮಗಳನ್ನು ರೂಪಿಸಿ ತನ್ನ ಕಾಲದ ಅನೇಕ ಮಹಿಳೆಯರಿಗೆ ಅವರವರ ಶಕ್ತಿಯ ಸ್ವರೂಪವನ್ನು ಕಂಡುಕೊಳ್ಳಲು ಮಾರ್ಗ ಹಾಕಿಕೊಟ್ಟರು. ನಾಟಕವನ್ನು ರಚಿಸಿದರು. ಪಾತ್ರವನ್ನೂ ಮಾಡಿದರು! ಹೀಗೆ ನನ್ನಮ್ಮನನ್ನಾಗಲೀ, ನನ್ನ ದೊಡ್ಡು, ಚಿಕ್ಕಿಯರನ್ನಾಗಲೀ ನಾನು ಕಲ್ಪಸಿಕೊಳ್ಳಲಾದೀತೇ? ಅಬ್ಬಾ! ಎನಿಸುತ್ತದೆ. ಅವರ ಈ ಸಾಧನೆಗೆ ಅವರ ತಂದೆ ಮತ್ತು ಅವರ ಗಂಡ ಸತ್ಯಾಜಿ ರಾವ್ ಅವರು ನೀಡಿದ ಒತ್ತಾಸೆಯೂ ಕಾರಣವಿರಬಹುದು. ಒತ್ತಾಸೆ ನೀಡದಿದ್ದರೂ ಅದನ್ನು ಮೀರಿ ಬೆಳೆಯುವ ಶಕ್ತಿ ನಾಗಮಣಿಯವರಿಗೆ ಇತ್ತೇನೋ. ಯಾವುದೇ ಕೌಟುಂಬಿಕ ಸಂಘರ್ಷವಿಲ್ಲದೇ ಸುಲಲಿತವಾಗಿ ಗೆದ್ದು ಬಂದರು. ಮಹಿಳೆಯರ ಮಾದರಿಯಾದರು. ಅವರ ಕೌಟುಂಬಿಕ ಪರಿಸರ ತನ್ನ ಕಾಲಕ್ಕಿಂತ ಒಂದೈವತ್ತು ವರ್ಷಗಳಾದರೂ ಮುಂದಿದ್ದಿತು. ಪ್ರತಿಯೊಬ್ಬ ಮಹಿಳೆಯೂ ಹೀಗೆ ಕಾಲಕ್ಕೆ ಸೆಡ್ಡು ಹೊಡೆದು, ಅದನ್ನು ಮೀರಿ ನಿಲ್ಲುವುದಾದರೆ, ಮುಂದೆ ಓಡಲು ಸಾಧ್ಯವಾದರೆ ಪಿತೃಪ್ರಧಾನತೆಯ ಯಾಜಮಾನ್ಯದ ಎದುರು ಮೇಜು ಗುದ್ದಬೇಕಾಗಿಲ್ಲ, ಮಹಿಳೆಯ ದಯನೀಯ ಸ್ಥಿತಿಯನ್ನು ಸ್ಥಾಪಿಸಬೇಕಾಗಿಲ್ಲ, ಚಳವಳಿ ಹೂಡಬೇಕಾಗಿಲ್ಲ ಎಂದೇ ಎನಿಸುತ್ತದೆ. ಹಾಗೆಂದಾಕ್ಷಣ ಇಲ್ಲಿ ನಾನು ಚಳವಳಿಗಳ ಮಹತ್ವವನ್ನು ಅಲ್ಲಗಳೆಯುತ್ತಿಲ್ಲ. ನಮ್ಮ ಹೆಚ್ಚಿನ ಮಹಿಳೆಯರಿಗೆ ಗಂಡ ಮಕ್ಕಳು ಮನೆಯನ್ನು‌ ನಿರ್ವಹಿಸುವುದೇ ದೊಡ್ಡ ಸಂಗತಿ.