Saturday, 5 March 2016

 ದೇವರ – ಕಣ್ಣು
(ರಜನಿ ನರಹಳ್ಳಿಯವರ ‘ಆತ್ಮ ವೃತ್ತಾಂತ’- ಒಂದು ಅನುಸಂಧಾನ)
ಗಿರಿಜಾಶಾಸ್ತ್ರಿ
ಮುಂಬಯಿ
ತಿರ್ಯಕ್ ಜಂತುಗಳಲ್ಲಿ ಮನುಷ್ಯ ಶ್ರೇಷ್ಠ, ಮನುಷ್ಯರಲ್ಲಿ ಬ್ರಾಹ್ಮಣ ಶ್ರೇಷ್ಠ, ಅವರಲ್ಲಿಯೂ ಪುರುಷ ಶ್ರೇಷ್ಠ ಎನ್ನುವ ಶ್ರೇಷ್ಠತೆಗಳ ಅನೇಕ ಶ್ರೇಣೀಕರಣವೇ, ಲಾಗಾಯ್ತಿನಿಂದಲೂ ನಮ್ಮ ಸಂಸ್ಕøತಿಯನ್ನು ಆಳಿದೆ. ಮನುಷ್ಯ ಕೇಂದ್ರಿತ ಲೋಕದೃಷ್ಟಿ ಇದು.  ಈ ದೃಷ್ಟಿಗೆ, ಇಡೀ ವಿಶ್ವ ಇರುವುದು ತನ್ನ ಪ್ರಯೋಜನಕ್ಕಾಗಿ ಎನ್ನುವ ಒಂದು ಉಪಭೋಗಿ ನೆಲೆಯಿದೆ. ಮನುಷ್ಯ ಒಂದು ಎತ್ತರದ ಕಾಲ್ಪನಿಕ ಸಿಂಹಾಸನದಲ್ಲಿ ತನ್ನನ್ನು ತಾನೇ ಕುಳ್ಳಿರಿಸಿಕೊಂಡು ಇತರರನ್ನು ‘ಕಾಣು’ತ್ತಿದ್ದಾನೆ. ಆದರೆ ಈಚೆಗೆ ಮನುಷ್ಯನ ಈ ಅಹಂಕಾರಕ್ಕೆ ಗದಾಘಾತವನ್ನು ಕೊಡುವ ಅನೇಕ ಲೋಕ ದೃಷ್ಟಿಗಳು ಹÅಟ್ಟಿಕೊಳ್ಳುತ್ತಿವೆ. ಅವುಗಳಲ್ಲಿ  ಅಖಂಡ ಪರಿಸರವನ್ನು ಕೇಂದ್ರವಾಗಿಟ್ಟು ಕೊಂಡು ಹÅಟ್ಟಿಕೊಂಡ ಚಿಂತನೆಯೂ ಒಂದು. ಇದು ಲೋಕವನ್ನು ಕೇಂದ್ರವಾಗಿಟ್ಟುಕೊಂಡು ಮನುಷ್ಯನನ್ನು ನೋಡುವ ದೃಷ್ಟಿಕೋನ. ಹೀಗೆ ಮನುಷ್ಯ ತನ್ನ ಲೋಕವನ್ನು ಹೆÇರಗಿನಿಂದ ನೋಡುವುದಕ್ಕೆ ಒಂದು ಸಮದರ್ಶಿಯಾದ ಅಂತರವಿರಬೇಕಾಗುತ್ತದೆ. ಕಣ್ಣಿಗೆ ಕಾಣುವುದಷ್ಟೇ ಸತ್ಯವಲ್ಲ ಅದರಾಚೆಗೂ ಅನೇಕ ಸತ್ಯಗಳಿವೆ ಎನ್ನುವ ಅಖಂಡವಾದ, ಸಂಶ್ಲೇಷಣಾತ್ಮಕವಾದ ಒಂದು ಕಾಣ್ಕೆ, ಮನುಷ್ಯನಿಗೆ ಅಂತಹ ಅಂತರವನ್ನು ದಯಪಾಲಿಸುತ್ತದೆ. ಆಗ ಮನುಷ್ಯ ಹೆÇರಗಿನಿಂದ ತನ್ನ ಒಳಗನ್ನು ನೋಡಿಕೊಳ್ಳಲು ಸಾಧ್ಯವಾಗುತ್ತದೆ. ಈಗಷ್ಟೇ ಬಿಡುಗಡೆಯಾಗಿರುವ ಪಿ.ಕೆ ಎನ್ನುವ ಹಿಂದಿ ಸಿನೆಮಾ ಇಂತಹ ಸ್ವರೂಪದ್ದು. ಮನುಷ್ಯ ಸಂಸ್ಕøತಿಯನ್ನು ಒಬ್ಬ ಏಲಿಯನ್ ಕಣ್ಣುಗಳಿಂದ ಕಾಣಲಾಗಿದೆ. ಹೀಗಾಗಿ  ಇಲ್ಲಿನ ಬಿರುಕುಗಳು, ವೈರುಧ್ಯಗಳು, ಗೊಂದಲಗಳು ಕಾಮಿಕ್À ಆದ ನೆಲೆಯಲ್ಲಿ ಅನಾವರಣಗೊಳ್ಳುತ್ತವೆ.
   ತಮ್ಮ ಉಪಯೋಗಕ್ಕಾಗಿ ತಲತಲಾಂತರದಿಂದ ಬಳಸಿಕೊಂಡು ಬರುತ್ತಿರುವ ಪ್ರಾಣಿಗಳಿಗೆ ಮನುಷ್ಯರ ಬಗೆಗೆ ಇರುವ ಭಾವನೆಗಳೇನು? ಸಸ್ಯಜಗತ್ತಿಗೆ, ನರಮಂಡಲ ಭಾವನೆಗಳಿಲ್ಲದಿದ್ದರೂ ಅವುಗಳನ್ನು ವಿನಾಕಾರಣ ಕಡಿಯುವ ಹಕ್ಕು ಇದೆಯೇ? (ಪ್ರತಿನಿತ್ಯವೂ ತಪ್ಪದೇ ಮನೆಯಲ್ಲಿ ‘ವೈಶ್ವೇದೇವ’ (ಹೆÇೀಮ)ವನ್ನು ಮಾಡಬೇಕು ಎನ್ನುವ ನಂಬಿಕೆಯ ಹಿಂದೆ ಒಂದು ಉದಾತ್ತವಾದ ಆಶÀಯವಿದೆ. ಅದೆಂದರೆ, ಆಹಾರ ತಯಾರಿಸುವಾಗ ನಾವು, ಕಡಿದು ಕತ್ತರಿಸುವ, ಕೊಚ್ಚುವ ಜಜ್ಜುವ ರುಬ್ಬುವ ಅನೇಕ ರೀತಿಯ ಹಿಂಸಾತ್ಮಕ ಕೆಲಸಗಳಲ್ಲಿ ತೊಡಗುವುದರ ಮೂಲಕ  ಸಸ್ಯಗಳಿಗೆ ಹಾಗೂ ಕ್ರಿಮಿ ಕೀಟಗಳಿಗೆ ನೋವನ್ನುಂಟು ಮಾಡಿರುತ್ತೇವೆ. ಆದ್ದರಿಂದ ಅದಕ್ಕೆ ಪ್ರಾಯಶ್ಚಿತ್ತರೂಪವಾಗಿ ‘ವೈಶ್ವದೇವ’ವನ್ನು ಮಾಡಬೇಕು). ಹೀಗೆ ಒಂದನ್ನು ಕೊಂದು ಇನ್ನೊಂದು ಬದುಕುವುದೇ ಪ್ರಕೃತಿಯ ನಿಯಮವಾಗಿರುವಾಗ ಸಾತ್ವಿಕ ಮತ್ತು ತಾಮಸಗಳೆಂಬ ಭೇದವನ್ನು ಅರೋಪಿಸಿ ಅವುಗಳ ಬಗ್ಗೆ ಉಚ್ಛ ಮತ್ತು ನೀಚ ಭಾವನೆಗಳನ್ನು ತಳೆಯುವುದು ಸರಿಯೇ?  ಎಂಬಂತಹ ಅನೇಕ ಮೂಲಭೂತ ಪ್ರಶ್ನೆಗಳನ್ನು ಮನುಷ್ಯರಾಗಿ ನಾವು ಕೇಳಿಕೊಳ್ಳುವುದೇ ಇಲ್ಲ. ಈ ನೆಲೆಯಲ್ಲಿ ‘ಮಾನವತಾವಾದ’ ಎನ್ನುವ ಪರಿಕಲ್ಪನೆ ಕೂಡ ಮನುಷ್ಯ ಪರಿಧಿಯನ್ನು ದಾಟದ ತನ್ನ ಮಿತಿಯನ್ನೇ ವ್ಯಕ್ತಪಡಿಸುತ್ತದೇನೋ.
    ಮೇಲಿನ ಎಲ್ಲಾ ಪ್ರಶ್ನೆಗಳನ್ನು ಮಹತ್ವವೆಂದು ಪರಿಗಣಿಸುತ್ತದೆ ಎನ್ನುವ ಕಾರಣಕ್ಕಾಗಿ ರಜನಿ ನರಹಳ್ಳಿಯವರ ‘ಆತ್ಮವೃತ್ತಾಂತ’ ಕೃತಿ ಮುಖ್ಯವಾಗುತ್ತದೆ. ಇದು ಲಿಯೋ ಎನ್ನುವ ಒಂದು ನಾಯಿಯ ಸುತ್ತ ಹೆಣೆದ ಕತೆ. ಅದೇ ಇದರ ನಾಯಕ, ನಿರೂಪಕ ಕೂಡ.  ಗೋಕುಲಾಷ್ಠಮಿಯ ಹಬ್ಬದ ದಿನ ಬೀದಿನಾಯಿಗಳಿಂದ ರಕ್ಷಣೆ ಪಡೆಯಲೆಂದು  ಒಡತಿಯ ಮನೆಗೆ ಒಂದು ನಾಯಿ ನುಗ್ಗಿಬಿಡುತ್ತದೆ. ಹೀಗೆ ನುಗ್ಗಿದ ಅದನ್ನು ಮಕ್ಕಳ ಹಟಕ್ಕೆ ಕಟ್ಟುಬಿದ್ದು, ಮನಸ್ಸಿಲ್ಲದ ಮನಸ್ಸಿನಿಂದ ಹಿರಿಯರು ಸಾಕಲು ನಿರ್ಧರಿಸುತ್ತಾರೆ. ಪ್ರಾರಂಭದಲ್ಲಿ ಅದಕ್ಕೊಂದು ಹೆಸರಿಟ್ಟು ಸಂಭ್ರಮಿಸುವ ಮಕ್ಕಳಿಗೆ ನಾಯಿಯ ಜೊತೆಗೆ ಸಾಧ್ಯವಾಗುವ ತಾದಾತ್ಮ್ಯ ಹಿರಿಯರಿಗೆ ಸಾಧ್ಯವಾಗುವುದಿಲ್ಲ. ಕ್ರಮೇಣ ಅದು ಎಲ್ಲರ ಮನಸ್ಸನ್ನು ಗೆದ್ದು ಇಡೀ ಕುಟುಂಬದವರ ಪೂರ್ವಗ್ರಹಿಕೆಗಳನ್ನು ಬದಲಾಯಿಸಿ, ಸಾಯುವ ಸಾಹಸವೇ ರಜನಿಯವರ ‘ಆತ್ಮವೃತ್ತಾಂತ’ದ ಕತೆ.  
      ಲಿಯೋ ಕೂಡ ಪಿಕೆ ಸಿನೆಮಾದಲ್ಲಿ ಏಲಿಯನ್ ಮಾಡುವ ಕೆಲಸವನ್ನೇ ಮಾಡುತ್ತದೆ. ಕೇವಲ ಏಲಿಯನ್ ಆದರೆ ಒಳಗಿನದರ ಬಗ್ಗೆ ಬೆರಗು, ತಿರಸ್ಕಾರ ಎಲ್ಲವೂ ಇರುತ್ತದೆ. ಆದರೆ ಇಲ್ಲಿ ಲಿಯೋ ಹೆÇರಗಿನಿಂದ ಪ್ರವೇಶ ಮಾಡಿದರೂ ಆ ಕುಟುಂಬದ ಭಾಗವಾಗಿ ಕ್ರಮೇಣ ಒಂದು ರೀತಿಯ ತಾದಾತ್ಮ್ಯವನ್ನು ಬೆಳೆಸಿಕೊಂಡುಬಿಡುತ್ತದೆ. ಈ ತಾದಾತ್ಮ್ಯ ಒಡತಿ ಹಾಗೂ ಲಿಯೋ ನಡುವೆ ಸಮಾನವಾದುದು. ಆದುದರಿಂದ ಇದು ಕೇವಲ ಲಿಯೋನ ಆತ್ಮವೃತ್ತಾಂತವಲ್ಲ ಬದಲಾಗಿ ಅದರ ಒಡತಿಯದೂ ಹೌದು. ಒಡತಿಗೆ ಬಾಲ್ಯದಲ್ಲಿ ತಾಯಿಯ ಪ್ರೇಮದಿಂದ ವಂಚಿತವಾದ ಕಹಿ ಅನುಭವಗಳು ಲಿಯೋನನ್ನು ಮಗನಾಗಿ ಕಾಣುವುದರ ಮೂಲಕ ಹೆÇರಚಾಚನ್ನು ಪಡೆದುಕೊಳ್ಳುತ್ತವೆ. ಅದÀನ್ನು ಉಳಿಸಿಕೊಳ್ಳಲು ಒಡತಿ ನಡೆಸುವ ಹೆÇೀರಾಟದಲ್ಲಿ ಇದನ್ನು ಮನಗಾಣಬಹÅದು. ಆದುದರಿಂದಲೇ ಕ್ಯಾನ್ಸರ್ ರೋಗದಿಂದ ನರಳುತ್ತಿರುವ ಅದು, ತನ್ನನ್ನು ದಯಾಮರಣಕ್ಕೆ ಒಪ್ಪಿಸಬೇಕೇ ಬೇಡವೇ ಎನ್ನುವ  ಯಾತನೆಯಿಂದ ಒಡತಿಂiÀನ್ನು ಪಾರುಮಾಡುತ್ತದೆ.  ಅವಳ ಕಾಲಬಳಿ ಕುಸಿದು ಬೀಳುವುದರ ಮೂಲಕ ಸಹಜ ಸಾವನ್ನು ಪಡೆಯುತ್ತದೆ. ಸರಳವಾದ ಧಾಟಿಯಲ್ಲಿ ಈ ಕೃತಿಯ ತುಂಬ ಹರಡಿರುವುದು ನೋವು. ಅದು ಕೇವಲ ತಾಯಿ ಮತ್ತು ನಾಯಿಯ ನೋವಲ್ಲ. ಅದು ಮನುಷ್ಯ ಸಮಾಜ ಹೆಣ್ಣಿನ ಮೇಲೆ, ಪರಿಸರದ ಮೇಲೆ ಎಸಗುತ್ತಿರುವ ಹಿಂಸೆಯ ಮೂಲವಾದ ನೋವೂ ಹೌದು.
      ಲಿಯೋ ಕ್ರಮೇಣ ಒಳಗಿನವನೇ ಆಗಿಬಿಟ್ಟು  ಒಳಗೆ ನಿಂತ ಮನುಷ್ಯರನ್ನು ಅವನ/ಳ ಪÀರಿಧಿಯಾಚೆ ಎಳೆದುಕೊಂಡು ಬಂದು ಅಖಂಡವಾದ, ಸಂಶ್ಲೇಷಣಾತ್ಮಕವಾದ ಕಾಣ್ಕೆಯನ್ನು ದಯಪಾಲಿಸುತ್ತಾನೆ. ಇಲ್ಲಿ ಘನವಾದ ಅಧ್ಯಾತ್ಮಿಕ ಸತ್ಯವೊಂದು  ನಾಯಿಯ ಕಣ್ಣಲ್ಲಿ ಬಹಳ ಸರಳವಾಗಿ, ‘ಪರ’ದ ಸತ್ಯವಾಗದೇ ಇಹದ ಸತ್ಯವಾಗಿ ಮೈಪqದಿದೆ. ಅದು ಸಾರುವುದು ಅವಿಚ್ಛಿನ್ನವಾದ ಪ್ರೇಮವನ್ನು. ಅದೇ ಅಂತಿಮ ಸತ್ಯ ಎನ್ನುವುದನ್ನು. ಈ ಅವಿಚ್ಛಿನ್ನ ಪ್ರೇಮದ ಸಾಕ್ಷಾತ್ಕಾರವಾಗಲು ಮೊದಲು ತಾಯಿಯಾಗವುದು ಆವಶ್ಯಕ. ಈ ಕೃತಿಯಲ್ಲಿ ಗ್ರೇಸಿ, ರೂಬಿ, ಜೂಲಿ ಮುಂತಾದ ನಾಯಿಗಳಲ್ಲದೇ ಅವರ ಒಡತಿಯರಾದ ಅನೇಕ ತಾಯಂದಿರು ಬರುತ್ತಾರೆ. ಅಂತಹವರ ಬಗ್ಗೆ ಸಮಾಜಕ್ಕೆ ಇರುವ ಉಪೇಕ್ಷೆ, ಹಿಂಸೆಯ ಸ್ವರೂಪ ಕೂಡ ಇಲ್ಲಿ ಅನಾವರಣಗೊಳ್ಳುವುದರ ಮೂಲಕ ಮನುಷ್ಯ ಲೋಕದ ಮಿತಿಗಳೂ ದಾಖಲಾಗುತ್ತವೆ. ಹಾಗೆ ನೋಡಿದರೆ ಇದು ತಾಯಂದಿರ ಕಥೆ. ಇಲ್ಲಿ ಬರುವ ಫಾದರ್ ಕೂಡ ಒಬ್ಬ ತಾಯಿಯೇ. ನಮ್ಮ  ಇತಿಹಾಸದಲ್ಲಿ ಬುದ್ಧ, ಜೀಸಸ್ ನಂತಹ ತಾಯಂದಿರು ಆಗಿ ಹೆÇೀಗಿದ್ದಾರೆ. ಈ ತಾಯಿ ತನ್ನ ಮಕ್ಕಳನ್ನು ಮಾತ್ರ ಮಡಿಲೊಳಗಿಟ್ಟುಕೊಂಡು ಹೆರವರ ಮಕ್ಕಳನ್ನು ದೂರ ತಳ್ಳುವಳಲ್ಲ. ಇವಳು ಅಖಂಡ ಜೀವಜಾಲವನ್ನು ಏಕತ್ರವಾಗಿ ತಬ್ಬಿಕೊಳ್ಳುವ ತಾಯಿ. ಕೇವಲ ಹೆಣ್ಣಾಗುವುದರಿಂದ ಮಾತ್ರ ತಾಯಿಯಾಗಲು ಸಾಧ್ಯವಿಲ್ಲ. ತಾಯಿ ಎನ್ನುವುದು ಒಂದು ಭಾವಸ್ಥಿತಿ. ಅದನ್ನು ವಿಶಾಲ ದೃಷ್ಟಿಕೋನದಿಂದ ಸಿದ್ಧಿಸಿಕೊಳ್ಳಬೇಕೇ ಹೆÇರತು ಅದು ತಾನಾಗಿಯೇ ಇರುವುದಲ್ಲ. ಇದಕ್ಕೆ, ಗಂಡುಗರ್ವದ ಲಿಯೋನ ಒಡೆಯ ಹಾಗೂ ಒಡೆಯನ ತಾಯಿ ಇಬ್ಬರೂ  ಕೂಡ ಕೊನೆಕೊನೆಗೆ ತಮ್ಮ ಗರ್ವವನ್ನು ಕಳೆದುಕೊಂಡು ತಾಯಿಯರಾಗಿಬಿಡುವುದೇ ಸಾಕ್ಷಿ. ಇಂತಹ ಸ್ಥಿತಿಯಲ್ಲಿ ಜಾತಿ, ಜನಾಂಗ, ಸ್ತ್ರೀ, ಪುರುಷ, ದೇಶ, ಸೀಮೆ ಸರಹದ್ದು ಮುಂತಾದ ಎಲ್ಲಾ ಗೆರೆಗಳೂ ಅಳಿಸಿ ಹೆÇೀಗಿ ಕೇವಲ ಪ್ರೇಮ ಮಾತ್ರ ಸ್ಥಾಯಿಯಾಗಿ ಉಳಿದುಬಿಡುತ್ತದೆ. ರಜನಿ ನರಹಳ್ಳಿಯವರ ‘ಆತ್ಮವೃತ್ತಾಂv’À ಅಂತಹ ‘ನೈಸರ್ಗಿಕ ಸಮತಾವಾz’Àದ (equiಣಥಿ)ಮೇಲೆ  ಬೆಳಕು ಚೆಲ್ಲುತ್ತದೆ ಎನ್ನುವುದೇ ಅದರ ವೈಶಿಷ್ಟ್ಯ.  ಅನೇಕ ವೈಷಮ್ಯUಳಲ್ಲಿ ಹೆÇತ್ತಿ ಉರಿಯುತ್ತಿರುವ ಇಂದಿನ ಸಮಾಜಕ್ಕೆ ಇಂತಹ ಪ್ರೇಮ ಸಾಕ್ಷಾತ್ಕಾರದ ಅವಶ್ಯಕತೆ ಇದೆ. ಮಾನವತಾವಾದವೇ ಸಾಧ್ಯವಿಲ್ಲದಿರುವ ಈ ಹೆÇತ್ತಿನಲ್ಲಿ ಇನ್ನು ನೈಸರ್ಗಿಕ ಸಮತಾವಾದ ಬಗ್ಗೆ ಮಾತನಾಡುವುದು ಬಹಳ ಆದರ್ಶವೆನಿಸಬಹÅದು. ಆದರೆ ಪರಿಸರವನ್ನು ಕೇಂದ್ರವನ್ನಾಗಿಟ್ಟುಕೊಂಡು ಇಂದು ಅನೇಕ ಚಳವಳಿಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಮನುಷ್ಯ ಸಾಗಬೇಕಾಗಿರುವ ದೂರ ಬಹಳವಿದೆ, ಎಂದು ಎನ್ನಿಸಿದರೂ ಅದರ ಮಹತ್ವವನ್ನು ಅಲ್ಲಗಳೆಯುವ ಹಾಗಿಲ್ಲ.
   ನಾಯಿ, ನಿಷ್ಠೆಗೆ ಎಷ್ಟೇ ಹೆಸರಾಗಿದ್ದರೂ, ಮೇಲು ಜಾತಿಗಳಲ್ಲಿ ಅದು ಅಶೌಚವೇ. ಅವರಿಗೆ ಅದು ಅಸ್ಪøಶ್ಯ.  ಆದರೆ ಅಂತಹ ಒಂದು ಕೌಟುಂಬಿಕ ಪರಿಸರದಲ್ಲಿ ನಾಯಿಯ ಮೂಲಕ ಅಖಂಡ ಪ್ರೇಮದ ಸತ್ಯವನ್ನು ಸಾಕಾರಗೊಳಿಸಿರುವುದು, ಮನುಷ್ಯ ಕೇಂದ್ರಿತ ಚಿಂತನೆಗಳ ಎಲ್ಲಾ ಭ್ರಮೆಗಳಿಗೆ ಗದಾಘಾತವನ್ನು ಕೊಟ್ಟಿರುವುದೂ ಈ ಕೃತಿಯ ಹೆಚ್ಚುಗಾರಿಕೆ.
    ನಾಯಿಯೇ ನಿರೂಪಕನಾಗಿರುವುದರಿಂದ ಅನೇಕ ಕಡೆ ಆಭಾಸಗಳೂ ಉಂಟಾಗಿವೆ ಎಂಬುದು ನಿಜ. ಉದಾಹರಣೆಗೆ, ನಾಯಿ, ಸಾಹಿತ್ಯದ ಗಂಭೀರ  ಚರ್ಚೆಗಳ ಬಗ್ಗೆ ಇಲ್ಲವೇ ವೇದಾಂತ, ಭಗವದ್ಗೀತೆಯ ಬಗ್ಗೆ ಮಾತನಾಡುವುದು, ತನ್ನ ಅನುಪಸ್ಥಿತಿ ಯಲ್ಲಿ ನಡೆದ ಸಂಗತಿ, ಸಂಭಾಷಣೆಗೆಳನ್ನು ದಾಖಲಿಸುವುದು ಮುತಾದವುಗಳು ಓದುಗರಿಗೆ ಹೆಚ್ಚು ಛಿoಟಿviಟಿಛಿiಟಿg ಎನ್ನಿಸುವುದಿಲ್ಲ. ಆದರೆ ನಾಯಿಯ ಕಣ್ಣನ್ನು ‘ದೇವರ ಕಣ್ಣಾಗಿ’ (ಕುವೆಂಪು) ಗ್ರಹಿಸಿದರೆ ಮಾತ್ರ ಇಂತಹ ಕಣ್ಣ ಮುಂದಿನ ಪರದೆÉಗಳು ಬಿದ್ದುಹೆÇೀಗುತ್ತವೆ ಎನ್ನುವುದು ನಿಜ.

