Sunday, 7 February 2016

ಬೌದ್ಧ ಸಂಘದವರ ನೋಟೀಸ್ ಬೋರ್ಡಿನೊಳಗೆ ರೋಹಿತ್ ವೇಮುಲ ರಾರಾಜಿಸುತ್ತಿದ್ದಾನೆ.
ಗುಂಗುರು ಕೂದಲಿನ ಕನಸು ಕಣ್ಣಿನ ಹುಡುಗ
ಶ್ರದ್ಧಾಂಜಲಿಯ ಚೌಕಟ್ಟಿನೊಳಗೆ ಕಂಗೊಳಿಸುತ್ತಿದ್ದಾನೆ.
ಹನ್ನೆರಡನೆ ಇಯತ್ತೆ ಪರೀಕ್ಷೆಗೆ ಭರದಿಂದ ಸಿದ್ಧತೆ ನಡೆಸುತ್ತಿರುವ ಮಕ್ಕಳು ಗುಂಪು ಗುಂಪಾಗಿ ಹೊರಡುತ್ತಿದ್ದಾರೆ.
ಮಸ್ತಿ ಖುಷಿ ತಮಾಶೆ ಆಕಾಶವೇ ಸೀಮೆಯೆನ್ನುವಂತೆ.
ಪ್ರತಿಯೊಬ್ಬರ ಕಣ್ಣುಗಳೂ ಥೇಟ್ ವೇಮುಲನ ಕಣ್ಣುಗಳಂತೇ ಹೊಳೆಯುತ್ತಿವೆ.

ಮಗನ ಇಂಜನಿಯರಿಂಗ್ ಕಾಲೇಜಿನಲ್ಲಿ ಇಂದು ಘಟಿಕೋತ್ಸವದ ಸಂಭ್ರಮ.
ಕಾರನ್ನು ಚಲಾಯಿಸಿಕೊಂಡು ಒಬ್ಬನೇ ಹೋಗಿದ್ದಾನೆ.
ಆದರೆ ಭಯವಾಗುತ್ತಿದೆ ನನಗೆ.
ಅವನು ಮನೆಗೆ ಬರುವವರೆಗೆ ಬಾಲಸುಟ್ಟ ಬೆಕ್ಕಿನಂತೆ ಒದ್ದಾಡುತ್ತಿದ್ದೇನೆ.
ವೇಮುಲನ ತಾಯಿಯ ಕಣ್ಣುಗಳಿಂದ ಉದುರಿದ ಹನಿಗಳು, ನಿಟ್ಟುಸಿರೂ
ನನ್ನೊಡಲಿಗೆ ಕೊಳ್ಳಿಯನ್ನಿಕ್ಕಿವೆ.
ನನ್ನ ಮಗನನ್ನು ಯಾರಾದರೂ ಕಾಪಾಡಿ ಪ್ಲೀಸ್......

No comments:

Post a Comment