ಅದಕಾಗಿ ಹೊರಬರಲು ನೂರೆಂಟು ಕುಂಟು ನೆಪಗಳು. ಗಂಡಂದಿರ ಹೆಗಲ ಮೇಲೆ ಬಂದೂಕನಿಟ್ಟು ಕೆಲಸ ಸಾಧಿಸುತ್ತೇವೆ. ಅಂತಹ ಮಹಿಳೆಯರಿಗೆ ನಾಗಮಣಿ ಗುರಿ ಇಟ್ಟು ಹೊಡೆದ ಒಂದು ಉತ್ತರದಂತಿದ್ದಾರೆ. ಗಂಡುಮಕ್ಕಳ ನಡುವೆ ಕಲಿಯುವಾಗ, ನೌಕರಿ ಮಾಡುವಾಗ, ಪತ್ರಿಕಾ ವರದಿಗೆ ಹೋಗುವಾಗ ಅವರು ಎದುರಿಸಿದ ಸಮಸ್ಯೆಗಳು ನಿಭಾಯಿಸಿದ ರೀತಿ, ಆಕಾಶವಾಣಿಯಲ್ಲಿ ಪ್ರಾಮಾಣಿಕವಾಗಿ ದುಡಿದು ಗೆದ್ದ ದೊಡ್ಡಸ್ತಿಕೆ, ಸಾಮಾಜಿಕ ಕಾರ್ಯಗಳಿಗಾಗಿ ದೊರೆತ ಕಿರೀಟಗಳು ಈ ಎಲ್ಲವುಗಳ ಮೂಲಕವೇ ಅರಳಿದ ರೀತಿ ಎಲ್ಲವನ್ನೂ ಬಹಳ ಅಚ್ಚುಟ್ಟಾಗಿ, ಆರ್ದ್ರವಾಗಿ ಅನನ್ಯವಾಗಿ ಮಾಲತಿ ಭಟ್ ಸಂಯೋಜಿಸಿಕೊಟ್ಟಿದ್ದಾರೆ. ಮಾಲತಿ ಈ ಸಾಹಸವನ್ನು ಕೈಗೊಳ್ಳದಿದ್ದರೆ ನಾಗಮಣಿಯವರ ಮೇರು ವ್ಯಕ್ತಿತ್ವ ಕೇವಲ ಅವರ ಪರಿಚಿತ ವಲಯಗಳಲ್ಲೇ ಪಸರಿಸಿ ಮರೆಯಾಗಿಬಿಡುತ್ತಿತ್ತು. ಅಂತಹ ಘನವನ್ನು ಹಿಡಿಯಲು ಯತ್ನಿಸಿರುವ ಮಾಲತಿ, ಅದನ್ನು ಪ್ರಕಾಶಕ್ಕೆತಂದ ಪೂರ್ಣಿಮಾ ರಾಜಾರಾವ್ ಅವರನ್ನು ಎಷ್ಟು ಪ್ರಶಂಸಿಸಿದರೂ ಸಾಲದು. 'ಸುದ್ದಿಸಂಗಾತಿಯ ಸ್ವಗತ'ವನ್ನು ಮಹತ್ವಾಕಾಂಕ್ಷಿಗಳಾದ ಎಲ್ಲಾ ಮಹಿಳೆಯರೂ ಓದಲೇ ಬೇಕು. ನನಗಂತೂ ನಾಗಮಣಿಯವರ ಮೇಲೆ ತುಂಬಾ ಲವ್ ಆಗಿಬಿಟ್ಟಿದೆ. ಅದೇ ಗುಂಗಿನಲ್ಲಿದ್ದೇನೆ. ಇದಕ್ಕೆ ಕಾರಣರಾದ ಮಾಲತಿ ಭಟ್ ಮತ್ತು ವಿಕಾಸ ಪ್ರಕಾಶನದ ಪೂರ್ಣಿಮಾ ಮೇಡಂ ಅವರಿಗೆ ಅಭಿನಂದನೆಗಳು. ಶುಭಾಶಯಗಳು.ಧನ್ಯವಾದಗಳು. 'ಸುದ್ದಿಸಂಗಾತಿಯ ಸ್ವಗತ' ಚಂಪಾವತಿಯವರ ಕಾದಂಬರಿ "ತಲ್ಲಣ" ಮತ್ತು ಸ್ತ್ರೀವಾದದ ಇತರ ತುಣುಕು ವಿಚಾರಗಳು: 9/4/25 1989 ರಲ್ಲಿ ನಾನು ಸ್ತ್ರೀವಾದೀ ಅಧ್ಯಯನ ಕೈಗೊಂಡಾಗ ಕನ್ನಡದಲ್ಲಿ ಒಂದು ಪುಸ್ತಕವೂ ಇರಲಿಲ್ಲ. ಜರ್ಮನ್ ಗ್ರೀರ್,ಷುವಾಲ್ಟರ್, ಕೇಟ್ ಮಿಲೆಟ್, ಸಿಮೊನ್ ದ ಬೊವಾ ಹೀಗೆ ಇಂಗ್ಲಿಷಿನಲ್ಲಿ ಓದಿಕೊಂಡು ಕನ್ನಡಿಸಿ ವೈಚಾರಿಕ, ಅಸ್ತಿತ್ವವಾದೀ, ಮಾರ್ಕ್ಸ್ವಾದಿ ಸ್ತ್ರೀವಾದ ಎಂದೆಲ್ಲಾ ವಿಭಾಗಿಸಿಕೊಂಡು ವಿಜಯಾ ದಬ್ಬೆಯವರ ಮುಂದೆ ಇಟ್ಟಿದ್ದೆ. ಅವರು ಸರಿ ಎಂದು ಬೆನ್ನು ತಟ್ಟಿದ್ದರು. ಈಗ ೩೫ ವರುಷಗಳ ನಂತರ ಕಾದಂಬರಿಗಳೇ ಬರುತ್ತಿವೆ. ಈ ಬೆಳವಣಿಗೆ ಖುಷಿ ತಂದಿದೆ. ಚಂಪಾವತಿಯವರಿಗೆ ಅಭಿನಂದನೆಗಳು. ಈ ಕಾದಂಬರಿಯನ್ನು ಓದಿದಾಕ್ಷಣ ಯೇಟ್ಸ್ ನ ಸೆಕೆಂಡ್ ಕಮಿಂಗ್ ಸಾಲುಗಳು "Things fall apart centre cannot hold" ನೆನಪಾದವು. ಎಲ್ಲ ಚಳವಳಿಯ ಸ್ವರೂಪವೂ ಇಲ್ಲಿ ಚಲ್ಲಪಿಲ್ಲಿಯಾಗಿವೆ. ಒಂದು stabilty ಮತ್ತು order ಇಲ್ಲವಾಗಿದೆ. ಈ ಕಾದಂಬರಿ ಪ್ರಾರಂಭವಾಗುವುದೇ ಒಂದು Shattered, scattered ಆದ ಸ್ಥಿತಿಯಿಂದ, ಬದುಕಿಗೆ ಒಂದು ಚೌಕಟ್ಟು ಇಲ್ಲ ಎನ್ನುವ ಅರಿವಿನ‌ ಆಸ್ಫೋಟದ ಭ್ರಮ ನಿರಸನ ಸ್ಥಿತಿಯಿಂದ, ಈ ತಲ್ಲಣಗಳು ಗೊಂದಲಗಳು ಹೊಸಕಾಲದ ಮುನ್ಸೂಚನೆಯೂ ಇತಬಹುದು. ಚೌಕಟ್ಟು ಹರಿದುಕೊಂಡರೆ ಬಯಲೇ ತಾನೇ? ಫ್ಲೇವಿಯಾ ಈ ಹೋರಾಟವನ್ನು ಒಂದು ರೀತಿ ಹೋಲಿಸ್ಟಿಕ್ ಆಗಿ ನೋಡಬೇಕು ಎನ್ನುತ್ತಾರೆ . ಇದು The conflict between powerful and the powerless. ಎನ್ನುತ್ತಾರೆ. ಯಾಕೆಂದರೆ ಗಂಡಾಳಿಕೆ ಎಂದಾಕ್ಷಣ ಅದು ಪುರುಷನೇ ಆಗಬೇಕಾಗಿಲ್ಲ. ಇಲ್ಲಿ ಬರುವ ಪಲ್ಲವಿ ಅವಳು ಪಿತೃಪ್ರಧಾನತೆಯ ಸಂಕೇತವೇ ಆಗಿದ್ದಾಳೆ. ಹೀಗಾಗಿ ಹೋರಾಟ ಚಳವಳಿ ಎನ್ನುವುದು ಇದು ಲಿಂಗ ಜಾತಿ ವರ್ಣ ವರ್ಗವನ್ನು ಮೀರಿದ್ದು. ಲೇಖಕಿ ಚೌಕಟ್ಟು ಇಲ್ಲ ಎನ್ನುವುದು ಆ ಚೌಕಟ್ಟನ್ನು ಹರಿದು ಕೊಳ್ಳುವ ಪ್ರಕ್ರಿಯೆಯೇ ಆಗಿದೆ. ಎಲ್ಲ ಹೋರಾಟಗಳ ಮೂಲ ಒಂದೇ. ಎಂದು ಅಖಂಡವಾಗಿ ನೋಡುವುದೇ. ಚಲ್ಲಾಪಿಲ್ಲಿಯಾಗಿ ಚದುರಿಹೋಗಿರುವ ವಿವಿಧ ಸಂಘಟನೆಗಳನ್ನು ಒಗ್ಗೂಡಿಸುವುದಾಗಿದೆ. ಆಮೂಲಕವೇ ಒಂದು ಅರ್ಥಪೂರ್ಣ ಹೋರಾಟ ಸಾಧ್ಯ ಎಂದು ಗ್ರಹಿಸಬಹುದಾಗಿದೆ. ಈ ಕಾದಂಬರಿ ಓದಿದಾಕ್ಷಣ ನನಗೆ ಇದರಲ್ಲಿ ಸ್ತ್ರೀಪರವಾದ ಚಳವಳಗಳ ಜೋಷ್ ಕಾಣಿಸಿತು. ಅದರ ಜೊತೆಗೆ ವಿಷಾದವೂ ಸೇರಿಕೊಂಡಿದೆ. ಚಳವಳಿಯ ಸ್ವರೂಪ, ಮುಂಗಾಣ್ಕೆ, ಅದರ ಬಿಕ್ಕಟ್ಟುಗಳು, ಅದರ ದುರುಪಯೋಗ, ಪ್ರಾಯೋಗಿಕ ಸಮಸ್ಯೆಗಳು, ಪರ್ಯಾಯಗಳು ಎಲ್ಲವೂ ಲಲಿತಾ ಮತ್ತು ಸುನೀತಾ ಎಂಬ ಎರಡು ಪಾತ್ರಗಳ ಮೂಲಕ ಇಲ್ಲಿ ಚರ್ಚಿತವಾಗಿವೆ. ಶಿವಗಂಗಾದಲ್ಲಿಯೇ ಇದು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ವ್ಯಕ್ತವಾಗಿದೆ ಎನಿಸಿತು. ಇಲ್ಲಿ ಇದು loud ಆಗಿದೆ. ೯೦ ರ ದಶಕದಿಂದಾಚೆಗೆ ಸ್ತ್ರೀವಾದದಲ್ಲಿ ಒಂದು paradigm shift ನ್ನು ಕಾಣುತ್ತೇವೆ. ಅದೇನೆಂದರೆ victim mode ನಿಂದ survivor mode ಗೆ ತಿರುವನ್ನು ಪಡೆದುಕೊಂಡಿದ್ದು. ೩೫ ವರುಷಗಳ ನಂತರ ಈಗ ಸ್ತ್ರೀವಾದ ಇನ್ನೊಂದು ತಿರುವನ್ನು ಪಡೆದುಕೊಳ್ಳುವುದಕ್ಕೆ ಕಾಲ ಹದವಾಗಿದೆ ಎನಿಸುತ್ತದೆ. ಈ ಸ್ತ್ರೀಪರ ಹೋರಾಟಕ್ಕೆ ಈಗ ಅನೇಕ ಧಾರೆಗಳು LGBTQ, ಲೈಂಗಿಕ ಕಾರ್ಯಕರ್ತರು (ಮಹಿಳಾ‌ ಮತ್ತು ಪುರುಷ)ಮುಸ್ಲಿಂ ಮುಂತಾದ ಅಲ್ಪಸಂಖ್ಯಾತರು ಸೇರಿಕೊಂಡು ಚಳವಳ ಹುರಿಗೊಂಡಿದೆ. ಈ ಕಾದಂಬರಿ ಕ್ವಚಿತ್ ಆಗಿ, ಲೈಂಗಿಕ ಕಾರ್ಯಕರ್ತೆಯರು ಮತ್ತು ತೃತೀಯ ಲಿಂಗಿಗಳ ಬಗೆಗೆ ಪಾಸಿಂಗ್ ಆದ ರೆಫೆರೆನ್ಸ್ ನ್ನು ಹೊಂದಿದೆ. ಆದರೂ ಎಲ್ಲಿಯೂ ಅದು ಇಡಿಯಾಗಿ ಒಂದು ಅನುಭವವಾಗಿ ದಕ್ಕುವುದಿಲ್ಲ. ಹೀಗೆ ದಕ್ಕದೇ ಇರುವುದೇ ಇಂದಿನ ವಾಸ್ತವವೇನೋ. ಲಲಿತಾ ಸುನೀತ ಶಬುನಂ, ಈಶ್ವರ್, ಶಶಾಂಕ, ಇವರೆಲ್ಲಾ ಚಲ್ಲಾಪಿಲ್ಲಿಯಾದ ವಿವಿಧ ಸ್ತರದ ಹೋರಾಟದ ಪ್ರತೀಕಗಳು. ಇಲ್ಲಿ ಕುಟುಂಬವನ್ನು ಒಪ್ಪಿಕೊಂಡಿರುವವರು, ಅದನ್ನು ನಿರಾಕರಿಸಿದವರು, ಕುಟುಂಬ ಮತ್ತು ಸಂಘಟನೆ ಎರಡರಲ್ಲೂ ಹೋರಾಡುತ್ತಿರುವವರು, ವಿಸ್ತೃತ ಕಟುಂಬದ ಮೂಲಕ ಹೊಸ ಕುಟುಂಬದ ಪರಿಕಲ್ಪನೆಯನ್ನು ರೂಪಿಸಿಕೊಂಡವರು ಇದ್ದಾರೆ- ಈ ಎಲ್ಲರ ಸಮಸ್ಯೆಗಳು ಚರ್ಚೆಗೆ ಒಳಪಟ್ಟಿವೆ ಒಂದಕ್ಕೊಂದು ಮುಖಾಮುಖಿಯಾಗಿವೆ. ಈ ಎಲ್ಲವೂ ಒಂದು ಏಕೀಕೃತ ಗ್ರಹಿಕೆಯ ಒಳಗೆ‌ಬರಬೇಕು ಎನ್ನುವುದನ್ನು ಈ ಕೃತಿ ಹೇಳುತ್ತಿರಬಹುದು. ಸಂಬಂಧಗಳನ್ನು ನಿರಾಕರಿಸಿ ಬದುಕಲು ಸಾಧ್ಯವಿಲ್ಲ. ಸಂಬಂಧಗಳಲ್ಲಿ ಬದುಕುವುದು ಅನಿವಾರ್ಯ. ( ಶಶಿ ದೇಶಪಾಂಡೆ) ಮದುವೆ ಅಥವಾ ಗಂಡನನ್ನು