Sunday, 21 February 2016

ನೊಂದ ಕನಸು
“ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ”
ಆಲಯಗಳೆಲ್ಲ ಬಿದ್ದು ಹೋದವು
ಅದರೊಳಗೆ ಸಿಕ್ಕಿದ ‘ಹೆಣ್ಣು’ ‘ಗಂಡು’ ಗಳು ಜಜ್ಜಿಹೋದವು
ಗಂಟೆ ಬಾರಿಸುತ್ತಲೇ ಪೂಜಾರಿ
ಧರೆಗುರುಳಿದ
ಮಸೀದಿಯ ಮುಲ್ಲನೂ
ಇಗರ್ಜಿಯ ಪೋಪನೂ

ಹೊರಗೆ ಕಾಯುವ ಹೊಲೆಮಾದಿಗರೂ ನೆಲಸಮವಾದರು.
ಧನಿಕ ಮಾಲಿಕ ಎದೆಯೊಡೆದು ಸತ್ತ
ಸಾಲುಗಟ್ಟಿದ ಭಿಕಾರಿಗಳು ಕುಳಿತಲ್ಲೇ ಕುಸಿದರು.
ಎಲ್ಲ ಹೆಣಗಳನ್ನೂ ಈಗ ಸಾಗಿಸಬೇಕಾಗಿದೆ ಸ್ಮಶಾನಕ್ಕೆ
ಹೆಗಲು ಕೊಡುವೆಯೇನೇ ಅಕ್ಕಾ...
ರಕ್ತಸಿಕ್ತ ಬಯಲ
ತೊಳೆಯಬೇಕಾಗಿದೆ
ಕೈ ನೀಡುವೆಯೇನೇ..
ಎಲ್ಲಾ ಸುಟ್ಟುರುಹಿದ ನೆಲದಲ್ಲಿ
ಹೊಸಬೀಜ ಬಿತ್ತಬೇಕಾಗಿದೆ
ನಿನ್ನ ಚೆನ್ನಮಲ್ಲಿಕಾರ್ಜುನನ
ಕಳುಹಿಸುವೆಯೇನೇ
ನನ್ನ ಸಂಗಾತಕ್ಕೇ..
ಗಿರಿಜಾಶಾಸ್ತ್ರಿ

Monday, 8 February 2016

31. ಚರಾಚರ
ಮೊದಲ ದಿನ ಮೌನದಲಿ ಕಾಲಿಟ್ಟಾಗ ನಾನು
ಹೊಳೆಯುತ್ತಿದ್ದೆ ಲಕ ಲಕ ನೀನೂ
ಹಬ್ಬದ ಹಸಿರು ತೋರಣದಂತೆ
ಮೈ ಕೈ ತುಂಬಿಕೊಂಡು ನನ್ನಂತೆ
ದೇವರ ಮುಂದೆ ಹಚ್ಚಿದ ತುಪ್ಪದ ಹಣತೆ
ಸಮಾಧಾನ ಮಿನುಗುತ್ತಿತ್ತು ಮೊಗ್ಗಿನಂತೆ

