Tuesday, 2 July 2013

ಶಿವನೆಂದರೆ ಶಿವನಲ್ಲಾ...

                  
ಶಿವನನ್ನು ಮಾನವೀಯಗೊಳಿಸಿ ಅವನ ಸಾಹಸ ಪರಾಕ್ರಮಗಳನ್ನು ಮೆರೆಯುವ ಅಮಿತ್ ತ್ರಿಪಾಠಿಯವರ "Shiva Triology", ಪುರಾಣವೇ? ಐತಿಹ್ಯವೇ, ದರ್ಶನ ಶಾಸ್ತ್ರವೇ? ಇಲ್ಲ, ಸಾಹಿತ್ಯವೇ? ಎಂಬ ಗೊಂದಲ ಓದುಗರಲ್ಲಿ ಉಂಟಾದರೆ ಆಶ್ಚರ್ಯವಿಲ್ಲ...ಪರಿಭ್ರಮಣ ಮತ್ತು ಶೋಧ ಇವೆರೆಡೂ ಕ್ಲಾಸಿಕ್ ನ ಮುಖ್ಯ ಗುಣವೆಂದು ಸಿ.ಎನ್. ಆರ್. ಹೇಳುತ್ತಾರೆ. ಈ ಕಾದಂಬರಿಯ ತುಂಬಾ ಇರುವುದು ಇದೇ.ಸತ್ಯ ಶೋಧನೆಗಾಗಿ ಪರಿಭ್ರಮಣ. ಸಾಮಾಜಿಕ ಶ್ರೇಣೀಕರಣಗಳಲ್ಲಿ ಹೋಳಾಗಿಹೋಗಿರುವ ಮಾನವ ಜನಾಂಗದ ಸಂಸ್ಕೃತಿಯನ್ನು ಒಟ್ಟುಗೂಡಿಸುವುದು ಹಾಗೂ ಸಾಂಸ್ಕೃತಿಕ ದಬ್ಬಾಳಿಕೆಗೆ ಉತ್ತರವನ್ನು ಕಂಡುಕೊಳ್ಳುವುದು ಈ ಕಾದಂಬರಿಯ ಉದ್ದೇಶ.....
ಇಲ್ಲಿ ಶಿವ ಒಬ್ಬ ಆದಿವಾಸಿ ಜನಾಂಗದ ನಾಯಕ. ರಾಮನ ಆನಂತರದವನು. ರಾಮನ ಶಿಸ್ತು, ನಿಯಮ ಪಾಲನೆಗಳನ್ನು ಆದರ್ಶವಾಗಿರಿಸಿಕೊಂಡವನು.
 ಸ್ಥಾಪಿತವಾದ ನಮ್ಮ ಪೂರ್ವ ಗ್ರಹಿಕೆಗಳೆಲ್ಲಾ ನಾಶವಾದಾಗ ಮಾತ್ರ ಉತ್ಕ್ರಾಂತಿ ಸಾಧ್ಯ ಎನ್ನುತ್ತಾರೆ, ಜೆ.ಕೆ.ಇಂತಹ ನಾಶಕ್ಕೆ ಇಲ್ಲಿ ಶಿವ ಕಾರಣನಾಗುತ್ತಾನೆ.“Nothing is outside  the Text ಎನ್ನುತ್ತಾನೆ ಡೆರಿಡಾ.( text ಎಂದರೆ ಅದರ ಅವಿನಾಭಾವವಾಗಿರುವ context, context ಅಂದರೆ ಅದು ಇಡಿ ಜಗತ್ತಿನ ಚರಿತ್ರೆಯೇ ಆಗಿದೆ)text ಗೆ ನಾವು ಬದ್ಡರಾಗಿರಬೇಕೆಂದರೆ ನಮ್ಮ ಪೂರ್ವ ಗ್ರಹಿಕೆಗಳನ್ನು ಕಳೆದು ಕೊಳ್ಳಬೇಕಾಗಿರುವುದು ಮುಖ್ಯ. ಆಗ ಮಾತ್ರ Deconstruction ಎನ್ನುವುದು ಸಾಧ್ಯ.ಶಿವ ಕೂಡಾ ಅಂತಹ Deconstruction ನ ಸಾಕಾರ ಮೂರ್ತಿ. ಬದಲಾವಣೆಯ ಹರಿಕಾರ.....
ಪೂರ್ಣ ಲೇಖನಕ್ಕೆ ನೋಡಿ
.....
https://docs.google.com/file/d/0B9b5bKCEi1APemVTamxMLXdKZDg/edit?usp=sharing

No comments:

Post a Comment