ನಿರಾಕರಿಸಿದಾಕ್ಷಣ ಪಿತೃಪ್ರಧಾನತೆಯ ಬಿಗಿ ಹಿಡಿತದಿಂದ ಬಿಡುಗಡೆ ಸಿಕ್ಕಿಬಿಡುವುದಿಲ್ಲ. ಯಾಕೆಂದರೆ ಮದುವೆಯ ವ್ಯವಸ್ಥೆಯ ಆಚೆಗೂ ಗಂಡಾಳಿಕೆ ಎನ್ನುವುದು ಇದೆ. (ಗಂಡಾಳಿಕೆ ನಡೆಸುವವರು ಪುರುಷರೇ ಆಗಬೇಕೆಂದಿಲ್ಲ, ಆ ಮಾದರಿಯನ್ನು ಅನುಸರಿಸುವವರೆಲ್ಲಾ ಗಂಡಾಳಿಕೆಯ ವರ್ತುಲದಲ್ಲೇ ಬರುತ್ತಾರೆ. ಉದಾ: ಪಲ್ಲವಿ) ಇದು ಕಾದಂಬರಿ ಆಗಿದೆಯೇ ಇಲ್ಲವೇ ಎನ್ನುವ ಪ್ರಶ್ನೆಯನ್ನು ಒತ್ತಟ್ಟಿಗಿಟ್ಟು ಈ ಪುಸ್ತಕ ಎತ್ತುವ ಪ್ರಶ್ನೆಗಳ ಕಡೆಗೆ ಗಮನ ಹರಿಸುವುದಾದರೆ ಇದಕ್ಕೆ ತನ್ನದೇ ಆದ ಸಾಮಾಜಿಕ ಮಹತ್ವವಿದೆ. ಸಾಹಿತ್ಯಕ ಮಹತ್ವದ ಬಗ್ಗೆ ನಾನು ಏನೂ ಹೇಳಲಾರೆ. ಇದು ಕಾದಂಬರಿಯಾಗಿ ಯಶಸ್ವಿಯಾಗಿದೆಯೇ? ಪ್ರಣಾಳಿಕೆಗಳ ಸಂಕಲನವೇ? ಎನ್ನುವ ಪ್ರಶ್ನೆಗೆ ಉತ್ತರ ಬೇರೆ ನೆಲೆಯಲ್ಲಿಯೇ ಹುಡುಕಬೇಕಾಗಿದೆ ಇಂತಹ ಕೃತಿಗಳು ಕಾದಂಬರಿಯ ಹೊಸವ್ಯಾಖ್ಯೆಗೆ ಕಾಯುತ್ತಿವೆಯೇ ಅಥವಾ ಸಾಹಿತ್ಯದ ಹೊಸ ಪ್ರಕಾರವನ್ನಾಗಿಯೇ ಗುರುತಿಸಬೇಕೇ? ಗೊಂದಲ ನನಗೆ. ಕಾಲವಷ್ಟೇ ನಿರ್ಧರಿಸಬಲ್ಲುದು. ಗೇ ಗಳಲ್ಲಿ ಕೂಡ ಒಬ್ಬ ಹೆಣ್ಣು ಭೂಮಿಕೆಯನ್ನು ನಿಭಾಯಿಸಿದರೆ ಇನ್ನೊಬ್ಬ ಗಂಡು ಭೂಮಿಕೆಯನ್ನು ನಿಭಾಯಿಸುವುದನ್ನು ನಾನು ನೋಡಿದ್ದೇನೆ. ಭೂಮಿಕೆಗಳಿಗೆ ಅಂಟಿಕೊಂಡಿರುವ ತಾರತಮ್ಯ ಭಾವನೆ ಹೋಗಬೇಕು - ಇಂತಹ ಸೈದ್ಧಾಂತಿಕ ಗೊಂದಲಗಳ ನಡುವೆ ನಾವು ಹಾದು 'ಹೋಗುತ್ತಿದ್ದೇವೆ. ಈ ಗೊಂದಲವನ್ನು ತಲ್ಲಣ'ಗಳನ್ನು ಭಾಷಾಂತರಿಸುತ್ತಿವೆ. ಭೂಮಿಕೆಗಳು ಅದಲು