ಭಾವದ ಜಾತ್ರೆ ಜರಗುತ್ತಿತ್ತು ‘ಜೀವದೊಳಗೆ’
ಅಚ್ಚರಿ ಭಯ ನಡುಕ ಸಂಭ್ರಮದೊಳಗೆ
‘ವೀಣೆ’ ಮಿಡಿಯುತ್ತಿತ್ತು ‘ನೀರೊಳಗೆ’
ಕಡೆಗಣ್ಣು ಕುಡಿಯಾಗಿತ್ತು ಕತ್ತಲ ಕೋಣೆಯೊಳಗೆ

ಹೊಸಿಲೊಳಗೆ ಇಟ್ಟ ಕಾಲು ಗಟ್ಟಿ ಊರುತ್ತಿತ್ತು
ಮೂಲೆ ಮೊಡಕು ಹಸಿ ವಾಸನೆಗಳೆಲ್ಲಾ
ಯಥಾ ಯಥ ಅಂಟಿಕೊಳ್ಳುತ್ತಿತ್ತು
ಜೀವದ ನಂಟಿಗೆ ಕಥಾ ಕಥಿತ
ಭಾವದ ಜೋಕಾಲಿ ಆಡುತ್ತಿತ್ತು
ಹಕ್ಕಿ ಹಾಡು ಹಸೆ ಚಂದಿರ ಕೈಸಾಲೆಗೆ ರಂಗೇರಿತ್ತು.

ಶ್ರಾವಣಗಳೆಷ್ಟೋ ಹರಿದು ಹೋದವು ನಿನ್ನ ಅಂಗಳದಲ್ಲಿ
ಕೊಚ್ಚಿ ಹೋಯಿತು ಕಾಲ ವಸಂತ ಮೇಳಗಳಲ್ಲಿ

ಈಗ ಗೂಡುವೋಗುತ್ತಿದ್ದೇನೆ
ಒಕ್ಕಲೆದ್ದಿದ್ದೇನೆ
ಹೆರವರ ಹರಕೆ ನನ್ನ ಮೇಲೆ
ಇನ್ನೆಷ್ಟು ದಿನ ಬಾಕಿ ಸಂತೆ
ನನ್ನಂತಲ್ಲ ನೀನು ನಿಂತಿದ್ದೀಯೇ ಗಟ್ಟಿ ನೆಲದ ಮೇಲೆ
ಗರಬಡಿದಂತೆ

ಭಾವಕೋಶದೊಳಗೆ ತತ್ತಿ ಇಟ್ಟೆ
ಜೀವಕೋಶÀದೊಳಗೆ ಗೆಡ್ಡೆಯಾಗಿ ಬೆಳೆದೆ
ಕಿಮೂ ಹತ್ತುವ ಮುನ್ನ ಕತ್ತರಿಸಬೇಕಿದೆ
ಭಾವ ಅರ್ಥಗಳು ಹರಿಯಬೇಕಿದೆ

ಮೂಳೆ ಚಕ್ಕಳ  ನಡುಗು ನಡು
ಎಲ್ಲಿಯೂ ಸಲ್ಲದ ಜಂಗಮ ನಾನು
ಕಲ್ಲು ಮರಳು ಸುಣ್ಣ ಮಿಶ್ರಣ
ಎಲ್ಲಿಯೂ ಸಲ್ಲುವ ಸ್ಥಾವರ ನೀನು
                         23/7/2013

Sunday, 7 February 2016

ಬೌದ್ಧ ಸಂಘದವರ ನೋಟೀಸ್ ಬೋರ್ಡಿನೊಳಗೆ ರೋಹಿತ್ ವೇಮುಲ ರಾರಾಜಿಸುತ್ತಿದ್ದಾನೆ.
ಗುಂಗುರು ಕೂದಲಿನ ಕನಸು ಕಣ್ಣಿನ ಹುಡುಗ
ಶ್ರದ್ಧಾಂಜಲಿಯ ಚೌಕಟ್ಟಿನೊಳಗೆ ಕಂಗೊಳಿಸುತ್ತಿದ್ದಾನೆ.
ಹನ್ನೆರಡನೆ ಇಯತ್ತೆ ಪರೀಕ್ಷೆಗೆ ಭರದಿಂದ ಸಿದ್ಧತೆ ನಡೆಸುತ್ತಿರುವ ಮಕ್ಕಳು ಗುಂಪು ಗುಂಪಾಗಿ ಹೊರಡುತ್ತಿದ್ದಾರೆ.
ಮಸ್ತಿ ಖುಷಿ ತಮಾಶೆ ಆಕಾಶವೇ ಸೀಮೆಯೆನ್ನುವಂತೆ.
ಪ್ರತಿಯೊಬ್ಬರ ಕಣ್ಣುಗಳೂ ಥೇಟ್ ವೇಮುಲನ ಕಣ್ಣುಗಳಂತೇ ಹೊಳೆಯುತ್ತಿವೆ.