ಬದಲಾಗುವುದಾದರೆ ನಾವು ಹೆಣ್ಣು ಮಕ್ಕಳೇ ಸಿದ್ಧರಾಗುವುದಿಲ್ಲ . ಮದುವೆಯಾಗುವ ಗಂಡು ತನಗಿಂತ ಒಳ್ಳೆಯ ಉದ್ಯೋಗ, ಸಂಬಳ, ತನಗಿಂತ ಎತ್ತರ ಇರಬೇಕೆಂದೇ ಹೆಣ್ಣು ಮಕ್ಕಳು ಬಯಸುತ್ತಾರೆ. Home maker ಹುಡುಗನಿಗೆ ಯಾರಾದರೂ ಹೆಣ್ಣು ಕಟ್ಟಾರೆಯೇ? ಅನಕೂಲಸ್ಥ ಪುರೋಹಿತರನ್ನಾಗಲೀ , ರೈತರನ್ನಾಗಲೀ ಮದುವೆಯಾಗಲು ಯಾರೂ ಮುಂದೆ ಬರುತ್ತಿಲ್ಲ ಎನ್ನುವ ಕೊರಗು ಇತ್ತೀಚೆಗೆ ಕಂಡು ಬರುತ್ತಿದೆ. ಈ ಎಲ್ಲವನ್ನೂ ಸ್ತ್ರೀವಾದ ಸಂಹಿತೆ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಅನಿವಾರ್ಯವಿದೆ. ಮಹಿಳೆಯರ ಪರವಾದ ಕಾನೂನುಗಳು ಜಾರಿಗೆ ಬಂದಿವೆ ನಿಜ. ಅದು ಹೆಚ್ಚು ಅನ್ವಯವಾಗುತ್ತಿಲ್ಲ. ಬಲಿಪಶುಗಳಾದ ಹೆಣ್ಣುಮಕ್ಕಳಿಗೆ ಅದಕ್ಕೆ access ಸಿಗುತ್ತಿಲ್ಲ ಎನ್ನುವುದು ಒಂದು ಕಡೆಗಾದರೆ ಇನ್ನೊಂದು ಕಡೆ ವಿದ್ಯಾವಂತ ಹೆಣ್ಣುಮಕ್ಕಳು ಇದನ್ನು misuse ಮಾಡಿಕೊಳ್ಳುತ್ತಿರುವ ಕೇಸ್ ಗಳು ಗಮನಕ್ಕೆ ಬರುತ್ತಿವೆ. ಇದರಿಂದಾಗಿ ನಿಜವಾಗಿ ಅಗತ್ಯವಿರುವ ಹೆಣ್ಣುಮಕ್ಕಳಿಗೆ ಇದರಿಂದ ಅನ್ಯಾಯವಾಗುತ್ತಿದೆ. ಸ್ತ್ರೀವಾದಿಗಳು ಇಂತಹ ಕಾನೂನು ದುರುಪಯೋಗ ಮಾಡಿಕೊಳ್ಳುವ ಮಹಿಳೆಯರ ವಿರುದ್ಧವಾಗಿಯೂ ಮಾತನಾಡಬೇಕಾಗಿದೆ. ಇದು ಸ್ತ್ರೀಯರ ಪ್ರಶ್ನೆ ಮಾತ್ರವಲ್ಲ ಇಡೀ ಸಮಾಜದ ಸಂಸ್ಕೃತಿಯ ಪ್ರಶ್ನೆ. ಆದುದರಿಂದ ಇದನ್ನು holistic ಆಗಿಯೇ ನೋಡಬೇಕಾಗಿದೆ. ಸ್ತ್ರೀವಾದದ ವ್ಯಾಪ್ತಿ ವಿಸ್ತೃತವಾಗ ಬೇಕಾಗಿದೆ.