ಮಗನ ಇಂಜನಿಯರಿಂಗ್ ಕಾಲೇಜಿನಲ್ಲಿ ಇಂದು ಘಟಿಕೋತ್ಸವದ ಸಂಭ್ರಮ.
ಕಾರನ್ನು ಚಲಾಯಿಸಿಕೊಂಡು ಒಬ್ಬನೇ ಹೋಗಿದ್ದಾನೆ.
ಆದರೆ ಭಯವಾಗುತ್ತಿದೆ ನನಗೆ.
ಅವನು ಮನೆಗೆ ಬರುವವರೆಗೆ ಬಾಲಸುಟ್ಟ ಬೆಕ್ಕಿನಂತೆ ಒದ್ದಾಡುತ್ತಿದ್ದೇನೆ.
ವೇಮುಲನ ತಾಯಿಯ ಕಣ್ಣುಗಳಿಂದ ಉದುರಿದ ಹನಿಗಳು, ನಿಟ್ಟುಸಿರೂ
ನನ್ನೊಡಲಿಗೆ ಕೊಳ್ಳಿಯನ್ನಿಕ್ಕಿವೆ.
ನನ್ನ ಮಗನನ್ನು ಯಾರಾದರೂ ಕಾಪಾಡಿ ಪ್ಲೀಸ್......
        ಕೆ. ಸತ್ಯನಾರಾಯಣ ಅವರ ಮುಸ್ಸಂಜೆಯ ಕಥಾ ಪ್ರಸಂಗ
ಕೆ. ಸತ್ಯನಾರಾಯಣ ಅವರ 'ಒತ್ತಾಸೆ' ವಿಜಯವಾಣಿಯಲ್ಲಿ ಬಂದ ಅಂಕಣ ಬರಹಗಳು. ಇವುಗಳಲ್ಲಿ ಹೆಚ್ಚಿನವುಗಳನ್ನು ಓದುಗರು ಓದಿರುತ್ತಾರೆ. ಆದರೆ ಅದು ಒಂದು ಸಂಕಲನವಾಗಿ ಹೊರಬಂದಾಗ ಒಂದೇ ಕಟ್ಟಿನಲ್ಲಿರುವ ತರತರದ ಬಣ್ಣ ಅಕಾರಗಳ, ವೈವಿಧ್ಯಮಯ ಸುವಾಸನೆಗಳುಳ್ಳ ಹೂಗುಚ್ಛದಂತೆ ಮೃದುವಾಗಿ ನಮ್ಮ ಕೈ ಸೇರುತ್ತದೆ. ಲೇಖಕರ ಒಟ್ಟು ಲೋಕದೃಷ್ಟಿ ಮಾತ್ರವಲ್ಲದೇ ಅವರ ಜ್ಞಾನದ ಆಳ ಅಗಲಗಳ ಪರಿಚಯವೂ ಆಗುತ್ತದೆ.
ಅನಾರೋಗ್ಯದಿಂದ ಹಾಸಿಗೆಯಲ್ಲಿ ಮಲಗಿರುವ ಪ್ರಹ್ಲಾದ್ ದಿವಾಣಜಿಯವರು ಈ ಸಂಕಲನವನ್ನು ಇನ್ನಿಲ್ಲದೆಂತೆ ಕೊಂಡಾಡಿ ಫೋನ್ ಮಾಡಿದಾಗ, ಕಪಾಟಿನಲ್ಲಿ ಜೋಪಾನವಾಗಿಟ್ಟಿದ್ದ ಪುಸ್ತಕವನ್ನು ಕೈಗೆ ತೆಗೆದುಕೊಳ್ಳಬೇಕಾಯಿತು. ಏಕೆಂದರೆ ಒಮ್ಮೆಯೂ ಓದದ ಪುಸ್ತಕಗಳೇ ಮಂಚದ ಮೇಲೆ ಹರಡಿ ಕುಳಿತಿದ್ದವು. ಹಾಗಾಗಿ 'ಒತ್ತಾಸೆ' ಗೆ ಎರಡನೇ ಓದನ್ನು ಕೊಡುವುದಕ್ಕೆ ಸಾಧ್ಯವಾಗಿರಲಿಲ್ಲ. ಒಂದು ಪುಸ್ತಕ, ಹಾಸಿಗೆಯಲ್ಲಿರುವ ಮನುಷ್ಯನನ್ನು ಮಲಗಿಕೊಂಡಾದರೂ ಓದಲೇಬೇಕೆಂದು ಒತ್ತಾಯಿಸುವುದೆಂದರೆ ಅದು ಪುಸ್ತಕದ ಭಾಗ್ಯ.
'ಒತ್ತಾಸೆ'ಯಲ್ಲಿ ಅನೇಕ ರೀತಿಯ ಬರಹಗಳಿವೆ. ಪ್ರಬಂಧಗಳು, ಲಹರಿಯಂತಹ ಬರಹಗಳು, ಗಂಭೀರ ಸಾಹಿತ್ಯದ ವಿಮರ್ಶೆ, ವ್ಯಕ್ತಿ ಚಿತ್ರಗಳು, ಪುಸ್ತಕ ಪರಿಚಯ, ಮೇಲುನೋಟಕ್ಕೆ ಲಘು ಬರಹದಂತೆ ಕಾಣಿಸಿದರೂ ನಮ್ಮನ್ನು ಚಿಂತನೆಗೆ ಹಚ್ಚುವ ಅನೇಕ ಬರಹಗಳು- ಹೀಗೆ ಒಟ್ಟಾಗಿ ಒಬ್ಬ 'ಲೇಖಕ'ನನ್ನು ಹಿಡಿಯಲು ಇವು ಸಹಾಯಮಾಡುತ್ತವೆ.
ಇದರೊಳಗೆ ನನ್ನ ಕಣ್ಣಿಂದ ತಪ್ಪಿಸಿಕೊಂಡಿದ್ದ ಒಂದು ಪ್ರಬಂಧ 'ಮನುಷ್ಯನ ಕದಪಿಗೆ ಸಂಜೆಯ ರಾಗರತಿ' ಸೆಳೆಯಿತು. ಹಿಂದಿಯ 'ಖಾಮೋಶಿ'ಚಿತ್ರದ ಕಿಶೋರ್ ಹಾಡಿರುವ ಒಂದು ಹಾಡು 'ವೋ ಶಾಮ್ ಕುಚ್ ಅಜೀಬ್ ಥೀ' ಹಿನ್ನೆಲೆಯಲ್ಲಿಟ್ಟುಕೊಂಡ ಸಂಜೆಯ ಜಿಜ್ಞಾಸೆ, ಆ ಹಾಡಿನಂತೆಯೇ ನಮ್ಮನ್ನು ಬಹಳ ಗಾಢವಾಗಿ ತಟ್ಟುತ್ತದೆ. ಮೌನದೊಳಗಿರುವ ಹಾಡನ್ನೂ, ಹಾಡಿನೊಳಗಿರುವ ಮೌನವನ್ನೂ ಅನಾವರಣ ಮಾಡುವುದಕ್ಕೆ ಕೇವಲ ಸಂಗೀತ ಮಾಧ್ಯಮಕ್ಕೆ ಮಾತ್ರ ಸಾಧ್ಯ ಎನಿಸುತ್ತದೆ. 'poetry is the finest form of art' ಎಂದು ಒಬ್ಬ ಪಾಶ್ಚಾತ್ಯ ವಿಮರ್ಶಕ ಹೇಳುತ್ತಾನೆ. ಆದರೆ 'music is the finest form of art' ಎಂದು ನನಗೆ ಅನ್ನಿಸುತ್ತದೆ. ಅತ್ಯಂತ ಸೂಕ್ಷ್ಮಾತಿಸೂಕ್ಷ್ಮ ಭಾವನೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಸಂಗೀತದಿಂದ ಮಾತ್ರ ಸಾಧ್ಯ. ಸಂಜೆಯನ್ನು transcend ಮಾಡುವ ರಾಗಗಳಿಂದ ಹಿಡಿದು, ಬೇಂದ್ರೆ ಅಡಿಗರು ಕಂಡ ಸಂಜೆ, ವಿಬಿನ್ನ ನಗರಗಳಲ್ಲಿ ಜನಸಾಮಾನ್ಯರ ಮಗ್ಗುಲಲ್ಲಿ ಹರಡಿಕೊಳ್ಳುವ ಸಂಜೆ, ಸೌಂದರ್ಯಾನುಭೂತಿಯಾಗಿ ಸಂಜೆ ಹೀಗೆ ಸಂಜೆಯ ಒಂದು ಅಖಂಡ ಸ್ವರೂಪವನ್ನು ಯಮನ್ ರಾಗದ' ವೋ ಶಾಮ್' ತನ್ನ ಅನೇಕ ಏರಿಳಿತಗಳಲ್ಲಿ, ವಿಲಂಬ ವಿಸ್ತಾರ ಗತಿಯಲ್ಲಿ ಹಿಡಿದಿಡುತ್ತದೆ. ಕನ್ನಡದಲ್ಲಿರುವ 'ಮತ್ತದೇ ಬೇಸರ' ಎನ್ನುವ ಹಾಡು ನೆನಪಾಗುತ್ತದೆ. ಆದರೆ ಆ ಹಾಡು 'ನೀನಿಲ್ಲದೇ, ಮಾತಿಲ್ಲದೇ' ಎಂದು ಎಲ್ಲವನ್ನೂ ವಾಚ್ಯಗೊಳಿಸಿಬಿಡುವುದರಿಂದ ಮತ್ತು ಕೇವಲ ಹೆಣ್ಣುಗಂಡಿನ ಪ್ರೇಮಕ್ಕೆ ಮಾತ್ರ ತೆಕ್ಕೆ ಹಾಕಿಕೊಳ್ಳುವುದರಿಂಡ ಅದು 'ವೋ ಶಾಮ್' ನಷ್ಟು ಪರಿಣಾಮಕಾರಿಯಾಗಿಲ್ಲ ಎನಿಸಿಬಿಡುತ್ತದೆ.
ಸಂಗೀತವನ್ನು ಕೇಳುತ್ತಾ ಕೇಳುತ್ತಾ ಒಳಗಿನ ಕಸವೆಲ್ಲ ಕಣ್ಣೀರಿನ ಮೂಲಕ ಹೊರ ಹರಿದು, ಒಂದು ಶುದ್ಧವಾದ ಅನುಭೂತಿ ಪ್ರಾಪ್ತವಾಗುತ್ತದೆ. ಈ ಅನುಭೂತಿಯೊಳಗೆ ಅಖಂಡ ಜೀವ ಜಾಲದ ಬಗೆಗೆ ಇನ್ನಿಲ್ಲದಂತೆ ಪ್ರೇಮ ಉಕ್ಕುತ್ತದೆ. ಒಂದು ultimate ಅದದ್ದನ್ನು ಮುಟ್ಟಿದುದರ ಅನುಭವವಾಗುತ್ತದೆ. ಈ ಅನುಭವವನ್ನು ಯಾವ ಹೆಸರಿನಿಂದ ಕರೆದರೆ ತಾನೇ ಏನು?
'ಮನುಷ್ಯನ ಕದಪಿಗೆ ಸಂಜೆಯ ರಾಗರತಿ' ನಮ್ಮನ್ನು ಆ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. 'ಖಾಮೋಶಿ'ಯ ವರಾತಕ್ಕೆ ಪಕ್ಕಾಗಿರುವ ಐವತ್ತರ ಆಸುಪಾಸಿನಲ್ಲಿರುವವರಿಗಂತೂ ಇದೊಂದು ರೀತಿಯ nostalgic ಆದ ಕಟು- ಮಧುರ ಅನುಭವವನ್ನು ತಂದುಕೊಡುತ್ತದೆ.
ಕೆಂಪು ಸಂಜೆಯಲ್ಲಿ, ಬಾಲ್ಕನಿಯಲ್ಲಿ ಕುಳಿತು ದೂರದಿಂದ ಗಾಳಿಹೊತ್ತು ತರುವ 'ವೋ ಶಾಮ್' ಹಿನ್ನೆಲೆ ಸಂಗೀತದಲ್ಲಿ ಈ ಪ್ರಬಂಧವನ್ನು ಓದುತ್ತ ಹೋದರೆ ವಹೀದ ರೆಹಮಾನ್ ನಮ್ಮ ಮುಂದೆ ಮಿಂಚಿನಂತೆ ಸುಳಿದು ಮಾಯವಾಗದಿದ್ದರೆ ಕೇಳಿ........